ನ್ಯೂಸ್ ಕಡಬ

ಕಡಬ: ಶಿವಳ್ಳಿ ಸಂಪದ ಕಡಬ ವಲಯದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ನಂತ ಹುದ್ದೆ ಅಲಂಕರಿಸಬೇಕು: ಸುಬ್ರಹ್ಮಣ್ಯ ಸ್ವಾಮೀಜಿ (ನ್ಯೂಸ್ ಕಡಬ) newskadaba.com ಕಡಬ, ಜೂ.05. ಶಿವಳ್ಳಿ ಸಂಪದ ಕಡಬ ವಲಯ ಇದರ 2016-17ನೇ ಸಾಲಿನ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ.3ರಂದು ಸಂಜೆ ಕಡಬ ಶ್ರೀಕಂಠಸ್ವಾಮಿ ಶ್ರೀ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ 625ರಲ್ಲಿ 625 ಅಂಕ ಪಡೆದುಕೊಂಡ ಕಡಬ ಸೈಂಟ್ ಜೋಕಿಮ್ಸ್‌ ಶಾಲಾ ವಿದ್ಯಾರ್ಥಿ ಪುರ್ಣಾನಂದ ಹಾಗೂ ಶಿವಳ್ಳಿ ಸಮಾಜದ ಇತರೇ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ […]

ಕಡಬ: ಶಿವಳ್ಳಿ ಸಂಪದ ಕಡಬ ವಲಯದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ Read More »

ಕರಾವಳಿ

ಕಳಾರ: ಭತ್ತದ ಗದ್ದೆಗಳಿಗೆ ಮಣ್ಣು ಹಾಕಿದ ಪರಿಣಾಮ ಮಳೆ ನೀರು ಹರಿವಿಗೆ ತಡೆ

(ನ್ಯೂಸ್ ಕಡಬ) newskadaba.com ಕಡಬ, ಜೂ.04. ಭತ್ತದ ಗದ್ದೆಗೆ ಮಣ್ಣು ಹಾಕಿ ಸಮತಟ್ಟು ಮಾಡಿರುವುದರಿಂದ ಮಳೆ ನೀರು ಹರಿಯುತ್ತಿಲ್ಲ ಎಂದು ಆರೋಪಿಸಿ ಹಲವಾರು ಮಂದಿ ಮಣ್ಣು ಹಾಕಿದ ಜಾಗದಲ್ಲಿ ಚರಂಡಿ ತೊಡಲು ಪ್ರಾರಂಭಿಸಿದ್ದರಿಂದ ಮಾತಿನ ಚಕಮಕಿ ನಡೆದು ಪೋಲಿಸರು ಹಾಗೂ ಪಂಚಾಯಯಿತಿ ಅವರ ಮದ್ಯಪ್ರವೇಶಿಸಿದ ಘಟನೆ ಗುರುವಾರ ಕಡಬ ಸಮೀಪದ ಕಳಾರ ಎಂಬಲ್ಲಿ ನಡೆದಿದೆ. ಕಡಬದಿಂದ ಕಳಾರದವರೆಗೆ ಹಿಂದೆ ಇದ್ದ ಗದ್ದೆಗಳ ಸಾಲು ಈಗ ಮಾಯವಾಗಿದೆ, ಯಾಕೆಂದರೆ ಭತ್ತದ ಗದ್ದೆಗಳನ್ನು ಮಾರಾಟ ಮಾಡಲಾಗಿದೆ, ಖರೀದಿಸಿದವರು ಗದ್ದೆಗಳಿಗೆ ಮಣ್ಣು

ಕಳಾರ: ಭತ್ತದ ಗದ್ದೆಗಳಿಗೆ ಮಣ್ಣು ಹಾಕಿದ ಪರಿಣಾಮ ಮಳೆ ನೀರು ಹರಿವಿಗೆ ತಡೆ Read More »

