ಮಂಗಳೂರು

ಆಂಧ್ರ ಪ್ರದೇಶದ ಸಿಎಂ ಪರಿಹಾರ ನಿಧಿ ಹೆಸರಿನಲ್ಲಿ ವಂಚನೆ ➤ ದ. ಕನ್ನಡ ಜಿಲ್ಲೆಯ ಆರು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು ಅ. 06: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪರಿಹಾರ ನಿಧಿಗೆ ವಂಚಿಸಲು ಯೋಜನೆ ರೂಪಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಆರು ಮಂದಿಯನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಆಂಧ್ರದ ಎಸಿಬಿ ಪೊಲೀಸರ ತಂಡ ದ.ಕ ಜಿಲ್ಲೆಗೆ ಬಂದು ಆರು ಮಂದಿಯನ್ನು ಬಂಧಿಸಿದ್ದಾರೆ. ಮೂಡಬಿದ್ರೆ ನಿವಾಸಿಗಳಾದ ಯೋಗೀಶ್ ಆಚಾರ್ಯ (40) ಉದಯ ಶೆಟ್ಟಿ ಕಾಂತಾವಾರ (35), ಮಂಗಳೂರಿನ ಬ್ರಿಜೇಶ್ ರೈ(35) ಬೆಳ್ತಂಗಡಿಯ ಗಂಗಾಧರ ಸುವರ್ಣ (45) ಸೇರಿದಂತೆ ಆರು ಮಂದಿಯನ್ನು ಬಂಧಿಸಿ ಕರೆದೊಯ್ದಿದ್ದಾರೆ. ಆಂಧ್ರ ಪ್ರದೇಶದ […]

ಆಂಧ್ರ ಪ್ರದೇಶದ ಸಿಎಂ ಪರಿಹಾರ ನಿಧಿ ಹೆಸರಿನಲ್ಲಿ ವಂಚನೆ ➤ ದ. ಕನ್ನಡ ಜಿಲ್ಲೆಯ ಆರು ಮಂದಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಜಾಲ್ಸೂರು: ಕಾರು-ರಿಕ್ಷಾ ಮುಖಾಮುಖಿ ಢಿಕ್ಕಿ ➤ ಪ್ರಯಾಣಿಕರಿಗೆ ಗಾಯ

(ನ್ಯೂಸ್ ಕಡಬ) newskadaba.com ಜಾಲ್ಸೂರು, ಅ.06: ಸುಳ್ಯದಿಂದ ಜಾಲ್ಸೂರಾಗಿ ಸುಬ್ರಹ್ಮಣ್ಯ ರಸ್ತೆಗೆ ತಿರುಗಿದ ಕಾರು ಸೋಣಂಗೇರಿ ಕಡೆಯಿಂದ ಜಾಲ್ಸೂರಿಗೆ ಬರುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆದು ರಿಕ್ಷಾ ಪಲ್ಟಿಯಾದ ಘಟನೆ ಜಾಲ್ಸೂರಿನ ಗೋಳಿಕಟ್ಟೆಯಲ್ಲಿ ಇಂದು ನಡೆದಿದೆ.    ಪಲ್ಟಿಯಾಗಿದ್ದ ರಿಕ್ಕಾ ಜಖಂಗೊಂಡಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಣಾಮವಾಗಿ ಪಲ್ಟಿಯಾಗಿದ್ದ ರಿಕ್ಷಾದಲ್ಲಿದ್ದವರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.  

ಜಾಲ್ಸೂರು: ಕಾರು-ರಿಕ್ಷಾ ಮುಖಾಮುಖಿ ಢಿಕ್ಕಿ ➤ ಪ್ರಯಾಣಿಕರಿಗೆ ಗಾಯ Read More »

ಕರಾವಳಿ

ರಾತ್ರೋ ರಾತ್ರಿ ಹತ್ರಾಸ್ ಸಂತ್ರಸ್ತೆಯ ಅಂತ್ಯಸಂಸ್ಕಾರ ➤ ಏನು ಕಾರಣ ನೀಡಿದೆ ಗೊತ್ತ ಯುಪಿ ಸರ್ಕಾರ.?

