ಕಡಬ ನ್ಯೂಸ್

ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಸವಣೂರು ಪೇಟೆ ಅಕ್ಷರಶ: ಸಬ್ಧ

(ನ್ಯೂಸ್ ಕಡಬ) newskadaba.com ಸವಣೂರು,ಜು.05:ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯ ಸವಣೂರು ಪೇಟೆ ಜು. 5ರಂದು ಸಂಪೂರ್ಣ ಲಾಕ್ ಡೌನ್ ಆಗಿದ್ದು,ಸವಣೂರು ಪೇಟೆ ಅಕ್ಷರಶ: ಸಬ್ಧವಾಗಿದೆ.   ಪ್ರತಿ ನಿತ್ಯ ಸವಣೂರು ಪೇಟೆ ಸಾವಿರಾರು ಮಂದಿ ಸೇರುವ ಅತೀದೊಡ್ಡ ವಾಣಿಜ್ಯ ಕೇಂದ್ರ ಹಾಗೂ ರಾಜ್ಯದ ಮನೆ ಮಾತಾಗಿರುವ ಶಿಕ್ಷಣ ಕಾಶಿ ಹಾಗೂ ಧಾರ್ಮಿಕ ನೆಲೆಬೀಡು ಸವಣೂರು ಪೇಟೆಯಲ್ಲಿ ಆನೇಕ ಬ್ಯಾಂಕ್ ಗಳು ಸೇರಿದಂತೆ, ಅಡಿಕೆ ಖರೀದಿ ಕೇಂದ್ರ, ಜಿನಸು ಅಂಗಡಿಗಳು, 7 ಹೋಟೆಲ್ ಗಳು, ಸಹಿತ ವಿವಿಧ ಬಗೆಯ […]

ಸಂಡೇ ಲಾಕ್‍ಡೌನ್ ಎಫೆಕ್ಟ್ ➤ ಸವಣೂರು ಪೇಟೆ ಅಕ್ಷರಶ: ಸಬ್ಧ Read More »

ಕರಾವಳಿ, ಕರ್ನಾಟಕ

ಮಂಗಳೂರು ಕೊರೊನಾ ರೋಗ ಲಕ್ಷಣ ಇಲ್ಲದವರಿಗೆ ಮನೆಯಲ್ಲಿಯೇ ಆರೈಕೆಗೆ ಸಿದ್ಧತೆ

(ನ್ಯೂಸ್ ಕಡಬ) newskadaba.com.ಮಂಗಳೂರು,ಜು.5: ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಆರೈಕೆ ಮಾಡಲಾಗುತ್ತಿದೆ. ಇನ್ನೂ ಕೊರೊನಾ ರೋಗ ಲಕ್ಷಣ ಇಲ್ಲದವರಿಗೆ ಮನೆಯಲ್ಲಿಯೇ ಆರೈಕೆ ಮಾಡಲು ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಸೂಚನೆ ನೀಡಿರುವ ಜಿಲ್ಲಾ ಆರೋಗ್ಯಧಿಕಾರಿ, ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ತಿಳಿಸಿರುವಂತೆ ಇನ್ನು ಮುಂದಿನ ದಿನಗಳಲ್ಲಿ ರೋಗ ಲಕ್ಷಣ ರಹಿತವಾದ ರೋಗಿಗಳನ್ನು ತಮ್ಮ ತಮ್ಮ ಮನೆಯಲ್ಲೇ ಪ್ರತ್ಯೇಕವಾಗಿ ಆರೈಕೆಗೆ ವ್ಯವಸ್ಥೆ ಮಾಡಲು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ.

