ಕಡಬ ನ್ಯೂಸ್

ಜಂಕ್ ಆಹಾರ ಸೇವಿಸಬೇಡಿ► ಡಾ| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು,ಫೆ.07.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ನಾರ್ಲ – ಪಡೀಲ್, ತಲಪಾಡಿ ಇಲ್ಲಿ ದಿನಾಂಕ 05/02/2019ರಂದು ಚೂಂತಾರು ಸರೋಜಿನಿ ಪ್ರತಿಷ್ಠಾನ ಭಟ್ ವತಿಯಿಂದ ಉಚಿತ ದಂತ ಆರೋಗ್ಯ ಮಾಹಿತಿ ಶಿಬಿರ ಮತ್ತು ಟೂತ್ ಪೇಸ್ಟ್ ವಿತರಣಾ ಕಾರ್ಯಕ್ರಮ ಜರುಗಿತು. ಸುರಕ್ಷಾ ದಂತ ಚಿಕಿತ್ಸಾಲಯ ಇದರ ಹಿರಿಯ ದಂತ ವೈದ್ಯರು ಮತ್ತು ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕರಾದ ಡಾ|ಮುರಲೀ ಮೋಹನ್ ಚೂಂತಾರು ಇವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.   ಡಾ| […]

ಜಂಕ್ ಆಹಾರ ಸೇವಿಸಬೇಡಿ► ಡಾ| ಚೂಂತಾರು Read More »

ಕರಾವಳಿ

ಮಂಗಳೂರು: ನೂತನ ಬಾಲಕಿಯರ ಕ್ರೀಡಾ ವಸತಿ ನಿಲಯಕ್ಕೆ  ಆದ್ಯತೆ

(ನ್ಯೂಸ್ ಕಡಬ) newskadaba.com ಮಂಗಳೂರು,ಫೆ.06. ಮಂಗಳೂರಿನಲ್ಲಿ ರೂ. 150.00 ಲಕ್ಷ ವೆಚ್ಚದಲ್ಲಿ ಬಾಲಕಿಯರಿಗಾಗಿ ಪ್ರತ್ಯೇಕ ಕ್ರೀಡಾ ವಸತಿ ನಿಲಯ ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ರಹೀಂ ಖಾನ್ ಹೇಳಿದರು. ಅವರಿಂದು ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕ್ರೀಡಾಸಕ್ತರು ಮತ್ತು ತರಬೇತುದಾರರೊಡನೆ ಮಾತುಕತೆ ನಡೆಸಿ ಸ್ಟೇಡಿಯಂ ಪರಿಶೀಲನೆ ನಡೆಸಿದರು.ಕ್ರೀಡಾ ಹಾಸ್ಟೆಲ್‍ಗಳಿಗೆ ತರಬೇತುದಾರರ ನೇಮಕ ಸೇರಿದಂತೆ, ಗುಣಮಟ್ಟದ ಆಹಾರ ಪೂರೈಕೆ ಬಾಲಕ ಬಾಲಕಿಯರ ಪ್ರತ್ಯೇಕ ಹಾಸ್ಟೇಲ್ ಸಹಿತ ಕ್ರೀಡಾ ಕ್ಷೇತ್ರದ ಸಮಗ್ರ ಅಭಿವೃದ್ಧಿ

ಮಂಗಳೂರು: ನೂತನ ಬಾಲಕಿಯರ ಕ್ರೀಡಾ ವಸತಿ ನಿಲಯಕ್ಕೆ  ಆದ್ಯತೆ Read More »

