ನ್ಯೂಸ್ ಕಡಬ

ಉಸಿರಾಟ ಸಮಸ್ಯೆ: ಶಾಸಕ ಎಸ್.ಎ.ರಾಮದಾಸ್ ಆಸ್ಪತ್ರೆಗೆ ದಾಖಲು

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 19: ಉಸಿರಾಟದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಬಿಜೆಪಿ ಶಾಸಕ ಎಸ್‌.ಎ.ರಾಮದಾಸ್‌ ಅವರು ನಗರದ ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಂದು ಮುಂಜಾನೆ ಉಸಿರಾಟದಲ್ಲಿ ತೀವ್ರ ಸಮಸ್ಯೆ ಕಾಣಿಸಿಕೊಂಡು ಅಸ್ವಸ್ಥರಾಗಿದ್ದ ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯಕ್ಕೆ ಶಾಸಕ ರಾಮ್ ದಾಸ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.. ಕಳೆದ ಎರಡು ದಿನಗಳಿಂದ ಶಾಸಕ ರಾಮದಾಸ್ ದಸರಾ ಸಮಾರಂಭದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.  

ಉಸಿರಾಟ ಸಮಸ್ಯೆ: ಶಾಸಕ ಎಸ್.ಎ.ರಾಮದಾಸ್ ಆಸ್ಪತ್ರೆಗೆ ದಾಖಲು Read More »

ಕರ್ನಾಟಕ

ಪತ್ನಿಯ ರುಂಡ ಕತ್ತರಿಸಿ ಆಕೆಯ ಪ್ರಿಯಕರನ ಮನೆ ಮುಂದೆ ಇಟ್ಟ ಪತಿರಾಯ

(ನ್ಯೂಸ್ ಕಡಬ) newskadaba.com ತೆಲಂಗಾಣ ಅ. 19: ಪತ್ನಿಗೆ ಅನೈತಿಕ ಸಂಬಂಧ ಇದೆ ಎಂಬ ಸಂಶಯದ ಮೇಲೆ ಬೇಸತ್ತ ಪತಿಯೊಬ್ಬ ಆಕೆಯ ರುಂಡವನ್ನು ಕತ್ತರಿಸಿ ಅದನ್ನು ಪ್ರಿಯಕರನ ಮನೆ ಮುಂದೆ ತಂದಿಟ್ಟು ಹೋಗಿರುವ ಭೀಕರ ಘಟನೆ ತೆಲಂಗಾಣದಲ್ಲಿ ನಡೆದಿದೆ.   ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಅನಂತಸಾಗರ್ ಗ್ರಾಮದ ಜುರ್ರು ಸಾಹಿಲು ತನ್ನ ಪತ್ನಿ 35 ವರ್ಷದ ಅಂಶಮ್ಮ ಎಂಬಾಕೆಯ ರುಂಡವನ್ನು ಕತ್ತರಿಸಿದ್ದಾರೆ. ನಂತರ ಆ ರುಂಡವನ್ನು ಬೈಕ್ ನಲ್ಲಿ ಐದು ಕಿ.ಮೀ ದೂರದಲ್ಲಿರುವ ನಾರಾಯಣ್ ಖೇಡ್ ಗ್ರಾಮಕ್ಕೆ ತೆಗೆದುಕೊಂಡು

ಪತ್ನಿಯ ರುಂಡ ಕತ್ತರಿಸಿ ಆಕೆಯ ಪ್ರಿಯಕರನ ಮನೆ ಮುಂದೆ ಇಟ್ಟ ಪತಿರಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಸ ಹಾಕೋ ಕಿರಾತಕರಿಗೆ ಸ್ಪೆಷಲ್ ಬ್ಯಾನರ್ ರೆಡಿ ➤ ಬ್ಯಾನರ್ ನಲ್ಲಿ ಏನಿದೆ ಗೊತ್ತೇ.?!

