ನ್ಯೂಸ್ ಕಡಬ

ರಾಜ್ಯದ ಮೊದಲ ಕಿಸಾನ್ ರೈಲು ಸಂಚಾರಕ್ಕೆ ಸಿದ್ಧ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.16:  ರಾಜ್ಯದ ಮೊದಲ ಕಿಸಾನ್ ರೈಲು ಸೇವೆ ಸೆ. 19ರಂದು ಆರಂಭಗೊಳ್ಳಲಿದ್ದು, ಬೆಂಗಳೂರಿನಿಂದ ದೆಹಲಿ ನಡುವೆ ಸಂಚರಿಸಲಿದೆ. ಪ್ರಸಕ್ತ ಸಾಲಿನ ಕೇಂದ್ರ ಬಜೆಟ್​ನಲ್ಲಿ ಘೋಷಿಸಿದಂತೆ ಕೃಷಿ ಉತ್ಪನ್ನಗಳನ್ನು ಸಾಗಿಸುವುದಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಚಾಲನೆ ಪಡೆದುಕೊಂಡಿರುವ ಕಿಸಾನ್ ರೈಲು ಈಗಾಗಲೇ ಉತ್ತರ ಭಾರತದ ಹಲವು ನಗರಗಳಲ್ಲಿ ಸೇವೆ ಆರಂಭಿಸಿದೆ. ಈ ರೈಲಲ್ಲಿ ಕೃಷಿ ಉತ್ಪನ್ನಗಳಾದ ಕ್ಯಾಬೇಜ್, ಕ್ಯಾಪ್ಸಿಕಂ, ಮೆಣಸಿನಕಾಯಿ, ಇನ್ನಿತರ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಬಹುದಾಗಿದೆ. ಅದರ ಜತೆಗೆ ಹಾಲು, ಮಾಂಸ, […]

ರಾಜ್ಯದ ಮೊದಲ ಕಿಸಾನ್ ರೈಲು ಸಂಚಾರಕ್ಕೆ ಸಿದ್ಧ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಕೊರೊನಾ ಲಸಿಕೆ ಮತ್ತೆ ಪ್ರಯೋಗ ಆರಂಭಿಸಲು ಅನುಮತಿ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.16:  ಕೊರೊನಾ ಲಸಿಕೆಯ ವೈದ್ಯಕೀಯ ಪ್ರಯೋಗವನ್ನು ಮತ್ತೆ ಆರಂಭಿಸಲು ಸೇರಂ ಇನ್ಸ್ಟಿಟ್ಯೂಟ್ ಗೆ ಡಿಸಿಜಿಐ ಅನುಮತಿ ನೀಡಿದೆ.ಆಕ್ಸ್ ಫರ್ಡ್ ಯುನಿವರ್ಸಿಟಿ ಮತ್ತು ಆಸ್ಟ್ರಾಝೆನಿಕಾ ಕಂಪನಿಗಳು ತಯಾರಿಸಿದ್ದ ಲಸಿಕೆಯನ್ನು ಸೇರಂ ಇನ್ಸ್ಟಿಟ್ಯೂಟ್ ಭಾರತದಲ್ಲಿ ವೈದ್ಯಕೀಯ ಪ್ರಯೋಗಕ್ಕೆ ಒಳಪಡಿಸುತ್ತಿದೆ. ಬ್ರಿಟನ್ ನಲ್ಲಿ ಲಸಿಕೆ ಪ್ರಯೋಗಿಸಲಾಗಿದ್ದ ಲಸಿಕೆಯಿಂದ ಒಬ್ಬರಲ್ಲಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬ್ರಿಟನ್ ನಲ್ಲಿ ಆಸ್ಟ್ರಾಝೆನಿಕಾ ಕಂಪನಿ ವೈದ್ಯಕೀಯ ಪರೀಕ್ಷೆಯನ್ನು ಸ್ಥಗಿತಗೊಳಿಸಿದ್ದು ಬಳಿಕ ಭಾರತದಲ್ಲಿಯೂ ಡಿಜಿಸಿಐ ವೈದ್ಯಕೀಯ ಪ್ರಯೋಗ ಸ್ಥಗಿತಗೊಳಿಸಲು ಸೇರಂ ಇನ್ಸ್ಟಿಟ್ಯೂಟ್ ಗೆ

ಕೊರೊನಾ ಲಸಿಕೆ ಮತ್ತೆ ಪ್ರಯೋಗ ಆರಂಭಿಸಲು ಅನುಮತಿ Read More »