ಕರಾವಳಿ

ಕಡಬ: ಎಪಿಎಂಸಿ ಚುನಾಯಿತ ಜನಪ್ರತಿನಿಧಿಗಳಿಗೆ ಅಭಿನಂದನೆ

(ನ್ಯೂಸ್ ಕಡಬ) newskadaba.com ಕಡಬ, ಜೂ.04. ಸರ್ವಧರ್ಮಿಯರ ವಿಶ್ವಾಸ ಗಳಿಸಿ ಸಮಾನತೆ ಸಹಬಾಳ್ವೆಯ ಬದಲಾವಣೆಯ ಜೀವನ ಪದ್ದತಿಯನ್ನು ಕಲ್ಪಿಸಿದ ಪ್ರದಾನಿ ನರೇಂದ್ರ ಮೋದಿಯ ಆಡಳಿತ ವೈಖರಿ ಮುಂದಿನ ವಿಧಾನ ಸಭಾ ಚುನಾವಣೆಯಪಕ್ಷದ ಗೆಲುವಿಗೆ ಶ್ರೀ ರಕ್ಷೆಯಾಗಬೇಕು ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೇಂದ್ರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಬೇಕು ಎಂದು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹೇಳಿದರು. ಕಡಬ ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಎಪಿಎಂಸಿ ಚುನಾವಣೆಯಲ್ಲಿ ವಿಜೇತರಾದ ಪಕ್ಷದ ಅಭ್ಯರ್ಥಿಗಳಿಗೆ ಶುಕ್ರವಾರ ಕಡಬದಲ್ಲಿ ಹಮ್ಮಿಕೊಂಡಿದ್ದ

ಕಡಬ: ಎಪಿಎಂಸಿ ಚುನಾಯಿತ ಜನಪ್ರತಿನಿಧಿಗಳಿಗೆ ಅಭಿನಂದನೆ Read More »

ಕರಾವಳಿ

ಏಣಿತಡ್ಕ: ಕಿಂಡಿ ಅಣೆಕಟ್ಟು ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com ಕಡಬ, ಜೂ.04. ಪುತ್ತೂರು ತಾಲೂಕು ಕೊೖಲ ಗ್ರಾಮದ ಏಣಿತಡ್ಕ ಸಮಾಜ ಮಂದಿರದ ಬಳಿ ಹರಿಯುವ ತೋಡೊಂದಕ್ಕೆ ಅಡ್ಡಲಾಗಿ ನಿರ್ಮಾಣಗೊಳ್ಳಲಿರುವ ಕಿಂಡಿ ಅಣೆಕಟ್ಟುವಿಗೆ ಶಂಕುಸ್ಥಾಪನೆ ಬುಧವಾರ ಸಾಯಂಕಾಲ ನಡೆಸಲಾಯಿತು. ಸುಳ್ಯ ಶಾಸಕ ಎಸ್ ಅಂಗಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಲಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಅಣೆಕಟ್ಟುವಿನಿಂದ ನೀರಿನ ಸಂಗ್ರಹ ಜೊತೆಗೆ ಮೇಲ್ಬಾಗದಲ್ಲಿ ವಾಹನ ಸಂಚಾರಕ್ಕೂ ಅನುವು ಮಾಡಿಕೊಡಲಾಗುವುದು. ಅಲ್ಲದೆ ಗೋಳಿತ್ತಡಿ-

ಏಣಿತಡ್ಕ: ಕಿಂಡಿ ಅಣೆಕಟ್ಟು ಶಂಕುಸ್ಥಾಪನೆ Read More »

ಕರಾವಳಿ

ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು: ಪ್ರತಿಭಾವಂತ ವಿದ್ಯಾರ್ಥಿ ಪೂರ್ಣಾನಂದನಿಗೆ ಅಭಿನಂದನೆ

