ಮಂಗಳೂರು

ಸುಧಾರಣೆ ಕಾಣದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ

(ನ್ಯೂಸ್ ಕಡಬ) newskadaba.com ನವದೆಹಲಿ. ಆ,31:  ಶ್ವಾಸಕೋಶದ ಸೋಂಕಿನಿಂದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಅವರ ಸ್ಥಿತಿ ದಿನ ಕಳೆದಂತೆ ಹದಗೆಡುತ್ತಿದೆ ಎಂದು ಸೇನಾ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.   84 ವರ್ಷದ ಪ್ರಣಬ್ ಮುಖರ್ಜಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಇತ್ತೀಚೆಗೆ ಸೇನಾ ಆಸ್ಪತ್ರೆಯಲ್ಲಿ ಅವರಿಗೆ ಆಪರೇಷನ್ ಮಾಡಲಾಗಿತ್ತು. ಪ್ರಣಬ್ ಮುಖರ್ಜಿ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾರೆ. ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ. ನಾವು […]

ಸುಧಾರಣೆ ಕಾಣದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆರೋಗ್ಯ Read More »

ರಾಷ್ಟ್ರೀಯ ನ್ಯೂಸ್

ಗೃಹ ಸಚಿವ ಅಮಿತ್ ಶಾ ಆಸ್ಪತ್ರೆಯಿಂದ ಡಿಸ್ಚಾರ್ಜ್

(ನ್ಯೂಸ್ ಕಡಬ) newskadaba.com ನವದೆಹಲಿ. ಆ,31: ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯ ಏಮ್ಸ್ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಸೋಂಕಿನಿಂದ ಗುಣಮುಖರಾದ ಬಳಿಕವೂ ಪೋಸ್ಟ್ ಕೊವಿಡ್ ಆರೈಕೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.   ಆಗಸ್ಟ್ 2 ರಂದು ಅಮಿತ್ ಶಾ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಚಿಕಿತ್ಸೆಗಾಗಿ ಅವರನ್ನು ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಅಮಿತ್ ಶಾ ಸಂಪೂರ್ಣವಾಗಿ ಗುಣಮುಖರಾಗಿದ್ದರು. ಬೆಳಗ್ಗೆ 7 ಗಂಟೆಗೆ ಡಿಸ್ಚಾರ್ಜ್ ಆಗಿದ್ದಾರೆ.

ಗೃಹ ಸಚಿವ ಅಮಿತ್ ಶಾ ಆಸ್ಪತ್ರೆಯಿಂದ ಡಿಸ್ಚಾರ್ಜ್ Read More »

ರಾಷ್ಟ್ರೀಯ ನ್ಯೂಸ್

ಮೂರ್ಖತನದ ಪರಮಾವಧಿ: ಹುಚ್ಚುನಾಯಿ ಭೀತಿಗೆ ಮನೆಮುಂಭಾಗದ ತಂತಿಗೆ ವಿದ್ಯುತ್ ಹಾಯಿಸಿ, ತಾನೇ ತುಳಿದು ಸಾವನ್ನಪ್ಪಿದ !

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಆ. 31: ಹುಚ್ಚು ನಾಯಿ ಭೀತಿಯಿಂದ ಮನೆ ಮುಂಭಾಗದ ಗೇಟ್‌ಗೆ ಅಡ್ಡಲಾಗಿ ತಂತಿಗೆ ವಿದ್ಯುತ್ ಹರಿಬಿಟ್ಟ ವ್ಯಕ್ತಿ ಅದೇ ತಂತಿಯನ್ನು ತುಳಿದು ಮೃತಪಟ್ಟಿರುವ ಘಟನೆ ಸೊರಬ ಪಟ್ಟಣದ ಕಾನಕೇರಿಯಲ್ಲಿ ಕಳೆದ ರಾತ್ರಿ ನಡೆದಿದೆ. ನಿಂಗಪ್ಪ ಪುಟ್ಟಪ್ಪ (58) ಮೃತ ದುರ್ಧೈವಿ. ಕೆಲ ದಿನಗಳಿಂದ ಹುಚ್ಚು ನಾಯಿಯೊಂದು ಮನೆಯ ಅಂಗಳ ಮಾತ್ರವಲ್ಲದೇ ಮನೆಯನ್ನು ಪ್ರವೇಶ ಮಾಡಿತ್ತು. ಇದರಿಂದ ಕುಟುಂಬಸ್ಥರು ಭಯಭೀತರಾಗಿದ್ದರು. ಮನೆಯ ಅಂಗಳದ ಗೇಟ್‌ನ ಮುಂಭಾಗ ತಂತಿ ಕಟ್ಟಿ ವಿದ್ಯುತ್ ಹಾಯಿಸಿದ್ದರು. ರಾತ್ರಿ

