ನ್ಯೂಸ್ ಕಡಬ

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ► ಆಲಂಕಾರು ಶ್ರೀ ಭಾರತೀ ಶಾಲೆಯ ಕು.ಸ್ಫೂರ್ತಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ,ಸೆ.23. ತಾಲೂಕು ಮಟ್ಟದಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯ ಅಭಿನಯ ಗೀತೆಯಲ್ಲಿ ಆಲಂಕಾರು ಶ್ರೀ ಭಾರತೀ ಶಾಲೆಯ ಮೂರನೆ ತರಗತಿ ವಿದ್ಯಾರ್ಥಿನಿ ಕುಮಾರಿ ಸ್ಫೂರ್ತಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಕುಪ್ಲಾಜೆ ಕೃಷ್ಣ ಉಪಾಧ್ಯಾಯ ಮತ್ತು ಶುೃತಿ ದಂಪತಿ ಸುಪುತ್ರಿಯಾಗಿದ್ದಾಳೆ.

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ► ಆಲಂಕಾರು ಶ್ರೀ ಭಾರತೀ ಶಾಲೆಯ ಕು.ಸ್ಫೂರ್ತಿ ಜಿಲ್ಲಾ ಮಟ್ಟಕ್ಕೆ ಆಯ್ಕೆ Read More »

ಕರಾವಳಿ

ಬಿಜೆಪಿ ಕಾರ್ಯಕರ್ತರಿಂದ ಮರ್ದಾಳ, ಬಜಕೆರೆ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ,ಸೆ.23. ಪುತ್ತೂರು ತಾಲೂಕಿನ 102 ನೇ ನೆಕ್ಕಿಲಾಡಿ ಗ್ರಾಮದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರಿಂದ ಮರ್ದಾಳ ಪರಿಸರ, ಬಜಕೆರೆ ರೈಲ್ವೆ ನಿಲ್ದಾಣ ಮೊದಲಾದೆಡೆ ಸ್ವಚ್ಚತಾ ಕಾರ್ಯ ನಡೆಯಿತು. ಬಿಜೆಪಿ ಮುಖಂಡರಾದ ಕಿಶೋರ್ ಶಿರಾಡಿ, ಉಮೇಶ್ ಶೆಟ್ಟಿ ಸಾಯಿರಾಂ, ಎನ್ ಕೆ ಪ್ರಕಾಶ್, ಎಪಿಎಂಸಿ ನಿರ್ದೇಶಕ ಮೇದಪ್ಪ ಡೆಪ್ಪುಣಿ ಮೊದಲಾದವರು ಭಾಗವಹಿಸಿದ್ದರು.  

ಬಿಜೆಪಿ ಕಾರ್ಯಕರ್ತರಿಂದ ಮರ್ದಾಳ, ಬಜಕೆರೆ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಚತಾ ಕಾರ್ಯಕ್ರಮ Read More »

ಕರಾವಳಿ

ಸೆ.26 ರಂದು ಚಾಮರಾಜನಗರದಲ್ಲಿ ನಡೆಯುವ ರಾಜ್ಯ ಮಟ್ಟದ ಖೋ ಖೋ ಪಂದ್ಯಾಟ ► ದ.ಕ ಜಿಲ್ಲೆಯನ್ನು ಪ್ರತಿನಿಧಿಸಲಿರುವ ಶ್ರೀ ರಾಮಕುಂಜೇಶ್ವರ ಕಾಲೇಜಿನ ವಿದ್ಯಾರ್ಥಿನಿಯರು

(ನ್ಯೂಸ್ ಕಡಬ) newskadaba.com ಕಡಬ,ಸೆ.23. ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸೆ.26 ರಂದು ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಪುತ್ತೂರು ತಾಲೂಕಿನ ಶ್ರೀ ರಾಮಕುಂಜೇಶ್ವರ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ದ. ಕ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೊಗ್ರ ಗ್ರಾಮ ಅಂತರ ಮನೆ ನಿವಾಸಿ ಚಂದ್ರಶೇಖರ ಭಟ್ ಮತ್ತು ಸತ್ಯ ಕುಮಾರಿ ದಂಪತಿ ಪುತ್ರಿ ಅಕ್ಷತಾ ಪಿ ಸಿ, ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪೆರಾಬೆ ಗ್ರಾಮ ಕೆಮ್ಮಿಂಜೆ ನಿವಾಸಿ ನಾರ್ಣಪ್ಪ

