ಕಡಬ ನ್ಯೂಸ್

ಕೋರೆ ಮಾಲಿಕರ ಮೇಲೆ ರೌಡಿಗಳ ದಾಳಿ ►ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ರೌಡಿ ಬ್ಲೇಡ್ ಸಾದಿಕ್

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ.28. ಕೋರೆ ಮಾಲಿಕನೋರ್ವನ ಮೇಲೆ ರೌಡಿ ಬ್ಲೇಡ್ ಸಾದಿಕ್ ಹಾಗೂ ತಂಡ ದಾಳಿ ನಡೆಸಿದ ಘಟನೆ ಪುತ್ತೂರು ಠಾಣಾ ವ್ಯಾಪ್ತಿಯ ಕಬಕದಲ್ಲಿ ಬುಧವಾರ ಸಂಜೆ ನಡೆದಿದೆ. ಕಲ್ಲಂದಡ್ಕ ಕೋರೆ ಮಾಲಿಕ ಖಾದರ್ ಮೇಲೆ ಕಾರಿನಲ್ಲಿ ಬಂದ ವಿಟ್ಲದ ರೌಡಿ ಬ್ಲೇಡ್ ಸಾದಿಕ್ ತಂಡ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಬ್ಲೇಡ್ ಸಾದಿಕ್ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಆತನ ಐವರು ಸಹಚರರು ಐ20 ಕಾರಿನಲ್ಲಿ ಮಾಣಿ ಕಡೆ ಪರಾರಿಯಾಗಿದ್ದಾರೆ. ಗಾಯಾಳು ಖಾದರ್ ನನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಗೆ ದಾಖಲಿಸಲಾಗಿದೆ. […]

ಕೋರೆ ಮಾಲಿಕರ ಮೇಲೆ ರೌಡಿಗಳ ದಾಳಿ ►ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ರೌಡಿ ಬ್ಲೇಡ್ ಸಾದಿಕ್ Read More »

ಕರಾವಳಿ

ಮಗನಿಂದ ತಂದೆಯ ಬರ್ಬರ ಕೊಲೆ ►ಅರ್ಧ ಗಂಟೆ ತಂದೆಯನ್ನು ಕೊಚ್ಚಿದ ಮಗ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಜೂ.28. ಕುಡಿದ ಮತ್ತಿನಲ್ಲಿದ್ದ ಮಗನೋರ್ವ ತನ್ನ ತಂದೆಯನ್ನೇ ಬರ್ಬರವಾಗಿ ಕೊಚ್ಚಿ ಕೊಂದ ಘಟನೆ ಚಿಕ್ಕಮಗಳೂರಿನ ಮೈಲಿ ಮನೆ ಎಂಬಲ್ಲಿ ಬುಧವಾರದಂದು ನಡೆದಿದೆ. ಮೈಲಿ ಮನೆ ನಿವಾಸಿ ಕೃಷ್ಣ (60) ಎಂಬವರೇ ತನ್ನ ಮಗನಿಂದಲೇ ಕೊಲೆಯಾದ ನತದೃಷ್ಟ. ಮಗ ನಾಗ (35) ಎಂಬಾತ ಕುಡಿದ ಮತ್ತಿನಲ್ಲಿ ತನ್ನ ತಂದೆಯನ್ನು ೫೦ ಮೀಟರ್ ಅಟ್ಟಾಡಿಸಿಕೊಂಡು ಬಂದು ಅರ್ಧಗಂಟೆಗೂ ಹೆಚ್ಚು ಕಾಲ ತಂದೆಯ ದೇಹವನ್ನು ಕೊಚ್ಚಿದ್ದು, ಬರ್ಬರವಾಗಿ ಕೊಲೆಗೈದಿದ್ದಾನೆ. ಘಟನೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಸ್ಥಳಕ್ಕೆ

ಮಗನಿಂದ ತಂದೆಯ ಬರ್ಬರ ಕೊಲೆ ►ಅರ್ಧ ಗಂಟೆ ತಂದೆಯನ್ನು ಕೊಚ್ಚಿದ ಮಗ Read More »

