ನ್ಯೂಸ್ ಕಡಬ

ಕೋಲ್ಕತಾ ಥಂಡರ್ ಬೋಲ್ಟ್ಸ್ ಗೆ ಹ್ಯಾಟ್ರಿಕ್ ಗೆಲುವು

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.13. ಬೆಂಗಳೂರಿನ ಕೋರಮಂಗಲ ಕ್ರೀಡಾಂಗಣದಲ್ಲಿ ನಡೆದ ಪ್ರೈಮ್ ವಾಲಿಬಾಲ್ ಲೀಗ್ ಎರಡನೇ ಆವೃತ್ತಿಯಲ್ಲಿ ಕೋಲ್ಕತಾ ಥಂಡರ್ ಬೋಲ್ಟ್ಸ್ ತಂಡ, ಕೊಚ್ಚಿ ಬ್ಲೂ ಸ್ಪೈಕರ್ಸ್ ತಂಡವನ್ನು 15-9, 15-11, 15-14, 15-11, 12-15 ಸೆಟ್ ಗಳಿಂದ ಸೋಲಿಸಿ ಸತತ ಮೂರನೇ ಗೆಲುವು ದಾಖಲಿಸಿದೆ. ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಹುಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಕೋಲ್ಕತಾ ಥಂಡರ್ ಬೋಲ್ಟ್ಸ್ ತಂಡ ಅಶ್ವಲ್ ರಾಯ್ ಮತ್ತು ದೀಪೇಶ್ ಕುಮಾರ್ ಸಿನ್ಹಾ ಅವರ ತರಬೇತಿಯಿಂದ ಉತ್ತಮ […]

ಕೋಲ್ಕತಾ ಥಂಡರ್ ಬೋಲ್ಟ್ಸ್ ಗೆ ಹ್ಯಾಟ್ರಿಕ್ ಗೆಲುವು Read More »

ಕರ್ನಾಟಕ, ಕ್ರೀಡಾ ನ್ಯೂಸ್

➤ ಆಂಧ್ರ ರಾಜ್ಯಪಾಲರಾಗಿ ಕನ್ನಡಿಗರಾದ ನಿವೃತ್ತ ನ್ಯಾ ಅಬ್ದುಲ್ ನಜೀರ್ ಆಯ್ಕೆ!

(ನ್ಯೂಸ್ ಕಡಬ) newskadaba.com. ಬೆಂಗಳೂರು. ಫೆ.13. ಆಂಧ್ರಪ್ರದೇಶದ ನೂತನ ರಾಜ್ಯಪಾಲರಾಗಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಅಬ್ದುಲ್ ನಜೀರ್ ಆಯ್ಕೆ ಯಾಗಿದ್ದಾರೆ. ರಾಷ್ಟ್ರಪತಿ ಭವನವು 12 ರಾಜ್ಯಗಳಿಗೆ  ನೂತನ ರಾಜ್ಯಪಾಲನ್ನು ಹೊಸದಾಗಿ ನೇಮಿಸಿ ಆದೇಶ ಹೊರಡಿಸಿದೆ. ಆಂಧ್ರಪ್ರದೇಶಕ್ಕೆ ರಾಜ್ಯಪಾಲರಾಗಿ ನೇಮಕಗೊಂಡಿರುವ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಕರ್ನಾಟಕದವರಾಗಿದ್ದು, ಅವರ ಆಯ್ಕೆ ರಾಜ್ಯದ ಜನರಲ್ಲಿ ಹರ್ಷ ತಂದಿದೆ.

➤ ಆಂಧ್ರ ರಾಜ್ಯಪಾಲರಾಗಿ ಕನ್ನಡಿಗರಾದ ನಿವೃತ್ತ ನ್ಯಾ ಅಬ್ದುಲ್ ನಜೀರ್ ಆಯ್ಕೆ! Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಏಷ್ಯಾದ ಅತಿ ದೊಡ್ಡ ಏರ್​​​ಶೋಗೆ ಚಾಲನೆ ನೀಡಿದ  ಮೋದಿ…

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.13. ಬೆಂಗಳೂರಿನಲ್ಲಿ ಬಾನಕ್ಕಿಗಳ ಚಮತ್ಕಾರ ಶುರುವಾಗಿದ್ದು,  ಪ್ರಧಾನಿ ಮೋದಿ ಅತಿ ದೊಡ್ಡ ಏರ್​​​ಶೋಗೆ ಚಾಲನೆ ನೀಡಲಿದ್ದಾರೆ. ನಮೋ ಯಲಹಂಕ ವಾಯುನೆಲೆಯಲ್ಲಿ ಚಾಲನೆ ನೀಡಿದ್ದಾರೆ ಎಂದು ವರದಿಯಾಗಿದೆ. ಮೋದಿ ಏಷ್ಯಾದ ಅತಿದೊಡ್ಡ ಏರ್​​​ ಶೋ ವೀಕ್ಷಣೆ ಮಾಡಲಿದ್ದಾರೆ.  ಪ್ರಧಾನಿ ಮೋದಿಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​​, ಸಿಎಂ ಬೊಮ್ಮಾಯಿ ಸಾಥ್​​​ ನೀಡಿದ್ದಾರೆ.  

