ಕಡಬ ನ್ಯೂಸ್

ಉಡುಪಿ : ಕೃಷ್ಣಾ ಮಠದ ಪೂರ್ವಭಾವಿ ಬಾಳೆ ಮುಹೂರ್ತ ಸಂಭ್ರಮ

(ನ್ಯೂಸ್ ಕಡಬ) newskadaba.com ಉಡುಪಿ ನ. 30: ಉಡುಪಿಯ‌ ಅಷ್ಟಮಠಗಳಲ್ಲೊಂದಾದ ಕೃಷ್ಣಾಪುರ ಮಠದ‌ ಶ್ರೀವಿದ್ಯಾಸಾಗರತೀರ್ಥ‌‌ ಶ್ರೀಪಾದರು 2022, ಜ.18ರಂದು ನಾಲ್ಕನೇ ಬಾರಿ ಪರ್ಯಾಯ ಪೀಠಾರೋಹಣ ಮಾಡಲಿದ್ದಾರೆ. ಇದರ ಪೂರ್ವಭಾವಿಯಾಗಿ ನಾಲ್ಕರಲ್ಲಿ ಮೊದಲ‌ ಮುಹೂರ್ತವಾಗಿ ಬಾಳೆ ಮುಹೂರ್ತವು ಸೋಮವಾರ ಬೆಳಗ್ಗೆ ನೆರವೇರಿದ್ದು, ಈ ಕಾರ್ಯಕ್ರಮದಲ್ಲಿ ಕೃಷ್ಣಾಪುರ ಮಠದ ಶ್ರೀ‌ವಿದ್ಯಾಸಾಗರತೀರ್ಥ ಶ್ರೀಪಾದರು, ಸಂಸದೆ ಶೋಭಾ ಕರಂದ್ಲಾಜೆ, ಉಡುಪಿ ಶಾಸಕ ಕೆ.ರಘುಪತಿ ಭಟ್ ಮತ್ತಿತರರ ಉಪಸ್ಥಿತಿಯಲ್ಲಿ ನಡೆಯಿತು.

ಉಡುಪಿ : ಕೃಷ್ಣಾ ಮಠದ ಪೂರ್ವಭಾವಿ ಬಾಳೆ ಮುಹೂರ್ತ ಸಂಭ್ರಮ Read More »

ಕರಾವಳಿ

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಭಜನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಬಂಟ್ವಾಳ ನ. 30: ಬಂಟ್ವಾಳ ತಾಲೂಕಿನ ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಅಪ್ಪದ ಸೇವೆ ಹಾಗೂ ಭಜನಾ ಕಾರ್ಯಕ್ರಮ ಇಂದು ನಡೆಯಿತು.     ಈ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಆಗಮಿಸಿ ದೇವರ ಪ್ರಸಾದ ಸ್ವೀಕರಿಸಿದರು. ಅವರೊಂದಿಗೆ ತಾ.ಪಂ ಮಾಜಿ ಸದಸ್ಯ ವೆಂಕಟೇಶ ನಾವಡ ಮತ್ತಿತರರು ಉಪಸ್ಥಿತರಿದ್ದರು.  

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಭಜನಾ ಕಾರ್ಯಕ್ರಮ Read More »

ಕರಾವಳಿ

ಮಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ‘ಸ್ಕಾಲರ್ ಶಿಪ್ ಕೊಡಿ’ ಆಂದೋಲನ

(ನ್ಯೂಸ್ ಕಡಬ) newskadaba.com ಮಂಗಳೂರು ನ. 30: ಸರಕಾರದ ಸ್ಕಾಲರ್ ಶಿಪ್ ವಿಳಂಬ ನೀತಿಗೆ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಫೆಲೋಶಿಪ್ ಕಡಿತ ವಿಚಾರ ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ನಗರದ ಪಾಂಡೇಶ್ವರ ಬಳಿ ಇರುವ ಅಲ್ಪಸಂಖ್ಯಾತರ ಭವನ‌ ಮುಂಭಾಗ ಧರಣಿ ನಡೆಸಿದರು. ನಗರದ ಸ್ಟೇಟ್ ಬ್ಯಾಂಕ್ ನಿಂದ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು ಅಲ್ಪಸಂಖ್ಯಾತರ ಭವನ ಮುಂಭಾಗ ‘ಸ್ಕಾಲರ್ ಶಿಪ್ ಕೊಡಿ’ ಹೆಸರಿನಡಿ ಧರಣಿ ನಡೆಸಿದರು. ನೂರಾರು ಸಂಖ್ಯೆಯಲ್ಲಿದ್ದ ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆ ಕೂಗಿ

