ಕಡಬ ನ್ಯೂಸ್

ನಾಳೆ:(ನ.1ರಂದು) ಮರ್ದಾಳದಲ್ಲಿ ಕಬಡ್ಡಿ ಪಂದ್ಯಾಟ, ಹಗ್ಗಜಗ್ಗಾಟ ► ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಅ.31. ಶ್ರೀವಿವೇಕಾನಂದ ಯುವಕ ಮಂಡಲ(ರಿ.) ಮರ್ದಾಳ ಇದರ ವತಿಯಿಂದ 21ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ ಪ್ರಯುಕ್ತ ಪುರುಷರ 55ಕೆ.ಜಿ. ವಿಭಾಗದ ಕಬಡ್ಡಿ ಪಂದ್ಯಾಟ, ಹಗ್ಗಜಗ್ಗಾಟ ಮತ್ತು ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ನ.1ರಂದು ಮರ್ದಾಳ ಶ್ರೀಅಯ್ಯಪ್ಪ ಭಜನಾ ಮಂದಿರ ವಠಾರದಲ್ಲಿ ನಡೆಯಲಿದೆ.   ಬೆಳಿಗ್ಗೆ 10.00ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಗೇರು ನಿಗಮದ ನಿವೃತ್ತ ಮ್ಯಾನೇಜರ್ ಗಂಗಾಧರ ಗೌಡ ಪಂಜೋಡಿ ಉದ್ಘಾಟಿಸಲಿದ್ದು ಪ್ರಗತಿಪರ ಕೃಷಿಕರಾದ ಪ್ರೇಮಸಾಗರ ಆಳ್ವ ಅತ್ಲಾಜೆ ಧ್ವಜಾರೋಹಣಗೈಯಲಿದ್ದಾರೆ. […]

ನಾಳೆ:(ನ.1ರಂದು) ಮರ್ದಾಳದಲ್ಲಿ ಕಬಡ್ಡಿ ಪಂದ್ಯಾಟ, ಹಗ್ಗಜಗ್ಗಾಟ ► ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ Read More »

ಕರಾವಳಿ

ಕಡಬ: ರೈತ ಜನ ಜಾಗೃತಿ ಸಮಾವೇಶ ►ರೈತರ ಉತ್ಪಾದನೆಗೆ ಸರಿಯಾದ ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ-ಸುಬ್ರಹ್ಮಣ್ಯ ಶಾಸ್ತ್ರಿ

(ನ್ಯೂಸ್ ಕಡಬ) newskadaba.com ಕಡಬ, ಅ.31. ರೈತರ ಉತ್ಪಾದನೆಗೆ ಸರಿಯಾದ ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದು, ರೈತರ ಉತ್ಪಾದನೆ ವೆಚ್ಚದ ಒಂದೂವರೆ ಪಟ್ಟು ಹೆಚ್ಚು ದರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಆಗ್ರಹಿಸಿದ್ದಾರೆ. ಅವರು ಕಡಬ ಸಂತೆಕಟ್ಟೆ ಬಳಿ ಲಿಂಗ್ಸನ್ಸ್‌ ಬಿಲ್ಡಿಂಗ್ನ ವಠಾರದಲ್ಲಿ ನಡೆದ ರೈತ ಜನ ಜಾಗೃತಿ ಸಮಾವೇಶ ಹಾಗೂ ಕ.ರಾ.ರೈತ ಸಂಘ ಕಡಬ ತಾಲೂಕು ಸಮಿತಿ ರಚನೆ ಮತ್ತು ರೈತರ ಕುಮ್ಕಿ ಜಮೀನಿನ

ಕಡಬ: ರೈತ ಜನ ಜಾಗೃತಿ ಸಮಾವೇಶ ►ರೈತರ ಉತ್ಪಾದನೆಗೆ ಸರಿಯಾದ ಬೆಲೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ-ಸುಬ್ರಹ್ಮಣ್ಯ ಶಾಸ್ತ್ರಿ Read More »

ಕರಾವಳಿ

ಸಬಳೂರು: ಶಾಲಾ ಹಳೆ ವಿದ್ಯಾರ್ಥಿ ಸಂಘ ► ಅಧ್ಯಕ್ಷರಾಗಿ ಗಣೇಶ್ ಎರ್ಮಡ್ಕ, ಕಾರ್ಯದರ್ಶಿಯಾಗಿ ನಾಗೇಶ್ ಕಡೆಂಬ್ಯಾಲು

