ಕಡಬ ನ್ಯೂಸ್

ಶಬರಿಮಲೆ ದೇವಸ್ಥಾನದ ಬಾಗಿಲನ್ನು ‘ಕನ್ನಿಮಾಸ ಪೂಜೆಗಾಗಿ’ ಮತ್ತೆ ಓಪನ್

(ನ್ಯೂಸ್ ಕಡಬ) newskadaba.com ಶಬರಿಮಲೆ, ಸೆ.14:ಕೊರೋನಾ ಹಾವಳಿಯಿಂದಾಗಿ ಸದ್ಯದ ಮಟ್ಟಿಗೆ ಯಾವುದೇ ದೇವಲಾಯಗಳಲ್ಲಿ ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶವನ್ನು ಕಲ್ಪಿಸಲಾಗಿಲ್ಲ. ಬದಲಾಗಿ ಕೋವಿಡ್ ನಿಯಮಗಳಿಗನುಸಾರವಾಗಿ ಭಾಗವಹಿಸಲು ಸರ್ಕಾರ ಆದೇಶ ನೀಡಿದೆ.   ನಿಗಧಿತ ಸಮಯಕ್ಕಾನುಸಾರವಾಗಿ, ಹಾಗೂ ದಿನಕ್ಕೆ ಇಂತಿಷ್ಟು ಪೂಜೆಗಳಿಗೆ ಅವಕಾಶ ಎಂಬಂತೆ ಹೊಸ ಮಾರ್ಗಸೂಚಿ ಹೊರಡಿಸಿದೆ. ಅದರಂತೆ ಕನ್ಯಾಸ್ವಾಮಿಗಳ ಶ್ರೇಷ್ಟ ಹಾಗೂ ಪ್ರಸಿದ್ದ ದೇವಲಾಯವಾದ ಶಬರಿಮಲೆಗೂ ಕೋವಿಡ್ ನಿರ್ಭಂದ ಹೇರಲಾಗಿದೆ.  ‘ಕನ್ನಿಮಾಸ ಪೂಜೆಗಾಗಿ’ ಶಬರಿಮಲೆ ದೇವಸ್ಥಾನವು ಸೆ. 16 ರಂದು ಮತ್ತೆ ತೆರೆಯಲಿದೆ. ತದನಂತರ […]

ಶಬರಿಮಲೆ ದೇವಸ್ಥಾನದ ಬಾಗಿಲನ್ನು ‘ಕನ್ನಿಮಾಸ ಪೂಜೆಗಾಗಿ’ ಮತ್ತೆ ಓಪನ್ Read More »

ರಾಷ್ಟ್ರೀಯ ನ್ಯೂಸ್

ಸ್ಥಗಿತಗೊಂಡಿದ್ದ ಕಾಸರಗೋಡು-ಮಂಗಳೂರು ಬಸ್‌ ಸಂಚಾರವು ಸೆ.21 ರಿಂದ ಪುನರಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು , ಸೆ.14: ಕಾಸರಗೋಡು- ಮಂಗಳೂರು ನಡುವೆ ಬಸ್ ಸಂಚಾರ ಆರಂಭಿಸಲು ಕೇರಳ ರಸ್ತೆ ಸಾರಿಗೆ ನಿಗಮ ತೀರ್ಮಾನಿಸಿದೆ. ಲಾಕ್ ಡೌನ್ ಘೋಷಣೆಯಾದ ಬಳಿಕ ಎರಡೂ ರಾಜ್ಯಗಳ ನಡುವೆ ಬಸ್ ಸಂಚಾರ ಸ್ಥಗಿತವಾಗಿದೆ.     ಕೇರಳ ಸೆ. 21ರಿಂದ ಕಾಸರಗೋಡು-ಮಂಗಳೂರು ನಡುವೆ ಬಸ್ ಸೇವೆ ಆರಂಭಿಸಲಿದೆ. ಇದರಿಂದಾಗಿ ಉಭಯ ರಾಜ್ಯಗಳ ನಡುವೆ ಸಂಚಾರ ನಡೆಸುವ ಜನರಿಗೆ ಅನುಕೂಲವಾಗಲಿದೆ.ಸೆ. 21ರಂದು ಬಸ್ ಸಂಚಾರ ಆರಂಭವಾದರೆ ಕೇವಲ 40 ಪ್ರಯಾಣಿಕರು ಮಾತ್ರ ಸಂಚಾರ ನಡೆಸಲು

