ಕಡಬ ನ್ಯೂಸ್

ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ➤ತುಮಕೂರಲ್ಲಿ ಕಾಮುಕ ಶಿಕ್ಷಕನ ಬಂಧನ

(ನ್ಯೂಸ್ ಕಡಬ) newskadaba.com. ತುಮಕೂರು, ಮಾ. 28. ಜಿಲ್ಲೆಯ ಶಾಲೆಯೊಂದರ ಶಿಕ್ಷಕನೊಬ್ಬ  ವಿದ್ಯಾರ್ಥಿನಿಯರ ಅಂಗಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದ್ದು, ಶಿಕ್ಷಕನ ವಿರುದ್ಧ ರೊಚ್ಚಿಗೆದ್ದ ಪೋಷಕರು‌ ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಆರೋಪ ಕೇಳಿಬರುತ್ತಿದ್ದಂತೆ ಕಾಮುಕ ಶಿಕ್ಷಕ ಮಂಜುನಾಥ್ ಹಾಗೂ ಮುಖ್ಯ ಶಿಕ್ಷಕ ನಟರಾಜ್​ರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಬೋರನಗುಂಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. 4 ಮತ್ತು 5ನೇ ತರಗತಿ ವಿದ್ಯಾರ್ಥಿನಿಯರ ಅಂಗಾಂಗ […]

ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ➤ತುಮಕೂರಲ್ಲಿ ಕಾಮುಕ ಶಿಕ್ಷಕನ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಟೋಕಿಯೊ ಕೋವಿಡ್‌ ಬಳಿಕ ಬ್ರೈನ್‌ ಸಿಂಡ್ರೋಮ್‌ಗೆ ಮಕ್ಕಳು ಸಾವು

(ನ್ಯೂಸ್ ಕಡಬ) newskadaba.com, ಟೋಕಿಯೊ, ಮಾ. 27. ಕೋವಿಡ್ -19 ಸೋಂಕಿಗೆ ಒಳಗಾದ ನಂತರ ತೀವ್ರವಾದ ಬ್ರೈನ್ ಸಿಂಡ್ರೋಮ್‌ಗೆ ಒಳಗಾದ ಜಪಾನಿನ ಮಕ್ಕಳಲ್ಲಿ ಶೇಕಡಾ 10 ಕ್ಕಿಂತ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಅಧ್ಯಯನ ತಂಡವು ಇತ್ತೀಚೆಗೆ ಬಿಡುಗಡೆ ಮಾಡಿದ ರಾಷ್ಟ್ರೀಯ ಸಮೀಕ್ಷೆ ತಿಳಿಸಿದೆ. ಜನವರಿ 2020 ಮತ್ತು ಮೇ 2022 ರ ನಡುವೆ, ಸಮೀಕ್ಷೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಲ್ಲಿ ಕೋವಿಡ್-19 ಸೋಂಕಿಗೆ ಸಂಬಂಧಿಸಿದ ತೀವ್ರವಾದ ಎನ್ಸೆಫಲೋಪತಿಯ 34 ಪ್ರಕರಣಗಳನ್ನು ಕಂಡುಹಿಡಿದಿದೆ.

ಟೋಕಿಯೊ ಕೋವಿಡ್‌ ಬಳಿಕ ಬ್ರೈನ್‌ ಸಿಂಡ್ರೋಮ್‌ಗೆ ಮಕ್ಕಳು ಸಾವು Read More »

ಅಂತರ್ರಾಷ್ಟ್ರೀಯ ನ್ಯೂಸ್

ಕಾಸರಗೋಡು ಆಸ್ಪತ್ರೆ ಆವರಣದ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಮಾ. 27.   ನಗರದ ಪರಿಸರದ ಬಾವಿಯೊಂದರಲ್ಲಿ ಅಪರಿಚಿತ ಪುರುಷನೊಬ್ಬನ ಮೃತದೇಹ ಇಂದು ಪತ್ತೆಯಾಗಿದೆ. ಕರಂದಕ್ಕಾಡ್ ಅಶ್ವಿನಿ ನಗರದ ಖಾಸಗಿ ಆಸ್ಪತ್ರೆ ಪರಿಸರದ ಬಾವಿಯಲ್ಲಿ ದುರ್ವಾಸನೆ ಬರುತ್ತಿದ್ದು, ಇದನ್ನು ಗಮನಿಸಿದ ಗ್ರಾಮಸ್ಥರು ಬಾವಿಯಲ್ಲಿ ಮೃತದೇಹ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿದ್ದು, ಮಹಜರು ನಡೆಸಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.  