(ನ್ಯೂಸ್ ಕಡಬ) newskadaba.com ಉಡುಪಿ ಅ. 19: ಪರಿಸರ ಸ್ವಚ್ಛತೆ ಬಗ್ಗೆ ಸರ್ಕಾರ ಎಷ್ಟೇ ಮುಂಜಾಗ್ರತೆ ಕ್ರಮಗಳನ್ನು ಜಾರಿಗೆ ತಂದರೂ ಕೆಲವೊಂದು ಪ್ರದೇಶದ ಜನರು ಇದನ್ನ ಕ್ಯಾರೆ ಅನ್ನುತ್ತಿಲ್ಲ. ಅವಿದ್ಯಾವಂತರಿಗಿಂತ ವಿದ್ಯಾವಂತರೇ ಕೀಳಾಗಿ ವರ್ತಿಸುತ್ತಾರೆ.ಅದರಂತೆ ,ಉಡುಪಿಯ ಹಿರಿಯಡ್ಕದ ಪ್ರದೇಶವೊಂದರಲ್ಲಿ ಜನ ಸಿಕ್ಕಾಪಟ್ಟೆ ಕಸ ಎಸೆದು ಹೋಗುತ್ತಿದ್ದರು. ಇದರಿಂದ ಇಡೀ ಪರಿಸರ ಗಬ್ಬು ನಾರುತ್ತಿತ್ತು, ಮಾತ್ರವಲ್ಲದೆ ಸಾಂಕ್ರಾಮಿಕ ರೋಗದ ಭೀತಿಯೂ ಶುರುವಾಗಿತ್ತು.ಹೀಗಾಗಿ ಆತ್ರಾಡಿ ಗ್ರಾಮಸ್ಥರೆಲ್ಲಾ ಸೇರಿ ‘ ಇಲ್ಲಿ ದಯವಿಟ್ಟು ಕಸ ಹಾಕಬೇಡಿ ‘ ಎಂದು ಕೋರಿಕೆಯ ಬ್ಯಾನರ್ ಅಳವಡಿಸಿದ್ದರು.

ಕಸ ಹಾಕೋ ಕಿರಾತಕರಿಗೆ ಸ್ಪೆಷಲ್ ಬ್ಯಾನರ್ ರೆಡಿ ➤ ಬ್ಯಾನರ್ ನಲ್ಲಿ ಏನಿದೆ ಗೊತ್ತೇ.?! Read More »

ಕರಾವಳಿ, ಕರ್ನಾಟಕ

ಕಾಪು ಬೀಚ್ ನಲ್ಲಿ ಬೆಂಗಳೂರಿನಿಂದ ಬಂದ ಯುವಕರು ನೀರುಪಾಲು

(ನ್ಯೂಸ್ ಕಡಬ) newskadaba.com ಕಾಪು ಅ. 19: ಕಾಪು ಬೀಚ್ ನಲ್ಲಿ ಬೆಂಗಳೂರಿನಿಂದ ಬಂದ ಐವರು ಯುವಕರ ತಂಡದಲ್ಲಿ ಇಬ್ಬರು ಯುವಕರು ನಿರುಪಾಲಾದ ಘಟನೆ ರವಿವಾರ ಸಂಜೆ ನಡೆದಿದೆ. ಕಾರ್ತಿಕ್ ಮತ್ತು ರೂಪೇಶ್ ಎಂಬವರು ನೀರು ಪಾಲಾಗಿದ್ದು, ರೂಪೇಶ್ ಎಂಬಾತನ ಶವ ಮೇಲಕ್ಕೆತ್ತಲಾಗಿದೆ. ಬೆಂಗಳೂರಿನಿಂದ ಬಂದ 5 ಮಂದಿ ಯುವಕರ ತಂಡ ರವಿವಾರ ಸಂಜೆ ಕಾಪು ಬೀಚ್ ನಲ್ಲಿ ಆಟವಾಡುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ‌. ನೀರು ಪಾಲಾಗುತ್ತಿದ್ದ ರೂಪೇಶ್ ನನ್ನು ಬೀಚ್ ನಿರ್ವಾಹಕ ಪ್ರಶಾಂತ್ ಕರ್ಕೇರ, ವಿನೀತ್,

