ನ್ಯೂಸ್ ಕಡಬ

ಮಂಗಳೂರು: ‘ಜುಲೇಖಾ ಯೆನೆಪೋಯ’ ಸಂಸ್ಥೆಯ ಸಾಧನೆ      ಮೊದಲ ಬಾರಿಗೆ ಮೆದುಳಿನ ಲಿಂಪೋಮಾ ಕಾಯಿಲೆಗೆ ಸ್ವಅಸ್ಥಿ ಮಜ್ಜಿಯ ಕಸಿ 

(ನ್ಯೂಸ್ ಕಡಬ) newskadaba.c0m ಮಂಗಳೂರು, ಆ. 21.  ನಗರದಲ್ಲಿ ಇದೇ ಮೊದಲ ಬಾರಿಗೆ ಮೆದುಳಿನ ಲಿಂಪೋಮಾ ಕಾಯಿಲೆಗೆ ಸ್ವಅಸ್ಥಿ ಮಜ್ಜಿಯ ಕಸಿಯನ್ನು (ಆಟೋಲೋಗಸ್ ಟ್ರಾನ್ಸ್ ಪ್ಲಾಂಟ್) ದೇರಳಕಟ್ಟೆಯ ಜುಲೇಖಾ ಯೆನೆಪೋಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಖ್ಯಾತ ರಕ್ತ ಶಾಸ್ತ್ರಜ್ಞ, ಡಾ| ರಾಜೇಶ್ ಕೃಷ್ಣ ಅವರ ನೇತೃತ್ವದಲ್ಲಿ ನಡೆಸಲಾಯಿತು. ಕದ್ರಿ ಮೂಲದ 59 ವಯಸ್ಸಿನ ವ್ಯಕ್ತಿಯೋರ್ವರು ಮೆದುಳಿನ ಲಿಂಪೋಮಾ ಕಾಯಿಲೆಗೆ ಕೀಮೋಥೆರಪಿಯನ್ನು ಪಡೆಯುತ್ತಿದ್ದರು. ಜುಲೇಖಾ ಯೆನೆಪೋಯ ಆಸ್ಪತ್ರೆಗೆ ಬಂದ ಈ ವ್ಯಕ್ತಿಯನ್ನು ಸ್ವಅಸ್ಥಿ ಮಜ್ಜಿ ಕಸಿಗೆ ಒಳಪಡಿಸಲು ನಿರ್ಧರಿಸಲಾಯಿತು. ಅವರ […]

ಮಂಗಳೂರು: ‘ಜುಲೇಖಾ ಯೆನೆಪೋಯ’ ಸಂಸ್ಥೆಯ ಸಾಧನೆ      ಮೊದಲ ಬಾರಿಗೆ ಮೆದುಳಿನ ಲಿಂಪೋಮಾ ಕಾಯಿಲೆಗೆ ಸ್ವಅಸ್ಥಿ ಮಜ್ಜಿಯ ಕಸಿ  Read More »

ಕರಾವಳಿ

ಹಿಂದಿನ ನಿಯಮಗಳನ್ನು ಅನುಸರಿಸುವಂತೆ ಆಗ್ರಹ   ಎನ್ ಎಸ್ ಯುಐ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ

(ನ್ಯೂಸ್ ಕಡಬ) newskadaba.c0m ಕುಂದಾಪುರ, ಆ. 21.  ಈ ಹಿಂದೆ ಅನುಸರಿದ ನಿಯಮಗಳನ್ನೇ ಕಾಲೇಜಿನಲ್ಲಿ ಮುಂದುವರೆಸುವಂತೆ ಆಗ್ರಹಿಸಿ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ (ಎನ್‌ ಎಸ್‌ ಯುಐ) ನೇತೃತ್ವದಲ್ಲಿ ಕಾಲೇಜಿನ ಮುಂಭಾಗದ ಗೇಟ್ ಎದುರಿನ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭ ಮಾತನಾಡಿದ ವಿದ್ಯಾರ್ಥಿನಿ ಸ್ವಾತಿ ಪೂಜಾರಿ, ಕಾಲೇಜಿನಲ್ಲಿ ಯಾವುದೇ ಪಠ್ಯೇತರ ಚಟುವಟಿಕೆಗಳಿಗೆ ಪೂರಕವಾದ ಬೆಂಬಲ ಸಿಗುತ್ತಿಲ್ಲ. ಅಲ್ಲದೇ ಏನೇ ಮಾಡುವುದಿದ್ದರೂ ವಿದ್ಯಾರ್ಥಿಗಳೇ ಕೈಯಿಂದ ಹಣ ಹಾಕಿ ಮಾಡಬೇಕಾಗಿದೆ. ಕಾಲೇಜಿನಿಂದಲೇ ಹಿಂದಿನಂತೆ

