ನ್ಯೂಸ್ ಕಡಬ

ಯುಕೆಜಿ ವಿದ್ಯಾರ್ಥಿನಿಯನ್ನು ಅನುತ್ತೀರ್ಣಗೊಳಿಸಿದ ಶಾಲೆ!

(ನ್ಯೂಸ್ ಕಡಬ)newskadaba.com ಬೆಂಗಳೂರು,ಫೆ.09. ಶಾಲೆಯೊಂದು ಯುಕೆಜಿ ವಿದ್ಯಾರ್ಥಿನಿಯನ್ನು ಎರಡು ರೈಮ್ಸ್ ಹೇಳಲು ವಿಫಲವಾದಳೆಂದು ಸೆಮಿಸ್ಟರ್ ಪರೀಕ್ಷೆಯಲ್ಲಿ ಅನುತ್ತೀರ್ಣಗೊಳಿಸಿದ್ದು,ಇದರಿಂದ ಆಕ್ರೋಶಗೊಂಡ ಹೆತ್ತವರು  ಶಾಲಾ ಆಡಳಿತ ಮಂಡಳಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ ವಿದ್ಯಾರ್ಥಿನಿಯ ತಂದೆ ಮನೋಜ್ ಬಾದಲ್, “ಶಾಲೆಯ ಆ್ಯಪ್ ನಲ್ಲಿ ನಮ್ಮ ಪುತ್ರಿಯ  ಅಂಕಪಟ್ಟಿ ನೋಡಿ ಆಘಾತಗೊಂಡೆವು.ಆಕೆ 160 ಅಂಕಗಳ ಪೈಕಿ 100 ಅಂಕ ಗಳಿಸುವಲ್ಲಿ ಯಶಸ್ವಿಯಾಗಿದ್ದಳು.ಆದರೆ, 40 ಅಂಕದ ಪೈಕಿ ಕನಿಷ್ಟ 14 ಅಂಕ ಗಳಿಸಬೇಕಿದ್ದ ರೈಮ್ಸ್ ನಲ್ಲಿ ಕೇವಲ […]

ಯುಕೆಜಿ ವಿದ್ಯಾರ್ಥಿನಿಯನ್ನು ಅನುತ್ತೀರ್ಣಗೊಳಿಸಿದ ಶಾಲೆ! Read More »

ಕರ್ನಾಟಕ

➤ಡಿಕೆ ಶಿವಕುಮಾರ್ ಮಗಳ ಫೀಸ್ ಬಗ್ಗೆ ಮಾಹಿತಿ ಕೇಳಿದ ಸಿಬಿಐ

(ನ್ಯೂಸ್ ಕಡಬ) newskadaba.com. ಬೆಂಗಳೂರು. ಫೆ.9. ಸಿಬಿಐಗೆ ಮಾಡಲು ದೊಡ್ಡ ದೊಡ್ಡ ಕೆಲಸಗಳು ಇರುತ್ತವೆ. ಅವುಗಳನ್ನು ಮೊದಲು ಮಾಡುವಂತೆ ತಾನು ಸಿಬಿಐಗೆ ಸಲಹೆ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಹೇಳಿದರು. ಇಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಮಾಜಿ ಸಚಿವರು, ತನ್ನ ಮಗಳಿಗೆ ಸಿಬಿಐನಿಂದ ನೋಟೀಸ್ ಬಂದಿರುವ ವಿಚಾರ ಪ್ರಸ್ತಾಪಿಸುತ್ತಾ ಈ ಮೇಲಿನ ಮಾತುಗಳನ್ನು ಹೇಳಿದರು. ನನ್ನ ಮಗಳಿಗೆ ಸಿಬಿಐನಿಂದ ನೋಟೀಸ್ ಬಂದಿದೆ. ಆಕೆಯ ಶಿಕ್ಷಣ ಶುಲ್ಕದ ಬಗ್ಗೆ ಅವರಿಗೆ ಮಾಹಿತಿ ಬೇಕಂತೆ. ಈ ಸಿಬಿಐನವರಿಗೆ ಮಾಡಲು

➤ಡಿಕೆ ಶಿವಕುಮಾರ್ ಮಗಳ ಫೀಸ್ ಬಗ್ಗೆ ಮಾಹಿತಿ ಕೇಳಿದ ಸಿಬಿಐ Read More »

ಕರ್ನಾಟಕ

ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಆಸ್ಟ್ರೇಲಿಯಾ..!