(ನ್ಯೂಸ್ ಕಡಬ) newskadaba.com ಕಡಬ, ಜೂ.04. ಚಂಚಲ ಮನಸ್ಸಿನ ಕಾಲಘಟ್ಟದಲ್ಲಿ ಕಾಲೇಜು ಜೀವನ ಆರಂಭವಾಗುತ್ತದೆ. ಈ ಸಮಯದಲ್ಲಿ ಮನಸ್ಸುನ್ನು ಹಿಡತದಲ್ಲಿಟ್ಟುಕೊಳ್ಳುವ ದೃಡ ಮನಸ್ಸು ಪ್ರತಿಯೊಬ್ಬರಲ್ಲಿ ಇರಬೇಕು. ಉತ್ತಮ ಕನಸ್ಸನ್ನು ನನಸಾಗಿಸುವ ಕಾಲೇಜು ಜೀವನದ ಆರಂಭದಲ್ಲಿ ಎಡವಿದರೆ ಭವಿಷ್ಯದಲ್ಲಿ ಕಷ್ಟಗಳು ಎದುರಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸುವ ಕಾರ್ಯ ಪೋಷಕರಿಂದ ಶಿಕ್ಷಣ ಸಂಸ್ಥೆಯಿಂದ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸರ್ವೋತ್ತಮ ಗೌಡ ಹೇಳಿದರು. ಅವರು ಶ್ರೀ ರಾಮಕುಂಜೇಶ್ವರ ಪದವಿ ಪುರ್ವ ಕಾಲೇಜಿನಲ್ಲಿ ಬುಧವಾರ ನಡೆದ ಪ್ರಥಮ ಪಿಯುಸಿ

ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು: ಪ್ರತಿಭಾವಂತ ವಿದ್ಯಾರ್ಥಿ ಪೂರ್ಣಾನಂದನಿಗೆ ಅಭಿನಂದನೆ Read More »

ಕರಾವಳಿ

ಕೊಂಬಾರು ಸಿ.ಆರ್.ಸಿ. ಕಾಲೋನಿ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸದಿದ್ದರೆ ನಿಗಮದ ಕಛೇರಿ ಎದುರು ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಕಡಬ, ಜೂ.04. ಕರ್ನಾಟಕ ಅರಣ್ಯ ಅಭಿವೃದ್ದಿ ವಿಭಾಗದ ಸುಬ್ರಹ್ಮಣ್ಯ ರಬ್ಬರ್ ನಿಗಮದ ಮೂಜೂರು ಘಟಕ ವ್ಯಾಪ್ತಿಯ ಕೊಂಬಾರು 16 ಸಿ.ಆರ್.ಸಿ.ಯ ಕಾರ್ಮಿಕರು ಕುಡಿಯುವ ನೀರಿನ ಸಮಸ್ಯೆಯಲ್ಲಿದ್ದು, ವಾರದೊಳಗೆ ನಿಗಮವು ಸರಿಯಾಗಿ ನೀರು ಪುರೈಕೆ ಮಾಡದಿದ್ದಲ್ಲಿ ನಿಗಮದ ಕಚೇರಿಯ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ರಬ್ಬರ್ ಕಾರ್ಮಿಕರು ಶನಿವಾರ ಎಚ್ಚರಿಕೆ ನೀಡಿದ್ದಾರೆ. ಅವರು ಕಾಲೋನಿಯ ಟ್ಯಾಂಕಿಯ ಎದುರು ಸಭೆ ಸೇರಿ ಕಳೆದ ಐದು ತಿಂಗಳಿಂದ ಕುಡಿಯುವ ನೀರಿನ ತೊಂದರೆ ಅನುಭವಿಸಿದ್ದೆವೆ. ಕೊಂಬಾರು ಗ್ರಾ.ಪಂ.ನಿಂದ ದಿನಕ್ಕೆ

ಕೊಂಬಾರು ಸಿ.ಆರ್.ಸಿ. ಕಾಲೋನಿ: ಕುಡಿಯುವ ನೀರಿನ ಸಮಸ್ಯೆ ಪರಿಹರಿಸದಿದ್ದರೆ ನಿಗಮದ ಕಛೇರಿ ಎದುರು ಪ್ರತಿಭಟನೆ Read More »

