ನ್ಯೂಸ್ ಕಡಬ

ನಿಶ್ಚಿತಾರ್ಥ್ಥಕ್ಕೂ ಬಿತ್ತು ನೀತಿ ಸಂಹಿತೆಯ ಬಿಸಿ ► ಮದ್ಯ ಸಂಗ್ರಹದ ನೆಪದಲ್ಲಿ ಜೈಲಿಗೆ ಹೋದ ಮನೆ ಮಾಲಿಕ

(ನ್ಯೂಸ್ ಕಡಬ) newskadaba.com ಮಂಗಳೂರು, ಎ.16. ಬಂಟ್ವಾಳ ತಾಲೂರಿನ ಇರಾ ಗ್ರಾಮದಲ್ಲಿ ಸ್ಟೀವನ್ ಡಿ’ಸಿಲ್ವ ಅವರ ಮನೆಯಲ್ಲಿ ನಿಶ್ಚಿತಾರ್ಥ್ಥ ನಡೆಯುತ್ತಿದ್ದ ವೇಳೆಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಧ್ಯ ಸಂಗ್ರಹದ ನೆಪದಲ್ಲಿ ಮನೆ ಮಾಲಿಕರಾದ ಸ್ಟೀವನ್ ಡಿ’ಸಿಲ್ವ ಅವರನ್ನು ಬಂಧಿಸಲಾಗಿದೆ. ಶನಿವಾರದಂದು ಸ್ಟೀವನ್ ಡಿ’ಸಿಲ್ವ ಅವರ ಮನೆಯಲ್ಲಿ ಅವರ ಸಹೋದರನ ಪುತ್ರಿಯ ನಿಶ್ಚಿತಾರ್ಥ್ಥ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯಲ್ಲಿ ಈ ದಾಳಿಯು ನಡೆದಿದೆ. ಚುನಾವಣಾ ನೀತಿ ಸಂಹಿತೆಯನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಅಬಕಾರಿ ಅಧಿಕಾರಿಗಳು ಈ ದಾಳಿಯನ್ನು ನಡೆಸಿದ್ದಾರೆ. […]

ನಿಶ್ಚಿತಾರ್ಥ್ಥಕ್ಕೂ ಬಿತ್ತು ನೀತಿ ಸಂಹಿತೆಯ ಬಿಸಿ ► ಮದ್ಯ ಸಂಗ್ರಹದ ನೆಪದಲ್ಲಿ ಜೈಲಿಗೆ ಹೋದ ಮನೆ ಮಾಲಿಕ Read More »

ಕರಾವಳಿ

ಪಿಜಕಳ: ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಯಾದ ಅಲ್ಪಸಂಖ್ಯಾತ ಪ್ರಮುಖರು

(ನ್ಯೂಸ್ ಕಡಬ) newskadaba.com ಕಡಬ, ಎ. 14. ಇಲ್ಲಿನ ಪಿಜಕಳ ಉಜ್ರುಪಾದೆ ಪ್ರದೇಶದ ಅಲ್ಪಸಂಖ್ಯಾತ ಪ್ರಮುಖರು ಸುಳ್ಯ ಶಾಸಕ ಎಸ್.ಅಂಗಾರ ಅವರ ಸಮ್ಮುಖದಲ್ಲಿ  ಬಿಜೆಪಿ ಸುಳ್ಯ ಮಂಡಲದ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಫಯಾಝ್ ಕಡಬ ಅವರ ನೇತೃತ್ವದಲ್ಲಿ ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಸೇರ್ಪಡೆಗೊಂಡರು. ಉಜ್ರುಪಾದೆ ನಿವಾಸಿಗಳಾದ ಮಹಮ್ಮದ್ ರಫೀಕ್, ಅಬ್ದುಲ್ ರಝಾಕ್ ಪಿಜಕಳ, ಅಬೂಬಕ್ಕರ್, ಸಲೀಮ್, ರಮೀಝ್, ಅಬ್ದುಲ್ ಖಾದರ್, ಆದಂ ಸಾಹೇಬ್, ಉಸ್ಮಾನ್ ಸಾಹೇಬ್, ಮುನ್ನಾ, ಜಲೀಲ್ ಮುಂತಾದ ಪ್ರಮುಖರನ್ನು ಶಾಸಕ ಎಸ್.ಅಂಗಾರ ಹಾಗೂ ಬಿಜೆಪಿ ಮುಖಂಡರು

