ಕಡಬ ನ್ಯೂಸ್

ಕಡಬ ತಾಲೂಕಿನಲ್ಲಿ ಇಂದು 5 ಮಂದಿಯಲ್ಲಿ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com ಕಡಬ ನ. 20: ಕಡಬ ತಾಲೂಕಿನಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 5 ಮಂದಿಯಲ್ಲಿ ಕೋವಿಡ್ 19 ದೃಢಪಟ್ಟಿದೆ.     ಕಡಬ ತಾಲೂಕಿನ ಶಿರಾಡಿ ನಿವಾಸಿ 18 ವರ್ಷದ ಯುವಕ, 37 ವರ್ಷದ ಮಹಿಳೆ, ರಾಮಕುಂಜದ 26 ವರ್ಷದ ಯುವಕ, 21 ವರ್ಷದ ಯುವಕ, ಸಿರಿಬಾಗಿಲು ನಿವಾಸಿ 20 ವರ್ಷದ ಯುವತಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.  

ಕಡಬ ತಾಲೂಕಿನಲ್ಲಿ ಇಂದು 5 ಮಂದಿಯಲ್ಲಿ ಕೋವಿಡ್ ದೃಢ Read More »

ಕರಾವಳಿ

ಉಡುಪಿ : ಮಾನಸಿಕ ಅಸ್ವಸ್ಥನಿಗೆ ಆಶ್ರಯ ನೀಡಿದ ಹೊಸಬೆಳಕು ಆಶ್ರಮ

(ನ್ಯೂಸ್ ಕಡಬ) newskadaba.com ಉಡುಪಿ ನ. 20: ಹಲವು ತಿಂಗಳುಗಳಿಂದ ಮಣಿಪಾಲದಲ್ಲಿ ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ, ಅಪರಿಚಿತ ಮಾನಸಿಕ ಅಸ್ವಸ್ಥನನ್ನು ಅಂಗವಿಕಲರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಹಕಾರದಿಂದ ರಕ್ಷಿಸಿ, ದೊಡ್ಡಣಗುಡ್ಠೆ ಡಾ.ಎ.ವಿ ಬಾಳಿಗ ಆಸ್ಪತ್ರೆಗೆ ದಾಖಲುಪಡಿಸಿ ಮಾನವಿಯತೆ ಮೆರೆದಿದ್ದರು ಇದೀಗ ಚಿಕಿತ್ಸೆಯಿಂದ ಚೇತರಿಸಿಕೊಂಡಿರುವ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮಣಿಪಾಲ ಹೊಸಬೆಳಕು ಆಶ್ರಮದಲ್ಲಿ ನೆಲೆ ಕಲ್ಪಿಸಲಾಗಿದೆ. ಈ ಕಾರ್ಯದಲ್ಲಿ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಶ್ರೀಮತಿ

ಉಡುಪಿ : ಮಾನಸಿಕ ಅಸ್ವಸ್ಥನಿಗೆ ಆಶ್ರಯ ನೀಡಿದ ಹೊಸಬೆಳಕು ಆಶ್ರಮ Read More »

ಕರಾವಳಿ

ಉಪ್ಪಿನಂಗಡಿ: ಸಾವಿರಾರು ರೂಪಾಯಿ ಪಡೆದು ವಂಚಿಸಿದ ನಕಲಿ ಜ್ಯೋತಿಷಿ..!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ ನ. 20: ಮಂಡ್ಯದ ವ್ಯಕ್ತಿಯೋರ್ವ ಜ್ಯೋತಿಷಿಯಂತೆ ನಟಿಸಿ ಹಲವಾರು ಮಂದಿಯಿಂದ ಸಾವಿರಾರು ರೂಪಾಯಿ ಪಡೆದು ವಂಚಿಸಿದ್ದಾನೆ ಎಂದು ಹೇಳಲಾಗುತ್ತಿದ್ದು, ಈ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.     ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋವೊಂದು ವೈರಲ್ ಆಗಿದೆ. ವಂಚನೆ ಮಾಡಿರುವ ಬಗ್ಗೆ ಜನರಿಗೆ ತಿಳಿದ ಬಳಿಕ ಜ್ಯೋತಿಷಿಯ ಕಚೇರಿಗೆ ಧಾವಿಸಿ ತಮ್ಮ ಹಣವನ್ನು ಮರುಪಾವತಿಸುವಂತೆ ಒತ್ತಾಯಿಸಿದ್ದಾರೆ. ಹಣ ಮರುಪಾವತಿಯನ್ನು ಜ್ಯೋತಿಷಿ ಗೂಗಲ್ ಪೇ ಮೂಲಕ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ಮಹಿಳೆಯೋರ್ವರು ಮನೆಯಿಂದ ಚಿನ್ನಾಭರಣ

