ಕಡಬ ನ್ಯೂಸ್

SDPI ಮುಖಂಡನ ಬರ್ಬರ ಹತ್ಯೆ: ಜಿಲ್ಲೆಯಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.21. SDPI ಮುಖಂಡ ಕಲಾಯಿ ಅಶ್ರಫ್ ಬರ್ಬರವಾಗಿ ಕೊಲೆಗೀಡಾದ ನಂತರ ಜಿಲ್ಲೆಯ ಅಲ್ಲಲ್ಲಿ ಕಲ್ಲು ತೂರಾಟ ನಡೆಯುತ್ತಿದ್ದು, ಶಾಂತಿಪ್ರಿಯರನ್ನು ಆತಂಕಕ್ಕೀಡುಮಾಡಿದೆ. ಕಳೆದ ಹಲವು ದಿನಗಳಿಂದ ಬೂದಿ ಮುಚ್ಚಿದ ಕೆಂಡದಂತಿದ್ದ ಕಲ್ಲಡ್ಕದಲ್ಲಿ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಸೂಚನೆ ನೀಡುತ್ತಿದ್ದಾಗ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ಸಂಗಡಿಗರು ಬಂದು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎರಡೂ ಕೋಮಿನ ಜನರು ಸೇರತೊಡಗಿದ್ದರಿಂದ ಪರಿಸ್ಥಿತಿ ಕೈ ಮೀರುವುದನ್ನರಿತ ಪೊಲೀಸರು ಲಾಠಿಚಾರ್ಜ್ ನಡೆಸಿ ಜನರನ್ನು ಚದುರಿಸಿದರು. ಅಶ್ರಫ್ […]

SDPI ಮುಖಂಡನ ಬರ್ಬರ ಹತ್ಯೆ: ಜಿಲ್ಲೆಯಲ್ಲಿ ಭುಗಿಲೆದ್ದ ಕೋಮು ಹಿಂಸಾಚಾರ Read More »

ಕರಾವಳಿ

ರಾಜ್ಯ ಸರಕಾರದಿಂದ ರೈತರ ಸಾಲಮನ್ನಾ ಘೋಷಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.21. ಸಹಕಾರಿ ಬ್ಯಾಂಕ್ ಗಳಲ್ಲಿ ರೈತರು ಪಡೆದಿದ್ದ 50 ಸಾವಿರ ರೂ. ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿಂದು ಘೋಷಿಸಿದ್ದಾರೆ. ಜೂ.20ರವರೆಗೆ ಪಡೆದುಕೊಂಡಿರುವ ಪ್ರತೀ ರೈತರ 50 ಸಾವಿರ ರೂ. ಸಾಲವನ್ನು ಮನ್ನಾ ಮಾಡಲಾಗುವುದು. ಇದರಿಂದಾಗಿ ಸುಮಾರು 22,27,506 ರೈತರು ಪ್ರಯೋಜನ ಪಡೆಯಲಿದ್ದಾರೆ. ಇದರಿಂದ ರಾಜ್ಯ ಸರಕಾರಕ್ಕೆ 8,165 ಕೋಟಿ ರೂ. ಹೊರೆ ಬೀಳಲಿದೆ ಎಂದವರು ಹೇಳಿದರು.

ರಾಜ್ಯ ಸರಕಾರದಿಂದ ರೈತರ ಸಾಲಮನ್ನಾ ಘೋಷಣೆ Read More »