ಹಿಂದಿನ ನಿಯಮಗಳನ್ನು ಅನುಸರಿಸುವಂತೆ ಆಗ್ರಹ   ಎನ್ ಎಸ್ ಯುಐ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ Read More »

ಕರಾವಳಿ

ಲೋಕಾಯುಕ್ತರಿಂದ ಕೆರೆಗಳ ಪರಿಶೀಲನೆ ಕಾರ್ಯ             ಒತ್ತುವರಿ ತೆರವುಗೊಳಿಸುವಂತೆ ಆದೇಶ

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 21.  ಮಹದೇವಪುರ ವಲಯದ ಕೆರೆ ಕಳಪೆ ನಿರ್ವಹಣೆ ಕುರಿತು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅವರು ಮಂಗಳವಾರ ಕೆರೆ ಪರಿಶೀಲನೆ ನಡೆಸಿದ್ದು, ಒತ್ತುವರಿ ತೆರವು ಮಾಡಿ ತಿಂಗಳೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಸಂಬಂಧ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯ ಭಾಗವಾಗಿ ಲೋಕಾಯುಕ್ತರು, ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಕೆ.ಎನ್‌.ಫಣೀಂದ್ರ ಮತ್ತು ಬಿ.ವೀರಪ್ಪ ಅವರು ನಗರದ ವಿಭೂತಿಕೆರೆ ಮತ್ತು ದೊಡ್ಡನೆಕ್ಕುಂದಿ ಕೆರೆಗಳಿಗೆ

ಲೋಕಾಯುಕ್ತರಿಂದ ಕೆರೆಗಳ ಪರಿಶೀಲನೆ ಕಾರ್ಯ             ಒತ್ತುವರಿ ತೆರವುಗೊಳಿಸುವಂತೆ ಆದೇಶ Read More »

ಕರ್ನಾಟಕ

’ವಚನ ದರ್ಶನ’ ಪುಸ್ತಕ ಬಿಡುಗಡೆ ವಿರೋಧ       ಪ್ರಗತಿಪರ ಲಿಂಗಾಯುತ ನಾಯಕರ ಪ್ರತಿಭಟನೆ    

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 21.  ವಿವಾದಿತ ಪುಸ್ತಕ ವಚನ ದರ್ಶನ ಬಿಡುಗಡೆ ವಿರೋಧಿಸಿ ಬೆಂಗಳೂರಿನಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. ಭಾರತೀಯ ವಿದ್ಯಾಭವನದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹ ಸರಕಾರ್ಯವಾಹ ಮುಕುಂದ ಸಿ.ಆರ್ ಅವರು ಸಂಜೆ 6 ಗಂಟೆಗೆ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಪುಸ್ತಕ ಬಿಡುಗಡೆ ವಿರೋಧಿಸಿ ಪ್ರಗತಿಪರ ಲಿಂಗಾಯತ ನಾಯಕರು ನಗರದ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದರು.                                                                                           

’ವಚನ ದರ್ಶನ’ ಪುಸ್ತಕ ಬಿಡುಗಡೆ ವಿರೋಧ       ಪ್ರಗತಿಪರ ಲಿಂಗಾಯುತ ನಾಯಕರ ಪ್ರತಿಭಟನೆ     Read More »

ಕರ್ನಾಟಕ

ಐಷಾರಾಮಿ ಪ್ರದೇಶಗಳನ್ನು ಗುರಿಯಾಗಿಸಿ ಖತರ್ನಾಕ್ ಗ್ಯಾಂಗ್ ದರೋಡೆ..!     ಆರೋಪಿಗಳು ಅರೆಸ್ಟ್..!

