ಕಡಬ ನ್ಯೂಸ್

ಯುವತಿ ನಾಪತ್ತೆ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17.ಗೌತಮಿ (ಪ್ರಾಯ 28 ವರ್ಷ) ಎಂಬಾಕೆ ಮೇ 12 ರಂದು ಪೂರ್ವಾಹ್ನ 10 ಗಂಟೆಗೆ ತನ್ನ ತಾಯಿಯಲ್ಲಿ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೊರ ಹೋದವಳು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಪ್ರಕರಣ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಕಾಣೆಯಾದವರ ಚಹರೆ ಇಂತಿವೆ: ಮೈಬಣ್ಣ – ಬಿಳಿ, 5.3 ಅಡಿ ಎತ್ತರ, ಕಪ್ಪು ಚೂಡಿದಾರ್ ಪ್ಯಾಂಟ್ ಮತ್ತು ಕೆಂಪು ಟಾಪ್ ಧರಿಸಿದ್ದು, ವಿದ್ಯಾಭ್ಯಾಸ 7 ನೇ ಕ್ಲಾಸು, ತಿಳಿದಿರುವ ಭಾಷೆ ತುಳು, ಕನ್ನಡ. ಈ […]

ಯುವತಿ ನಾಪತ್ತೆ Read More »

ಕರಾವಳಿ

ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳಿಗೆ ದಾಖಲಾತಿ ಪ್ರಾರಂಭ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17.2019-20ನೇ ಸಾಲಿನಲ್ಲಿ ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳ ವ್ಯಾಸಂಗಕ್ಕಾಗಿ ರಾಜ್ಯದ ಸರ್ಕಾರಿ ಮತ್ತು ಮಾನ್ಯತೆ ಪಡೆದ ಅನುದಾನಿತ ಮತ್ತು ಅನುದಾನ ರಹಿತ ಶಿಕ್ಷಕ ತರಬೇತಿ ಸಂಸ್ಥೆಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಅಭ್ಯರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್‍ಸೈಟ್www.schooleducation.kar.nic.in ನಲ್ಲಿರುವ ದಾಖಲಾತಿ ಅರ್ಜಿಯನ್ನು ಮುದ್ರಿಸಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಸಂಬಂಧಿಸಿದ ಡಯಟ್‍ಗೆ ಸಲ್ಲಿಸಬೇಕು. ದಾಖಲಾತಿ ಅರ್ಜಿಗಳನ್ನು ಮೇ 28 ರವರೆಗೆ ಸಲ್ಲಿಸಬಹುದಾಗಿದ್ದು, ಅರ್ಜಿಯನ್ನು ಸಲ್ಲಿಸುವ ವಿಧಾನ, ಅರ್ಹತೆ ಮತ್ತು ಮೀಸಲಾತಿ ವಿವರಗಳು

ಡಿ.ಎಲ್.ಇಡಿ ಮತ್ತು ಡಿ.ಪಿ.ಇಡಿ ಕೋರ್ಸುಗಳಿಗೆ ದಾಖಲಾತಿ ಪ್ರಾರಂಭ Read More »

ಕರಾವಳಿ

ರೆಡ್ ಕ್ರಾಸ್ ಲೇಡಿಗೋಷನ್ ರಕ್ತ ನಿಧಿಯಲ್ಲಿ ಕೆಳಕಂಡ ರಕ್ತದ ಎಲ್ಲಾ ಗುಂಪುಗಳು ಲಭ್ಯ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಕ್ತ ನಿಧಿಯು ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ರೋಗಿಗಳಿಗೆ ರಕ್ತ ನೀಡಲು ರಕ್ತದ ಕೊರತೆ ಕಂಡುಬಂದಿತ್ತು. ಆದರೆ ಕಳೆದ ಒಂದು ವಾರದಿಂದ ಸತತವಾಗಿ ರಕ್ತದಾನ ಶಿಬಿರಗಳನ್ನು ನಮ್ಮ ಸಂಸ್ಥೆಯ ವತಿಯಿಂದ ಏರ್ಪಡಿಸಲಾಗಿದ್ದು, ದಾನಿಗಳು ಸ್ಪಂದಿಸಿ ಉದಾರವಾಗಿ ರಕ್ತ ದಾನ ಮಾಡಿದ್ದರಿಂದ ರೆಡ್ ಕ್ರಾಸ್ ಲೇಡಿಗೋಷನ್ ರಕ್ತ ನಿಧಿಯಲ್ಲಿ ಕೆಳಕಂಡ ರಕ್ತದ ಎಲ್ಲಾ ಗುಂಪುಗಳು ಲಭ್ಯವಿರುತ್ತವೆ. BLOOD GROUP PCV FFP PLTC A+ 71