ಕರಾವಳಿ

ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ವನಮಹೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಜೂ.04. ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಇದರ ಸಹಸಂಸ್ಥೆಯಾದ ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ ಇದರ ವತಿಯಿಂದ ಬೊಳ್ಳೂರು ಶ್ರೀ ಷಣ್ಮುಖ ಸುಬ್ರಾಯ ಸ್ವಾಮಿ ದೇವಾಲಯದ ವಠಾರದಲ್ಲಿ ವನಮಹೋತ್ಸವ ಆಚರಣೆಯನ್ನು ಗುರುವಾರ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಸಹಕಾರಿಯ ಸದಸ್ಯರಾದ ಶ್ರೀ ಶಶಿಕುಮಾರ ಕೋಲಂತ್ತಾಡಿರವರು ನವಜೀವನಕ್ಕೆ ಕಾಲಿಡುವ ಸುಸಂಧರ್ಭವನ್ನು ಸಸಿಗಳನ್ನು ನೆಡುವುದರ ಮೂಲಕ ವೈವಾಹಿಕ ಜೀವನವನ್ನು ಆರಂಭಿಸಿದರು. ಈ ಸಂಧರ್ಭದಲ್ಲಿ ವಧು-ವರರ ಬಂಧು-ಮಿತ್ರರು,ಸಹಕಾರಿಯ ಹಿತೈಷಿಗಳು,ದೇವಸ್ಥಾನದ ಆಡಳಿತ ಮಂಡಳಿಯವರು,ಹಿರಿಯರಾದ ಜನಾರ್ಧನ ಗೌಡ

ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ವನಮಹೋತ್ಸವ Read More »

ಕರಾವಳಿ

ಭಯೋತ್ಪಾದನೆ ನಿಗ್ರಹ, ಹವಾಮಾನ ಬದಲಾವಣೆ ಮಾತುಕತೆ

ಫ್ರಾನ್ಸ್ ಅಧ್ಯಕ್ಷ-ಮೋದಿ ಭೇಟಿ (ನ್ಯೂಸ್ ಕಡಬ) newskadaba.com ಪ್ಯಾರಿಸ್, ಜೂ.3. ಪ್ರಧಾನಿ ನರೇಂದ್ರ ಮೋದಿ ಶನಿವಾರ ಫ್ರಾನ್ಸ್‌ನ ನೂತನ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್‌ರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಉಭಯ ನಾಯಕರು ಬಾಂಧವ್ಯ ವೃದ್ಧಿ, ಭಯೋತ್ಪಾದನೆ ನಿಗ್ರಹ ಮತ್ತು ಹವಾಮಾನ ಬದಲಾವಣೆ ಮುಂತಾದ ಜಾಗತಿಕ ಹಾಗೂ ದ್ವಿಪಕ್ಷೀಯ ಆಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಿದರು.

ಭಯೋತ್ಪಾದನೆ ನಿಗ್ರಹ, ಹವಾಮಾನ ಬದಲಾವಣೆ ಮಾತುಕತೆ Read More »