ಉಪ್ಪಿನಂಗಡಿ: ಸಾವಿರಾರು ರೂಪಾಯಿ ಪಡೆದು ವಂಚಿಸಿದ ನಕಲಿ ಜ್ಯೋತಿಷಿ..! Read More »

ಕರಾವಳಿ

ಕೌಕ್ರಡಿಯ ಪೆರಿಯಶಾಂತಿ ಬಳಿ ಮೃತ ದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕೌಕ್ರಡಿ ನ. 20: ಕೌಕ್ರಡಿಯ ಪೆರಿಯಶಾಂತಿ ಎಂಬಲ್ಲಿ ಇಂದು ಅಪರಿಚಿತ ಯುವಕನ ಶವವೊಂದು ಪತ್ತೆಯಾಗಿದೆ.   ರಸ್ತೆ ಬದಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದ್ದು. ವ್ಯಕ್ತಿಯ ಮುಖ ಸುಟ್ಟ ರೀತಿಯಲ್ಲಿದ್ದು, ತನಿಖೆಯ ಬಳಿಕವಷ್ಟೇ ಮೃತ ದೇಹದ ಮಾಹಿತಿ ತಿಳಿದು ಬರಬೇಕಾಗಿದೆ. ಮೃತದೇಹವನ್ನು ಸದ್ಯ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ .ಮೃತ ದೇಹ ಪತ್ತೆಯಾದ ಸ್ಥಳಕ್ಕೆ ನೆಲ್ಯಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ಕೌಕ್ರಡಿಯ ಪೆರಿಯಶಾಂತಿ ಬಳಿ ಮೃತ ದೇಹ ಪತ್ತೆ Read More »

ಕರಾವಳಿ

ಧರ್ಮಸ್ಥಳ: ಶ್ರೀ ಗುರುದೇವಮಠ ದೇವರಗುಡ್ಡೆ ಅಭಿವೃದ್ಧಿ ಕಾರ್ಯಕ್ಕಾಗಿ ಸರಕಾರದಿಂದ ರೂ. 1 ಕೋಟಿ ಅನುದಾನ

(ನ್ಯೂಸ್ ಕಡಬ) newskadaba.com ಧರ್ಮಸ್ಥಳ ನ. 20: ಶ್ರೀರಾಮಕ್ಷೇತ್ರ ಮಹಾಸಂಸ್ಥಾನಂ ಮತ್ತು ಶ್ರೀ ಗುರುದೇವಮಠ ದೇವರಗುಡ್ಡೆ ಇದರ ವಿವಿಧ ಅಭಿವೃದ್ಧಿ ಕಾರ್ಯಕ್ಕಾಗಿ ಸರಕಾರದಿಂದ ರೂ. 1 ಕೋಟಿ ಅನುದಾನವನ್ನು ಕರ್ನಾಟಕ ರಾಜ್ಯ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬಿಡುಗಡೆಗೊಳಿಸಿದ್ದಾರೆ.     ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದ ಪೀಠಾಧೀಶರಾದ ಸದ್ಗುರು ಶ್ರೀ ಬ್ರಹ್ಮನಂದ ಸರಸ್ವತಿ ಸ್ವಾಮೀಜಿಯವರ ನೇತೃತ್ವದ ಶ್ರೀರಾಮಕ್ಷೇತ್ರ ಮತ್ತು ಶ್ರೀ ಗುರುದೇವಮಠ ದೇವರಗುಡ್ಡೆ ಇದರ ವಿವಿಧ ಅಭಿವೃದ್ಧಿ ಕಾರ್ಯಕ್ಕಾಗಿ ದ.ಕ ಜಿಲ್ಲಾ ಉಸ್ತುವಾರಿ ಹಾಗೂ ಮುಜುರಾಯಿ ಮತ್ತು

ಧರ್ಮಸ್ಥಳ: ಶ್ರೀ ಗುರುದೇವಮಠ ದೇವರಗುಡ್ಡೆ ಅಭಿವೃದ್ಧಿ ಕಾರ್ಯಕ್ಕಾಗಿ ಸರಕಾರದಿಂದ ರೂ. 1 ಕೋಟಿ ಅನುದಾನ Read More »

