ನ್ಯೂಸ್ ಕಡಬ

ಪುಣಚದಲ್ಲಿ ರಸ್ತೆ ಅತಿಕ್ರಮಣ ಪ್ರಕರಣ ➤ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಪುಣಚ, ಅ. 05. ಪುಣಚ ಗ್ರಾಮ ಪಂಚಾಯತಿ ಸುಪರ್ದಿಯಲ್ಲಿರುವ ಪದವು ಕೊಪ್ಪಳ ಸಾರ್ವಜನಿಕ ರಸ್ತೆಯನ್ನು ಜಯಂತಿ ಹಾಗೂ ಬಬಿತ ಎಂಬುವರು ಅತಿಕ್ರಮಿಸಿ ಬಲವಂತವಾಗಿ ಬೇಲಿ ನಿರ್ಮಿಸಿ ರಸ್ತೆಯನ್ನು ಮುಚ್ಚಿ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಿರುವುದರ ವಿರುದ್ಧ ದ. ಜಿಲ್ಲಾ ದಲಿತ್ ಸೇವಾ ಸಮಿತಿಯ ನೇತೃತ್ವದಲ್ಲಿ ಇಂದು (ಅ.05) ಪುನಾಚ ಗ್ರಾಮ ಪಂಚಾಯತಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಕೂಡಲೇ ರಸ್ತೆ ಸರ್ವೇ ನಡೆಸಿ ಸಮಸ್ಯೆ ಇತ್ಯಾರ್ಥಗೊಳಿಸಬೇಕು . ತಪ್ಪಿದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ದಲಿತ್ ಸೇವಾ […]

ಪುಣಚದಲ್ಲಿ ರಸ್ತೆ ಅತಿಕ್ರಮಣ ಪ್ರಕರಣ ➤ ದ.ಕ ಜಿಲ್ಲಾ ದಲಿತ್ ಸೇವಾ ಸಮಿತಿ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಬಿ.ಸಿ ರೋಡಿನಲ್ಲಿ ಎಬಿವಿಪಿಯಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬಿ.ಸಿ ರೋಡು, ಅ. 05.ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳದ ವತಿಯಿಂದ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದ ಮನಿಷಾ ವಾಲ್ಮೀಕಿ ಎಂಬ ಯುವತಿಯ ಅತ್ಯಾಚಾರ ಪ್ರಕರಣ ವನ್ನು ಖಂಡಿಸಿ ಬಿ.ಸಿ ರೋಡಿನ ಮಿನಿ ವಿಧಾನಸೌಧದ ಮುಂಬಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.     ಪ್ರತಿಭಟನೆಯನೆಯನ್ನು ಉದ್ದೇಶಿಸಿ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ನಿವೃತ್ತರಾಗಿರು ಪ್ರೊ. ನಾರಾಯಣ ಭಂಡಾರಿ ಮಾತನಾಡಿ”ಸಮಾಜದ ಯುವ ಜನರು ಸಂಸ್ಕಾರವಂತ ಶಿಕ್ಷಣ ಪಡೆದಾಗ ಮಾತ್ರ ಇಂತಹ ಪ್ರಕರಣಗಳು ಕಡಿಮೆಯಾಗುತ್ತದೆ. ಹಾಗೂ

ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಬಿ.ಸಿ ರೋಡಿನಲ್ಲಿ ಎಬಿವಿಪಿಯಿಂದ ಪ್ರತಿಭಟನೆ Read More »