ಮಂಗಳೂರು: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದಿಂದ ‘ಸ್ಕಾಲರ್ ಶಿಪ್ ಕೊಡಿ’ ಆಂದೋಲನ Read More »

ಕರಾವಳಿ

ಮಂಗಳೂರು: “ಅನ್ವೇಷಣಾ” ರಿಸರ್ಚ್ ಫೋರಂ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 30: ಆಳ್ವಾಸ್ ಪದವಿ ಕಾಲೇಜಿನ ಬಿ.ಎಸ್.ಡಬ್ಲೂ ಹಾಗೂ ಫುಡ್ ಆಯಂಡ್ ನ್ಯೂಟ್ರೀಷನ್ ವಿಭಾಗದ ವತಿಯಿಂದ ”ಅನ್ವೇಷಣಾ” ರಿಸರ್ಚ ಫೋರಂ ಉದ್ಘಾಟನಾ ಕಾರ್ಯಕ್ರಮವು ಸುಂದರಿ ಆನಂದ ಆಳ್ವ ಕ್ಯಾಂಪಸ್‍ನಲ್ಲಿ ಜರುಗಿತು.     ಆಳ್ವಾಸ್ ಕಾಲೇಜಿನ ಸಂಶೋಧನಾ ವಿಭಾಗದ ಸಂಯೋಜಕ ಡಾ. ಸುಕೇಶ್, ಸಂಶೋಧನೆಯ ಹಲವು ಆಯಾಮಗಳ ಬಗ್ಗೆ ಮಾಹಿತಿ ನೀಡಿದರು. ಸಂಶೋಧನೆಯ ಕೌಶಲ್ಯ ತರಗತಿಯಲ್ಲಿ ಪಾಠ ಕೇಳುವುದರಿಂದ ಬರುವುದಲ್ಲ, ಪರಸ್ಪರ ಚರ್ಚಿಸಿ ಪ್ರಶ್ನೆಗಳು ಹುಟ್ಟಿಕೊಂಡಾಗ, ಉತ್ತರವನ್ನು ಸಂಶೋಧನೆಯ ಮೂಲಕ ಕಂಡುಕೊಳ್ಳಲು ವಿದ್ಯಾರ್ಥಿಗಳು

ಮಂಗಳೂರು: “ಅನ್ವೇಷಣಾ” ರಿಸರ್ಚ್ ಫೋರಂ ಉದ್ಘಾಟನೆ Read More »

ಕರಾವಳಿ

ಮಂಗಳೂರು: ತಮ್ಮದೇ ಮೀನಿನ ಬಲೆಯಲ್ಲಿ ಸಿಲುಕಿ ಮೀನುಗಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು ನ. 30: ಕಳೆದ ದಿನ ಬೈಕಂಪಾಡಿ ಬಳಿ ಸಮುದ್ರದಲ್ಲಿ ಮೀನುಗಾರನು ಮೀನು ಹಿಡಿಯಲು ಹರಡುತ್ತಿದ್ದ ಬಲೆಗೆ ಸಿಕ್ಕಿಹಾಕಿಕೊಂಡ ದುರಂತ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಬೈಕಂಪಾಡಿಯ ಹೊಸಹಿತ್ಲು ನಿವಾಸಿ ನವೀನ್ ಕರ್ಕೇರ(32) ಎಂದು ಗುರುತಿಸಲಾಗಿದೆ.     ಮೀನಿಗೆ ಬಲೆ ಹಾಕುವ ಸಂದರ್ಭದಲ್ಲಿ ಬಲೆಗೆ ಅವರ ಕಾಲು ಬೆರಳು ಸಿಲುಕಿದ್ದು, ಅವರು ನೀರಿಗೆ ಬಿದ್ದು ಮುಳುಗಿದ್ದಾರೆ. ಇವರು ಸಿಕ್ಕಿಹಾಕಿಕೊಂಡಿದ್ದರಿಂದ ನೀರಿನಲ್ಲಿ ಈಜಿ ದಡ ಸೇರಲು ಸಾಧ್ಯವಾಗಲಿಲ್ಲ. ಕೂಡಲೇ ಮತ್ತೊಂದು ದೋಣಿಯಲ್ಲಿದ್ದ ಮೀನುಗಾರರು ಆತನ

