ನ್ಯೂಸ್ ಕಡಬ

ಕಡಬ: ನೂತನ ತಾ.ಪಂ. ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲು ಉಸ್ತುವಾರಿ ಸಚಿವರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ನ.12: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕು ಪಂಚಾಯತ್ ಗೆ ಅನುದಾನ ಬಿಡುಗಡೆಗೊಳಿಸುವಂತೆ ತಾ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ನ.10 ರಂದು ಕಡಬ ತಾ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.     ಹೊಸದಾಗಿ ರಚನೆಗೊಂಡಿರುವ ಕಡಬ ತಾಲೂಕು ಪಂಚಾಯತ್ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅನುದಾನದ ಕೊರತೆ ಇದ್ದು, ಕೂಡಲೇ 2 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಬೇಕೆಂದು ತಾ.ಪಂ. ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರು ನ.10 ರಂದು ಮಂಗಳೂರಿಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ […]

ಕಡಬ: ನೂತನ ತಾ.ಪಂ. ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲು ಉಸ್ತುವಾರಿ ಸಚಿವರಿಗೆ ಮನವಿ Read More »

ಕರಾವಳಿ

ಉಳ್ಳಾಲ :ಅಕ್ರಮ ಜಾನುವಾರು ಸಾಗಾಟ ➤ ವಾಹನ ಚಾಲಕ ಖಾಕಿ ವಶಕ್ಕೆ

(ನ್ಯೂಸ್ ಕಡಬ) newskadaba.com ಉಳ್ಳಾಲ ನ. 12: ಉಳ್ಳಾಲದಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡು ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಮಂಗಳೂರಿನಿಂದ ಕೇರಳದ ಕಡೆಗೆ ಈಚರ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಐದು ಹೋರಿ ಹಾಗೂ ಒಂದು ಹಸುವನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ನೋಂದವಣಿಯ ವಾಹನವಾಗಿದ್ದು ಚಾಲಕನು ವಾಹನ ಮತ್ತು ಜಾನುವಾರುಗಳನ್ನು ಹುಬ್ಬಳ್ಳಿಯ ಕೋರ್ಟಿಂದ ಬಿಡುಗಡೆಗೊಳಿಸಿರುವುದಾಗಿ ದಾಖಲೆ ತೋರಿದ್ದಾನೆ. ಉಳ್ಳಾಲ ಪೊಲೀಸರು ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.    

ಉಳ್ಳಾಲ :ಅಕ್ರಮ ಜಾನುವಾರು ಸಾಗಾಟ ➤ ವಾಹನ ಚಾಲಕ ಖಾಕಿ ವಶಕ್ಕೆ Read More »

ಕರಾವಳಿ

ನ. 13 ರಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ತಪಾಸಣ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ ನ. 11: ಸಮುದಾಯ ಆರೋಗ್ಯ ಕೇಂದ್ರ ಕಡಬ, ದ.ಕ.ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕಡಬ ಹಾಗೂ ಪಟ್ಟಣ ಪಂಚಾಯತ್ ಕಡಬ ಇದರ ಸಂಯುಕ್ತ ಆಶ್ರಯದಲ್ಲಿ ಆಸಾಂಕ್ರಾಮಿಕ ರೋಗಗಳು ಮತ್ತು ಕೋವಿಡ್-19 ಉಚಿತ ತಪಾಸಣ ಶಿಬಿರವು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನ. 13 ರಂದು ಜರಗಲಿದೆ.   ಶಿಬಿರದಲ್ಲಿ ಕೋವಿಡ್-19 ಪರೀಕ್ಷೆ ಮಾತ್ರವಲ್ಲದೇ ರಕ್ತದೊತ್ತಡ ಪರೀಕ್ಷೆ  ಸಕ್ಕರೆ ಕಾಯಿಲೆ ಪರೀಕ್ಷೆ ಹಾಗೂ ರಕ್ತ ವರ್ಗೀಕರಣವನ್ನು ಉಚಿತವಾಗಿ ನಡೆಸಲಾಗುವುದು ಎಂದು ಕಡಬ ಸಮುದಾಯ ಆರೋಗ್ಯ

ನ. 13 ರಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ತಪಾಸಣ ಶಿಬಿರ Read More »

