ನ್ಯೂಸ್ ಕಡಬ

ಕೊಡಿಯಾಲ : ಕುಸಿಯುವ ಹಂತದಲ್ಲಿದೆ ಮನೆ

(ನ್ಯೂಸ್ ಕಡಬ) newskadaba.com ಕೊಡಿಯಾಲ, ಆ,14:  ಕೊಡಿಯಾಲ ಗ್ರಾಮದಲ್ಲಿ ಸುಮಾರು 50 ವರ್ಷಗಳಿಂದ ವಾಸಿಸುತ್ತಿರುವ ಅಕ್ಕು ಬೈರ ಮತ್ತು ರಾಮ ಬೈರ ಎಂಬುವರ ಮನೆಯು ಇತ್ತೀಚೆಗೆ ಸುರಿಯುತ್ತಿರುವ ಭಾರೀ ಗಾಳಿ ಮಳೆಗೆ ಮುರಿದು ಬೀಳುವ ಹಂತದಲ್ಲಿದೆ.     ಇನ್ನು ಇವರು ಅಂತ್ಯೋದಯ ಪಡಿತರ ಚೀಟಿ ಹೊಂದಿದ್ದು ದುಡಿಯಲು ಅಸಕ್ತಾರದ ಕುಟುಂಬವಾಗಿರುತ್ತದೆ. ಆದುದರಿಂದ ಇವರ ಮನೆಯನ್ನು ಇಲಾಖಾಧಿಕಾರಿಗಳು ಪರಿಶೀಲಿಸಿ ಇವರಿಗೆ ಮಳೆಹಾನಿ ಯೋಜನೆಯಡಿ ಮನೆ ಒದಗಿಸಿಕೊಡಬೇಕೆಂದು ಸಾಮಾಜಿಕ ಕಾರ್ಯಕರ್ತ ಕೆ.ಕೆ ನಾಯ್ಕ್ ಕೊಡಿಯಾಲ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದಾರೆಂದು […]

ಕೊಡಿಯಾಲ : ಕುಸಿಯುವ ಹಂತದಲ್ಲಿದೆ ಮನೆ Read More »

ಕರಾವಳಿ, ಕರ್ನಾಟಕ

ಟಾಪರ್ ಅನುಷ್ ಎ. ಎಲ್ ಗೆ ಸನ್ಮಾನ ➤ ಸುಬ್ರಹ್ಮಣ್ಯ ಯೇನೆಕಲ್ಲು ಒಕ್ಕೂಟ ವತಿಯಿಂದ ಸನ್ಮಾನ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ,14:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಸುಬ್ರಹ್ಮಣ್ಯ ಯೇನೆಕಲ್ಲು ಒಕ್ಕೂಟದ ವತಿಯಿಂದ ಎಸ್. ಎಸ್. ಎಲ್. ಸಿ ಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ಉತೀರ್ಣಗೈದು ಸಾಧನೆಗೈದ ಗ್ರಾಮೀಣ ಪ್ರತಿಭೆ ಅನುಷ್ ಎ ಎಲ್ ರವರಿಗೆ ಅಭಿನಂದಾನ ಕಾರ್ಯಕ್ರಮ ಏರ್ಪಡಿಸಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ, ಇಂದು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.     ವಲಯ ಮೇಲ್ವಿಚಾರಕಾರದ ಸೀತಾರಾಮ, ಒಕ್ಕೂಟದ ಅಧ್ಯಕ್ಷರಾದ ತೇಜುಕುಮಾರ್, ಮತ್ತು ಸುರೇಶ್ ಕುಮಾರ್ ಉಜಿರಡ್ಕ

ಟಾಪರ್ ಅನುಷ್ ಎ. ಎಲ್ ಗೆ ಸನ್ಮಾನ ➤ ಸುಬ್ರಹ್ಮಣ್ಯ ಯೇನೆಕಲ್ಲು ಒಕ್ಕೂಟ ವತಿಯಿಂದ ಸನ್ಮಾನ Read More »

