ಭಜರಂಗದಳ ಆಲಂಕಾರು ಘಟಕದ ಸಂಚಾಲಕರಾಗಿ ► ಮನೋಹರ್ ಮಡ್ಯೋಟ್ಟು ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ,ಸೆ.25, ಭಜರಂಗದಳ ಆಲಂಕಾರು ಘಟಕದ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ಇತ್ತೀಚೆಗೆ ನಡೆಯಿತು. ಘಟಕದ ಸಂಚಾಲಕರಾಗಿ ಮನೋಹರ್ ಮಡ್ಯೋಟ್ಟು ಅವರನ್ನು ಈ ಸಂದ್ರರ್ಭದಲ್ಲಿ ಅಯ್ಕೆಮಾಡಲಾಯಿತು.

ಗೌರವಾಧ್ಯಕ್ಷರಾಗಿ ದೇವರಾಯ ಪ್ರಭು, ಸಹ ಸಂಚಾಲಕರಾಗಿ ಹರೀಶ್ ಕುಂತೂರು, ಗೋಪಾಲ ಆತೂರು, ಗೋರಕ್ಷಾ ಪ್ರಮುಖರಾಗಿ ರಾಧಾಕೃಷ್ಣ  ಕುಂಟ್ಯಾನ, ಸತ್ಸಂಗ ಪ್ರಮುಖರಾಗಿ ಹರ್ಷಿತ್, ಸಂಪರ್ಕ ಪ್ರಮುಖರಾಗಿ ವಸಂತ್ ದೇವಾಡಿಗ, ಸುರಕ್ಷಾ ಪ್ರಮುಖರಾಗಿ ಶಿವಪ್ಪ ಕಜೆ ಇವರುಗಳನ್ನು ಆಯ್ಕೆ ಮಾಡಲಾಯಿತು.

ದ.ಕ.ಜಿಲ್ಲಾ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಬಿ.ಎಸ್.ಸತೀಶ್, ಜಿಲ್ಲಾ ಕೋಶಾಧಿಕಾರಿ ಡಾ||. ಪ್ರಸನ್ನ, ಉಪ್ಪಿನಂಗಡಿ ನಗರ ಸಂಚಾಲಕ ಮಹೇಶ್, ಉಪ್ಪಿನಂಗಡಿ ನಗರ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಸಂದೀಪ್ ಕುಪ್ಪೆಟ್ಟಿಯವರ ಆಯ್ಕೆ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Scroll to Top