ಮಂಗಳೂರು: ತಮ್ಮದೇ ಮೀನಿನ ಬಲೆಯಲ್ಲಿ ಸಿಲುಕಿ ಮೀನುಗಾರ ಮೃತ್ಯು Read More »

ಕರಾವಳಿ

ಉಡುಪಿ: ಅಸ್ವಸ್ಥ ಸ್ಥಿತಿಯಲ್ಲಿದ್ದ ವ್ಯಕ್ತಿಯ ಆರೋಗ್ಯ ಸ್ಥಿತಿ ಗಂಭೀರ ➤ ವಾರೀಸುದಾರರು ಸಂಪರ್ಕಿಸುವಂತೆ ಸಮಾಜಸೇವಕರ ಸೂಚನೆ

(ನ್ಯೂಸ್ ಕಡಬ) newskadaba.com ಉಡುಪಿ ನ. 30: ನಗರದ ಕಿದಿಯೂರು ಹೋಟೆಲ್ ಬಳಿಯ ರಸ್ತೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.   ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೆಸರು ವಿಳಾಸ ತಿಳಿದು ಬಂದಿಲ್ಲ. ವಾರೀಸುದಾರರು ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ನಿತ್ಯಾನಂದ ಒಳಕಾಡು ಮನವಿ ಮಾಡಿದ್ದಾರೆ.ಕಾರ್ಯಾಚರಣೆಗೆ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮಹಿಳಾ ಸೆಕ್ಯೂರಿಟಿ ಗಾರ್ಡ್ ಶ್ರುತಿ ಸಹಕರಿಸಿದರು.  

ಉಡುಪಿ: ಅಸ್ವಸ್ಥ ಸ್ಥಿತಿಯಲ್ಲಿದ್ದ ವ್ಯಕ್ತಿಯ ಆರೋಗ್ಯ ಸ್ಥಿತಿ ಗಂಭೀರ ➤ ವಾರೀಸುದಾರರು ಸಂಪರ್ಕಿಸುವಂತೆ ಸಮಾಜಸೇವಕರ ಸೂಚನೆ Read More »

ಕರಾವಳಿ

ಉಡುಪಿ : ದೊಂದಿ ಬೆಳಕಿನ ತೆಪ್ಪೋತ್ಸವ ಸಂಪನ್ನ

(ನ್ಯೂಸ್ ಕಡಬ) newskadaba.com ಉಡುಪಿ, ನ. 30: ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕೃಷ್ಣಮಠದ ಲಕ್ಷ ದೀಪೋತ್ಸವ ಕೊನೆಯ ದಿನ ದೊಂದಿ ಬೆಳಕಿನ ತೆಪ್ಪೋತ್ಸವ ನಡೆಯುವುದರೊಂದಿಗೆ ಸಂಪನ್ನಗೊಂಡಿತು. ಲಕ್ಷದೀಪೋತ್ಸವ ,ತೆಪ್ಪೋತ್ಸವದೊಂದಿಗೆ ಉತ್ಸವಪ್ರಿಯ ಕೃಷ್ಣನಿಗೆ ನಿತ್ಯ ಉತ್ಸವಗಳು ನಡೆಯುವುದು ಸಂಪ್ರದಾಯ. ಮಳೆಗಾಲದ 4 ತಿಂಗಳು ಕೃಷ್ಣನಿಗೆ ಯಾವುದೇ ಉತ್ಸವಗಳು ನಡೆಯುವುದಿಲ್ಲ. ಇದೇ ಸಂದರ್ಭದಲ್ಲಿ ಶ್ರೀಗಳ ಚಾತುರ್ಮಾಸ್ಯ ವ್ರತವೂ ನಡೆಯುತ್ತದೆ. ಉತ್ಥಾನ ದ್ವಾದಶಿಯ ನಂತರ ದೇವರನ್ನು ಹೊರಗೆ ತಂದು ಮತ್ತೆ ನಿತ್ಯವೂ ಉತ್ಸವಗಳನ್ನು ನಡೆಸಲಾಗುತ್ತದೆ. ರಥಬೀದಿಯಲ್ಲಿ ಲಕ್ಷದೀಪೋತ್ಸವ ಮತ್ತು ಮಧ್ವಸರೋವರದಲ್ಲಿ ದೊಂದಿ

ಉಡುಪಿ : ದೊಂದಿ ಬೆಳಕಿನ ತೆಪ್ಪೋತ್ಸವ ಸಂಪನ್ನ Read More »

