ಕಡಬ ನ್ಯೂಸ್

ಎಣಿತಡ್ಕ: ದೈವಗಳ ಪುನಃಪ್ರತಿಷ್ಠಾಮಹೋತ್ಸವ ಹಾಗೂ ನೇಮೋತ್ಸವ

(ನ್ಯೂಸ್ ಕಡಬ) newskadaba.com.ಕಡಬ,ಜ.13.ಕಡಬ ತಾಲೂಕಿನ ಕೊೈಲ ಗ್ರಾಮದ ಏಣಿತಡ್ಕ ಶ್ರೀ ಗ್ರಾಮದೈವ ಶಿರಾಡಿ ಹಾಗೂ ಪರಿವಾರ ದೈವಗಳ ಪುನಃಪ್ರತಿಷ್ಠೆ ಕಲಶಾಭಿಷೇಕ ಮಹೋತ್ಸವ ಹಾಗೂ ನೇಮೋತ್ಸವ ಕಾರ್ಯಕ್ರಮ ಮೂರು ದಿನಗಳ ಕಾಲ ನಡೆಯಿತು.ವೇದಮೂರ್ತಿ ವೆಂಕಟ್ರಮಣ ಕುದುರೆತ್ತಾಯ ಅವರು ದೈವಗಳ ಪ್ರತಿಷ್ಠೆ ಹಾಗೂ ನಾಗ ಪ್ರತಿಷ್ಠಾ ಕಾರ್ಯ ನೆರವೇರಿಸಿದರು. ಮಂಗಳವಾರ ಸಂಜೆ ನಾಗನಕಟ್ಟೆಯಲ್ಲಿ ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ಬಿಂಬ ಶುದ್ಧಿ, ದಿಕ್ಪಾಲಕ ಬಲಿ ನಡೆಯಿತು. ಬುಧವಾರ ಬೆಳಿಗ್ಗೆ ಗಣಹೋಮ, ಪ್ರಧಾನ […]

ಎಣಿತಡ್ಕ: ದೈವಗಳ ಪುನಃಪ್ರತಿಷ್ಠಾಮಹೋತ್ಸವ ಹಾಗೂ ನೇಮೋತ್ಸವ Read More »

ಕರಾವಳಿ

ರಾಮಕುಂಜ: ವೇದಮೂರ್ತಿ ಇ.ವೆಂಕಟ್ರಮಣ ಉಪಾಧ್ಯಾಯ ನಿಧನ

(ನ್ಯೂಸ್ ಕಡಬ) newskadaba.com.ರಾಮಕುಂಜ,ಜ.12. ಕಡಬ: ರಾಮಕುಂಜ ಗ್ರಾಮದ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ಪವಿತ್ರಪಾಣಿ, ನಿವೃತ್ತ ಶಿಕ್ಷಕ, ಇರಕಿಮಠ ನಿವಾಸಿ ರಾಮಕುಂಜ ವೇದಮೂರ್ತಿ ಇ.ವೆಂಕಟ್ರಮಣ ಉಪಾಧ್ಯಾಯ(98)ರವರು ಅನಾರೋಗ್ಯದಿಂದ ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು.ವೆಂಕಟ್ರಮಣ ಉಪಾಧ್ಯಾಯರು ಕೆಲ ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ರಾಮಕುಂಜೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದು ಪ್ರಸ್ತುತ ಪವಿತ್ರಪಾಣಿಯಾಗಿದ್ದರು. ಇರಕಿಮಠ ಮುಖ್ಯಪ್ರಾಣಗೋಪಾಲಕೃಷ್ಣ ದೇವಸ್ಥಾನದ ಆಡಳಿತದಾರರೂ ಆಗಿದ್ದರು. ರಾಮಕುಂಜೇಶ್ವರ  ಹಿ.ಪ್ರಾ.ಶಾಲೆಯಲ್ಲಿ ಸುಮಾರು 32 ವರ್ಷಗಳ ಕಾಲ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಹಿರಿಯ ಪುರೋಹಿತರಾಗಿದ್ದು ದೇವಸ್ಥಾನದ ಕೆಲಸಗಳಲ್ಲಿ

