ನ್ಯೂಸ್ ಕಡಬ

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿ              ಪ್ರಯಾಣಿಕರ ಸ್ಥಿತಿ ಗಂಭೀರ..!

(ನ್ಯೂಸ್ ಕಡಬ) newskadaba.c0m ಬಂಟ್ವಾಳ, ಆ. 16.  ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿಯಾಗಿ ಹತ್ತಕ್ಕೂ ಅಧಿಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪರಂಗಿಪೇಟೆ ಸಮೀಪದ ಹತ್ತನೇ ಮೈಲಿಕಲ್ಲು ಎಂಬಲ್ಲಿ ಘಟನೆ ನಡೆದಿದೆ. ಸ್ಪಷ್ಟವಾದ ಕಾರಣ ಇನ್ನೂ ಕೂಡ ತಿಳಿದು ಬಂದಿಲ್ಲ, ಚಾಲಕನ ಅತಿ ವೇಗದ ಚಾಲನೆ ಅಥವಾ ವಾಹನದಲ್ಲಿ ಕಂಡ ತಾಂತ್ರಿಕ ದೋಷಗಳಿಂದ ಅಪಘಾತ ಸಂಭವಿಸಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಗಾಯಗೊಂಡವರ ಹೆಸರು ವಿಳಾಸದ ಮಾಹಿತಿ ಯಾವುದೇ ‌ಲಭ್ಯವಾಗಿಲ್ಲ. ಸ್ಥಳೀಯ ಯುವಕರು ಗಾಯಗೊಂಡವರನ್ನು ಕೂಡಲೇ […]

ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸು ಪಲ್ಟಿ              ಪ್ರಯಾಣಿಕರ ಸ್ಥಿತಿ ಗಂಭೀರ..! Read More »

ಕರಾವಳಿ

ಹಣ ದುರುಪಯೋಗ ಪ್ರಕರಣ PSI ಶಂಕರ್ ನಾಯಕ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ಧುಗೊಳಿಸಲು ಹೈಕೋರ್ಟ್ ನಕಾರ

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 15.  ಸದ್ಯ ಬಿಡದಿ ಠಾಣೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಜಿ ಕೆ ಶಂಕರ್ ನಾಯಕ್ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಹೊಸಕೋಟೆ ವ್ಯಾಪ್ತಿಯಲ್ಲಿ ವರದಿಯಾದ ಪ್ರಕರಣದಲ್ಲಿ ಹಣವನ್ನು ಅವರು ವಶಪಡಿಸಿಕೊಂಡರು, ಆದರೆ ಅವರು ಅದನ್ನು ತಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಂತೆ ಕೇಸ್ ದಾಖಲಿಸಿದ್ದರು. ನನ್ನ ವಿರುದ್ಧ 4ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯದಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣದ ವಿಚಾರಣೆ ರದ್ದುಗೊಳಿಸಬೇಕು ಎಂದು ಕೋರಿ ಶಂಕರ

ಹಣ ದುರುಪಯೋಗ ಪ್ರಕರಣ PSI ಶಂಕರ್ ನಾಯಕ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ಧುಗೊಳಿಸಲು ಹೈಕೋರ್ಟ್ ನಕಾರ Read More »

ಕರ್ನಾಟಕ

ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ    24ನೇ ಎಸಿಎಂಎಂ ಕೋರ್ಟ್ ಆದೇಶ ಪ್ರಕಟಣೆ          

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 15.  ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ತೂಗುದೀಪ್ ಮತ್ತು ಅವರ ಗೆಳತಿ ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ಆಗಸ್ಟ್ 28 ರವರೆಗೆ ವಿಸ್ತರಿಸಿ 24ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ಕೊಲೆ ಪ್ರಕರಣದ ಎರಡನೇ ಆರೋಪಿ ದರ್ಶನ್ ಹಾಗೂ ಇತರ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಜಡ್ಜ್​ ಮುಂದೆ ಆರೋಪಿಗಳನ್ನು ಹಾಜರುಪಡಿಸಲಾಗಿತ್ತು ಎನ್ನಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ    24ನೇ ಎಸಿಎಂಎಂ ಕೋರ್ಟ್ ಆದೇಶ ಪ್ರಕಟಣೆ           Read More »