ರೆಡ್ ಕ್ರಾಸ್ ಲೇಡಿಗೋಷನ್ ರಕ್ತ ನಿಧಿಯಲ್ಲಿ ಕೆಳಕಂಡ ರಕ್ತದ ಎಲ್ಲಾ ಗುಂಪುಗಳು ಲಭ್ಯ Read More »

ಕರಾವಳಿ

ಜೂನ್ 8 ಮತ್ತು 9 ರಂದು ಹಣ್ಣುಗಳ ಉತ್ಸವ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.17.ಮಂಗಳೂರಿನ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದಲ್ಲಿ ಜೂನ್ 8 ಮತ್ತು 9 (ಶನಿವಾರ ಮತ್ತು ಆದಿತ್ಯವಾರ) ರಂದು ‘ಹಣ್ಣುಗಳ ಉತ್ಸವ’ ವನ್ನು ತೋಟಗಾರಿಕಾ ಇಲಾಖಾ ಸಹಯೋಗದೊಂದಿಗೆ ಆಚರಿಸಲಾಗುವುದು.ಈ ಕಾರ್ಯಕ್ರಮಕ್ಕೆ ಪ್ರಾದೇಶಿಕವಾದ ಹಲಸು, ಮಾವು ಹಾಗೂ ಇತರ ಹಣ್ಣುಗಳಲ್ಲದೆ ರಾಜ್ಯದ ಇತರೆ ಕಡೆಯ ಮೌಲ್ಯವರ್ದಿತ ಹಣ್ಣುಗಳನ್ನು ಬೆಳೆಗಾರರೇ ತಂದು ಪ್ರದರ್ಶಿಸಿ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ, ವಿವಿಧ ಹಣ್ಣುಗಳು, ಔಷದೀಯ ಸಸಿಗಳು, ಕಸಿ ಗಿಡಗಳು, ಬೀಜಗಳು, ಖಾದಿ ಬಟ್ಟೆಗಳು, ಸಹಜ ಬಣ್ಣದ ಕೈಮಗ್ಗದ ವಸ್ತ್ರಗಳು, ಸಾವಯವ

ಜೂನ್ 8 ಮತ್ತು 9 ರಂದು ಹಣ್ಣುಗಳ ಉತ್ಸವ Read More »

ಕರಾವಳಿ

ಸೇನಾ ನೇಮಕಾತಿ ರ್ಯಾಲಿ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.16. ಸೇನೆಯಲ್ಲಿ ವಿವಿಧ ಹುದ್ದೆಗಳಿಗೆ ಸೇನಾ ನೇಮಕಾತಿ ರ್ಯಾಲಿ ಮೇ 28 ರಿಂದ ಜೂನ್ 6 ರವರೆಗೆ ಜಿಲ್ಲಾ ಕ್ರೀಡಾಂಗಣ ಗದಗ ಜಿಲ್ಲೆಯಲ್ಲಿ ನಡೆಯಲಿದ್ದು ಸಿಪಾಯಿ ಜಿ.ಡಿ. ಸಿಪಾಯಿ ಕ್ಲರ್ಕ್ ಮತ್ತು ಎಸ್.ಕೆ.ಟಿ. ಸಿಪಾಯಿ ಟೆಕ್ನಿಕಲ್, ಸಿಪಾಯಿ ಟ್ರೇಡ್ಸಮೆನ್ ಹುದ್ದೆಗಳಿಗಾಗಿ ಸೇನಾ ನೇಮಕಾತಿ ರ್ಯಾಲಿಯನ್ನು ಆಯೋಜಿಸಿದ್ದು ಜಿಲ್ಲೆಯ ಆಸಕ್ತ ಅಭ್ಯರ್ಥಿಗಳು ಭಾಗವಹಿಸಬಹುದು. ವಿದ್ಯಾರ್ಹತೆ 8ನೇ ಅಥವಾ 10ನೇ ತರಗತಿ ಉತೀರ್ಣರಾಗಿರಬೇಕು. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಆನ್‍ಲೈನ್ ಮೂಲಕ ಪಡೆಯಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ www.joinindianarmy.nic.in ಹಾಗೂ ಸೇನಾ