ಕರಾವಳಿ

ಸುಳ್ಯ: ಅಪರಿಚತ ವಾಹನವೊಂದು ದನಕ್ಕೆ ಢಿಕ್ಕಿ ➤ ಬಜರಂಗದಳ ಕಾರ್ಯಕರ್ತರಿಂದ ದಫನ ಕಾರ್ಯ

(ನ್ಯೂಸ್ ಕಡಬ) newskadaba.com ಸುಳ್ಯ ನ. 20: ಕೆಲವು ದಿನಗಳ ಹಿಂದೆ ಅಪರಿಚಿತ ವಾಹನವೊಂದು ದನವೊದಕ್ಕೆ ಢಿಕ್ಕಿ ಹೊಡೆದ ಪರಿಣಾಮ ದನ ಗಂಭೀರ ಗಾಯಗೊಂಡು ಸುಳ್ಯದ ಗಾಂಧಿನಗರದ ಸಮೀಪ ಬಿದ್ದಿತ್ತು.     ಅಪಘಾತಕ್ಕೊಳಗಾದ ದನವನ್ನು ಚಿಕಿತ್ಸೆಗೆ ಒಳಪಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಕಳೆದ ದಿನ ಮೃತಪಟ್ಟಿದೆ. ಮೃತಪಟ್ಟ ದನವನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳದ ಕಾರ್ಯಕರ್ತರು ಪಿಕ್ ಅಪ್ ನಲ್ಲಿ ಸಾಗಿಸಿ ದನದ ಮೇಲೆ ಬಿಳಿ ಬಟ್ಟೆ ಹೊದಿಸಿ ಹೂ ಮಾಲೆ ಹಾಕಿ ಅಂತಿಮ ವಿಧಿ ವಿಧಾಗಳನ್ನು ನೆರವೇರಿಸಿದರು.

ಸುಳ್ಯ: ಅಪರಿಚತ ವಾಹನವೊಂದು ದನಕ್ಕೆ ಢಿಕ್ಕಿ ➤ ಬಜರಂಗದಳ ಕಾರ್ಯಕರ್ತರಿಂದ ದಫನ ಕಾರ್ಯ Read More »

ಕರಾವಳಿ

ಮಂಗಳೂರು ಏರ್ ಪೋರ್ಟ್ : ಮಿಥುನ್ ರೈ ಘರ್ಜನೆಗೆ ಬೆದರಿದ ಅದಾನಿ ಗ್ರೂಪ್ ➤ ಪಿಲಿನಲಿಕೆ ಆಕೃತಿ 24 ಗಂಟೆಯೊಳಗಡೆ ಮತ್ತೆ ಮೂಲ ಸ್ಥಾನಕ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 20: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅದಾನಿ ಕಂಪೆನಿಯ ಆನೆಯ ಚಿಹ್ನೆ ತೆರವು ಮಾಡಿ ಹಿಂದೆ ಇದ್ದ  ಪಿಲಿನಲಿಕೆ (ಹುಲಿ ಕುಣಿತದ) ಚಿಹ್ನೆ ಯನ್ನು ತಕ್ಷಣ ಅಳವಡಿಸಬೇಕು ಎಂದು ಮಿಥುನ್ ರೈ ಆಗ್ರಹಿಸಿದ್ದರು.  ತೆರವು ಗೊಳಿಸದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದ್ದರು.   ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರರಾದ ಕೋಟಿ -ಚೆನ್ನಯರ ಹೆಸರು ನಾಮಕರಣ ಮಾಡಬೇಕು. ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರು ನಾಮಕರಣ ಮಾಡಿರುವುದನ್ನು ಕೂಡಲೇ ಹಿಂಪಡೆಯಬೇಕು ಎಂದು

ಮಂಗಳೂರು ಏರ್ ಪೋರ್ಟ್ : ಮಿಥುನ್ ರೈ ಘರ್ಜನೆಗೆ ಬೆದರಿದ ಅದಾನಿ ಗ್ರೂಪ್ ➤ ಪಿಲಿನಲಿಕೆ ಆಕೃತಿ 24 ಗಂಟೆಯೊಳಗಡೆ ಮತ್ತೆ ಮೂಲ ಸ್ಥಾನಕ್ಕೆ Read More »

