ನ್ಯೂಸ್ ಕಡಬ

ದಲಿತ ಕಾಲನಿಗೆ ಭೇಟಿ ನೀಡಿದ ಪೇಜಾವರಶ್ರೀ

(ನ್ಯೂಸ್ ಕಡಬ) newskadaba.com ಉಡುಪಿ, ಡಿ.21: ರಾಮ ಮಂದಿರ ಜನಜಾಗೃತಿ ಅಭಿಯಾನ’ದ ಪ್ರಯುಕ್ತ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕಳೆದ ದಿನ ಕೊಡವೂರು ಗ್ರಾಮದ ಪಾಳೆಕಟ್ಟೆ ಎಂಬಲ್ಲಿರುವ ದಲಿತರ ಕಾಲನಿಗೆ ಭೇಟಿ ನೀಡಿದರು. ಸಾಮೂಹಿಕ ಭಜನೆಯೊಂದಿಗೆ ಸ್ವಾಮೀಜಿಯನ್ನು ಕಾಲನಿಯವರು ಬರ ಮಾಡಿಕೊಂಡರು. ಬಳಿಕ ಅಲ್ಲಿನ ಮಾಧವ ಕರ್ಕೇರ ಮತ್ತು ಸದಾನಂದ ಎಂಬವರ ಮನೆಗಳಿಗೆ ಭೇಟಿ ನೀಡಿದ ಸ್ವಾಮೀಜಿ, ರಾಮ ದೀಪಗಳನ್ನು ಬೆಳಗಿಸಿ ದರು. ಮನೆಯವರು ಸ್ವಾಮೀಜಿಗೆ ಫಲಪುಷ್ಟ ಸಹಿತ ಗೌರವ ಅರ್ಪಿಸಿದರು. ಅಲ್ಲಿಂದ ಕಾಲನಿಯಲ್ಲಿರುವ ಶ್ರೀಮೂಕಾಂಬಿಕಾ ಭಜನಾ […]

ದಲಿತ ಕಾಲನಿಗೆ ಭೇಟಿ ನೀಡಿದ ಪೇಜಾವರಶ್ರೀ Read More »

ಕರಾವಳಿ

ರಾಜ್ಯದ ಖಾಸಗಿ ಶಾಲೆಗಳಲ್ಲಿ ಇಂದಿನಿಂದ ‘ಆನ್ ಲೈನ್ ಕ್ಲಾಸ್’ ಬಂದ್.!

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.21: ರಾಜ್ಯ ಸರ್ಕಾರ ಕೊರೋನಾ ಸೋಂಕಿನ ಭೀತಿಯ ನಡುವೆಯೂ ಜನವರಿ 1 ರ ಹೊಸ ವರ್ಷದಿಂದ ಬೋರ್ಡ್ ಪರೀಕ್ಷೆಗಳನ್ನು ಒಳಗೊಂಡಂತ ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳ ಆರಂಭಕ್ಕೆ ನಿರ್ಧಾರ ಕೈಗೊಂಡಿದೆ . ಇಂತಹ ಶಾಲಾ – ಕಾಲೇಜು ಆರಂಭದ ಹೊಸ್ತಿಲಲ್ಲಿ ಇರುವಂತ ರಾಜ್ಯ ಸರ್ಕಾರಕ್ಕೆ ಮತ್ತೊಂದು ಶಾಕ್ ಎದುರಾಗಿದೆ .ಆರ್ಥಿಕ ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳು ಇಎಂಐ ಕಟ್ಟುವುದಕ್ಕೆ ಕಷ್ಟಪಡುತ್ತಿವೆ. ಕನಿಷ್ಠ ಒಂದು ವರ್ಷ ಕಾಲಾವಧಿ ನೀಡಲು

ರಾಜ್ಯದ ಖಾಸಗಿ ಶಾಲೆಗಳಲ್ಲಿ ಇಂದಿನಿಂದ ‘ಆನ್ ಲೈನ್ ಕ್ಲಾಸ್’ ಬಂದ್.! Read More »

ಕರಾವಳಿ

ಬ್ರಹ್ಮಾವರ :ಮೂರು ಮಕ್ಕಳೊಂದಿಗೆ ತಾಯಿ ನಾಪತ್ತೆ.!?