ಕರಾವಳಿ, ಕರ್ನಾಟಕ

ಆಂಧ್ರದ ಯುವತಿಗೆ ದೌರ್ಜನ್ಯ ಎಸಗಿದ ಪ್ರಕರಣ ➤ ಪುತ್ತೂರಿನ ಆರೋಪಿಯ ಅರೆಸ್ಟ್

(ನ್ಯೂಸ್ ಕಡಬ) newskadaba.com ಪುತ್ತೂರು, ಅ.05: ಇನ್ ಸ್ಟಾಗ್ರಾಮ್‌ ನಲ್ಲಿ ಪರಿಚಯವಾದ ಯುವತಿಗೆ ದೈಹಿಕ ಸಂಬಂಧ ಬೆಳೆಸಿದ್ದಲ್ಲದೇ, ಮಾದುವೆಯಾಗುವುದಾಗಿ ವಂಚಿಸಿ, ಆಕೆಯ ಭಾವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುವುದಾಗಿ ಬೆದರಿಕೆಯೊಡ್ಡಿದಲ್ಲದೆ ದಲಿತ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ನೊಂದ ಯುವತಿಯೊಬ್ಬರು ಆಂಧ್ರಪ್ರದೇಶದ ಪೊಲೀಸರಿಗೆ ನೀಡಿದ ದೂರಿನಂತೆ ಪುತ್ತೂರಿನ ರಾಜಕೀಯ ಪಕ್ಷದ ಮುಖಂಡರೊಬ್ಬರ ಪುತ್ರನನ್ನು ಬಂಧಿಸಿರುವ ಬಗ್ಗೆ ಶಂಕೆಯಾಗಿದೆ. ಬಂಧಿತ ಆರೋಪಿಯನ್ನು ಪುತ್ತೂರು ಚಿಕ್ಕಮುಡ್ನೂರು ಗ್ರಾಮದ ಮುದ್ದೋಡಿ ನಿವಾಸಿ ಅಬ್ದುಲ್‌ ಹಮೀದ್‌ ಸಾಲ್ಮರ ಎಂಬವರ ಪುತ್ರ ಮೊಹಮ್ಮದ್‌

ಆಂಧ್ರದ ಯುವತಿಗೆ ದೌರ್ಜನ್ಯ ಎಸಗಿದ ಪ್ರಕರಣ ➤ ಪುತ್ತೂರಿನ ಆರೋಪಿಯ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಗಾಂಜಾ ಮತ್ತಿನಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಯುವಕರ ತಂಡ ➤ ಮಾಡಿದ್ದೇನು ಗೊತ್ತೇ..?!!

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 05. ಗಾಂಜಾ ಮತ್ತಿನಲ್ಲಿ ಮನೆಗೆ ನುಗ್ಗಿದ ಯುವಕರ ತಂಡವೊಂದು ಮನೆ ಮಂದಿಗೆ ತಲವಾರು ತೋರಿಸಿ ಬೆದರಿಸಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನ ಪಚ್ಚನಾಡಿನಲ್ಲಿ ನಡೆದಿದೆ.   ಪಚ್ಚನಾಡಿನಲ್ಲಿ ತಡರಾತ್ರಿ ಘಟನೆ ನಡೆದಿದ್ದು ಫ್ರಾನ್ಸಿಸ್ ಎಂಬುವರ ಮನೆಗೆ ನುಗ್ಗಿ ದಾಂದಲೇ ನಡೆಸಿದೆ. ನಿತಿನ್ ಮತ್ತು ಮಹೇಶ್ ಎಂಬುವರ ತಂಡ ತಲವಾರು ಹಿಡಿದು ನಡೆಸಿರುವ ಘಟನೆ, ಸ್ಥಳೀಯರ ಮೊಬೈಲ್ ನಲ್ಲಿ ಸರೆಯಾಗಿದೆ. ಇನ್ನು ಈ ಬಗ್ಗೆ ಕಂಕನಾಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು

ಗಾಂಜಾ ಮತ್ತಿನಲ್ಲಿ ತಡರಾತ್ರಿ ಮನೆಗೆ ನುಗ್ಗಿದ ಯುವಕರ ತಂಡ ➤ ಮಾಡಿದ್ದೇನು ಗೊತ್ತೇ..?!! Read More »