ರಾಮಕುಂಜ: ವೇದಮೂರ್ತಿ ಇ.ವೆಂಕಟ್ರಮಣ ಉಪಾಧ್ಯಾಯ ನಿಧನ Read More »

ಕರಾವಳಿ

ಜ.27ರಂದು ಬೆಂಗಳೂರಿನಲ್ಲಿ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶ

(ನ್ಯೂಸ್ ಕಡಬ) newskadaba.com.,ಜ.12. ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕೌನ್ಸಿಲ್ ಆಶ್ರಯದಲ್ಲಿ ಬೃಹತ್ ಘೋಷಣಾ ಸಮಾವೇಶ ಬೆಂಗಳೂರಿನ ಹಜ್ ಕಮಿಟಿ ವಠಾರದಲ್ಲಿ ಜ.27ನೇ ಭಾನುವಾರ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಮುಸ್ಲಿಂ ಜಮಾಅತ್ ಕೌನ್ಸಿಲ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯ್ಯದ್ ಮೀರಾ ಸಾಹೇಬ್ ಹೇಳಿದರು.ಅವರು ಶನಿವಾರ ಕಡಬದ ಪ್ರೆಸ್ ಕ್ಲಬ್‍ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಒಂದು ಸಮಾವೇಶದಲ್ಲಿ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಉಲಾಮ ಶಿರೋಮಣಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು. ಮುಸ್ಲಿಂ ಜಮಾಅತ್ ಕೌನ್ಸಿಲ್ ಮುಸ್ಲಿಂ ಸಮುದಾಯದ ಅತ್ಯಂತ ಬಲಿಷ್ಠವಾದ

ಜ.27ರಂದು ಬೆಂಗಳೂರಿನಲ್ಲಿ ಮುಸ್ಲಿಂ ಜಮಾಅತ್ ಘೋಷಣಾ ಸಮಾವೇಶ Read More »

ಕರಾವಳಿ

ಪುತ್ತೂರು: ಜಿಲ್ಲಾ ಯುವ ಪ್ರಶಸ್ತಿಗೆ ಸವಣೂರು ಯುವಕ ಮಂಡಲ ಆಯ್ಕೆ

(ನ್ಯೂಸ್ ಕಡಬ) newskadaba.com.ಪುತ್ತೂರು,ಜ.12. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2018-19ನೇ ಸಾಲಿನಲ್ಲಿ ಕ್ರೀಡೆ, ಸಾಂಸ್ಕ್ರತಿಕ, ಹಾಗೂ ಸಮುದಾಯ ಅಭಿವ್ರೃಧ್ಧಿ ಕ್ಷೇತ್ರಗಳಲ್ಲಿ ಉತ್ತಮ ಕಾರ್ಯಚಟುವಟಿಕೆ ನಿರ್ವಹಿಸಿರುವ ಯುವಜನರಿಗೆ ಹಾಗೂ ನೊಂದಾಯಿತ ಯುವಕ/ಯುವತಿ ಸಂಘಗಳಿಗೆ  ಜಿಲ್ಲಾ ಯುವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಆಹ್ವಾನಿತ ಅರ್ಜಿಗಳ ಪ್ರಸ್ತಾವನೆಯನ್ನು ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸದಸ್ಯರು ಪರಿಶೀಲಿಸಿ ಅದರಲ್ಲಿ ಈ ಕೆಳಗಿನಂತೆ ವೈಯಕ್ತಿಕ ವಿಭಾಗ ಮತ್ತು ಸಾಂಘಿಕ ವಿಭಾಗದಲ್ಲಿ ಆಯ್ಕೆ ಮಾಡಲಾಗಿದೆ. ವೈಯಕ್ತಿಕ ವಿಭಾಗದಲ್ಲಿ: ದಿವ್ಯಶ್ರೀ, ಯುವತಿ ಮಂಡಲ(ರಿ) ಹಳೆಯಂಗಡಿ, ಮಂಗಳೂರು.