ಸ್ಥಗಿತಗೊಂಡಿದ್ದ ಕಾಸರಗೋಡು-ಮಂಗಳೂರು ಬಸ್‌ ಸಂಚಾರವು ಸೆ.21 ರಿಂದ ಪುನರಾರಂಭ Read More »

ಕರಾವಳಿ

ಪಂಜ: ಮಕ್ಕಳ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ

(ನ್ಯೂಸ್ ಕಡಬ) newskadaba.com ಪಂಜ, ಸೆ.14: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌, ಜೈ ಕರ್ನಾಟಕ ಯುವಕ ಮಂಡಲ, ಕೃಪಾ ಯುವತಿ ಮಂಡಲ ಚಿಂಗಾಣಿಗುಡ್ಡೆ ಹಾಗೂ ಶ್ರೀ ಶಾರದಾಂಬಾ ಭಜನಾ ಮಂಡಳಿ ಇದರ ಜಂಟಿ ಆಶ್ರಯದಲ್ಲಿ ನಡೆದ 2 ದಿನದ ಮಕ್ಕಳ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಕಳೆದ ದಿನ ನಡೆಯಿತು.    

ಪಂಜ: ಮಕ್ಕಳ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ Read More »

ಕರಾವಳಿ, ಕರ್ನಾಟಕ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಸೇವೆಗಳು ಆರಂಭ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ, ಸೆ.14:  ರಾಜ್ಯದಲ್ಲಿ ಕೊರೋನಾ ವೈರಸ್ ನಿಂದ ಹಲವು ದೇವಾಲಯಗಳ ಬಾಗಿಲನ್ನು ಬಂದ್ ಮಾಡಲಾಗಿತ್ತು. ಎಲ್ಲ ಸೇವೆಗಳು ಸ್ಥಗಿತಗೊಂಡಿತ್ತು. ಇದೀಗಾ, ಮತ್ತೆ ಪ್ರಸಿದ್ದ, ಪವಿತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಪೂಜಾ ಸೇವೆಗಳು ಇಂದಿನಿಂದ ಆರಂಭಗೊಂಡಿದೆ.   ಕಳೆದೊಂದು ತಿಂಗಳಿನಿಂದ ದೇವರ ದರ್ಶನ ಆರಂಭವಾಗಿದ್ದರೂ, ಸೇವೆಗಳು ಆರಂಭವಾಗಿರಲಿಲ್ಲ. ಇಂದಿನಿಂದ ದಿನಕ್ಕೆ 30 ಸರ್ಪಸಂಸ್ಕಾರ ಸೇವೆ. 30 ನಾಗ ಪ್ರತಿಷ್ಠೆ, ಬೆಳಗ್ಗಿನ ಪಾಳಿಯ ಎರಡು ಪಾಳಿಯ ಆಶ್ಲೇಷ ಪೂಜೆ ತಲಾ 30 ರಂತೆ. ಮಹಾಪೂಜೆ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ಸೇವೆಗಳು ಆರಂಭ Read More »

ಕರಾವಳಿ, ಕರ್ನಾಟಕ

ಉಭಯ ತಾಲೂಕಿನಲ್ಲಿ ಇಂದು 62 ಮಂದಿಯಲ್ಲಿ ಕೊರೋನಾ ದೃಢ

(ನ್ಯೂಸ್ ಕಡಬ) newskadaba.com ಕಡಬ, ಸೆ.13: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಇಂದು (ರವಿವಾರ) 62 ಮಂದಿಗೆ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ. ಈ ತನಕ ಉಭಯ ತಾಲೂಕುಗಳಲ್ಲಿ ಒಟ್ಟು 11,754 ಪಾಸಿಟಿವ್‌ ಪ್ರಕರಣಗಳು ವರದಿಯಾಗಿದೆ.   ಕಡಬ ತಾಲೂಕಿನ ಕುಟ್ರುಪಾಡಿ 13 ವರ್ಷದ ಬಾಲಕ, ಬಲ್ಯ 48 ವರ್ಷದ ಮಹಿಳೆ, ನೂಜಿಬಾಳ್ತಿಲ 62 ವರ್ಷದ ಮಹಿಳೆ, ಕೋಡಿಂಬಾಳದ 35 ವರ್ಷದ ಮಹಿಳೆ, 49 ವರ್ಷದ ಪುರುಷ, 16 ವರ್ಷದ ಬಾಲಕಿ, 62 ವರ್ಷದ ಮಹಿಳೆ, ಕೊಂಬಾರು 50