ಕರ್ನಾಟಕ

ಉಳ್ಳಾಲ: ಯುವಕರಿಬ್ಬರು ಸಮುದ್ರಪಾಲು

(ನ್ಯೂಸ್ ಕಡಬ) newskadaba.com ಉಳ್ಳಾಲ, ಜೂ.28. ಪ್ರವಾಸಕ್ಕೆಂದು ಬಂದಿದ್ದ ತುಮಕೂರು ಮೂಲದ ಇಬ್ಬರು ಯುವಕರು ಸಮುದ್ರ ಸ್ನಾನಕ್ಕಿಳಿದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರುಪಾಲಾದ ಘಟನೆ ಉಳ್ಳಾಲದ ಮೊಗವೀರಪಟ್ನದಲ್ಲಿ ಇಂದು ಬೆಳಗ್ಗೆ ನಡೆದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನಿವಾಸಿಗಳಾದ ಅಯಾಝ್(19) ಹಾಗೂ ಶಾರೂಕ್(19) ಅಲೆಗಳ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾದವರಾಗಿದ್ದಾರೆ. ಉಳ್ಳಾಲ ದರ್ಗಾಕ್ಕೆ ಆಗಮಿಸಿದ್ದ ಇವರು ಸ್ನಾನಕ್ಕೆಂದು ಸಮುದ್ರಕ್ಕಿಳಿದ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರಪಾಲಾದರೆನ್ನಲಾಗಿದೆ. ಇದೇ ವೇಳೆ ಸಮುದ್ರಪಾಲಾಗುತ್ತಿದ್ದ ಇನ್ನಿಬ್ಬರನ್ನು ಸ್ಥಳೀಯರು ರಕ್ಷಿಸಿದ್ದು, ಅಸ್ವಸ್ಥಗೊಂಡ ಅವರನ್ನು

ಉಳ್ಳಾಲ: ಯುವಕರಿಬ್ಬರು ಸಮುದ್ರಪಾಲು Read More »

ಕರಾವಳಿ

2017 ಇಸವಿಯ ಬದಲು 2012 ಇಸವಿಯ ರಶೀದಿ ನೀಡಿದ ಪೊಲೀಸರು

(ನ್ಯೂಸ್ ಕಡಬ) newskadaba.com ಕಡಬ, ಜೂ.26. ವಾಹನಗಳನ್ನು ತಪಾಸಣೆ ನಡೆಸಿ ದಂಡ ವಿಧಿಸುವ ವೇಳೆ ಕಡಬ ಪೊಲೀಸರು 2017ನೇ ಇಸವಿಯ ಬದಲು 2012ನೇ ಇಸವಿಯ ರಶೀದಿಗಳನ್ನು ನೀಡುತ್ತಿದ್ದಾರೆ ಎಂದು ದಂಡ ಹಾಕಿಸಿಕೊಂಡಿರುವ ವಾಹನ ಚಾಲಕರು ಆರೋಪಿಸಿದ್ದಾರೆ. ಕಡಬ ಪೊಲೀಸರು ಜೂ.26 ರಂದು ಕಡಬ ಪೇಟೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ದಾಖಲೆ ಪತ್ರ ಸರಿ ಇಲ್ಲದ ಹಾಗೂ ಹೆಲ್ಮೆಟ್ ಧರಿಸದ ದ್ವಿಚಕ್ರ ಸವಾರರಿಗೆ ದಂಡ ವಿಧಿಸಿದ್ದರು. ಈ ವೇಳೆ 26.06.2017 ಎಂದು ನಮೂದಿಸುವ ಬದಲು 26.06.2012 ಎಂದು

2017 ಇಸವಿಯ ಬದಲು 2012 ಇಸವಿಯ ರಶೀದಿ ನೀಡಿದ ಪೊಲೀಸರು Read More »