ಕರಾವಳಿ, ಕರ್ನಾಟಕ

ಪಂಜ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ➤ ಕಾರಿನಲ್ಲಿದ್ದವರು ಭಾರಿ ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com.ಪಂಜ,ಆ.14:  ಇಲ್ಲಿನ ನೂತನ ಸಂತೆ ಮಾರುಕಟ್ಟೆಯ ಎದುರು ಮುಖ್ಯ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದು ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾದ ಘಟನೆ  ಗುರುವಾರ ನಡೆದಿದೆ. ಕಾರು ವಿದ್ಯುತ್‌ ಕಂಬಕ್ಕೆ ಗುದ್ದಿದ ರಭಸಕ್ಕೆ ವಿದ್ಯುತ್ ಕಂಬ ಮುರಿದಿದ್ದು ಕಾರು ಜಖಂಗೊಂಡಿದೆ.ಬಿಪಿನ್ ಜಾಕೆ ಎಂಬವರಿಗೆ ಸೇರಿದ ಕಾರಾಗಿದ್ದು ಅಪಘಾ್ತದಲ್ಲಿ ಕಾರಿನಲ್ಲಿದ್ದವರೆಲ್ಲರೂ  ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ, ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ಅಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗಿದೆ ದುರಸ್ತಿಗೆಂದು ವಿದ್ಯುತ್ ಸ್ಥಗಿತಗೊಳಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.

ಪಂಜ ವಿದ್ಯುತ್‌ ಕಂಬಕ್ಕೆ ಕಾರು ಡಿಕ್ಕಿ➤ ಕಾರಿನಲ್ಲಿದ್ದವರು ಭಾರಿ ಅಪಾಯದಿಂದ ಪಾರು Read More »

ಕರಾವಳಿ

ಮಂಗಳೂರು ವಿ.ವಿ ವ್ಯಾಪ್ತಿಯ ಪದವಿ ಮತ್ತು ಸ್ನಾತಕೋತ್ತರ ಪದವಿಯ ಪರೀಕ್ಷೆಗೆ ಡೇಟ್ ಫಿಕ್ಸ್

(ನ್ಯೂಸ್ ಕಡಬ) newskadaba.com.ಮಂಗಳೂರು,ಆ.14:  ಸರ್ಕಾರ ಮತ್ತು ಯುಜಿಸಿ ನಿರ್ದೇಶನ ಪ್ರಕಾರ ರಚಿಸಲಾದ ಮಾರ್ಗಸೂಚಿ ಅನ್ವಯ ಮಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಪದವಿಯ 2019-20ನೇ ಸಾಲಿನ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಸೆ.16ರಿಂದ 30ರೊಳಗೆ ನಡೆಸಲಾಗುವುದು ಎಂದು ಕುಲಪತಿ ಪ್ರೊ.ಪಿ.ಯಸ್.ಯಡಪಡಿತ್ತಾಯ ತಿಳಿಸಿದ್ದಾರೆ. ಪರೀಕ್ಷೆಗೂ ಮೊದಲು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಿದ್ಧಪಡಿಸಲು ಅನುಕೂಲವಾಗುವಂತೆ ಸೆ.1ರಿಂದ 12ರ ತನಕ ಆನ್‌ಲೈನ್/ ಆಫ್‌ಲೈನ್ ತರಗತಿಗಳನ್ನು ನಡೆಸಲು ಅವಕಾಶ ಒದಗಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಇದುವರೆಗೆ ಶುಲ್ಕ ಪಾವತಿಸದ ಮತ್ತು ಪರೀಕ್ಷೆ ನೋಂದಣಿ

ಮಂಗಳೂರು ವಿ.ವಿ ವ್ಯಾಪ್ತಿಯ ಪದವಿ ಮತ್ತು ಸ್ನಾತಕೋತ್ತರ ಪದವಿಯ ಪರೀಕ್ಷೆಗೆ ಡೇಟ್ ಫಿಕ್ಸ್ Read More »

ಕರ್ನಾಟಕ

74ನೇ ಸ್ವಾತಂತ್ರ್ಯೋತ್ಸವ ➤ ದೆಹಲಿ ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ

(ನ್ಯೂಸ್ ಕಡಬ) newskadaba.com ನವದೆಹಲಿ, ಆ,14:  74ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ದೆಹಲಿಯ ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅಂತರ ಕಾಯ್ದುಕೊಳ್ಳುವ ನಿಯಮ ಕಡ್ಡಾಯವಾಗಿ ಪಾಲಿಸಬೇಕಿದೆ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.   ಎನ್‌ಎಸ್‌ಜಿ ಸ್ನೈಪರ್‌ಗಳು, ವಿಶೇಷ ಭದ್ರತಾ ಕಮಾಂಡೊಗಳನ್ನು ಕೆಂಪುಕೋಟೆ ಸುತ್ತ ನಿಯೋಜಿಸಲಾಗುತ್ತಿದೆ. ಕೆಂಪುಕೋಟೆ ಸುತ್ತ 300 ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಅವುಗಳನ್ನು ಆಗಾಗ ಪರಿಶೀಲಿಸಲಾಗುತ್ತದೆ. ಸುಮಾರು 4,000 ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸಲಿದ್ದಾರೆ. ಅಂತರ ಕಾಯ್ದುಕೊಳ್ಳುವ ನಿಯಮ ಪಾಲಿಸಿಕೊಂಡೇ ಕಾರ್ಯನಿರ್ವಹಿಸಲಿದ್ದಾರೆ

74ನೇ ಸ್ವಾತಂತ್ರ್ಯೋತ್ಸವ ➤ ದೆಹಲಿ ಕೆಂಪುಕೋಟೆಯಲ್ಲಿ ಬಿಗಿ ಭದ್ರತೆ Read More »

ರಾಷ್ಟ್ರೀಯ ನ್ಯೂಸ್

ಪಾಣೆಮಂಗಳೂರು ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್ ನಿಂದ ಬೆಂಕಿಹಾಹುತಿಯಾದ ಬೇಕರಿ

(ನ್ಯೂಸ್ ಕಡಬ) newskadaba.com.ಬಂಟ್ವಾಳ,ಆ.14:  ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೇಕರಿಯೊಂದು ಸಂಪೂರ್ಣ ಬೆಂಕಿಗಾಹುತಿಯಾದ ಘಟನೆ ಕಳೆದ ರಾತ್ರಿ ಬಂಟ್ವಾಳ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರುನಲ್ಲಿ ನಡೆದಿದೆ. ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿರುವ ರಾಜೇಶ್ ಎಂಬವರಿಗೆ ಸೇರಿದ ವಿಷ್ಣು ಬೇಕರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣ ಸುಟ್ಟು ಭಸ್ಮವಾಗಿದೆ.ರಾತ್ರಿ ಅಂಗಡಿ ಬಾಗಿಲು ಹಾಕಿ ಹೋದ ಬಳಿಕ ಮಧ್ಯ ರಾತ್ರಿ ವೇಳೆ ಈ ಘಟನೆ ನಡೆದಿದೆ. ಘಟನೆಯಲ್ಲಿ 10 ಲಕ್ಷ ರೂ.ನಷ್ಟ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಕೆಲ ಸಮಯಗಳ

ಪಾಣೆಮಂಗಳೂರು ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್ ನಿಂದ ಬೆಂಕಿಹಾಹುತಿಯಾದ ಬೇಕರಿ Read More »

ಕರಾವಳಿ

ಮಾಜಿ ಸಿಎಂ ಸಿದ್ದುಗೆ ಕೊರೋನಾ ನೆಗೆಟಿವ್ ➤ ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್

(ನ್ಯೂಸ್ ಕಡಬ) newskadaba.com  ಬೆಂಗಳೂರು, ಆ,12: ಮಾಜಿ ಸಿಎಂ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರವರು ಕೊರೋನಾ ಸೋಂಕಿನಿಂದ ಈಗ ಸಂಪೂರ್ಣ ಗುಣಮುಖ ಆಗಿದ್ದಾರೆ. ಹೀಗಾಗಿ ಇಂದು ಸಂಜೆ 6 ಗಂಟೆ ವೇಳೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಲಿದ್ದಾರೆ. ಕೊರೋನಾ ಚಿಕಿತ್ಸೆಗಾಗಿ ಸಿದ್ದರಾಮಯ್ಯರವರು ಮಣಿಪಾಲ್ ಆಸ್ಪತ್ರೆಗೆ ದಾಖಲಾದರು. ಸಿದ್ದರಾಮಯ್ಯ ರವರಿಗೆ ಕೊರೋನಾ ಜತೆಗೆ ಇತರ ಆರೋಗ್ಯ ಸಮಸ್ಯೆಗಳಿರುವುದರಿಂದ ಎಲ್ಲದಕ್ಕೂ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಸದ್ಯ ಸಿದ್ದರಾಮಯ್ಯರವರು ಕೊರೋನಾದಿಂದ ಗುಣಮುಖರಾಗಿದ್ದಾರೆ. ಎರಡನೇ ಬಾರಿಗೆ ಗಂಟಲು ದ್ರವ ಹಾಗೂ ರಕ್ತ

