ಕಡಬ ನ್ಯೂಸ್

ಮಂಗಳೂರಿನಲ್ಲಿ ಟೇಕಾಫ್ ಗೆ ಸಿದ್ದವಾಗಿದ್ದ ಇಂಡಿಗೋ ವಿಮಾನದ ರೆಕ್ಕೆಗೆ ಹದ್ದು ಡಿಕ್ಕಿ

(ನ್ಯೂಸ್ ಕಡಬ) newskadaba.com. ಮಂಗಳೂರು, ಮೇ.25. ದಕ್ಷಿಣ ಕನ್ನಡ  ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟೇಕಾಫ್‌ಗೆ ಸಿದ್ದವಾಗಿದ್ದ ವಿಮಾನದ ರೆಕ್ಕೆಗೆ ಹಕ್ಕಿ ಡಿಕ್ಕಿ ಹೊಡೆದ ಘಟನೆ ಇಂದು ಬೆಳಗ್ಗೆ ನಡೆದಿದೆ.  ದುಬೈಗೆ ಹೊರಟಿದ್ದ ಇಂಡಿಗೋ ವಿಮಾನ ಟೇಕಾಪ್ ವೇಳೆ ರನ್ ವೇನಲ್ಲಿಯೇ ಘಟನೆ ನಡೆಯಿತು ಎಂದು ತಿಳಿದುಬಂದಿದೆ. ಬೆಳಗ್ಗೆ 8.15 ಕ್ಕೆ ಹೊರಟಿದ್ದ ವಿಮಾನವು ಟ್ಯಾಕ್ಸಿ ವೇ ದಾಟಿ ರನ್​ವೇನಲ್ಲಿ ಸಾಗುತ್ತಿದ್ದಂತೆ ವಿಮಾನದ ರೆಕ್ಕೆಯ ಭಾಗಕ್ಕೆ ಹದ್ದು ಡಿಕ್ಕಿ ಹೊಡೆದಿದೆ. ಅಪಾಯದ ಸೂಚನೆ ಅರಿತ ಪೈಲೆಟ್ ಎಟಿಸಿಗೆ […]

ಮಂಗಳೂರಿನಲ್ಲಿ ಟೇಕಾಫ್ ಗೆ ಸಿದ್ದವಾಗಿದ್ದ ಇಂಡಿಗೋ ವಿಮಾನದ ರೆಕ್ಕೆಗೆ ಹದ್ದು ಡಿಕ್ಕಿ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಉಡುಪಿ:ಮಗಳ ಮದುವೆ ಕಾರ್ಯಕ್ರಮಕ್ಕೆ ಬಂದ ತಂದೆ ಕಾಲು ಜಾರಿ ಬಿದ್ದು ಮೃತ್ಯು

 (ನ್ಯೂಸ್ ಕಡಬ) newskadaba.com. ಉಡುಪಿ, ಮೇ.24. ಮುಂಬೈಯಿಂದ ಮಗಳ ಮದುವೆ ಕಾರ್ಯಕ್ಕೆಂದು ಬಂದ ವ್ಯಕ್ತಿಯೊಬ್ಬರು ಹೊಟೇಲಿನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಘಟನೆ ನಡೆದಿದ್ದು ಮೃತ ವ್ಯಕ್ತಿಯನ್ನು ದೊಂಬಿವಿಲಿಯ ರಾಮಕೃಷ್ಣ ಮುದ್ದು ಶೆಟ್ಟಿ (68) ಎಂದು ಗುರುತಿಸಲಾಗಿದೆ. ಮೇ22ಕ್ಕೆ ಇವರ ಎರಡನೇ ಮಗಳಿಗೆ ಉಡುಪಿ ಶ್ಯಾಮಿಲಿ ಸಭಾಭವನದಲ್ಲಿ ಮದುವೆ ನಿಶ್ಚಯವಾಗಿದ್ದು,  ಈ ಸಂದರ್ಭದಲ್ಲಿ  ಮೇ19ರಂದು ಇಡೀ ಕುಟುಂಬ ಸಮೇತರಾಗಿ ಬಂದು ಉಡುಪಿಯ ಹೊಟೋಲ್‌ನಲ್ಲಿ  ಉಳಿದಿದ್ದರು, ಹೊಟೇಲ್ ರೂಮ್ ಒಳಗಡೆ ನಡೆಯುವಾಗ ಆಕಸ್ಮಿಕವಾಗಿ ತುಂಡಾದ

ಉಡುಪಿ:ಮಗಳ ಮದುವೆ ಕಾರ್ಯಕ್ರಮಕ್ಕೆ ಬಂದ ತಂದೆ ಕಾಲು ಜಾರಿ ಬಿದ್ದು ಮೃತ್ಯು Read More »