ಕರ್ನಾಟಕ

50 ಕೋಟಿ ರೂ. ಮಾನನಷ್ಟ ಮೊಕದಮ್ಮೆ..!         ವಿಧಾನ ಪರಿಷತ್‌ ಸದಸ್ಯ- ಹೆಚ್.ವಿಶ್ವನಾಥ್‌ ಹೇಳಿಕೆ

(ನ್ಯೂಸ್ ಕಡಬ) newskadaba.c0m ಮೈಸೂರು, ಆ. 15.  ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ನನ್ನ ವಿರುದ್ಧ 50 ಕೋಟಿ ರೂ ಮಾನನಷ್ಟ ಮೊಕದ್ದಮೆ ಕೇಸ್ ಹಾಕಿದ್ದಾರೆ. ಈ ಕುರಿತು ನನಗೆ ನೋಟಿಸ್ ಬಂದಿದೆ. ನಾನೂ ಲಾಯರ್ ಆಗಿದ್ದವನು. ಇದಕ್ಕೆಲ್ಲ ಉತ್ತರ ನೀಡುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಹೆಚ್.ವಿಶ್ವನಾಥ್‌ ಹೇಳಿದರು. ಮುಡಾ ಹಗರಣ ತನಿಖೆ ಮಾಡುತ್ತೇವೆ ಮತ್ತು ಬೈರತಿ ಸುರೇಶ್ ಮುಡಾ ಪ್ರಾಧಿಕಾರಕ್ಕೆ ಬಂದು ಹೋದ ಮೇಲೂ ಮುಡಾದಲ್ಲಿ 500 ಸೈಟ್ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

50 ಕೋಟಿ ರೂ. ಮಾನನಷ್ಟ ಮೊಕದಮ್ಮೆ..!         ವಿಧಾನ ಪರಿಷತ್‌ ಸದಸ್ಯ- ಹೆಚ್.ವಿಶ್ವನಾಥ್‌ ಹೇಳಿಕೆ Read More »

ಕರ್ನಾಟಕ

‘ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ’     ಉಪ ಮುಖ್ಯಮಂತ್ರಿ- ಡಿ.ಕೆ. ಶಿವಕುಮಾರ್

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 15.  ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು. 78ನೇ ಸ್ವಾತಂತ್ರ್ಯ ದಿನಾಚರಣೆಯ ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಡಿಕೆ.ಶಿವಕುಮಾರ್ ಅವರು ಮಾತನಾಡಿದರು. ರಾಜ್ಯದ ಜನತೆಯನ್ನು ಹಸಿವಿನಿಂದ ಮುಕ್ತ ಮಾಡಬೇಕು ಎನ್ನುವುದೇ ನಮ್ಮ ಗುರಿ. ಇಂದಿರಾಗಾಂಧಿ ಸೇರಿದಂತೆ ಕಾಂಗ್ರೆಸ್ ಕಾಲದಲ್ಲಿ ಕೊಟ್ಟ ಕಾರ್ಯಕ್ರಮಗಳು ಜನರ ಬದುಕಿನಲ್ಲಿ ಮಹತ್ತರ ಬದಲಾವಣೆ ತಂದಿದ್ದು, ಕಾಂಗ್ರೆಸ್‌ ಗೆ ಮಾತ್ರ ಇಂತಹ ಕಾರ್ಯಕ್ರಮಗಳನ್ನು ಜಾರಿ

‘ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ’     ಉಪ ಮುಖ್ಯಮಂತ್ರಿ- ಡಿ.ಕೆ. ಶಿವಕುಮಾರ್ Read More »

ಕರ್ನಾಟಕ

78ನೇ ಸ್ವಾತಂತ್ರ್ಯೋತ್ಸವದ ಸಡಗರ ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 15.  78ನೇ ಸ್ವಾತಂತ್ರ್ಯೋತ್ಸವದ ಸಡಗರ ದೇಶದೆಲ್ಲೆಡೆ ಭಾರತೀಯರು ದೇಶಪ್ರೇಮ ಮೆರೆದಿದ್ದಾರೆ. ರಾಜ್ಯದ ಸಿಎಂ ನಿವಾಸದಲ್ಲಿ ಸ್ವಾತಂತ್ರ ದಿನವನ್ನು ಆಚರಿಸಲಾಯಿತು.   ಸಿಎಂ ಸಿದ್ದರಾಮಯ್ಯ ಅವರು ನಿವಾಸ ಕಾವೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು, ನಾಡಿನ ಜನತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿ, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿದರು.ನಂತರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.  