ಮಾಜಿ ಸಿಎಂ ಸಿದ್ದುಗೆ ಕೊರೋನಾ ನೆಗೆಟಿವ್ ➤ ಇಂದು ಸಂಜೆ ಆಸ್ಪತ್ರೆಯಿಂದ ಡಿಸ್ಚಾರ್ಜ್ Read More »

ಕರಾವಳಿ, ಕರ್ನಾಟಕ

ಬಿಳಿನೆಲೆ ಅಕ್ರಮ ಶೆಡ್‌ ತೆರವಿಗಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ➤ ಇಂದಿನಿಂದ ರಾತ್ರಿಯೂ ಸತ್ಯಾಗ್ರಹ ಮುಂದುವರಿಕೆ ಎಚ್ಚರಿಕೆ

(ನ್ಯೂಸ್ ಕಡಬ) newskadaba.com.ಸುಬ್ರಹ್ಮಣ್ಯ,ಆ.13:  ಬಿಳಿನೆಲೆ ಪೇಟೆಯಲ್ಲಿ ನಿರ್ಮಿಸಲಾದ ಅಕ್ರಮ ಶೆಡ್ ನ್ನು ತೆರವುಗೊಳಿಸುವಂತೆ ಆಗ್ರಹಿಸಿ ಪ್ರಾರಂಬಿಸಿದ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಶೆಡ್‌ ತೆರವಿಗಾಗಿ ಕಳೆದ ಕೆಲ ದಿನಗಳಿಂದ ಮುಸುಕಿನ ಗುದ್ದಾಟ ನಡೆಸುತ್ತಿರುವ ಅಂಗಡಿ ಮಾಲಕರು ಶೆಡ್ ತೆರವುಗೊಳಿಸುವಲ್ಲಿವರೆಗೆ ಸತ್ಯಾಗ್ರಹ ಮುಂದುವರಿಸಲಾಗುವುದು ಹಾಗೂ ಯಾವುದೇ ಅನಾಹುತಗಳು ನಡೆದಲ್ಲಿ ಅಧಿಕಾರಿಗಳೇ ಹೊಣೆ ಎಂದು ಸತ್ಯಾಗ್ರಹ ನಿರತರು ತಿಳಿಸಿದ್ದಾರೆ. ಅನ್ನಪೂರ್ಣ ಹಾಗೂ ಅವರ ಪತಿ ಗಿರಿಯಪ್ಪ, ಮಕ್ಕಳಾದ ಚೇತನ್ , ಚೇತಕ್ ಅವರು ಬಿಳಿನೆಲೆ ಗ್ರಾಮ ಪಂಚಾಯತ್ ಜಗಲಿಯಲ್ಲಿ

ಬಿಳಿನೆಲೆ ಅಕ್ರಮ ಶೆಡ್‌ ತೆರವಿಗಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ➤ ಇಂದಿನಿಂದ ರಾತ್ರಿಯೂ ಸತ್ಯಾಗ್ರಹ ಮುಂದುವರಿಕೆ ಎಚ್ಚರಿಕೆ Read More »