(ನ್ಯೂಸ್ ಕಡಬ)newskadaba.com ನಾಗ್ಪುರ,ಫೆ.09. ಭಾರತ ಹಾಗೂ ಆಸ್ಟ್ರೇಲಿಯಾ  ಈ ಎರಡು ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಗೆ ಭರ್ಜರಿ ಚಾಲನೆ ಸಿಕ್ಕಿದ್ದು, ಮೊದಲ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆರಂಭಿಸಿದೆ. ಮೊದಲು ಬ್ಯಾಟಿಂಗ್ ಮಾಡಲಿಳಿದ ಪ್ರವಾಸಿ ಆಸೀಸ್‌ ತಂಡಕ್ಕೆ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಮೊಹಮ್ಮದ್ ಶಮಿ ಆರಂಭಿಕ ಆಘಾತ ನೀಡುವಲ್ಲಿ ಯಶಸ್ವಿಯಾದರು  ಎಂದು ವರದಿಯಾಗಿದೆ. 2 ರನ್‌ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮೂರನೇ ವಿಕೆಟ್‌ಗೆ ಸ್ಟೀವ್ ಸ್ಮಿತ್

ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಆಸ್ಟ್ರೇಲಿಯಾ..! Read More »

ರಾಷ್ಟ್ರೀಯ ನ್ಯೂಸ್

ಒಂದೇ ಕುಟುಂಬದ 5 ಮಂದಿ ಅನುಮಾನಾಸ್ಪದವಾಗಿ ಮೃತ್ಯು!

(ನ್ಯೂಸ್ ಕಡಬ)newskadaba.com ಕುಪ್ವಾರ, ಫೆ.09. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕ್ರಾಲ್​ಪೋರಾದಲ್ಲಿ ಒಂದೇ ಕುಟುಂಬದ 5 ಮಂದಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರು ಮೂಲತಃ ಉತ್ತರಪ್ರದೇಶದವರಾಗಿದ್ದಾರೆ, ರಾತ್ರಿ ತಮ್ಮ ಕೊಠಡಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ, ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ಮಜಿದ್ ಅನ್ಸಾರಿ ಎಂಬಾತ ತನ್ನ ಕುಟುಂಬದೊಂದಿಗೆ ಕ್ರಾಲ್ಪೋರಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಐವರು ಕುಟುಂಬ ಸದಸ್ಯರು ಬೆಳಗ್ಗೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಕ್ಕಪಕ್ಕದ ಜನರು ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮೇಲ್ನೋಟಕ್ಕೆ ಉಸಿರುಗಟ್ಟುವಿಕೆ

ಒಂದೇ ಕುಟುಂಬದ 5 ಮಂದಿ ಅನುಮಾನಾಸ್ಪದವಾಗಿ ಮೃತ್ಯು! Read More »

ರಾಷ್ಟ್ರೀಯ ನ್ಯೂಸ್

   ಗಗನಕ್ಕೇರಿದ ವೀಳ್ಯದೆಲೆ ಬೆಲೆ!