ಮೂರ್ಖತನದ ಪರಮಾವಧಿ: ಹುಚ್ಚುನಾಯಿ ಭೀತಿಗೆ ಮನೆಮುಂಭಾಗದ ತಂತಿಗೆ ವಿದ್ಯುತ್ ಹಾಯಿಸಿ, ತಾನೇ ತುಳಿದು ಸಾವನ್ನಪ್ಪಿದ ! Read More »

ಕರ್ನಾಟಕ, ಕ್ರೈಮ್ ನ್ಯೂಸ್

‘ಲಕ್ಷ್ಮೀ’ ಆನೆ ಮರಿಯ ನಾಮಕರಣ ➤ ಮುದ್ದಾಗಿದೆ ಮರಿ ಆನೆಯ ಹೆಸರು…!?

(ನ್ಯೂಸ್ ಕಡಬ) newskadaba.com  ಧರ್ಮಸ್ಥಳ. ಆ,31:  ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷ್ಮೀ ಎಂಬ ಹೆಸರಿನ ಆನೆಯು ಜುಲಾಯಿ 1 ರಂದು ಮುದ್ದಾದ ಹೆಣ್ಣು ಮರಿಗೆ ಜನ್ಮ ನೀಡಿತ್ತು.   ಈ ಲಕ್ಷ್ಮೀ ಆನೆಯ ಮರಿಯ ನಾಮಕರಣ ಕಾರ್ಯಕ್ರಮ ಇಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ತುಲಾ ಲಗ್ನದ ಶುಭಮೂರ್ತದಲ್ಲಿ ನಡೆಯಿತು. ಆನೆ ಮರಿ ‘ಶಿವಾನಿ’ ಇಂದು ಅಲಂಕಾರಗೊಂಡು ಕಂಗೊಳಿಸುತ್ತಿದ್ದಳು.  ಮುದ್ದಾದ ಲಕ್ಷ್ಮೀ ಆನೆಯ, ಮರಿಗೆ “ಶಿವಾನಿ” ಎಂದು ನಾಮಕರಣ ಮಾಡಲಾಯಿತು. ಆನೆ ಮರಿ ‘ಶಿವಾನಿ’ ಇಂದು ಅಲಂಕಾರಗೊಂಡು ಕಂಗೊಳಿಸುತ್ತಿದ್ದಳು. 

‘ಲಕ್ಷ್ಮೀ’ ಆನೆ ಮರಿಯ ನಾಮಕರಣ ➤ ಮುದ್ದಾಗಿದೆ ಮರಿ ಆನೆಯ ಹೆಸರು…!? Read More »

ಕರಾವಳಿ, ಕರ್ನಾಟಕ

ಡಿಕ್ಕಿಯ ರಭಸಕ್ಕೆ ಹೊತ್ತಿ ಉರಿದ 2 ಬೈಕ್​ಗಳು, ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು. ಆ,30:  ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಓರ್ವ ಬೈಕ್ ಸವಾರ ಸಾವನ್ನಪ್ಪಿದ್ದು, ಎರಡು ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ರಾಷ್ಟ್ರೀಯ ಹೆದ್ದಾರಿ 206ರ ಗೆದ್ದಲಹಳ್ಳಿಯಲ್ಲಿ ನಡೆದಿದೆ.     ಶಿವಮೊಗ್ಗ ಕಡೆಯಿಂದ ಹಾಸನ ಕಡೆ ಹೋಗುತ್ತಿದ್ದ ಯೂನಿಕಾರ್ನ್ ಬೈಕ್ ಹಾಗೂ ಬೆಂಗಳೂರು ಕಡೆಯಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಪಲ್ಸರ್ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಈ ದುರ್ಘಟನೆ