ಪಿಜಕಳ: ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಯಾದ ಅಲ್ಪಸಂಖ್ಯಾತ ಪ್ರಮುಖರು Read More »

ಕರಾವಳಿ

ರಾಮಕುಂಜ: ಗ್ರಾಮ ಪಂಚಾಯಿತಿಯ ಬೂತ್ ನಲ್ಲಿ ಭಾರತಮಾತ ಪೂಜನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com  ಕಡಬ, ಎ.13. ರಾಮಕುಂಜ ಗ್ರಾಮ ಪಂಚಾಯಿತಿಯ 9 ನೇ ಬೂತ್ ಮಟ್ಟದಲ್ಲಿ ಬಿಜೆಪಿ ವತಿಯಿಂದ ಭಾರತ ಮಾತಾ ಪೂಜನಾ ಕಾರ್ಯಕ್ರಮ ಸಂಪ್ಯಾಡಿಯಲ್ಲಿ ನಡೆಯಿತು. ಪೂವಪ್ಪ ಗೌಡ ಸಂಪ್ಯಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಬಿಜೆಪಿ ಸಾಮಜಿಕ ಜಾಲತಾಣ ಮುಖ್ಯಸ್ಥ ಸದಾಶಿವ ಶೆಟ್ಟಿ ಮಾರಂಗ, ಮುಖಂಡರಾದ ಯಶವಂತ ಸಂಪ್ಯಾಡಿ, ರಮೇಶ್ ಗೋಳಿತೊಟ್ಟು, ದೇರಣ್ಣ ಸಂಪ್ಯಾಡಿ, ಮಾಧವ ಪೆರಿಯಡ್ಕ, ಮೋನಪ್ಪ ಸಂಪ್ಯಾಡಿ , ಅಂಗಾರ ಗೌಡ ಮೊದಲಾದವರು ಇದ್ದರು.

ರಾಮಕುಂಜ: ಗ್ರಾಮ ಪಂಚಾಯಿತಿಯ ಬೂತ್ ನಲ್ಲಿ ಭಾರತಮಾತ ಪೂಜನಾ ಕಾರ್ಯಕ್ರಮ Read More »

ಕರಾವಳಿ

ಎಪ್ರಿಲ್ 14ರಂದು `ಬಿಸುತ ಪೊಲಬು’

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಎ.13  ನಮ್ಮೂರು – ನೆಕ್ಕಿಲಾಡಿ ಸಂಘಟನೆಯ ವತಿಯಿಂದ 34ನೇ ನೆಕ್ಕಿಲಾಡಿ ಗ್ರಾ.ಪಂ.ನ ಮೈಂದಡ್ಕದ ಸಾರ್ವಜನಿಕ ಮೈದಾನದಲ್ಲಿ ಎ.14ರಂದು `ಬಿಸುತ ಪೊಲಬು’ ಸೌಹಾರ್ದಯುತವಾಗಿ ವಿಷು ಆಚರಣೆ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9:30ಕ್ಕೆ ಸಾಮೂಹಿಕವಾಗಿ ಕಣಿಯಿಟ್ಟ ಬಳಿಕ ಹಂಪಿ ಕನ್ನಡ ವಿವಿಯ ವಿಶ್ರಾಂತ ಉಪಕುಲಪತಿ ಡಾ. ಬಿ.ಎ. ವಿವೇಕ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, `ನಮ್ಮೂರು- ನೆಕ್ಕಿಲಾಡಿ’ಯ ಗೌರವಾಧ್ಯಕ್ಷ ರಾಧಾಕೃಷ್ಣ ನಾೖಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ 34ನೇ ನೆಕ್ಕಿಲಾಡಿ ಗ್ರಾ.ಪಂ. ಸದಸ್ಯೆ ಶ್ರೀಮತಿ ರತಿ ಎಸ್. ನಾಯ್ಕ, ಉದ್ಯಮಿ

ಎಪ್ರಿಲ್ 14ರಂದು `ಬಿಸುತ ಪೊಲಬು’ Read More »

