ಎಡಮಂಗಲ: ಗ್ರಾ.ಪಂ. ಪಿ.ಡಿ.ಒ ಆಗಿ ಜಯಪ್ರಕಾಶ್ ಅಧಿಕಾರ ಸ್ವೀಕಾರ



(ನ್ಯೂಸ್ ಕಡಬ) newskadaba.com ಎಡಮಂಗಲ, .11: ಎಡಮಂಗಲ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಜಯಪ್ರಕಾಶ್ ರವರು ಅಧಿಕಾರ ಸ್ವೀಕರಿಸಿದ್ದಾರೆ.







 

ಮೊದಲು ಪಿ.ಡಿ.ಒ ಆಗಿದ್ದ ಸರಿತಾ ಓಲ್ಗಾ ಡಿ’ಸೋಜರವರು ಸಂಪಾಜೆ ಗ್ರಾ.ಪಂ. ಗೆ ವರ್ಗಾವಣೆಗೊಂಡ ಹಿನ್ನಲೆಯಲ್ಲಿ ಇವರು ಪಿ.ಡಿ.ಒ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಇವರು ಮೂಲತಃ ಸೋಮವಾರಪೇಟೆಯವರಾಗಿರುವ ಜಯಪ್ರಕಾಶ್ ರವರು ಸುಳ್ಯದಲ್ಲಿ ನೆಲೆಸಿದ್ದು, ಕಾಣಿಯೂರು ಗ್ರಾ.ಪಂ. ನಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದಾರೆ. ಈ ಹಿಂದೆ ಜಾಲ್ಸೂರು, ಅರಂತೋಡು, ಮಡಪ್ಪಾಡಿ ಮತ್ತು ಸುಳ್ಯ ತಾ.ಪಂ. ನಲ್ಲಿ ಕರ್ತವ್ಯ ನಿರ್ವಹಿಸಿ,ಇದೀಗ ಎಡಮಂಗಲ ಗ್ರಾ.ಪಂ. ಗೆ ವರ್ಗಾವಣೆಗೊಂಡಿದ್ದಾರೆ.






 

 

error: Content is protected !!
Scroll to Top