(ನ್ಯೂಸ್ ಕಡಬ) newskadaba.com ಕಡಬ, ಅ.31. ಪುತ್ತೂರು ತಾಲೂಕು ಕೊೖಲ ಗ್ರಾಮದ ಸಬಳೂರು ಉನ್ನತ ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿ ಸಂಘದ ರಚನೆ ಇತ್ತೀಚೆಗೆ ನಡೆಯಿತು. ಹಳೆ ವಿದ್ಯಾರ್ಥಿ ಸಂಘದ ನೂತನ  ಅಧ್ಯಕ್ಷರಾಗಿ ಗಣೇಶ್ ಎರ್ಮಡ್ಕ ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ಕಡೆಂಬ್ಯಾಲು ಆಯ್ಕೆಯಾಗಿದ್ದಾರೆ. ಗೌರವ ಸಲಹೆಗಾರರಾಗಿ ಶಾಲಾ ಮುಖ್ಯಗುರು ವಾರಿಜ ಬಿ, ಕುಶಾಲಪ್ಪ ಗೌಡ ಕಡೆಂಬ್ಯಾಲು, ಮೋಹನ ಗೌಡ ಬುಡಲೂರು , ಮನೋಹರ ಗೌಡ ಸಬಳೂರು, ಜೊತೆಕಾರ್ಯದರ್ಶಿಯಾಗಿ ಉಮೇಶ್ ಬುಡಲೂರು, ಖಜಾಂಜಿಯಾಗಿ ಚಿದಾನಂದ ಪಾನ್ಯಾಲು, ಉಪಾಧ್ಯಕ್ಷರಾಗಿ ಇಸ್ಮಾಯಿಲ್

ಸಬಳೂರು: ಶಾಲಾ ಹಳೆ ವಿದ್ಯಾರ್ಥಿ ಸಂಘ ► ಅಧ್ಯಕ್ಷರಾಗಿ ಗಣೇಶ್ ಎರ್ಮಡ್ಕ, ಕಾರ್ಯದರ್ಶಿಯಾಗಿ ನಾಗೇಶ್ ಕಡೆಂಬ್ಯಾಲು Read More »

ಕರಾವಳಿ

ಎಲ್ಲಾ ಮಾದರಿಯ ಕಾರುಗಳಿಗೂ ಹೊಸ ರೂಲ್ಸ್ !! ► ಕಾರುಗಳಲ್ಲಿ ಏರ್‌ಬ್ಯಾಗ್‌, ಅಲರಾಂ ಕಡ್ಡಾಯ..!!!

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಅ.30. ಭಾರತೀಯ ಕಾರುಗಳನ್ನು ಸುರಕ್ಷಿತವಾಗಿಸಲು ನಿಟ್ಟಿನಲ್ಲಿ ಹೊಸ ಸುರಕ್ಷತಾ ನಿಯಮಗಳನ್ನು 2019ರ ಜುಲೈ 1ರಿಂದ ಜಾರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಹೊಸ ನಿಯಮದಿಂದಾಗಿ ಅಪಘಾತಗಳ ಸಂದರ್ಭದಲ್ಲಿ ಪ್ರಾಣಹಾನಿಯ ಪ್ರಮಾಣ ಕಡಿಮೆಯಾಗಲಿದೆ. ಹೌದು, ಭಾರತದ ರಸ್ತೆಗಳು ಅತ್ಯಂತ ಅಪಾಯಕಾರಿ ಎನ್ನಿಸುವ ಹಂತಕ್ಕೆ ಬಂದು ತಲುಪಿದ್ದು, ದಿನಬೆಳಗ್ಗೆ ಎದ್ದರೆ ಸಾಕು ಟಿವಿ, ಪೇಪರ್‌ಗಳಲ್ಲಿ ಹಾಗು ಸಾಮಾಜಿಕ ಜಾಲತಾಣಗಳಲ್ಲಿ ಬರೀ ಅಪಘಾತಗಳ ಬಗ್ಗೆ ಕೇಳಿ, ಕೇಳಿ ಮನಸ್ಥಿತಿಗಳು ಅಪಘಾತಗಳ ಬಗ್ಗೆ ‘ನಿರ್ಲಕ್ಷ್ಯ’ ಧೋರಣೆ ಹೊಂದುವ ಮಟ್ಟಕ್ಕೆ