ಕರಾವಳಿ

ಕಡಬ: ಕೇಂದ್ರದ ಬಜೆಟ್‍ನ ಕಿಸಾನ್ ಸಮ್ಮಾನ್ ಅಲ್ಲ ಅದು ಕಿಸಾನ್ ನಿರ್ನಾಮ್► ರೈತ ಸಂಘ ಲೇವಡಿ

(ನ್ಯೂಸ್ ಕಡಬ) newskadaba.comಕಡಬ,ಫೆ.06.ಕೇಂದ್ರ ಸರಕಾರ ಮಂಡಿಸಿರುವ ಬಜೆಟ್‍ನಲ್ಲಿ ರೈತರ ಖಾತೆ ನೇರವಾಗಿ 6000 ರೂ ಜಮೆ ಮಾಡುವ ಕಿಸಾನ್ ಸಮ್ಮಾನ್ ಯೋಜನೆ ರೈತರ ಅಭ್ಯುದಯಕ್ಕೆಪ್ರೇರಣೆಯಾಗುವುದಿಲ್ಲ, ಅದು ರೈತರ ಸಮ್ಮಾನ್ ಬದಲು ರೈತರ ನಿರ್ಮಾಮ್‍ಎಂದು ಗೋಚರಿಸುತ್ತದೆ, ಇದು ಸ್ವಾಭಿಮಾನಿ ರೈತರಿಗೆ ಮಾಡಿದ ಅಪಮಾನ ಎಂದು ರಾಜ್ಯ ರೈತ ಸಂಘ ಹಸಿರು ಸೇನೆಯ ಕಡಬ ತಾಲುಕು ಅಧ್ಯಕ್ಷ ವಿಕ್ಟರ್ ಮಾರ್ಟಿಸ್ ಲೇವಡಿ ಮಾಡಿದರು.   ಕಡಬದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರೈತರಿಗಾಗಿ ಘೋಷಿಸಿರುವ ಕೇಂದ್ರ ಯೋಜನೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ದೇಶದ

ಕಡಬ: ಕೇಂದ್ರದ ಬಜೆಟ್‍ನ ಕಿಸಾನ್ ಸಮ್ಮಾನ್ ಅಲ್ಲ ಅದು ಕಿಸಾನ್ ನಿರ್ನಾಮ್► ರೈತ ಸಂಘ ಲೇವಡಿ Read More »

ಕರಾವಳಿ

ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಸೈಕಲ್ ವಿತರಣೆ

(ನ್ಯೂಸ್ ಕಡಬ) newskadaba.comರಾಮಕುಂಜ,ಫೆ.06.  ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಸೈಕಲ್ ವಿತರಣಾ ಕಾರ್ಯಕ್ರಮ ನಡೆಯಿತು.ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್ .ಆರ್.ಕೆ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಶುಭಹಾರೈಸಿದರು. ಶಾಲಾ ಮುಖ್ಯಗುರು ಸತೀಶ್.ಭಟ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಗಣೇಶ್ ಕಟ್ಟಪುಣಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಶ್ರೇಯಾ ಮತ್ತು ಮಯೂರಿ ಪ್ರಾರ್ಥಿಸಿದರು. ಶಿಕ್ಷಕಿ ರಶ್ಮಿ.ಬಿ.ಎಸ್ ವಂದಿಸಿದರು. ಶಿಕ್ಷಕಿ ನಿಶ್ಚಿತಾ.ಎಸ್.ಜಿ ಕಾರ್ಯಕ್ರಮವನ್ನು ನಿರೂಪಿಸಿದರು.

ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢ ಶಾಲೆಯಲ್ಲಿ ಸೈಕಲ್ ವಿತರಣೆ Read More »

ಕರಾವಳಿ

ಗಂಡಿಬಾಗಿಲು-ನೆಹರು ತೋಟ-ವಳಕಡಮ ರಸ್ತೆಗೆ ದುರಸ್ತಿಗೆ ಒಟ್ಟು 40 ಲಕ್ಷ ರೂ► ಕೊೈಲ ಫಾರ್ಮ್‍ನೊಳಗಿನ ರಸ್ತೆ ಸಮಸ್ಯೆಗೆ ಸಚಿವರ ಭೇಟಿ: ಶಾಸಕ ಅಂಗಾರ ಭರವಸೆ