ಕರಾವಳಿ, ಕ್ರೈಮ್ ನ್ಯೂಸ್

ಎರಡು ಕಾರುಗಳ ನಡುವೆ ಅಪಘಾತ ➤ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

(ನ್ಯೂಸ್ ಕಡಬ) newskadaba.com ವಿಟ್ಲ, ಅ. 05: ವಿಟ್ಲದಲ್ಲಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಎಲ್ಲಾ ಪ್ರಯಾಣಿಕರು ಪವಾಡಸದೃಶ್ಯ ರೀತಿಯಲ್ಲಿ ಯಾವುದೇ ಅಪಾಯಗಳಿಲ್ಲದೆ ಪಾರಾಗಿದ್ದಾರೆ. ಘಟನೆ ವಿಟ್ಲದ ಕಾಸರಗೋಡು ರಸ್ತೆಯ ಕಾಶಿಮಠದಲ್ಲಿ ನಡೆದಿದೆ. ಉಕ್ಕುಡ ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಕಾರಿಗೆ ಎದುರಿನಿಂದೆ ಬರುತ್ತಿದ್ದ ಕಾರು ಮುಖಾಮುಖಿಯಾಗಿ ಡಿಕ್ಕಿ ಹೊಡೆದುಕೊಂಡಿದ್ದವೆ. ಪರಿಣಾಮ ಅಪಘಾತದ ತೀವ್ರತೆಗೆ ಸೊಂಧು ಕಾರು ಪಕ್ಕದಲ್ಲಿದ್ದ ಚರಂಡಿಗೆ ಉರುಳಿ ಬಿದ್ದಿದೆ. ಮತ್ತೊಂದು ಕಾರು ರಸ್ತೆಯಲ್ಲಿಯೇ ಅಡ್ಡವಾಗಿ ಬಿದ್ದಿದ್ದೆ. ಕಾರುಗಳ ಮುಂಭಾಗವು ಸಂಪೂರ್ಣವಾಗಿ

ಎರಡು ಕಾರುಗಳ ನಡುವೆ ಅಪಘಾತ ➤ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು Read More »

ಕರಾವಳಿ, ಕರ್ನಾಟಕ

ಮಂಗಳೂರು: ಅತ್ಯಾಧುನಿಕ ಸಿಗ್ನಲ್ ಅಳವಡಿಕೆ ಕಾಮಗಾರಿ ಪೂರ್ಣ

(ನ್ಯೂಸ್ ಕಡಬ) newskadaba.com ಮಂಗಳೂರು, ಅ.05: ಮಂಗಳೂರು – ಹಾಸನ ರೈಲು ಮಾರ್ಗದ ಯಡಕುಮೇರಿ ಹಾಗು ಕಡಗರವಳ್ಳಿ ನಿಲ್ದಾಣ ಮಧ್ಯೆ ಕೈಗೊಂಡಿರುವ ಅತ್ಯಾಧುನಿಕ ವ್ಯವಸ್ಥೆಗಳಿರುವ ಸಿಗ್ನಲ್‌ ವ್ಯವಸ್ಥೆ ಅಳವಡಿಕೆ ಕಾಮಗಾರಿಯು ಇದೀಗ ಪೂರ್ಣಗೊಂಡಿದೆ. ಸಿಗ್ನಲ್‌ ವ್ಯವಸ್ಥೆ ಉನ್ನತೀಕರಣದಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಸಾಮರ್ಥ್ಯ ಶೇ. 35ರಷ್ಟು ವೃದ್ಧಿಯಾಗಿದ್ದು, ಹೆಚ್ಚು ಪ್ರಯಾಣಿಕರ ಹಾಗೂ ಸರಕು ಸಾಗಾಟ ರೈಲುಗಳ ಸಂಚಾರ ಸಾಧ್ಯವಾಗಲಿದೆ.   ಇನ್ನು ಹಾಸನ-ಮಂಗಳೂರು ರೈಲ್ವೇ ಅಭಿವೃದ್ಧಿ ನಿಗಮವು 4.4 ಕೋ.ರೂ. ವೆಚ್ಚವನ್ನು ಭರಿಸಿದೆ. ಕಡಗರವಳ್ಳಿ ಹಾಗು

ಮಂಗಳೂರು: ಅತ್ಯಾಧುನಿಕ ಸಿಗ್ನಲ್ ಅಳವಡಿಕೆ ಕಾಮಗಾರಿ ಪೂರ್ಣ Read More »

