ನ್ಯೂಸ್ ಕಡಬ

ಸಾಮಾಥ್ರ್ಯ ಆಧಾರಿತ ಸಾಲ ಯೋಜನೆಯ ಕೈಪಿಡಿ ಬಿಡುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.18: ನಬಾರ್ಡ್ ಸಾಮಾಥ್ರ್ಯ ಆಧಾರಿತ ಸಾಲ ಯೋಜನೆಯ ಆಧಾರದಲ್ಲಿ ಲೀಡ್ ಬ್ಯಾಂಕ್ ಮೂಲಕ ಜಿಲ್ಲಾ ಸಾಲ ಯೋಜನೆಯನ್ನು ರೂಪಿಸಿ ನಿಗದಿತ ಗುರಿಯನ್ನು ಸಾಧಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಡಿ.ಸಿ.ಸಿ.ಡಿ.ಎಲ್.ಆರ್.ಸಿ ಚೇರ್‍ಮ್ಯಾನ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಸೆಲ್ವಮಣಿ ಆರ್ ಸೂಚಿಸಿದರು.ಅವರು ಇಂದು ತಮ್ಮ ಕಚೇರಿಯಲ್ಲಿ ನಬಾರ್ಡ್ ವತಿಯಿಂದ ಸಾಮಾಥ್ರ್ಯ ಆಧಾರಿತ ಸಾಲ ಯೋಜನೆಯ ಆರ್ಥಿಕ ವರ್ಷ 2021-22ರ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಜಿಲ್ಲೆಯ ಎಲ್ಲಾ ಬ್ಯಾಂಕಿನ ಮ್ಯಾನೇಜರ್‍ಗಳಿಗೆ ವಿವಿಧ […]

ಸಾಮಾಥ್ರ್ಯ ಆಧಾರಿತ ಸಾಲ ಯೋಜನೆಯ ಕೈಪಿಡಿ ಬಿಡುಗಡೆ Read More »

ಕರಾವಳಿ

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ➤ ಆರು ಮಂದಿ ಗೆಲುವು

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.18: ಸುಳ್ಯ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆಗೆ ಇಂದು ನಡೆದ ಚುನಾವಣೆಯಲ್ಲಿ ಶಿಕ್ಷಕರುಗಳಾದ ದೇವಚಳ್ಳ ಶ್ರೀಧರ ಗೌಡ ಕೆ (148) ನಡುಗಲ್ಲು ಶಾಲೆಯ ಕುಶಾಲಪ್ಪ ಟಿ (147), ಅಮೈಮಡಿಯಾರು ಶಾಲೆಯ ಪದ್ಮನಾಭ ಅತ್ಯಾಡಿ (128), ದೊಡ್ಡತೋಟ ಶಾಲೆಯ ಕುಶಾಲಪ್ಪ ಪಿ (125), ಬಿಳಿಯಾರು ಶಾಲೆಯ ಶೀಲಾವತಿ ಕೆ.ಎನ್. (147), ಕರಿಕ್ಕಳ ಶಾಲೆಯ ಸರೋಜಿನಿ (137) ಮತಗಳನ್ನು ಪಡೆದು ನಿರ್ದೇಶಕರುಗಳಾಗಿ ಆಯ್ಕೆಯಾದರು. ಸುಳ್ಯದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮುಂಭಾಗದಲ್ಲಿರುವ ಸಂಧ್ಯಾ

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆ ➤ ಆರು ಮಂದಿ ಗೆಲುವು Read More »

ಕರಾವಳಿ

ಬೆಂಗಳೂರಿನಲ್ಲಿ ಮತ್ತೊಂದು ಹೀನ ಕೃತ್ಯ ➤ ಬಸ್ಸಿಗಾಗಿ ಕಾಯುತ್ತಿದ್ದ ಯುವತಿ ಮೇಲೆ ರೇಪ್ ಮಾಡಿದ ಆಟೋ ಚಾಲಕ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.18: ಹೆಣ್ಣು ಮಕ್ಕಳಿಗೆ ರಾಜ್ಯದ ರಾಜಧಾನಿ ಸೇಫ್ ಅಲ್ವಾ ಎನ್ನುವ ಪ್ರಶ್ನೆ ಮತ್ತೊಮ್ಮೆ ಎದ್ದಿದೆ. ಕಾರಣ ಮಹಾನಗರದಲ್ಲಿ ಇಂತಹ ಪ್ರಕರಣಗಳು ಒಂದಾದ ಮೇಲೊಂದರಂತೆ ನಡೆಯುತ್ತಿವೆ. ಈಗ ಮತ್ತೊಂದು ಅತ್ಯಾಚಾರ ಪ್ರಕರಣ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾಮುಕ ಆರೋಪಿ ಮುಬಾರಕ್ (28) ಎಂಬಾತನೇ ಈ ಕೃತ್ಯ ಎಸಗಿದ್ದಾನೆ. ಸಂತ್ರಸ್ತ ಯುವತಿ ಕಂಪ್ಯೂಟರ್ ಸೈನ್ಸ್ ಕೋರ್ಸ್ ಓದುತ್ತ, ಮದುವೆಗಳಲ್ಲಿ ಸ್ವಾಗತಕಾರ್ತಿಯಾಗಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದಳು. ವಿವಾಹವೊಂದರಲ್ಲಿ ಪಾಲ್ಗೊಂಡಿದ್ದ ಯುವತಿ