(ನ್ಯೂಸ್ ಕಡಬ) newskadaba.com ಹತ್ರಾಸ್ , ಅ. 06.:ಲಕ್ನೋ: ದೇಶದಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದ ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಮೃತದೇಹವನ್ನು ರಾತ್ರೋ ರಾತ್ರಿ ಅಂತ್ಯ ಸಂಸ್ಕಾರ ಮಾಡಿದ್ದಕ್ಕೆ ಕಾರಣವೇನೆಂದು ಯುಪಿ ಸರ್ಕಾರ ಸುಪ್ರೀಂ ಕೋರ್ಟ್ ಗೆ ಸಮಜಾಯಿಷಿ ನೀಡಿದೆ. ಸುಪ್ರೀಂಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಯೋಗಿ ಸರ್ಕಾರ ಅಂತ್ಯಸಂಸ್ಕಾರದ ಕಾರಣ ವಿವರಿಸಿದೆ. ‘ಪ್ರಕರಣ ಜಾತಿಯ ತಿರುವು ಪಡೆಯುತ್ತಿತ್ತು. ಇಂತಹ ಸಂದರ್ಭದಲ್ಲಿ ಸಾರ್ವಜನಿಕವಾಗಿ ಅಂತ್ಯ ಸಂಸ್ಕಾರ ಮಾಡಿದರೆ ಹಿಂಸಾಚಾರ ನಡೆಯುವ ಸಾಧ‍್ಯತೆಯಿತ್ತು. ಹೀಗಾಗಿ ಸಾರ್ವಜನಿಕರನ್ನು ದೂರವಿಟ್ಟು ರಾತ್ರೋ

ರಾತ್ರೋ ರಾತ್ರಿ ಹತ್ರಾಸ್ ಸಂತ್ರಸ್ತೆಯ ಅಂತ್ಯಸಂಸ್ಕಾರ ➤ ಏನು ಕಾರಣ ನೀಡಿದೆ ಗೊತ್ತ ಯುಪಿ ಸರ್ಕಾರ.? Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ರಿಗೆ ಕೋರೋನಾ ಪಾಸಿಟಿವ್

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 06: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಕೋರೋನಾ ಪಾಸಿಟಿವ್ ವರದಿ ಬಂದಿದೆ. ಸೋಂಕು ತಗುಲಿದ್ದರೂ ಅವರಿಗೆ ಯಾವುದೇ ರೋಗ ಲಕ್ಷಣ ಕಂಡು ಬಂದಿಲ್ಲ. ಕೋವಿಡ್ 19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ನಾನು ಇನ್ನು ಕೆಲವು ದಿನಗಳ ಕಾಲ ಹೋಂ ಕ್ವಾರಂಟೈನ್ ನಲ್ಲಿ ಇರುತ್ತೇನೆ. ಯಾವುದೇ ಲಕ್ಷಣ ಇಲ್ಲದಿರುವುದರಿಂದ ಯಾವುದೇ ರೀತಿಯ ಆತಂಕವಿಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.    

ಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ರಿಗೆ ಕೋರೋನಾ ಪಾಸಿಟಿವ್ Read More »