ಕರಾವಳಿ

ಕರಾವಳಿಯಲ್ಲಿ ಮಾದಕ ದ್ರವ್ಯದ ನಶೆ ➤ ಟ್ರಾಫೀಕ್ ರೂಲ್ಸ್ ಬ್ರೇಕರ್ ವಿರುದ್ಧ ಪೊಲೀಸ್ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 15. ಮುಂಬೈ, ಬೆಂಗಳೂರು, ಮಂಗಳೂರು, ಸೇರಿದಂತೆ ದೇಶಾದ್ಯಂತ ಇದೀಗಾ ಮಾದಕ ದೃವ್ಯ ಹಾಗೂ ಗಾಂಜದ್ದೇ ಸದ್ದು- ಸುದ್ದಿಯಾಗಿದೆ. ಅದರ ಜೊತೆಗೆ ಕರಾವಳಿಯೇ ಅತೀ ಹೆಚ್ಚಾಗಿ ದ್ರವ್ಯಕ್ಕೆ ಕೇಂದ್ರ ಬಿಂದುವೆಂಬಂತೆ ಪರಿಣಮಿಸುತ್ತಿದೆ. ಇದಕ್ಕೆ ಸಂಬಂಧ ಪಟ್ಟಂತೆ ಉಡುಪಿಯಲ್ಲಿ ಖುದ್ದಾಗಿ ಎಸ್ ಪಿ ವಿಷ್ನುವರ್ಧನ್, ಎ ಎಸ್ಪಿ ಕುಮಾರ ಚಂದ್ರ ರವರು ಫೀಲ್ಡಗೆ ಇಳಿದಿದ್ದಾರೆ.   ಕರಾವಳಿ ನಗರಿ ಉಡುಪಿ ಜಿಲ್ಲೆಯಲ್ಲಿ ಮಾದಕ ದ್ರವ್ಯ ಮಾರಾಟ ಮಾಡುವವರು ಮತ್ತು ಗಾಂಜಾ ಸೇವಿಸುವವರ ಮೇಲೆ

ಕರಾವಳಿಯಲ್ಲಿ ಮಾದಕ ದ್ರವ್ಯದ ನಶೆ ➤ ಟ್ರಾಫೀಕ್ ರೂಲ್ಸ್ ಬ್ರೇಕರ್ ವಿರುದ್ಧ ಪೊಲೀಸ್ ಕಾರ್ಯಾಚರಣೆ Read More »

ಕರಾವಳಿ, ಕ್ರೈಮ್ ನ್ಯೂಸ್

ಶಾಸಕ ಹರೀಶ್‌ ಪೂಂಜ ರವರಿಂದ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ ವಿತರಣೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.15: ಕೊಕ್ಕಡ ಹೋಬಳಿಯ ಕಂದಾಯ ಅದಾಲತ್‌, ಅರ್ಹ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ ವಿತರಣೆ ಹಾಗೂ ಪಿಂಚಣಿದಾರರಿಗೆ ಮಂಜೂರಾತಿ ಪತ್ರ ಕಾರ್ಯಕ್ರಮವು ಇಂದು ಬೆಳ್ತಂಗಡಿ ಮಿನಿ ವಿಧಾನ ಸೌಧ ಸಭಾಂಗಣದಲ್ಲಿ ನಡೆಯಿತು.     ಶಾಸಕ ಹರೀಶ್‌ ಪೂಂಜ ಅವರು ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ, ಪಿಂಚಣಿದಾರರ ಮಂಜೂರಾತಿ ಪತ್ರವನ್ನು ವಿತರಿಸಿ, ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ಕೊರಗಪ್ಪ ನಾಯ್ಕ, ತಾ.ಪಂ.ಅಧ್ಯಕ್ಷೆ ದಿವ್ಯಜ್ಯೋತಿ, ತಹಶಿಲ್ದಾರ್‌ ಮಹೇಶ್‌ ಜೆ, ತಾ.ಪಂ. ಸದಸ್ಯ

ಶಾಸಕ ಹರೀಶ್‌ ಪೂಂಜ ರವರಿಂದ ಫಲಾನುಭವಿಗಳಿಗೆ 94ಸಿ ಹಕ್ಕು ಪತ್ರ ವಿತರಣೆ Read More »

ಕರಾವಳಿ, ಕರ್ನಾಟಕ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವೆಗಳು ಆರಂಭ ➤ ಕ್ಷೇತ್ರಕ್ಕೆ ಹರಿದು ಬಂತು ಭಕ್ತ ಸಾಗರ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ, ಸೆ. 15. ಐದು ತಿಂಗಳ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೋಮವಾರ ಸೇವೆಗಳು ಆರಂಭಗೊಂಡಿದ್ದು, ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದುಬಂತು. ಕೊವೀಡ್ 19 ಮಾರ್ಗ ಸೂಚಿಗೆ ಅನುಗುಣವಾಗಿ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಸೇರಿದಂತೆ ಇತರ ಸೇವೆಗಳನ್ನು ನಡೆಸಲು ಅವಕಾಶ ನೀಡಲಾಗಿದೆ.   ಭಕ್ತರು ದೈಹಿಕ ಅಂತರದೊಂದಿಗೆ ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆದರು. ರಾತ್ರಿ 8 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕ್ಷೇತ್ರದ ಪ್ರಮುಖ ಸೇವೆ ಸರ್ಪಸಂಸ್ಕಾರವನ್ನು