ಕರಾವಳಿ

ಟ್ರಕ್‌ ಮತ್ತು ಬಸ್‌ ಭೀಕರ ಅಪಘಾತ ➤ 6 ಮಂದಿ ಮೃತ್ಯು, 13 ಜನರು ಗಂಭೀರ

 (ನ್ಯೂಸ್ ಕಡಬ) newskadaba.com. ಮುಂಬೈ, ಮೇ.23. ಟ್ರಕ್‌ ಮತ್ತು ಬಸ್‌ ನಡುವೆ ನಡೆದ ಭೀಕರ ಅಪಘಾತದಲ್ಲಿ ಕನಿಷ್ಠ 6 ಮಂದಿ ಮೃತಪಟ್ಟಿರುವ ಘಟನೆ ಮಂಗಳವಾರ ಮುಂಬೈ-ನಾಗ್ಪುರ ಹಳೆಯ ಹೆದ್ದಾರಿಯಲ್ಲಿ ನಡೆದಿದೆ. ಮುಂಬೈ-ನಾಗ್ಪುರ ಹಳೆಯ ಹೆದ್ದಾರಿಯ ಬುಲ್ದಾನದ ಸಿಂಧಖೇಡ್ ರಾಜದಲ್ಲಿ ರಾಜ್ಯ ಬಸ್‌ಗೆ ಟ್ರಕ್ ಢಿಕ್ಕಿ ಹೊಡೆದು ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 13 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.  ಇನ್ನು ಈ ಅಪಘಾತದಲ್ಲಿ 13 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇದರಲ್ಲಿ

ಟ್ರಕ್‌ ಮತ್ತು ಬಸ್‌ ಭೀಕರ ಅಪಘಾತ ➤ 6 ಮಂದಿ ಮೃತ್ಯು, 13 ಜನರು ಗಂಭೀರ Read More »

ಕ್ರೈಮ್ ನ್ಯೂಸ್

ಬೆಳ್ತಂಗಡಿ: ಶಾಲಾ ಬಸ್ ಢಿಕ್ಕಿ – ಪಾದಚಾರಿ ಮೃತ್ಯು

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ, ಮೇ.23. ಶಾಲಾ ವಾಹನ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಗುರುವಾಯನಕೆರೆ ಎಂಬಲ್ಲಿ ನಡೆದಿದೆ. ಮೃತರನ್ನು ಕಸಬಾ ನೆಡಿಗುತ್ತು ನಿವಾಸಿ ಯೋಗೀಶ್ ಪೂಜಾರಿ (40) ಎಂದು ಗುರುತಿಸಲಾಗಿದೆ. ಶಾಲಾ ಬಸ್ ಬೆಳ್ತಂಗಡಿಯಿಂದ ಮದಡ್ಕ ಕಡೆಗೆ ಹೋಗುತ್ತಿತ್ತು. ಈ ವೇಳೆ ಬಸ್ ಯೋಗೀಶ್ ಪೂಜಾರಿ ಅವರಿಗೆ ಡಿಕ್ಕಿ ಹೊಡೆದು ಅವರ ಕಾಲಿನ ಮೇಲೆ ಹರಿದಿದೆ. ಗಂಭೀರವಾಗಿ ಗಾಯಗೊಂಡ ಯೋಗೀಶ್ ರವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.

ಬೆಳ್ತಂಗಡಿ: ಶಾಲಾ ಬಸ್ ಢಿಕ್ಕಿ – ಪಾದಚಾರಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಅ.15ರ ವರೆಗೆ ಮರಳುಗಾರಿಕೆ ನಿಷೇಧ