(ನ್ಯೂಸ್ ಕಡಬ) newskadaba.comನೂಜಿಬಾಳ್ತಿಲ,ಫೆ.06. ತೀರಾ ಹದಗೆಟ್ಟಿರುವ ಕೊೈಲ ಗ್ರಾಮದ ಗಂಡಿಬಾಗಿಲಿನಿಂದ ನೆಹರು ತೋಟ ತನಕ ರಸ್ತೆಗೆ ಹದಿನೈದು ಲಕ್ಷ ರೂ ಹಾಗೂ ನೆಹರು ತೋಟದಿಂದ ವಳಕಡಮ ಶಾಲಾ ಬಳಿಯವರೆಗಿನ ರಸ್ತೆಗೆ ಇಪ್ಪತೈದು ಲಕ್ಷ ರೂ ಅನುದಾನವನ್ನು ಮಳೆಹಾನಿ ಯೋಜನೆಯಲ್ಲಿ ಮಂಜೂರು ಮಾಡಲಾಗಿದೆ, ಕೊೈಲ ಕೆ.ಸಿ.ಫಾರ್ಮ್‍ನೊಳಗಿನ ರಸ್ತೆ ಸಮಸ್ಯೆಗೆ ಪರಿಹಾರಕ್ಕೆ ಸಚಿವರ ಮಟ್ಟದಲ್ಲಿ ಒತ್ತಡ ಹಾಕುವುದಾಗಿ ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.   ಕೊೈಲ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಕೊೈಲ ಗ್ರಾಮ ಪಂಚಾಯತಿ ಅಧ್ಯಕ್ಷೆ ಹೇಮಾಮೋಹನ್‍ದಾಸ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ

ಗಂಡಿಬಾಗಿಲು-ನೆಹರು ತೋಟ-ವಳಕಡಮ ರಸ್ತೆಗೆ ದುರಸ್ತಿಗೆ ಒಟ್ಟು 40 ಲಕ್ಷ ರೂ► ಕೊೈಲ ಫಾರ್ಮ್‍ನೊಳಗಿನ ರಸ್ತೆ ಸಮಸ್ಯೆಗೆ ಸಚಿವರ ಭೇಟಿ: ಶಾಸಕ ಅಂಗಾರ ಭರವಸೆ Read More »

ಕರಾವಳಿ

ಮದ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ► ಮದ್ಯವರ್ಜನ ಶಿಬಿರ ಸಮಾರೋಪ ಸಮಾರಂಭದಲ್ಲಿ ಬಾಲಕೃಷ್ಣ ಬಳ್ಳೇರಿ

(ನ್ಯೂಸ್ ಕಡಬ) ‌‌‌‌‌ newskadaba.com ಕಡಬ, ಫೆ.06. ನಾವು ಎಷ್ಟೇ ಪ್ರಯತ್ನಪಟ್ಟರೂ ಮದ್ಯಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ, ದುಷ್ಚಟಗಳ ಮಹಾಮಾರಿಯಾಗಿರುವ ಮದ್ಯವ್ಯಸನದ ನಿರ್ಮೂಲನೆ ಮಾಡಿ ಸಮೃದ್ಧ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಬಾಲಕೃಷ್ಣ ಗೌಡ ಬಳ್ಳೇರಿ ಹೇಳಿದರು. ಅವರು ಮಂಗಳವಾರ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಒಂದು ವಾರದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ

ಮದ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ► ಮದ್ಯವರ್ಜನ ಶಿಬಿರ ಸಮಾರೋಪ ಸಮಾರಂಭದಲ್ಲಿ ಬಾಲಕೃಷ್ಣ ಬಳ್ಳೇರಿ Read More »

ಕರಾವಳಿ

ನೂಜಿಬಾಳ್ತಿಲ: ಸ.ಉ.ಹಿ.ಪ್ರಾ.ಶಾಲೆಗೆ ತಾ.ಪಂ.ಅಧ್ಯಕ್ಷರ ಬೇಟಿ ► 9 ಹಾಗೂ 10ನೇ ತರಗತಿ ಪ್ರಾರಂಭಿಸಲು ಎಸ್.ಡಿ.ಎಂ.ಸಿ.ಯಿಂದ ಮನವಿ