ಸೆ.26 ರಂದು ಚಾಮರಾಜನಗರದಲ್ಲಿ ನಡೆಯುವ ರಾಜ್ಯ ಮಟ್ಟದ ಖೋ ಖೋ ಪಂದ್ಯಾಟ ► ದ.ಕ ಜಿಲ್ಲೆಯನ್ನು ಪ್ರತಿನಿಧಿಸಲಿರುವ ಶ್ರೀ ರಾಮಕುಂಜೇಶ್ವರ ಕಾಲೇಜಿನ ವಿದ್ಯಾರ್ಥಿನಿಯರು Read More »

ಕ್ರೀಡಾ ನ್ಯೂಸ್

ಸೆಪ್ಟಂಬರ್ 24 ► ರಾಷ್ಟ್ರದಾದ್ಯಂತ ಎನ್.ಎಸ್.ಎಸ್. ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ,ಸೆ.23, ವಿದ್ಯಾರ್ಥಿ ಮತ್ತು ಸಮಾಜದ ನಡುವಿನ ರಚನಾತ್ಮಕವಾದ ಸಂಬಂಧ ಬೆಳೆಯಬೇಕೆಂಬ ಉದ್ದೇಶದಿಂದ ಭಾರತದಾತ್ಯಂತ ರಾಷ್ಟ್ರೀಯ ಸೇವಾ ಯೋಜನಾ ದಿನವನ್ನು ಸೆಪ್ಟಂಬರ್ 24ರಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆಯನ್ನು ಮೂಡಿಸಲು ಮತ್ತು ಪರಿಪೂರ್ಣ ವ್ಯಕ್ತಿತ್ವ ವಿಕಸನದ ಮೂಲ ಉದ್ದೇಶದೊಂದಿಗೆ, ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಾರಂಭಿಸಬಹುದೆಂದು ಡಾ| ರಾಧಾಕೃಷ್ಣನ್ ನೇತೃತ್ವದ ‘ವಿಶ್ವವಿದ್ಯಾನಿಲಯ ಅನುಧಾನ ಸಮಿತಿ’ ಭಾರತ ಸರ್ಕಾರಕ್ಕೆ ಅನುಮೋದನೆ ನೀಡಿತು. ಕಲಿಕೆ ಎನ್ನುವುದು ಕೇವಲ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಕೊಂಡಿಯಾಗಿರದೆ,

ಸೆಪ್ಟಂಬರ್ 24 ► ರಾಷ್ಟ್ರದಾದ್ಯಂತ ಎನ್.ಎಸ್.ಎಸ್. ದಿನಾಚರಣೆ Read More »

ವಿಶೇಷ ಲೇಖನಗಳು

ಮಂಗಳೂರಿನಲ್ಲಿ ಪ್ರಾರಂಭವಾದ “ಮನೆ ಮನೆಗೆ ಕಾಂಗ್ರೆಸ್” ವಿನೂತನ ಕಾರ್ಯಕ್ರಮ…!!!

(ನ್ಯೂಸ್ ಕಡಬ) newskadaba.com ಮಂಗಳೂರು,ಸೆ.23. ಮುಂಬರುವ ಚುನಾವಣೆಗೆ ಕಾಂಗ್ರೆಸ್‌ ಭರ್ಜರಿಯಾಗಿ ತಯಾರಾಗಿದೆ. ಪ್ರತಿ ಮನೆ ಮನೆಗೂ ಕಾಂಗ್ರೆಸ್ ತಲುಪಬೇಕೆಂಬ ಉದ್ಧೇಶದಿಂದ ಮಂಗಳೂರಿನಲ್ಲಿ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ಶನಿವಾರ ನೀಡಲಾಗಿದೆ. ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ ಆರ್ ಲೋಬೋ ಅವರ ಕ್ಷೇತ್ರದಲ್ಲಿ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಮಂಗಳೂರಿನಲ್ಲಿ ಪ್ರಾರಂಭವಾದ “ಮನೆ ಮನೆಗೆ ಕಾಂಗ್ರೆಸ್” ವಿನೂತನ ಕಾರ್ಯಕ್ರಮ…!!! Read More »