ಕರಾವಳಿ

ಕಾಂತಮಂಗಲದಲ್ಲಿ ಏಕಾಏಕಿ ಸ್ಮೋಕ್‌ ಹೌಸ್‌ನಲ್ಲಿ ಬೆಂಕಿ➤ 3ಲಕ್ಷಕೂ ಅಧಿಕ ನಷ್ಟ

(ನ್ಯೂಸ್ ಕಡಬ) newskadaba.com.ಸುಳ್ಯ,ಆ.13: ಅಜ್ಜಾವರ ಗ್ರಾಮದ ಕಾಂತಮಂಗಲದ ಸೂರ್ಯಾಜಿ ರಾವ್‌ ಅವರ ರಬ್ಬರ್‌ ಒಣಗಿಸುವ ಸ್ಮೋಕ್‌ ಹೌಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಸ್ಮೋಕ್‌ ಹೌಸ್‌ ಭಾಗಶಃ ಸುಟ್ಟು ಕರಕಲಾದ ಘಟನೆ ನಿನ್ನೆ ರಾತ್ರಿ ನಡೆದಿದೆ. ನಿನ್ನೆ ರಾತ್ರಿ ಆಕಸ್ಮಿಕವಾಗಿ ಬೆಂಕಿ ಆವರಿಸಿಕೊಂಡು ಸ್ಮೋಕ್‌ ಹೌಸ್‌ ಉರಿಯಲಾರಂಭಿಸಿದೆ ಏಕಾಏಕಿ ಹೊತ್ತಿಕೊಂಡ ಬೆಂಕಿ ನಂದಿಸಲು ತಕ್ಷಣವೇ ಅಗ್ನಿಶಾಮಕ ಠಾಣೆಗೆ ಸ್ಥಳೀಯರು ಮಾಹಿತಿ ನೀಡಿದರು. ತಕ್ಷಣವೇ ಆಗಮಿಸಿದ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಬೆಂಕಿಯಿಂದಾಗಿ ಸುಮಾರು 3ಲಕ್ಷಕ್ಕೂ ಅಧಿಕ

ಕಾಂತಮಂಗಲದಲ್ಲಿ ಏಕಾಏಕಿ ಸ್ಮೋಕ್‌ ಹೌಸ್‌ನಲ್ಲಿ ಬೆಂಕಿ➤ 3ಲಕ್ಷಕೂ ಅಧಿಕ ನಷ್ಟ Read More »

ಕರಾವಳಿ

ಕೋಳಿ ಅಂಕಕ್ಕೆ ದಾಳಿ ಮಾಡಿದ ಈಶ್ವರಮಂಗಲ ಹೊರಠಾಣಾ ಪೋಲಿಸರು➤ ಕೋಳಿ‌, ಬೈಕ್ ಸಹಿತ ಮೂವರ ಬಂಧನ

(ನ್ಯೂಸ್ ಕಡಬ) newskadaba.com.ಪುತ್ತೂರು,ಆ.13: ಬಡಗನ್ನೂರು ಗ್ರಾಮದ ಶರವು ಎಂಬಲ್ಲಿನ ಗುಡ್ಡದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ಮಾಡಿದ ಈಶ್ವರಮಂಗಲ ಹೊರಠಾಣಾ ಪೋಲಿಸರ ತಂಡ ಕೋಳಿ ಅಂಕದಲ್ಲಿ ನಿರತರಾಗಿದ್ದ ಮೂವರನ್ನು ಬಂಧಿಸಿ, 5ಕೋಳಿ ಮತ್ತು 3 ಬೈಕ್‌ಗಳನ್ನು ವಶಕ್ಕೆ ಪಡೆದು ಕೊಂಡ ಘಟನೆ ವರದಿಯಾಗಿದೆ. ಬುಧವಾರ ಸಂಜೆ ಸಂಪ್ಯ ಪೊಲೀಸ್‌ ಠಾಣೆಯ ಎಸ್.ಐ ಅವರ ಸೂಚನೆಯಂತೆ ಈಶ್ವರಮಂಗಲ ಹೊರಠಾಣೆಯ ಎ.ಎಸ್.ಐ ತಮ್ಮಯ್ಯ ಗೌಡ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಡಗನ್ನೂರು ಗ್ರಾಮದ ಶರವು ಎಂಬಲ್ಲಿನ ಗುಡ್ಡೆಯಲ್ಲಿ ಕೋಳಿ ಅಂಕದಲ್ಲಿ

ಕೋಳಿ ಅಂಕಕ್ಕೆ ದಾಳಿ ಮಾಡಿದ ಈಶ್ವರಮಂಗಲ ಹೊರಠಾಣಾ ಪೋಲಿಸರು➤ ಕೋಳಿ‌, ಬೈಕ್ ಸಹಿತ ಮೂವರ ಬಂಧನ Read More »

ಕರಾವಳಿ
Scroll to Top