ಸೇನಾ ನೇಮಕಾತಿ ರ್ಯಾಲಿ Read More »

ಕರಾವಳಿ

ಉದ್ಯೋಗ ಸಂದರ್ಶನಕ್ಕೆ ತೆರಳುವ ಮಹಿಳೆಯರು ಇನ್ಮುಂದೆ ವಾಸ್ತವ್ಯದ ಬಗ್ಗೆ ಚಿಂತೆ ಬಿಡಿ ➤ ಪ್ರಮುಖ ನಗರದಲ್ಲಿ ಎಲ್ಲಾ ಮಹಿಳೆಯರಿಗಾಗಿ ಲಭ್ಯವಿದೆ ಉಚಿತ ಟ್ರಾನ್ಸಿಟ್ ಹಾಸ್ಟೆಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.16. 2018-19ನೇ ಸಾಲಿನ ಆಯವ್ಯಯ ಘೋಷಣೆಯಂತೆ, ಬೆಂಗಳೂರು ನಗರಕ್ಕೆ ಉದ್ಯೋಗ ಸಂದರ್ಶನ ಪ್ರವೇಶ ಪರೀಕ್ಷೆಗಳಿಗೆ ಒಂಟಿಯಾಗಿ ಬರುವಂತಹ ಎಲ್ಲಾ ವರ್ಗದ ಮಹಿಳೆಯರಿಗೆ ವರಮಾನ ಮಿತಿಯಿಲ್ಲದೇ 3 ದಿನಗಳವರೆಗೂ ಉಚಿತ ಊಟೋಪಹಾರ ಮತ್ತು ಸುರಕ್ಷಿತ ವಾಸ್ತವ್ಯವನ್ನು ಟ್ರಾನ್ಸಿಟ್ ಹಾಸ್ಟೆಲ್‍ಗಳಲ್ಲಿ ಕಲ್ಪಿಸಲಾಗುವುದು ಎಂದು ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಇವರು ತಿಳಿಸಿರುತ್ತಾರೆ.   ಬೆಂಗಳೂರಿನಲ್ಲಿ ಲಭ್ಯವಿರುವ 13 ಟ್ರಾನ್ಸಿಟ್ ಹಾಸ್ಟೆಲ್‍ಗಳು : ಕರ್ನಾಟಕ ಸ್ಟೇಟ್ ಕೌನ್ಸಿಲ್ ಫಾರ್ ಚೈಲ್ಡ್ ವೆಲ್ಫೇರ್,

ಉದ್ಯೋಗ ಸಂದರ್ಶನಕ್ಕೆ ತೆರಳುವ ಮಹಿಳೆಯರು ಇನ್ಮುಂದೆ ವಾಸ್ತವ್ಯದ ಬಗ್ಗೆ ಚಿಂತೆ ಬಿಡಿ ➤ ಪ್ರಮುಖ ನಗರದಲ್ಲಿ ಎಲ್ಲಾ ಮಹಿಳೆಯರಿಗಾಗಿ ಲಭ್ಯವಿದೆ ಉಚಿತ ಟ್ರಾನ್ಸಿಟ್ ಹಾಸ್ಟೆಲ್ Read More »

ಕರಾವಳಿ

ಚೆನ್ನೈ ಕ್ರಿಕೆಟಿಗನ ಕ್ರೀಡಾ ಸ್ಪೂರ್ತಿ ಕೊಂಡಾಡಿದ ಕ್ರಿಕೆಟ್ ಜಗತ್ತು:ಕಾಲಲ್ಲಿ ರಕ್ತ ಸುರಿಯುತ್ತಿದ್ದರೂ ಹೋರಾಡಿದ ವ್ಯಾಟ್ಸನ್