ಕರಾವಳಿ

ರಾಜ್ಯ ರಾಜಕಾರಣಕ್ಕೆ ಹಿಂತಿರುಗಿದ ಡಿ.ವಿ.ಸದಾನಂದ ಗೌಡ…!!!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಸೆ.23. ಕರ್ನಾಟಕ ರಾಜ್ಯದಲ್ಲಿ 2018 ರಲ್ಲಿ ನಡೆಯಲಿರುವ ಮುಂದಿನ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆಯನ್ನು ಆರಂಭಿಸಿದ್ದು, ರಾಜ್ಯ ಬಿಜೆಪಿ ಸಾಂಪ್ರದಾಯಿಕ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ನೇಮಕಗೊಂಡಿದ್ದಾರೆ. 28 ಮಂದಿ ಸದಸ್ಯರ ಸಾಂಪ್ರದಾಯಿಕ ಪ್ರಚಾರ ಸಮಿತಿಗೆ ಡಿ.ವಿ. ಸದಾನಂದ ಗೌಡ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಡಿವಿಎಸ್ ಅವರು ರಾಜ್ಯ

ರಾಜ್ಯ ರಾಜಕಾರಣಕ್ಕೆ ಹಿಂತಿರುಗಿದ ಡಿ.ವಿ.ಸದಾನಂದ ಗೌಡ…!!! Read More »

ಕರ್ನಾಟಕ

ಕೊೖಲ ಗ್ರಾ.ಪಂ.ಮಹಿಳಾ ಗ್ರಾಮಸಭೆ ► ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತೆಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ,ಸೆ.23. ಕೊೖಲ ಗ್ರಾ.ಪಂ.ನ 2016-17ನೇ ಸಾಲಿನ ಮಹಿಳಾ ಗ್ರಾಮಸಭೆ ಹಾಗೂ ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತೆ ವೇದಾವತಿಯವರಿಗೆ ಸನ್ಮಾನ ಕಾರ್ಯಕ್ರಮ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ.ಅಧ್ಯಕ್ಷೆ ಮೀನಾಕ್ಷಿ ಬುಡಲೂರು ಮಾತನಾಡಿ, ಮಹಿಳೆಯರೂ ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಳ್ಳುವಂತಾಗಬೇಕು. ಮಹಿಳೆಯರಿಗೆ ಸಿಗುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು. ತಾ.ಪಂ.ಸದಸ್ಯೆ ಜಯಂತಿ ಆರ್.ಗೌಡ ಮಾತನಾಡಿ, ಮಹಿಳೆಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಮೀಸಲಾತಿ ಇದ್ದರೂ ಸಮಾಜದಲ್ಲಿ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ತಡೆಯುವ ನಿಟ್ಟಿನಲ್ಲಿ ಮಹಿಳೆಯರಿಗೆ ಕಾನೂನು ವಿಷಯಗಳ

ಕೊೖಲ ಗ್ರಾ.ಪಂ.ಮಹಿಳಾ ಗ್ರಾಮಸಭೆ ► ರಾಜ್ಯ ಪ್ರಶಸ್ತಿ ಪುರಸ್ಕೃತ ಅಂಗನವಾಡಿ ಕಾರ್ಯಕರ್ತೆಗೆ ಸನ್ಮಾನ Read More »

ಕರಾವಳಿ

ಎಟಿಎಂನಿಂದ ಹಣ ಕಳ್ಳತನಕ್ಕೆ ವಿಫಲ ಯತ್ನ ► ಹೂವಿನ ವ್ಯಾಪಾರಿಯನ್ನು ಬಂಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಚಿತ್ರದುರ್ಗ,ಸೆ.23. ಎಟಿಎಂ ಮಷೀನ್ ಒಡೆದು ಹಣ ಕಳ್ಳತನ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ನಡೆದಿದೆ. ಚಿಕ್ಕಜಾಜೂರು ಗ್ರಾಮದ ಕೆನೆರಾ ಬ್ಯಾಂಕ್ ಪಕ್ಕದಲ್ಲೇ ಇದ್ದ ಕೆನೆರಾ ಎಟಿಎಂನಿಂದ ಹಣ ಕಳ್ಳತನಕ್ಕೆ ವಿಫಲ ಯತ್ನ ನಡೆಸಲಾಗಿದೆ. ಅದೇ ಗ್ರಾಮದ ಹೂವಿನ ವ್ಯಾಪಾರಿ ನಂದೀಶ(26) ಎಂಬ ವ್ಯಕ್ತಿ ಕುಡಿದ ಆಮಲಿನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಆರೋಪಿಯು ಎಟಿಎಂ ಮಷೀನನ್ನು ಜಖಂಗೊಳಿಸುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಘಟನೆಯ ವೇಳೆ ಸಾರ್ವಜನಿಕರು ನೀಡಿದ

ಎಟಿಎಂನಿಂದ ಹಣ ಕಳ್ಳತನಕ್ಕೆ ವಿಫಲ ಯತ್ನ ► ಹೂವಿನ ವ್ಯಾಪಾರಿಯನ್ನು ಬಂಧಿಸಿದ ಪೊಲೀಸರು Read More »