(ನ್ಯೂಸ್ ಕಡಬ) newskadaba.comನೂಜಿಬಾಳ್ತಿಲ,ಫೆ.06. ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ರಾಧಕೃಷ್ಣ ಬೋರ್ಕರ್ ರವರು ಫೆ.4ರಂದು ನೂಜಿಬಾಳ್ತಿಲ ಸ.ಉ.ಹಿ.ಪ್ರಾ.ಶಾಲೆಗೆ ಬೇಟಿ ನೀಡಿದರು.ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲಕ್ಷ್ಮಣ ಗೌಡರ ನೇತೃತ್ವದಲ್ಲಿ ಶಾಲೆಯಲ್ಲಿ ಈಗಾಗಲೇ 8ನೇ ತರಗತಿ ಪ್ರಾರಂಭಿಸಲಾಗಿದ್ದು, ಮುಂದೆ 9 ಹಾಗೂ 10ನೇ ತರಗತಿ ಪ್ರಾರಂಭಿಸುವಂತೆ ಮನವಿ ಸಲ್ಲಿಸಲಾಯಿತು. ನೂಜಿಬಾಳ್ತಿಲ, ರೆಂಜಿಲಾಡಿ, ಇಚ್ಲಂಪಾಡಿ, ಕೊಣಾಜೆ ಪರಿಸರದ ಕಿ.ಪ್ರಾ ಹಾಗೂ ಹಿ.ಪ್ರಾ ಶಾಲಾ ವಿದ್ಯಾರ್ಥಿಗಳು ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಹತ್ತಿರವೆಲ್ಲಿಯೂ ಸರಕಾರಿ ಶಾಲೆಗಳಿಲ್ಲದೇ ಖಾಸಗಿ ಶಾಲೆಗಳನ್ನು ಅವಲಂಭಿಸುತ್ತಿದ್ದು, ನೂಜಿಬಾಳ್ತಿಲದಲ್ಲಿ ಹೈಸ್ಕೂಲ್

ನೂಜಿಬಾಳ್ತಿಲ: ಸ.ಉ.ಹಿ.ಪ್ರಾ.ಶಾಲೆಗೆ ತಾ.ಪಂ.ಅಧ್ಯಕ್ಷರ ಬೇಟಿ ► 9 ಹಾಗೂ 10ನೇ ತರಗತಿ ಪ್ರಾರಂಭಿಸಲು ಎಸ್.ಡಿ.ಎಂ.ಸಿ.ಯಿಂದ ಮನವಿ Read More »

ಕರಾವಳಿ

ಕನ್ವಾರೆ ಸಾರಿಮಂಟಮೆ ಶ್ರೀ ರಾಜನ್ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ

(ನ್ಯೂಸ್ ಕಡಬ) newskadaba.comಕಡಬ,ಫೆ.06. ನೂಜಿಬಾಳ್ತಿಲ ಗ್ರಾಮದ ಕನ್ವಾರೆ ಸಾರಿಮಂಟಮೆಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ರಾಜನ್ ದೈವದ ನೇಮೋತ್ಸವ ಫೆ.3 ಹಾಗೂ 4ರಂದು ನಡೆಯಿತು.ಫೆ.3ರಂದು ಸಾರಿಮಂಟಮೆಯಲ್ಲಿ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಕುರಿಯಾಳ ಕೊಪ್ಪ ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಪ್ರಧಾನ ಅರ್ಚಕರಾದ ವೆಂಕಟರಮಣ ಅಮ್ಮಣ್ಣಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ರಾತ್ರಿ ಬಾಳ್ತಿಲ ಗುತ್ತುಮನೆಯಿಂದ ಶ್ರೀ ರಾಜನ್ ದೈವದ ಭಂಡಾರ ಸಾರಿಮಂಟಮೆಗೆ ಬ್ಯಾಂಡ್ ವಾದ್ಯಗಳೊಂದಿಗೆ ತರಲಾಯಿತು. ರಾತ್ರಿ ಸ್ಥಳೀಯ ಶಾಲಾ ಮಕ್ಕಳಿಂದ ವಿವಿಧ ವಿನೋದಾವಳಿಗಳು ನಡೆದರೆ, ಉದ್ಯಮಿ ಬಾಲಕೃಷ್ಣ

ಕನ್ವಾರೆ ಸಾರಿಮಂಟಮೆ ಶ್ರೀ ರಾಜನ್ ದೈವಸ್ಥಾನದಲ್ಲಿ ದೈವಗಳ ನೇಮೋತ್ಸವ Read More »