(ನ್ಯೂಸ್ ಕಡಬ)newskadaba.com ತುಮಕೂರು, ಫೆ.09. ತಾಲೂಕಿನ ತೋವಿನಕೆರೆಯ ಸಂತೆಯಲ್ಲಿ ವೀಳ್ಯದೆಲೆ ಒಂದು ಕಟ್ಟಿಗೆ ರು.160 ದಾಖಲೆ ಬೆಲೆಗೆ ಮಾರಾಟವಾಗಿದ್ದು, ಇದುವರೆಗೂ ಈ ಬೆಲೆ ತಲುಪಿರಲಿಲ್ಲ. ಮಧುಗಿರಿ ತಾಲೂಕು ಲಿಂಗಸಂದ್ರದ ಬೆಳೆಗಾರ ನಾಗರಾಜು ಸಂತೆಗೆ ತಂದಿದ್ದ ವೀಳ್ಯೆದೆಲೆ ಇದುವರೆಗೂ ಮಾರಾಟವಾಗದ ಬೆಲೆಗೆ ಮಾರಾಟವಾಯಿತು. ಈ ಸಂತೆಯಲ್ಲಿ ವೀಳ್ಯದೆಲೆ ಮಾರಾಟ ಹಲವು ದಶಕಗಳಿಂದ ನಡೆಯುತ್ತಿದ್ದು, ಮಧುಗಿರಿ ತಾಲೂಕು ದೊಡ್ಡೇರಿ ಹೋಬಳಿ ತೋವಿನಕೆರೆ ಸುತ್ತಮುತ್ತಲಿನ ಪ್ರದೇಶಗಳ ವೀಳ್ಯದೆಲೆ ಬೆಳೆಯುವ ರೈತರು ಇಲ್ಲಿನ ಸಂತೆಗೆ ತಂದು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುತ್ತಾರೆ. ಶಿರಾ,

   ಗಗನಕ್ಕೇರಿದ ವೀಳ್ಯದೆಲೆ ಬೆಲೆ! Read More »

ಕರ್ನಾಟಕ

  ಚರಂಡಿಯಲ್ಲಿ ಪಲ್ಟಿಯಾದ ಮರಳು ತುಂಬಿದ್ದ ಟಿಪ್ಪರ್ ➤ ಬಾಲಕ ಸೇರಿ ಇಬ್ಬರು ಮೃತ್ಯು

(ನ್ಯೂಸ್ ಕಡಬ)newskadaba.com ಕಲಬುರಗಿ, ಫೆ.09. ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ  ರಾತ್ರಿ ಮನೆ ನಿರ್ಮಾಣ ಕೆಲಸಕ್ಕೆ ಮರಳು ತಂದಿದ್ದ ಟಿಪ್ಪರ್ ಮರಳನ್ನ ಅನಲೋಡ್ ಮಾಡುವಾಗ ಚರಂಡಿಯಲ್ಲಿ ಪಲ್ಟಿಯಾಗಿ ಟಿಪ್ಪರ್ ನಡಿ ಸಿಲುಕಿ ಬಾಲಕ ಸೇರಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ. ವಾಡಿ ಪಟ್ಟಣದ ಕಲಕಂಬ್ ಬಡಾವಣೆಯಲ್ಲಿ ಕಳೆದ ರಾತ್ರಿ ಈ ದುರ್ಘಟನೆ ನಡೆದಿದ್ದು, ಮುಕಂದ್ (12) ಹಾಗೂ ಮಹಮ್ಮದ್ ಸಲೀಂ(66) ಮೃತಪಟ್ಟಿದ್ದಾರೆ .  

  ಚರಂಡಿಯಲ್ಲಿ ಪಲ್ಟಿಯಾದ ಮರಳು ತುಂಬಿದ್ದ ಟಿಪ್ಪರ್ ➤ ಬಾಲಕ ಸೇರಿ ಇಬ್ಬರು ಮೃತ್ಯು Read More »

