’ಮಹಿಳಾ ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲೆಯಲ್ಲೇ ಮಹಿಳೆಯರಿಗೆ ರಕ್ಷೆ ಇಲ್ಲದಂತಾಗಿದೆ’  ಬಿಜೆಪಿ ಮಹಿಳಾ ಅಧ್ಯಕ್ಷೆ ನೀತಾ ಪ್ರಭು ಆಕ್ರೋಶ

(ನ್ಯೂಸ್ ಕಡಬ) newskadaba.c0m ಉಡುಪಿ, ಆ. 26.  ಕರ್ನಾಟಕದ ಏಕೈಕ ಮಹಿಳಾ ಜಿಲ್ಲಾ ಉಸ್ತುವಾರಿ ಸಚಿವರನ್ನು ಹೊಂದಿರುವ ಉಡುಪಿ ಜಿಲ್ಲೆಯಲ್ಲೇ ಮಹಿಳೆಯರಿಗೆ ರಕ್ಷೆ ಇಲ್ಲದಂತಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವರು ರಾಜ್ಯದ ಮಹಿಳೆಯರಿಗೆ ಕೇವಲ ಭಾಗ್ಯ ಲಕ್ಷ್ಮೀ ಯೋಜನೆ ಮಾತ್ರ ನೀಡಿದರೆ ಸಾಲದು ರಕ್ಷಣೆಯ ಗ್ಯಾರಂಟಿಯನ್ನು ನೀಡಬೇಕು ಎಂದಿದ್ದಾರೆ. ಕಾರ್ಕಳದಲ್ಲಿ ಹಿಂದೂ ಯುವತಿಗೆ ಅಮಲು ಪದಾರ್ಥ […]

’ಮಹಿಳಾ ಜಿಲ್ಲಾ ಉಸ್ತುವಾರಿ ಸಚಿವರ ಜಿಲ್ಲೆಯಲ್ಲೇ ಮಹಿಳೆಯರಿಗೆ ರಕ್ಷೆ ಇಲ್ಲದಂತಾಗಿದೆ’  ಬಿಜೆಪಿ ಮಹಿಳಾ ಅಧ್ಯಕ್ಷೆ ನೀತಾ ಪ್ರಭು ಆಕ್ರೋಶ Read More »

ಕರಾವಳಿ

ಕಾರ್ಕಳ ಅತ್ಯಾಚಾರ ಪ್ರಕರಣ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ – ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಸಂಸದ ಕ್ಯಾ. ಚೌಟ ಒತ್ತಾಯ

(ನ್ಯೂಸ್ ಕಡಬ) newskadaba.com ಉಡುಪಿ, ಆ. 26. ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ಅತ್ಯಂತ ಹೇಯ ಕೃತ್ಯವಾಗಿದ್ದು, ಕರ್ನಾಟಕದ ಕಾನೂನು ಸುವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಕಾರ್ಕಳದಲ್ಲಿ ಹಿಂದೂ ಯುವತಿಯನ್ನು ಅಲ್ತಾಫ್, ಸವೇರಾ ರಿಚರ್ಡ್ ಕಾರ್ಡೋಜಾ ಹಾಗೂ ಅವರ ಸಹಚರ ಆರೋಪಿಗಳು ಅಪಹರಿಸಿ ಮಾದಕ ದ್ರವ್ಯ ನೀಡಿ ಗ್ಯಾಂಗ್ ರೇಪ್ ನಡೆಸಿ ಅಟ್ಟಹಾಸ ಮೆರೆದಿದ್ದು, ಇಂತಹ ವಿಕೃತ ಕೃತ್ಯ

ಕಾರ್ಕಳ ಅತ್ಯಾಚಾರ ಪ್ರಕರಣ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ – ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಸಂಸದ ಕ್ಯಾ. ಚೌಟ ಒತ್ತಾಯ Read More »