ಕರ್ನಾಟಕ

ಬಿಜೆಪಿ ಚುನಾಯಿತ ಸದಸ್ಯರ ಹಾಗೂ ಪಕ್ಷದ ಕಾರ್ಯಕರ್ತರ ಅಭ್ಯಾಸ ವರ್ಗ

(ನ್ಯೂಸ್ ಕಡಬ) newskadaba.com ನೆಲ್ಯಾಡಿ,ಸೆ.23. ಕಡಬ ಬಿಜೆಪಿ ನೆಲ್ಯಾಡಿ ಶಕ್ತಿಕೇಂದ್ರ ವ್ಯಾಪ್ತಿಯ ಚುನಾಯಿತ ಸದಸ್ಯರ ಹಾಗೂ ಪಕ್ಷದ ಕಾರ್ಯಕರ್ತರ ಅಭ್ಯಾಸ ವರ್ಗ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ಸಭಾಭವನದಲ್ಲಿ ನಡೆಯಿತು. ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಎ.ವಿ.ತೀರ್ಥರಾಮ ಉದ್ಘಾಟಿಸಿದರು. ಜಿ.ಪಂ.ಮಾಜಿ ಸದಸ್ಯ ವೆಂಕಟ್ ದಂಬೆಕೋಡಿ, ಜಿಲ್ಲಾ ಸಮಿತಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಎಪಿಎಂಸಿ ನಿರ್ದೇಶಕಿ ಪುಲಸ್ತ್ಯ ರೈ, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಕಿಶೋರ್ ಶಿರಾಡಿ, ಕಾರ್ಯದರ್ಶಿ ಲಕ್ಷ್ಮೀನಾರಾಯಣ ರಾವ್ ಉಪಸ್ಥಿತರಿದ್ದರು. ಬಿಜೆಪಿ ನೆಲ್ಯಾಡಿ ಶಕ್ತಿಕೇಂದ್ರದ ಅಧ್ಯಕ್ಷ

ಬಿಜೆಪಿ ಚುನಾಯಿತ ಸದಸ್ಯರ ಹಾಗೂ ಪಕ್ಷದ ಕಾರ್ಯಕರ್ತರ ಅಭ್ಯಾಸ ವರ್ಗ Read More »

ಕರಾವಳಿ

ಆತೂರು: ಸಮಸ್ತ ಕೇರಳ ಸುನ್ನೀ ಬಾಲವೇದಿ ನೂತನ ಅಧ್ಯಕ್ಷರಾಗಿ ಮಿಕ್ದಾದ್ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ,ಸೆ.23. ಆತೂರು ತದ್ಬೀರುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಸಂಘಟನೆ ಸಮಸ್ತ ಕೇರಳ ಸುನ್ನೀ ಬಾಲವೇದಿ (ಎಸ್ಕೆಎಸ್ಬಿವಿ.) ನೂತನ ಅಧ್ಯಕ್ಷರಾಗಿ ಮಿಕ್ದಾದ್, ಪ್ರಧಾನ ಕಾರ್ಯದರ್ಶಿಯಾಗಿ ಬಾಸಿತ್ ಆಯ್ಕೆಯಾಗಿದ್ದಾರೆ. ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಜುನೈದ್ ಜಿಫ್ರಿ ತಂಙಳ್ ಅಧ್ಯಕ್ಷತೆಯಲ್ಲಿ ಹಾರಿಸ್ ಮುಸ್ಲಿಯಾರ್, ರಝಾಕ್ ಮುಸ್ಲಿಯಾರ್, ಹಂಝ  ಸಖಾಫಿ, ಮೂಸಾ ಮುಸ್ಲಿಯಾರ್ ಉಪಸ್ಥಿತಿಯಲ್ಲಿ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು.  ಉಪಾಧ್ಯಕ್ಷರಾಗಿ ಮಸೂದ್ , ಜೊತೆಕಾರ್ಯದರ್ಶಿಯಾಗಿ ಆಶಿಕ್ , ಕೋಶಾಧಿಕಾರಿ ಮುಈನುದ್ದೀನ್ ಸಅದ್ ಸಲ್ಮಿ,

ಆತೂರು: ಸಮಸ್ತ ಕೇರಳ ಸುನ್ನೀ ಬಾಲವೇದಿ ನೂತನ ಅಧ್ಯಕ್ಷರಾಗಿ ಮಿಕ್ದಾದ್ ಆಯ್ಕೆ Read More »

ಕರಾವಳಿ
Scroll to Top