ನ್ಯೂಸ್ ಕಡಬ

ಉಳ್ಳಾಲ: ಯು.ಟಿ ಖಾದರ್ ಗೆ ಅಭಿನಂದಿಸಿ ಹಾಕಿದ್ದ ಫ್ಲೆಕ್ಸ್ ಹರಿದ ಕಿಡಿಗೇಡಿಗಳು

 (ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ. 17. ವಿಧಾನಸಭೆ ಸಭಾಧ್ಯಕ್ಷರಾಗಿ ಆಯ್ಕೆಯಾದ ಶಾಸಕ ಯು.ಟಿ.ಖಾದರ್ ರವರಿಗೆ ಅಭಿನಂದಿಸಿ ಅಭಿಮಾನಿಗಳು ಹಾಕಿದ್ದ ಫ್ಲೆಕ್ಸ್ ಗಳನ್ನ ಯಾರೋ ಕಿಡಿಗೇಡಿಗಳು ನಿನ್ನೆ ರಾತ್ರಿ ಹರಿದು ಹಾಕಿದ ಕುರಿತು ವರದಿಯಾಗಿದೆ. ತೊಕ್ಕೊಟ್ಟು ಓವರ್ ಬ್ರಿಡ್ಜ್ ನಿಂದ ಉಳ್ಳಾಲದ ಅಬ್ಬಕ್ಕ ವೃತ್ತದವರೆಗಿನ ರಸ್ತೆಯ ವಿಭಜಕ ಮತ್ತು ಇಕ್ಕೆಲಗಳಲ್ಲಿ ಯು.ಟಿ ಖಾದರ್ ಅವರಿಗೆ ಅಭಿನಂದಿಸಿ ಫ್ಲೆಕ್ಸ್ ಗಳನ್ನ ಹಾಕಲಾಗಿತ್ತು. ನಿನ್ನೆ ರಾತ್ರಿ ಯಾರೋ ದುಷ್ಕರ್ಮಿಗಳು ಫ್ಲೆಕ್ಸ್ ಗಳನ್ನ ಹರಿದು ಹಾಕಿದ್ದಾರೆ. ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದು […]

ಉಳ್ಳಾಲ: ಯು.ಟಿ ಖಾದರ್ ಗೆ ಅಭಿನಂದಿಸಿ ಹಾಕಿದ್ದ ಫ್ಲೆಕ್ಸ್ ಹರಿದ ಕಿಡಿಗೇಡಿಗಳು Read More »

ಕರಾವಳಿ

ಅನ್ನಭಾಗ್ಯಕ್ಕೆ ರೈತರಿಂದಲೇ ಅಕ್ಕಿ ಖರೀದಿಸಿ ➤ಕುರುಬೂರು ಶಾಂತಕುಮಾರ್

 (ನ್ಯೂಸ್ ಕಡಬ) newskadaba ಮೈಸೂರು, ಜೂ. 17. ಅನ್ನಭಾಗ್ಯ ಯೋಜನೆಗೆ ರಾಜ್ಯದ ರೈತರಿಂದಲೇ ಭತ್ತ, ರಾಗಿ, ಜೋಳವನ್ನು ಖರೀದಿಸಬೇಕು ಎಂದು ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ. ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರ ಹಾಗೂ ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಗೆ ಬೇಡಿಕೆ ಸಲ್ಲಿಸುತ್ತಿದ್ದು, ಅದಕ್ಕೆ ಒಪ್ಪಿಗೆ ಸಿಗುತ್ತಿಲ್ಲ ಎಂದು ಹೇಳಿದ್ದಾರೆ. ಕೇಂದ್ರದಿಂದ ಖರೀದಿಸುವ ಬದಲು ರೈತರಿಂದ ಅಕ್ಕಿ ಖರೀದಿಸಿ ಎಂದು ಹೇಳಿದ್ದಾರೆ. ರಾಜ್ಯದ

ಅನ್ನಭಾಗ್ಯಕ್ಕೆ ರೈತರಿಂದಲೇ ಅಕ್ಕಿ ಖರೀದಿಸಿ ➤ಕುರುಬೂರು ಶಾಂತಕುಮಾರ್ Read More »

