ಕಡಬ ನ್ಯೂಸ್

ಪಡುಬಿದ್ರೆ :ಕಾರು ಡಿಕ್ಕಿಯಾಗಿ ಬಸ್ ಗಾಗಿ ಕಾಯುತ್ತಿದ್ದ ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.26:ರಸ್ತೆ ಪಕ್ಕದಲ್ಲಿ ನಿಂತಿದ್ದ ಇಬ್ಬರಿಗೆ ಕಾರು ಡಿಕ್ಕಿಯಾಗಿ ಇಬ್ಬರೂ ಸಾವನ್ನಪ್ಪಿದ ಘಟನೆ ಪಡುಬಿದ್ರಿ ಸಮೀಪದ ಎರ್ಮಾಳಿನಲ್ಲಿ ನಡೆದಿದೆ.ಮೃತರನ್ನು ಎರ್ಮಾಳ್ ನಿವಾಸಿ ಸಂಜೀವ ದೇವಾಡಿಗ (45) ಮತ್ತು ಉತ್ತರ ಪ್ರದೇಶ ಮೂಲದ ಅರವಿಂದ್ (22) ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರಿನತ್ತ ಚಲಿಸುತ್ತಿದ್ದ ಮಾರುತಿ ಅಲ್ಟೋ ಕಾರು ರಾಷ್ಟ್ರೀಯ ಹೆದ್ದಾರಿ 66ರ ತೆಂಕ ಎರ್ಮಾಳ್ ಸರಕಾರಿ ಶಾಲೆ ಮುಂಭಾಗದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಇಬ್ಬರೂ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ […]

ಪಡುಬಿದ್ರೆ :ಕಾರು ಡಿಕ್ಕಿಯಾಗಿ ಬಸ್ ಗಾಗಿ ಕಾಯುತ್ತಿದ್ದ ಇಬ್ಬರು ಮೃತ್ಯು Read More »

ಕರಾವಳಿ

ಕಲ್ಲಡ್ಕ :ಕೈ ಕೊಟ್ಟ ಲಿಫ್ಟ್ ➤ 2 ಗಂಟೆ ಬಂಧಿಯಾದ ಬಾಲಕಿಯರು

(ನ್ಯೂಸ್ ಕಡಬ) newskadaba.com ಕಲ್ಲಡ್ಕ, ಡಿ.26: ವಸತಿ ಸಮುಚ್ಚಯ ವೊಂದರಿಂದ ದಿನೋಪಯೋಗಿ ವಸ್ತು ಖರೀದಿ ಮಾಡಲೆಂದು ಲಿಫ್ಟ್ ಮೂಲಕ ಕೆಳಗೆ ಇಳಿಯಲು ಹೋದ ನಾಲ್ವರು ಬಾಲಕಿಯರು ತಾಂತ್ರಿಕ ಲೋಪದಿಂದ ಲಿಫ್ಟ್ ನಲ್ಲೇ ಸುಮಾರು 2 ಗಂಟೆ ಬಾಕಿಯಾದ ಘಟನೆ ಕಲ್ಲಡ್ಕದಲ್ಲಿ ಶುಕ್ರವಾರ ನಡೆದಿದೆ.ಸಂಜೆ ಸುಮಾರು 5.30ರ ವೇಳೆ ಕಲ್ಲಡ್ಕದ ಖಾಸಗಿ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ನಾಲ್ವರು ಬಾಲಕಿಯರು ಲಿಫ್ಟ್ ನಲ್ಲಿರುವಾಗಲೇ ವಿದ್ಯುತ್ ಸಂಪರ್ಕ ಹೋಗಿದೆ. ಬಳಿಕ ವಿದ್ಯುತ್ ಬಂದರೂ ಲಿಫ್ಟ್ ಚಾಲೂ ಆಗಲಿಲ್ಲ.