ಕರಾವಳಿ

ಹರಿಹರ ಪಲ್ಲತಡ್ಕ: ರಸ್ತೆ ಕಾಂಕ್ರೀಟ್ ಕಾರ್ಯ

(ನ್ಯೂಸ್ ಕಡಬ) newskadaba.com ಹರಿಹರ ಪಲ್ಲತಡ್ಕ, ನ.11: ಮಳೆ ಹಾನಿ ಯೋಜನೆಯಡಿಯಲ್ಲಿ ಮಂಜೂರಾದ 45 ಲಕ್ಷ ಅನುದಾನದಲ್ಲಿ 815 ಮೀಟರ್ ರಸ್ತೆ ಕಾಂಕ್ರೀಟ್ ಕಾರ್ಯವು ಬಾಳುಗೋಡು -ಹರಿಹರ ಸಂಪರ್ಕ ರಸ್ತೆಯ ಕಲ್ಲೆಮಠ ಎಂಬಲ್ಲಿ ಭರದಿಂದ ಸಾಗುತ್ತಿದೆ.     ಈ ಸಂದರ್ಭದಲ್ಲಿ ತಾಲೂಕು ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಜನಾರ್ಧನ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಾಗೆಯೇ ಪಲ್ಲತಡ್ಕ ಗ್ರಾ.ಪಂ. ನ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಶಿವಾಲ, ಶಿವಕುಮಾರ್ ಶಿವಾಲ, ಗುತ್ತಿಗೆದಾರರ ಉಸ್ತುವಾರಿ ಯಾಹ್ಯಾ ಉಪಸ್ಥಿತರಿದ್ದರು.  

ಹರಿಹರ ಪಲ್ಲತಡ್ಕ: ರಸ್ತೆ ಕಾಂಕ್ರೀಟ್ ಕಾರ್ಯ Read More »

ಕರಾವಳಿ

ಪುತ್ತೂರು: ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಆಭರಣ ಕಳವು

(ನ್ಯೂಸ್ ಕಡಬ) newskadaba.com ಪುತ್ತೂರು, ನ.11: ಕಾರಣಿಕ ಕ್ಷೇತ್ರ ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೈವಸ್ಥಾನ ಬಲ್ನಾಡು ಗ್ರಾಮದ ಕಾಡ್ಲ ಎಂಬಲ್ಲಿ ಕಳ್ಳತನ ಎಸಗಿರುವ ಘಟನೆ ಕಳೆದ ದಿನ ರಾತ್ರಿ ಬೆಳಕಿಗೆ ಬಂದಿದೆ.     ಕಳೆದ ದಿನ ರಾತ್ರಿ ದೀಪ ಹಚ್ಚಲು ಬಾಗಿಲು ತೆರೆದಾಗ ದೈವಸ್ಥಾನದ ಒಳಗಿರುವ ದೈವದ ಆಯುಧಗಳು ಹಾಗೂ ಆಭರಣಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಸಂಪ್ಯ ಠಾಣಾ ಎಸ್.ಐ ಉದಯ ರವಿ, ಪೊಲೀಸ್ ಸಿಬಂದಿಗಳು, ಶ್ವಾನ ದಳ ಹಾಗೂ ಬೆರಳುತಜ್ಞರು ಆಗಮಿಸಿ

ಪುತ್ತೂರು: ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಆಭರಣ ಕಳವು Read More »

ಕರಾವಳಿ

ಮಂಗಳೂರು: ದೇರಳಕಟ್ಟೆ ಆಸ್ಪತ್ರೆಯಿಂದ ಹುಬ್ಬಳ್ಳಿಗೆ ಮೃತದೇಹವನ್ನು ಸಾಗಿಸಲು ನೆರವಾದ ಕರ್ನಾಟಕ ರಕ್ಷಣಾ ವೇದಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.11: ಉತ್ತರಕನ್ನಡ ಮೂಲದ ವ್ಯಕ್ತಿಯೋರ್ವರು ಮಂಗಳೂರು ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತದೇಹವನ್ನು ಅವರ ಊರಿಗೆ ತಲುಪಿಸಲು ವ್ಯವಸ್ಥೆ ಮಾಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದ.ಕ ಜಿಲ್ಲಾ ಸಮಿತಿ ಯವರು ಮಾನವೀಯತೆ ಮೆರೆದಿದ್ದಾರೆ.     ಹುಬ್ಬಳ್ಳಿ ಮೂಲದ ವಿಷ್ಣು ಎಂಬ ಯುವಕ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಮೃತರು ಮೃತದೇಹವನ್ನು ಊರಿಗೆ ಸಾಗಿಸಲು ಹಣಕಾಸಿನ ಕೊರತೆ ಇದ್ದುದರಿಂದ ಈ ವಿಚಾರ ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ದ.ಕ.