ಕರಾವಳಿ, ಕರ್ನಾಟಕ

ಕಾವೇರಿ ತೀರ್ಥೋತ್ಭವ ವೀಕ್ಷಣೆಗೆ ಕೋವಿಡ್‌ ಪರೀಕ್ಷೆಯ ದೃಢೀಕರಣ ಪತ್ರ ಕಡ್ಡಾಯ ➤ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ

(ನ್ಯೂಸ್ ಕಡಬ) newskadaba.com ಮಡಿಕೇರಿ, ಅ.05: ಕಾವೇರಿ ನದಿಯ ಉಗಮ ಸ್ಥಾನವಾದ ಕೊಡಗಿನ ತಲಕಾವೇರಿಯಲ್ಲಿ ಅ. 17ರಂದು ಬೆಳಗ್ಗೆ 7.03ಕ್ಕೆ ಕಾವೇರಿ ತೀರ್ಥ ಉದ್ಭವವಾಗಲಿದೆ. ಆದರೆ, ಈ ಅದ್ಭುತ ಕ್ಷಣವನ್ನು ವೀಕ್ಷಿಸಲು ಆಗಮಿಸುವ ಹೊರ ರಾಜ್ಯ ಹಾಗು ಜಿಲ್ಲೆಯ ಭಕ್ತರು ಕೋವಿಡ್‌ ಪರೀಕ್ಷೆಯ ದೃಢೀಕರಣ ಪತ್ರವನ್ನು ಜೊತೆಗೆ ತರಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ತೀರ್ಥ ಉದ್ಭವದ ಸಂದರ್ಭ ಸಾಂಪ್ರದಾಯಿಕ ಆಚರಣೆಗಳಿಗೆ ಯಾವುದೇ ಅಡ್ಡಿ, ಆತಂಕಗಳಿರುವುದಿಲ್ಲ. ಆದರೆ, ಕೋವಿಡ್‌ ಮುಂಜಾಗ್ರತಾ ಕ್ರಮವಾಗಿ ಹೊರಗಿನಿಂದ ಬರುವ

ಕಾವೇರಿ ತೀರ್ಥೋತ್ಭವ ವೀಕ್ಷಣೆಗೆ ಕೋವಿಡ್‌ ಪರೀಕ್ಷೆಯ ದೃಢೀಕರಣ ಪತ್ರ ಕಡ್ಡಾಯ ➤ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ Read More »

ಕರಾವಳಿ, ಕರ್ನಾಟಕ

ಕಾರ್ಕಳ :ಮಹಿಳೆಯ ಚಿನ್ನದ ಸರ ಕಸಿದು ಕಳ್ಳರು ಎಸ್ಕೇಪ್

(ನ್ಯೂಸ್ ಕಡಬ) newskadaba.com ಕಾರ್ಕಳ, ಅ. 05.ಕಾರ್ಕಳದ ಎರ್ಲಪಾಡಿ ಬಳಿಯ ಬುಕ್ಕಿಗುಡ್ಡೆ ಎಂಬಲ್ಲಿ ಮಹಿಳೆಯೋರ್ವರ ಕುತ್ತಿಯಿಂದ ಕಳ್ಳರು ಚೈನ್ ಎಳೆದ ಘಟನೆ ಇಂದು ಬೆಳಗ್ಗೆ ನೆಡೆದಿದೆ. ಬುಕ್ಕಿಗುಡ್ಡೆ ಕಮಲಾ(75) ಎಂಬುವವರು ಶಿವನೆಟ್ಟು ಮಣ್ಣು ರಸ್ತೆ ಬಳಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭ ಇಬ್ಬರು ಕಳ್ಳರು ಕಮಲಾ ರವರ ಕುತ್ತಿಯಲ್ಲಿದ್ದ 2 ಪವನ್ ಚೈನ್ ಸರವನ್ನು ಎಳೆದುಕೊಂಡು ಪರಾರಿಯಾಗಿದ್ದಾರೆ. ಕಳ್ಳರ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.  