ಕರಾವಳಿ

ಕಾಳಿಂಗ ಸರ್ಪದ ಹಣೆಗೆ ಮುತ್ತಿಟ್ಟ ಅರ್ಜುನ್ ➤ ವಿಡಿಯೋ ವೈರಲ್

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಅ.06: ಕಾಳಿಂಗ ಸರ್ಪವನ್ನು ಕಂಡರೆ ಜನ ಬೆಚ್ಚಿಬೀಳುತ್ತಾರೆ. ಕಾಳಿಂಗ ಸರ್ಪ ಕಂಡ ಕೂಡಲೇ ಎದ್ನೋ ಬಿದ್ನೋ ಎಂದು ಓಡುತ್ತಾರೆ. ಆದರೆ, ಕಾಳಿಂಗ ಸರ್ಪವನ್ನು ಮಗುವಂತೆ ಆಡಿಸಿ, ಅದರ ಹೆಣೆಗೆ ಮುತ್ತಿಡುವುದು ಬಹುಶಃ ಕನಸಲ್ಲೂ ಆಗದ ಮಾತು. ಆದರೆ, ಇಲ್ಲೊಬ್ಬ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸ್ನೇಕ್ ಅರ್ಜುನ್ ನೋಡುವವರಿಗೆ ಎದೆಯಲ್ಲಿ ಭಯ ಹುಟ್ಟುವಂತೆ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಸುಗೂಸಿನಂತೆ ಆಡಿಸಿ, ಅದರ ಹಣೆಗೆ ಮುತ್ತಿಟ್ಟಿದ್ದಾರೆ.    

ಕಾಳಿಂಗ ಸರ್ಪದ ಹಣೆಗೆ ಮುತ್ತಿಟ್ಟ ಅರ್ಜುನ್ ➤ ವಿಡಿಯೋ ವೈರಲ್ Read More »

ಕರ್ನಾಟಕ

ವಿಟ್ಲದಲ್ಲಿ ಗಾಂಜಾ ಸಹಿತ ಓರ್ವನ ಬಂಧನ ➤ ಮತ್ತೋರ್ವ ಎಸ್ಕೇಪ್.!

(ನ್ಯೂಸ್ ಕಡಬ) newskadaba.com ವಿಟ್ಲ, ಅ.06: ವಿಟ್ಲ ಠಾಣಾ ಎಸ್‌ ಐ ವಿನೋದ್‌ ರೆಡ್ಡಿಯವರ ನೇತೃತ್ವದಲ್ಲಿ ಪೊಲೀಸರ ತಂಡವೊಂದು ಗಾಂಜಾ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿ, ಆತನ ಬಳಿ ಇದ್ದ ಸುಮಾರು 450 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದ ಘಟನೆಯು ಕಳೆದ ದಿನ ವಿಟ್ಲ ಸಮೀಪದ ಬದನಾಜೆ ಬಸ್‌ ನಿಲ್ದಾಣದ ಬಳಿ ನಡೆದಿದೆ.ಆರೋಪಿಯನ್ನು ಕಡಬ ವಿದ್ಯಾಪುರ ದಿ. ಅಬ್ದುಲ್‌ ಖಾದರ್‌ ರವರ ಪುತ್ರ ಮಹಮ್ಮದ್‌ ಆಸೀಫ್‌ ಯಾನೆ ಆಚಿ (30ವ.) ಎಂದು ಗುರುತಿಸಲಾಗಿದೆ. ಇನ್ನು, ಮತ್ತೋರ್ವ ಆರೋಪಿ

ವಿಟ್ಲದಲ್ಲಿ ಗಾಂಜಾ ಸಹಿತ ಓರ್ವನ ಬಂಧನ ➤ ಮತ್ತೋರ್ವ ಎಸ್ಕೇಪ್.! Read More »

ಕರಾವಳಿ, ಕ್ರೈಮ್ ನ್ಯೂಸ್

ಕುಕ್ಕೆ ಸುಬ್ರಹ್ಮಣ್ಯ: ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾದ ಡಾ| ಸಂದೀಪ್‌ ಕುಮಾರ್ ಭೇಟಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ.06: ನಾಡಿನ ಪ್ರಸಿದ್ಧ ಕ್ಷೇತ್ರವಾದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾದ ಡಾ| ಸಂದೀಪ್‌ ಕುಮಾರ್‌ ರವರು ಇಂದು ಭೇಟಿ ನೀಡಿ ದೇವರ ದರ್ಶನ ಪಡೆದರು.     ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚದ ಜಿಲ್ಲಾಧ್ಯಕ್ಷರಾದ ಗುರುದನ್‌ ನಾಯಕ್‌ ಹಾಗೂ ಯುವ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳು, ಸುಳ್ಯ ಮಂಡಲದ ಯುವ ಮೋರ್ಚಾದ ಅಧ್ಯಕ್ಷರಾದ ಶ್ರೀ ಕೃಷ್ಣ ಎಂ.ಆರ್, ಪ್ರದಾನ ಕಾರ್ಯದರ್ಶಿ ಸುನೀಲ್‌ ಕೇರ್ಪಳ ಹಾಗೂ

