ಕಡಬ ನ್ಯೂಸ್

NCC ಕ್ಯಾಂಪ್‍ ಗೆ ತೆರಳಿದ್ದ ವಿದ್ಯಾರ್ಥಿ ನೀರು ಪಾಲು

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.25, NCC ಕ್ಯಾಂಪ್‍ಗೆ ತೆರಳಿದ್ದ ವಿದ್ಯಾರ್ಥಿಯೊಬ್ಬ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಕನಕಪುರದ ರಾವಗೊಂಡ್ಲು ಬೆಟ್ಟದ ಹತ್ತಿರ ಭಾನುವಾರ ನಡೆದಿದೆ. ವಿಶ್ವಾಸ್ (17) ಸಾವನ್ನಪ್ಪಿರುವ ವಿದ್ಯಾರ್ಥಿ. ವಿಶ್ವಾಸ್ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದು, ಭಾನುವಾರದಂದು ಕಾಲೇಜಿನಿಂದ 25 ವಿದ್ಯಾರ್ಥಿಗಳನ್ನ ಎನ್‍ಸಿಸಿ ಕ್ಯಾಂಪ್‍ಗೆ ಕನಕಪುರದ ರಾವಗೊಂಡ್ಲು ಬೆಟ್ಟಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ 10 ಅಡಿಯ ಕಲ್ಯಾಣಿಗೆ ಬಿದ್ದು ವಿಶ್ವಾಸ್ ಸಾವನ್ನಪ್ಪಿದ್ದಾನೆ. ಬೇರೆ ವಿದ್ಯಾರ್ಥಿಗಳು ಸೆಲ್ಫೀ ತೆಗೆದುಕೊಂಡ ಫೋಟೋಗಳಲ್ಲಿ ವಿಶ್ವಾಸ್ ಮುಳುಗುತ್ತಿರುವುದು ಕಾಣಿಸಿದರೂ ಯಾರೋಬ್ಬರು […]

NCC ಕ್ಯಾಂಪ್‍ ಗೆ ತೆರಳಿದ್ದ ವಿದ್ಯಾರ್ಥಿ ನೀರು ಪಾಲು Read More »

ಕರ್ನಾಟಕ

ಸವಣೂರು: ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ► ಮನೆಮನೆಗೆ ಬೇಟಿ ನೀಡಿ ಮನವಿ

(ನ್ಯೂಸ್ ಕಡಬ) newskadaba.com ಸವಣೂರು,ಸೆ.25, ಇಲ್ಲಿನ ಗ್ರಾಮ ಪಂಚಾಯತ್, ಗ್ರಾಮ ವಿಕಾಸ ಸಮಿತಿ ಪಾಲ್ತಾಡಿ, ಶ್ರೀ ಸಿದ್ಧಿವಿನಾಯಕ ಸೇವಾ ಸಂಘ, ಅರುಂಧತಿ ಮಾತೃ ಮಂಡಳಿ, ಮಂಜುನಾಥನಗರ, ವಿವೇಕಾನಂದ ಯುವಕ ಮಂಡಲ ಮತ್ತು ಶ್ರೀಗೌರಿ ಯುವತಿ ಮಂಡಲ, ಮಂಜುನಾಥನಗರ ಇವುಗಳ ಜಂಟಿ ಆಶ್ರಯದಲ್ಲಿ ಅ.2ರಂದು ಬಂಬಿಲದಲ್ಲಿ ನಡೆಯುವ ಸ್ವಚ್ಚತಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನೆಮನೆ ಬೇಟಿ ನೀಡಿ ಮನವಿ ಮಾಡಲಾಯಿತು. ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಂಬಿಲ ಕ್ರಾಸ್ನಿಂದ ಗೌರಿ ಹೊಳೆಯ ತನಕದ ರಸ್ತೆಗಳ ರಿಪೇರಿ, ಹೊಂಡಗಳಿಗೆ ಕಾಂಕ್ರೀಟಿಕರಣ, ಪೊದರು ಸವರುವುದು ಮತ್ತು

ಸವಣೂರು: ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ► ಮನೆಮನೆಗೆ ಬೇಟಿ ನೀಡಿ ಮನವಿ Read More »

ಕರಾವಳಿ

ಇಂದು ಸಂಜೆ (ಸೆ.25 ರಂದು) ಶರವೂರು ದೇವಾಸ್ಥಾನದಲ್ಲಿ ►”ಶ್ರೀರಾಮ ಪಟ್ಟಾಭಿಷೇಕ” ಯಕ್ಷಗಾನ ತಾಳ ಮದ್ದಳೆ