ಮಂಗಳೂರು ಕೊರೊನಾ ರೋಗ ಲಕ್ಷಣ ಇಲ್ಲದವರಿಗೆ ಮನೆಯಲ್ಲಿಯೇ ಆರೈಕೆಗೆ ಸಿದ್ಧತೆ Read More »

ಕರ್ನಾಟಕ

ಮತ್ತೆ ಸುದ್ದಿಯಾಗುತ್ತಿದೆ ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್‍ನ ಕಹಾನಿ ➤ ವ್ಯಕ್ತಿಯೊಬ್ಬರು ನದಿಗೆ ಹಾರಿರುವ ಶಂಕೆ

(ನ್ಯೂಸ್ ಕಡಬ) newskadaba.com.ಉಳ್ಳಾಲ,ಜು.4:ವ್ಯಕ್ತಿಯೊಬ್ಬರು ಸೇತುವೆಯ ಮೇಲೆ ಕೊಡೆ ಇಟ್ಟು ನೀರಿಗೆ ಹಾರಿರುವ ಘಟನೆ ಜೆಪ್ಪಿನಮೊಗರು ನೇತ್ರಾವತಿ ಸೇತುವೆಯ ಬಳಿ ಇಂದು ನಡೆದಿದೆ. ಉಳ್ಳಾಲದ ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್ ಆಗಿ ಮಾರ್ಪಾಡಾಗಿದ್ದು ಇಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯು ಹೆಚ್ಚುತ್ತಿದೆ. ಉಳ್ಳಾಲ ಠಾಣಾ ಪೊಲೀಸರು ಕೊರೋನಾ ಮಹಾಮಾರಿಯಿಂದಾಗಿ ಕ್ವಾರಂಟೈನ್ ನಲ್ಲಿದ್ದು ಸ್ಥಳಕ್ಕೆ ಪೊಲೀಸರು ಇನ್ನಷ್ಟೇ ಆಗಮಿಸಿ ಪರಿಶೀಲನೆ ನಡೆಸಬೇಕಾಗಿದೆ.

ಮತ್ತೆ ಸುದ್ದಿಯಾಗುತ್ತಿದೆ ನೇತ್ರಾವತಿ ಸೇತುವೆ ಸುಸೈಡ್ ಪಾಯಿಂಟ್‍ನ ಕಹಾನಿ ➤ ವ್ಯಕ್ತಿಯೊಬ್ಬರು ನದಿಗೆ ಹಾರಿರುವ ಶಂಕೆ Read More »

ಕರಾವಳಿ

ಬೆಳ್ತಂಗಡಿ ಕಳಿಯ ಗ್ರಾಮ ಪಂಚಾಯತ್‍ಗೆ ಎಸಿಬಿ ದಾಳಿ

(ನ್ಯೂಸ್ ಕಡಬ) newskadaba.com.ಬೆಳ್ತಂಗಡಿ,ಜು.4: ತಾಲೂಕಿನ ಗೇರುಕಟ್ಟೆ ಕಳಿಯ ಗ್ರಾಮ ಪಂಚಾಯತ್ ನಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ ಎಸಿಬಿ ಇನ್ಸ್‌ಪೆಕ್ಟರ್ ಯೊಗೀಶ್ ಕುಮಾರ್ ಬಿ.ಸಿ. ತಂಡ ಶನಿವಾರ ದಾಳಿ ನಡೆಸಿ ದಾಖಲೆಗಳ ಪರೀಶೀಲನೆ ನಡೆಸಿದೆ. ಗ್ರಾಮ ಲೆಕ್ಕಿಗ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು ಸೇರಿ ಒಂದೇ ಕುಟುಂಬಕ್ಕೆ ಎರಡು, ಮೂರು 94ಸಿ ಹಕ್ಕು ಪತ್ರ ನೀಡಿದ್ದಾರೆ. ಮತ್ತೊಂದೆಡೆ ಸ್ಥಳದಲ್ಲಿ ಮನೆ ನಿರ್ಮಾಣವಾಗದಿದ್ದರೂ ಹಕ್ಕು ಪತ್ರ ನೀಡಲಾಗಿದೆ ಎಂದು ಸಾರ್ವಜನಿಕರು ಭ್ರಷ್ಟಾಚಾರ ನಿಗ್ರಹದ ದಳದ ಪೊಲೀಸರಿಗೆ ದೂರು ನೀಡಿದ್ದರು.