ಕಲ್ಲಡ್ಕ :ಕೈ ಕೊಟ್ಟ ಲಿಫ್ಟ್ ➤ 2 ಗಂಟೆ ಬಂಧಿಯಾದ ಬಾಲಕಿಯರು Read More »

ಕರಾವಳಿ

ನಾವುಂದ :ಸರ್ಕಲ್ ಇನ್ಸ್ ಪೆಕ್ಟರ್ ರವರ ಮಿಂಚಿನ ಕಾರ್ಯಾಚರಣೆ ➤13 ಗೋವು ರಕ್ಷಣೆ,ಓರ್ವ ಗೋಕಳ್ಳನ ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ, ಡಿ.26: ಬೈಂದೂರು ತಾಲೂಕಿನ ನಾವುಂದದಲ್ಲಿ ಗೋ ಕಳ್ಳನೊಬ್ಬನನ್ನು ಬಂಧಿಸಿ, 13 ಗೋವುಗಳನ್ನು ರಕ್ಷಿಸಲಾಗಿದೆ. ಬೈಂದೂರು ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಕಾಯ್ಕಿಣಿ ಮಿಂಚಿನ ಕಾರ್ಯಾಚರಣೆ ಮೂಲಕ 13 ಗೋವು ರಕ್ಷಣೆ ಮಾಡುವಲ್ಲಿ ಸಫಲರಾಗಿದ್ದಾರೆ. ನಾವುಂದದಿಂದ ಜಲೀಲ್ ಎಂಬ ಗೋ ಕಳ್ಳನ ಗ್ಯಾಂಗ್, ಇನ್ಸು ಲೇಟರ್ ನಲ್ಲಿ ಹಲವು ದಿನಗಳಿಂದ ಅಕ್ರಮವಾಗಿ ಗೋ ಕಳ್ಳ ಸಾಗಣೆ ಮಾಡುತ್ತಿರುವ ಬಗ್ಗೆ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಮಾಹಿತಿ ಇತ್ತು.. ಒಂದು ತಿಂಗಳ ನಿರಂತರ ಈ ಬಗ್ಗೆ

ನಾವುಂದ :ಸರ್ಕಲ್ ಇನ್ಸ್ ಪೆಕ್ಟರ್ ರವರ ಮಿಂಚಿನ ಕಾರ್ಯಾಚರಣೆ ➤13 ಗೋವು ರಕ್ಷಣೆ,ಓರ್ವ ಗೋಕಳ್ಳನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ: ಶ್ರೀ ಕ್ಷೇತ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನಿಂಗಯ್ಯ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.26: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನಿಂಗಯ್ಯ ಅಧಿಕಾರ ಸ್ವೀಕರಿಸಿದರು.   ನಿಂಗಯ್ಯ ಅವರು ಈ ಹಿಂದೆ ಬೆಂಗಳೂರಿನ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಕಾರ್ಯ ನಿರ್ವಹಿಸುತಿದ್ದರು. ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದ ಈ ಹಿಂದಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್. ಅವರಿಂದ ಅಧಿಕಾರ ಸ್ವೀಕರಿಸಿದರು.ರವೀಂದ್ರ ಅವರು ಶ್ರೀ ಕಂಠೇಶ್ವರ ದೇವಸ್ಥಾನ ನಂಜನಗೂಡಿಗೆ ವರ್ಗಾವಣೆಗೊಂಡಿದ್ದಾರೆ. ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತಾ, ಕಚೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್, ಶಿಷ್ಟಾಚಾರ ವಿಭಾಗ

ಸುಬ್ರಹ್ಮಣ್ಯ: ಶ್ರೀ ಕ್ಷೇತ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನಿಂಗಯ್ಯ ಅಧಿಕಾರ ಸ್ವೀಕಾರ Read More »