ಕರಾವಳಿ

ಫೆ 7 ರಂದು ಆತೂರಿನಲ್ಲಿ ಏಕದಿನ ಮತಪ್ರಭಾಷಣ►ನೌಶಾದ್ ಬಾಖವಿ ಪ್ರಮುಖ ಭಾಷಣ

(ನ್ಯೂಸ್ ಕಡಬ) newskadaba.comಆತೂರು,ಫೆ.06.ಆತೂರು ಶಂಸುಲ್ ಉಲಾಮ ಕ್ರಿಯಾ ಸಮಿತಿಯ ಪಂಚ ವಾರ್ಷಿಕೋತ್ಸವ ಪ್ರಯುಕ್ತ ಏಕದಿನ ಮತ ಪ್ರಭಾಷಣ ಆತೂರು ಸಂಶುಲ್ ಉಲಾಮ ನಗರದ ಜೆಎಮ್‍ಜೆ ವಠಾರದಲ್ಲಿ ಫೆ 7 ರಂದು ನಡೆಯಲಿದೆ, ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ವಾಗ್ಮಿ ಕೇರಳ ತಿರುವನಂತಪುರದ ಎ.ಎಂ.ನೌಶಾದ್ ಬಾಖವಿ ಭಾಗವಹಿಸಲಿದ್ದಾರೆ ಎಂದು ಆತೂರು ಎಮ್‍ಜೆಎಂ ಕಾರ್ಯದರ್ಶಿ ಫಲೂಲುದ್ದೀನ್ ಹೇಂತಾರು ಹೇಳಿದರು. ಅವರು ಮಂಗಳವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಆತೂರಿನಲ್ಲಿ ಕುರಾನ್ ಕಂಠಪಾಠಮಾಡುವ ವಿಫುಲ್ ಕಾಲೇಜು ಸ್ಥಾಪನೆಯ ಹಿನ್ನೆಯಲ್ಲಿ ಈ ಮತಪ್ರಭಾಷಣವನ್ನು ಏರ್ಪಡಿಸಲಾಗಿದೆ ಎಂದರು. ಬೆಳಿಗ್ಗೆ

ಫೆ 7 ರಂದು ಆತೂರಿನಲ್ಲಿ ಏಕದಿನ ಮತಪ್ರಭಾಷಣ►ನೌಶಾದ್ ಬಾಖವಿ ಪ್ರಮುಖ ಭಾಷಣ Read More »

ಕರಾವಳಿ

ಬೆಳ್ಳಾರೆ: ಸಾಲಭಾದೆ ತಾಳಲಾರದೆ ಮಹಿಳೆ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.comಬೆಳ್ಳಾರೆ,ಫೆ.05.ಮಹಿಳೆಯೊಬ್ಬರು ತಾನು ಮಾಡಿದ ಸಾಲ ಕಟ್ಟಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ಳಾರೆ ಪೋಲಿಸ್ ಠಾಣೆಯಿಂದ ವರದಿಯಾಗಿದೆ.ಆತ್ಮಹತ್ಯೆ ಮಾಡಿಕೊಂಡವರನ್ನು ಸುಳ್ಯ ತಾಲೂಕು ಮುಪ್ಪೇರಿಯಾ ಗ್ರಾಮದ ಕಂಡಿಕಟ್ಟ ನಿವಾಸಿಯಾದ ಸುಂದರ ಎಂಬವರ ಪತ್ನಿ ವಾರಿಜ ಎಂದು ಗುರುತಿಸಲಾಗಿದೆ. ವಾರಿಜರವರು ಸಾಲ ಕಟ್ಟಲು ಸಾಧ್ಯವಾಗದೆ ಜೀವನ ದಲ್ಲಿ ಜಿಗುಪ್ಸೆಗೊಂಡು ಯಾವುದೋ ಕೀಟನಾಶಕ ಸೇವಿಸಿ  ಆತ್ಮಹತ್ಯೆ ಮಾಡಿಕೊಳ್ಳಲು  ಹೋಗಿ ಅಸ್ವಸ್ಥಗೊಂಡವರನ್ನು ಮನೆಯವರು ಚಿಕಿತ್ಸೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.ಆದರೆ ಅಲ್ಲಿ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ

ಬೆಳ್ಳಾರೆ: ಸಾಲಭಾದೆ ತಾಳಲಾರದೆ ಮಹಿಳೆ ಆತ್ಮಹತ್ಯೆ Read More »

ಕರಾವಳಿ
Scroll to Top