ಬೆಂಗಳೂರಿನಲ್ಲಿ ಮತ್ತೊಂದು ಹೀನ ಕೃತ್ಯ ➤ ಬಸ್ಸಿಗಾಗಿ ಕಾಯುತ್ತಿದ್ದ ಯುವತಿ ಮೇಲೆ ರೇಪ್ ಮಾಡಿದ ಆಟೋ ಚಾಲಕ Read More »

ಕರಾವಳಿ

ಅರೆಭಾಷೆಯ ಕಾರ್ಯಕ್ಷಮತೆ ಹೆಚ್ಚಾಗಬೇಕು ➤ ಉಪನ್ಯಾಸಕಿ ಸ್ವರ್ಣಲತಾ ಕಿಶೋರ್

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.18: ಅರೆಭಾಷೆಯ ಕಲಾ ಚಟುವಟಿಕೆಗಳು ಹವ್ಯಾಸ ಮಾತ್ರವಾಗದೆ, ಕಲಾವಿದರ ಜೀವನೋಪಾಯ ಮಾರ್ಗವೂ ಆಗಬೇಕು. ಅರೆಭಾಷೆ ಅನ್ನದ ಭಾಷೆಯಾಗುವುದೊಂದಿಗೆ ಭಾಷೆಯ ಕಾರ್ಯಕ್ಷಮತೆ ಕೂಡ ಹೆಚ್ಚಾಗಬೇಕು ಎಂದು ಶ್ರೀ ಶಾರದಾ ಮಹಿಳಾ ಪ.ಪೂ. ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಸ್ವರ್ಣಲತಾ ಕಿಶೋರ್ ಹೇಳಿದರು. ಕರ್ನಾಟಕ ಸರ್ಕಾರವು ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯನ್ನು ಸ್ಥಾಪಿಸಿ, ಆದೇಶ ಹೊರಡಿಸಿದ ನೆನಪಿಗಾಗಿ ಸುಳ್ಯದ ರೋಟರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ ಅರೆಭಾಷೆ ದಿನಾಚರಣೆ ಮತ್ತು ಅರೆಭಾಷೆ ಯಕ್ಷಗಾನ ಪ್ರದರ್ಶನ

ಅರೆಭಾಷೆಯ ಕಾರ್ಯಕ್ಷಮತೆ ಹೆಚ್ಚಾಗಬೇಕು ➤ ಉಪನ್ಯಾಸಕಿ ಸ್ವರ್ಣಲತಾ ಕಿಶೋರ್ Read More »

ಕರಾವಳಿ

ತೊಡಿಕಾನ ದೇವಳಕ್ಕೆ ದೇವರಗುಂಡಿಯಿಂದ ಪವಿತ್ರ ಜಲತೀರ್ಥ ಯಾತ್ರೆ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.18:ಸುಳ್ಯ ಸೀಮೆ ದೇವಸ್ಥಾನ ತೊಡಿಕಾನ ಮಲ್ಲಿಕಾರ್ಜುನ ದೇವರ ಸನ್ನಿಧಾನಕ್ಕೆ ದೇವರ ಗುಂಡಿ ಯಿಂದ ಪವಿತ್ರ ಜಲವನ್ನು ತಂದು ಮಲ್ಲಿಕಾರ್ಜುನ ದೇವರಿಗೆ ಅಭಿಷೇಕದ ನಂತರ ಭಕ್ತಾದಿಗಳಿಗೆ ತೀರ್ಥ ವಿತರಿಸುವ ಸಂಪ್ರದಾಯ ನಡೆಯಿತು.   ಸಂಪ್ರದಾಯದ ಪ್ರಕಾರ ಸುಳ್ಯ ವಿಶ್ವಹಿಂದೂ ಪರಿಷತ್ ಬಜರಂಗದಳ ಸಂಘಟನೆಯ ಕಾರ್ಯಕರ್ತರು ಮತ್ತು ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಭಕ್ತಾದಿಗಳು ದೇವಳದ ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವರಗುಂಡಿಯಿಂದ ಪವಿತ್ರ ತೀರ್ಥ ಜಲವನ್ನು ಶ್ರೀ ದೇವರ ಸನ್ನಿಧಾನಕ್ಕೆ

ತೊಡಿಕಾನ ದೇವಳಕ್ಕೆ ದೇವರಗುಂಡಿಯಿಂದ ಪವಿತ್ರ ಜಲತೀರ್ಥ ಯಾತ್ರೆ Read More »

ಕರಾವಳಿ

ಮಂಗಳೂರು :8 ವರ್ಷಗಳ ಹಿಂದೆ ಮನೆಗಳ್ಳತನ ಮಾಡಿದ ಇಬ್ಬರ ಬಂಧನ.!