ಕರಾವಳಿ

ಕೌಟುಂಬಿಕ ಮೌಲ್ಯ ತುಂಬಲು ದೈವಾರಾಧನೆ ಮೂಲ ಪ್ರೇರಣೆ: ಬಲ್ಯ ರಾಜನ್ ದೈವ ಕಲಶಾಭಿಷೇಕ ಧಾರ್ಮಿಕ ಸಭೆಯಲ್ಲಿ ಕತ್ತಲ್ ಸಾರ್

(ನ್ಯೂಸ್ ಕಡಬ) newskadaba.com ಕಡಬ, ಎ.13. ತುಳುನಾಡಿನ ದೈವಾರಧನೆ, ನಾಗಾರಾಧನೆ, ದೇವತಾರಾಧನೆ ಕಾರ್ಯಗಳಲ್ಲಿ ಭಕ್ತಿ ಶೃದ್ಧೆಗಳಿಂದ ಭಾಗವಹಿಸುವುದರಿಂದ ಕೌಟುಂಬಿಕ ಮೌಲ್ಯವೃದ್ಧಿಗೆ ಮೂಲ ಪ್ರೇರಣೆಯಾಗುತ್ತದೆ ಎಂದು ತುಳುವ ಬೊಳ್ಳಿ, ರಾಜ್ಯ ಸಂಸ್ಕಾರ ಭಾರತಿ ಲೋಕಕಲಾ ವಿಭಾಗ ಪ್ರಮುಖ ದಯಾನಂದ ಕತ್ತಲ್ ಸಾರ್ ಹೇಳಿದರು. ಅವರು ಬುಧವಾರ ರಾತ್ರಿ ಬಲ್ಯ-ಪಡ್ನೂರು ಶ್ರೀರಾಜನ್ ದೈವ ಹಾಗೂ ಪರಿವಾರ ದೈವಗಳ ನವೀಕರ, ಪುನರ್ಪ್ರತಿಷ್ಠೆ, ಕಲಶಾಭಿಷೇಕ ಮಹೋತ್ಸವ ಹಾಗೂ ನೇಮೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡುತ್ತಿದ್ದರು. ತುಳುನಾಡು ದೈವದೇವರುಗಳ ನೆಲೆವೀಡು, ದೈವ

ಕೌಟುಂಬಿಕ ಮೌಲ್ಯ ತುಂಬಲು ದೈವಾರಾಧನೆ ಮೂಲ ಪ್ರೇರಣೆ: ಬಲ್ಯ ರಾಜನ್ ದೈವ ಕಲಶಾಭಿಷೇಕ ಧಾರ್ಮಿಕ ಸಭೆಯಲ್ಲಿ ಕತ್ತಲ್ ಸಾರ್ Read More »

ಕರಾವಳಿ

ವಿಶ್ವಮಾನವ ಶಿಕ್ಷಣ ಅಗತ್ಯ: ಭೀಮೇಶ್ವರ ಜೋಷಿ ► ಆಲಂಕಾರು ಶ್ರೀ ಭಾರತೀ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ

(ನ್ಯೂಸ್ ಕಡಬ) newskadaba.com ಆಲಂಕಾರು, ಎ.13. ಯಾತ್ರಿಕ ಬದುಕಿಗೆ ಪ್ರೇರಣೆ ನೀಡುವ ಯಂತ್ರಮಾನವನೆಡೆಗೆ ಸಾಗುವ ಶಿಕ್ಷಣದಿಂದ ದೂರ ಸರಿದು ವಿಶ್ವಮಾನವನೆಡೆಗೆ ಕೊಂಡೊಯ್ಯುವ ಶಿಕ್ಷಣ ಇಂದು ಬೇಕಾಗಿದೆ ಎಂದು ಹೊರನಾಡು ಅನ್ನಪುರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ ಹೇಳಿದರು. ಅವರು ಬುಧವಾರ ಆಲಂಕಾರು ಶ್ರೀ ಭಾರತೀ ಶಾಲಾ ರಜತಮಹೋತ್ಸವ ಸಮಿತಿ ವತಿಯಿಂದ ನಡೆಯುತ್ತಿರುವ ರಜತ ಸಂಭ್ರಮದ ಹಿನ್ನೆಯಲ್ಲಿ ನಿರ್ಮಾಣವಾಗಲಿರುವ ಕಟ್ಟಡಗಳ ಕಾಮಗಾರಿಗಳಿಗೆ ಶಿಲ್ಯಾಸ ನೆರವೇರಿಸಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ನಾವು ಇಂದು ಬದಲಾವಣೆಯ ಯುಗದಲ್ಲಿದ್ದೇವೆ, ಬದಲಾವಣೆ ಜಗದ ನಿಯಮವಾದರೂ ನಾವು ನಮ್ಮ