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವೆಗಳು ಆರಂಭ ➤ ಕ್ಷೇತ್ರಕ್ಕೆ ಹರಿದು ಬಂತು ಭಕ್ತ ಸಾಗರ Read More »

ಕರಾವಳಿ, ಕರ್ನಾಟಕ

ಅನೈತಿಕ ಸಂಬಂಧ ಆರೋಪ ➤ ಪತಿ ವಿರುದ್ಧ ಪತ್ನಿಯಿಂದಲೇ ದೂರು..!!

(ನ್ಯೂಸ್ ಕಡಬ) newskadaba.com ಮುಲ್ಕಿ, ಸೆ. 15. ಸರಕಾರಿ ಹಾಸ್ಟೇಲ್ ನಲ್ಲಿ ಅಡುಗೆ ಕೆಲಸದಲ್ಲಿರುವವನ ಅಕ್ರಮ ಸಂಬಂಧದ ಬಗ್ಗೆ ಮತ್ತು ಸರಕಾರಿ ಸ್ವತ್ತುಗಳನೇ ಮಾರಾಟಕ್ಕೆ ಸಂಬಂಧಿಸಿದಂತೆ ಪಡು ಪಣಂಬೂರು ಗ್ರಾಮದ ನಿವಾಸಿ ಆತನ ಪತ್ನಿಯೇ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.   ಮುಲ್ಕಿಯಲ್ಲಿರುವ ಸರ್ಕಾರಿ ಹಾಸ್ಟೆಲ್ನಲ್ಲಿ ನೌಕರನಾಗಿರುವ ಈತ ಸರ್ಕಾರಿ ಹಾಸ್ಟೆಲ್ ಮಕ್ಕಳಿಗೆ ನೀಡಿರುವ ಹೊದಿಕೆಗಳನ್ನು ಕದ್ದೊಯ್ದು ಅಕ್ರಮ ಸಂಬಂಧ ಹೊಂದಿರುವ ಮಹಿಳೆಗೆ ನೀಡುತ್ತಿದ್ದ. ಕೆಲವನ್ನು ಮಾರಾಟ ಮಾಡಿದ್ದು ಮನೆಗೂ ತಂದಿದ್ದಾನೆ. ಇದರ ಜೊತೆಗೆ ತನಗೆ

ಅನೈತಿಕ ಸಂಬಂಧ ಆರೋಪ ➤ ಪತಿ ವಿರುದ್ಧ ಪತ್ನಿಯಿಂದಲೇ ದೂರು..!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ಮಾನಸಿಕ ಅಸ್ವಸ್ಥನಿಗೆ ಕಾರು ಢಿಕ್ಕಿ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 15. ಮಾನಸಿಕ ಅಸ್ವಸ್ಥರೋರ್ವರಿಗೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದು ಪರಾರಿಯಾದ ಘಟನೆ ನರಿಮೊಗರು ಎಂಬಲ್ಲಿ ನಡೆದಿದೆ. ಪುತ್ತೂರು ಕಡೆಯಿಂದ ಕಾಣಿಯೂರು ಕಡೆಗೆ ತೆರಳುತ್ತಿದ್ದ ಕಾರೊಂದು ನರಿಮೊಗರು ಸಮೀಪ ರಸ್ತೆ ಬದಿಯಲ್ಲಿ ನಡೆಯುತ್ತಿದ್ದ ಮಾನಸಿಕ ಅಸ್ವಸ್ಥರೋರ್ವರಿಗೆ ಢಿಕ್ಕಿ ಹೊಡೆದಿದ್ದು, ಈ ರಭಸಕ್ಕೆ ರಸ್ತೆಗೆಸೆಯಲ್ಪಟ್ಟು ಇವರ ತಲೆಗೆ ಹಾಗೂ ದೇಹದ ಇತರ ಭಾಗಗಳಿಗೆ ಗಾಯಗಳಾಗಿವೆ ಎನ್ನಲಾಗಿದೆ. ಈ ವ್ಯಕ್ತಿಯು ಹಲವಾರು ವರ್ಷಗಳಿಂದ ನರಿಮೊಗರು ಭಾಗದಲ್ಲಿ ತಿರುಗಾಡುತ್ತಿದ್ದು, ಯಾರಿಗೂ ತೊಂದರೆ ನೀಡದೇ ತನ್ನ ಪಾಡಿಗೆ