ಎಲ್ಲಾ ಮಾದರಿಯ ಕಾರುಗಳಿಗೂ ಹೊಸ ರೂಲ್ಸ್ !! ► ಕಾರುಗಳಲ್ಲಿ ಏರ್‌ಬ್ಯಾಗ್‌, ಅಲರಾಂ ಕಡ್ಡಾಯ..!!! Read More »

ಕರ್ನಾಟಕ

ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ 2600 ಕೋಟಿ ರೂ ಅವ್ಯವಹಾರ ► ಸಿಎಂ ಹಾಗೂ ಜಾರ್ಜ್ ವಿರುದ್ಧ ಮತ್ತೆ ದೂರು 

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.30. ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ ಸುಮಾರು 2000 ಕೋಟಿ ರೂಪಾಯಿ ಅವ್ಯವಹಾರ ಹಾಗೂ ವೈಟ್ ಟ್ಯಾಪಿಂಗ್ ನಲ್ಲಿ ಸುಮಾರು 600 ಕೋಟಿಗೂ ಹೆಚ್ಚಿನ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಕೆ.ಜೆ ಜಾರ್ಜ್ ವಿರುದ್ಧ ಎಸಿಬಿಯಲ್ಲಿ ಬಿಜೆಪಿ ಮತ್ತೆ ಎರಡು ಪ್ರತ್ಯೇಕ ದೂರು ದಾಖಲಿಸಿದೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಬಿಜೆಪಿ ವಕ್ತಾರ ಎನ್ ಆರ್ ರಮೇಶ್  2,600 ಕೋಟಿ ರೂಪಾಯಿ ಅವ್ಯವಹಾರದಲ್ಲಿ, ಸಿಎಂ ಹಾಗೂ ಜಾರ್ಜ್ ಬಿಬಿಎಂಪಿ

ರಸ್ತೆಗಳ ಅಭಿವೃದ್ಧಿ ಹೆಸರಿನಲ್ಲಿ 2600 ಕೋಟಿ ರೂ ಅವ್ಯವಹಾರ ► ಸಿಎಂ ಹಾಗೂ ಜಾರ್ಜ್ ವಿರುದ್ಧ ಮತ್ತೆ ದೂರು  Read More »

ಕರ್ನಾಟಕ

ಅಡುಗೆ ಮಾಹಿತಿ ► ದೇಹಕ್ಕೆ ತಂಪು ನೀಡುವ, ರಾಗಿ ಗಂಜಿ ಮಾಡುವ ವಿಧಾನ…

(ನ್ಯೂಸ್ ಕಡಬ) newskadaba.com ಅಡುಗೆ ಮಾಹಿತಿ, ಅ.30. ಬೇಸಿಗೆಯಲ್ಲಿ ಹೆಚ್ಚಿನ ಉಷ್ಣದಿಂದಾಗಿ ದೇಹವು ನಾನಾ ಬಾಧೆಗೆ ಒಳಗಾಗುತ್ತದೆ. ಬಿಸಿಲಲ್ಲಿ ತಂಪು ಪಾನೀಯಗಳನ್ನು ಜಾಸ್ತಿಯಾಗಿ ಸೇವಿಸಿದ್ರೆ ಆರೋಗ್ಯಕ್ಕೆ ಮತ್ತಷ್ಟು ಹಾನಿಯಾಗುತ್ತದೆ. ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡೋ ರಾಗಿಯಿಂದ ಮಾಡಿದ ಆಹಾರ ಉತ್ತಮ.  ಬೇಸಿಗೆಯಲ್ಲಿ ಪ್ರತಿದಿನ ರಾಗಿ ಗಂಜಿ ಅಥವಾ ರಾಗಿ ಅಂಬಲಿ ಮಾಡಿ ಕುಡಿದರೆ ಆರೋಗ್ಯಕ್ಕೂ ಒಳ್ಳೆಯದು. ಬೇಕಾಗುವ ಸಾಮಾಗ್ರಿಗಳು: ರಾಗಿ ಹಿಟ್ಟು – 4 ಚಮಚ  ಪುಡಿ ಮಾಡಿದ ಜೀರಿಗೆ – 1/2 ಚಮಚ  ಮೊಸರು ಅಥವಾ ಮಜ್ಜಿಗೆ