ಕುಕ್ಕೆ ಸುಬ್ರಹ್ಮಣ್ಯ: ಬಿಜೆಪಿ ಯುವ ಮೋರ್ಚಾದ ರಾಜ್ಯಾಧ್ಯಕ್ಷರಾದ ಡಾ| ಸಂದೀಪ್‌ ಕುಮಾರ್ ಭೇಟಿ Read More »

ಕರಾವಳಿ

ಡಿಕೆಶಿ ಆಸ್ತಿ 5 ವರ್ಷದಲ್ಲಿ ಶೇ.380 ಹೆಚ್ಚಳ ➤ ಆರೋಪ ಸಾಬೀತಾದರೆ 7 ವರ್ಷ ಶಿಕ್ಷೆ..!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 06: ಸಿಬಿಐ ಅಧಿಕಾರಿಗಳು ದಾಖಲಿಸಿ ಕೊಂಡಿರುವ ಎಫ್​ಐಆರ್​ನಲ್ಲಿ ಡಿ.ಕೆ.ಶಿವಕುಮಾರ್ ಹೆಸರನ್ನು ಮಾತ್ರ ಉಲ್ಲೇಖಿಸಲಾಗಿದೆ. ಡಿಕೆಶಿ ಆಸ್ತಿ ಕೇವಲ 2013-18ರ 5 ವರ್ಷದ ಅವಧಿಯಲ್ಲಿ ಶೇ.380 ಹೆಚ್ಚಳವಾಗಿರುವುದು ಎಫ್​ಐಆರ್​ನಿಂದ ತಿಳಿದುಬಂದಿದ್ದು, ಭಾರಿ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. 2013ರ ಏ.13ರಂದು ಚುನಾವಣೆ ಅಫಿಡವಿಟ್ ಸಲ್ಲಿಸುವ ವೇಳೆ 33.92 ಕೋಟಿ ರೂ. ಇದ್ದ ಆಸ್ತಿಯು 2018 ಏ.30ಕ್ಕೆ 162.53 ಕೋಟಿ ರೂ.ಗೆ ಹೆಚ್ಚಳವಾಗಿದೆ. 2013-18ರ 5 ವರ್ಷದ ಅವಧಿಯಲ್ಲಿ ಒಟ್ಟು 128.60 ಕೋಟಿ ರೂ. ಆಸ್ತಿ

ಡಿಕೆಶಿ ಆಸ್ತಿ 5 ವರ್ಷದಲ್ಲಿ ಶೇ.380 ಹೆಚ್ಚಳ ➤ ಆರೋಪ ಸಾಬೀತಾದರೆ 7 ವರ್ಷ ಶಿಕ್ಷೆ..!! Read More »

ರಾಷ್ಟ್ರೀಯ ನ್ಯೂಸ್

ಕಾರವಾರ : ಮೀನುಗಾರರ ಬಲೆಗೆ ಬಿದ್ದ “ಇಂಡೋ ಪೆಸಿಫಿಕ್ ಬ್ಲ್ಯಾಕ್ ಮರ್ಲಿನ್”