ಪುತ್ತೂರು: ಜಿಲ್ಲಾ ಯುವ ಪ್ರಶಸ್ತಿಗೆ ಸವಣೂರು ಯುವಕ ಮಂಡಲ ಆಯ್ಕೆ Read More »

ಕರಾವಳಿ

ಕೊಡಗು:  ಜನವರಿ 15 ರಂದು ಬ್ಯಾರಿ ಸಮಾವೇಶ

(ನ್ಯೂಸ್ ಕಡಬ) newskadaba.com.ಕೊಡಗು,ಜ.12. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಕೊಡಗು ಬ್ಯಾರೀಸ್ ವೆಲ್‍ಫೇರ್ ಟ್ರಸ್ಟ್ ಇದರ ಸಹಯೋಗದೊಂದಿಗೆ 2019 ರ ಜನವರಿ 15ರಂದು ಬೆಳಿಗ್ಗೆ 11 ಗಂಟೆಗೆ ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ “ಕೊಡಗು ಜಿಲ್ಲಾ ಬ್ಯಾರಿ ಸಮಾವೇಶ”ವನ್ನು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 11.30 ಗಂಟೆಗೆ ನಡೆಯಲಿರುವ ಬಹುಭಾಷಾ ಕವಿಗೋಷ್ಠಿಯ ಉದ್ಘಾಟನೆಯನ್ನು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷರಾದ ಎಂ.ಪಿ. ಕೇಶವ ಕಾಮತ್ ಮಾಡಲಿದ್ದು, ಅಧ್ಯಕ್ಷತೆಯನ್ನು ಸಾಹಿತಿ ಬಿ.ಎ. ಶಂಶುದ್ದೀನ್ ಮಡಿಕೇರಿ ವಹಿಸಲಿರುವರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ

ಕೊಡಗು:  ಜನವರಿ 15 ರಂದು ಬ್ಯಾರಿ ಸಮಾವೇಶ Read More »

ಕರಾವಳಿ

ಕುಟ್ರುಪ್ಪಾಡಿ: ವಾಳ್ಯ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com.ಕಡಬ,ಜ.11.ಕುಟ್ರುಪ್ಪಾಡಿ ಗ್ರಾಮದ ವಾಳ್ಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಮಕುಂಜದ ಶ್ರೀ ರಾಮಕುಂಜೇಶ್ವರ ಮಹಾ ವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನ ಘಟಕದ ವತಿಯಿಂದ ನಡೆದ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಜೇಸಿಐ ಕಡಬ ಕದಂಬ ಘಟಕದ ಸಹಯೋಗದೊಂದಿಗೆ ಪರಿಸರ ಜಾಗೃತಿ ಮಾಹಿತಿ ಕಾರ್ಯಾಗಾರ ನಡೆಯಿತು. ಸಂಪನ್ಮೂಲವ್ಯಕ್ತಿಯಾಗಿ ಆಗಮಿಸಿ ಕಾರ್ಯಾಗಾರವನ್ನು ನಡೆಸಿಕೊಟ್ಟ ಅರಣ್ಯ ಇಲಾಖೆಯ ಪಂಜ ವಲಯದ ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ರೈ ಮಾತನಾಡಿ ಪರಿಸರ ಸಂರಕ್ಷಣೆಯ ಮಹತ್ವದ ವಿಚಾರ ಎನ್ನುವುದು ನಮ್ಮ ಹೃದಯದಲ್ಲಿ

ಕುಟ್ರುಪ್ಪಾಡಿ: ವಾಳ್ಯ ಶಾಲೆಯಲ್ಲಿ ಪರಿಸರ ಜಾಗೃತಿ ಮಾಹಿತಿ ಕಾರ್ಯಕ್ರಮ Read More »