ಕಾಸರಗೋಡು ಆಸ್ಪತ್ರೆ ಆವರಣದ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ Read More »

ಕ್ರೈಮ್ ನ್ಯೂಸ್

ಮಗು ಪಡೆಯಲು ಅಪ್ರಾಪ್ತ ಬಾಲಕಿಯ ನರಬಲಿ➤ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com. ಕೋಲ್ಕತ್ತಾ, ಮಾ. 27. ಸ್ವಂತ ಮಗುವನ್ನು ಪಡೆಯಲು ‘ನರಬಲಿ’ ಹೆಸರಲ್ಲಿ ತನ್ನ ನೆರೆಯಮನೆಯ ಅಪ್ರಾಪ್ತ ಬಾಲಕಿಯನ್ನು ಕೊಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಏಳು ವರ್ಷದ ಬಾಲಕಿಯ ಮೃತದೇಹವನ್ನು ಭಾನುವಾರ ತಡರಾತ್ರಿ ದಕ್ಷಿಣ ಕೋಲ್ಕತ್ತಾದ ತಿಲಜಾಲದಲ್ಲಿರುವ ಆರೋಪಿಯ ನಿವಾಸದಿಂದ ವಶಪಡಿಸಿಕೊಳ್ಳಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಬಾಲಕಿಯ ದೇಹವನ್ನು ಗೋಣಿ ಚೀಲದೊಳಗೆ ತುಂಬಲಾಗಿದ್ದು, ಆಕೆಯ ತಲೆ ಸೇರಿದಂತೆ ದೇಹದ ಮೇಲೆಲ್ಲ ಮಾರಣಾಂತಿಕ ಗಾಯದ ಗುರುತುಗಳು ಪತ್ತೆಯಾಗಿವೆ.

ಮಗು ಪಡೆಯಲು ಅಪ್ರಾಪ್ತ ಬಾಲಕಿಯ ನರಬಲಿ➤ ಆರೋಪಿ ಬಂಧನ Read More »

ಕ್ರೈಮ್ ನ್ಯೂಸ್

ಬಾಣಂತಿ ಕೊಲೆ ಪ್ರಕರಣ ➤ತಾಯಿ, ತಮ್ಮ ಅರೆಸ್ಟ್!

(ನ್ಯೂಸ್ ಕಡಬ) newskadaba.com. ಕೊಪ್ಪಳ, ಮಾ. 27. ಬಾಣಂತಿಯ ಮೃತದೇಹ ಅರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಪ್ರಕರಣದಲ್ಲಿ ಮೃತ ಮಹಿಳೆಯ ತಾಯಿ ಹಾಗೂ ತಮ್ಮನನ್ನೇ ಪೊಲೀಸರು ಬಂಧನ ಮಾಡಿದ್ದಾರೆ. ಇದರೊಂದಿಗೆ ಗ್ರಾಮಸ್ಥರಿಗೆ ಶಾಕ್ ಆಗಿದ್ದು, ಬಾಣಂತಿ ಅಂತಲೂ ನೋಡದೆ ಹೆತ್ತ ತಾಯಿಯೇ ಮಗಳನ್ನು ಕೊಲೆಗೈದು ಸುಟ್ಟು ಹಾಕಲು ಕಾರಣವೇನು ಅಂತ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಅನ್ವಯ ಮೃತ ಮಹಿಳೆ ನೇತ್ರಾವತಿ ಹಾಗೂ ಆರೋಪಿಗಳ ಇಬ್ಬರ ನಡುವೆ ಹಣ ಹಾಗೂ ಬಂಗಾರದ ವಿಚಾರದಲ್ಲಿ ಆರಂಭವಾದ ಜಗಳವೇ

ಬಾಣಂತಿ ಕೊಲೆ ಪ್ರಕರಣ ➤ತಾಯಿ, ತಮ್ಮ ಅರೆಸ್ಟ್! Read More »