ವಿಶ್ವಮಾನವ ಶಿಕ್ಷಣ ಅಗತ್ಯ: ಭೀಮೇಶ್ವರ ಜೋಷಿ ► ಆಲಂಕಾರು ಶ್ರೀ ಭಾರತೀ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ Read More »

ಕರಾವಳಿ

ಕಡಬ: ಸರಸ್ವತೀ ವರ್ತುಲ ಕಾರ್ಯಗಾರ

(ನ್ಯೂಸ್ ಕಡಬ) newskadaba.com ಕಡಬ, ಎ.11. ಸರಸ್ವತೀ ವರ್ತುಲದ ಕಾರ್ಯಗಾರವು ಕೇವಳದ ಸರಸ್ವತೀ ವಿದ್ಯಾಲಯ ಪ್ರೌಢ ಶಾಲೆಯ ಸಭಾಂಗಣದಲ್ಲಿ ಏಪ್ರಿಲ್ 7 ರಂದು ನಡೆಯಿತು.ಈ ಕಾರ್ಯಕ್ರಮವನ್ನು ಶ್ರೀ ಗೋಪಾಲ ಕೃಷ್ಣ ನಿವೃತ್ತ ಮುಖ್ಯಗುರುಗಳು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಬಿಳಿನೆಲೆ ಇವರು ಉದ್ಘಾಟಿಸಿ ಮಾತನಾಡಿದರು,ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ವಿಶೇಷವಾದ ಜವಾಬ್ದಾರಿಯನ್ನು ವಹಿಸಬೇಕು.ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು.ಅದೇ ರೀತಿ ಶಿಕ್ಷಕರು ನಿರಂತರ ಅಧ್ಯಯನ ಶಿಲರಾಗಬೇಕು ಎಂದು ಹೇಳಿದರು. ಸಭಾಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಇವರು ಮಾತನಾಡಿ ವಿದ್ಯಾಭಾರತೀಯ

ಕಡಬ: ಸರಸ್ವತೀ ವರ್ತುಲ ಕಾರ್ಯಗಾರ Read More »

ಕರಾವಳಿ

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬೇಸಿಗೆ ಶಿಬಿರ ಸಮರೋಪ

(ನ್ಯೂಸ್ ಕಡಬ) newskadaba.com ಕಡಬ ಎ.11. ಬೇಸಿಗೆ ರಜಾ ದಿನಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲು ಬೇಸಿಗೆ ಶಿಬಿರ ಪೂರಕ . ಶಿಬಿರದಲ್ಲಿ ಮಕ್ಕಳು ಭಾಗವಹಸಿ ತನ್ನ ಪ್ರತಿಭೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಸದಸ್ಯೆ ತೇಜಶ್ವಿನಿ ಕಟ್ಟಪುಣಿ ಹೇಳಿದರು. ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಪ್ರತಿಭಾನ್ವೇಷಣೆ ಹಾಗೂ ಬೇಸಿಗೆ ಶಿಬಿರ ಚಿಣ್ಣರಲೋಕ-2018 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಕಾರ್ಯದರ್ಶಿ ಸೇಸಪ್ಪ ರೈ ಮಾತನಾಡಿ, ತರಭೇತಿಯಲ್ಲಿ ಅಭ್ಯಸಿಸಿದ ಎಲ್ಲವೂ ಮುಂದಿನ ಜೀವನಕ್ಕೆ

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬೇಸಿಗೆ ಶಿಬಿರ ಸಮರೋಪ Read More »