(ನ್ಯೂಸ್ ಕಡಬ) newskadaba.com,ಹೈದರಾಬಾದ್,ಮೇ.14. ಇದು ಚೆನ್ನೈ ಸೂಪರ್ ಕಿಂಗ್ಸ್ ಆಟಗಾರ ಶೇನ್ ವ್ಯಾಟ್ಸನ್ ರ ಫೈನಲ್ ಪಂದ್ಯದ ಸಾಹಸಗಾಥೆ. ಫೈನಲ್ ಪಂದ್ಯದ ಒತ್ತಡ, ಒಂದೆಡೆ ವಿಕೆಟ್ ಗಳು ಬೀಳುತ್ತಿದೆ, ರನ್ ಔಟ್ ತಪ್ಪಿಸಲು ಹಾಕಿದ ಡೈವ್ ನಿಂದ ಮೊಣ ಕಾಲಿಂದ ರಕ್ತ ಸುರಿಯುತ್ತಿದೆ, ಹರಿದ ನೆತ್ತರಿಂದಾಗಿ ಹಳದಿ ಪ್ಯಾಂಟ್ ಕೆಂಪಾಗಿದೆ, ಆದರೆ ಛಲ ಬಿಡದ ಹೋರಾಟ.ಬ್ಯಾಟಿಂಗ್ ಮಾಡುತ್ತಿದ್ದ ಶೇನ್ ವ್ಯಾಟ್ಸನ್ ಡೈವ್ ಹಾಕುವ ವೇಳೆ ಗಾಯಗೊಂಡಿದ್ದರು. ಆದರೆ ಈ ವಿಷಯ ಯಾರಿಗೂ ಹೇಳದ ವ್ಯಾಟ್ಸನ್ ಬ್ಯಾಟಿಂಗ್ ಮುಂದುವರಿಸಿದರು. ಕಾಲಿನಲ್ಲಿ

ಚೆನ್ನೈ ಕ್ರಿಕೆಟಿಗನ ಕ್ರೀಡಾ ಸ್ಪೂರ್ತಿ ಕೊಂಡಾಡಿದ ಕ್ರಿಕೆಟ್ ಜಗತ್ತು:ಕಾಲಲ್ಲಿ ರಕ್ತ ಸುರಿಯುತ್ತಿದ್ದರೂ ಹೋರಾಡಿದ ವ್ಯಾಟ್ಸನ್ Read More »

ಕರಾವಳಿ

ನನ್ನ ಯೋಜನೆಗಳು ಶಾಶ್ವತ,ಯಾವುದೇ ಸರ್ಕಾರ ನಿಲ್ಲಿಸಲಿ ನೋಡೋಣ!:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

(ನ್ಯೂಸ್ ಕಡಬ) newskadaba.com,ಬೆಂಗಳೂರು,ಮೇ.14. ಮಂಗಳವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಯಾವ ಕಾರ್ಯಕ್ರಮವೂ ತಾತ್ಕಾಲಿಕ ಅಲ್ಲ. ಅನ್ನಭಾಗ್ಯ,ಕ್ಷೀರಭಾಗ್ಯ,ಕ್ಷೀರಧಾರೆ, ಕೃಷಿಭಾಗ್ಯ, ಪಶುಭಾಗ್ಯ….ಇವುಗಳನ್ನು ಯಾವುದೇ ಸರ್ಕಾರ ನಿಲ್ಲಿಸಲಿ ನೋಡೋಣ. ಜಾಗೃತ ಮತದಾರರು ಇರುವ ವರೆಗೆ ಇವೆಲ್ಲ ಶಾಶ್ವತ ಕಾರ್ಯಕ್ರಮಗಳು. ಟೀಕಾಕಾರರಿಗೆ ನೆನಪಿರಲಿ. ಎಂದು ಮಂಗಳವಾರ ಟ್ವೀಟ್‌ ಮೂಲಕ ಎಚ್ಚರಿಕೆ ನೀಡಿದ್ದಾರೆ.ಇನ್ನೊಂದು ಟ್ವೀಟ್‌ನಲ್ಲಿ ಗೆಳೆಯ ಜಿ.ಟಿ.ದೇವೇಗೌಡರು ಇತ್ತೀಚೆಗೆ ನನ್ನ ವಿರುದ್ಧ ಮಾತನಾಡಿಲ್ಲ ನಿಜ. ಆದರೆ ಮೈಸೂರಲ್ಲಿ ಜೆಡಿಎಸ್ ನವರು ಬಿಜೆಪಿಗೆ ಮತ ಹಾಕಿದ್ದಾರೆಂಬ ಅವರ ಹೇಳಿಕೆ ಸತ್ಯವಾಗಿದ್ದರೂ ಅನಗತ್ಯವಾಗಿತ್ತು. ಇದರಿಂದಾಗಿ ಕೆರಳಿದ ನಮ್ಮ

