ನ್ಯೂಸ್ ಕಡಬ

ನದಿ ದಡದಲ್ಲಿದ್ದ ಪಂಪ್ ಸೆಟ್ ಕಳವು – ನಾಲ್ವರು ಅರೆಸ್ಟ್

(ನ್ಯೂಸ್ ಕಡಬ)newskadaba.com ಬೈಲಹೊಂಗಲ, ಆ.05. ಮಲಪ್ರಭಾ ನದಿಯ ದಡದಲ್ಲಿ ರೈತರು ಅಳವಡಿಸಿದ್ದ ವಿದ್ಯುತ್‌ ಪಂಪ್ ಸೆಟ್‌ ಗಳ ಕಳ್ಳತನ ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಪಂಪ್‌ಸೆಟ್‌ ಹಾಗೂ ವಾಹನ ಸೇರಿ ₹5ಲಕ್ಷ ಮೌಲ್ಯದ ವಸ್ತುಗಳನ್ನೂ ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ. ಮಲಪ್ರಭಾ ನದಿಯ ದಂಡೆಯ ಜಾಕ್‌ವೆಲ್ ಹತ್ತಿರ ಹೊಸೂರು ಗ್ರಾಮದ ರೈತರು ಈ ಪಂಪ್‌ ಸೆಟ್‌ಗಳನ್ನು ಅಳವಡಿಸಿದ್ದರು. ಈಚೆಗೆ ಕಳ್ಳತನ ಮಾಡಿದ ಬಗ್ಗೆ ಮುರಗೋಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಮುರಗೋಡ ಪೊಲೀಸರು […]

ನದಿ ದಡದಲ್ಲಿದ್ದ ಪಂಪ್ ಸೆಟ್ ಕಳವು – ನಾಲ್ವರು ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಉದ್ಯೋಗಾಕಾಂಕ್ಷಿಗಳಿಗೆ YES Bankನಲ್ಲಿ ಭರ್ಜರಿ ಆಫರ್ – ಇಂದೇ ಅಪ್ಲೈ ಮಾಡಿ

(ನ್ಯೂಸ್ ಕಡಬ)newskadaba.com ಆ.05. YES Bank Recruitment 2023 ಖಾಸಗಿ ವಲಯದ ಬ್ಯಾಂಕುಗಳಲ್ಲಿ ಒಂದಾದ ಯೆಸ್ ಬ್ಯಾಂಕ್ನಲ್ಲಿ (Yes Bank) ಅನೇಕ ಹುದ್ದೆಗಳು ಖಾಲಿ ಇದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವವರು ಈಗಲೇ ಅಪ್ಲೈ ಮಾಡಿ. ಅನೇಕ ರಿಲೇಶನ್ ಶಿಪ್ ಮ್ಯಾನೇಜರ್, ಪರ್ಸನಲ್ ಬ್ಯಾಂಕರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಇದೇ ಆಗಸ್ಟ್ 31, 2023 ಅರ್ಜಿ ಹಾಕಲು ಕೊನೆಯ ದಿನವಾಗಿದ್ದು, ಆಸಕ್ತರು ಆನ್ಲೈನ್ (Online) ಮೂಲಕ ಅಪ್ಲೈ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆಗೂ ಮುನ್ನ

ಉದ್ಯೋಗಾಕಾಂಕ್ಷಿಗಳಿಗೆ YES Bankನಲ್ಲಿ ಭರ್ಜರಿ ಆಫರ್ – ಇಂದೇ ಅಪ್ಲೈ ಮಾಡಿ Read More »

ಉದ್ಯೋಗ, ಕರಾವಳಿ

ಕ್ಷುಲ್ಲಕ ಕಾರಣಕ್ಕೆ 7 ತಿಂಗಳ ಗರ್ಭಿಣಿಯ ಕೊಂದ ಪಾಪಿಗಳು..!