ಕರ್ನಾಟಕ

ಎಸ್‌ಡಿಪಿಐ ಅಮ್ಮುಂಜೆ ವಲಯಾಧ್ಯಕ್ಷರ ಬರ್ಬರ ಕೊಲೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ.21. ಎಸ್‌ಡಿಪಿಐ ಅಮ್ಮುಂಜೆ ವಲಯಾಧ್ಯಕ್ಷ ಮಲ್ಲೂರು ಅಮ್ಮುಂಜೆಯ ಕಲಾಯಿ ನಿವಾಸಿ ಅಶ್ರಫ್(35) ಎಂಬವರನ್ನು ಮಾರಕಾಯುಧಗಳಿಂದ ಬರ್ಬರವಾಗಿ ಹತ್ಯೆಗೈದ ಘಟನೆ ಬೆಂಜನಪದವಿನ ಕರಾವಳಿ ಕಾಲೇಜು ಬಳಿ ಇಂದು ಬೆಳಗ್ಗೆ ನಡೆದಿದೆ. ಕಲಾಯಿಯಲ್ಲಿ ರಿಕ್ಷಾ ಚಾಲಕರಾಗಿದ್ದ ಅಶ್ರಫ್ ಎಸ್‌ಡಿಪಿಐ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಇಂದು ಬೆಳಗ್ಗೆ ಕಲಾಯಿಯಲ್ಲಿ ಧ್ವಜಾರೋಹಣ ನೆರೆವೇರಿಸಿದ ಬಳಿಕ ಹದಗೆಟ್ಟಿದ್ದ ಕಲಾಯಿ ರಸ್ತೆಯನ್ನು ಸಾರ್ವಜನಿಕರೊಂದಿಗೆ ಸೇರಿ ಶ್ರಮದಾನ ಮಾಡಿ, ನಂತರ ತನ್ನ ರಿಕ್ಷಾದಲ್ಲಿ ಬಾಡಿಗೆಗೆಂದು ಕಳ್ಳಿಗೆ ಗ್ರಾಮದ ಬೆಂಜನಪದವಿನ ಕರಾವಳಿ ಸೈಟ್

ಎಸ್‌ಡಿಪಿಐ ಅಮ್ಮುಂಜೆ ವಲಯಾಧ್ಯಕ್ಷರ ಬರ್ಬರ ಕೊಲೆ Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿ ಅಣ್ಣಾಮಲೈ…?

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.20. ಈ ಹಿಂದೆ ಉಡುಪಿ ಎಸ್ಪಿಯಾಗಿ ಪುಂಡು ಪೋಕರಿಗಳ ಹೆಡೆಮುರಿ ಕಟ್ಟಿದ್ದ ಪ್ರಸ್ತುತ ಚಿಕ್ಕಮಗಳೂರು ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಣ್ಣಾಮಲೈ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿ ನೇಮಕಗೊಳ್ಳುತ್ತಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಲಲ್ಲಿ ನಡೆಯುತ್ತಿರುವ ಕೋಮು ಸಂಘರ್ಷಗಳನ್ನು ತಡೆಯಲು ಹಾಗೂ ನೈಜ ಆರೋಪಿಗಳನ್ನು ಬಂಧಿಸಲು ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಹೇಳಿಕೊಂಡಿದ್ದ ವೀಡಿಯೋ ಇದೀಗ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ

ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಯಾಗಿ ಅಣ್ಣಾಮಲೈ…? Read More »

ಕರಾವಳಿ

ತುಂಬೆ: ತಲವಾರು ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.20. ಸ್ನೇಹಿತನೊಂದಿಗೆ ಬೈಕ್ ನಲ್ಲಿ ತೆರಳುತ್ತಿದ್ದ ಯುವಕನ ಮೇಲೆ ದುಷ್ಕರ್ಮಿಗಳು ತಲವಾರಿನಿಂದ ದಾಳಿ ನಡೆಸಿದ ಘಟನೆ ತುಂಬೆಯಲ್ಲಿ ಮಂಗಳವಾರ ಸಂಜೆ ನಡೆದಿದೆ. ತುಂಬೆ ನಿವಾಸಿ ಉಮರ್ ಎಂಬವರ ಪುತ್ರ ಉನೈಸ್ ಎಂಬಾತ ತನ್ನ ಗೆಳೆಯ ಫಯಾಝ್ ಜೊತೆಗೆ ಫರಂಗಿಪೇಟೆಯಿಂದ ತುಂಬೆಗೆ ತೆರಳುತ್ತಿದ್ದಾಗ ಬೈಕ್ ನಲ್ಲಿ ಹಿಂದಿನಿಂದ ಬಂದ ಇಬ್ಬರು ತಲವಾರು ಬೀಸಿದ್ದು, ಘಟನೆಯಿಂದ ಆಘಾತಕ್ಕೊಳಗಾಗಿರುವ ಉನೈಸ್ ರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲವಾರು ದಾಳಿ ನಡೆಸಿದ ದುಷ್ಕರ್ಮಿಗಳು ಕೂಡಲೇ ಸ್ಥಳದಿಂದ