(ನ್ಯೂಸ್ ಕಡಬ) newskadaba.com ಬ್ರಹ್ಮಾವರ, ಡಿ.21: ತವರು ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಮನೆಯಿಂದ ಹೊರಟ ಮಹಿಳೆಯು ತನ್ನ ಮೂವರು ಮಕ್ಕಳ ಸಹಿತ ನಾಪತ್ತೆಯಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ನಡೆದಿದೆ.   ಬ್ರಹ್ಮಾವರ ತಾಲೂಕಿನ ಬಕ್ಕಪಟ್ಟಣದ ಮೊಹಮ್ಮದ್ ಖಲೀಲ್‌ ಅವರ ಪತ್ನಿ ರಾಸಿಯಾ (32), ಪುತ್ರಿಯರಾದ ಪಾತಿಮಾ ನಶ್ರಾ (11), ಆಯಿಷಾ ಝಿಫ್ರಾ (3) ಹಾಗೂ ಪುತ್ರ ಅಬ್ದುಲ್ ಮುತ್ತಾಹೀರ್ (7) ಕಾಣೆಯಾದವರು. ಮೊಹಮ್ಮದ್ ಖಲೀಲ್‌ ದಂಪತಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಡಿಸೆಂಬರ್‌ 18ರಂದು

ಬ್ರಹ್ಮಾವರ :ಮೂರು ಮಕ್ಕಳೊಂದಿಗೆ ತಾಯಿ ನಾಪತ್ತೆ.!? Read More »

ಕರಾವಳಿ

ಗುಂಡ್ಯ: ಅಕ್ರಮ ಮರ ಸಾಗಾಟ ➤ ಲಾರಿ ಸಹಿತ ಓರ್ವ ಸೆರೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಡಿ.21: ಅಕ್ರಮವಾಗಿ ಮರ ಸಾಗಾಟದಲ್ಲಿ ತೊಡಗಿದ್ದ ಓರ್ವನ ಸಹಿತ ಲಾರಿ ಹಾಗೂ ಮರವನ್ನು ಅರಣ್ಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಉಪ್ಪಿನಂಗಡಿ ಸಮೀಪದ ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ಪ್ರಕರಣ ಪತ್ತೆ ಹಚ್ಚಿದ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಿಸಿ ಆರೋಪಿಯನ್ನು ಬಂಧಿಸಿದೆ. ಬಂಧಿತನನ್ನು ಸಕಲೇಶಪುರದ ನಿವಾಸಿ ಉಣ್ಣಿಕೃಷ್ಣನ್ ಎಂದು ತಿಳಿದು ಬಂದಿದ್ದು, ಈತ ಸಕಲೇಶಪುರದಿಂದ ಮಂಗಳೂರಿಗೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಎನ್ನಲಾಗಿದೆ. ಕಾರ್ಯಾಚರಣೆಯಲ್ಲಿ ಕೊಕ್ಕಡ ಶಾಖೆಯ ಉಪವಲಯ ಅರಣ್ಯಾಧಿಕಾರಿ ಕೆ.ಆರ್. ಅಶೋಕ್,

ಗುಂಡ್ಯ: ಅಕ್ರಮ ಮರ ಸಾಗಾಟ ➤ ಲಾರಿ ಸಹಿತ ಓರ್ವ ಸೆರೆ Read More »

ಕರಾವಳಿ, ಕ್ರೈಮ್ ನ್ಯೂಸ್

ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಪ್ರವೇಶಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.18:ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ, ಮೈಸೂರಿನಲ್ಲಿ ಪ್ರಸ್ತುತ ಸಾಲಿನ ಎಂ.ಟೆಕ್ ಇನ್ ಟೂಲ್ ಇಂಜೀನಿಯರಿಂಗ್ ಕೋರ್ಸ್‍ಗಾಗಿ ಬಿ.ಇ., – ಮೆಕ್ಯಾನಿಕಲ್/ ಇಂಡಸ್ಟ್ರೀಯಲ್ ಪ್ರೋಡಕ್ಷನ್/ ಆಟೋ ಮೊಬೈಲ್/ ಮೇರಿನ್/ ಆಟೋಮೇಷನ್ ಮತ್ತು ರೋಬೋಟಿಕ್ಸ್ ಇಂಜಿನಿಯರಿಂಗ್ ಮುಂತಾದವುಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಂದ ಎ.ಐ.ಸಿ.ಟಿ.ಇ ಮತ್ತು ವಿ.ಟಿ.ಯು ಇಂದ ಅನುಮೋದನೆ ಪಡೆದ ಎರಡು ವರ್ಷ ಅವಧಿಯ ಎಂ.ಟೆಕ್ ಇನ್ ಟೂಲ್ ಇಂಜಿನೀಯರಿಂಗ್ ಪ್ರವೇಶಕ್ಕೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸಂಸ್ಥೆಯ ವತಿಯಿಂದ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕ್ಯಾಂಪಸ್ ಸಂದರ್ಶನವನ್ನು

ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಪ್ರವೇಶಕ್ಕೆ ಅರ್ಜಿ ಆಹ್ವಾನ Read More »

ಕರಾವಳಿ, ಕರ್ನಾಟಕ

ಇಂಡಿಯನ್ ಎಕ್ಸಲೆನ್ಸಿ ರಾಷ್ಟ್ರಪ್ರಶಸ್ತಿಗೆ ಕಡಬದ ದಿಲೀಪ್ ಆಯ್ಕೆ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಡಿ.18: ಕನ್ನಡ, ಮಲಯಾಳಂ, ತುಳು ಭಾಷೆಗಳಲ್ಲಿ ಕವಿತೆ ಮತ್ತು ಕಥೆಗಳನ್ನು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆಗೈದಿರುವ ಡಿವಿಕೆ ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡಿರುವ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು ದಿಲೀಪ್ ವೇದಿಕ್ ಕಡಬ ಅವರು ಪ್ರತಿಷ್ಠಿತ ಇಂಡಿಯನ್ ಬುಕ್ ಆಫ್ ರೆಕಾಡ್ರ್ಸ್ ವತಿಯಿಂದ ನೀಡಲಾಗುವ ಇಂಡಿಯನ್ ಎಕ್ಸಲೆನ್ಸಿ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.   ಇವರು ಇವರೆಗೆ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದು, 2021ರ

ಇಂಡಿಯನ್ ಎಕ್ಸಲೆನ್ಸಿ ರಾಷ್ಟ್ರಪ್ರಶಸ್ತಿಗೆ ಕಡಬದ ದಿಲೀಪ್ ಆಯ್ಕೆ Read More »

ಕರಾವಳಿ

ಮೂಡುಬಿದಿರೆ :ಅಪರಾಧ ತಡೆಗೆ ಪೇಟೆಯಲ್ಲಿ ವಾಹನ ಜಾಥಾ

(ನ್ಯೂಸ್ ಕಡಬ) newskadaba.com ಮೂಡುಬಿದಿರೆ , ಡಿ.18:ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೂಡುಬಿದಿರೆ ಪೊಲೀಸ್ ಠಾಣೆಯ ನೇತೃತ್ವದಲ್ಲಿ ಆಟೋ ರಿಕ್ಷಾ ಚಾಲಕ ಮತ್ತು ಮಾಲಕರು ಹಾಗೂ ಪೊಲೀಸರಿಂದ ಮೂಡುಬಿದಿರೆ ಪೇಟೆಯಲ್ಲಿ ವಾಹನ ಜಾಥಾ ನಡೆಯಿತು.   ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಬಿ.ಎಸ್ .ದಿನೇಶ್ ಕುಮಾರ್, ಉಪ ನಿರೀಕ್ಷಕ ಸುದೀಪ್, ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಜಯರಾಮ್ ರಾವ್ , ಉಪಾಧ್ಯಕ್ಷಗಳಾದ ವಿಶ್ವನಾಥ ಬಿ.ಎ, ನಾರಾಯಣ, ಕಾರ್ಯದರ್ಶಿ ಆನಂದ ಪೂಜಾರಿ ಸಹಿತ

ಮೂಡುಬಿದಿರೆ :ಅಪರಾಧ ತಡೆಗೆ ಪೇಟೆಯಲ್ಲಿ ವಾಹನ ಜಾಥಾ Read More »