ಏಷ್ಯಾದ ಅತಿ ದೊಡ್ಡ ಏರ್​​​ಶೋಗೆ ಚಾಲನೆ ನೀಡಿದ  ಮೋದಿ… Read More »

ಕರ್ನಾಟಕ

ಬಂಧನದ ಭೀತಿಯಿಂದ ನವವಿವಾಹಿತೆ ಯುವತಿ ಆತ್ಮಹತ್ಯೆ!

(ನ್ಯೂಸ್ ಕಡಬ) newskadaba.com ದಿಸ್ಪುರ್, ಫೆ.13. ತನ್ನ ಗಂಡನನ್ನು ಬಂಧಿಸುತ್ತಾರೆಂದು ಹೆದರಿ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತೆ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ದಕ್ಷಿಣ ಸಾಲ್ಮರ ಪೊಲೀಸ್ ಠಾಣಾ ವ್ಯಾಪ್ತಿಯ ಕಮರ್ ಪದ ಗ್ರಾಮದ ನಿವಾಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡವರು. ಅಸ್ಸಾಂ ಸರ್ಕಾರ ಬಾಲ್ಯವಿವಾಹ ವಿರುದ್ಧ ಕಾರ್ಯಾಚರಣೆ ನಡೆಸಿ ಸಾವಿರಾರು ಮಂದಿಯನ್ನು ಬಂಧಿಸಿದ್ದರು.ಈ  ಕುರಿತು ತನ್ನ ಪತಿಯನ್ನು ಬಂಧಿಸುತ್ತಾರೆ ಎಂದು ಹೆದರಿ 3 ತಿಂಗಳ ಹಿಂದೆಯಷ್ಟೇ ಮದುವೆಯಾದ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೃತದೇಹವನ್ನು ಇದೀಗ

ಬಂಧನದ ಭೀತಿಯಿಂದ ನವವಿವಾಹಿತೆ ಯುವತಿ ಆತ್ಮಹತ್ಯೆ! Read More »

ರಾಷ್ಟ್ರೀಯ ನ್ಯೂಸ್

 ಟರ್ಕಿ ಬಳಿಕ ಭಾರತದಲ್ಲಿ ಲಘು ಭೂಕಂಪನ!

(ನ್ಯೂಸ್ ಕಡಬ) newskadaba.com ಅಸ್ಸಾಂ, ಫೆ.13. ;ಅಸ್ಸಾಂನ ನಾಗಾನ್ ಪ್ರದೇಶದಲ್ಲಿ ಗಂಟೆ 18 ಭೂಕಂಪ ಉಂಟಾಗಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4ರಷ್ಟು ತೀವ್ರತೆ ದಾಖಲಾಗಿದೆ. ಸಿಕ್ಕಿಂನ ಯುಕ್ಸೋಮ್ ಸುತ್ತಮುತ್ತ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.3 ರಷ್ಟು ತೀವ್ರತೆ ದಾಖಲಾಗಿದೆ. ಸಿಕ್ಕಿಂನ ಯುಕ್ಸೋಮ್ನ ವಾಯುವ್ಯಕ್ಕೆ 70 ಕಿ.ಮೀ ದೂರದಲ್ಲಿ  ಭೂಕಂಪ ಉಂಟಾಗಿದೆ, ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.

 ಟರ್ಕಿ ಬಳಿಕ ಭಾರತದಲ್ಲಿ ಲಘು ಭೂಕಂಪನ! Read More »

ರಾಷ್ಟ್ರೀಯ ನ್ಯೂಸ್

ವಿಶ್ವದ ಅತೀ ದೊಡ್ಡ ಏಸುವಿನ ಪ್ರತಿಮೆಗೆ ಬಡಿದ ಸಿಡಿಲು!