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.18: ಕಾಪು ಠಾಣಾ ವ್ಯಾಪ್ತಿಯ ಮಲ್ಲಾರು ಕೋಟೆ ಎಂಬಲ್ಲಿ ಮನೆಗಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರು ಕಳ್ಳರನ್ನು ಕಾಪು ಪೊಲೀಸರು ಗುರುವಾರ ಬಂಧಿಸಿದ್ದಾರೆ.ಬಂಧಿತರನ್ನು ಮಲ್ಲಾರು ನಿವಾಸಿ ಅಬ್ದುಲ್ ಸತ್ತಾರ್ (38) ಮತ್ತು ಕುತ್ಯಾರು ನಿವಾಸಿ ಅಬ್ದುಲ್ ರಹಮಾನ್ ಪುದಿನ್ ಯಾನೆ ರಹೀಂ (49) ಎಂದು ಗುರುತಿಸಲಾಗಿದೆ.   2012ರ ಜುಲೈ ನಲ್ಲಿ ಮಲಾರು ಗ್ರಾಮದ ಕೋಟೆ ಎಂಬಲ್ಲಿರುವ ಪರ್ವಿನ್ ಬಾಬು ಎಂಬವರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಹಿಂದಿನ ಬಾಗಿಲನ್ನು ಮುರಿದು

ಮಂಗಳೂರು :8 ವರ್ಷಗಳ ಹಿಂದೆ ಮನೆಗಳ್ಳತನ ಮಾಡಿದ ಇಬ್ಬರ ಬಂಧನ.! Read More »

ಕರಾವಳಿ, ಕ್ರೈಮ್ ನ್ಯೂಸ್

ಸುಳ್ಯ :ಚೆಕ್ ಬೌನ್ಸ್ ಪ್ರಕರಣದಲ್ಲಿ ವಾರಂಟ್ ಆಗಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.18: ಚೆಕ್ ಬೌನ್ಸ್ ಪ್ರಕರಣದಲ್ಲಿ ವಾರಂಟ್ ಆಗಿದ್ದ ಆರೋಪಿಯನ್ನು ಸುಳ್ಯ ಎಸ್ ಐ ನೇತೃತ್ವದ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಮಡಪ್ಪಾಡಿ ಗ್ರಾಮದ ಪ್ರತೀಕ್ ಎಂಬಾತ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದು ಈತನ ಮೇಲೆ 12 ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಬಳಿಕ ಆತ ತಲೆ ಮರೆಸಿಕೊಂಡಿದ್ದ. ಕೆಲ ಸಮಯದಿಂದ ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದು ಡಿ.16 ರಂದು ಮಗಳೂರಿನಲ್ಲಿ ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ

ಸುಳ್ಯ :ಚೆಕ್ ಬೌನ್ಸ್ ಪ್ರಕರಣದಲ್ಲಿ ವಾರಂಟ್ ಆಗಿದ್ದ ಆರೋಪಿಯ ಬಂಧನ Read More »

ಕರಾವಳಿ

ಮೂಡುಬಿದಿರೆ: ಫೇಸ್ ಬುಕ್ ನಲ್ಲಿ ಜೈನ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ➤ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನವಿ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ, ಡಿ.18: ಜೈನ ಧರ್ಮದ ಬಗ್ಗೆ ಹಾಗೂ ಜೈನ ಮುನಿ ಪರಂಪರೆಯ ಬಗ್ಗೆ ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಪೋಸ್ಟ್ ಗಳು ಹರಿದಾಡುತ್ತಿದ್ದು, ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಗೆ ಮೂಡುಬಿದಿರೆ ಜೈನ್ ಮಿಲನ್ ಹಾಗೂ ಜೈನ ಯುವ ಸೇನೆಯ ಪದಾಧಿಕಾರಿಗಳು ದೂರು ನೀಡಿದರು. ವಾಣಿಶ್ರೀ ಎಂಬ ಫೇಸ್ ಬುಕ್ ಅಕೌಂಟ್ ನಲ್ಲಿ ಜೈನಮುನಿಗಳ ಬಗ್ಗೆ ಅವಹೇಳನಕಾರಿಯಾಗಿ ಬರೆಯಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮೂಡುಬಿದಿರೆ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದರು.ಮೂಡುಬಿದಿರೆ ಜೈನ್ ಮಿಲನ್