ಕರಾವಳಿ, ಕರ್ನಾಟಕ

ಗೋಡೆ ಬರಹದ ಕಿಡಿಗೇಡಿಗಳನ್ನ ಬಂಧಿಸಲು ಯು ಟಿ ಖಾದರ್ ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು ನ. 30: ನಗರದಲ್ಲಿ ಗೋಡೆ ಬರಹ ಬರೆಯುವುದನ್ನ ತೀವ್ರವಾಗಿ ಖಂಡಿಸುತ್ತೇವೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ‌.ಖಾದರ್ ಹೇಳಿದ್ದಾರೆ. ಇದನ್ನ ಯಾರೇ ಆದರೂ ಸಹಿಸಲು ಯಾವುದೇ ಕಾರಣಕ್ಕೂ ಸಾದ್ಯವಿಲ್ಲ. ಇದರ ಪತ್ತೆ ಮಾಡುವದು ಬಿಜೆಪಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಜವಾಬ್ದಾರಿಯಾಗಿದೆ ಎಂದರು. ಆದಷ್ಟು ಬೇಗ ಇವರಿಗೆ ಬೆಂಬಲವಾಗಿರುವರನ್ನ ಪತ್ತೆ ಹಚ್ಚಿ ಷಡ್ಯಂತ್ರ ಬಯಲು ಮಾಡಬೇಕಿದೆ. ಗುಪ್ತಚರ ಇಲಾಖೆ ಏನು ಮಾಡ್ತಿದೆ ಎಂದು ಪ್ರಶ್ನಿಸಿದ ಅವರು ಮತ್ತೆ ಮತ್ತೆ ಹೀಗ್ಯಾಕೆ ಅಗ್ತಿದೆ ಎಂದಿದ್ದಾರೆ.

ಗೋಡೆ ಬರಹದ ಕಿಡಿಗೇಡಿಗಳನ್ನ ಬಂಧಿಸಲು ಯು ಟಿ ಖಾದರ್ ಆಗ್ರಹ Read More »

ಕರಾವಳಿ

ಕಡಬದಲ್ಲಿ ಇಂದು ಶೂನ್ಯ ಕೊರೋನಾ

(ನ್ಯೂಸ್ ಕಡಬ) newskadaba.com ಕಡಬ ನ. 30: ಕಡಬ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯಂತೆ ಇಂದು ಶೂನ್ಯ ಕೊರೋನಾ ಆದರೇ ಪುತ್ತೂರು ತಾಲೂಕಿನಲ್ಲಿ 2 ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.       ಪುತ್ತೂರು ತಾಲೂಕಿನ ಆರ್ಯಾಪು ನಿವಾಸಿ 26 ವರ್ಷದ ಯುವತಿ, ಕೆಯ್ಯೂರು ನಿವಾಸಿ 59 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಪತ್ತೆಯಾಗಿದೆ.  

ಕಡಬದಲ್ಲಿ ಇಂದು ಶೂನ್ಯ ಕೊರೋನಾ Read More »

ಕರಾವಳಿ

ಗ್ರಾಮ ಪಂಚಾಯತ್‌ ಚುನಾವಣೆ ದಿನಾಂಕ ಘೋಷಣೆ ➤ ಡಿ. 22 ಮತ್ತು ಡಿ.27ರಂದು ಚುನಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 30: ಪಂಚಾಯತ್‍ ಚುನಾವಣೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಡಿಸೆಂಬರ್ .22 ಮತ್ತು ಡಿ.27 ರಂದು ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯಲಿದೆ.   ಒಟ್ಟು 5762 ಗ್ರಾಮ ಪಂಚಾಯತ್ಗಳಿಗರ ಚುನಾವಣೆ ನಡೆಯಲಿದೆ. ಇದಕ್ಕೆ ಸಂಬಂಧಪಟ್ಟಂತೆ ಪದಾಧಿಕಾರಿಗಳು ಮಾತು ಕತೆ ನಡೆಸಿದ್ದಾರೆ.  

ಗ್ರಾಮ ಪಂಚಾಯತ್‌ ಚುನಾವಣೆ ದಿನಾಂಕ ಘೋಷಣೆ ➤ ಡಿ. 22 ಮತ್ತು ಡಿ.27ರಂದು ಚುನಾವಣೆ Read More »

ಕರಾವಳಿ, ಕರ್ನಾಟಕ
Scroll to Top