ಕಡಬ ನ್ಯೂಸ್

ನಿಲ್ಲುತ್ತಿಲ್ಲ ಕಡಬದಲ್ಲಿ ಅಕ್ರಮ ಗೋ ಸಾಗಾಟ, 2 ಗೋವುಗಳು ವಶಕ್ಕೆ ➤ ಮಾಜಿ ಪಂಚಾಯತ್ ಸದಸ್ಯ ಪರಾರಿ

(ನ್ಯೂಸ್ ಕಡಬ) newskadaba.com ಕಡಬ, ಅ.07:  ಕೋಡಿಂಬಾಳ ಗ್ರಾಮದ ಮಜ್ಜಾರು ಕ್ರಾಸ್ ಸಮೀಪ ಅಕ್ರಮವಾಗಿ ಕಸಾಯಿಖಾನೆಗೆ ಎರಡು ಜಾನುವಾರುಗಳನ್ನು ಕೊಂಡೋಯ್ಯುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಕಡಬ ಪೋಲಿಸರು ಎರಡು ಹೋರಿ ಹಾಗೂ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾಜಿ ಪಂಚಾಯತ್ ಸದಸ್ಯ ಪರಾರಿಯಾಗಿದ್ದಾರೆ. ಪುಳಿಕುಕ್ಕು ಎಂಬಲ್ಲಿಂದ ಮಡ್ಯಡ್ಕ ಎಂಬಲ್ಲಿಗೆ ಜಾನುವಾರನ್ನು ಕೊಂಡೊಯ್ಯಲಾಗುತ್ತಿದ್ದು ಮಡ್ಯಡ್ಕದ ಮನೆಯೊಂದರಲ್ಲಿ ಕಸಾಯಿಖಾನೆ ನಡೆಸುತ್ತಿರುವ ಬಗ್ಗೆಯೂ ಆರೋಪ ಕೇಳಿ ಬಂದಿದೆ. ಇಂದಿನ ಜಾನುವಾರು ಸಾಗಾಟದಲ್ಲಿ ಕಡಬದ ಮಾಜಿ ಬಿಜೆಪಿಯ ಸದಸ್ಯರೋರ್ವರು ಶಾಮಿಲಾಗಿರುವ ಬಗ್ಗೆ ಶಂಕೆ […]

ನಿಲ್ಲುತ್ತಿಲ್ಲ ಕಡಬದಲ್ಲಿ ಅಕ್ರಮ ಗೋ ಸಾಗಾಟ, 2 ಗೋವುಗಳು ವಶಕ್ಕೆ ➤ ಮಾಜಿ ಪಂಚಾಯತ್ ಸದಸ್ಯ ಪರಾರಿ Read More »

ಕರಾವಳಿ

ಪುತ್ತೂರು: ಎರಡನೇ ದಿನವೂ ರಿಕ್ಕಿ ರೈಯವರ ಡ್ರಗ್ಸ್ ಕೇಸು ವಿಚಾರಣೆ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.07: ಡ್ರಗ್ಸ್‌ ದಂಧೆಗೆ ಸಂಬಂಧಪಟ್ಟಂತೆ ಜಯ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷ, ಮಾಜಿ ಭೂಗತ ಡಾನ್‌ ಎನ್. ಮುತ್ತಪ್ಪ ರೈಯವರ ಎಡನೇ ಪುತ್ರ ರಿಕ್ಕಿ ರೈಯವರ ವಿಚಾರಣೆ ಇದೀಗ ಎರಡನೇ ದಿನವೂ ಮುಂದುವರಿದಿದೆ. ಸಿಸಿಬಿ ಇನ್ಸ್ಪೆಕ್ಟರ್‌ ಪುನೀತ್‌ ನೇತೃತ್ವದ ತಂಡದಿಂದ ರಿಕ್ಕಿ ರೈ ವಿಚಾರಣೆ ನಡೆಯುತ್ತಿದೆ.     ಕಳೆದ ದಿನ ಬೆಂಗಳೂರಿನ ಸದಾಶಿವ ನಗರದಲ್ಲಿರುವ ರಿಕ್ಕಿ ರೈಯವರ ಫ್ಲ್ಯಾಟ್‌ ಮತ್ತು ಬಿಡದಿ ನಿವಾಸಕ್ಕೆ ದಾಲಿ ನಡೆಸಿ ರಿಕ್ಕಿ ರೈಯವರನ್ನು ವಿಚಾರಣೆಗೆ ಒಳಪಡಿಸಿದ್ದ