ಕರಾವಳಿ

ಸುಬ್ರಹ್ಮಣ್ಯ : ಪ್ರಾಆರೋಗ್ಯ ಕೇಂದ್ರದ ವತಿಯಿಂದ ಕೊರೋನಾ ಪರೀಕ್ಷೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಡಿ.25: ಸುಬ್ರಹ್ಮಣ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯ ಸಂದರ್ಭದಲ್ಲಿ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಕೊರೋನಾ ಪರೀಕ್ಷೆ ಇಂದು ನಡೆಸಲಾಯಿತು.   ಇನ್ನು ಈ ಕೊವೀಡ್ ಪರೀಕ್ಷೆಯಲ್ಲಿ ಒಟ್ಟು 40 ಮಂದಿ ಭಾಘವಹಿಸಿ ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಕೋವಿಡ್ 19 ಮೊಬೈಲ್ ಟೀಮ್ ಸುಳ್ಯದ ಸಿಬ್ಬಂದಿ ಅಮಿತಾ, ಡಾಟಾ ಎಂಟ್ರಿ ಆಪರೇಟರ್ ನೀತಾ ಆಶಾ ಕಾರ್ಯಾಕರ್ತೆಯರಾದ ಹೇಮಲತಾ, ಸಾವಿತ್ರಿ ರತ್ನಾವತಿ ಸಹಕರಿಸಿದ್ದಾರೆ.

ಸುಬ್ರಹ್ಮಣ್ಯ : ಪ್ರಾಆರೋಗ್ಯ ಕೇಂದ್ರದ ವತಿಯಿಂದ ಕೊರೋನಾ ಪರೀಕ್ಷೆ Read More »

ಕರಾವಳಿ

ಮಂಗಳೂರು: ಸಂಗೀತ ಸಾಧಕ ಮುರಳೀಧರ ಕಾಮತ್ ಗೆ ‘ ರಂಗ ಚಾವಡಿ’ ಪ್ರಶಸ್ತಿ ಗೌರವ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.25: ತುಳು ಸಾಹಿತ್ಯ ಅಕಾಡೆಮಿ ಹಾಗೂ ರಂಗ ಚಾವಡಿ ಮಂಗಳೂರು ಆಶ್ರಯದಲ್ಲಿ ನಗರದ ಉರ್ವಸ್ಟೋರ್ ನಲ್ಲಿರುವ ತುಳುಭವನದ ಸಿರಿ ಚಾವಡಿ ವೇದಿಕೆಯಲ್ಲಿ “ರಂಗ ಚಾವಡಿ ಪ್ರಶಸ್ತಿ” ಪ್ರದಾನ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಿಜೆಪಿ ಕಾರ್ಯಕಾರಿಣಿ ಸದಸ್ಯ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ನೆರವೇರಿಸಿದರು. ಅಧ್ಯಕ್ಷತೆಯನ್ನು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಜಿ.ಕತ್ತಲ್ ಸಾರ್ ವಹಿಸಿದ್ದರು. ಈ ವೇಳೆ ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದ ಮುರಳೀಧರ ಕಾಮತ್ ಅವರಿಗೆ ‘ರಂಗಚಾವಡಿ ಗೌರವ’ ಪ್ರಶಸ್ತಿ

ಮಂಗಳೂರು: ಸಂಗೀತ ಸಾಧಕ ಮುರಳೀಧರ ಕಾಮತ್ ಗೆ ‘ ರಂಗ ಚಾವಡಿ’ ಪ್ರಶಸ್ತಿ ಗೌರವ Read More »

