ಕಡಬ ನ್ಯೂಸ್

➤ಇನ್‌ಸ್ಟಾಗ್ರಾಂ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ

(ನ್ಯೂಸ್ ಕಡಬ) newskadaba.com. ಬಿಲಾಸಪುರ್‌, ಮಾ20. ವಿದ್ಯಾರ್ಥಿಯೊಬ್ಬ ಸ್ನೇಹಿತರೊಂದಿಗೆ ಇನ್‌ಸ್ಟಾಗ್ರಾಂ ರೀಲ್ಸ್ ಮಾಡಲು ಹೋಗಿ ಕಾಲೇಜಿನ ಟೆರೇಸ್ ಮೇಲಿಂದ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಛತ್ತೀಸಗಢದ ಬಿಲಾಸಪುರ ಪಟ್ಟಣದಲ್ಲಿ ನಡೆದಿದೆ. ಬಿಲಾಸಪುರದ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಥಮ ಬಿಎಸ್‌ಸಿ ವಿದ್ಯಾರ್ಥಿ ಅಶುತೋಷ್‌ ಸಾವೊ (20) ಮೃತ ವಿದ್ಯಾರ್ಥಿ ರೀಲ್ಸ್ ಮಾಡಲೆಂದು ಐವರು ಸ್ನೇಹಿತರೊಂದಿಗೆ ಕಾಲೇಜಿನ ಟೆರೇಸ್‌ಗೆ ತೆರಳಿದ್ದಾನೆ. ಟೆರೇಸ್‌ನ ಗೋಡೆ ಮೇಲೆ ನಿಂತು ಕಿಟಕಿಯ ಸಜ್ಜೆ ಮೇಲೆ ಹಾರಿದ್ದಾನೆ. ಈ ವೇಳೆ 20 ಅಡಿ ಎತ್ತರದ ಕಟ್ಟಡದಿಂದ ಆಯತಪ್ಪಿ […]

➤ಇನ್‌ಸ್ಟಾಗ್ರಾಂ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ Read More »

ಕ್ರೈಮ್ ನ್ಯೂಸ್

ರಿಮೋಟ್‌ನಲ್ಲೇ ʻತೂಕದ ಸ್ಕೇಲ್ ಕಂಟ್ರೋಲ್ ಮಾಡಿ ಪಂಗನಾಮʼ

(ನ್ಯೂಸ್ ಕಡಬ) newskadaba.com. ಬೆಂಗಳೂರು, ಮಾ20.  ಸಿಲಿಕಾನ್‌ ಸಿಟಿಯಲ್ಲಿ ದಿನ ಖತರ್ನಾಕ್‌ ಕಳ್ಳರು ಹೆಚ್ಚಾಗುತ್ತಿದ್ದು, ಅದಲ್ಲೂ ಕಣ್ಣೆದುರಲ್ಲೇ ಗ್ರಾಹಕರ ಕಣ್ಣಿಗೆ ಖದೀಮರು ಮಣ್ಣೆರಚುತ್ತಿರೋ ಹಲವು ಘಟನೆಗಳು ಬೆಳಕಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ರಿಮೋಟ್ ಕಂಟ್ರೋಲ್‌ ಮೂಲಕ ತೂಕದಲ್ಲೂ ವಂಚನೆಗೆ ಮುಂದಾಗಿರುವ ಘಟನೆ ವರದಿಯಾಗಿದೆ. ಇದೀಗ ನಗರದ ಪ್ರಮುಖವಾಗಿ ನ್ಯಾಯಬೆಲೆ ಅಂಗಡಿ, ಗುಜರಿ, ಮಾಂಸದ ಅಂಗಡಿಗಳಲ್ಲಿ ಹೊಸ ಕಳ್ಳಾಟ ಶುರುವಾಗಿದ್ದು, ಪಿಸಿಬಿ ಚಿಪ್ ಅಳವಡಿಸಿಕೊಂಡು‌ ರಿಮೋಟ್ ಮೂಲಕ ತೂಕದ ಸ್ಕೇಲ್ ಕಂಟ್ರೋಲ್ ಮಾಡುತ್ತಾ ಗ್ರಾಹಕರಿಗೆ ವಂಚನೆ ಮಾಡುತ್ತಿರುವುದು ಕಂಡ