ಪುತ್ತೂರು: ಎರಡನೇ ದಿನವೂ ರಿಕ್ಕಿ ರೈಯವರ ಡ್ರಗ್ಸ್ ಕೇಸು ವಿಚಾರಣೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ: ಮನೆಯವರು ಮಲಗಿದ್ದ ವೇಳೆ ಕಳ್ಳರ ಕೈಚಳಕ ➤ 12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ.07: ಮನೆಯಲ್ಲಿ ಮನೆ ಮಂದಿ ಮಲಗಿದ್ದ ವೇಳೆ  ಬಾಗಿಲಿನ ಚಿಲಕ ಮುರಿದು ಕಳ್ಳರು ಒಳನುಗ್ಗಿದ ಘಟನೆ ಕಲ್ಲಡ್ಕ ಕರಿಂಗಾನ ಸಮೀಪದ ಅಮ್ಟೂರು ಮಸೀದಿ ಬಳಿ ಕಳೆದ ದಿನ ತಡರಾತ್ರಿ ಬೆಳಕಿಗೆ ಬಂದಿದೆ. ಕಳ್ಳರು ಕೋಣೆಯಲ್ಲಿದ್ದ ಕಪಾಟಿನ ಕೀ ತೆರೆದು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.     ಅಮ್ಟೂರು ನಿವಾಸಿ ಸುಲೈಮಾನ್ ಅವರ ಮನೆಯಲ್ಲಿ ಸುಮಾರು 12 ಲಕ್ಷ ಮೌಲ್ಯದ 28 ಪವನ್ ಚಿನ್ನಾಭರಣಗಳು ಕಳವು ಮಾಡಿದ್ದು, ಸುಲೈಮಾನ್ ಅವರ

ಬಂಟ್ವಾಳ: ಮನೆಯವರು ಮಲಗಿದ್ದ ವೇಳೆ ಕಳ್ಳರ ಕೈಚಳಕ ➤ 12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು Read More »

ಕರಾವಳಿ

ಬಂಟ್ವಾಳ: ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತಲೆಗೆ ಕಲ್ಲು ಬಿದ್ದು ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ.07: ಕೆಲಸದಲ್ಲಿ ನಿರತರಾಗಿದ್ದ ಸಿದ್ದಕಟ್ಟೆ ಬಳಿಯ ಸಂಗಬೆಟ್ಟುವಿನಲ್ಲಿ ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ಕಾರ್ಮಿಕರ ತಲೆಗೆ ಕಲ್ಲು ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ದಕಟ್ಟೆ ಎಂಬಲ್ಲಿ ಇಂದು ನಡೆದಿದೆ.     ಮೃತ ವ್ಯಕ್ತಿಯನ್ನು ಸಿದ್ದಕಟ್ಟೆಯ ಮಂಚಕಲ್ ಮೂಲದ ರಾಮಾನಂದ ಗೌಡ (30) ಎಂದು ಗುರುತಿಸಲಾಗಿದೆ. ಸಿದ್ದಕಟ್ಟೆ ಬಳಿಯ ಸಂಗಬೆಟ್ಟುವಿನಲ್ಲಿ ಹೊಸ ಮನೆ ನಿರ್ಮಾಣದ ಸಂದರ್ಭದಲ್ಲಿ ಈ ಮನೆ ನಿರ್ಮಾಣಕ್ಕಾಗಿ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು.