ಉಭಯ ತಾಲೂಕಿನಲ್ಲಿ ಇಂದು 62 ಮಂದಿಯಲ್ಲಿ ಕೊರೋನಾ ದೃಢ Read More »

ಕರಾವಳಿ, ಕರ್ನಾಟಕ

ಕುಕ್ಕೆ ಸುಬ್ರಹ್ಮಣ್ಯ: ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವಿವಿಧ ಸೇವೆಗಳು ನಾಳೆಯಿಂದ ಆರಂಭ

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ, ಸೆ.13: ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಸ್ಥಗಿತಗೊಂಡಿದ್ದ ವಿವಿಧ ಸೇವೆಗಳು ನಾಳೆಯಿಂದ (ಸೋಮವಾರ) ಆರಂಭವಾಗಲಿದೆ. ‘ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ಎಲ್ಲಾ ಸೇವೆಗಳು ನಾಳೆಯಿಂದ ಶುರುವಾಗಲಿದೆ. ಆದರೆ ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಕೆಲವೊಂದು ಷರತ್ತುಗಳನ್ನು ಪೂಜಾ ವಿಧಿ ವಿಧಾನಗಳಿಗೆ ಸಂಬಂಧಿಸಿದಂತೆ ಅನ್ವಯ ಮಾಡಲಾಗಿದೆ ಎಂದು ದೇವಾಲಯದ ಆಡಳಿತಾಧಿಕಾರಿ ಎಂ.ಜೆ.ರೂಪಾ ತಿಳಿಸಿದ್ದಾರೆ.     ಪೂಜಾ ಸೇವೆಗಳ ನಿಯಮಗಳು ಈ ಕೆಳಗಿನಂತಿವೆ: * ಸೇವಾರ್ಥಿಗಳಿಗೆ ಮಾತ್ರ ಭೋಜನ

ಕುಕ್ಕೆ ಸುಬ್ರಹ್ಮಣ್ಯ: ಕೊರೋನಾ ವೈರಸ್​ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವಿವಿಧ ಸೇವೆಗಳು ನಾಳೆಯಿಂದ ಆರಂಭ Read More »

ಕರಾವಳಿ, ಕರ್ನಾಟಕ

ಕರಾವಳಿ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರಿ ಮಳೆಯಾಗುವ ಸಾಧ್ಯತೆ

(ನ್ಯೂಸ್ ಕಡಬ) newskadaba.com ಕರಾವಳಿ, ಸೆ.13: ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.     ಕರಾವಳಿ ಜಿಲ್ಲೆಗಳಲ್ಲಿ ಸೆ.17ರವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಗಂಟೆಗೆ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಕಡಲಿಗೆ ಇಳಿಯದಂತೆ

ಕರಾವಳಿ ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ ಭಾರಿ ಮಳೆಯಾಗುವ ಸಾಧ್ಯತೆ Read More »

ಕರಾವಳಿ, ಕರ್ನಾಟಕ

ಲಾರಿ ಸ್ಕೂಟಿ ನಡುವೆ ಭೀಕರ ರಸ್ತೆ ಅಪಘಾತ..! ➤ ಸ್ಕೂಟಿ ಸವಾರ ಸ್ಥಳದಲ್ಲೇ ಮೃತ್ಯು..!!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಸೆ.05:  ಪಡಂಗಡಿ ಗ್ರಾಮದ ಬದ್ಯಾರು ಎಂಬಲ್ಲಿ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಬೀಕರವಾದ ಅಪಘಾತದಲ್ಲಿ ಸ್ಕೂಟಿ ಸವಾರ ಸಾವನ್ನಪ್ಪಿದ ಘಟನೆ ಇಂದು (ಸೆ. 13) ನಡೆದಿದೆ.   ಅಳದಂಗಡಿ ಕಡೆಯಿಂದ ಬರುತ್ತಿದ್ದ ಲಾರಿ ಮತ್ತು ಸ್ಕೂಟಿ ನಡುವೆ ಭೀಕರ ಅಪಘಾತ ನಡೆದಿದ್ದು, ಈ ಸಮಯ ಸ್ಕೂಟಿ ಸವಾರ ಗರ್ಡಾಡಿ ಗ್ರಾಮದ ನಿವಾಸಿ ಗಿರೀಶ್ ಮೂಲ್ಯ ರಸ್ತೆಗೆ ಎಸಯಲ್ಪಟ್ಟ ಪರಿಣಾಮ, ಅವರ ತಲೆಯ ಮೇಲೆಯೇ ಲಾರಿ ಚಲಿಸಿದೆ ಪರಿಣಾಮ ಹೆಲ್ಮೆಟ್ ಪುಡಿ ಪುಡಿಯಾಗಿ,