ಕ್ರೈಮ್ ನ್ಯೂಸ್

ಬ್ಯಾಂಕ್ ಬಡ್ಡಿ ದರ ಶೇ.0.25 ಹೆಚ್ಚಳ ಸಾಧ್ಯತೆ ➤ಆರ್‌ಬಿಐ

(ನ್ಯೂಸ್ ಕಡಬ) newskadaba.com. ನವದೆಹಲಿ, ಮಾ. 27. ಗೃಹ, ವಾಹನ ಸಾಲ ಇರುವವರಿಗೆ ಸದ್ಯದಲ್ಲೇ ಮತ್ತೊಂದು ಆಘಾತ ಎದುರಾಗುವ ಸಾಧ್ಯತೆಯಿದೆ. ಮುಂದಿನ ವಾರ ಅಂದರೆ ಏ. 3, 5 ಮತ್ತು 6ರಂದು ಆರ್‌ಬಿಐ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ನಡೆಯಲಿದ್ದು, ಮತ್ತೂಂದು ಸುತ್ತಿನ ಬಡ್ಡಿ ದರ ಏರಿಕೆ ಘೋಷಣೆಯಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ.6ಕ್ಕಿಂತಲೂ ಮೇಲಿರುವ ಕಾರಣ ಮತ್ತು ಜಾಗತಿಕ ತಲ್ಲಣಗಳು ಮುಂದುವರಿದಿರುವ ಕಾರಣ, ಆರ್‌ಬಿಐ ಮತ್ತೆ ಸಾಲದ ಮೇಲಿನ ಬಡ್ಡಿ ದರವನ್ನು

ಬ್ಯಾಂಕ್ ಬಡ್ಡಿ ದರ ಶೇ.0.25 ಹೆಚ್ಚಳ ಸಾಧ್ಯತೆ ➤ಆರ್‌ಬಿಐ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ವಿದ್ಯುತ್ ತಗುಲಿ ಕಾಡಾನೆ ಸಾವು

(ನ್ಯೂಸ್ ಕಡಬ) newskadaba.com. ಕೊಯಮತ್ತೂರು. ಮಾ.25. ಅರಣ್ಯ ವ್ಯಾಪ್ತಿಯ ಖಾಸಗಿ ಜಮೀನಿನೊಂದರಲ್ಲಿ ಕಾಡಾನೆಗೆ ವಿದ್ಯುತ್ ತಂತಿಯ ತಗುಲಿ ಸಾವನ್ನಪ್ಪಿರುವ ಘಟನೆ ಕೊಯಮತ್ತೂರು ವಿಭಾಗದ ಪೆರಿಯಾನಾಯ್ಕನ್‌ಪಾಳ್ಯಂ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ. ಖಾಸಗಿ ಜಮೀನಿನಲ್ಲಿ ಮುಂಜಾನೆ ವಿದ್ಯುತ್ ತಂತಿಯು ಕಾಡಾನೆಯೊಂದು ಮೇಲೆ ಬಿದ್ದ ಪರಿಣಾಮ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಡಗಾಂ ಮೀಸಲು ಅರಣ್ಯ ಪ್ರದೇಶದ ಪಟ್ಟಾ ಜಮೀನಿನಲ್ಲಿದ್ದ ವಿದ್ಯುತ್ ಕಂಬಕ್ಕೆ ಆನೆಯು ತನ್ನ ದೇಹವನ್ನು ಉಜ್ಜುತ್ತಿದ್ದಾಗ ಆಕಸ್ಮಿಕವಾಗಿ ಅದರ ಮೇಲೆ ಬಿದ್ದಿದೆ ಗಂಡು ಆನೆ ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು

ವಿದ್ಯುತ್ ತಗುಲಿ ಕಾಡಾನೆ ಸಾವು Read More »

ರಾಷ್ಟ್ರೀಯ ನ್ಯೂಸ್

➤ಮಂಗಳೂರು ಹಲವು ಪ್ರಖರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಬಂಧನ

(ನ್ಯೂಸ್ ಕಡಬ) newskadaba.com. ಮುಂಬೈ,  ಮಾ. 23. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೋಸ್ಟ್ ವಾಟೆಂಡ್ ಆರೋಪಿ ಅಜರುದ್ದೀನ್ ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಅಜರುದ್ದೀನ್ ಅಲಿಯಾಸ್ ಅಜರ್ (29) ಎಂದು ಗುರುತಿಸಲಾಗಿದೆ.ಈತನ ಮೇಲೆ ಮಂಗಳೂರು ನಗರ, ದಕ್ಷಿಣಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 23 ಪ್ರಕರಣಗಳಲ್ಲಿ ಜಾಮೀನು ರಹಿತ  ವಾರಂಟ್ ಇದೆ.ಮಂಗಳೂರು ಪೊಲೀಸ್ ಆಯುಕ್ತರ ಆದೇಶದ ಮೇರೆಗೆ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಆಯುಕ್ತರಾದ ಮನೋಜ್ ಕುಮಾರ್ ರವರ