ಕರಾವಳಿ

ಗೋಕರ್ಣ : ಬೀಚಿನಲ್ಲಿ ಕೇರಳ ಮೂಲದ ವ್ಯಕ್ತಿ ಮೃತದೇಹ ಪತ್ತೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.25: ಕುಡ್ಲೆ ಸಮುದ್ರ ತೀರದಲ್ಲಿ ಗುರುವಾರ ಕೇರಳ ಮೂಲದ ವ್ಯಕ್ತಿಯೋರ್ವದ ಶವ ಪತ್ತೆಯಾಗಿದೆ. ವಿಶ್ವನಾಥ್ ಮೋಹನದಾಸ್ (28) ಎಂದು ಗುರುತಿಸಲಾಗಿದೆ. ತಮ್ಮ ಮೂರು ಜನ ಸ್ನೇಹಿತರೊಂದಿಗೆ ನಾಲ್ಕು ದಿನದ ಹಿಂದೆ ಗೋಕರ್ಣಕ್ಕೆ ಬಂದಿದ್ದರು. ಖಾಸಗಿ ರೆಸಾರ್ಟ್ ಒಂದರಲ್ಲಿ ವಾಸ್ತವ್ಯ ಮಾಡಿದ್ದರೆನ್ನೆಲಾಗಿದೆ. ವಿಶ್ವನಾಥ ಬುಧವಾರ ರಾತ್ರಿಯೇ ನೀರಿಗೆ ಇಳಿದಿದ್ದು ಗೆಳೆಯರ ಗಮನಕ್ಕೆ ಬಂದಿಲ್ಲ ಎನ್ನಲಾಗಿದೆ. ಗೋಕರ್ಣ ಪಿ.ಎಸ್.ಐ ನವೀನ್ ನಾಯ್ಕ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಶವದ ಮರಣೋತ್ತರ ಪರೀಕ್ಷೆ ನಡೆಸಿ

ಗೋಕರ್ಣ : ಬೀಚಿನಲ್ಲಿ ಕೇರಳ ಮೂಲದ ವ್ಯಕ್ತಿ ಮೃತದೇಹ ಪತ್ತೆ. Read More »

ಕರ್ನಾಟಕ

ಸಿನಿಮಾ‌ ನಿರ್ದೇಶಕ ಭರತ್ ಹಠಾತ್ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಡಿ.25: ಕಂಠಿ, ಸಾಹೇಬ ಸಿನಿಮಾಗಳನ್ನು ನಿರ್ದೇಶಿಸಿದ್ದ ಪ್ರತಿಭಾವಂತ ಯುವ ನಿರ್ದೇಶಕ ಎಸ್.ಭರತ್ ಹಠಾತ್ತನೆ ಸಾವಿಗೀಡಾಗಿದ್ದಾರೆ.   45 ವರ್ಷದ ಭರತ್‌ ಆರೋಗ್ಯ ಸಮಸ್ಯೆಯಿಂದಾಗಿ ಚಾಮರಾಜನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಕೊರೊನಾ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.ಶ್ರೀಮುರಳಿ, ರಮ್ಯಾ ನಟಿಸಿದ್ದ ಕಂಠಿ ಸಿನಿಮಾವನ್ನು ನಿರ್ದೇಶಿಸಿದ್ದ ಭರತ್ ಆ ನಂತರ ಬಹು ವರ್ಷಗಳ ಬಿಡುವಿನ ಬಳಿಕ 2017 ರಲ್ಲಿ ಸಾಹೇಬ ಸಿನಿಮಾ ನಿರ್ದೇಶಿಸಿದ್ದರು. ಸಿನಿಮಾ ಒಂದನ್ನೇ ವೃತ್ತಿ ಮಾಡಿಕೊಂಡಿದ್ದ

ಸಿನಿಮಾ‌ ನಿರ್ದೇಶಕ ಭರತ್ ಹಠಾತ್ ನಿಧನ Read More »