(ನ್ಯೂಸ್ ಕಡಬ) newskadaba.com.ಮಂಗಳೂರು, ಮೇ.23. ಸಿಆರ್‌ಝಡ್‌ ಪ್ರದೇಶದಲ್ಲಿ ಮರಳುಗಾರಿಕೆ ಮಳೆಗಾಲ ಆರಂಭವಾಗುವ ಎರಡು ತಿಂಗಳ ಮೊದಲೇ ಪೂರ್ಣಗೊಂಡಿದ್ದು, ಅಕ್ಟೋಬರ್‌ 15ರವರೆಗೆ ಮರಳುಗಾರಿಕೆ ನಿಷೇಧ ಜಾರಿಮಾಡಲಾಗಿದೆ. ಪರವಾನಿಗೆಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಮಾ. 4ಕ್ಕೇ ಸಿಆರ್‌ಝಡ್‌ ವ್ಯಾಪ್ತಿಯ ಮರಳು ದಿಣ್ಣೆಗಳಲ್ಲಿ ಮರಳುಗಾರಿಕೆ ನಿಂತಿದ್ದು, ಆ ಬಳಿಕ ಪರಿಸರ ಕ್ಲಿಯರೆನ್ಸ್‌ ಮತ್ತೆ ಪಡೆಯುವುದಕ್ಕೆ ಬೇಕಾದ ಬೆಥಮೆಟ್ರಿ ಸರ್ವೇ ಪೂರ್ಣಗೊಂಡಿದ್ದು, ಆದರೆ ವರದಿ ಬರಲು ಬಾಕಿ ಇದೆ. ಅಲ್ಲದೆ ಈ ಮಧ್ಯೆ ಚುನಾವಣ ಪ್ರಕ್ರಿಯೆಯೂ ಇದ್ದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ

ಮಂಗಳೂರು: ಅ.15ರ ವರೆಗೆ ಮರಳುಗಾರಿಕೆ ನಿಷೇಧ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಪೂರ್ವ ಮುಂಗಾರು ➤ಜಿಲ್ಲಾಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಲಿರುವ ಸಿಎಂ

(ನ್ಯೂಸ್ ಕಡಬ) newskadaba.com.ಬೆಂಗಳೂರು, ಮೇ.23. ರಾಜ್ಯದಲ್ಲಿ ಪೂರ್ವ ಮುಂಗಾರು ಮಳೆಯಿಂದ ಹಲವು ಕಡೆ ಸಾವು-ನೋವು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಇಂದು ಆಯಾ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲು ವಿಶೇಷ ಸಭೆ ನಡೆಸಲಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ವಿಧಾನಸೌಧದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳ ಜೊತೆ ವಿವಿಧ ಭಾಗಗಳಲ್ಲಿ ಮಳೆಯಿಂದ ಆದ ಅನಾಹುತಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ರಾಜ್ಯದಲ್ಲಿ ಪೂರ್ವ ಮುಂಗಾರು ➤ಜಿಲ್ಲಾಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಲಿರುವ ಸಿಎಂ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಬೆಂಗಳೂರು ಭಾರಿ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ

(ನ್ಯೂಸ್ ಕಡಬ) newskadaba.com.ಬೆಂಗಳೂರು, ಮೇ.22. ಟೆಕ್ಕಿ ಯುವತಿ ನೀರಲ್ಲಿ ಮುಳುಗಿ, ಮೃತಪಟ್ಟ ಬೆನ್ನಲ್ಲೇ, ಮತ್ತೋರ್ವ ಯುವಕ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ 31 ವರ್ಷದ ಯುವಕ ಲೋಕೇಶ್ ರಾಜಕಾಲುವೆಯಲ್ಲಿ ಕೊಚ್ಚಿಹೋಗಿ ಮೃತಪಟ್ಟಿದ್ದು, ಇಂದು ಬ್ಯಾಟರಾಯನಪುರದ ರಾಜಕಾಲುವೆ ಬಳಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕೆಪಿ ಅಗ್ರಹಾರದಲ್ಲಿ ಪೊಲೀಸ್ ಪ್ರಕರಣ ದಾಖಲಾಗಿದ್ದು, ಅವೈಜ್ಞಾನಿಕ ರಾಜಕಾಲುವೆ ಕಾಮಗಾರಿಯಿಂದಾಗಿ‌ಈ ದುರ್ಘಟನೆ ಸಂಭವಿಸಿರುವುದು ಬೆಳಕಿಗೆ ಬಂದಿದೆ. ನಿನ್ನೆ ಸಂಜೆ ಸುರಿದ

ಬೆಂಗಳೂರು ಭಾರಿ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ Read More »

ಕರ್ನಾಟಕ

ಕಾರ್ಕಳ: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಬೊಲೆರೋ ➤ ಆರು ಮಂದಿ ಗಂಭೀರ