(ನ್ಯೂಸ್ ಕಡಬ) newskadaba.com ಕಾರವಾರ, ಅ. 06: ಸಮುದ್ರದಲ್ಲಿ ಅತಿ ವೇಗವಾಗಿ ಈಜುವ ಮೀನುಗಳಲ್ಲಿ ಒಂದಾದ ಇಂಡೋ ಪೆಸಿಫಿಕ್ ಬ್ಲ್ಯಾಕ್ ಮರ್ಲಿನ್ ಮೀನೊಂದು ಅಂಕೋಲಾ ತಾಲೂಕಿನ ಗಾಭೀತಕೇಣಿಯ ಮೀನುಗಾರರ ಬಲೆಗೆ ಬಿದ್ದಿದೆ. ಸಾಮಾನ್ಯವಾಗಿ ಬಿಲ್ ಫಿಶ್ ಎಂಧು ಕರೆಯುವ ಚೂಪಾದ ಮುಖ , ಬೆನ್ನ ಮೇಲೆ ರೆಕ್ಕೆ ಹೊಂದಿರುವ ಸುಮಾರು ಐದು ಅಡಿ ಉದ್ದ ಅಪರೂಪದ ಇಂಡೋ ಪೆಸಿಫಿಕ್ ಬ್ಲ್ಯಾಕ್ ಮರ್ಲಿನ್ ಮೀನು ನಿಕ್ಕಿದೆ.  ಈ ಮೀನು ಅತಿದೊಡ್ಡ ಮೀನುಗಳಲ್ಲಿ ಇದು ಕೂಡಾ ಒಂದಾಗಿದ್ದು, ಅತ್ಯಂತ ವೇಗವಾಗಿ

ಕಾರವಾರ : ಮೀನುಗಾರರ ಬಲೆಗೆ ಬಿದ್ದ “ಇಂಡೋ ಪೆಸಿಫಿಕ್ ಬ್ಲ್ಯಾಕ್ ಮರ್ಲಿನ್” Read More »

ಕರಾವಳಿ, ಕರ್ನಾಟಕ

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ 6ವರ್ಷದ ಪುತ್ರ ➤ ಪ್ರಿಯಕರನ ಜೊತೆ ಸೇರಿ ಪುತ್ರನ ಹತ್ಯೆಗೈದ ತಾಯಿ.!!

(ನ್ಯೂಸ್ ಕಡಬ) newskadaba.com ಗುಜರಾತ್, ಅ. 06. ಅಕ್ರಮ ಸಂಬಂಧಕ್ಕಾಗಿ ತಾಯಿಯೇ ತನ್ನ 6 ವರ್ಷದ ಮಗನನ್ನು ಪ್ರಿಯಕರನ ಜೊತೆ ಸೇರಿಕೊಂಡು ಹತ್ಯೆ ಮಾಡಿದ ಘಟನೆ ಗುಜರಾತ್ ನ ಬನಾಸ್ ಕಾಂತಾ ಜಿಲ್ಲೆಯಲ್ಲಿ ನಡೆದಿದೆ. ಮೃತ ಬಾಲಕನನ್ನು ಜಗದೀಶ್ ಠಾಕೂರ್ ಎಂದು ಗುರುತಿಸಲಾಗಿದೆ. ರಾಜುಲ್ ಎಂಬಾಕೆ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಮಗನ ಹತ್ಯೆ ಮಾಡಿದ್ದು ಇಬ್ಬರೂ ಪೊಲೀಸರ ವಶದಲ್ಲಿದ್ದಾರೆ.ರಾಜುಲ್ ಹಾಗೂ ಆಕೆಯ ಪ್ರಿಯಕರ ಠಾಕೂರ್ ಅಕ್ರಮ ಸಂಬಂಧದಲ್ಲಿ ತೊಡಗಿದ್ದನ್ನ ಆಕೆಯ 6 ವರ್ಷದ ಪುತ್ರ ನೋಡಿದ್ದಾನೆ.

ಅಕ್ರಮ ಸಂಬಂಧಕ್ಕೆ ಅಡ್ಡಿಯಾದ 6ವರ್ಷದ ಪುತ್ರ ➤ ಪ್ರಿಯಕರನ ಜೊತೆ ಸೇರಿ ಪುತ್ರನ ಹತ್ಯೆಗೈದ ತಾಯಿ.!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top