ಕರ್ನಾಟಕ

ದ.ಕ. ನೂತನ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ)newskadaba. ಮಂಗಳೂರು, ಜೂ . 17  .  ದ.ಕ. ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಮುಲೈ ಮುಹಿಲನ್ ಎಂ.ಪಿ. ಜೂ.17ರ ಶನಿವಾರ ಅಧಿಕಾರ ಸ್ವೀಕರಿಸಿದರು. ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಎಂ.ಆರ್.ರವಿಕುಮಾರ್ ಅವರು ನೂತನ ಜಿಲ್ಲಾಧಿಕಾರಿಗೆ ಅಧಿಕಾರ ಹಸ್ತಾಂತರ ಮಾಡಿದರು.ಮುಲೈ ಮುಹಿಲನ್ ಇದಕ್ಕೂ ಮೊದಲು ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಬೆಂಗಳೂರು ಇದರ ಕಾರ್ಯಕಾರಿ ನಿರ್ದೇಶಕರಾಗಿದ್ದರು.ಮುಲ್ಲೈ ಮುಹಿಲನ್ ತಮಿಳುನಾಡು ಮೂಲದವರಾಗಿದ್ದು, ದಿಂಡಿಗಲ್ ಅಣ್ಣಾ ವಿಶ್ವವಿದ್ಯಾಲಯದ ಪಿಎಸ್‌ಎನ್‌ಎ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿನಲ್ಲಿ ಓದಿದ್ದು ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ

ದ.ಕ. ನೂತನ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಅಧಿಕಾರ ಸ್ವೀಕಾರ Read More »

ಕರಾವಳಿ, ಕರ್ನಾಟಕ

ಸೋಲಾರ್ ಸಬ್ಸಿಡಿ ರದ್ದುಗೊಳಿಸಿದ ಸರ್ಕಾರ

(ನ್ಯೂಸ್ ಕಡಬ)newskadaba. ಬೆಂಗಳೂರು, ಜೂ . 17 . ಉಚಿತ ವಿದ್ಯುತ್‌ ನೀಡಲು ಮುಂದಾಗಿರುವ ಸರ್ಕಾರ ಇದೀಗ ಸೋಲಾರ್ ಸಬ್ಸಿಡಿ ರದ್ದುಪಡಿಸಿದೆ. ಸೋಲಾರ್‌ ಬಳಸುತ್ತಿದ್ದ ಗ್ರಾಹಕರಿಗೆ ಪ್ರತೀ ತಿಂಗಳು ನೀಡುತ್ತಿದ್ದ ಸಬ್ಸಿಡಿ ರದ್ದುಗೊಳಿಸಿ KERC ಆದೇಶ ಹೊರಡಿಸಿದೆ. ಅದರಂತೆ 2007ರಿಂದ ಸೋಲಾರ್ ಬಳಕೆಗೆ ಉತ್ತೇಜನ ನೀಡಲು ಪ್ರತೀ ಯೂನಿಟ್​ಗೆ 50 ಪೈಸೆಯಂತೆ ನೀಡುತ್ತಿದ್ದ ಸಬ್ಸಿಡಿ ರದ್ದುಪಡಿಸಲಾಗಿದೆ. ಬ್ಯಾಂಕ್‌ ಮೂಲಕ ಆಟೋಮೆಟಿಕ್‌ ಬಿಲ್‌ ಪಾವತಿ ಮಾಡುವಾಗ ನೀಡುತ್ತಿದ್ದ 0.25% ರಿಯಾಯಿತಿ ಸೌಲಭ್ಯವನ್ನು ಕೂಡಾ ರದ್ದುಗೊಳಿಸಿದೆ.      

ಸೋಲಾರ್ ಸಬ್ಸಿಡಿ ರದ್ದುಗೊಳಿಸಿದ ಸರ್ಕಾರ Read More »