ಬೆಳ್ತಂಗಡಿ ಕಳಿಯ ಗ್ರಾಮ ಪಂಚಾಯತ್‍ಗೆ ಎಸಿಬಿ ದಾಳಿ Read More »

ಕರಾವಳಿ

ಮುಂಗಾರಿನ ಅಬ್ಬರಕ್ಕೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ

(ನ್ಯೂಸ್ ಕಡಬ) newskadaba.com.ಬಂಟ್ವಾಳ,ಜು.4: ಕರಾವಳಿಯಲ್ಲಿ ಕಳೆದ ಎರಡು ದಿನಗಳಿಂದ ಮುಂಗಾರು ಚುರುಕುಗೊಂಡ ಪರಿಣಾಮ ನೇತ್ರಾವತಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಶುಕ್ರವಾರ ಬಂಟ್ವಾಳ ವ್ಯಾಪ್ತಿಯಲ್ಲಿ ನೀರಿನ ಮಟ್ಟ 3.6 ಮೀ.ನಷ್ಟು ದಾಖಲಾಗಿದೆ. ಘಟ್ಟ ಪ್ರದೇಶದಲ್ಲಿ ಮಳೆಯಾದಾಗ ನೇತ್ರಾವತಿ, ಕುಮಾರಧಾರಾ ನದಿಗಳಲ್ಲಿ ನೀರು ಹೆಚ್ಚಾಗುತ್ತದೆ. ನೀರಿನ ಹರಿವು ಹೆಚ್ಚಳವಾಗುತ್ತಿದ್ದಂತೆ ತುಂಬೆ ಡ್ಯಾಂನಲ್ಲಿ ಗೇಟ್‌ಗಳನ್ನು ತೆರೆಯಲಾಗುತ್ತಿದೆ. ಪ್ರಸ್ತುತ 30ರ ಪೈಕಿ 11 ಗೇಟ್‌ಗಳನ್ನು ತೆರೆಯಲಾಗಿದೆ. ಮಳೆಗಾಲದಲ್ಲಿ ಬಂಟ್ವಾಳ ತಾಲೂಕು ಆಡಳಿತವು ಗೂಡಿನಬಳಿ ಸಮೀಪದಲ್ಲಿರುವ ಅಳತೆ ಮಾಪನದ ಮೂಲಕ ನೀರಿನ ಮಟ್ಟ

ಮುಂಗಾರಿನ ಅಬ್ಬರಕ್ಕೆ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳ Read More »