ಡಿಕ್ಕಿಯ ರಭಸಕ್ಕೆ ಹೊತ್ತಿ ಉರಿದ 2 ಬೈಕ್​ಗಳು, ಓರ್ವ ಮೃತ್ಯು Read More »

ಕರ್ನಾಟಕ

ಕೊಳೆತ ಸ್ಥಿತಿಯಲ್ಲಿ ರಿಕ್ಷಾ ಚಾಲಕನೋರ್ವನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 30: ಪುತ್ತೂರು ನಗರ ಠಾಣೆ ವ್ಯಾಪ್ತಿಯಲ್ಲಿ ಬನ್ನೂರು ಎಂಬಲ್ಲಿ ರಿಕ್ಷಾ ಚಾಲಕನೋರ್ವನ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಇಂದು ಪತ್ತೆಯಾಗಿದೆ. ಬನ್ನೂರು ಗ್ರಾಮದ ನಿರ್ಪಾಜೆ ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಮನೆಯ ಹಿಂಬದಿಯ ಹಳೆ ಮನೆಯೊಂದರ ಪಕ್ಕದ ಕೊಟ್ಟಿಗೆಯಲ್ಲಿ ಚಯರ್‌ನಲ್ಲಿ ಕುಳಿತ ಸ್ಥಿತಿಯಲ್ಲಿ ಆಟೋ ಚಾಲಕ ಸುದರ್ಶನ್‌ (37) ಎಂಬವರ ಮೃತ ದೇಹ ಪತ್ತೆಯಾಗಿದೆ. ಇಂದು ಸ್ಥಳೀಯರಿಗೆ ಸುದರ್ಶನ ರೈ ಅವರ ಮನೆಯಿಂದ ದುರ್ನಾಥ ಬೀರುತ್ತಿರುವ ಕುರಿತು ಪರಿಶೀಲಿಸಿದಾಗ ಮನೆಯ ಕೊಟ್ಟಿಗೆಯಲ್ಲಿ ಸುದರ್ಶನ್‌

ಕೊಳೆತ ಸ್ಥಿತಿಯಲ್ಲಿ ರಿಕ್ಷಾ ಚಾಲಕನೋರ್ವನ ಮೃತದೇಹ ಪತ್ತೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನೇತ್ರಾವತಿ ನದಿಯಲ್ಲಿ ಮುಳುಗುವ ಸ್ಥಿತಿಯಲ್ಲಿದ್ದ ವ್ಯಕ್ತಿ ➤ ಪ್ರವಾಹರಕ್ಷಣಾ ತಂಡದವರಿಂದ ಮುಳುಗುತ್ತಿದ್ದ ಅಸಾಮಿಯ ರಕ್ಷಣೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ. ಆ,30:  ಇಲ್ಲೋಬ್ಬ ಅಸಾಮಿ ಅಧಿಕಾರಿಗಳ ಮಾತು ದಿಕ್ಕರಿಸಿ ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿ ಮುಳುಗುವ ಸ್ಥಿತಿಯಲ್ಲಿದ್ದ. ಆದ್ರೆ ಪುತ್ತೂರು ತಹಶೀಲ್ದಾರ್ ನೇತೃತ್ವದ ಪ್ರವಾಹರಕ್ಷಣಾ ತಂಡದವರ ಸಮಯ ಪ್ರಜ್ಞೆಯಿಂದ ಸಾವಿನ ದವಡೆಯಿಂದ ಪಾರಾಗಿದ್ದಾನೆ. ಮದ್ಯಾಹ್ನ ಸದಾನಂದ ಶಟ್ಟಿಮೂರೂಗೊಳಿ ನಿವಾಸಿ ಎಂಬ ಹೆಸರಿನ ವ್ಯಕ್ತಿಯೊಬ್ಬ ಮೈಮೇಲೆ ವಸ್ತ್ರಧರಿಸದೆ ಬರ್ಬುಂಡ ಚಡ್ಡಿ ಧರಿಸಿ ದೇವಾಲಯದ ಸುತ್ತ ಮುತ್ತ ತಿರುಗಾಡುತ್ತಿದ್ದು ಈ ವೇಳೆಗೆ ಸ್ಥಾನಘಟ್ಟದ ಬಳಿ ನೀರಿಗೆ ಇಳಿದಿರುತ್ತಾರೆ ಈ ವೇಳೆಗೆ ಅಲ್ಲಿ ಕರ್ತವ್ಯದಲ್ಲಿದ್ದ ಪ್ರವಾಹರಕ್ಷಣಾ ಗೃಹರಕ್ಷಕರು ಹಾಗೂ