ಕರಾವಳಿ

ಮಂಗಳೂರಿನ ಯುವ ವೈದ್ಯೆಗೆ ಅಮೆರಿಕನ್ ಸ್ಕಾಲರ್ ಶಿಪ್ ಪ್ರಶಸ್ತಿ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.11. ಅಮೇರಿಕನ್ ಅಕಾಡೆಮಿ ಆಫ್ ನ್ಯೂರೋಲಜಿ ಸಂಸ್ಥೆಯ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸ್ಕಾಲರ್ ಶಿಪ್ ಅವಾರ್ಡ್‍ಗೆ ಮಂಗಳೂರಿನ ವೈದ್ಯೆ ಡಾ. ಸಲ್ಮಾ ಸುಹಾನ ಆಯ್ಕೆಯಾಗಿದ್ದಾರೆ.ದಾವಣಗೆರೆಯ ಎಸ್‍ಎಸ್‍ಐಎಂಎಸ್‍ಆರ್‍ಸಿ ವೈದ್ಯಕೀಯ ಕಾಲೇಜಿನಲ್ಲಿ ನ್ಯೂರೋಲಜಿ ವಿಭಾಗದಲ್ಲಿ ಸೂಪರ್ ಸ್ಪೆಷಾಲಿಟಿ (ಡಿಎಂ) ವ್ಯಾಸಂಗ ಮಾಡುತ್ತಿರುವ ಡಾ.ಸಲ್ಮಾ ಸುಹಾನಾ ಅವರ ಸೆರೆಬ್ರಲ್ ವೀನಸ್ ತ್ರಂಬೋಸಿಸ್ ಕುರಿತ ಅಧ್ಯಯನವನ್ನು ಗುರುತಿಸಿ, ಪ್ರಶಸ್ತಿ ಸ್ವೀಕರಿಸಲು ಮೇ ತಿಂಗಳಲ್ಲಿ ಫಿಲಡೆಲ್ಫಿಯಾದಲ್ಲಿ ನಡೆಯುವ ಜಾಗತಿಕ ನರರೋಗ ತಜ್ಞರ ಸಮಾವೇಶಕ್ಕೆ ಆಹ್ವಾನಿಸಲಾಗಿದೆ. ಡಾ.ಸಲ್ಮಾ ಸುಹಾನ ಅವರು ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್

ಮಂಗಳೂರಿನ ಯುವ ವೈದ್ಯೆಗೆ ಅಮೆರಿಕನ್ ಸ್ಕಾಲರ್ ಶಿಪ್ ಪ್ರಶಸ್ತಿ Read More »

ಅಂತರ್ರಾಷ್ಟ್ರೀಯ ನ್ಯೂಸ್

ಮತ್ತೆ ಮತ್ತೆ ಮರುಕಳಿಸುತ್ತಿರುವ ಮಂಗನ ಖಾಯಿಲೆ ✍? ಡಾ| ಮುರಲೀ ಮೋಹನ್ ಚೂಂತಾರು

(ನ್ಯೂಸ್ ಕಡಬ) newskadaba.com.ಕಡಬ,ಜ.11.ಮಂಗನ ಖಾಯಿಲೆ ಮೊದಲ ಬಾರಿಗೆ 1957ರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಕ್ಯಾಸನೂರ್ ಎಂಬ ಹಳ್ಳಿಯ ಕಾನನದಲ್ಲಿ ಕಾಣಿಸಿಕೊಂಡಿತ್ತು. ಈ ಕಾರಣದಿಂದಲೇ ಈ ರೋಗವನ್ನು ಕ್ಯಾಸನೂರ್ ಪಾರೇಸ್ಟ್ ಡಿಸೀಸ್ (ಏಈಆ) ಎಂದೂ ಕರೆಯುತ್ತಾರೆ. ಸಾವಿರಾರು ಮಂಗಗಳು ಈ ರೋಗದಿಂದ ಸಾವಿಗಿಡಾಗಿದ್ದ ಕಾರಣದಿಂದಲೇ, ಈ ರೋಗ ಮಂಗಜ್ವರ, ಮಂಗನ ಖಾಯಿಲೆ ಎಂದೂ ಕುಖ್ಯಾತಿ ಪಡೆದಿದೆ. ಉಣ್ಣೆಗಳ ಮುಖಾಂತರ ಹರಡುವ ಈ ರೋಗ, ಉಣ್ಣೆ ಕಡಿತದ ಕೆಲವೇ ಗಂಟೆಗಳಲ್ಲಿ ಈ ವೈರಾಣು ರಕ್ತ ಸೇರುತ್ತದೆ. ಪ್ಲಾವಿವೈರಸ್ ಎಂಬ ಗುಂಪಿಗೆ