ಮಂಗಳೂರು: ದೇರಳಕಟ್ಟೆ ಆಸ್ಪತ್ರೆಯಿಂದ ಹುಬ್ಬಳ್ಳಿಗೆ ಮೃತದೇಹವನ್ನು ಸಾಗಿಸಲು ನೆರವಾದ ಕರ್ನಾಟಕ ರಕ್ಷಣಾ ವೇದಿಕೆ Read More »

ಕರಾವಳಿ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ,ಲ್ಯಾಪ್ ಟ್ಯಾಪ್ ವಿತರಣೆ ➤ ಜ್ಞಾನತಾಣದ ಅಂತರ್ಜಾಲ ಶಿಕ್ಷಣ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 11:ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ರಾಜ್ಯದ ಗ್ರಾಮೀಣ ಮಕ್ಕಳಿಗೆ ಭರ್ಜರಿ ಸಿಹಿಸುದ್ದಿಯೊಂದು ಸಿಕ್ಕಿದ್ದು, ಗ್ರಾಮೀಣ ಮಕ್ಕಳಿಗೆ ‘ಆನ್ ಲೈನ್ ಮತ್ತು ಆಫ್ ಲೈನ್ ಶಿಕ್ಷಣ’ ಪಡೆಯಲು ಅನುಕೂಲವಾಗಲು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೂಲಕ ‘ ಉಚಿತ ಟ್ಯಾಬ್ ಮತ್ತು ಲ್ಯಾಪ್ ಟ್ಯಾಪ್ ವಿತರಿಸುವ’ ಜ್ಞಾನತಾಣದ ಅಂತರ್ಜಾಲ ಶಿಕ್ಷಣ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಜ್ಞಾನತಾಣ ಯೋಜನೆಯಡಿಯಲ್ಲಿ ರಾಜ್ಯಾದ್ಯಂತ 21 ಕೋಟಿ ರೂಪಾಯಿ ವೆಚ್ಚದಲ್ಲಿ ಮೊದಲ ವರ್ಷ 20 ಸಾವಿರ ಟ್ಯಾಬ್

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ ,ಲ್ಯಾಪ್ ಟ್ಯಾಪ್ ವಿತರಣೆ ➤ ಜ್ಞಾನತಾಣದ ಅಂತರ್ಜಾಲ ಶಿಕ್ಷಣ ಕಾರ್ಯಕ್ರಮಕ್ಕೆ ಸಿಎಂ ಚಾಲನೆ Read More »

ಕರ್ನಾಟಕ

ಕಳೆದ 24 ಗಂಟೆ ಅವಧಿಯಲ್ಲಿ 44,281 ಕೊರೊನಾ ಪ್ರಕರಣಗಳು ಪತ್ತೆ

(ನ್ಯೂಸ್ ಕಡಬ) newskadaba.com ನವದೆಹಲಿ ನ. 11: ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಸಕ್ರಿಯ ಪ್ರಕರಣಗಳಲ್ಲಿ ಭಾರಿ ಇಳಿಕೆ ಕಂಡು ಬಂದಿದ್ದು, ಐದು ಲಕ್ಷಕ್ಕಿಂತಲೂ ಕಡಿಮೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ 44,281 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 512 ಮಂದಿ ಸಾವನ್ನಪ್ಪಿದ್ದಾರೆ.   ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 86,36,012ಕ್ಕೆ ಏರಿಕೆಯಾಗಿದೆ. ಈವರೆಗೆ 1,27,571 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. 50,326 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯತನಕ 80,13,784 ಮಂದಿ ಗುಣಮುಖರಾಗಿದ್ದಾರೆ. ಸದ್ಯ 4,94,657 ಸಕ್ರಿಯ ಪ್ರಕರಣಗಳಿವೆ.    