(ನ್ಯೂಸ್ ಕಡಬ) newskadaba.com ಬ್ರಿಸಿಲಿಯ, ಫೆ.13. ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾದ ಬ್ರೆಜಿಲ್‌ನ ರಿಯೋ  ಡಿ ಜನೈರೊದ  ಮೇಲಿರುವ ವಿಶ್ವದ ಅತಿ ದೊಡ್ಡ ಏಸುಕ್ರಿಸ್ತನ ಪ್ರತಿಮೆಗೆ ಸಿಡಿಲು ಬಡಿದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು,  ಬ್ರೆಜಿಲ್‌ ಕರಾವಳಿಗೆ ಫ್ಲ್ಯಾಶ್‌ ಚಂಡಮಾರುತ ಅಪ್ಪಳಿಸಿದ ಸಮಯದಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. 100 ಅಡಿ ಎತ್ತರದ ಏಸುಕ್ರಿಸ್ತನ ಮೂರ್ತಿಯ ತಲೆಯಿಂದ ಆಕಾಶಕ್ಕೆ ಸಂಪರ್ಕ ಹೊಂದಿರುವಂತೆ ಸಿಡಿಲು ಬಡಿದ ದೃಶ್ಯ ಸೆರೆಯಾಗಿದ್ದು ಇದು ದೈವಿಕ ದೃಶ್ಯ ಎಂಬಂತೆ ಭಾಸವಾಗಿದೆ. ಆದರೆ ಇದರಿಂದ

ವಿಶ್ವದ ಅತೀ ದೊಡ್ಡ ಏಸುವಿನ ಪ್ರತಿಮೆಗೆ ಬಡಿದ ಸಿಡಿಲು! Read More »

ಅಂತರ್ರಾಷ್ಟ್ರೀಯ ನ್ಯೂಸ್

ಸಾಲದ ವಿಷಯಕ್ಕೆ ಉದ್ಯಮಿಯ ಕೊಲೆ ➤ವೈದ್ಯ ಅರೆಸ್ಟ್

(ನ್ಯೂಸ್ ಕಡಬ) newskadaba.com. ಬೆಳಗಾವಿ. ಫೆ.13.  ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಉದ್ಯಮಿಯನ್ನು ವೈದ್ಯ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಜಿಲ್ಲೆಯ ಗೋಕಾಕ್‌ ನಗರದ ನಿವಾಸಿ ರಾಜು ಝಂವರ ಮೃತ ದುರ್ದೈವಿ. ಉದ್ಯಮಿ ಗೋಕಾಕ್‌ನಿಂದ ನಾಪತ್ತೆಯಾಗಿದ್ದರು. ಈ ಸಂಬಂಧ  ಗೋಕಾಕ್ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡಿದ್ದ ಪೊಲೀಸರಿಗೆ ರಾಜು ಅವರ ದ್ವಿಚಕ್ರವಾಹನ ಗೋಕಾಕ್ ನಗರದ ಸಿಟಿ ಆಸ್ಪತ್ರೆ ಬಳಿ ಪತ್ತೆಯಾಗಿತ್ತು. ಹಾಗೇ ಪೊಲೀಸರು ಉದ್ಯಮಿ ರಾಜು ಝಂವರ್‌ಗೆ ಕೊನೆ ಬಾರಿ ಕರೆ ಮಾಡಿದ್ದವರನ್ನು ಕರೆಯಿಸಿ

ಸಾಲದ ವಿಷಯಕ್ಕೆ ಉದ್ಯಮಿಯ ಕೊಲೆ ➤ವೈದ್ಯ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಭೀಕರ ರಸ್ತೆ ಅಪಘಾತ ➤‌ ಮೂವರು ಮೃತ್ಯು

(ನ್ಯೂಸ್ ಕಡಬ) newskadaba.com ಗದದ, ಫೆ.13.  ಗದಗ ಜಿಲ್ಲೆ ಬೆಟಗೇರಿ ಗಜೇಂದ್ರಗಡ ರಸ್ತೆಯ ಬಸವೇಶ್ವರ ದೇವಸ್ಥಾನದ ಬಳಿ ಭೀಕರ ರಸ್ತೆ ಅಪಘಾತಕ್ಕೆ ಮೂವರು ಮೃತಪಟ್ಟಿದ್ದಾರೆ. ಆಟೋ ಹಾಗೂ  ಟೆಂಪೋ ನಡುವೆ ಡಿಕ್ಕಿ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದ್ದ ಮದುವೆ ಮುಗಿಸಿ ಬೆಟಗೇರಿ ಕಡೆ ಬರುತ್ತಿದ್ದ ಮಿನಿ ಬಸ್, ನರೇಗಲ್ ಕಡೆ ಹೊರಟಿದ್ದ ಎಲ್​​ಪಿಜಿ ಆಟೋ ನಡುವೆ ಅಪಘಾತ ನಡೆದಿದೆ. ನರಸಾಪೂರ ಆಶ್ರಯ ಕಾಲೋನಿಯ ಸಯ್ಯದ್ ಅಲಿ ಹಾಗೂ ಪ್ರದೀಪ್, ಮಂಜುನಾಥ್ ನಗರದ ನಿವಾಸಿ ನಿಖಿಲ್ ಮೃತರು. ಆಟೋ

ಭೀಕರ ರಸ್ತೆ ಅಪಘಾತ ➤‌ ಮೂವರು ಮೃತ್ಯು Read More »

ಕರ್ನಾಟಕ

ಕರ್ನಾಟಕಕ್ಕೆ ನಿರಾಸೆ, ಫೈನಲ್‌ಗೆ ಸೌರಾಷ್ಟ್ರ!