ಕರ್ನಾಟಕ

ಪ್ರಬಲ ಭೂಕಂಪಕ್ಕೆ ನಡುಗಿದ ಟರ್ಕಿ-ಸಿರಿಯಾ ➤ ದಿನೇ ದಿನೇ ಹೆಚ್ಚುತ್ತಿರುವ ಮೃತರ ಸಂಖ್ಯೆ

(ನ್ಯೂಸ್ ಕಡಬ)newskadaba.com ಟರ್ಕಿ, ಫೆ.09. ಭೀಕರವಾದ ಭೂಕಂಪದಿಂದ ನಡುಗಿರುವ ಟರ್ಕಿ ಹಾಗೂ ಸಿರಿಯಾದಲ್ಲಿ ಈ ವರೆಗೆ ಮೃತಪಟ್ಟ ಸಂಖ್ಯೆ 15,000ಕ್ಕೆ ಏರಿಕೆಯಾಗಿದೆ. ಈ ಪೈಕಿ ಟರ್ಕಿಯಲ್ಲಿ ಒಂದರಲ್ಲಿಯೇ 12,391 ಮಂದಿ ಮೃತಪಟ್ಟಿದ್ದಾರೆ, ಸಿರಿಯಾದಲ್ಲಿ 2,992  ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಟರ್ಕಿ-ಸಿರಿಯಾ ಭೂಕಂಪದಿಂದ ಸಾವಿನ ಸಂಖ್ಯೆ 15,000 ದಾಟಿದ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಅವರು ದೃಢಪಡಿಸಿದ್ದಾರೆ. ಹವಾಮಾನ ಪರಿಸ್ಥಿತಿಗಳು ಭೂಕಂಪದಿಂದ ಉಂಟಾದ ವಿನಾಶದ ಪ್ರಮಾಣವನ್ನು ಹೆಚ್ಚಿಸಿವೆ ಎಂದು ಅವರು ಹೇಳಿದ್ದಾರೆ. ಈ ನಡುವೆ

ಪ್ರಬಲ ಭೂಕಂಪಕ್ಕೆ ನಡುಗಿದ ಟರ್ಕಿ-ಸಿರಿಯಾ ➤ ದಿನೇ ದಿನೇ ಹೆಚ್ಚುತ್ತಿರುವ ಮೃತರ ಸಂಖ್ಯೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ದಂಡ ಕಟ್ಟಲು ಬಂದಾಗ ಹಲವು ನಕಲಿ ನಂಬರ್‌ ಪ್ಲೇಟ್‌ಗಳು ಪತ್ತೆ: ಸಲೀಂ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.09. ದಂಡ ಪಾವತಿ ವೇಳೆ ಬಯಲಾಗಿರುವ ‘ನಕಲಿ ನಂಬರ್‌ ಪ್ಲೇಟ್‌’ದಾರರ ವಿರುದ್ಧ ಪ್ರತ್ಯೇಕವಾಗಿ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ವಿಶೇಷ ಪೊಲೀಸ್‌ ಆಯುಕ್ತ (ಸಂಚಾರ) ಡಾ ಎಂ.ಸಲೀಂ ಸೂಚಿಸಿದ್ದಾರೆ. ಈ ಸಂಬಂಧವಾಗಿ ಮಾತನಾಡಿದ ಸಲೀಂ ಅವರು, ನಕಲಿ ನಂಬರ್‌ ಬಳಸಿ ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆ ಹಚ್ಚಲಾಗುತ್ತದೆ. ಸಂಚಾರ ಉಲ್ಲಂಘನೆ ಪ್ರಕರಣಗಳ ಸಂಬಂಧ ದಂಡ ಪಾವತಿ ವೇಳೆ ತಮ್ಮ ವಾಹನಗಳ ನೋಂದಣಿ ಸಂಖ್ಯೆಯನ್ನು ಅಕ್ರಮವಾಗಿ ಬೇರೊಬ್ಬರು ಬಳಸಿರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತಂದಿದ್ದಾರೆ. ಇದುವರೆಗೆ

ದಂಡ ಕಟ್ಟಲು ಬಂದಾಗ ಹಲವು ನಕಲಿ ನಂಬರ್‌ ಪ್ಲೇಟ್‌ಗಳು ಪತ್ತೆ: ಸಲೀಂ Read More »