ಕರಾವಳಿ

ಉಡುಪಿ: ಮೃತಪಟ್ಟ 7 ಮೀನುಗಾರರ ಕುಟುಂಬಕ್ಕೆ 10 ಲಕ್ಷ ಹೆಚ್ಚುವರಿ ಪರಿಹಾರ

(ನ್ಯೂಸ್ ಕಡಬ) newskadaba.com ಉಡುಪಿ ನ. 20: ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಮುಳುಗಡೆಯಾಗಿ ಕಣ್ಮರೆಯಾದ 7 ಮೀನುಗಾರರ ಕುಟುಂಬಗಳಿಗೆ ವಿಶೇಷ ಪ್ರಕರಣ ದಡಿಯಲ್ಲಿ ಹೆಚ್ಚುವರಿ ಪರಿಹಾರವಾಗಿ ತಲಾ 10 ಲಕ್ಷ ರೂಪಾಯಿಗಳನ್ನು ಕರ್ನಾಟಕ ಸರ್ಕಾರ ಮಂಜೂರು ಮಾಡಿದೆ.   ಈ ನಿರ್ಧಾರವನ್ನು ದ.ಕ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ ಪಾಲ್ ಸುವರ್ಣ ರವರು ಸ್ವಾಗತಿಸಿದ್ದಾರೆ. ಮನವಿಗೆ ಸ್ಪಂದಿಸಿ, ಮೀನುಗಾರರ ಬಗ್ಗೆ ತಮ್ಮ ಕಾಳಜಿಯನ್ನು ಪ್ರದರ್ಶಿಸಿದ

ಉಡುಪಿ: ಮೃತಪಟ್ಟ 7 ಮೀನುಗಾರರ ಕುಟುಂಬಕ್ಕೆ 10 ಲಕ್ಷ ಹೆಚ್ಚುವರಿ ಪರಿಹಾರ Read More »

ಕರಾವಳಿ

ದುಗ್ಗಲಡ್ಕ: ರಿಕ್ಷಾದಿಂದ ಬಿದ್ದ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ದುಗ್ಗಲಡ್ಕ ನ. 20: ದುಗ್ಗಲಡ್ಕ ನೀರಬಿದಿರೆ(ಕೊಯಿಕುಳಿ ಶಾಲಾ ಬಳಿ) ರಿಕ್ಷಾದಿಂದ ಬಿದ್ದು ಗಂಭೀರ ಗಾಯಗೊಂಡ ಮಹಿಳೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕಳೆದ ದಿನ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಲಲಿತ(40) ಎಂದು ಗುರುತಿಲಾಗಿದೆ.     ಸಂಬಂಧಿಕರಾದ ನಾಗೇಶ್ ಎಂಬವರ ರಿಕ್ಷಾದಲ್ಲಿ ಸುಳ್ಯಕ್ಕೆ ಬರುತ್ತಿದ್ದಾಗ ಆರ್ತಾಜೆ ಸಮೀಪ ರಿಕ್ಷಾದಿಂದ ರಸ್ತೆಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕಳೆದ ದಿನ ಮೃತಪಟ್ಟಿದ್ದಾರೆ.    

ದುಗ್ಗಲಡ್ಕ: ರಿಕ್ಷಾದಿಂದ ಬಿದ್ದ ಮಹಿಳೆ ಮೃತ್ಯು Read More »

ಕರಾವಳಿ

ಮಂಗಳೂರು: ಉಪ ಆಯುಕ್ತರ ಹೆಸರಲ್ಲಿ ನಕಲಿ ಅಕೌಂಟ್ ➤ ಹಣಕ್ಕೆ ಬೇಡಿಕೆ ಇರಿಸಿ ವಂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 20: ಮಹಾನಗರ ಪಾಲಿಕೆಯ ಉಪ ಆಯುಕ್ತ ಡಾ.ಸಂತೋಷ್ ಕುಮಾರ್ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ ಸೃಷ್ಟಿಸಿ, ಹಣಕ್ಕೆ ಬೇಡಿಕೆ ಇರಿಸಿ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿ ಸೈಬರ್ ಕ್ರೈಮ್​ನಲ್ಲಿ ಪ್ರಕರಣ ದಾಖಲಾಗಿದೆ. ಸಂತೋಷ್ ಕುಮಾರ್ ತಮ್ಮ ಕುಟುಂಬದೊಂದಿಗೆ ಇರುವ ಅವರ ಫೋಟ ಬಳಸಿ ನಕಲಿ‌ ಫೇಸ್​ಬುಕ್ ಖಾತೆ ಸೃಷ್ಟಿಸಿ ಅವರ ಆಪ್ತರ ವಲಯದಲ್ಲಿ ಹಣದ ಬೇಡಿಕೆ ಇರಿಸಿ ಹಣ ಲಪಟಾಯಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದುಷ್ಕರ್ಮಿಗಳು ತಮ್ಮ ಹೆಸರು, ಫೋಟೊ, ಹುದ್ದೆಯನ್ನು ಬಳಸಿ

ಮಂಗಳೂರು: ಉಪ ಆಯುಕ್ತರ ಹೆಸರಲ್ಲಿ ನಕಲಿ ಅಕೌಂಟ್ ➤ ಹಣಕ್ಕೆ ಬೇಡಿಕೆ ಇರಿಸಿ ವಂಚನೆ Read More »

ಕರಾವಳಿ
Scroll to Top