➤ಮಂಗಳೂರು ಹಲವು ಪ್ರಖರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಟೆಂಡ್ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

78,800 ಕೋಟಿ ರೂ.ಗಳ ಬಜೆಟ್‌ ಮಂಡಿಸಿದ ದೆಹಲಿ ಸರ್ಕಾರ

(ನ್ಯೂಸ್ ಕಡಬ)newskadaba.com ನವದೆಹಲಿ, ಮಾ.23. ದೆಹಲಿ ಸರ್ಕಾರವು ದೆಹಲಿ ವಿಧಾನಸಭೆಯಲ್ಲಿಂದು 78,800 ಕೋಟಿ ರೂ.ಗಳ ಬಜೆಟ್‌ ಮಂಡಿಸಿದೆ ಎಂದು ತಿಳಿದುಬಂದಿದೆ. ಹಣಕಾಸು ಸಚಿವ ಕೈಲಾಶ್ ಗೆಹ್ಲೋತ್‌ ಅವರು 2023-24ನೇ ಸಾಲಿನ ಬಜೆಟ್ ಮಂಡಿಸಿದರು. ಮೂಲಸೌಕರ್ಯ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಮೂಲಸೌಕರ್ಯಕ್ಕೆ 22,000, ಶಿಕ್ಷಣಕ್ಕೆ 16 ಸಾವಿರ ಕೋಟಿ, ಆರೋಗ್ಯಕ್ಕೆ 9 ಸಾವಿರ ಕೋಟಿ, ಜಾಹೀರಾತುಗಳಿಗೆ 550 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ ಎಂದು ಗೆಹ್ಲೋತ್ ಅವರು ತಿಳಿಸಿದ್ದಾರೆ.

78,800 ಕೋಟಿ ರೂ.ಗಳ ಬಜೆಟ್‌ ಮಂಡಿಸಿದ ದೆಹಲಿ ಸರ್ಕಾರ Read More »

ರಾಷ್ಟ್ರೀಯ ನ್ಯೂಸ್

ಬಂಟ್ವಾಳ ತಾಲೂಕು ಕಚೇರಿಯಲ್ಲಿ ಕಡತ ಕಾಣೆ ➤ ತರಾಟೆಗೆತ್ತಿಕೊಂಡ ಲೋಕಾಯುಕ್ತ ಎಸ್ಪಿ

(ನ್ಯೂಸ್ ಕಡಬ) newskadaba.com. ಬಂಟ್ವಾಳ, ಮಾ 22. ತಾಲೂಕು ಕಚೇರಿಯಲ್ಲಿ ಕಡತಗಳು ಕಾಣೆಯಾಗುತ್ತಿರುವುದು ಏಕೆ ಎಂದು ಲೋಕಾಯುಕ್ತ ಎಸ್ಪಿ ಸೈಮನ್ ಗರಂ ಆದ ಘಟನೆ ಬಂಟ್ವಾಳ ತಾಲೂಕಿನಲ್ಲಿ ಕರೆದ ಸಾರ್ವಜನಿಕ ಕುಂದುಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ನಡೆಯಿತು. ಎಸ್ಪಿ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ನಡೆಸಿದ ಕಾರ್ಯಕ್ರಮದಲ್ಲಿ ಸುಮಾರು ಹದಿನೈದರಷ್ಟು ಮಂದಿ ತಮ್ಮ ದೂರು, ದುಮ್ಮಾನ ಸಲ್ಲಿಸಿದರು. ಈ ಸಂದರ್ಭ ಕರೋಪಾಡಿ ಗ್ರಾಮದ ವಿಕ್ಟರ್ ವೇಗಸ್ ಎಂಬವರು ದೂರು ನೀಡಿ, ತನ್ನ ಕಡತಗಳ ಕುರಿತು ತಾಲೂಕು ಕಚೇರಿಯಲ್ಲಿ ಕೇಳಿದರೆ,

ಬಂಟ್ವಾಳ ತಾಲೂಕು ಕಚೇರಿಯಲ್ಲಿ ಕಡತ ಕಾಣೆ ➤ ತರಾಟೆಗೆತ್ತಿಕೊಂಡ ಲೋಕಾಯುಕ್ತ ಎಸ್ಪಿ Read More »

ಕರಾವಳಿ
Scroll to Top