ಬಂಟ್ವಾಳ: ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ತಲೆಗೆ ಕಲ್ಲು ಬಿದ್ದು ಕಾರ್ಮಿಕ ಮೃತ್ಯು Read More »

ಕರಾವಳಿ

ಬೆಂಗಳೂರು : ಮಾಸ್ಕ್ ದಂಡದ ಮೊತ್ತ 1000ರೂ ಯಿಂದ 250 ರುಪಾಯಿಗೆ ಇಳಿಕೆ

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 07: ಕೊರೊನಾ ಹವಾಳಿಯನ್ನ ತಡೆಗಟ್ಟಲು ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿತ್ತು. ಅದ್ರಂತೆ, ಮಾಸ್ಕ್ ಹಾಕದಿದ್ರೆ 1000 ದಂಡ ವಿಧಿಸುವ ನಿಯಮವನ್ನ ರಾಜ್ಯ ಸರ್ಕಾರ ಜಾರಿಗೆ ತಂದಿತ್ತು. ಸಧ್ಯ ಸಾರ್ವಜನಿಕರ ಒತ್ತಯಕ್ಕೆ ಮಣಿದ ಸರ್ಕಾರ ದಂಡದ ಮೊತ್ತವನ್ನ ಕಡಿಮೆಗೊಳಿಸಿದೆ.   ಹೊಸ ನಿಯಮದಂತೆ ನಗರ ಪ್ರದೇಶಗಳಲ್ಲಿ 1000 ದಂಡದ ಮೊತ್ತವನ್ನ 250 ರೂಪಾಯಿಗೆ ಮತ್ತು ಗ್ರಾಮೀಣ ಪ್ರದೇಶದಲ್ಲಿ 500 ಯಿಂದ 100 ರೂಪಾಯಿಗೆ ಇಳಿಸಿದೆ. ಇನ್ನು ಈ ಅದೇಶ ತಕ್ಷಣಕ್ಕೆ ಜಾರಿಯಾಗುವಂತೆ

ಬೆಂಗಳೂರು : ಮಾಸ್ಕ್ ದಂಡದ ಮೊತ್ತ 1000ರೂ ಯಿಂದ 250 ರುಪಾಯಿಗೆ ಇಳಿಕೆ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಪಬ್ಜಿಯಿಂದ ಪ್ರಾಣಹೋಯ್ತು ➤ 12 ವರ್ಷದ ಬಾಲಕನಿಗೆ ಹಾರ್ಟ್ ಅಟ್ಯಾಕ್… !

(ನ್ಯೂಸ್ ಕಡಬ) newskadaba.com ಈಜಿಪ್ಟ್, ಅ. 07: ಕೇವಲ 12 ವರ್ಷದ ಹುಡುಗನಿಗೆ ಮೊಬೈಲ್‌ ಅಂದ್ರೆ ಪಂಚಪ್ರಾಣವಾಗಿತ್ತು.‌ ಪಬ್‌ಜಿ ಗೇಮ್‌ ನಲ್ಲಿ ಸದಾ ಸಮಯ ಕಳೆಯುತ್ತಿದ್ದ. ಆದ್ರೀಗ ಇದೇ ಹುಚ್ಚು ಆತನ ಪ್ರಾಣ ತೆಗೆದಿದೆ. ಈಜಿಪ್ಟ್‌ನಲ್ಲಿ ಮೊಬೈಲ್ ಆಟ ಬಾಲಕನ ಪ್ರಾಣ ತೆಗೆದಿದೆ. ಬ್ರೇಕ್ ಇಲ್ಲದೆ ಒಂದೇ ಸಮನೆ ಮೊಬೈಲ್ ಗೇಮ್ ಆಡ್ತಿದ್ದನಂತೆ ಬಾಲಕ. ಪರಿಣಾಮ ಆತನಿಗೆ ಹಾರ್ಟ್‌ ಅಟ್ಯಾಕ್ ಆಗಿದೆ ಎಂದು ಮೂಲಗಳು ಹೇಳಿವೆ. ಆಟ ಆಡ್ತಾ ಆಡ್ತಾ ಅಲ್ಲೇ ಬಾಲಕ ಕುಸಿದು ಬಿದ್ದಿದ್ದಾನೆ. ತಕ್ಷಣ

ಪಬ್ಜಿಯಿಂದ ಪ್ರಾಣಹೋಯ್ತು ➤ 12 ವರ್ಷದ ಬಾಲಕನಿಗೆ ಹಾರ್ಟ್ ಅಟ್ಯಾಕ್… ! Read More »