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.12. ದೇಶೀಯ ಕ್ರಿಕೆಟ್‌ನ ಮಹತ್ವದ ಟೂರ್ನಿಯ ರಣಜಿ ಟ್ರೋಫಿಯಲ್ಲಿ ಫೈನಲ್‌ಗೇರುವ ಕರ್ನಾಟಕದ ಆಸೆ ಭಗ್ನಗೊಂಡಿದೆ. ಸೌರಾಷ್ಟ್ರ ತಂಡದ ವಿರುದ್ಧ 4 ವಿಕೆಟ್‌ ಸೋಲು ಕಂಡ ಕರ್ನಾಟಕ ತಂಡ ಸೆಮಿಫೈನಲ್‌ ಹಂತದಲ್ಲಿಯೇ ಹೊರಬಿದ್ದಿದೆ.ಗೆಲುವಿಗೆ 115 ರನ್‌ಗಳ ಸಾಧಾರಣ ಸವಾಲು ಪಡೆದುಕೊಂಡಿದ್ದ ಸೌರಾಷ್ಟ್ರ ತಂಡ, ವಿ.ಕೌಶಿಕ್‌ (32ಕ್ಕೆ 3) ಹಾಗೂ ಕೆ. ಗೌತಮ್‌ (38ಕ್ಕೆ 3) ಮಾರಕ ದಾಳಿಯ ನಡುವೆಯೂ 6 ವಿಕೆಟ್‌ ನಷ್ಟಕ್ಕೆ 117 ರನ್ ಬಾರಿಸಿ ಫೈನಲ್‌ಗೆ ಲಗ್ಗೆ ಇಡಲು ಯಶಸ್ವಿಯಾಯಿತು.

ಕರ್ನಾಟಕಕ್ಕೆ ನಿರಾಸೆ, ಫೈನಲ್‌ಗೆ ಸೌರಾಷ್ಟ್ರ! Read More »

ಕರ್ನಾಟಕ, ಕ್ರೀಡಾ ನ್ಯೂಸ್

ನದಿಯಲ್ಲಿ  ಮುಳುಗಿ ಯುವಕನೋರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಸಿರುಗುಪ್ಪ, ಫೆ.12. ತಾಲೂಕಿನ ಕೆಂಚನಗುಡ್ಡದ ಸಮೀಪದ ಹರಿಯುತ್ತಿರುವ ತುಂಗಭದ್ರಾ ನದಿಯ ನಡುವೆ ಇರುವ ಗಡ್ಡೆ ಖಾದರ್ ಭಾಷ ಉರುಸ್ ಗೆ ಬಂದಿದ್ದ ನಬಿರಸೂಲ್(18) ಎಂಬುವ ಯುವಕ ತುಂಗಭದ್ರಾ ನದಿಯಲ್ಲಿ ಸ್ಥಾನ ಮಾಡಲು ಹೋಗಿ ಕೆಸರಿನಲ್ಲಿ ಸಿಕ್ಕಿಕೊಂಡು ಮೃತ ಪಟ್ಟಿರುವ ಘಟನೆ ಸಂಭವಿಸಿದೆ. ಮೃತ ವ್ಯಕ್ತಿಯು ಸೀಮಾಂದ್ರ ಪ್ರದೇಶದ ರಾಯದುರ್ಗ ತಾಲೂಕಿನ ಬಿ.ಹಿರೇಹಾಳ್ ಗ್ರಾಮದವನೆಂದು ಪತ್ತೆ ಹಚ್ಚಲಾಗಿದೆ ಈ ಬಗ್ಗೆ ತೆಕ್ಕಲಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕಾರಣ ದಾಖಲಾಗಿದೆ ಎಂದು  ವರದಿ ತಿಳಿದು ಬಂದಿದೆ.  

ನದಿಯಲ್ಲಿ  ಮುಳುಗಿ ಯುವಕನೋರ್ವ ಮೃತ್ಯು Read More »

ಕರ್ನಾಟಕ
Scroll to Top