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 21.  ನಗರದ ಐಷಾರಾಮಿ ಪ್ರದೇಶಗಳಲ್ಲಿನ ಮನೆಗಳನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ವೊಂದನ್ನು ಇಂದಿರಾನಗರ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಗಳನ್ನು ಮುರಳಿ (38), ಸೆಂಥಿಲ್ (50), ಮೂರ್ತಿ (49) ಮತ್ತು ಜಾನ್ (35) ಎಂದು ಗುರುತಿಸಲಾಗಿದೆ. ಆರೋಪಿಗಳೆಲ್ಲರೂ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯವರಾಗಿದ್ದು, ಕಳ್ಳತನ ಮಾಡಲು ಬೆಂಗಳೂರಿಗೆ ಬರುತ್ತಿದ್ದರು ಎನ್ನಲಾಗಿದೆ.                                                       

ಐಷಾರಾಮಿ ಪ್ರದೇಶಗಳನ್ನು ಗುರಿಯಾಗಿಸಿ ಖತರ್ನಾಕ್ ಗ್ಯಾಂಗ್ ದರೋಡೆ..!     ಆರೋಪಿಗಳು ಅರೆಸ್ಟ್..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ವೈದ್ಯರ ಬೇಡಿಕೆಗಳ ಅಧ್ಯಯನಕ್ಕೆ ಕಾರ್ಯಪಡೆ ರಚನೆ – ಸಚಿವ ದಿನೇಶ್ ಗುಂಡುರಾವ್

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 21. ದೇಶದಾದ್ಯಂತ ಮಹಿಳೆಯರ ಮೇಲಿನ ದೌರ್ಜನ್ಯ ದಿನನಿತ್ಯ ಹೆಚ್ಚುತಲೇ ಇದೆ. ಇತ್ತೀಚೆಗೆ ತರಬೇತಿ ನಿರತ ವೈದ್ಯೆಯನ್ನು ಸಾಮೂಹಿಕ ಅತ್ಯಾಚಾರವೆಸಗಿ ಕೊಲೆ ನಡೆಸಿದ ಘಟನೆಗೆ ಸಂಬಂಧಿಸಿ, ರಾಜ್ಯದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ರಕ್ಷಣೆ ನೀಡುವ ಉದ್ದೇಶದಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಪಡೆಯಲು ಕಾರ್ಯಪಡೆಯೊಂದನ್ನು ರಚಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ. ಕೊಲ್ಕತ್ತಾ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಘಟನೆಯ ಹಿನ್ನೆಲೆಯಲ್ಲಿ ರಾಜ್ಯದ

ವೈದ್ಯರ ಬೇಡಿಕೆಗಳ ಅಧ್ಯಯನಕ್ಕೆ ಕಾರ್ಯಪಡೆ ರಚನೆ – ಸಚಿವ ದಿನೇಶ್ ಗುಂಡುರಾವ್ Read More »

ಕರ್ನಾಟಕ

ಆಟೋ ಮೇಲೆ ಉರುಳಿ ಬಿದ್ದ ಮರ   ಚಾಲಕ ಸೇರಿ ಇಬ್ಬರಿಗೆ ಗಾಯ        

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 21.  ಚಲಿಸುತ್ತಿದ್ದ ಆಟೋ ಮೇಲೆ ಮರವೊಂದು ಉರುಳಿ ಬಿದ್ದು, ಚಾಲಕ ಸೇರಿ ಇಬ್ಬರಿಗೆ ಗಾಯಗಳಾಗಿರುವ ಘಟನೆ ಸದಾಶಿವನಗರ ಪೊಲೀಸ್ ವ್ಯಾಪ್ತಿಯಲ್ಲಿ ನಡೆದಿದೆ. ಗಾಯಾಳು ಜೀವ ಎಂ ಅವರು ಖಾಸಗಿ ಆಸ್ಪತ್ರೆಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಟೋ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾನೆಂದು ತಿಳಿದುಬಂದಿದೆ. ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ನಡೆದಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆಟೋ ಮೇಲೆ ಉರುಳಿ ಬಿದ್ದ ಮರ   ಚಾಲಕ ಸೇರಿ ಇಬ್ಬರಿಗೆ ಗಾಯ         Read More »

ಕರ್ನಾಟಕ

ರಾಜ್ಯಪಾಲರ ಅವಮಾನಿಸಿದ ಕಾಂಗ್ರೆಸ್ ನಾಯಕರ ವಿರುದ್ಧ  ಪ್ರಕರಣ ದಾಖಲೆ..!     ಬಿಜೆಪಿ ಆಗ್ರಹ..!