ಕಾರ್ಕಳ :ಮಹಿಳೆಯ ಚಿನ್ನದ ಸರ ಕಸಿದು ಕಳ್ಳರು ಎಸ್ಕೇಪ್ Read More »

ಕರಾವಳಿ, ಕ್ರೈಮ್ ನ್ಯೂಸ್

ಇನ್ನುಂದೆ ಮಾಸ್ಕ್‌ ಹಾಕದೆ ಸಿಕ್ಕಿಬಿದ್ದರೆ ಎಷ್ಟು ಮೊತ್ತದ ದಂಡ ಗೊತ್ತೇ..!!?

(ನ್ಯೂಸ್ ಕಡಬ) newskadaba.com ಮಂಗಳೂರು, ಅ.05: ಕೊರೋನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರಕಾರದಿಂದ ಕಟ್ಟು ನಿಟ್ಟಾಗಿ ಆದೇಶಗಳನ್ನು  ಹೊರಡಿಸಿ ದಕ್ಷಿಣ ಕನ್ನಡ ಜಿಲ್ಲಾಡಳಿತ ನಿರ್ಧರಿಸಿದ್ದು, ಕೊರೋನಾ ಮಾರ್ಗಸೂಚಿಯನ್ನು ಉಲ್ಲಂಘಿಸುವವರು ಇನ್ನು ಮುಂದೆ ಬಹಳ ಎಚ್ಚರವಾಗಿರಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಹಾಕದೆ ಸಿಕ್ಕಿಬಿದ್ದರೇ ಇಂದಿನಿಂದ, ಭಾರೀ ದಂಡ ಪಾವತಿಸಬೇಕಾಗುತ್ತದೆ. ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದ ಜನರಿಗೆ 1,000 ರೂ.ಗಳ ದಂಡ ಮತ್ತು ಇತರ ಸ್ಥಳಗಳಲ್ಲಿ ಮಾಸ್ಕ್‌ ಹಾಕದವರಿಗೆ 500 ರೂ. ವರೆಗೆ ದಂಡ ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇನ್ನುಂದೆ ಮಾಸ್ಕ್‌ ಹಾಕದೆ ಸಿಕ್ಕಿಬಿದ್ದರೆ ಎಷ್ಟು ಮೊತ್ತದ ದಂಡ ಗೊತ್ತೇ..!!? Read More »

ಕರಾವಳಿ

ಸುಬ್ರಹ್ಮಣ್ಯ :ಎಸ್ಕಾಂಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ. 05. ಸುಬ್ರಹ್ಮಣ್ಯದಲ್ಲಿ ಎಸ್ಕಾಂಗಳ ವತಿಯಿಂದ ಖಾಸಗೀಕರಣ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಇಂದು ಪ್ರತಿಭಟನೆ ನಡೆಸಿದ್ದಾರೆ.  ರಾಜ್ಯಾದಾದ್ಯಂತ ವಿದ್ಯುತ್ ವಿತರಣಾ ಕಂಪನಿಗಳ ಖಾಸಗೀಕರಣ ಮಡುವುದನ್ನು ವಿರೋಧಿಸಿ ಸುಬ್ರಹ್ಮಣ್ಯ ಸಬ್ ಸ್ಟೇಶನ್ ನ ವ್ಯಾಪ್ತಿಯ ನೌಕಕರು ಇಂಧು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗ್ಗೆ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲಾಯಿತು. ಬಳಿಕ ಎಲ್ಲರೂ ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಕರ್ನಾಟಕ ವಿದ್ಯುತ್ ಪ್ರಸಡರಣ ನಿಗಮ ನೌಕರರ ಸಂಘ ಮತ್ತು ಸಂಘಗಳ ಒಕ್ಕೋಟ ವತಿಯಿಂದ ಪ್ರತಿಭಟನೆ ಕೈಗೊಳ್ಳಲಾಗಿದೆ.

ಸುಬ್ರಹ್ಮಣ್ಯ :ಎಸ್ಕಾಂಗಳ ಖಾಸಗೀಕರಣ ವಿರೋಧಿಸಿ ಪ್ರತಿಭಟನೆ Read More »

ಕರಾವಳಿ
Scroll to Top