ರಾಷ್ಟ್ರೀಯ ನ್ಯೂಸ್

ಅಕ್ರಮ ಗೋ ಸಾಗಾಟ ಮತ್ತು ಅಕ್ರಮ ಕಸಾಯಿ ಖಾನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ➤ ಡಾ.ಭರತ್ ಶೆಟ್ಟಿ.ವೈ

(ನ್ಯೂಸ್ ಕಡಬ) newskadaba.com ಸುರತ್ಕಲ್, ಅ.07: ಕರಾವಳಿ ಜಿಲ್ಲೆಯಲ್ಲಿ ಹಾಗೂ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟ ಹಾಗೂ ಅಕ್ರಮ ಕಸಾಯಿ ಖಾನೆ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಾ.ಭರತ್ ಶೆಟ್ಟಿ.ವೈ ರವರು ತಿಳಿಸಿದ್ದಾರೆ.     ರಸ್ತೆಬದಿಯಲ್ಲಿ ಮೇಯಲು ಬಿಟ್ಟ ದನಗಳನ್ನು ವಾಹನಗಳಲ್ಲಿ ತುಂಬಿಸಿ ಅಕ್ರಮ ಕಸಾಯಿ ಖಾನೆಗಳಿಗೆ ಮಾರುವುದು, ಬೀಡಾಡಿ ದನಗಳನ್ನು ಹಿಂಸಿಸಿ ಕೊಂಡೊಯ್ಯುವುದು, ಮಾರಾಕಾಯುಧಗಳನ್ನು ತೋರಿಸಿ ಹಟ್ಟಿಯಿಂದ ದನ ಕಳವು ಮಾಡುವುದು, ಮತ್ತಿತರ

ಅಕ್ರಮ ಗೋ ಸಾಗಾಟ ಮತ್ತು ಅಕ್ರಮ ಕಸಾಯಿ ಖಾನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ➤ ಡಾ.ಭರತ್ ಶೆಟ್ಟಿ.ವೈ Read More »

ಕರಾವಳಿ

ಉಪ್ಪಿನಂಗಡಿ: ಬಸ್‌ ಟಿಕೇಟ್‌ ಕಾಣದಾಗಿ ಶುಲ್ಕ ಪಾವತಿಸಿದ ವೃದ್ಧ ದಂಪತಿಗಳು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಅ.07: ಕಂಡೆಕ್ಟರ್‌ ಕೈಯಿಂದ ಟಿಕೇಟ್‌ ಖರೀದಿಸಿದ್ದರೂ ಟಿಕೇಟ್‌ ಪರೀಕ್ಷಿಕರು ಆಗಮಿಸಿದ ವೇಳೆ ಟಿಕೇಟ್‌ ಕಾಣದಾಗಿ ವೃದ್ಧ ದಂಪತಿಗಳು ದಂಡಪಾವತಿಸಬೇಕಾಗಿ ಬಂದ ಘಟನೆ ಕಳೆದ ದಿನ ಉಪ್ಪಿನಂಗಡಿಯಲ್ಲಿ ನಡೆದಿದೆ.   ಪರೀಕ್ಷಿಕರು ಎಲ್ಲಾ ಪ್ರಯಾಣಿಕರಿಂದ ಟಿಕೇಟ್‌ ಪರಿಶೀಲನೆಗಾಗಿ ಟಿಕೇಟ್‌ ಕೇಳಿದಾಗ ಕೋಡಿಂಬಾಳ ನಿವಾಸಿಯ ದಂಪತಿಯ ಕೈಯಲ್ಲಿ ಟಿಕೇಟ್‌ ಕಳೆದುಹೋಗಿತ್ತು. ಟಿಕೇಟ್‌ ಖರೀದಿಸಿದ್ದೇವೆ ಎಂದು ದಂಪತಿಗಳು ಹೇಳಿದರೂ, ಟಿಕೇಟ್‌ ನೀಡಿದ್ದೇನೆಂದೂ ಕಂಡಕ್ಟರ್ ತಿಳಿಸಿದರೂ ಪರೀಕ್ಷಿಕರಿಗೆ ಟಿಕೇಟ್‌ ಲಭಿಸದ ಕಾರಣ ದಂಡ ಶುಲ್ಕ ಪಾವತಿಸಬೇಕೆಂದು ಅವರಿಗೆ