ಅಡುಗೆ ಮಾಹಿತಿ ► ದೇಹಕ್ಕೆ ತಂಪು ನೀಡುವ, ರಾಗಿ ಗಂಜಿ ಮಾಡುವ ವಿಧಾನ… Read More »

ಅಡುಗೆ, ಲೈಫ್‍ಸ್ಟೈಲ್

ಪುತ್ತೂರು: ತಾ.ಪಂ ಸಾಮಾನ್ಯ ಸಭೆ ► ಎರಡು ವರ್ಷಗಳ ಬೇಡಿಕೆ ಈಡೇರಿಕೆಗಾಗಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ..!!!

(ನ್ಯೂಸ್ ಕಡಬ) newskadaba.com ಪುತ್ತೂರು, ಅ.30. ನಿರಂತರ ಎರಡು ವರ್ಷಗಳಿಂದ ಬೇಡಿಕೆ ಮುಂದಿಡುತ್ತಿದ್ದರೂ ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಆಗ್ರಹಿಸಿ ತಾಲೂಕು ಪಂಚಾಯತ್‌ ಸದಸ್ಯೆ ಕೆ.ಟಿ. ವಲ್ಸಮ್ಮ ಕಪ್ಪು ಪಟ್ಟಿ ಧರಿಸಿ ಶನಿವಾರ ಪ್ರತಿಭಟನೆ ನಡೆಸಿದರು. ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ್‌ ಅಧ್ಯಕ್ಷತೆಯಲ್ಲಿ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆ ಕಪ್ಪು ಬಟ್ಟೆ ಹೊದ್ದುಕೊಂಡು ಆಗಮಿಸಿದ  ತಾಲೂಕು ಪಂಚಾಯತ್‌ ಸದಸ್ಯೆ ಕೆ.ಟಿ. ವಲ್ಸಮ್ಮ, ವೇದಿಕೆಯಲ್ಲಿದ್ದವರಿಗೆ ಮನವಿ ನೀಡಿದರು. ಬಳಿಕ ಕಪ್ಪು ಬಟ್ಟೆಯನ್ನು ಬಾಯಿಗೆ ಕಟ್ಟಿ ಸಭೆಯಲ್ಲಿ ಕುಳಿತು

ಪುತ್ತೂರು: ತಾ.ಪಂ ಸಾಮಾನ್ಯ ಸಭೆ ► ಎರಡು ವರ್ಷಗಳ ಬೇಡಿಕೆ ಈಡೇರಿಕೆಗಾಗಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ..!!! Read More »

ಕರಾವಳಿ

ಕೆಟ್ಟು ನಿಂತ ಟ್ರ್ಯಾಕ್ಟರ್ ಗೆ ಬೊಲೆರೋ ಡಿಕ್ಕಿ ► ಓರ್ವನ ದುರ್ಮರಣ

(ನ್ಯೂಸ್ ಕಡಬ) newskadaba.com ಹಾವೇರಿ, ಅ.30. ಟ್ರ್ಯಾಕ್ಟರ್ ಗೆ ಬೊಲೆರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹಾವೇರಿ ನಗರದ ಹೊರವಲಯದಲ್ಲಿರೋ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಸೋಮವಾರ ನಡೆದಿದೆ. ಮೃತ ವ್ಯಕ್ತಿಯನ್ನು ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಗುಡ್ಡದಬೇವಿನಹಳ್ಳಿ ಗ್ರಾಮದ ನಿವಾಸಿ ಸಹದೇವಪ್ಪ ಸಂಗಾಪುರ(52) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ 32 ವರ್ಷ ಮಂಜುನಾಥ ಎಂಬಾತ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತಿದ್ದ ಟ್ರ್ಯಾಕ್ಟರ್ ನ್ನು ರಿಪೇರಿ ಮಾಡುತ್ತಿದ್ದ

ಕೆಟ್ಟು ನಿಂತ ಟ್ರ್ಯಾಕ್ಟರ್ ಗೆ ಬೊಲೆರೋ ಡಿಕ್ಕಿ ► ಓರ್ವನ ದುರ್ಮರಣ Read More »