(ನ್ಯೂಸ್ ಕಡಬ) newskadaba.com ಕಡಬ,ಸೆ.25, ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಂಬ ಕಲಾ ಸಂಗಮ ವಾರ್ಷಿಕ ಯಕ್ಷಗಾನ ತಾಳಮದ್ದಳೆ ಕೂಟ ಮತ್ತು ಕಲಾ ಸಂಗಮದ ಹಿರಿಯ ಕಲಾವಿದ ದಿ|.ಎಸ್.ಪಿ. ಸೇಸಪ್ಪ ಶೆಟ್ಟಿಯವರ ಸ್ಮರಣಾರ್ಥವಾಗಿ ಇಂದು ಸಾಯಂಕಾಲ (ಸೆ.25 ರಂದು) ಅತಿಥಿ ಕಲಾವಿದ ಕೂಡುವಿಕೆಯಲ್ಲಿ ಶ್ರೀರಾಮ ಪಟ್ಟಾಭಿಷೇಕ ಎಂಬ ಯಕ್ಷಗಾನ ತಾಳ ಮದ್ದಳೆ ಶರವೂರು ದೇವಾಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ಭಾಗವತರಾಗಿ ಪದ್ಯಾಣ ಗಣಪತಿ ಭಟ್, ಚೆಂಡೆ-ಮದ್ದಳೆ ವಿನಯ ಆಚಾರ್ಯ ಕಡಬ, ಶ್ರೀಶ ರಾವ್ ನಿಡ್ಲೆ ನಿರ್ವಹಿಸಲಿದ್ದಾರೆ. ಡಾ|.ಎಂ. ಪ್ರಭಾಕರ ಜೋಷಿ, ಶಂಭುಶರ್ಮ

ಇಂದು ಸಂಜೆ (ಸೆ.25 ರಂದು) ಶರವೂರು ದೇವಾಸ್ಥಾನದಲ್ಲಿ ►”ಶ್ರೀರಾಮ ಪಟ್ಟಾಭಿಷೇಕ” ಯಕ್ಷಗಾನ ತಾಳ ಮದ್ದಳೆ Read More »

ಕರಾವಳಿ

ಭಜರಂಗದಳ ಆಲಂಕಾರು ಘಟಕದ ಸಂಚಾಲಕರಾಗಿ ► ಮನೋಹರ್ ಮಡ್ಯೋಟ್ಟು ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ,ಸೆ.25, ಭಜರಂಗದಳ ಆಲಂಕಾರು ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ಇತ್ತೀಚೆಗೆ ನಡೆಯಿತು. ಘಟಕದ ಸಂಚಾಲಕರಾಗಿ ಮನೋಹರ್ ಮಡ್ಯೋಟ್ಟು ಅವರನ್ನು ಈ ಸಂದ್ರರ್ಭದಲ್ಲಿ ಅಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ದೇವರಾಯ ಪ್ರಭು, ಸಹ ಸಂಚಾಲಕರಾಗಿ ಹರೀಶ್ ಕುಂತೂರು, ಗೋಪಾಲ ಆತೂರು, ಗೋರಕ್ಷಾ ಪ್ರಮುಖರಾಗಿ ರಾಧಾಕೃಷ್ಣ  ಕುಂಟ್ಯಾನ, ಸತ್ಸಂಗ ಪ್ರಮುಖರಾಗಿ ಹರ್ಷಿತ್, ಸಂಪರ್ಕ ಪ್ರಮುಖರಾಗಿ ವಸಂತ್ ದೇವಾಡಿಗ, ಸುರಕ್ಷಾ ಪ್ರಮುಖರಾಗಿ ಶಿವಪ್ಪ ಕಜೆ ಇವರುಗಳನ್ನು ಆಯ್ಕೆ ಮಾಡಲಾಯಿತು. ದ.ಕ.ಜಿಲ್ಲಾ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಬಿ.ಎಸ್.ಸತೀಶ್, ಜಿಲ್ಲಾ ಕೋಶಾಧಿಕಾರಿ ಡಾ||.

ಭಜರಂಗದಳ ಆಲಂಕಾರು ಘಟಕದ ಸಂಚಾಲಕರಾಗಿ ► ಮನೋಹರ್ ಮಡ್ಯೋಟ್ಟು ಆಯ್ಕೆ Read More »

ಕರಾವಳಿ

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ► ಆಲಂಕಾರು ಶ್ರೀ ಭಾರತೀ ಶಾಲೆಯ ಕು.ಸ್ಫೂರ್ತಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ,ಸೆ.23. ತಾಲೂಕು ಮಟ್ಟದಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯ ಅಭಿನಯ ಗೀತೆಯಲ್ಲಿ ಆಲಂಕಾರು ಶ್ರೀ ಭಾರತೀ ಶಾಲೆಯ ಮೂರನೆ ತರಗತಿ ವಿದ್ಯಾರ್ಥಿನಿ ಕುಮಾರಿ ಸ್ಫೂರ್ತಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈಕೆ ಕುಪ್ಲಾಜೆ ಕೃಷ್ಣ ಉಪಾಧ್ಯಾಯ ಮತ್ತು ಶುೃತಿ ದಂಪತಿ ಸುಪುತ್ರಿಯಾಗಿದ್ದಾಳೆ.