ರಿಮೋಟ್‌ನಲ್ಲೇ ʻತೂಕದ ಸ್ಕೇಲ್ ಕಂಟ್ರೋಲ್ ಮಾಡಿ ಪಂಗನಾಮʼ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಜಿಂಕೆ ಬೇಟೆ ➤ಓರ್ವ ಆರೋಪಿಯ ಸೆರೆ

(ನ್ಯೂಸ್ ಕಡಬ) newskadaba.com. ಹನೂರು, ಮಾ20. ಮಲೆ ಮಹದೇಶ್ವರ ವನ್ಯಧಾಮದಲ್ಲಿ ಜಿಂಕೆ ಬೇಟೆಯಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ಅರಣ್ಯಾಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.  ಜಲ್ಲಿಪಾಳ್ಯದ ಮಾರುಶೆಟ್ಟಿ ಬಂಧಿತ ಆರೋಪಿ. ಈ ವೇಳೆ ಈತನ ಜೊತೆಗಿದ್ದ ಮೂರ್ತಿ, ರಾಮು ಎಂಬವರು ಪರಾರಿಯಾಗಿದ್ದಾರೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಹೂಗ್ಯಂ ವನ್ಯಜೀವಿ ವಲಯದ ಪಾಲಾರ್ ಹಳ್ಳದಲ್ಲಿ ಜಿಂಕೆ ಬೇಟೆಯಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಅಧರಿಸಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದಾಗ ಮಾರುಶೆಟ್ಟಿ ಸಿಕ್ಕಿಬಿದ್ದಿದ್ದಾನೆ. ಈತನ ಜೊತೆಗಾರರಾದ ಮೂರ್ತಿ, ರಾಮು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯಿಂದ

ಜಿಂಕೆ ಬೇಟೆ ➤ಓರ್ವ ಆರೋಪಿಯ ಸೆರೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಶಾಲೆಯಲ್ಲಿ ರ‍್ಯಾಗಿಂಗ್ ➤ ಬೇಸತ್ತು ಬಾಲಕಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com.ಮಡಿಕೇರಿ, ಮಾ20.  ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ರ‍್ಯಾಗಿಂಗ್  ನಿಂದ ಬೇಸತ್ತ  7ನೇ ತರಗತಿಯ ವಿದ್ಯಾರ್ಥಿನಿ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗು  ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಶಿವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಶಿವರಹಳ್ಳಿ ಗ್ರಾಮದ ಜಿತೇಂದ್ರ-ಅಕ್ಷತಾ ದಂಪತಿಯ ಪುತ್ರಿ ವೈಷ್ಣವಿ (13) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಸೊಮವಾರಪೇಟೆಯ ಖಾಸಗಿ ಶಾಲೆಯಲ್ಲಿ  7ನೇ ತರಗತಿ ಓದುತ್ತಿದ್ದ ವೈಷ್ಣವಿಗೆ ಕಳೆದ ಒಂದು ವಾರದ ಹಿಂದೆ ರ‍್ಯಾಗಿಂಗ್  ಮಾಡಲಾಗಿತ್ತು, ಇದರಿಂದ  ಖಿನ್ನತೆಗೊಳಗಾಗಿದ್ದ ಆಕೆ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಶಾಲೆಯಲ್ಲಿ ರ‍್ಯಾಗಿಂಗ್ ➤ ಬೇಸತ್ತು ಬಾಲಕಿ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

➤ ಶಾಸಕ ರಿಜ್ವಾನ್ ಅರ್ಷದ್ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಬೆಂಕಿ ಹಚ್ಚಿದ ಮಹಿಳೆಯರು!