ಕರಾವಳಿ, ಕರ್ನಾಟಕ

ಕಾಂಗ್ರೆಸ್ ನ ಹಿರಿಯ ಸಂಸದ ವಸಂತ್​ ರಾವ್ ಚವಾಣ್ ಮೃತ್ಯು

(ನ್ಯೂಸ್ ಕಡಬ) newskadaba.c0m ಆಂಧ್ರಪ್ರದೇಶ, ಆ. 26.  ಹೈದರಾಬಾದ್‌ ನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್ ನ ಹಿರಿಯ ಸಂಸದ ವಸಂತ್​ ರಾವ್ ಚವಾಣ್ ಕೊನೆಯುಸಿರೆಳೆದಿದ್ದಾರೆ. ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ. ಚವಾಣ್, ಆರಂಭದಲ್ಲಿ ಯಕೃತ್ತಿನ ಸೋಂಕಿನಿಂದಾಗಿ ನಾಂದೇಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಉಸಿರಾಟದ ಸಮಸ್ಯೆಯನ್ನೂ ಎದುರಿಸುತ್ತಿದ್ದರು ಮತ್ತು ಲೋ ಬಿಪಿ ಕೂಡ ಇತ್ತು ಎನ್ನಲಾಗಿದೆ.  

ಕಾಂಗ್ರೆಸ್ ನ ಹಿರಿಯ ಸಂಸದ ವಸಂತ್​ ರಾವ್ ಚವಾಣ್ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅರಂತೋಡು: ಸ್ವಚ್ಚತಾ ಅಭಿಯಾನ

(ನ್ಯೂಸ್ ಕಡಬ) newskadaba.com ಅರಂತೋಡು, ಆ. 26. ಅರಂತೋಡು ಗ್ರಾಮ ಪಂಚಾಯತ್ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಅಭಿಯಾನವು ಅರಂತೋಡು ಪೇಟೆಯಲ್ಲಿ ನಡೆಯಿತು.   ಸ್ವಚ್ಛತಾ ಅಭಿಯಾನದಲ್ಲಿ ಆರಂತೋಡು- ತೊಡಿಕಾನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿಯಮಿತ ಆರಂತೋಡು ಇದರ ಆಡಳಿತ ಸಮಿತಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಣಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಅರಂತೋಡು ಪರಿಸರದ ನಾಗರಿಕ ಬಂಧುಗಳು ಹಾಗೂ ಸ್ವಚ್ಛತಾ ಘಟಕದ ಸಿಬ್ಬಂದಿ ವರ್ಗದವರು ಪಾಲ್ಗೊಂಡರು.

ಅರಂತೋಡು: ಸ್ವಚ್ಚತಾ ಅಭಿಯಾನ Read More »

ಕರಾವಳಿ

ಸುಳ್ಯ ತಾಲೂಕು ಆಂಬುಲೆನ್ಸ್ ವಾಹನ ಚಾಲಕ ಮಾಲಕರ ಸಂಘ ಅಸ್ತಿತ್ವಕ್ಕೆ

(ನ್ಯೂಸ್ ಕಡಬ) newskadaba.com ಸುಳ್ಯ,ಆ. 24. ಸುಳ್ಯ ತಾಲೂಕು ಆಂಬುಲೆನ್ಸ್ ವಾಹನ ಚಾಲಕ ಮಾಲಕರ ಸಂಘವು ಸುಳ್ಯ ಉಡುಪಿ ಗಾರ್ಡನ್ ನಲ್ಲಿ ಇಂದು ಶಿವ ಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು. ಶರತ್ ತೊಡಿಕಾನ ಪ್ರಾಸ್ತಾವಿಕ ಮಾತನಾಡಿದರು.‌ಗೌರವಾಧ್ಯಕ್ಷರಾಗಿ ಶಿವಪ್ರಸಾದ್ ಕೆಜಿ, ಅಧ್ಯಕ್ಷರಾಗಿ ಶರತ್ ಎ.ತೊಡಿಕಾನ, ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದೀಕ್ ಗೂನಡ್ಕ, ಕೋಶಾಧಿಕಾರಿ ರಫೀಕ್ ಬಿ.ಎಂ.ಎ ಸುಳ್ಯ, ಉಪಾಧ್ಯಕ್ಷರಾಗಿ ಉನೈಸ್ ಪೆರಾಜೆ, ಜೊತೆ ಕಾರ್ಯದರ್ಶಿಯಾಗಿ ಪ್ರದೀಪ್ ಸುಬ್ರಹ್ಮಣ್ಯ, ಮೀಡಿಯಾ ಕಾರ್ಯದರ್ಶಿ ರಫಿಕ್ ಬಾಳೆಮಕ್ಕಿ, ಸದಸ್ಯರುಗಳಾಗಿ ಕೇಶವ ಬೆಳ್ಳಾರೆ, ಹಮೀದ್