(ನ್ಯೂಸ್ ಕಡಬ)newskadaba.com ಬಿಹಾರ, ಆ.05. ವರದಕ್ಷಿಣೆಯಾಗಿ ಮದುವೆ ಸಮಯದಲ್ಲಿ ಫ್ರಿಡ್ಜ್ ಗಿಫ್ಟ್ ಕೊಟ್ಟಿಲ್ಲವೆಂದು 7 ತಿಂಗಳ ಗರ್ಭಿಣಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಅಂಗೂರಿ ಬೇಗಂ (30) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಈಕೆ 2012ರಲ್ಲಿ ಮೊಮಿನತ್ ಅಲಾಂ ಎಂಬಾತನನ್ನು ಮದುವೆಯಾಗಿದ್ದು, ನಾಲ್ವರು ಮಕ್ಕಳಿದ್ದರು ಎನ್ನಲಾಗಿದೆ. ಅಂಗೂರಿ ಮತ್ತೆ ಗರ್ಭಿಣಿಯಾಗಿದ್ದು, ಸದ್ಯ ಈಕೆಯನ್ನು ಬಾಮೈದರೇ ಕೊಲೆ ಮಾಡಿದ್ದಾರೆ. ಕೊಲೆ ನಡೆದ ಬೆನ್ನಲ್ಲೇ ಅಂಗೂರಿ ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಂಗೂರಿ ಮೃತದೇಹವನ್ನು

ಕ್ಷುಲ್ಲಕ ಕಾರಣಕ್ಕೆ 7 ತಿಂಗಳ ಗರ್ಭಿಣಿಯ ಕೊಂದ ಪಾಪಿಗಳು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ –  ಆ.08 ರಂದು ದಲಿತ್ ಸಂಘಟನೆಯಿಂದ ಪ್ರತಿಭಟನೆ

(ನ್ಯೂಸ್ ಕಡಬ)newskadaba.com ವಿಟ್ಲ, ಆ.05. ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷದ ಎಸ್ ಸಿ, ಎಸ್ ಟಿ ಘಟಕ ಮತ್ತು ಕಾರ್ಮಿಕ ಸಂಘಟನೆಗಳ ಸಹಭಾಗಿತ್ವದಲ್ಲಿ ವಿಟ್ಲದಲ್ಲಿ ಆ.08 ರಂದು ಪ್ರತಿಭಟನೆ ನಡೆಯಲಿದೆ ಎಂದು ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಬಿ.ಕೆ ಸೇಸಪ್ಪ ಬೆದ್ರಕಾಡು ತಿಳಿಸಿದರು. ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿಟ್ಲ ಜೈನ ಬಸದಿಯಿಂದ ಮೆರವಣಿಗೆ ಹೊರಟು ವಿಟ್ಲ ನಾಡಕಚೇರಿ

ಅಪ್ರಾಪ್ತ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣ –  ಆ.08 ರಂದು ದಲಿತ್ ಸಂಘಟನೆಯಿಂದ ಪ್ರತಿಭಟನೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬಾಣಂತಿಯರಲ್ಲಿ ಎದೆಹಾಲಿನ ಸಮಸ್ಯೆಯೇ..? – ಹಾಗಾದರೆ ಇಲ್ಲಿದೆ ಮಹತ್ವದ ಮಾಹಿತಿ