(ನ್ಯೂಸ್ ಕಡಬ) newskadaba.com.ಬೆಂಗಳೂರು. ಮಾ20.   ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ನೂರಾರು ಮಹಿಳೆಯರು ಪ್ರತಿಭಟನೆ ನಡೆಸಿದರು, ಅವರ ಪ್ರತಿಕೃತಿಗೆ ಚಪ್ಪಲಿಯಿಂದ ಹೊಡೆದು ಬೆಂಕಿ ಹಚ್ಚಿದ್ದಾರೆ. ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಫರೀದಾ ಅಹಮದ್ ಒಡೆತನದ ಗೋದಾಮಿನ ಮೇಲೆ ದಾಳಿ ನಡೆಸಿ ಸಾವಿರಾರು ಪಡಿತರ ಕಿಟ್‌ಗಳನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ನೂರಾರು ಮಹಿಳೆಯರು ಶಿವಾಜಿನಗರದಲ್ಲಿ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿದರು. ಚುನಾವಣಾ ಕಾರಣಕ್ಕಾಗಿ ಮಾಜಿ ಕಾರ್ಪೊರೇಟರ್ ರಂಜಾನ್ ಸಮಯದಲ್ಲಿ ವಿತರಿಸುವ ಪಡಿತರ ಕಿಟ್‌ಗಳನ್ನು ತಡೆಯುವ ಮಾರ್ಗವಾಗಿದೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

➤ ಶಾಸಕ ರಿಜ್ವಾನ್ ಅರ್ಷದ್ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಬೆಂಕಿ ಹಚ್ಚಿದ ಮಹಿಳೆಯರು! Read More »

ಕರ್ನಾಟಕ

ಲಿಕ್ಕರ್ ಬಾಕ್ಸ್ ನಾಪತ್ತೆ ➤ ಐವರು ಅಬಕಾರಿ ಸಿಬ್ಬಂದಿ ಅಮಾನತು!

(ನ್ಯೂಸ್ ಕಡಬ) newskadaba.com.ಬೆಳಗಾವಿ. ಮಾ20. ಇದೇ ತಿಂಗಳ ಆರಂಭದಲ್ಲಿ ಕಾರ್ಯಾಚರಣೆ ವೇಳೆಯಲ್ಲಿ ವಶಕ್ಕೆ ಪಡೆಯಲಾದ ಮದ್ಯದ ಬಾಟಲಿಗಳನ್ನು ನಿಗೂಢವಾಗಿ ಸಾಗಿಸಿರುವುದು ಇಲಾಖಾ ತನಿಖೆ ವೇಳೆ ತಿಳಿದುಬಂದ ನಂತರ ಮೂವರು ಶ್ರೇಣಿ ಅಧಿಕಾರಿಗಳು ಸೇರಿದಂತೆ ಐವರು ಅಬಕಾರಿ ಸಿಬ್ಬಂದಿಯನ್ನು ಅಮಾನುತು ಮಾಡಲಾಗಿದೆ. ರಾಜ್ಯ ವಿಧಾನಸಭಾ ಚುನಾವಣೆ ಸನ್ನಿಹದಲ್ಲಿರುವಂತೆಯೇ ಅಕ್ರಮ ಹಣ ಹಾಗೂ ಮಧ್ಯ ಸಾಗಾಟವನ್ನು ತಡೆಯಲು ಗೋವಾ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಅಬಕಾರಿ ಮತ್ತು ಪೊಲೀಸ್ ಇಲಾಖೆ ನಿಗಾ ವಹಿಸಿದೆ. ಮಾರ್ಚ್ 7 ರ ಸಂಜೆ  ಖಾನಪುರ ತಾಲೂಕಿನ

ಲಿಕ್ಕರ್ ಬಾಕ್ಸ್ ನಾಪತ್ತೆ ➤ ಐವರು ಅಬಕಾರಿ ಸಿಬ್ಬಂದಿ ಅಮಾನತು! Read More »