ಕರ್ನಾಟಕ

ಐತ್ತೂರು ಗ್ರಾ.ಪಂ. ಜಮಾಬಂದಿ ಸಭೆ ► ವಿವಿಧ ಕಾಮಗಾರಿಗಳ ಪರಿಶೀಲನೆ

(ನ್ಯೂಸ್ ಕಡಬ) newskadaba.com ಕಡಬ, ಅ.30. ಐತ್ತೂರು ಗ್ರಾಮ ಪಂಚಾಯತ್ ಜಮಾಬಂದಿ ಸಭೆಯು ಗ್ರಾ.ಪಂ. ಅಧ್ಯಕ್ಷರಾದ ಸತೀಶ್ ಕೆ.ಯವರ ಅಧ್ಯಕ್ಷತೆಯಲ್ಲಿ  ಪಂಚಾಯತ್ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು. ತಾಲೂಕು ಯೋಜನಾಧಿಕಾರಿ ಗಣಪತಿ ಭಟ್ ಜಮಾಬಂದಿ ಸಭೆಯ ಅಧಿಕಾರಿಯಾಗಿದ್ದರು. 2016-17ನೇ ವಾರ್ಷಿಕ ಲೆಕ್ಕಪತ್ರ ಹಾಗೂ ವಿವಿಧ ದಾಖಲೆ ಪರಿಶೀಲನೆಯ ಕುರಿತು ಜಮಾಬಂದಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು. ಬಳಿಕ ವಿವಿಧ ಕಾಮಗಾರಿಗಳಾದ ಬಜಕೆರೆ ರಸ್ತೆ ಕಾಂಕ್ರೀಟೀಕರಣ, ಭ್ರಾಂತಿಕಟ್ಟೆ-ಕೋಡಿಂಕಿರಿ ರಸ್ತೆಯ ಬಜಕೆರೆ ಎಂಬಲ್ಲಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ, ಹಾಗೂ ಕಲ್ಲಾಜೆ-ಅಂತಿಬೆಟ್ಟು ರಸ್ತೆಯ ಕಲ್ಲಾಜೆ

ಐತ್ತೂರು ಗ್ರಾ.ಪಂ. ಜಮಾಬಂದಿ ಸಭೆ ► ವಿವಿಧ ಕಾಮಗಾರಿಗಳ ಪರಿಶೀಲನೆ Read More »

ಕರಾವಳಿ

ಟಿಪ್ಪು ಸುಲ್ತಾನ್, ಸಿದ್ದರಾಮಯ್ಯರವರ ಅವಹೇಳನ ► ಉಪ್ಪಿನಂಗಡಿ ಯುವ ಕಾಂಗ್ರೆಸ್ ನಿಂದ ದೂರು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.27. ಸ್ವಾತಂತ್ರ ಸೇನಾನಿ ಟಿಪ್ಪು ಸುಲ್ತಾನ್ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಅಸಹ್ಯವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ ಎಂದು ಆರೋಪಿಸಿ ಉಪ್ಪಿನಂಗಡಿ ಪರಿಸರದ ಇಬ್ಬರ ಮೇಲೆ ಯುವ ಕಾಂಗ್ರೆಸ್ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದೆ. 34ನೇ ನೆಕ್ಕಿಲಾಡಿಯಲ್ಲಿನ ಕಾರ್ ಕ್ಲಬ್ ಮಾಲಕ ಸದಾನಂದ ಹಾಗೂ ಯೊಗೀಶ್ ಪ್ರಭು ಅವರ ಮೇಲೆ ದೂರು ದಾಖಲಾಗಿದ್ದು, ಯೊಗೀಶ್ ಪ್ರಭು ಎಂಬವರು ಸ್ವಾತಂತ್ರ್ಯ ಸೇನಾನಿ ಟಿಪ್ಪು ಸುಲ್ತಾನ್ ಹಾಗೂ ಕರ್ನಾಟಕದ ಮುಖ್ಯಮಂತ್ರಿ

ಟಿಪ್ಪು ಸುಲ್ತಾನ್, ಸಿದ್ದರಾಮಯ್ಯರವರ ಅವಹೇಳನ ► ಉಪ್ಪಿನಂಗಡಿ ಯುವ ಕಾಂಗ್ರೆಸ್ ನಿಂದ ದೂರು Read More »

ಕರಾವಳಿ
Scroll to Top