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ► ಆಲಂಕಾರು ಶ್ರೀ ಭಾರತೀ ಶಾಲೆಯ ಕು.ಸ್ಫೂರ್ತಿ ಜಿಲ್ಲಾ ಮಟ್ಟಕ್ಕೆ ಆಯ್ಕೆ Read More »

ಕರಾವಳಿ

ಬಿಜೆಪಿ ಕಾರ್ಯಕರ್ತರಿಂದ ಮರ್ದಾಳ, ಬಜಕೆರೆ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ,ಸೆ.23. ಪುತ್ತೂರು ತಾಲೂಕಿನ 102 ನೇ ನೆಕ್ಕಿಲಾಡಿ ಗ್ರಾಮದ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರಿಂದ ಮರ್ದಾಳ ಪರಿಸರ, ಬಜಕೆರೆ ರೈಲ್ವೆ ನಿಲ್ದಾಣ ಮೊದಲಾದೆಡೆ ಸ್ವಚ್ಚತಾ ಕಾರ್ಯ ನಡೆಯಿತು. ಬಿಜೆಪಿ ಮುಖಂಡರಾದ ಕಿಶೋರ್ ಶಿರಾಡಿ, ಉಮೇಶ್ ಶೆಟ್ಟಿ ಸಾಯಿರಾಂ, ಎನ್ ಕೆ ಪ್ರಕಾಶ್, ಎಪಿಎಂಸಿ ನಿರ್ದೇಶಕ ಮೇದಪ್ಪ ಡೆಪ್ಪುಣಿ ಮೊದಲಾದವರು ಭಾಗವಹಿಸಿದ್ದರು.  

ಬಿಜೆಪಿ ಕಾರ್ಯಕರ್ತರಿಂದ ಮರ್ದಾಳ, ಬಜಕೆರೆ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಚತಾ ಕಾರ್ಯಕ್ರಮ Read More »

ಕರಾವಳಿ

ಸೆ.26 ರಂದು ಚಾಮರಾಜನಗರದಲ್ಲಿ ನಡೆಯುವ ರಾಜ್ಯ ಮಟ್ಟದ ಖೋ ಖೋ ಪಂದ್ಯಾಟ ► ದ.ಕ ಜಿಲ್ಲೆಯನ್ನು ಪ್ರತಿನಿಧಿಸಲಿರುವ ಶ್ರೀ ರಾಮಕುಂಜೇಶ್ವರ ಕಾಲೇಜಿನ ವಿದ್ಯಾರ್ಥಿನಿಯರು

(ನ್ಯೂಸ್ ಕಡಬ) newskadaba.com ಕಡಬ,ಸೆ.23. ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸೆ.26 ರಂದು ಚಾಮರಾಜನಗರ ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ಖೋ ಖೋ ಪಂದ್ಯಾಟದಲ್ಲಿ ಪುತ್ತೂರು ತಾಲೂಕಿನ ಶ್ರೀ ರಾಮಕುಂಜೇಶ್ವರ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ದ. ಕ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೊಗ್ರ ಗ್ರಾಮ ಅಂತರ ಮನೆ ನಿವಾಸಿ ಚಂದ್ರಶೇಖರ ಭಟ್ ಮತ್ತು ಸತ್ಯ ಕುಮಾರಿ ದಂಪತಿ ಪುತ್ರಿ ಅಕ್ಷತಾ ಪಿ ಸಿ, ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪೆರಾಬೆ ಗ್ರಾಮ ಕೆಮ್ಮಿಂಜೆ ನಿವಾಸಿ ನಾರ್ಣಪ್ಪ

ಸೆ.26 ರಂದು ಚಾಮರಾಜನಗರದಲ್ಲಿ ನಡೆಯುವ ರಾಜ್ಯ ಮಟ್ಟದ ಖೋ ಖೋ ಪಂದ್ಯಾಟ ► ದ.ಕ ಜಿಲ್ಲೆಯನ್ನು ಪ್ರತಿನಿಧಿಸಲಿರುವ ಶ್ರೀ ರಾಮಕುಂಜೇಶ್ವರ ಕಾಲೇಜಿನ ವಿದ್ಯಾರ್ಥಿನಿಯರು Read More »