ಮತ್ತೆ ಮತ್ತೆ ಮರುಕಳಿಸುತ್ತಿರುವ ಮಂಗನ ಖಾಯಿಲೆ ✍? ಡಾ| ಮುರಲೀ ಮೋಹನ್ ಚೂಂತಾರು Read More »

ವಿಶೇಷ ಲೇಖನಗಳು

  ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆ – ಪುಸ್ತಕ ಆಹ್ವಾನ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.10. 2018ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಸಾಹಿತ್ಯ/ ಲಲಿತಕಲೆ/ ವಿಜ್ಞಾನ/ ಮಾನವಿಕ/ ವೈದ್ಯಕೀಯ/ ತಾಂತ್ರಿಕ/ ಸ್ಪರ್ಧಾತ್ಮಕ/ ಪರಾಮರ್ಶನ ಕೃತಿಗಳು ಹಾಗೂ ಮಕ್ಕಳ ಸಾಹಿತ್ಯ/ ನವಸಾಕ್ಷರರ ಕೃತಿಗಳು ಇತ್ಯಾದಿ ವಿಷಯಗಳ ಕನ್ನಡ /ಆಂಗ್ಲ/ ಇತರೆ ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆಗೆ ಲೇಖಕರು, ಲೇಖಕ-ಪ್ರಕಾಶಕರು, ಪ್ರಕಟಣಾ ಸಂಸ್ಥೆಗಳು ಹಾಗೂ ವಿತರಕರಿಂದ ಪುಸ್ತಕಗಳನ್ನು ಆಹ್ವಾನಿಸಿದೆ.    2018ರ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ಗ್ರಂಥಸ್ವಾಮ್ಯ ವಿಭಾಗ, ರಾಜ್ಯಕೇಂದ್ರಗ್ರಂಥಾಲಯ, ಕಬ್ಬನ್‍ ಉದ್ಯಾನವನ, ಬೆಂಗಳೂರು ಇಲ್ಲಿ ಜನವರಿ 30ರ ವರೆಗೆ ಕಾಪಿರೈಟ್

  ಭಾರತೀಯ ಭಾಷೆಯ ಗ್ರಂಥಗಳ ಆಯ್ಕೆ – ಪುಸ್ತಕ ಆಹ್ವಾನ Read More »

ಕರಾವಳಿ

  ಜನವರಿ 17,18,19  ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧೆ

(ನ್ಯೂಸ್ ಕಡಬ) newskadaba.com.ಮಂಗಳೂರು,ಜ.10. ಭಾರತ ಸರಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಸಂಸ್ಥೆಗಳಾದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ನೆಹರು ಯುವ ಕೇಂದ್ರ ಸಂಘಟನೆಯ ಆಶ್ರಯದಲ್ಲಿ ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧೆಯನ್ನು ಆಯೋಜಿಸಿದೆ. ಜನವರಿ 17,18,19 ರಂದು ದಕ್ಷಿಣ ಕನ್ನಡ ಜಿಲ್ಲಾಮಟ್ಟದಲ್ಲಿ ಪ್ರಥಮ ಸುತ್ತಿನ ಸ್ಪರ್ಧೆಯನ್ನು ಸಂತ ಆಗ್ನೇಸ್ ಕಾಲೇಜ್ ಬೆಂದೂರು ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆಯು ಎರಡು ವಿಧದಲ್ಲಿ ನಡೆಯಲಿದೆ. ಆಯ್ದ ವಿಷಯಗಳ ಬಗ್ಗೆ ಎರಡು ಮೂರು ನಿಮಿಷ ಕನ್ನಡ/ಇಂಗ್ಲಿಷ್/ಹಿಂದಿ ಭಾಷೆಯಲ್ಲಿ ಮಾತನಾಡಬೇಕು ಹಾಗೂ ತಮ್ಮದೇ ಭಾಷಣದ ವಿಡಿಯೋ

  ಜನವರಿ 17,18,19  ರಾಷ್ಟ್ರೀಯ ಯುವ ಸಂಸತ್ತು ಸ್ಪರ್ಧೆ Read More »

ಕರಾವಳಿ
Scroll to Top