ಕರಾವಳಿ

ಆಲಂಕಾರು: ಸಾಫ್ಟ್ ಡ್ರಿಂಕ್ ಸಾಗಾಟದ ವಾಹನ ಟೆಲಿಫೋನ್ ಕಂಬಕ್ಕೆ ಢಿಕ್ಕಿ ► ಕಂಬ ತಲೆಯ ಮೇಲೆ ಬಿದ್ದು ಓರ್ವ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಎ.07. ಸಾಫ್ಟ್ ಡ್ರಿಂಕ್ ಸಾಗಾಟದ ವಾಹನವೊಂದು ಟೆಲಿಫೋನ್ ಕಂಬಕ್ಕೆ ಢಿಕ್ಕಿ ಹೊಡೆದು ಕಂಬ ತಲೆಯ ಮೇಲೆ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಆಲಂಕಾರಿನಲ್ಲಿ ಶನಿವಾರ ಅಪರಾಹ್ನ ನಡೆದಿದೆ. ಮೃತರನ್ನು ಕಡಬ ತಾಲೂಕಿನ ಪೆರಾಬೆ ಗ್ರಾಮದ ಬಾಲಾಜೆ ನಿವಾಸಿ ದಿ| ಅಂಗಾರ ಎಂಬವರ ಪುತ್ರ ಗಿರೀಶ್ (43) ಎಂದು ಗುರುತಿಸಲಾಗಿದೆ. ಆಲಂಕಾರು ಮದ್ಯದಂಗಡಿಯ ಮುಂಭಾಗದಲ್ಲಿದ್ದ ಟೆಲಿಫೋನ್ ಕಂಬಕ್ಕೆ ಭವಾನಿ ಸಾಫ್ಟ್ ಡ್ರಿಂಕ್ ಸಾಗಾಟದ ವಾಹನವು ಹಿಮ್ಮುಖವಾಗಿ ಚಲಿಸಿ ಢಿಕ್ಕಿ ಹೊಡೆದಿದ್ದು, ಈ

ಆಲಂಕಾರು: ಸಾಫ್ಟ್ ಡ್ರಿಂಕ್ ಸಾಗಾಟದ ವಾಹನ ಟೆಲಿಫೋನ್ ಕಂಬಕ್ಕೆ ಢಿಕ್ಕಿ ► ಕಂಬ ತಲೆಯ ಮೇಲೆ ಬಿದ್ದು ಓರ್ವ ಮೃತ್ಯು Read More »

ಕರಾವಳಿ

ಆತೂರು: ಶ್ರೀ ಸದಾಶಿವ ಶ್ರೀ ಮಹಾಗಣಪತಿ ದೇವಸ್ಥಾನ ಜಾತ್ರೋತ್ಸವ ►ದುಗಲಾಯಿ ದೈವದ ನೇಮೋತ್ಸವ

(ನ್ಯೂಸ್ ಕಡಬ) newskadaba.com ಕಡಬ,ಎ.3.  ಕಡಬ ತಾಲೂಕು ಕೊೖಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಳದ ವಾರ್ಷಿಕ ಮಹೋತ್ಸವ ಅಂಗವಾಗಿ ಮಂಗಳವಾರ ಶ್ರೀ ದುಗಲಾಯಿ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಿತು. ಈ ಸಂದರ್ಭ ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿತ್ರಾಜ್ ಶೆಟ್ಟಿ , ಸದಸ್ಯರಾದ ವಿಷ್ಣುಮೂರ್ತಿ ಬಡಕಿಲ್ಲಾಯ, ಪುರಂದರ ರೈ, ಬಿ.ಕೆ.ಚಂದ್ರಶೇಖರ್, ಬಿ.ಚಂದ್ರಶೇಖರ ಗೌಡ, ವಸಂತ ಅಮೀನ್, ಪುಷ್ಪಾವತಿ , ಕೆ.ರಾಧಿಕಾ , ಉತ್ಸವ ಸಮಿತಿ ಅಧ್ಯಕ್ಷ ಸಂತೋಷ್ ರೈ ಸಬಳೂರು, ಪ್ರಧಾನ

ಆತೂರು: ಶ್ರೀ ಸದಾಶಿವ ಶ್ರೀ ಮಹಾಗಣಪತಿ ದೇವಸ್ಥಾನ ಜಾತ್ರೋತ್ಸವ ►ದುಗಲಾಯಿ ದೈವದ ನೇಮೋತ್ಸವ Read More »

ಕರಾವಳಿ
Scroll to Top