ಕರ್ನಾಟಕ

ಉಜಿರೆ ಬಾಲಕನ ಅಪಹರಣ ಪ್ರಕರಣ ➤ ತನ್ನ ವ್ಯವಹಾರದಲ್ಲಿ ಯಾರಿಗೂ ಹಣ ಬಾಕಿಯಿಲ್ಲ , ಸುಳ್ಳು ಮಾಹಿತಿ ಹರಡದಂತೆ ಬಿಜಾಯ್ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.25:ತನ್ನ ವ್ಯವಹಾರದಲ್ಲಿ ಯಾರಿಗೂ ಹಣ ಬಾಕಿಯಿಲ್ಲ. ಹಾಗೆಯೇ ಮಾಧ್ಯಮದಲ್ಲಿ ಸುಳ್ಳು ಮಾಹಿತಿ ಹರಡದಂತೆ ಅಪಹರಣಕೊಳಗಾಗಿದ್ದ ಉಜಿರೆಯ ಬಾಲಕನ ತಂದೆ ಬಿಜಾಯ್ ಮಾಧ್ಯಮಕ್ಕೆ ಮನವಿ ಮಾಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜಾಯ್, ನಾನು ಕೋಟ್ಯಂತರ ರೂಪಾಯಿ ಸಾಲವನ್ನು ಪಾವತಿಸಬೇಕಾಗಿದೆ ಎಂದು ಮಾಧ್ಯಮಗಳಲ್ಲಿ ಸುಳ್ಳು ಮಾಹಿತಿ ಹರಡುತ್ತಿದೆ. ನಾನು ಯಾರಿಗಾದರೂ ಹಣ ನೀಡಲು ಬಾಕಿಯಿದೆ ಎಂದು ಅವರು ಸಾಕ್ಷಿ ಸಮೇತ ಪೊಲೀಸರಿಗೆ ಸಾಬೀತುಪಡಿಸಿದರೆ ನಾನು ಮೊತ್ತವನ್ನು ಅವರಿಗೆ ನೀಡಲು ಸಿದ್ದನಿದ್ದೇನೆ ಎಂದು ತಿಳಿಸಿದರು. ಬಿಟ್ ಕಾಯಿನ್

ಉಜಿರೆ ಬಾಲಕನ ಅಪಹರಣ ಪ್ರಕರಣ ➤ ತನ್ನ ವ್ಯವಹಾರದಲ್ಲಿ ಯಾರಿಗೂ ಹಣ ಬಾಕಿಯಿಲ್ಲ , ಸುಳ್ಳು ಮಾಹಿತಿ ಹರಡದಂತೆ ಬಿಜಾಯ್ ಮನವಿ Read More »

ಕರಾವಳಿ

ರಂಗತ್ತಮಲೆ :ನಿಯಂತ್ರಣ ತಪ್ಪಿ ತೋಟಕ್ಕೆ ಬಿದ್ದ ಜೀಪು

(ನ್ಯೂಸ್ ಕಡಬ) newskadaba.com ಸುಳ್ಯ, ಡಿ.25: ಸುಳ್ಯದಿಂದ ಆಲೆಟ್ಟಿ ರಸ್ತೆ ಮೂಲಕ ರಂಗತ್ತಮಲೆಗೆ ಸಂಚರಿಸುತ್ತಿದ್ದ ಜೀಪು ಚಾಲಕನ ನಿಯಂತ್ರಣ ತಪ್ಪಿ ಆಲೆಟ್ಟಿ ರಾಧಾಕೃಷ್ಣ ರೈ ಯವರ ತೋಟಕ್ಕೆ ಬಿದ್ದ ಘಟನೆ ನಡೆದಿದೆ.   ಜೀಪಿನ ಚಾಲಕ ರವಿ ಸೇರಿ ೩ ಮಂದಿ ಪ್ರಯಾಣಿಕರು ಜೀಪಿನಲ್ಲಿದ್ದರು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸದೆ ಪ್ರಯಾಣಿಕರು ಪಾರಾಗಿದ್ದಾರೆ.

ರಂಗತ್ತಮಲೆ :ನಿಯಂತ್ರಣ ತಪ್ಪಿ ತೋಟಕ್ಕೆ ಬಿದ್ದ ಜೀಪು Read More »

ಕರಾವಳಿ
Scroll to Top