ನೇತ್ರಾವತಿ ನದಿಯಲ್ಲಿ ಮುಳುಗುವ ಸ್ಥಿತಿಯಲ್ಲಿದ್ದ ವ್ಯಕ್ತಿ ➤ ಪ್ರವಾಹರಕ್ಷಣಾ ತಂಡದವರಿಂದ ಮುಳುಗುತ್ತಿದ್ದ ಅಸಾಮಿಯ ರಕ್ಷಣೆ Read More »

ಕರ್ನಾಟಕ

ಕಂದ್ರಪ್ಪಾಡಿ ಅಂಚೆ ಕಛೇರಿ ಕಟ್ಟಡಕ್ಕೆ ತಾತ್ಕಾಲಿಕ ದುರಸ್ಥಿ

(ನ್ಯೂಸ್ ಕಡಬ) newskadaba.com ಸುಳ್ಯ, ಆ. 30: ಬೀಳುವ ಸ್ಥಿತಿಯಲ್ಲಿದ್ದ ಕಂದ್ರಪ್ಪಾಡಿಯ ಅಂಚೆ ಕಛೇರಿ ಇರುವ ಕಟ್ಟಡವನ್ನು ದೇವಚಳ್ಳ ಯುವಕ ಮಂಡಲ ಕಂದ್ರಪ್ಪಾಡಿಯ ವತಿಯಿಂದ ಟರ್ಪಾಲು ಹಾಸಿ ತಾತ್ಕಾಲಿಕ ದುರಸ್ಥಿ ಪಡಿಸಿದ್ದಾರೆ. ಅಂಚೆ ಕಛೇರಿಯ ಕಟ್ಟಡ ಬೀಳುವ ಪರಿಸ್ಥಿತಿ ನಿರ್ಮಾಣವಾದುದ್ದರಿಂದ ಅಂಚೆ ಇಲಾಖೆ ಕಂದ್ರಪ್ಪಾಡಿ ಶಾಖೆಯನ್ನು ಮಾವಿನ ಕಟ್ಟೆ ರಾಜೀವ ಗಾಂಧಿ ಸೇವಾ ಕಟ್ಟಡಕ್ಕೆ ಸ್ಥಳಾಂತರಿಸಲು ತೀರ್ಮಾನಿಸಿತ್ತು. ಸ್ಥಳಾಂತರಗೊಂಡರೆ ಕಂದ್ರಪ್ಪಾಡಿ ಪರಿಸರ ಜನರಿಗೆ ಸಮಸ್ಯೆಯಾಗುವುದನ್ನು ಮನಗಂಡ ಯುವಕ ಮಂಡಲ ಇಂದು ಅಂಚೆ ಕಛೇರಿ ಶಾಖೆ ಇರುವ ಕಟ್ಟಡವನ್ನು

ಕಂದ್ರಪ್ಪಾಡಿ ಅಂಚೆ ಕಛೇರಿ ಕಟ್ಟಡಕ್ಕೆ ತಾತ್ಕಾಲಿಕ ದುರಸ್ಥಿ Read More »