78ನೇ ಸ್ವಾತಂತ್ರ್ಯೋತ್ಸವದ ಸಡಗರ ಧ್ವಜಾರೋಹಣ ನೆರವೇರಿಸಿದ ಸಿಎಂ ಸಿದ್ದರಾಮಯ್ಯ Read More »

ಕರ್ನಾಟಕ

ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಸಿಎಂ ಸಿದ್ದರಾಮಯ್ಯ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 13.  ರಾಜ್ಯದ ಎಲ್ಲಾ ಗ್ರಂಥಾಲಯ ಮೇಲ್ವಿಚಾರಕರನ್ನು ಕನಿಷ್ಠ ವೇತನಕ್ಕೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯೋಜಿಸಿದ್ದ ಗ್ರಂಥಾಲಯ ಮೇಲ್ವಿಚಾರಕರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಹೊಸ ಗ್ರಾಮ ಗ್ರಂಥಾಲಯ– ‘ಅರಿವು ಕೇಂದ್ರ’ಗಳಿಗೆ ಸಾಂಕೇತಿಕವಾಗಿ ಚಾಲನೆ ನೀಡಿ ಮುಖ್ಯಮಂತ್ರಿಗಳು ಮಾತನಾಡಿದರು. ಗ್ರಂಥಾಲಯಗಳಿಗೆ ಹೋಗುವುದು ಅತ್ಯಂತ ಉತ್ತಮ ಹವ್ಯಾಸ. ಗ್ರಾಮಗಳಲ್ಲಿ 6,599 ಗ್ರಾಮ‌ಮಟ್ಟದ ಗ್ರಂಥಾಲಯಗಳನ್ಮು ತೆರೆಯುವ ನಿರ್ಧಾರ ಮಾಡಿ ಘೋಷಣೆ ಮಾಡಿದ್ದು, ಸರ್ಕಾರ ಸಚಿವ ಪ್ರಿಯಾಂಕ

ಗ್ರಂಥಾಲಯ ಮೇಲ್ವಿಚಾರಕರಿಗೆ ಕನಿಷ್ಠ ವೇತನ ಸಿಎಂ ಸಿದ್ದರಾಮಯ್ಯ ಘೋಷಣೆ Read More »

ಕರ್ನಾಟಕ

 ಮಂಗಳೂರು: ತುಳು ನಾಟಕ ರಂಗದ ಖ್ಯಾತ ನಟ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಆ. 13.  ಖ್ಯಾತ ಕಲಾವಿದ, ತುಳು ನಾಟಕ ರಂಗದ ಬರಹಗಾರ, ಸೂಪರ್ ಹಿಟ್ ತುಳು ನಾಟಕ ಒರಿಯರ್ದೊರಿ ಅಸಲ್‌ ನಲ್ಲಿ ‘ನಾಥು’ ಪಾತ್ರದ ಮೂಲಕ ಹೆಸರುವಾಸಿಯಾಗಿದ್ದ ಅಶೋಕ್ ಶೆಟ್ಟಿ (53) ಮೃತಪಟ್ಟ ಕುರಿತು ವರದಿಯಾಗಿದೆ. ಇವರು ಅಂಬ್ಲಿಮೊಗರುವಿನ ತಮ್ಮ ಮನೆಯಲ್ಲಿ ತೀವ್ರ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆ ಮೃತಪಟ್ಟಿದ್ದಾರೆ. ವೃತ್ತಿಪರ ರಂಗಭೂಮಿಯ ನಟ ಮತ್ತು ಬರಹಗಾರ ಅಶೋಕ್ ಹಲವು ದಶಕಗಳ ಕಾಲ ವಿಜಯ ಕುಮಾರ್ ಕೊಡಿಯಾಲ್ ಬೈಲ್ ಅವರ