ಮೂಡುಬಿದಿರೆ: ಫೇಸ್ ಬುಕ್ ನಲ್ಲಿ ಜೈನ ಧರ್ಮದ ಬಗ್ಗೆ ಅವಹೇಳನಕಾರಿ ಪೋಸ್ಟ್ ➤ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮನವಿ Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ಮೀನುಗಾರಿಕಾ ಬಂದರಿನಲ್ಲಿ ಬೋಟ್ ಮಾಲೀಕನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಉಡುಪಿ:, ಡಿ.18: ರವಿವಾರ ಮಲ್ಪೆ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ 28 ಮೀನುಗಾರರ ಪೈಕಿ ಸುಧೀರ್‌ ಮುಲ್ಕಿ(30) ಎಂಬವರ ಮೃತದೇಹ ಡಿ.16ರ ಬುಧವಾರದಂದು ಮಲ್ಪೆ ಬಂದರಿನಲ್ಲಿ ಟಿ ಧಕ್ಕೆಯ ಹೊಳೆಯಲ್ಲಿ ಪತ್ತೆಯಾಗಿದೆ. ಉಡುಪಿಯ ಕೊಡವೂರು ಗ್ರಾಮದ ನಿವಾಸಿ ಮಹಮ್ಮದ್ ಅಲಿ(42) ಇವರು ಮಲ್ಪೆಯಲ್ಲಿ ಜಯಲಕ್ಷ್ಮೀ ಬೋಟಿನ ಪಾಲುದಾರಿಕೆ ನಡೆಸಿಕೊಂಡಿದ್ದಾರೆ. ಡಿ.13ರ ರವಿವಾರದಂದು ಅಶೋಕ ಸುವರ್ಣ ತಂಡೇಲರಾಗಿ ಹಾಗೂ ಗಣೇಶ, ಸುಧೀರ್, ನಾರಾಯಣ ಹಾಗೂ ಇತರರೊಂದಿಗೆ 28 ಜನ ಮೀನುಗಾರರು ಮೀನುಗಾರಿಕೆಗೆ ತೆರಳಿ ಡಿ.14ರ

ಉಡುಪಿ: ಮೀನುಗಾರಿಕಾ ಬಂದರಿನಲ್ಲಿ ಬೋಟ್ ಮಾಲೀಕನ ಮೃತದೇಹ ಪತ್ತೆ Read More »

ಕರಾವಳಿ

ಉಜಿರೆ :ಆಟವಾಡುತ್ತಿದ್ದ 8 ವರ್ಷದ ಮಗುವಿನ ಅಪಹರಣ ➤ 17 ಕೋ.ರೂ. ಬೇಡಿಕೆಯಿಟ್ಟ ಅಪಹರಣಕಾರರು

(ನ್ಯೂಸ್ ಕಡಬ) newskadaba.com ಉಜಿರೆ, ಡಿ.18: ಆಟವಾಡುತ್ತಿದ್ದ 8 ವರ್ಷದ ಮಗುವೊಂದನ್ನು ಅಪಹರಣ ನಡೆಸಿದ ಘಟನೆ ಉಜಿರೆಯಲ್ಲಿ ನಡೆದಿದೆ.   ಉಜಿರೆ ಉದ್ಯಮಿಯೋರ್ವರ 8 ವರ್ಷದ ಮಗು  ಸಂಜೆ 6.30ರ ಸುಮಾರಿಗೆ ಉಜಿರೆ ರಥಬೀದಿ ಸಮೀಪ ಆಟವಾಡುತ್ತಿರುವ ಸಂದರ್ಭ ಬಿಳಿ ಬಣ್ಣದ ಇಂಡಿಕಾ ಕಾರಿನಲ್ಲಿ ಬಂದ ನಾಲ್ವರು ಅಪಹರಿಸಿದ ಕುರಿತು ಮಾಹಿತಿ ಲಭ್ಯವಾಗಿದೆ. ಅಪರಿಚಿತರು ಕಾರಿನಲ್ಲಿ ಅಪಹರಣ ಮಾಡಿದ್ದು, ಮನೆ ಮಂದಿ ಕಾರಿನ ಬಳಿ ಬಂದಂತೆ ಪರಾರಿಯಾಗಿದ್ದಾರೆ. ಬಳಿಕ ಮಗುವಿನ ತಾಯಿಗೆ ಕರೆ ಮಾಡಿ 100 ಬಿಟ್

ಉಜಿರೆ :ಆಟವಾಡುತ್ತಿದ್ದ 8 ವರ್ಷದ ಮಗುವಿನ ಅಪಹರಣ ➤ 17 ಕೋ.ರೂ. ಬೇಡಿಕೆಯಿಟ್ಟ ಅಪಹರಣಕಾರರು Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top