ಕರಾವಳಿ

ಬೆಳ್ತಂಗಡಿ:ಯುವಕರಿಬ್ಬರ ಮೇಲೆ ಹಲ್ಲೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ.26. ಮರಳು ವ್ಯಾಪಾರಿ ಯುವಕರಿಬ್ಬರನ್ನು ವ್ಯವಹಾರದ ಉದ್ದೇಶದಿಂದ ಫೋನ್ ಮಾಡಿ ಕರೆಸಿ ಬಳಿಕ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಎಂಬಲ್ಲಿ ನಡೆದಿದೆ. ಅಡ್ಡೂರು ನಿವಾಸಿಗಳಾದ ಇರ್ಫಾನ್ ಮತ್ತು ನಿಸಾರ್ ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ. ಮರಳು ವ್ಯಾಪಾರಿಗಳಾದ ಇಬ್ಬರನ್ನು ವ್ಯವಹಾರದ ನೆಪದಲ್ಲಿ ಕರೆಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಗಂಭೀರ ಗಾಯಗೊಂಡ ಯುವಕರು ತಮ್ಮ ಗೆಳೆಯನಿಗೆ ಕರೆ ಮಾಡಿ ಈ ಬಗ್ಗೆ ತಿಳಿಸಿ ಬಳಿಕ ಪೊಲೀಸ್ ಕಂಟ್ರೋಲ್ ರೂಮ್

ಬೆಳ್ತಂಗಡಿ:ಯುವಕರಿಬ್ಬರ ಮೇಲೆ ಹಲ್ಲೆ Read More »

ಕರಾವಳಿ

ಶೋಭಾ ಕರಂದ್ಲಾಜೆಯಿಂದ ಸುಳ್ಳಿನ ರಾಜಕೀಯ: ಸಚಿವ ಖಾದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.25. ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿ ರಾಜ್ಯ ಸರಕಾರದ ಮೇಲೆ ವಿನಾಕಾರಣ ಆರೋಪ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ ಇದೀಗ ರಾಜಕೀಯ ಪ್ರೇರಿತವಾಗಿ ಪಡಿತರ ಚೀಟಿ ಮಾಫಿಯಾ ಎಂಬ ಸುಳ್ಳು ಸುದ್ದಿ ಹರಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಆಕ್ಷೇಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅನುರಾಗ್ ತಿವಾರಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮಾಡಲಾದ ಆರೋಪದ ಬಗ್ಗೆ ಲಿಖಿತವಾಗಿ ದೂರು ನೀಡುವಂತೆ ತಿಳಿಸಲಾಗಿತ್ತು.

ಶೋಭಾ ಕರಂದ್ಲಾಜೆಯಿಂದ ಸುಳ್ಳಿನ ರಾಜಕೀಯ: ಸಚಿವ ಖಾದರ್ Read More »

ಕರ್ನಾಟಕ

ಕಾರು-ಟ್ಯಾಂಕರ್ ಢಿಕ್ಕಿ: ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಜೂ.25. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ಕಾರು ಹಾಗೂ ಟ್ಯಾಂಕರ್ ಢಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಉಪ್ಪಿನಂಗಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ಮತ್ತು ಬೆಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ನಡುವೆ ಮುಖಾಮುಖಿಯಾಗಿ ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು-ಟ್ಯಾಂಕರ್ ಢಿಕ್ಕಿ: ನಾಲ್ವರು ಗಂಭೀರ Read More »

ಕರಾವಳಿ

ಬಂಟ್ವಾಳದ ಕ್ರಿಮಿನಲ್ ಗಳ ಅಡ್ಡೆಗೆ ನುಗ್ಗಿದ ರಿಯಲ್ ಸಿಂಗಂ ಎಸ್ಪಿ ಅಣ್ಣಾಮಲೈ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.24. ಜಿಲ್ಲಾ ಪೊಲೀಸರ ನಿಯಂತ್ರಣಕ್ಕೆ ಸಿಗದೆ ಕಳೆದ ಹಲವು ದಿನಗಳಿಂದ ಕೋಮು ಗಲಭೆಗೆ ತುತ್ತಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪರಿಸರ ಇದೀಗ ಚಿಕ್ಕಮಗಳೂರಿನ ಖಡಕ್ ಎಸ್ಪಿ ಅಣ್ಣಾಮಲೈಯವರ ಬಿಗಿಮುಷ್ಟಿಯಲ್ಲಿ ಭದ್ರವಾಗಿ ನಿಂತಿದೆ. ರಿಯಲ್ ಸಿಂಗಂ ಎಂದೇ ಖ್ಯಾತರಾಗಿರುವ ಐಪಿಎಸ್ ಅಧಿಕಾರಿ, ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಆಗಮನದಿಂದಾಗಿ ಜಿಲ್ಲೆಯ ಕೋಮುವಾದಿ ಹಾಗೂ ಕ್ರಿಮಿನಲ್ ಗಳಿಗೆ ನಡುಕವುಂಟಾಗಿದೆ. ಸರಕಾರದ ನಿರ್ದೇಶನದಂತೆ ಬುಧವಾರ ಸಂಜೆಯೇ ಜಿಲ್ಲೆಗೆ ಗಗಮಿಸಿದ ಎಸ್ಪಿ ಅಣ್ಣಾಮಲೈ ತನ್ನ ವಿಶಿಷ್ಟ ರಫ್