ಅಂತರ್ರಾಷ್ಟ್ರೀಯ ನ್ಯೂಸ್

ಲಂಡನ್: ಭಯೋತ್ಪಾದಕ ದಾಳಿಗೆ ಏಳು ಬಲಿ, 48 ಜನರಿಗೆ ಗಾಯ

(ನ್ಯೂಸ್ ಕಡಬ) newskadaba.com ಲಂಡನ್,ಜೂ.4. ಚೂರಿಗಳನ್ನು ಝಳಪಿಸುತ್ತಿದ್ದ, ನಕಲಿ ಆತ್ಮಹತ್ಯಾ ಜಾಕೆಟ್‌ಗಳನ್ನು ಧರಿಸಿದ್ದ ಮೂವರು ಭಯೋತ್ಪಾದಕರು ಶನಿವಾರ ರಾತ್ರಿ ಮಧ್ಯ ಲಂಡನ್‌ನಲ್ಲಿ ಮಾರಣಹೋಮ ನಡೆಸಿದ್ದಾರೆ. ರಾತ್ರಿ 10 ಗಂಟೆಗೆ(ಭಾರತೀಯ ಕಾಲಮಾನ ಸೋಮವಾರ ನಸುಕಿನ 2:30 ಗಂಟೆ) ಲಂಡನ್ನಿನ ಹೆಗ್ಗುರುತು ಲಂಡನ್ ಬ್ರಿಡ್ಜ್‌ನಲ್ಲಿ ಅತಿವೇಗದಿಂದ ಚಲಿಸುತ್ತಿದ್ದ ಬಿಳಿಯ ಬಣ್ಣದ ವ್ಯಾನ್‌ನಲ್ಲಿದ್ದ ಈ ರಾಕ್ಷಸರು ಪಾದಚಾರಿ ಗಳ ಮೇಲೆ ವಾಹನವನ್ನು ನುಗ್ಗಿಸಿದ ಬಳಿಕ ಸಮೀಪದ ಮಾರುಕಟ್ಟೆ ಪ್ರದೇಶದಲ್ಲಿದ್ದ ಜನರನ್ನು ಚೂರಿಗಳಿಂದ ಮನಬಂದಂತೆ ಇರಿದಿದ್ದಾರೆ. ಈ ದಾಳಿಯಲ್ಲಿ ಏಳು ಜನರು ಸಾವನ್ನಪ್ಪಿದ್ದು,

ಲಂಡನ್: ಭಯೋತ್ಪಾದಕ ದಾಳಿಗೆ ಏಳು ಬಲಿ, 48 ಜನರಿಗೆ ಗಾಯ Read More »

ಅಂತರ್ರಾಷ್ಟ್ರೀಯ ನ್ಯೂಸ್

ಸ್ವಾಮಿ ನಾರಾಯಣ ದೇವಸ್ಥಾನಕ್ಕೆ ಬ್ರಿಟನ್ ಪ್ರಧಾನಿ ಭೇಟಿ

(ನ್ಯೂಸ್ ಕಡಬ) newskadaba.com ಲಂಡನ್, ಜೂ. 4. ಬ್ರಿಟಿಶ್ ಪ್ರಧಾನಿ ತೆರೇಸಾ ಮೇ ತನ್ನ ಗಂಡ ಫಿಲಿಪ್ ಜೊತೆಗೆ ಶನಿವಾರ ವಾಯುವ್ಯ ಲಂಡನ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನಕ್ಕೆ ಭೇಟಿ ನೀಡಿದರು. ಬ್ರಿಟನ್ ಸಂಸತ್ತಿಗೆ ಜೂನ್ 8ರಂದು ಚುನಾವಣೆ ನಡೆಯಲಿದ್ದು, ಅದಕ್ಕಿಂತ ದಿನಗಳ ಮುಂಚೆ ತೆರೇಸಾ ಭೇಟಿ ನೀಡಿದ್ದಾರೆ. ಲಂಡನ್‌ನಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವು ಭಾರತದ ಹೊರಗಿನ ಅತ್ಯಂತ ದೊಡ್ಡ ಹಿಂದೂ ದೇವಾಲಯವಾಗಿದೆ. ದೇವಾಲಯಕ್ಕೆ ಭೇಟಿ ನೀಡಿದ 60 ವರ್ಷದ ಪ್ರಧಾನಿ, ಭಗವಾನ್ ಸ್ವಾಮಿನಾರಾಯಣನಿಗೆ ಪುಷ್ಪ ದಳಗಳನ್ನು ಅರ್ಪಿಸಿದರು ಎಂದು ದೇವಸ್ಥಾನದ ವಕ್ತಾರರೋರ್ವರು

ಸ್ವಾಮಿ ನಾರಾಯಣ ದೇವಸ್ಥಾನಕ್ಕೆ ಬ್ರಿಟನ್ ಪ್ರಧಾನಿ ಭೇಟಿ Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top