ಕಾಪು ಬೀಚ್ ನಲ್ಲಿ ಬೆಂಗಳೂರಿನಿಂದ ಬಂದ ಯುವಕರು ನೀರುಪಾಲು Read More »

ಕರಾವಳಿ, ಕರ್ನಾಟಕ

ಬಂಟ್ವಾಳ: ರಸ್ತೆ ಕಾಂಕ್ರೀಟಿಕರಣಕ್ಕೆ ಮಾಜಿ ಸಚಿವ ರಮಾನಾಥ ರೈ ಗಳಿಂದ ಶಿಲಾನ್ಯಾಸ

(ನ್ಯೂಸ್ ಕಡಬ) newskadaba.com ಬಂಟ್ವಾಳ , ಅ.18: ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮದ್ವ ದಿಂದ ಮಧ್ವ ಗುತ್ತು ಎಂಬಲ್ಲಿಗೆ ರಸ್ತೆ ಕಾಂಕ್ರೀಟಿಕರಣಕ್ಕೆ 1 ಲಕ್ಷ ವೆಚ್ಚದ ರಸ್ತೆಯ ಕಾಮಗಾರಿಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ ರಮನಾಥ ರೈ ಯವರು ಇಂದು ನೆರೆವೇರಿಸಿದರು.     ತಾಲೂಕು ಪಂಚಾಯತ್ ಅನುದಾನದಿಂದ ತಾಲೂಕ್ ಪಂಚಾಯತ್ ಸದಸ್ಯರಾದ ಶ್ರೀಮತಿ ಧನಲಕ್ಷ್ಮಿ ಬಂಗೇರ ರವರ ಅನುದಾನದಿಂದ 1 ಲಕ್ಷ ವೆಚ್ಚದ ರಸ್ತೆಯ ಕಾಮಗಾರಿಯ ಶಿಲಾನ್ಯಾಸವನ್ನು ನೆರೆವೇರಿಸಿದರು.

ಬಂಟ್ವಾಳ: ರಸ್ತೆ ಕಾಂಕ್ರೀಟಿಕರಣಕ್ಕೆ ಮಾಜಿ ಸಚಿವ ರಮಾನಾಥ ರೈ ಗಳಿಂದ ಶಿಲಾನ್ಯಾಸ Read More »

ಕರಾವಳಿ

ಶಾರ್ಟ್​ಸರ್ಕ್ಯೂಟ್​ ನಿಂದ ಕಾರು ಭಸ್ಮ ➤ ಅದೃಷ್ಟವಶಾತ್​ ಮೂವರು ಪಾರು

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 18: ಶರ್ಟ್​ಸರ್ಕ್ಯೂಟ್​ನಿಂದ ಕಾರು ಸಂಪೂರ್ಣ ಭಸ್ಮವಾಗಿದ್ದು, ಅದರಲ್ಲಿದ್ದ ಮೂವರು ಪಾರಾದ ಘಟನೆ ಬೆಂಗಳೂರಿನ ಮೈಸೂರು ರೋಡ್​ ಪಂಥರಪಾಳ್ಯದಲ್ಲಿ ನಡೆದಿದೆ.   ಚಾಲಕ, ಆತನ ಪತ್ನಿ ಮತ್ತು ತಾಯಿ ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದರು, ಈ ವೇಳೆ ಅಕಸ್ಮಾತಾಗಿ ಶಾರ್ಟ್​ ಸರ್ಕ್ಯೂಟ್​ ಉಂಟಾಗಿದೆ. ಅದನ್ನು ಕಂಡ ಮೂವರು ತಕ್ಷಣ ಕಾರಿನಿಂದ ಇಳಿದು ಜೀವ ಉಳಿಸಿಕೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರಿನ ಬೆಂಕಿನಂದಿಸಿದ್ದಾರೆ, ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಈ ಕುರಿತು ಬ್ಯಾಟರಾಯನಪುರ ಪೊಲೀಸ್​