ಬಂಟ್ವಾಳದ ಕ್ರಿಮಿನಲ್ ಗಳ ಅಡ್ಡೆಗೆ ನುಗ್ಗಿದ ರಿಯಲ್ ಸಿಂಗಂ ಎಸ್ಪಿ ಅಣ್ಣಾಮಲೈ Read More »

ಕರಾವಳಿ

ಕಲಾಯಿ ಅಶ್ರಫ್ ಕೊಲೆ ಪ್ರಕರಣ: ಐವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.24. ಕಳೆದ ಮೂರು ದಿನಗಳ ಹಿಂದೆ ಕಲಾಯಿಯ SDPI ವಲಯಾಧ್ಯಕ್ಷರಾದ ಅಶ್ರಫ್ ಅವರನ್ನು ಬೆಂಜನಪದವಿನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾದ ಪ್ರಕರಣವನ್ನು ಭೇದಿಸಿರುವ ರಾಜ್ಯ ಪೊಲೀಸ್ ಇಲಾಖೆ ಈ ಸಂಬಂಧ 5 ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಅಭಿನ್, ದಿವ್ಯರಾಜ್, ಪವನ್ ಸಂತೋಷ್ ಹಾಗೂ ಶಿವಪ್ರಸಾದ್ ಎಂದು ಗುರುತಿಸಲಾಗಿದ್ದು, ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಆರೋಪಿಗಳನ್ನು ಇಂದು ಸಂಜೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್

ಕಲಾಯಿ ಅಶ್ರಫ್ ಕೊಲೆ ಪ್ರಕರಣ: ಐವರ ಬಂಧನ Read More »

ಕರಾವಳಿ

ಕೆ.ಸಿ.ರೋಡ್: ಹಾಡುಹಗಲೇ ಬ್ಯಾಂಕ್ ದರೋಡೆ ಯತ್ನ

ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 23. ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಕೆ.ಸಿ. ರೋಡ್ ಶಾಖೆಯ ಸಿಬ್ಬಂದಿಗಳಿಗೆ ಹಾಡುಹಗಲೇ ಚಾಕು ತೋರಿಸಿ ದರೋಡೆಗೆ ಯತ್ನಿಸಿದ ಘಟನೆ ಶುಕ್ರವಾರದಂದು ನಡೆದಿದೆ. ಹೆಲ್ಮೆಟ್ ಧರಿಸಿಕೊಂಡು ಬ್ಯಾಂಕ್ ಒಳಗೆ ಅಕ್ರಮವಾಗಿ ಪ್ರವೇಶಿಸಿದ ಇಬ್ಬರು ದರೋಡೆಕೋರರು ಕರ್ತವ್ಯದಲ್ಲಿದ್ದ ಮೂವರು ಸಿಬ್ಬಂದಿಗಳಿಗೆ ಚೂರಿ ತೋರಿಸಿ ಬೆದರಿಸಿ ಅವರನ್ನು ಶೌಚಾಲಯದೊಳಗೆ ಕೂಡಿ ಹಾಕಿ ಚಿನ್ನಾಭರಣವನ್ನು ದೋಚಲು ಯತ್ನಿಸಿದ್ದರು. ಕೋಟ್ಯಂತರ ರೂ. ಬೆಲೆಬಾಳುವ ಸುಮಾರು 20 ಕೆಜಿ ಚಿನ್ನವನ್ನು 50 ಕೆಜಿಯ ಗೋಣಿ ಚೀಲದಲ್ಲಿ

ಕೆ.ಸಿ.ರೋಡ್: ಹಾಡುಹಗಲೇ ಬ್ಯಾಂಕ್ ದರೋಡೆ ಯತ್ನ Read More »

ಕರಾವಳಿ
Scroll to Top