 ಮಂಗಳೂರು: ತುಳು ನಾಟಕ ರಂಗದ ಖ್ಯಾತ ನಟ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮೂಡಬಿದಿರೆ: ‘ಅಂತರಾಷ್ಟ್ರೀಯ ಯುವ ದಿನ’ ಆಚರಣೆ

(ನ್ಯೂಸ್ ಕಡಬ)newskadaba.com ಮೂಡುಬಿದಿರೆ, ಆ.12.  ಭಾರತೀಯ ಕಥೊಲಿಕ ಯುವ ಸಂಚಲನ ಮೂಡುಬಿದ್ರಿ ವಲಯ ಮತ್ತು ಭಾರತೀಯ ಕಥೊಲಿಕ ಯುವ ಸಂಚಲನ ಗಂಟಾಲ್ಕಟ್ಟೆ ಘಟಕ ಇದರ ಸಹಯೋಗದೊಂದಿಗೆ ಮೂಡಬಿದ್ರಿ ವಲಯದ ಯುವ ಜನರಿಗೆ ಒಂದು ದಿನದ ಮಾಹಿತಿ ಕಾರ್ಯಗಾರ “ಯವ ಎಕ್ತಾರ್ 2024” ಎಂಬ ಸಮಾಲೋಚನೆ ಸಭೆಯನ್ನು ಗಂಟಾಲ್ಕಟ್ಟೆಯ ನಿತ್ಯ ಸಹಾಯ ಮಾತ ಇಗರ್ಜಿಯ ಸಭಾಭವನದಲ್ಲಿ  ನಡೆಯಿತು. ವಿಗಾರ್ ಜನರಲ್ ಹಾಗೂ ಭಾರತೀಯ ಕಥೊಲಿಕ ಯುವ ಸಂಚಲನ ಮೂಡುಬಿದ್ರಿ ವಲಯದ ನಿರ್ದೇಶಕರಾದ ಅತಿ ವಂದನೀಯ ಫಾದರ್ ಒನಿಲ್ ಡಿಸೋಜಾ

ಮೂಡಬಿದಿರೆ: ‘ಅಂತರಾಷ್ಟ್ರೀಯ ಯುವ ದಿನ’ ಆಚರಣೆ Read More »

ಕರಾವಳಿ

‘ಸಂವಿಧಾನಕ್ಕೆ ಬದ್ಧ, SC/ST ಕೆನೆಪದರಕ್ಕೆ ಅವಕಾಶವಿಲ್ಲ’         ಕೇಂದ್ರ ಸರ್ಕಾರ             

(ನ್ಯೂಸ್ ಕಡಬ)newskadaba.com ನವದೆಹಲಿ, ಆ.10.  ಬಿಆರ್ ಅಂಬೇಡ್ಕರ್ ನೀಡಿರುವ ಸಂವಿಧಾನದಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾತಿಯಲ್ಲಿ ಕೆನೆ ಪದರಕ್ಕೆ ಯಾವುದೇ ಅವಕಾಶವಿಲ್ಲ ಎಂದು ಕೇಂದ್ರ ಸಚಿವ ಸಂಪುಟ ಪ್ರತಿಪಾದಿಸಿದೆ. ಉಪ ಕೋಟಾಗಳ ಕುರಿತು ಕಳೆದ ವಾರ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು ಎನ್ನಲಾಗಿದೆ. ಅತಿ ಹಿಂದುಳಿದ ಗುಂಪುಗಳನ್ನು ಉನ್ನತೀಕರಿಸುವ ಉದ್ದೇಶದಿಂದ ಮೀಸಲಾತಿ ವರ್ಗದೊಳಗೆ ಕೋಟಾಗಳನ್ನು ನಿಯೋಜಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನು ಉಪ-ವರ್ಗೀಕರಿಸಲು ರಾಜ್ಯಗಳಿಗೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದು ವರದಿ

‘ಸಂವಿಧಾನಕ್ಕೆ ಬದ್ಧ, SC/ST ಕೆನೆಪದರಕ್ಕೆ ಅವಕಾಶವಿಲ್ಲ’         ಕೇಂದ್ರ ಸರ್ಕಾರ              Read More »

ರಾಷ್ಟ್ರೀಯ ನ್ಯೂಸ್
Scroll to Top