(ನ್ಯೂಸ್ ಕಡಬ)newskadaba.com ಆ.05. ಹಾಲುಣಿಸುವ ತಾಯಂದಿರಲ್ಲಿ ಎದೆ ಹಾಲು ಹೆಚ್ಚಿಸುವ ಗುಣ ಈ ಮೆಂತ್ಯೆ ಕಾಳುಗಳಲ್ಲಿ ಅಡಗಿದೆ. ಅದರೊಂದಿಗೆ ದೇಹದ ಕೊಬ್ಬನ್ನು ಕರಗಿಸುತ್ತದೆ. ಇದನ್ನು ನೀರಿನಲ್ಲಿ ನೆನೆಸಿಟ್ಟು ಮರುದಿನ ಆ ನೀರಿನ ಜೊತೆ ಸೇವಿಸಬೇಕು. ಮೆಂತ್ಯೆ ಪುಡಿ ಮಾಡಿಕೊಂಡು ಹಾಲಿನ ಜೊತೆ ಸೇವಿಸಬಹುದು. ಮೆಂತ್ಯೆಯನ್ನು ಮೊಳಕೆ ಬರಿಸಿಯೂ ಸೇವಿಸಬಹುದು. ಆದರೆ ಇದನ್ನು ಹೆಚ್ಚಾಗಿ ತಿನ್ನಬಾರದು. ಹಿತಮಿತವಾಗಿ ಸೇವಿಸಬೇಕು. ಅಡುಗೆ ಮನೆಯಲ್ಲಿ ಇರುವಂತಹ ಮೆಂತ್ಯೆ ಕಾಳು, ಮೆಂತ್ಯೆ ಸೊಪ್ಪು ಬಳಸುವುದರಿಂದ ಆರೋಗ್ಯಕ್ಕೆ ಸಂಬಂಧಪಟ್ಟ ಸಾಕಷ್ಟು ತೊಂದರೆಗಳನ್ನು ನಿವಾರಿಸಿಕೊಳ್ಳಬಹುದುದಾಗಿದೆ. ಇದರಲ್ಲಿ

ಬಾಣಂತಿಯರಲ್ಲಿ ಎದೆಹಾಲಿನ ಸಮಸ್ಯೆಯೇ..? – ಹಾಗಾದರೆ ಇಲ್ಲಿದೆ ಮಹತ್ವದ ಮಾಹಿತಿ Read More »

ಆರೋಗ್ಯ ಮಾಹಿತಿ

ಉತ್ತಮ ಆರೋಗ್ಯಕ್ಕಾಗಿ ಸೀಬೆ ಹಣ್ಣು..! – ಪ್ರತಿದಿನ ಸೇವಿಸಿ ಆರೋಗ್ಯವನ್ನು ಕಾಪಾಡಿ

(ನ್ಯೂಸ್ ಕಡಬ)newskadaba.com ಆ.04. ಸೇಬಿನ ಬದಲು ದಿನಕ್ಕೊಂದು ಸೀಬೆಹಣ್ಣು ತಿಂದು ವೈದ್ಯರಿಂದ ದೂರ ಇರಿ. ಉತ್ತಮ ಹಣ್ಣುಗಳಲ್ಲಿ ಸೀಬೆಹಣ್ಣು ಕೂಡ ಒಂದಾಗಿದ್ದು, ಪ್ರಮುಖ ಪೌಷ್ಟಿಕಾಂಶಗಳನ್ನು ಹೊಂದಿರುವ ಹಣ್ಣು ಇದು. ಈ ಹಣ್ಣು ಸಾಮಾನ್ಯವಾಗಿ ಒಣ ಉಷ್ಣಾಂಶವಿರುವ ಹಾಗೂ ತಂಪು ಪ್ರದೇಶಗಳಲ್ಲಿ ಬೆಳೆಯುತ್ತದೆ. ಇದಕ್ಕೆ ಆರೈಕೆಯ ಅಗತ್ಯ ಇಲ್ಲ. ಸಾಮಾನ್ಯವಾಗಿ ಕೆಂಪು ಹಾಗೂ ಬಿಳಿ ಬಣ್ಣಗಳಲ್ಲಿ ಈ ಹಣ್ಣು ಸಿಗುತ್ತದೆ. ರುಚಿಯಲ್ಲಿ ಕೊಂಚ ಭಿನ್ನವಾಗಿರುತ್ತದೆ. ಪೌಷ್ಠಿಕಾಂಶದ ವಿಷಯದಲ್ಲಿ ಸೀಬೆಹಣ್ಣಿನಲ್ಲಿ ಉತ್ತಮ ವಿಟಮಿನ್‌ ಸಿ ಅಂಶವಿರುತ್ತದೆ. ಒಂದು ಮಧ್ಯಮ ಗಾತ್ರದ