ಕರಾವಳಿ

ರಾಷ್ಟ್ರೀಯ ಒಲಿಂಪಿಯಾಡ್ ನಲ್ಲಿ ಕಡಬದ ಪೋರನಿಗೆ ದ್ವಿತೀಯ ರ್‍ಯಾಂಕ್

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ.18: ದೆಹಲಿಯ ಆರೆಂಜ್ ಗ್ಲೋಬಲ್ ಒಲಿಂಪಿಯಾಡ್ ಅವರು 2019-20 ಶೈಕ್ಷಣಿಕ ಸಾಲಿನಲ್ಲಿ ನಡೆಸಿದ ರಾಷ್ಟ್ರೀಯ ಒಲಿಂಪಿಯಾಡ್ ಪರೀಕ್ಷೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿ ಯತಿನ್ ಬಿ.ಎಸ್ ರಾಷ್ಟ್ರ ಮಟ್ಟದ ವಿಜ್ಞಾನ ವಿಭಾಗದ ಸ್ಪರ್ಧೆಯಲ್ಲಿ ದ್ವಿತೀಯ ರ್‍ಯಾಂಕ್ ಪಡೆದಿದ್ದಾನೆ. ಈ ಪ್ರಶಸ್ತಿ ರೂ. 40,000 ನಗದು ಹಾಗೂ ಪ್ರಶಸ್ತಿ ಪತ್ರವನ್ನು ಹೊಂದಿದೆ.     ಇವರು ಕಡಬ ನಿವಾಸಿ ನಿವೃತ್ತ ಯೋಧ ಸೇಸಪ್ಪ ಗೌಡ ಮತ್ತು ಪುತ್ತೂರು ಠಾಣೆಯ

ರಾಷ್ಟ್ರೀಯ ಒಲಿಂಪಿಯಾಡ್ ನಲ್ಲಿ ಕಡಬದ ಪೋರನಿಗೆ ದ್ವಿತೀಯ ರ್‍ಯಾಂಕ್ Read More »

ಕರಾವಳಿ

ಆತ್ಮ ನಿರ್ಭರ ಭಾರತ್ ಯೋಜನೆ ➤ ಜಿಲ್ಲಾ ಸಂಪನ್ಮೂಲ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.18: ಆತ್ಮ ನಿರ್ಭರ ಭಾರತ ಅಭಿಯಾನದ ಭಾಗವಾಗಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣ ಉದ್ದಿಮೆಗಳ ಮಂತ್ರಾಲಯವು ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯನ್ನು ಹೊಸದಾಗಿ ಪ್ರಾರಂಭಿಸಲಾಗಿದ್ದು, ಯೋಜನೆಯ ಅನುಷ್ಠಾನಕ್ಕೆ ಜಿಲ್ಲಾ ಸಂಪನ್ಮೂಲ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.   ಅರ್ಜಿ ಸಲ್ಲಿಸಲು ಡಿಸೆಂಬರ್ 28 ರೊಳಗೆ ಕೊನೆಯ ದಿನ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿ ಅಥವಾ ತಾಲೂಕು ಸಹಾಯಕ ಕೃಷಿ

ಆತ್ಮ ನಿರ್ಭರ ಭಾರತ್ ಯೋಜನೆ ➤ ಜಿಲ್ಲಾ ಸಂಪನ್ಮೂಲ ಹುದ್ದೆಗೆ ಅರ್ಜಿ ಆಹ್ವಾನ Read More »

ಕರಾವಳಿ

ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆ ➤ ಪಂಜದ ಕ್ರಿಯೇಟಿವ್ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ರಾಷ್ಟ್ರ ಪ್ರಶಸ್ತಿಯ ಗರಿ

(ನ್ಯೂಸ್ ಕಡಬ) newskadaba.com ಪಂಜ, ಡಿ.18: ಕೇರ್ ಟ್ರಸ್ಟ್( ರಿ )ಪ್ರೈಮ್ ಎಜುಕೇಶನ್ ತಮಿಳುನಾಡು, ಇದರ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಆನ್ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ಪಂಜದ ಕ್ರಿಯೇಟಿವ್ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ಮತ್ತೊಮ್ಮೆ ಪ್ರಶಸ್ತಿ ಪಡೆದು ಹೆಮ್ಮೆ ಗರಿ ಮೂಡಿಸಿದ್ದಾರೆ. ಪ್ರೌಢ ವಿಭಾಗ: ವಿದ್ಯಾರ್ಥಿಗಳಾದ ,ಅಭಿನ್ ಗೌಡ ಪ್ರಥಮ: ಸೈಂಟ್ ಜೋಸೆಫ್ ಪ್ರೌಢಶಾಲೆ ಸುಳ್ಯ. ಅಭಿಜ್ಞಾ ಪಿ.ಎಸ್ :ದ್ವಿತೀಯ :ಸೈಂಟ್ ಆನ್ಸ್ ಪ್ರೌಢಶಾಲೆ ಕಡಬ. ಪ್ರಾಥಮಿಕ ವಿಭಾಗ: ಅನ್ವಿತಾ ಸಿ-ಪ್ರಥಮ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ

ರಾಷ್ಟ್ರೀಯ ಮಟ್ಟದ ಚಿತ್ರಕಲಾ ಸ್ಪರ್ಧೆ ➤ ಪಂಜದ ಕ್ರಿಯೇಟಿವ್ ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ರಾಷ್ಟ್ರ ಪ್ರಶಸ್ತಿಯ ಗರಿ Read More »

ಕರಾವಳಿ
Scroll to Top