ಕ್ರೀಡಾ ನ್ಯೂಸ್

ಸೆಪ್ಟಂಬರ್ 24 ► ರಾಷ್ಟ್ರದಾದ್ಯಂತ ಎನ್.ಎಸ್.ಎಸ್. ದಿನಾಚರಣೆ

(ನ್ಯೂಸ್ ಕಡಬ) newskadaba.com ಕಡಬ,ಸೆ.23, ವಿದ್ಯಾರ್ಥಿ ಮತ್ತು ಸಮಾಜದ ನಡುವಿನ ರಚನಾತ್ಮಕವಾದ ಸಂಬಂಧ ಬೆಳೆಯಬೇಕೆಂಬ ಉದ್ದೇಶದಿಂದ ಭಾರತದಾತ್ಯಂತ ರಾಷ್ಟ್ರೀಯ ಸೇವಾ ಯೋಜನಾ ದಿನವನ್ನು ಸೆಪ್ಟಂಬರ್ 24ರಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆಯನ್ನು ಮೂಡಿಸಲು ಮತ್ತು ಪರಿಪೂರ್ಣ ವ್ಯಕ್ತಿತ್ವ ವಿಕಸನದ ಮೂಲ ಉದ್ದೇಶದೊಂದಿಗೆ, ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಾರಂಭಿಸಬಹುದೆಂದು ಡಾ| ರಾಧಾಕೃಷ್ಣನ್ ನೇತೃತ್ವದ ‘ವಿಶ್ವವಿದ್ಯಾನಿಲಯ ಅನುಧಾನ ಸಮಿತಿ’ ಭಾರತ ಸರ್ಕಾರಕ್ಕೆ ಅನುಮೋದನೆ ನೀಡಿತು. ಕಲಿಕೆ ಎನ್ನುವುದು ಕೇವಲ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಕೊಂಡಿಯಾಗಿರದೆ,

ಸೆಪ್ಟಂಬರ್ 24 ► ರಾಷ್ಟ್ರದಾದ್ಯಂತ ಎನ್.ಎಸ್.ಎಸ್. ದಿನಾಚರಣೆ Read More »

ವಿಶೇಷ ಲೇಖನಗಳು

ಮಂಗಳೂರಿನಲ್ಲಿ ಪ್ರಾರಂಭವಾದ “ಮನೆ ಮನೆಗೆ ಕಾಂಗ್ರೆಸ್” ವಿನೂತನ ಕಾರ್ಯಕ್ರಮ…!!!

(ನ್ಯೂಸ್ ಕಡಬ) newskadaba.com ಮಂಗಳೂರು,ಸೆ.23. ಮುಂಬರುವ ಚುನಾವಣೆಗೆ ಕಾಂಗ್ರೆಸ್‌ ಭರ್ಜರಿಯಾಗಿ ತಯಾರಾಗಿದೆ. ಪ್ರತಿ ಮನೆ ಮನೆಗೂ ಕಾಂಗ್ರೆಸ್ ತಲುಪಬೇಕೆಂಬ ಉದ್ಧೇಶದಿಂದ ಮಂಗಳೂರಿನಲ್ಲಿ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಚಾಲನೆ ಶನಿವಾರ ನೀಡಲಾಗಿದೆ. ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ ಆರ್ ಲೋಬೋ ಅವರ ಕ್ಷೇತ್ರದಲ್ಲಿ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ

ಮಂಗಳೂರಿನಲ್ಲಿ ಪ್ರಾರಂಭವಾದ “ಮನೆ ಮನೆಗೆ ಕಾಂಗ್ರೆಸ್” ವಿನೂತನ ಕಾರ್ಯಕ್ರಮ…!!! Read More »

ಕರಾವಳಿ

ರಾಜ್ಯ ರಾಜಕಾರಣಕ್ಕೆ ಹಿಂತಿರುಗಿದ ಡಿ.ವಿ.ಸದಾನಂದ ಗೌಡ…!!!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಸೆ.23. ಕರ್ನಾಟಕ ರಾಜ್ಯದಲ್ಲಿ 2018 ರಲ್ಲಿ ನಡೆಯಲಿರುವ ಮುಂದಿನ ವಿಧಾನ ಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆಯನ್ನು ಆರಂಭಿಸಿದ್ದು, ರಾಜ್ಯ ಬಿಜೆಪಿ ಸಾಂಪ್ರದಾಯಿಕ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ನೇಮಕಗೊಂಡಿದ್ದಾರೆ. 28 ಮಂದಿ ಸದಸ್ಯರ ಸಾಂಪ್ರದಾಯಿಕ ಪ್ರಚಾರ ಸಮಿತಿಗೆ ಡಿ.ವಿ. ಸದಾನಂದ ಗೌಡ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆದೇಶ ಹೊರಡಿಸಿದ್ದಾರೆ. ಇದರೊಂದಿಗೆ ಡಿವಿಎಸ್ ಅವರು ರಾಜ್ಯ

ರಾಜ್ಯ ರಾಜಕಾರಣಕ್ಕೆ ಹಿಂತಿರುಗಿದ ಡಿ.ವಿ.ಸದಾನಂದ ಗೌಡ…!!! Read More »

ಕರ್ನಾಟಕ
Scroll to Top