ಉತ್ತಮ ಆರೋಗ್ಯಕ್ಕಾಗಿ ಸೀಬೆ ಹಣ್ಣು..! – ಪ್ರತಿದಿನ ಸೇವಿಸಿ ಆರೋಗ್ಯವನ್ನು ಕಾಪಾಡಿ Read More »

ಆರೋಗ್ಯ ಮಾಹಿತಿ

ಬೆಳ್ತಂಗಡಿ: ಧರ್ಮಸ್ಥಳ ಪರ ಬೃಹತ್ ಸಮಾವೇಶ – ಸೌಜನ್ಯ ಕುಟುಂಬಸ್ಥರ ಮೇಲೆ ಹಲ್ಲೆಗೆ ಯತ್ನ

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಆ.04.  ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅನೇಕ ರೀತಿಯ ಸುಳ್ಳಾರೋಪಗಳನ್ನು ಮಾಡಿ, ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಹಿನ್ನೆಲೆ ‘ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ’ ಸಂಘಟನೆಯ ಮಂಜುನಾಥ ಸ್ವಾಮಿಯ ಭಕ್ತಾಭಿಮಾನಿಗಳಿಂದ ಬೃಹತ್ ಸಮಾವೇಶ ಮತ್ತು ಹಕ್ಕೊತ್ತಾಯ ಸಭೆ ಉಜಿರೆಯಲ್ಲಿ ನಡೆಯಿತು. ಉಜಿರೆಯ ಜನಾರ್ಧನ ಸ್ವಾಮಿ ದೇವಸ್ಥಾನದಿಂದ ಪೇಟೆಯ ಮೂಲಕ ಸಾಗಿಬಂದ ಬೃಹತ್ ಮೆರವಣಿಗೆಯು, ಸುರಿಯುತ್ತಿದ್ದ ಮಳೆಯನ್ನೂ ಲೆಕ್ಕಿಸದೇ ಸಾವಿರಾರು ಜನರ ಜೊತೆ ಶಿಸ್ತು ಬದ್ಧವಾಗಿ ಸಾಗಿಬಂದಿತ್ತು. ಎಲ್ಲರ ಕೈಯಲ್ಲೂ ಕ್ಷೇತ್ರದ ಮತ್ತು

ಬೆಳ್ತಂಗಡಿ: ಧರ್ಮಸ್ಥಳ ಪರ ಬೃಹತ್ ಸಮಾವೇಶ – ಸೌಜನ್ಯ ಕುಟುಂಬಸ್ಥರ ಮೇಲೆ ಹಲ್ಲೆಗೆ ಯತ್ನ Read More »

ಕರಾವಳಿ

ಸುಳ್ಯ: ಮಸೂದ್ ಹತ್ಯೆ ಪ್ರಕರಣ – ಓರ್ವನಿಗೆ ಜಾಮೀನು ಮಂಜೂರು

(ನ್ಯೂಸ್ ಕಡಬ)newskadaba.com ಸುಳ್ಯ, ಆ.04. ಮಸೂದ್ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಯೋರ್ವನಿಗೆ ಜಾಮೀನು ಸಿಕ್ಕಿದೆ ಎಂದು ತಿಳಿದುಬಂದಿದೆ. 8ನೇ ಆರೋಪಿಯಾಗಿರುವ ಭಾಸ್ಕರ್ ಕೆ.ಎಂ.ಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರುಗೊಳಿಸಿರುವ ಬಗ್ಗೆ ವರದಿಯಾಗಿದೆ. ಪ್ರಕರಣದ 8ನೇ ಆರೋಪಿಯಾಗಿರುವ ಭಾಸ್ಕರ ಕೆ.ಎಂ. ಜಾಮೀನು ಕೋರಿ ವಕೀಲರ ಮೂಲಕ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿದ್ದು ಆ.3 ರಂದು ಷರತ್ತುಬದ್ಧ ಜಾಮೀನು ಮಂಜೂರು ಗೊಳಿಸಿರುವುದಾಗಿ ತಿಳಿದು ಬಂದಿದೆ. 2022ರಲ್ಲಿ ಕಳಂಜದಲ್ಲಿ 8 ಮಂದಿ ಗೂಂಡಾಗಳ ತಂಡ ಮಸೂದ್ ಗೆ ಗಂಭೀರವಾಗಿ ಹಲ್ಲೆ