ಕರ್ನಾಟಕ

ಜು. 5 ಸಂಪೂರ್ಣ ಲಾಕ್‌ಡೌನ್‌‌‌‌‌ ➤ ಮಂಗಳೂರು-ಉಡುಪಿಯಲ್ಲಿ ಸರ್ಕಾರಿ, ಖಾಸಗಿ ಬಸ್ ಸಂಚಾರ ಬಂದ್

(ನ್ಯೂಸ್ ಕಡಬ) newskadaba.com ಕರಾವಳಿ,ಜು.04: ಕೊರೋನಾ ಹಾವಳಿ ಹೆಚ್ಚುತ್ತಿರುವುದರಿಂದ ಕರ್ನಾಟಕದಲ್ಲಿ ಸಂಡೇ ಲಾಕ್ ಡೌನ್ ನನ್ನ ರಾಜ್ಯ ಸರ್ಕಾರ ಜಾರಿಗೆ ತಂದಿದೆ.ಜುಲೈ 5ರಂದು ಸಂಪೂರ್ಣ ಲಾಕ್‌ಡೌನ್‌ ಘೋಷಿಸಿರುವ ಹಿನ್ನೆಲೆ ಉಡುಪಿ-ಮಂಗಳೂರು ಕೆ.ಎಸ್‌‌.ಆರ್‌.ಟಿ.ಸಿ ಸೇರಿ ಖಾಸಗಿ ಬಸ್ ಸಂಚಾರ ಬಂದ್‌‌ ಮಾಡಲು ಬಸ್‌ ಮಾಲೀಕರು ನಿರ್ಧರಿಸಿದ್ದಾರೆ.   ಭಾನುವಾರ ಬೆಳಗ್ಗೆಯಿಂದ ಸೋಮವಾರ ಸಂಚಾರ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲು ಕರ್ನಾಟಕ ರಸ್ತೆ ಸಾರಿಗೆ ನಿಗಮ ನಿರ್ಧರಿಸಿದೆ. ಈ ಹಿಂದೆ ಭಾನುವಾರ ಲಾಕ್‌ಡೌನ್‌ ಘೋಷಣೆ ಮಾಡಿದ್ದ ಸಂದರ್ಭ ಕೆಎಸ್‌

ಜು. 5 ಸಂಪೂರ್ಣ ಲಾಕ್‌ಡೌನ್‌‌‌‌‌ ➤ ಮಂಗಳೂರು-ಉಡುಪಿಯಲ್ಲಿ ಸರ್ಕಾರಿ, ಖಾಸಗಿ ಬಸ್ ಸಂಚಾರ ಬಂದ್ Read More »

ಕರಾವಳಿ, ಕರ್ನಾಟಕ

ದ.ಕನ್ನಡದಲ್ಲಿ ಇಂದು ಮೂವರನ್ನ ಬಲಿ ಪಡೆದ ಕೊರೋನಾ

(ನ್ಯೂಸ್ ಕಡಬ) newskadaba.com  ಮಂಗಳೂರು ,ಜು.04: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ.   ಜು.04 ರ ಶನಿವಾರ ಒಂದೇ ದಿನ ಜಿಲ್ಲೆಯಲ್ಲಿ ಮೂವರು ಕೊರೋನಾದಿಂದ ಬಲಿಯಾಗಿದ್ದಾರೆ.ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟಿದೆ.  

ದ.ಕನ್ನಡದಲ್ಲಿ ಇಂದು ಮೂವರನ್ನ ಬಲಿ ಪಡೆದ ಕೊರೋನಾ Read More »

ಕರಾವಳಿ, ಕರ್ನಾಟಕ

ಕರಾವಳಿಯಲ್ಲಿ ಇಂದಿನಿಂದ ಜು.7ರ ವರೆಗೆ ಆರೆಂಜ್ ಅಲರ್ಟ್ ➤ ಹವಾಮಾನ ಇಲಾಖೆ ಘೋಷಣೆ

(ನ್ಯೂಸ್ ಕಡಬ) newskadaba.com  ಮಂಗಳೂರು,ಜು.04: ಜು 4ರಿಂದ 7ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ ಉಡುಪಿ ಹಾಗೂ ಉತ್ತರ ಕನ್ನಡ,ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್‌‌. ಪಾಟೀಲ ಹೇಳಿದ್ದಾರೆ.     ರಾಜ್ಯದಲ್ಲಿ ಮುಂಗಾರು ಬಿರುಸುಗೊಂಡಿದೆ. ಒಂದು ವಾರದಿಂದ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಶನಿವಾರವೂ ಕೂಡಾ ಅತೀ ಹೆಚ್ಚು ಮಳೆಯಾಗುವ ನಿರೀಕ್ಷೆ

ಕರಾವಳಿಯಲ್ಲಿ ಇಂದಿನಿಂದ ಜು.7ರ ವರೆಗೆ ಆರೆಂಜ್ ಅಲರ್ಟ್ ➤ ಹವಾಮಾನ ಇಲಾಖೆ ಘೋಷಣೆ Read More »

ಕರಾವಳಿ, ಕರ್ನಾಟಕ

ತಯಾರಾಯ್ತು 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್.!!