ಕರ್ನಾಟಕ

ಮಂಗಳೂರು ಚುನಾವಣೆ ಹಿನ್ನಲೆ ➤ದ.ಕ. ಜಿಲ್ಲೆಯಾದ್ಯಂತ ತಪಾಸಣೆ ಬಿಗಿ

(ನ್ಯೂಸ್ ಕಡಬ) newskadaba.com. ಮಂಗಳೂರು. ಮಾ20. ಚುನಾವಣೆ ದಿನಾಂಕ ಘೋಷಣೆಗೆ ದಿನ ಸಮೀಪಿಸುತ್ತಿರುವಂತೆಯೇ ಚುನಾವಣಾ ಆಯೋಗ ಚುನಾವಣಾ ಆಯೋಗವು ಮತದಾರರಿಗೆ ಆಮಿಷವೊಡ್ಡುವವರ ಮೇಲೆ ಹದ್ದಿನ ಕಣ್ಣಿಟ್ಟಿದೆ. ಮೂಲಗಳ ಪ್ರಕಾರ ಈ ತಿಂಗಳ ಅಂತ್ಯಕ್ಕೆ ಕೇಂದ್ರ ಚುನಾವಣಾ ಆಯೋಗವು ಕರ್ನಾಟಕದ 16ನೇ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಪ್ರಕಟಿಸಲಿದ್ದು, ಮೇ 2ನೇ ವಾರದ ಅಂತ್ಯಕ್ಕೆ ಮತದಾನ ನಡೆದು ಮೂರನೇ ವಾರದಲ್ಲಿ ಇಡೀ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇನ್ನೊಂದೆಡೆ ಚುನಾವಣೆಯ ಹಿನ್ನಲೆ ಅಕ್ರಮ ತಡೆಯುವುದಕ್ಕಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ

ಮಂಗಳೂರು ಚುನಾವಣೆ ಹಿನ್ನಲೆ ➤ದ.ಕ. ಜಿಲ್ಲೆಯಾದ್ಯಂತ ತಪಾಸಣೆ ಬಿಗಿ Read More »

ಕರಾವಳಿ

ತಾಯಿ ಕೊನೆಯ ಕಾರ್ಯಕ್ಕೆ ಲಿಪ್​​ಸ್ಟಿಕ್ ಧರಿಸಿ ಬಂದ ಮಾಧುರಿ ದೀಕ್ಷಿತ್! ➤ ನಟಿ ಸಖತ್ ಟ್ರೋಲ್

(ನ್ಯೂಸ್ ಕಡಬ) newskadaba.com.ಮುಂಬೈ, ಮಾ.18. ಇತ್ತೀಚಿಗಷ್ಟೇ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ತಾಯಿ ಸ್ನೇಹಲತಾ ನಿಧನರಾಗಿದ್ದರು. ತಾಯಿ ಕಳೆದುಕೊಂಡ ದುಃಖದಲ್ಲಿ ನಟಿ ಭಾವುಕ ಪೋಸ್ಟ್ ಮಾಡಿದ್ರು. ಇದೀಗ ಕೊನೆ ಕಾರ್ಯದ ವೇಳೆ ಲಿಪ್​ಸ್ಟಿಕ್ ಧರಿಸಿದ್ದ ಫೋಟೋಗಳು ವೈರಲ್ ಆಗಿದೆ. ತಾಯಿಯ ಸಾವು ಮಾಧುರಿ ದೀಕ್ಷಿತ್ ಅವರ ಜೀವನದಲ್ಲಿ ದೊಡ್ಡ ಆಘಾತವಾಗಿದೆ. ತಾಯಿ ಬಗ್ಗೆ ಮಾಧುರಿ ದೀಕ್ಷಿತ್ ಭಾವುಕ ವಿದಾಯ ಹೇಳಿದ್ರು. ಆದ್ರೆ ಅಂತ್ಯಕ್ರಿಯೆ ವೇಳೆ ಮಾಧುರಿ ದೀಕ್ಷಿತ್ ವೈಟ್ ಸಲ್ವಾರ್ ಧರಿಸಿ, ಲಿಪ್ ಸ್ಟಿಕ್ ಹಾಕಿ