ನನ್ನ ಯೋಜನೆಗಳು ಶಾಶ್ವತ,ಯಾವುದೇ ಸರ್ಕಾರ ನಿಲ್ಲಿಸಲಿ ನೋಡೋಣ!:ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ Read More »

ಕರಾವಳಿ

ಶುಶ್ರೂಷಣಾಧಿಕಾರಿ ಹುದ್ದೆಗೆ ನೇರ ಸಂದರ್ಶನ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.13.ಜಿಲ್ಲಾ ತರಬೇತಿ ಕೇಂದ್ರ, ಸುರತ್ಕಲ್, ಮಂಗಳೂರು, ಇಲ್ಲಿ 2019-20ನೇ ಸಾಲಿಗೆ ಶುಶ್ರೂಷಣಾಧಿಕಾರಿ ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕ ನೆಲೆಯಲ್ಲಿ ನೇಮಿಸಿಕೊಳ್ಳಲು ಮೇ 18 ರಂದು ನೇರ ಸಂದರ್ಶನ ನಡೆಸಲಾಗುವುದು. ಶುಶ್ರೂಷಣಾಧಿಕಾರಿ (ಗುತ್ತಿಗೆ) ಹಿರಿಯ ಆರೋಗ್ಯ ಸಹಾಯಕಿ, ಜನರಲ್ ನರ್ಸಿಂಗ್, ಡಿಪಿಹೆಚ್‍ಎನ್ ತರಬೇತಿ ಹೊಂದಿದವರಿಗೆ ಆದ್ಯತೆ ನೀಡಲಾಗುವುದು ತರಬೇತಿ ಬಗ್ಗೆ ಟಿ.ಓ.ಟಿ ಹೊಂದಿದ ದಾಖಲೆಗಳನ್ನು ಲಗ್ತೀಕರಿಸುವುದು. ಬಿ.ಎಸ್‍ಸಿ ನರ್ಸಿಂಗ್ ಪದವಿ ಹೊಂದಿರಬೇಕು, ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಹಾಗೂ ಪ್ರತ್ಯೇಕವಾಗಿ ತರಬೇತಿ ನೀಡಿದ ಅನುಭವ

ಶುಶ್ರೂಷಣಾಧಿಕಾರಿ ಹುದ್ದೆಗೆ ನೇರ ಸಂದರ್ಶನ Read More »

ಕರಾವಳಿ

ಗ್ರಾಮ ಪಂಚಾಯತ್‍ಗಳ ಉಪ ಚುನಾವಣೆ

(ನ್ಯೂಸ್ ಕಡಬ) newskadaba.com,ಮಂಗಳೂರು,ಮೇ.14. ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತ್‍ಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಯಲಿದೆ. ಮೇ 16 ನಾಮಪತ್ರ ಸಲ್ಲಿಸಲು ಕೊನೆಯ ದಿನ, ನಾಮಪತ್ರ ಪರಿಶೀಲಿಸುವ ದಿನ ಮೇ 17, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುಲು ಕೊನೆಯ ದಿನ ಮೇ 20, ಮತದಾನ ಅವಶ್ಯವಿದ್ದರೆ ಮತದಾನವನ್ನು ನಡೆಸಬೇಕಾದ ದಿನ ಮೇ 29 ರಂದು ಪೂರ್ವಾಹ್ನ 7 ರಿಂದ ಸಂಜೆ

ಗ್ರಾಮ ಪಂಚಾಯತ್‍ಗಳ ಉಪ ಚುನಾವಣೆ Read More »

ಕರಾವಳಿ
Scroll to Top