(ನ್ಯೂಸ್ ಕಡಬ) newskadaba.com.ಕಾರ್ಕಳ, ಮೇ.22. ತೀರ್ಥಯಾತ್ರೆ ಮುಗಿಸಿ ಊರಿಗೆ ಹಿಂತಿರುಗುತ್ತಿದ್ದ ಪ್ರಯಾಣಿಕರು ಚಲ್ಲಿಸುತ್ತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ‌ಹೊಡೆದಿರುವ ಘಟನೆ ಅಂಡಾರು ಎಂಬಲ್ಲಿ ಸಂಭವಿಸಿದೆ. ಧರ್ಮಸ್ಥಳದಿಂದ ಕಾರವಾರದ ಕಡೆಗೆ ಹೋಗುತ್ತಿದ್ದ ಬೊಲೋರಾ ಜೀಪು ಬೆಳಗಿನ ಜಾವ 4.00ವೇಳೆಗೆ ಅಂಡಾರಿನಲ್ಲಿ ಮರವೊಂದಕ್ಕೆ‌ ಡಿಕ್ಕಿ ಹೊಡೆದಿದ್ದು, ಅದರಲ್ಲಿ ಇದ್ದ ಆರು ಮಂದಿ ಪ್ರಯಾಣಿಕರು ಗಂಭೀರ ಗಾಯಗೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದಿದ್ದ 108 ಆಂಬುಲೆನ್ಸ್ ನ ಸಿಬ್ಬಂದಿಯರು ಗಾಯಾಳುಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  ನಿನ್ನೆ

ಕಾರ್ಕಳ: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಬೊಲೆರೋ ➤ ಆರು ಮಂದಿ ಗಂಭೀರ Read More »

ಕರಾವಳಿ, ಕ್ರೈಮ್ ನ್ಯೂಸ್

ಗುಜರಾತ್‌ನ ಮಾಜಿ ಕೃಷಿ ಸಚಿವ ವಲ್ಲಭಭಾಯಿ ವಘಾಸಿಯಾ ದುರ್ಮರಣ

 (ನ್ಯೂಸ್ ಕಡಬ) newskadaba.com. ಗುಜರಾತ್‍ನ, ಮೇ.19. ರಸ್ತೆ ಅಪಘಾತದಲ್ಲಿ ಗುಜರಾತ್‍ನ ಮಾಜಿ ಕೃಷಿ ಸಚಿವ ವಲ್ಲಭಭಾಯಿ ವಘಾಸಿಯಾ(69) ಅವರು ದುರ್ಮರಣಕ್ಕಿಡಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ. ಗುರುವಾರ ರಾತ್ರಿ ತಮ್ಮ ಗ್ರಾಮದಿಂದ ಸಾವರಕುಂಡ್ಲಾಗೆ ಹಿಂತಿರುಗುತ್ತಿದ್ದಾಗ ಕಾರು ಬುಲ್ಡೋಜರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾದೆ ಮೃತಪಟ್ಟಿದ್ದಾರೆ ಎಂದು ವಂಡಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಪಘಾತದ ವಿಷಯ ತಿಳಿಯುತ್ತಿದ್ದಂತೆ ಪಕ್ಷದ ಮುಖಂಡರು ಹಾಗೂ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಆಗಮಿಸಿದರು. ವಲ್ಲಭಭಾಯಿ

ಗುಜರಾತ್‌ನ ಮಾಜಿ ಕೃಷಿ ಸಚಿವ ವಲ್ಲಭಭಾಯಿ ವಘಾಸಿಯಾ ದುರ್ಮರಣ Read More »

ಕರ್ನಾಟಕ

ಸುಪ್ರೀಂ ಕೋರ್ಟ್ ನ ನೂತನ ನ್ಯಾಯಮೂರ್ತಿಯಾಗಿ ಇಬ್ಬರು ಇಂದು ಪ್ರಮಾಣ ವಚನ ಸ್ವೀಕಾರ

(ನ್ಯೂಸ್ ಕಡಬ) newskadaba.com. ನವದೆಹಲಿ, ಮೇ.19.  ಸುಪ್ರೀಂ ಕೋರ್ಟ್  ನಲ್ಲಿ ಇಂದು ಇಬ್ಬರು ಹೊಸ ನ್ಯಾಯಾಧೀಶರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಆಂಧ್ರಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ಹಿರಿಯ ವಕೀಲ ಕೆ.ವಿ.ವಿಶ್ವನಾಥನ್ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನ್ಯಾಯಮೂರ್ತಿ ವಿಶ್ವನಾಥನ್ ಅವರು ಆಗಸ್ಟ್ 2030 ರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಮತ್ತು ಮೇ 24, 2031 ರವರೆಗೆ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಸುಪ್ರೀಂ ಕೋರ್ಟ್

ಸುಪ್ರೀಂ ಕೋರ್ಟ್ ನ ನೂತನ ನ್ಯಾಯಮೂರ್ತಿಯಾಗಿ ಇಬ್ಬರು ಇಂದು ಪ್ರಮಾಣ ವಚನ ಸ್ವೀಕಾರ Read More »

ಕರ್ನಾಟಕ
Scroll to Top