ಕರ್ನಾಟಕ

  ಮೆಟ್ರೋ ಪಿಲ್ಲರ್​ ಬಿದ್ದು ತಾಯಿ ಮಗು ಮೃತ  ಪ್ರಕರಣ ➤ ಸರ್ಕಾರದ ಪರಿಹಾರ ತಿರಸ್ಕರಿಸಿದ ಕುಟುಂಬಸ್ಥರು

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.08. ಮೆಟ್ರೋ ಪಿಲ್ಲರ್ ಕುಸಿದು ತಾಯಿ‌ ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದುರಂತ ನಡೆದು ಒಂದು ತಿಂಗಳಾಗುತ್ತಾ ಬಂದರೂ ಇನ್ನು ಕಂಟ್ರಾಕ್ಟರ್ ಮೇಲೇ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ. ಇನ್ನೊಂದು ಕಡೆ ಸಿಎಂ ಕಡೆಯಿಂದ ಘೋಷಣೆಯಾದ 10 ಲಕ್ಷ ಪರಿಹಾರ ಕೂಡ ಕುಟುಂಬಸ್ಥರಿಗೆ ದಕ್ಕಿಲ್ಲ. ಇನ್ನು ಬಿಎಂಆರ್​ಸಿಎಲ್ 20 ಲಕ್ಷ ಪರಿಹಾರವನ್ನು ನೀಡುತ್ತಿದ್ದು ಅದನ್ನು ತಿರಸ್ಕರಿಸಿರುವ ಕುಟುಂಬಸ್ಥರು, ಮೊದಲು ಕಂಟ್ರಾಕ್ಟರ್ ಲೈಸೆನ್ಸ್ ರದ್ದು‌ಮಾಡಿ, ಇದುವರೆಗೆ ಕಂಟ್ರಾಕ್ಟರ್ ಹಾಗೂ ಬಿಎಂಆರ್​ಸಿಎಲ್ ಅಧಿಕಾರಿಗಳ ವಿರುದ್ಧ ಸೂಕ್ತ

  ಮೆಟ್ರೋ ಪಿಲ್ಲರ್​ ಬಿದ್ದು ತಾಯಿ ಮಗು ಮೃತ  ಪ್ರಕರಣ ➤ ಸರ್ಕಾರದ ಪರಿಹಾರ ತಿರಸ್ಕರಿಸಿದ ಕುಟುಂಬಸ್ಥರು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅಪರಿಚಿತ ವಾಹನಕ್ಕೆ ಸಿಲುಕಿ ಚಿರತೆ ಬಲಿ!

(ನ್ಯೂಸ್ ಕಡಬ)newskadaba.com ದಾವಣಗೆರೆ, ಫೆ.08.   ಅಪರಿಚಿತ ವಾಹನಕ್ಕೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆನಗೋಡು ಬಳಿ‌ ನಡೆದಿದೆ. ಚಿರತೆಯೊಂದು ರಸ್ತೆ ದಾಟುವಾಗ ಈ ಅವಘಡ‌ ನಡೆದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಪರಿಚಿತ ವಾಹನವೊಂದು ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವು ಕಂಡಿದೆ. ವಾಹನ ಡಿಕ್ಕಿಯಾದ ರಭಸಕ್ಕೆ ಚಿರತೆ  ತಲೆ ದೇಹದ ಭಾಗಕ್ಕೆ ತೀವ್ರ  ಗಾಯಗಳಾಗಿವೆ. ಆನಗೋಡು ಸುತ್ತಮುತ್ತ ಚಿರತೆ ಓಡಾಡುತ್ತಿದ್ದ ಬಗ್ಗೆ ಗ್ರಾಮಸ್ಥರು ಭಯಭೀತರಾಗಿದ್ದರು. ಈ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೂ ತಂದಿದ್ದರು.

ಅಪರಿಚಿತ ವಾಹನಕ್ಕೆ ಸಿಲುಕಿ ಚಿರತೆ ಬಲಿ! Read More »

ಕರ್ನಾಟಕ
Scroll to Top