ಶಾರ್ಟ್​ಸರ್ಕ್ಯೂಟ್​ ನಿಂದ ಕಾರು ಭಸ್ಮ ➤ ಅದೃಷ್ಟವಶಾತ್​ ಮೂವರು ಪಾರು Read More »

ಕರ್ನಾಟಕ

ಮೈಸೂರು: ಅಭಿಮನ್ಯುಗೆ ಮರದ ಅಂಬಾರಿ ತಾಲೀಮು

(ನ್ಯೂಸ್ ಕಡಬ) newskadaba.com ಮೈಸೂರು, ಅ.18: ವಿಶೇಷ ಆಕರ್ಷಣೆಯಾದ ಮೈಸೂರು ದಸರಾ  ಜಂಬೂ ಸವಾರಿಯ ದಿನ ಚಿನ್ನದ ಅಂಬಾರಿಯಲ್ಲಿ ನಾಡ ದೇವತೆ ಚಾಮುಂಡೇಶ್ವರಿ ದೇವಿಯ ಮೆರವಣಿಗೆ  ನಡೆಯಲಿದೆ. ಈ ಹಿನ್ನೆಲಯಲ್ಲಿ ಇಂದು  ಕ್ಯಾಪ್ಟನ್ ಅಭಿಮನ್ಯುಗೆ ಅಂಬಾರಿ ತಾಲೀಮು ನಡೆಸಲಾಯಿತು.     ಅಭಿಮನ್ಯು ಆನೆ 750 ಕೆ. ಜಿ. ತೂಕದ ಚಿನ್ನದ ಅಂಬಾರಿ ಹೊರಲಿರುವ ಹಿನ್ನೆಲೆಯಲ್ಲಿ ಮರದ ಅಂಬಾರಿ ಕಟ್ಟಿ, ಅಂಬಾರಿಯ ಜೊತೆಗೆ ಮರಳಿನ ಮೂಟೆಗಳನ್ನು ಹೊರೆಸಿ ಅರಮನೆ ಆವರಣದಲ್ಲಿ ತಾಲೀಮು ನಡೆಸಲಾಯಿತು ಎಂದು ಆನೆ ವೈದ್ಯ

ಮೈಸೂರು: ಅಭಿಮನ್ಯುಗೆ ಮರದ ಅಂಬಾರಿ ತಾಲೀಮು Read More »

ಕರ್ನಾಟಕ

ಪುತ್ತೂರು: ವಾಟ್ಸಾಪ್‌ ಗ್ರೂಪ್‌ ಮೂಲಕ ಕ್ರಿಕೆಟ್ ದಂಧೆ ➤ ಆರೋಪಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.18: ದೇಶದಲ್ಲಿ ಇದೀಗ IPL‌ ಹವಾ ಜೋರಾಗಿಯೇ ನಡೆಯುತ್ತಿದೆ. ಇದೇ ವೇಳೆ ಬೆಟ್ಟಿಂಗ್‌ ದಂಧೆಯೂ ಕೂಡಾ ವ್ಯಾಪಕವಾಗಿ ನಡೆಯುತ್ತಿದೆ.‌ ಇದೀಗ ಕ್ರಿಕೆಟ್ ದಂಧೆಯಲ್ಲಿ ನಿರತರಾಗಿದ್ದ ವ್ಯಕ್ತಿಯನ್ನು ಪೊಲೀಸರು ವಶಪಡಿಸಿಕೊಂಡಿರುವ ಮಾಹಿತಿ ಕಬಕದಲ್ಲಿ ಲಭ್ಯವಾಗಿದೆ.     ಈ ರೀತಿಯಾಗಿ ವಿಷಯ ಕೇಳಿ ಬರುತ್ತಿದ್ದ ಬೆನ್ನಲ್ಲೇ ವಾಟ್ಸಾಪ್‌ ಗ್ರೂಪ್‌ ಮೂಲಕ ಕ್ರಿಕೆಟ್ ದಂಧೆ ನಡೆಯುತ್ತಿದ್ದ ವ್ಯಕ್ತಿಯಯೊಬ್ಬರನ್ನು ಪೊಲೀಸರು ವಿಚಾರಣೆ ನಡೆಸಿ ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.  