ಲಾರಿ ಸ್ಕೂಟಿ ನಡುವೆ ಭೀಕರ ರಸ್ತೆ ಅಪಘಾತ..! ➤ ಸ್ಕೂಟಿ ಸವಾರ ಸ್ಥಳದಲ್ಲೇ ಮೃತ್ಯು..!! Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೂಡಬಿದಿರೆ: ಗೂಡ್ಸ್ ಟೆಂಪೊ ಹಾಗೂ ಬೈಕ್ ನಡುವೆ ಭೀಕರ ಅಪಘಾತ

(ನ್ಯೂಸ್ ಕಡಬ) newskadaba.com ಮೂಡಬಿದಿರೆ, ಸೆ.13: ಕೋಳಿ ಸಾಗಾಟದ ಗೂಡ್ಸ್ ಟೆಂಪೊ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮತ್ತು ಸಹಸವಾರ ಗಂಭೀರ ಗಾಯಗೊಂಡ ಘಟನೆ ನಗರದ ಹೊರವಲಯ ದಲ್ಲಿರುವ ಹಂಡೇಲು ಬಳಿ ನಡೆದಿದೆ.     ಇಂದು ಮುಂಜಾನೆ ಈ ಘಟನೆ ನಡೆದಿದ್ದು, ಹಂಡೇಲು ಸುತ್ತು ಬಳಿ ರಾಷ್ಟ್ರೀಯ ಹೆದ್ದಾರಿ (169) ಯಲ್ಲಿ ಟಂಪೋ ಮತ್ತು ಬೈಕ್ ಢಿಕ್ಕಿಯಾಗಿದೆ. ಟೆಂಪೋ ಮೂಡಬಿದಿರೆಯಿಂದ ಕೋಳಿಗಳನ್ನು ತುಂಬಿಕೊಂಡು ಹೊರವಲಯಕ್ಕೆ ಹೋಗುತ್ತಿತ್ತು ಎನ್ನಲಾಗಿದೆ.    

ಮೂಡಬಿದಿರೆ: ಗೂಡ್ಸ್ ಟೆಂಪೊ ಹಾಗೂ ಬೈಕ್ ನಡುವೆ ಭೀಕರ ಅಪಘಾತ Read More »

ಕರಾವಳಿ, ಕರ್ನಾಟಕ

ಮಂಗಳೂರು: ಕೆನರಾ ಹೈಸ್ಕೂಲಿನ ನಿವೃತ್ತ ಶಿಕ್ಷಕ ಜನಾರ್ದನ ಆಚಾರ್ ನಿಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.13: ಮಂಗಳೂರಿನ ಕೆನರಾ ಹೈ ಸ್ಕೂಲಿನ ನಿವೃತ್ತ ಶಿಕ್ಷಕರು, ಹಿರಿಯರು, ಎಸ್ ಕೆ ಜಿ ಐ ಸೊಸೈಟಿಯ ಅಧ್ಯಕ್ಷರೂ ಆದ ಬೈಕಾಡಿ ಜನಾರ್ದನ ಆಚಾರ್ ಅವರು ಅನಾರೋಗ್ಯದ ಕಾರಣದಿಂದ ಇಂದು ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.     ಕಲಾಭಿಮಾನಿ, ಸಾಹಿತ್ಯಾಭಿಮಾನಿಯಾಗಿಯೂ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಬೈಕಾಡಿ, ಕೆನರಾ ಉರ್ವ ಹಾಗೂ ಇತರ ವಿದ್ಯಾ ಸಂಸ್ಥೆಗಳಲ್ಲೂ ಮುಖ್ಯೋಪಾಧ್ಯಾಯರಾಗಿ ಪ್ರಾಂಶುಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಜನಾರ್ದನ ಅವರ ಅಂತಿಮ ದರ್ಶನಕ್ಕಾಗಿ

ಮಂಗಳೂರು: ಕೆನರಾ ಹೈಸ್ಕೂಲಿನ ನಿವೃತ್ತ ಶಿಕ್ಷಕ ಜನಾರ್ದನ ಆಚಾರ್ ನಿಧನ Read More »

ಕರಾವಳಿ, ಕರ್ನಾಟಕ
Scroll to Top