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 21.  ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ವಿರುದ್ಧ ಜಾತಿ ನಿಂದನೆ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕರು ಮತ್ತು ಸದಸ್ಯರ ವಿರುದ್ಧ ಪ್ರಕರಣ ದಾಖಲಿಸುವಂತೆ ಬಿಜೆಪಿ ಆಗ್ರಹಿಸಿದೆ. ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ನಿಯೋಗವು, ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿತು. ದೂರಿನಲ್ಲಿ ರಾಜ್ಯಪಾಲರಿಗೆ ಬೆದರಿಕೆ ಮತ್ತು ನಿಂದನೆ ಮಾಡಿರುವ ಕಾಂಗ್ರೆಸ್ ಎಂಎಲ್ ಸಿ

ರಾಜ್ಯಪಾಲರ ಅವಮಾನಿಸಿದ ಕಾಂಗ್ರೆಸ್ ನಾಯಕರ ವಿರುದ್ಧ  ಪ್ರಕರಣ ದಾಖಲೆ..!     ಬಿಜೆಪಿ ಆಗ್ರಹ..! Read More »

ಕರ್ನಾಟಕ

ಬಿಹಾರದಲ್ಲಿ ಆರ್ ಜೆಡಿ ನಾಯಕನ ಮೇಲೆ ಗುಂಡಿನ ದಾಳಿ..!

(ನ್ಯೂಸ್ ಕಡಬ) newskadaba.c0m ಪಾಟ್ನಾ, ಆ. 21.  ಬೈಕ್‌ ನಲ್ಲಿ ಬಂದ ಗುಂಪೊಂದು ಮೊದಲ ಬಾರಿಗೆ ಚುನಾಯಿತರಾಗಿದ್ದ ಕೌನ್ಸಿಲರ್‌, ಆರ್‌ ಜೆಡಿ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬಿಹಾರ್‌ ನಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಸ್ಥಳೀಯ ಕೌನ್ಸಿಲರ್ ಪಂಕಜ್ ರೈ ಎಂದು ಗುರುತಿಸಲಾಗಿದೆ. ಪಂಕಜ್ ರೈ ಅವರು ಸಂಜೆ ತಮ್ಮ ನಿವಾಸದ ಬಳಿಯ ಬಟ್ಟೆ ಅಂಗಡಿಯಲ್ಲಿ ಕುಳಿತಿದ್ದರು. ಈ ವೇಳೆ ದ್ವಿಚಕ್ರವಾಹನದಲ್ಲಿ ಬಂದ ಮೂವರು, ಪಂಕಜ್ ರೈ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. 

ಬಿಹಾರದಲ್ಲಿ ಆರ್ ಜೆಡಿ ನಾಯಕನ ಮೇಲೆ ಗುಂಡಿನ ದಾಳಿ..! Read More »

ಕ್ರೈಮ್ ನ್ಯೂಸ್

ಮೈಸೂರು ದಸರಾ ಗಜಪಡೆಗೆ 1 ಕೋಟಿ ರೂ.ಗೂ ಹೆಚ್ಚು ಮೊತ್ತದ ವಿಮೆ ಸೌಲಭ್ಯ

(ನ್ಯೂಸ್ ಕಡಬ) newskadaba.c0m ಬೆಂಗಳೂರು, ಆ. 21.  ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳು ಇಂದು ಮೈಸೂರಿಗೆ ಆಗಮಿಸಲಿದೆ. ಈ ನಡುವೆ ಅರಣ್ಯ ಇಲಾಖೆಯು ಗಜಪಡೆ, ಸಿಬ್ಬಂದಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ 1 ಕೋಟಿ ರೂ.ಗೂ ಹೆಚ್ಚು ಮೊತ್ತದ ವಿಮೆ ಮಾಡಿಸಿದೆ. ಗಜಪಡೆಗೆ 87,50,000 ರೂ. ಮೊತ್ತದ ವಿಮೆ ಮಾಡಿಸಲಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ 1 ಕೋಟಿ ರೂಪಾಯಿ, ಸಾರ್ವಜನಿಕರು ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ 50 ಲಕ್ಷ ರೂ.

ಮೈಸೂರು ದಸರಾ ಗಜಪಡೆಗೆ 1 ಕೋಟಿ ರೂ.ಗೂ ಹೆಚ್ಚು ಮೊತ್ತದ ವಿಮೆ ಸೌಲಭ್ಯ Read More »

ಕರ್ನಾಟಕ
Scroll to Top