ಪುತ್ತೂರು: ವಾಟ್ಸಾಪ್‌ ಗ್ರೂಪ್‌ ಮೂಲಕ ಕ್ರಿಕೆಟ್ ದಂಧೆ ➤ ಆರೋಪಿ ಪೊಲೀಸರ ವಶಕ್ಕೆ Read More »

ಕರಾವಳಿ

ಸುಬ್ರಹ್ಮಣ್ಯ: ನೇಣು ಬಿಗಿದು ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಅ.18: ಸುಬ್ರಹ್ಮಣ್ಯ ಉತ್ತರಾದಿ ಮಠದ ಬಳಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಸುಬ್ರಹ್ಮಣ್ಯದಲ್ಲಿ ನಡೆದಿದೆ. ಮೃತ ಯುವಕನನ್ನು ಬೆಂಗಳೂರಿನ ರಂಗನಾಥ್ (35ವ.)‌ ಎಂದು ಗುರುತಿಸಲಾಗಿದೆ.     ಈತ ವಾರದ ಹಿಂದೆ ಮನೆ ಬಿಟ್ಟು ಬಂದಿರುವುದಾಗಿ ತಿಳಿದು ಬಂದಿದೆ. ಮೃತ ದೇಹವನ್ನು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯಲಾಗಿದೆ. ಈತನ ಆತ್ಮಹತ್ಯೆಗೆ ಕಾರಣ ಏನು ಎಂಬುದಾಗಿ ತಿಳಿದು ಬಂದಿಲ್ಲ. ಸುಬ್ರಹ್ಮಣ್ಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ತನಿಖೆ

ಸುಬ್ರಹ್ಮಣ್ಯ: ನೇಣು ಬಿಗಿದು ಯುವಕ ಆತ್ಮಹತ್ಯೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬೆಂಗಳೂರು: ಸಿಕ್ಕಸಿಕ್ಕವರಿಗೆ ಚಾಕುವಿನಿಂದ ಇರಿತ ➤ ಅಮಾಯಾಕ ವ್ಯಕ್ತಿ ಬಲಿ.!

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.18: ಕೂಲಿ ಕಾರ್ಮಿಕನೊಬ್ಬ ಮಟನ್ ಸ್ಟಾಲ್‍ನಿಂದ ಚಾಕುವನ್ನು ತೆಗೆದುಕೊಂಡು ದಾರಿಯಲ್ಲಿ ಸಿಕ್ಕಸಿಕ್ಕವರಿಗೆ ಇರಿದಿದ್ದರಿಂದ ಒಬ್ಬ ಮೃತಪಟ್ಟು, ಐವರು ಗಾಯಗೊಂಡಿರುವ ಘಟನೆ ಕಾಟನ್‍ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆರೋಪಿ ಎಂ.ಗಣೇಶ್(35) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.     ಬಂಧಿತ ಆರೋಪಿ ಕಾಟನ್‍ಪೇಟೆ ಮಂಡಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇಂದು ಆಂಜನಪ್ಪಗಾರ್ಡ್‍ನ ನಿವಾಸಿ ಎಂ.ಗಣೇಶ್ ಬಾಳೆಕಾಯಿ ಮಂಡಿ ಹತ್ತಿರ ಮಟನ್ ತರಲು ಹೋಗಿದ್ದ. ಆ ಸಂದರ್ಭದಲ್ಲಿ ಮಟನ್ ಶಾಪ್‍ನಲ್ಲಿದ್ದ ಚಾಕುವನ್ನು ತೆಗೆದುಕೊಂಡು

ಬೆಂಗಳೂರು: ಸಿಕ್ಕಸಿಕ್ಕವರಿಗೆ ಚಾಕುವಿನಿಂದ ಇರಿತ ➤ ಅಮಾಯಾಕ ವ್ಯಕ್ತಿ ಬಲಿ.! Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top