ಕರ್ನಾಟಕ

ಮಳೆ ಕೊರತೆ ಹಿನ್ನೆಲೆ ➤ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ

(ನ್ಯೂಸ್ ಕಡಬ)newskdaba.com ಬೆಂಗಳೂರು, ಜೂ .17. ತಮಿಳುನಾಡು ಸೇರಿ ಕಾವೇರಿ ನದಿ ಪಾತ್ರದ ರಾಜ್ಯಗಳಿಗೆ ಜೂನ್‌ನಲ್ಲಿ 9.19      ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಕರ್ನಾಟಕಕ್ಕೆ ಆದೇಶಿಸಿದೆ. ಮಳೆ ಕೊರತೆ ಹಿನ್ನೆಲೆ ಅಷ್ಟು ಪ್ರಮಾಣದ ನೀರು ಬಿಡುಗಡೆ ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.ಶುಕ್ರವಾರ ವಿಡಿಯೋ ಸಂವಾದದ ಮೂಲಕ ನಡೆದ ಸಿಡಬ್ಲ್ಯುಎಂಎ ಸಭೆಯಲ್ಲಿ ಪ್ರಾಧಿಕಾರದ ಪ್ರತಿನಿಧಿಗಳು ಹಾಗೂ ಕರ್ನಾಟಕ, ತಮಿಳುನಾಡು, ಪುದುಚೆರಿ, ಕೇರಳ ಪ್ರತಿನಿಧಿಗಳು ಭಾಗವಹಿಸಿದ್ದರು. ಪ್ರಾಧಿಕಾರ ನಿರ್ದೇಶನ ಪ್ರಕಾರ ಜೂನ್‌ ತಿಂಗಳಲ್ಲಿ

ಮಳೆ ಕೊರತೆ ಹಿನ್ನೆಲೆ ➤ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ Read More »

ಕರ್ನಾಟಕ

ಮಂಗಳೂರು: ಲಿಂಕ್ ಕಳುಹಿಸಿ 2.59 ಲ.ರೂ ವಂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ . 17.  ಟೆಲಿಗ್ರಾಂ ಮೂಲಕ ಲಿಂಕ್ ಕಳುಹಿಸಿ, ಕಮಿಷನ್ ನೀಡುವುದಾಗಿ ನಂಬಿಸಿ ವಂಚಿಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಜೂ.7 ರಂದು ದೂರುದಾರರಿಗೆ ಅಪರಿಚಿತ ವ್ಯಕ್ತಿ ವಾಟ್ಸಪ್ ನಲ್ಲಿ ಸಂದೇಶ ಮತ್ತು ಟೆಲಿಗ್ರಾಂ ಮೂಲಕ ಲಿಂಕ್ ಕಳುಹಿಸಿದ್ದು ಈ ಮೂಲಕ ಟಾಸ್ಕ್ ಪೂರೈಸಿದರೆ ಕಮಿಷನ್ ನೀಡುವುದಾಗಿ ಹೇಳಿ ಇದನ್ನು ನಂಬಿದ ದೂರುದಾರರು ಹಂತಹಂತವಾಗಿ ಒಟ್ಟು 2.59 ಲ.ರೂ ಗಳನ್ನು ವರ್ಗಾಯಿಸಿದ್ದಾರೆ,ಆದರೆ ಅವರಿಗೆ ಹಣ ನೀಡದೆ ವಂಚನೆ ಮಾಡಲಾಗಿದೆ ಎಂದು ನಗರದ ಸೆನ್ ಠಾಣೆಯಲ್ಲಿ 

ಮಂಗಳೂರು: ಲಿಂಕ್ ಕಳುಹಿಸಿ 2.59 ಲ.ರೂ ವಂಚನೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬಿಸಿಲಿನ ತೀವ್ರತೆಗೆ 34 ಮಂದಿ ಮೃತ್ಯು

 (ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಜೂ . 17 . ಬಿಸಿಲಿನ ತೀವ್ರತೆಯಿಂದ ಅಸ್ವಸ್ಥಗೊಂಡು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ 34 ಮಂದಿ ಮೃತಪಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರುತ್ತಿದ್ದು, ತೀವ್ರ ಶಾಖದಿಂದ ಜನ ತತ್ತರಿಸುತ್ತಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು 60 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಜಯಂತ್ ಕುಮಾರ್ ಮಾಹಿತಿ ನೀಡಿದ್ದಾರೆ.ಎರಡು ದಿನದಲ್ಲಿ 34 ಮಂದಿ ಸಾವನ್ನಪ್ಪಿದ್ದು, ಜೂ.15ರಂದು 23 ಮಂದಿ ಹಾಗೂ ಜೂ.16ರಂದು 11