ಉಪ್ಪಿನಂಗಡಿ: ಬಸ್‌ ಟಿಕೇಟ್‌ ಕಾಣದಾಗಿ ಶುಲ್ಕ ಪಾವತಿಸಿದ ವೃದ್ಧ ದಂಪತಿಗಳು Read More »

ಕರಾವಳಿ

ವಿದೇಶದಲ್ಲಿ ಸಲಿಂಗ ಮದುವೆಯಾದ ಕನ್ನಡಿಗ..!

(ನ್ಯೂಸ್ ಕಡಬ) newskadaba.com ಕೊಡಗು, ಅ.07:  ವಿದೇಶದಲ್ಲಿ, ಕೊಡಗಿನ ಶರತ್ ಪೊನ್ನಪ್ಪ ಮತ್ತು ಉತ್ತರ ಭಾರತ ಮೂಲದ ಸಂದೀಪ್ ದೋಸಾಂಜ್​ ಎಂಬುವವರು ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಸೆ.26ರಂದು ಸಲಿಂಗ ಮದುವೆಯಾಗಿದ್ದಾರೆ. ಈ ಪೈಕಿ ಓರ್ವ ಕನ್ನಡಿಗ!.     ಕಳೆದ ಹತ್ತು ವರ್ಷದಿಂದ ವಿದೇಶದಲ್ಲೇ ನೆಲೆಸಿರುವ ಶರತ್ ಪೊನ್ನಪ್ಪ, ಗೆಳೆಯನನ್ನೇ ವರಿಸಿದ್ದಾನೆ. ಈತನ ವಿವಾಹ ಸಮಾರಂಭದಲ್ಲಿ ಹಲವರು ಭಾಗಿಯಾಗಿ ಶುಭ ಕೋರಿದ್ದಾರೆ. ಆದರೆ, ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ಮದುವೆ ಫೋಟೋ ಕಂಡ ಬಹುತೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಲಿಂಗ

ವಿದೇಶದಲ್ಲಿ ಸಲಿಂಗ ಮದುವೆಯಾದ ಕನ್ನಡಿಗ..! Read More »

ಕರ್ನಾಟಕ

ಎಡನೀರು ಮಠಕ್ಕೆ ಭೇಟಿ ನೀಡಿದ ಪುತ್ತೂರು ತಾ. ಹಿಂಜಾವೇ ಪ್ರಮುಖರು

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 07: ಎಡನೀರು ಶಂಕರಚಾರ್ಯ ತೋಟಕಾಚಾರ್ಯ ಮಹಸಂಸ್ಥಾನಂ ಎಡನೀರು ಮಠದ ಮುಂದಿನ ಪೀಠಧಿಪತಿಗಳಾದ ಶ್ರೀ ಜಯರಾಮ ಮಂಜತ್ತಾಯರವರನ್ನು ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕಿನ ಪ್ರಮುಖರು ಆ.7 ರಂದು ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆದರು. ಇನ್ನು ಈ ಸಂದರ್ಭದಲ್ಲಿ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಅಜಿತ್ ಹೊಸಮನೆ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚಿನ್ಮಯ್ ಈಶ್ವರಮಂಗಳ, ಜಿಲ್ಲಾ ಮತೃ ಸುರಕ್ಷಾ ಪ್ರಮುಖ ರಾಜೇಶ್ ಪಂಜೋಡಿ, ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಸಿ

ಎಡನೀರು ಮಠಕ್ಕೆ ಭೇಟಿ ನೀಡಿದ ಪುತ್ತೂರು ತಾ. ಹಿಂಜಾವೇ ಪ್ರಮುಖರು Read More »

ಕರಾವಳಿ, ಕರ್ನಾಟಕ
Scroll to Top