ಕರಾವಳಿ, ಕರ್ನಾಟಕ

ಕಾಪು : ಬಲೆಗೆ ಬಿತ್ತು ರಾಶಿ…ರಾಶಿ ಮೀನುಗಳು

(ನ್ಯೂಸ್ ಕಡಬ) newskadaba.com ಕಾಪು. ಆ,30:  ನಗರದ ಮಟ್ಟು ಕಡಲತೀರದಲ್ಲಿ ಕೈರಂಪಣಿ ಬೆಲೆಗೆ ರಾಶಿ ರಾಶಿ ಮೀನುಗಳು ಸಿಲುಕಿದ್ದು, ಮೀನುಗಾರರಿಗೆ ಬಂಪರ್ ಡ್ರಾ ಹೊಡೆದಂತಾಗಿದೆ.ಈ ಬಾರಿ ಉಡುಪಿಯ ಮಟ್ಟು ಕಡಲತೀರದಲ್ಲಿ ಹಾಕಿದ ಕೈರಂಪಣಿ ಬಲೆಗೆ ಮೀನುಗಾರರ ನಿರೀಕ್ಷೆಗೂ ಮೀರಿ ವಿವಿಧ ಬಗೆಯ ಮೀನುಗಳು ಬಿದ್ದಿವೆ. ಹೀಗೆ ರಾಶಿ‌ ರಾಶಿ ಮೀನುಗಳನ್ನು ಕಂಡು ಮೀನುಗಾರರು ಫುಲ್ ಖುಷಿಯಾಗಿದ್ದು, ಮೀನನ್ನು‌ ಮಾರಾಟ ಮಾಡಿ ಉಳಿದವುಗಳನ್ನು ನೋಡಲು ಬಂದ ಊರಿನವರಿಗೂ ಫ್ರೀಯಾಗಿ ಹಂಚಿದ್ದಾರೆ. ಹೀಗೆ ಬಲೆಯಿಂದ ಹೊರಗೆ ಬಂದು ಒದ್ದಾಡುತ್ತಿದ್ದ ಮೀನುಗಳು

ಕಾಪು : ಬಲೆಗೆ ಬಿತ್ತು ರಾಶಿ…ರಾಶಿ ಮೀನುಗಳು Read More »

ಕರ್ನಾಟಕ

ಜಾಲ್ಸೂರು: ಶ್ರೀ ಸುಬ್ರಾಯ ಅನಂತ ಕಾಮತ್ ಗೇರುಬೀಜ ಕಾರ್ಖಾನೆಯು 48ನೇ ವರ್ಷಕ್ಕೆ ಪಾದಾರ್ಪಣೆ

(ನ್ಯೂಸ್ ಕಡಬ) newskadaba.com ವಿನೋಬಾನಗರ, ಆ. 30: ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿರುವ ಶ್ರೀ ಸುಬ್ರಾಯ ಅನಂತ ಕಾಮತ್‌ ಮತ್ತು ಮಕ್ಕಳು ನಡೆಸುತ್ತಿರುವ ಗೇರುಬೀಜ ಕಾರ್ಖಾನೆಯು ಯಶಸ್ವಿಯಾಗಿ 47 ವರ್ಷಗಳನ್ನು ಪೂರೈಸಿ, 48 ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಇಲ್ಲಿ ಎಲ್ಲಾ ತರಹದ ಉತ್ತಮ ಗುಣಮಟ್ಟದ ಗೋಡಂಬಿ ಹಾಗೂ ವಿವಿಧ ಬಗೆಯ ಡ್ರೈಪ್ರೂಟ್ಸ್‌ ಗಳು ಗ್ರಾಹಕರಿಗೆ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.    

ಜಾಲ್ಸೂರು: ಶ್ರೀ ಸುಬ್ರಾಯ ಅನಂತ ಕಾಮತ್ ಗೇರುಬೀಜ ಕಾರ್ಖಾನೆಯು 48ನೇ ವರ್ಷಕ್ಕೆ ಪಾದಾರ್ಪಣೆ Read More »

ಕರಾವಳಿ, ಕರ್ನಾಟಕ
Scroll to Top