ತುಂಬೆ: ತಲವಾರು ದಾಳಿ Read More »

ಕರಾವಳಿ

ಸರ್ವೆ: ಯುವಕ ಮಂಡಲದಿಂದ ಯೋಗಾಸನ ಮಾಹಿತಿ

(ನ್ಯೂಸ್ ಕಡಬ) newskadaba.com ಸವಣೂರು, ಜೂ.19. ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ ,ನೆಹರು ಯುವ ಕೇಂದ್ರ ಮಂಗಳೂರು, ಹಾಗೂ ಸರ್ವೆ ಷಣ್ಮುಖ ಯುವಕ ಮಂಡಲದ ಸಂಯುಕ್ತ ಆಶ್ರಯದಲ್ಲಿ ಸರ್ವೆ ಎಸ್.ಜಿ.ಎಂ.ಪ್ರೌಢಶಾಲೆಯಲ್ಲಿ ಯೋಗಾಸನ ಮಾಹಿತಿ ಕಾರ್ಯಾಗಾರ ನಡೆಯಿತು. ಕಾರ್ಯಕ್ರಮದ ಉದ್ಘಾಟಿಸಿದ ಎಸ್.ಜಿ.ಎಂ. ಪ್ರೌಢಶಾಲಾ ಮುಖ್ಯಗುರು ಶ್ರೀನಿವಾಸ್ ಹೆಚ್.ಬಿ, ಯೋಗದ ಅನಿವಾರ್ಯತೆ ಮತ್ತು ಸಂಘಟನೆಯ ಮಹತ್ವದ ಕುರಿತು ಮಾತನಾಡಿ ಷಣ್ಮುಖ ಯುವಕ ಮಂಡಲದ ಕೆಲಸ ಕಾರ್ಯಗಳ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದರು. ಸಂಪನ್ಮೂಲ ವ್ಯಕ್ತಿ ಜಯಂತ್ ವೈ ಮಾತನಾಡಿ, ಪತಂಜಲಿ

ಸರ್ವೆ: ಯುವಕ ಮಂಡಲದಿಂದ ಯೋಗಾಸನ ಮಾಹಿತಿ Read More »

ಕರಾವಳಿ

ಕಡಬ ಹೋಬಳಿ ಮಟ್ಟದ ಕೃಷಿ ಅಭಿಯಾನ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಸವಣೂರು, ಜೂ.19. ದ.ಕ. ಜಿಲ್ಲೆಯ ಕೃಷಿಕರು ಹೆಚ್ಚಾಗಿ ಸಹಕಾರಿ ಸಂಘಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಕೃಷಿಕರ ಹಿತದೃಷ್ಟಿಯಿಂದ ಸಹಕಾರಿ ಸಂಘಗಳು ಹೊಸ ಯೋಜನೆಗಳನ್ನು ರೂಪಿಸಿ, ಕೃಷಿಕರಿಗೆ ಸಹಕಾರಿಯಾಗಬೇಕೆಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು. ಅವರು ಜೂ.17ರಂದು ಸವಣೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಕರ್ನಾಟಕ ಸರಕಾರ ,ದ.ಕ.ಜಿ.ಪಂ ,ಕೃಷಿ ಇಲಾಖೆ ಇದರ ವತಿಯಿಂದ ನಡೆದ ಕಡಬ ಹೋಬಳಿಯ ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಕೃಷಿ ಅಭಿಯಾನÀ ಉದ್ಘಾಟಿಸಿ ಮಾತನಾಡಿದರು. ಇಂದಿನ

ಕಡಬ ಹೋಬಳಿ ಮಟ್ಟದ ಕೃಷಿ ಅಭಿಯಾನ ಉದ್ಘಾಟನೆ Read More »