ಪುತ್ತೂರು: ಮಾನಸಿಕ ಅಸ್ವಸ್ಥನಿಗೆ ಕಾರು ಢಿಕ್ಕಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಶ್ರೀ ಕ್ಷೇತ್ರ ಪಣೋಲಿಬೈಲು ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ರಶ್ಮಿ ಎಸ್. ಆರ್ ನೇಮಕ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ.15: ತುಳುನಾಡಿನ ಪ್ರಸಿದ್ಧ ಐತಿಹಾಸಿಕ ಹಿನ್ನೆಲೆಯುಳ್ಳ ಕಾರಣಿಕದ ಶ್ರೀ ಕ್ಷೇತ್ರ ಪಣೋಲಿಬೈಲು ಕಲ್ಲುರ್ಟಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರನ್ನು ನೇಮಕ ಮಾಡಲಾಗಿದೆ.     ಬಂಟ್ವಾಳ ವ್ಯಾಪ್ತಿಯಲ್ಲಿ ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರು ಪಡೆದಿದ್ದ ರಶ್ಮಿ ಎಸ್. ಆರ್ ರವರ ಸಾಧನೆ ಅಮೋಘ.  ಜನರ ಮೆಚ್ಚುಗೆಗೆ ಪಾತ್ರವಾಗಿರುವ ತಹಶೀಲ್ದಾರ್ ರಶ್ಮಿ ಎಸ್. ಆರ್ ಅವರನ್ನು ಧಾರ್ಮಿಕ ದತ್ತಿ ಇಲಾಖೆ ನೇಮಕ ಮಾಡಿ ಆದೇಶ ನೀಡಿದೆ.

ಶ್ರೀ ಕ್ಷೇತ್ರ ಪಣೋಲಿಬೈಲು ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ರಶ್ಮಿ ಎಸ್. ಆರ್ ನೇಮಕ Read More »

ಕರಾವಳಿ, ಕರ್ನಾಟಕ

ಸ್ವಿಫ್ಟ್ ಕಾರು -​​ಲಾರಿ ನಡುವೆ ಭೀಕರ ಅಪಘಾತ ➤ ಮೂವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಸೆ. 15. ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾಗಿರುವ ದುರ್ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಕಾರು ಮತ್ತು ಲಾರಿ ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳುತ್ತಿದ್ದವು.     ತಾಲೂಕಿನ ದೊಡ್ಡಪೈಲಗುರ್ಕಿಯ ರಸ್ತೆ ಹುಬ್ಬಿನಲ್ಲಿ ಈ ಆಕ್ಸಿಡೆಂಟ್ ನಡೆದಿದೆ. ಡಿಕ್ಕಿಯ ರಭಸಕ್ಕೆ ತಾಯಿ ಹಾಗೂ ಇಬ್ಬರು ಗಂಡು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಕಾರಿನಲ್ಲಿದ್ದ ಮತ್ತೋರ್ವ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ..  

ಸ್ವಿಫ್ಟ್ ಕಾರು -​​ಲಾರಿ ನಡುವೆ ಭೀಕರ ಅಪಘಾತ ➤ ಮೂವರು ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಡಿ.ಕೆ. ಶಿವಕುಮಾರ್ ಪುತ್ರಿಯ ಮದುವೆಗೆ ಡೇಟ್ ಫಿಕ್ಸ್

 (ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 15.  ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ದಿವಂಗತ ಸಿದ್ಧಾರ್ಥ್ ಹೆಗಡೆ ಪುತ್ರ ಅಮರ್ತ್ಯ ಹೆಗಡೆ ಮದುವೆಗೆ ಡೇಟ್ ಫಿಕ್ಸ್ ಆಗಿದ್ದು, ಫೆ. 24, 2021 ರಂದು ಮದುವೆ ನಡೆಸಲು ಎರಡೂ ಕುಟುಂಬಗಳು ನಿರ್ಧರಿಸಿವೆ ಎಂದು ತಿಳಿದುಬಂದಿದೆ. ಕಳೆದ ಏಪ್ರಿಲ್ 15 ರಂದು ಡಿ.ಕೆ.ಶಿವಕುಮಾರ್ ಅವರ ಮನೆಯಲ್ಲಿ ಸರಳ ಕಾರ್ಯಕ್ರಮದಲ್ಲಿ ಐಶ್ವರ್ಯಾ ಮತ್ತು ಅಮರ್ತ್ಯ ಉಂಗುರ ಬದಲಾಯಿಸಿಕೊಂಡಿದ್ದರು. ನವೆಂಬರ್ ನಲ್ಲಿ ಇಬ್ಬರ ನಿಶ್ಚಿತಾರ್ಥ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಪುತ್ರಿಯ ಮದುವೆಗೆ ಡೇಟ್ ಫಿಕ್ಸ್ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್
Scroll to Top