ಕಳೆದ 24 ಗಂಟೆ ಅವಧಿಯಲ್ಲಿ 44,281 ಕೊರೊನಾ ಪ್ರಕರಣಗಳು ಪತ್ತೆ Read More »

ರಾಷ್ಟ್ರೀಯ ನ್ಯೂಸ್

ಎಡಮಂಗಲ: ಗ್ರಾ.ಪಂ. ಪಿ.ಡಿ.ಒ ಆಗಿ ಜಯಪ್ರಕಾಶ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಎಡಮಂಗಲ, ನ.11: ಎಡಮಂಗಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಜಯಪ್ರಕಾಶ್ ರವರು ಅಧಿಕಾರ ಸ್ವೀಕರಿಸಿದ್ದಾರೆ.   ಮೊದಲು ಪಿ.ಡಿ.ಒ ಆಗಿದ್ದ ಸರಿತಾ ಓಲ್ಗಾ ಡಿ’ಸೋಜರವರು ಸಂಪಾಜೆ ಗ್ರಾ.ಪಂ. ಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಇವರು ಪಿ.ಡಿ.ಒ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಮೂಲತಃ ಸೋಮವಾರಪೇಟೆಯವರಾಗಿರುವ ಜಯಪ್ರಕಾಶ್ ರವರು ಸುಳ್ಯದಲ್ಲಿ ನೆಲೆಸಿದ್ದು, ಕಾಣಿಯೂರು ಗ್ರಾ.ಪಂ. ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಜಾಲ್ಸೂರು, ಅರಂತೋಡು, ಮಡಪ್ಪಾಡಿ ಮತ್ತು ಸುಳ್ಯ ತಾ.ಪಂ. ನಲ್ಲಿ ಕರ್ತವ್ಯ ನಿರ್ವಹಿಸಿ,ಇದೀಗ ಎಡಮಂಗಲ ಗ್ರಾ.ಪಂ.

ಎಡಮಂಗಲ: ಗ್ರಾ.ಪಂ. ಪಿ.ಡಿ.ಒ ಆಗಿ ಜಯಪ್ರಕಾಶ್ ಅಧಿಕಾರ ಸ್ವೀಕಾರ Read More »

ಕರಾವಳಿ

ಬಂಟ್ವಾಳ: ಗೋಮಯದಿಂದ ಹಣತೆ ತಯಾರಿಸಿದ ಕಾಲೇಜು ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಬಂಟ್ವಾಳ , ನ.11: ಕೊರೋನಾ ಸೋಂಕಿನಿಂದಾಗಿ ಎದುರಾದ ಸವಾಲುಗಳ ನಡುವೆಯೂ, ಬರುವ ವಾರದಲ್ಲೇ ದೀಪಗಳ ಹಬ್ಬವಾದ ದೀಪಾವಳಿ ಆಗಮಿಸಲಿದೆ. ಈ ಹಬ್ಬವನ್ನು ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿದೆ. ಸ್ವಾವಲಂಬಿ ಭಾರತವನ್ನು ಸಾಧಿಸುವ ಕನಸಿಗೆ ಅನುಗುಣವಾಗಿ, ಕಲ್ಲಡ್ಕದ ಶ್ರೀ ರಾಮ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಗೋಮಯವನ್ನು(ಸೆಗಣಿ) ಕಚ್ಚಾ ವಸ್ತುವಾಗಿ ಬಳಸಿಕೊಂಡು ದೀಪಾವಳಿಗಾಗಿ ಹಣತೆಯನ್ನು ಸಿದ್ಧಪಡಿಸುತ್ತಿದ್ದಾರೆ.     ಈ ಹಣತೆಗಳನ್ನು ತಯಾರಿಸಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಸುಮಾರು 10,000 ಹಣತೆ ತಯಾರಿಸಲು ಈ ಒಂದು ಶಿಕ್ಷಣ ಸಂಸ್ಥೆಯು

ಬಂಟ್ವಾಳ: ಗೋಮಯದಿಂದ ಹಣತೆ ತಯಾರಿಸಿದ ಕಾಲೇಜು ವಿದ್ಯಾರ್ಥಿಗಳು Read More »

ಕರಾವಳಿ
Scroll to Top