(ನ್ಯೂಸ್ ಕಡಬ) newskadaba.com., ಮುಂಬೈ.ಜು.04., ಮಹಾಮಾರಿ ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಸ್ಯಾನಿಟೈಸರ್ ಹಾಗೂ ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದೆ. ಇದೀಗ ವ್ಯಕ್ತಿಯೊಬ್ಬರು 2.89 ಲಕ್ಷ ಬೆಲೆ ಬಾಳುವ ಮಾಸ್ಕ್ ತಯಾರಿಸಿ ಅದನ್ನು ಧರಿಸುವ ಮೂಲಕ ಸುದ್ದಿಯಾಗಿದ್ದಾರೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಪಿಂಪ್ರಿ ಚಿಂಚ್ವಾಡ್ ನಿವಾಸಿ ಶಂಕರ್ ಕುರಡೆ ಎಂಬವರು 2.89 ಲಕ್ಷ ಮೌಲ್ಯದ ಮಾಸ್ಕ್ ತಯಾರಿಸಿ, ತಾನೇ ಧರಿಸಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ಬಗ್ಗೆ ಮಾತನಾಡಿರುವ ಶಂಕರ್, ಈ

ತಯಾರಾಯ್ತು 2.89 ಲಕ್ಷ ಮೌಲ್ಯದ ಚಿನ್ನದ ಮಾಸ್ಕ್.!! Read More »

ರಾಷ್ಟ್ರೀಯ ನ್ಯೂಸ್

ನಭೋ ಮಂಡಲದಲ್ಲಿ ಚಂದ್ರನ ಕೌತುಕ ➤ ಜುಲೈ5ರಂದು ಚಂದ್ರಗ್ರಹಣ

(ನ್ಯೂಸ್ ಕಡಬ) newskadaba.com ನವದೆಹಲಿ,ಜು.04: ಮತ್ತೊಮ್ಮೆ ನಭೋ ಮಂಡಲದಲ್ಲಿ ಕೌತುಕಗೊಳ್ಳಲಿದೆ.ಇತ್ತೀಚೆಗಷ್ಟೇ ಬಾನಂಗಳದಲ್ಲಿ ಕಂಕಣ ಸೂರ್ಯಗ್ರಹಣ ಸಂಭವಿಸಿತ್ತು. ಇದೀಗ ಪ್ರಸಕ್ತ ವರ್ಷದ ಮೂರನೇ ತೆಳು ಛಾಯೆಯ ಚಂದ್ರಗ್ರಹಣ ಜುಲೈ 5ರ ಭಾನುವಾರ ಸಂಭವಿಸಲಿದೆ. 2020ರಲ್ಲಿ ಎರಡು ಬಾರಿ ಚಂದ್ರಗ್ರಹಣ, ಒಂದು ಬಾರಿ ಸೂರ್ಯಗ್ರಹಣ ಗೋಚರಿಸಿದ್ದು, ನಾಲ್ಕನೇ ಗ್ರಹಣ ಜುಲೈ 5ರಂದು ಗೋಚರಿಸಲಿದೆ. ಇದು ಆಫ್ರಿಕಾ, ಉತ್ತರ ಅಮೆರಿಕಾ, ಫೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾದಲ್ಲಿ ಹೆಚ್ಚು ಗೋಚರವಾಗಲಿದೆ.ಜುಲೈ 5ರ ಭಾನುವಾರ ಸಂಭವಿಸುವ ತೆಳುಛಾಯೆ ಚಂದ್ರಗ್ರಹಣ ಬೆಳಗ್ಗೆ 8.37ಕ್ಕೆ ಆರಂಭವಾಗಿ 11.22ಕ್ಕೆ ಗ್ರಹಣ

ನಭೋ ಮಂಡಲದಲ್ಲಿ ಚಂದ್ರನ ಕೌತುಕ ➤ ಜುಲೈ5ರಂದು ಚಂದ್ರಗ್ರಹಣ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್
Scroll to Top