ತಾಯಿ ಕೊನೆಯ ಕಾರ್ಯಕ್ಕೆ ಲಿಪ್​​ಸ್ಟಿಕ್ ಧರಿಸಿ ಬಂದ ಮಾಧುರಿ ದೀಕ್ಷಿತ್! ➤ ನಟಿ ಸಖತ್ ಟ್ರೋಲ್ Read More »

ರಾಷ್ಟ್ರೀಯ ನ್ಯೂಸ್

ತುಂಗಾ ನದಿಗೆ ಹಾರಿ ದಂಪತಿ ಆತ್ಮಹತ್ಯೆಗೆ ಯತ್ನ ➤ ಸಂಚಾರಿ ಪೊಲೀಸರಿಂದ ರಕ್ಷಣೆ

(ನ್ಯೂಸ್ಕಡಬ) newskadaba.com.ಶಿವಮೊಗ್ಗ .ಮಾ.18. ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಜೋಡಿಯನ್ನು ಸಂಚಾರ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ಯುವಕನಿಗೆ ಗಂಭೀರ ಗಾಯವಾಗಿದ್ದು, ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಯುವತಿ ಆರೋಗ್ಯವಾಗಿದ್ದಾಳೆ ಎಂದು ತಿಳಿದು ಬಂದಿದೆ.  ಶಿವಮೊಗ್ಗದ ತುಂಗಾ ನದಿ ಹಳೆ ಸೇತುವೆ ಬಳಿ ಈ ಘಟನೆ ಸಂಭವಿಸಿದೆ. ರಾಜು ಎಂಬಾತ ಯುವತಿ ಜೊತೆಗೆ ಸೇತುವೆ ಬಳಿ ಬಂದಿದ್ದಾನೆ. ಇಬ್ಬರು ಸೇತುವೆಯಿಂದ ತುಂಗಾ ಹೊಳೆಗೆ ಜಿಗಿಯಲು ಮುಂದಾಗಿದ್ದು, ಈ ವೇಳೆ ಯುವಕ ಹೊಳೆಗೆ ಹಾರಿದ್ದಾನೆ. ಯುವತಿಯನ್ನು

ತುಂಗಾ ನದಿಗೆ ಹಾರಿ ದಂಪತಿ ಆತ್ಮಹತ್ಯೆಗೆ ಯತ್ನ ➤ ಸಂಚಾರಿ ಪೊಲೀಸರಿಂದ ರಕ್ಷಣೆ Read More »

ಕರ್ನಾಟಕ

ಪುಲ್ವಾಮ ಗುಂಡಿನ ಚಕಮಕಿ ➤ ಉಗ್ರರು ಪರಾರಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 18. ಶ್ರೀನಗರದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಭದ್ರತಾಪಡೆಗಳೊಂದಿಗೆ ಗುಂಡಿನ ಚಕಮಕಿಯ ಬಳಿಕ ಉಗ್ರರು ಪರಾರಿಯಾದ ಘಟನೆ ನಡೆದಿದೆ. ಪುಲ್ವಾಮಾದ ಮಿಟ್ರಿಗಾಮ್ ಗ್ರಾಮದಲ್ಲಿ ಉಗ್ರರ ಉಪಸ್ಥಿಯ ಬಗ್ಗೆ ನಿರ್ದಿಷ್ಟವಾದ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಹುಡುಕಾಟ ತೀವ್ರಗೊಂಡಂತೆ ಅಡಗಿಕೊಂಡಿದ್ದ ಭಯೋತ್ಪಾದಕರು ಶೋಧನಾ ತಂಡದ ಮೇಲೆ ಗುಂಡು ಹಾರಿಸಿದ್ದರು. ಈ ವೇಳೆ   ಭಯೋತ್ಪಾದಕರು ಕತ್ತಲೆಯ ಲಾಭವನ್ನು ಪಡೆದುಕೊಂಡು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಪುಲ್ವಾಮ ಗುಂಡಿನ ಚಕಮಕಿ ➤ ಉಗ್ರರು ಪರಾರಿ Read More »

ಕ್ರೈಮ್ ನ್ಯೂಸ್
Scroll to Top