ಸುಳ್ಯ: ಮಸೂದ್ ಹತ್ಯೆ ಪ್ರಕರಣ – ಓರ್ವನಿಗೆ ಜಾಮೀನು ಮಂಜೂರು Read More »

ಕರಾವಳಿ, ಕ್ರೈಮ್ ನ್ಯೂಸ್

ಮಕ್ಕಳನ್ನು ಕೊಂದು ದಂಪತಿಗಳಿಬ್ಬರು ಆತ್ಮಹತ್ಯೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಆ.04. ಇಬ್ಬರು ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಂಧ್ರ ಮೂಲದ ವೀರಾರ್ಜುನ ವಿಜಯ್ (31), ಪತ್ನಿ ಹೇಮಾವತಿ(29)ಅವರು ಇಬ್ಬರು ಮಕ್ಕಳಾದ ಮೋಕ್ಷಾ, ಸೃಷ್ಟಿಯನ್ನು ಕೊಲೆ ಮಾಡಿ ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಅಪಾರ್ಟ್ಮೆಂಟ್ ಒಂದರಲ್ಲಿ ಈ ಘಟನೆ ಸಂಭವಿಸಿದ್ದು, ಮೃತ ವೀರಾರ್ಜುನ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಕಾಡುಗೋಡಿ ಠಾಣಾ ಪೊಲೀಸರು ಹಾಗೂ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ

ಮಕ್ಕಳನ್ನು ಕೊಂದು ದಂಪತಿಗಳಿಬ್ಬರು ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಇಂಗ್ಲೀಷ್ ಮಾತನಾಡಲು ಬರಲಿಲ್ಲವೆಂದು ವಿದ್ಯಾರ್ಥಿಗೆ ಕೊಳಕು ಚಪ್ಪಲಿ ಹಾರ ಹಾಕಿ ಮೆರವಣಿಗೆ

(ನ್ಯೂಸ್ ಕಡಬ)newskadaba.com ಮೇಘಾಲಯ, ಆ.04. ವಿದ್ಯಾರ್ಥಿಗೆ ಇಂಗ್ಲೀಷ್ ಮಾತನಾಡಲು ಬರಲಿಲ್ಲ ಎನ್ನುವ ಕಾರಣಕ್ಕೆ ಕೊಳಕು ಚಪ್ಪಲಿಗಳ ಹಾರ ಹಾಕಿ ಮೆರವಣಿಗೆ ಮಾಡಿರುವ ಅಮಾನವೀಯ ಘಟನೆ ಮೇಘಾಲಯದಿಂದ ವರದಿಯಾಗಿದೆ. ಈ ಕುರಿತು ವಿದ್ಯಾರ್ಥಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಶಿಕ್ಷಕರ ವರ್ತನಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಮಕ್ಕಳು ತಪ್ಪು ಮಾಡಿದರೆ ತಿದ್ದಿ ಹೇಳಬೇಕು ಆದರೆ, ಅದರ ಬದಲು ಕುತ್ತಿಗೆಗೆ ಚಪ್ಪಲಿ ಹಾರ ಹಾಕಿದ್ದು ತಪ್ಪು ಎಂದು ದೂರಿನಲ್ಲಿ ಹೇಳಲಾಗಿದೆ. ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಮತ್ತು ಸಂಬಂಧಪಟ್ಟ

ಇಂಗ್ಲೀಷ್ ಮಾತನಾಡಲು ಬರಲಿಲ್ಲವೆಂದು ವಿದ್ಯಾರ್ಥಿಗೆ ಕೊಳಕು ಚಪ್ಪಲಿ ಹಾರ ಹಾಕಿ ಮೆರವಣಿಗೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top