ಕರಾವಳಿ

ಕಲ್ಲಡ್ಕ ಭಟ್ ವಿರುದ್ಧ ಸಚಿವರ ಹೇಳಿಕೆ ಸ್ವಾಗತಾರ್ಹ: ಕಡಬ ಬ್ಲಾಕ್ ಕಾಂಗ್ರೆಸ್

(ನ್ಯೂಸ್ ಕಡಬ) newskadaba.com ಕಡಬ, ಜೂ.19. ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಮತೀಯವಾದಿ ಶಕ್ತಿಗಳು ಧರ್ಮ ಧರ್ಮಗಳಲ್ಲಿ ಕಂದಕವನ್ನು ನಿರ್ಮಿಸಿ ಸಮಾಜಘಾತುಕ ಶಕ್ತಿಗಳು  ಕಾನೂನನ್ನು ಕೈಗೆತ್ತಿಕೊಂಡು ಜಿಲ್ಲೆಯಲ್ಲಿ ಅರಾಜಕತೆ ಸೃಷ್ಟಿಸುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲು ದ.ಕ. ಜಿಲ್ಲಾ ಪೋಲಿಸ್ ಅಧಿಕಾರಿಯಾವರಿಗೆ ಸೂಚನೆ ನೀಡಿರುವುದು ದ.ಕ. ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯುತ ಕೆಲಸವಾಗಿರುತ್ತದೆ. ಯಾವುದೇ ಮತೀಯವಾದಿ ಪಕ್ಷಗಳು ಗಲಭೆ ಅಶಾಂತಿಗೆ ಪ್ರಚೋದಿಸುವ ರೀತಿಯಲ್ಲಿ ಭಾಷಣದ ಮೂಲಕ ಹಾಗೂ ಮಾಧ್ಯಮಗಳ ಮೂಲಕ ಪ್ರೇರೆಪಿಸಿ ಕಾನೂನನ್ನು ಕೈಗೆತ್ತಿಕೊಳ್ಳುವ ಕ್ರಮಕ್ಕೆ ಒತ್ತು ನೀಡುವ

ಕಲ್ಲಡ್ಕ ಭಟ್ ವಿರುದ್ಧ ಸಚಿವರ ಹೇಳಿಕೆ ಸ್ವಾಗತಾರ್ಹ: ಕಡಬ ಬ್ಲಾಕ್ ಕಾಂಗ್ರೆಸ್ Read More »

ಕರಾವಳಿ

ಜಯ ಕರ್ನಾಟಕ, ವಿದ್ಯಾಮಾತಾ ಫೌಂಡೇಶನ್ ವತಿಯಿಂದ ವನಮಹೋತ್ಸವ

(ನ್ಯೂಸ್ ಕಡಬ) newskadaba.com ಸವಣೂರು, ಜೂ.19. ಪ್ರಕೃತಿ ರಕ್ಷಣೆ ನಮ್ಮೆಲ್ಲರ ಕರ್ತವ್ಯ,ಸ್ವಚ್ಚ ಪರಿಸರ ಉಳಿವಿಗೆ ಗಿಡಮರಗಳ ಪೋಷಣೆ ಅಗತ್ಯ ,ಈ ನಿಟ್ಟಿನಲ್ಲಿ ಎಲ್ಲರೂ ಪರಿಸರ ಪೂರಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೆಕು ಎಂದು ಕೆಯ್ಯೂರು ಜಯಕರ್ನಾಟಕ ಘಟಕದ ಗೌರವಾಧ್ಯಕ್ಷ ,ಕೆಯ್ಯೂರು ಗ್ರಾ.ಪಂ.ಸದಸ್ಯ ಎ.ಕೆ.ಜಯರಾಮ ರೈ ಹೇಳಿದರು. ಅವರು ಜೂ.18ರಂದು ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ದೇವರಕಾಡಿನಲ್ಲಿ ಜಯ ಕರ್ನಾಟಕ ,ವಿದ್ಯಾಮಾತಾ ಫೌಂಡೇಶನ್ ಬೆಂಗಳೂರು ಇದರ ವತಿಯಿಂದ ನಡೆದ ವರುಣ ಯಜ್ಞ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ವಿದ್ಯಾಮಾತಾ

ಜಯ ಕರ್ನಾಟಕ, ವಿದ್ಯಾಮಾತಾ ಫೌಂಡೇಶನ್ ವತಿಯಿಂದ ವನಮಹೋತ್ಸವ Read More »

ಕರಾವಳಿ
Scroll to Top