ಬಿಸಿಲಿನ ತೀವ್ರತೆಗೆ 34 ಮಂದಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಜೂನ್ 20ರವರೆಗೂ ರಾಜ್ಯದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ

 (ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 16 . ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಭರ್ಜರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಜೂನ್ 20ರವರೆಗೆ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ ಜಿಲ್ಲೆಗಳಲ್ಲಿ ಸಹ ಭರ್ಜರಿ ಮಳೆ ಸುರಿಯಲಿದೆ. ಹೀಗಾಗಿ ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಅಷ್ಟೇ ಅಲ್ಲದೇ, ಕಲಬುರಗಿ, ಬೀದರ್, ರಾಯಚೂರು

ಜೂನ್ 20ರವರೆಗೂ ರಾಜ್ಯದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ Read More »

ಕರ್ನಾಟಕ

ಬಡವರ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರಕಾರ ನಿರಾಕರಣೆ ➤ ಜೂ. 20ರಂದು ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 16. ಬಡವರ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಅಕ್ಕಿ ನೀಡಲು ನಿರಾಕರಿಸಿರುವುದನ್ನು ವಿರೋಧಿಸಿ ಮೋದಿ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಜೂ. 20ರಂದು ರಾಜ್ಯದೆಲ್ಲೆಡೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಡಿಸಿಎಂ ಡಿಕೆಶಿ ತಿಳಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂ. 20ರಂದು ಕಾಂಗ್ರೆಸ್ ಪಕ್ಷದಿಂದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯಲಿದ್ದು, ಪಕ್ಷದ ನಾಯಕರು, ಶಾಸಕರು ಭಾಗವಹಿಸಲಿದ್ದಾರೆ. ಆ ಮೂಲಕ ಕೇಂದ್ರ

ಬಡವರ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರಕಾರ ನಿರಾಕರಣೆ ➤ ಜೂ. 20ರಂದು ಕಾಂಗ್ರೆಸ್ ನಿಂದ ಬೃಹತ್ ಪ್ರತಿಭಟನೆ Read More »

ಕರ್ನಾಟಕ

ಎನ್ಎಂಎಂಎಲ್ ಮರುನಾಮಕರಣ ➤ಪ್ರಧಾನಿ ಮೋದಿ ವಿರುದ್ದ ತರಾಟೆಯೆತ್ತಿದ ಜೈರಾಂ

(ನ್ಯೂಸ್ ಕಡಬ) newskadaba.com ನವದೆಹಲಿ, ಜೂ. 16. ಕೇಂದ್ರ ಸರಕಾರವು ನೆಹರೂ ಮೆಮೋರಿಯಲ್ ಮ್ಯೂಸಿಯಂ ಮತ್ತು ಲೈಬ್ರರಿಗೆ ಮರುನಾಮಕರಣ ಮಾಡಿ ಇದೀಗ ಮತ್ತೊಂದು ವಿವಾದ ಸೃಷ್ಟಿಸಿದ್ದು ಕೇಂದ್ರ ಸರ್ಕಾರದ ಈ ತೀರ್ಮಾನಕ್ಕೆ ಕಾಂಗ್ರೆಸ್ ಕಿಡಿಕಾರಿದೆ. ಎನ್ಎಂಎಂಎಲ್ ನ್ನು ಇನ್ನು ಮುಂದೆ ಪ್ರೈಮ್ ಮಿನಿಸ್ಟರ್ಸ್ ಮ್ಯೂಸಿಯಂ ಮತ್ತು ಸೊಸೈಟಿ ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂಬ ವರದಿ ಕೇಳಿಬಂದ ಹಿನ್ನೆಲೆ ಪ್ರಧಾನಿ ಮೋದಿ ಅವರನ್ನು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವಿಟ್ಟರ್ ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.ಎನ್ಎಂಎಂಎಲ್ ಜಾಗತಿಕ ಬೌದ್ಧಿಕ

ಎನ್ಎಂಎಂಎಲ್ ಮರುನಾಮಕರಣ ➤ಪ್ರಧಾನಿ ಮೋದಿ ವಿರುದ್ದ ತರಾಟೆಯೆತ್ತಿದ ಜೈರಾಂ Read More »

ರಾಷ್ಟ್ರೀಯ ನ್ಯೂಸ್
Scroll to Top