ಸುಳ್ಯ ತಾಲೂಕು ಆಂಬುಲೆನ್ಸ್ ವಾಹನ ಚಾಲಕ ಮಾಲಕರ ಸಂಘ ಅಸ್ತಿತ್ವಕ್ಕೆ Read More »

ಕರಾವಳಿ
Theft, crime, Robbery

ಸರ್ವೆ: ಮನೆಯ ಕಿಟಕಿ ಮುರಿದು ನಗ-ನಗದು ಕಳವು

(ನ್ಯೂಸ್ ಕಡಬ) newskadaba.com ಪುತ್ತೂರು, ಆ. 24. ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿದ ಘಟನೆ ಸರ್ವೆ ಗ್ರಾಮದ ಕಾಡಬಾಗಿಲು ಎಂಬಲ್ಲಿ ನಡೆದಿದೆ. ಕಾಡಬಾಗಿಲು ನಿವಾಸಿ ಸಾರಮ್ಮ ಎಂಬವರು ತನ್ನ ಸೊಸೆ ಜೊತೆ ಮೊಮ್ಮಗನನ್ನು ಔಷಧಿಗೆಂದು ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋದವರು, ತನ್ನ ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿದ್ದರು. ಮರುದಿನ ಮನೆಗೆ ಮರಳಿಬಂದಾಗ ಮನೆಯಲ್ಲಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಬಾಗಿಲನ್ನು ಮುರಿಯಲೆತ್ನಿಸಿದ ಕಳ್ಳರಿಗೆ ಅದು ಅಸಾಧ್ಯವಾದಾಗ ಕಿಟಕಿಯ ಸರಳನ್ನು ಮುರಿದು ಒಳನುಗ್ಗಿದ ಕಳ್ಳರು ಮನೆಯ ಕೋಣೆಯಲ್ಲಿದ್ದ

ಸರ್ವೆ: ಮನೆಯ ಕಿಟಕಿ ಮುರಿದು ನಗ-ನಗದು ಕಳವು Read More »

ಕರಾವಳಿ, ಕ್ರೈಮ್ ನ್ಯೂಸ್

KSRTC ಬಸ್ ಟಿಕೆಟ್ ದರ ಏರಿಕೆ ಸುಳಿವು- ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

(ನ್ಯೂಸ್ ಕಡಬ) newskadaba.c0mಬೆಂಗಳೂರು, ಆ. 24.  ನೀರಿನ ಬಿಲ್ ಏರಿಕೆ ಮಾಡುವುದಾಗಿ ಶಾಕ್ ನೀಡಿದ್ದ ರಾಜ್ಯ ಸರ್ಕಾರ, ಜನತೆ ಸುಧಾರಿಸಿಕೊಳ್ಳುವ ಮೊದಲೇ ಇದೀಗ ಮತ್ತೊಂದು ಶಾಕ್ ನೀಡಿದೆ. ಕೆಎಸ್ಆರ್ ಟಿಸಿ ಬಸ್ ಟಿಕೆಟ್ ದರ ಏರಿಕೆ ಮಾಡುವ ಸುಳಿವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ನೀಡಿದ್ದಾರೆ. ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (KERC) ಮಾದರಿಯಲ್ಲೇ ಸಾರಿಗೆ ನಿಗಮಗಳಲ್ಲಿ ಪ್ರಯಾಣ ದರ ಏರಿಕೆ ನಿರ್ಧಾರಗಳನ್ನು ಕೈಗೊಳ್ಳಲು ಪ್ರತ್ಯೇಕ ನಿಯಂತ್ರಣ ಆಯೋಗ (KTRC) ರಚನೆಗೆ ಸರ್ಕಾರ ಮುಂದಾಗಿದೆ ಎಂಬ ಪತ್ರಿಕೆಯ ವರದಿ

KSRTC ಬಸ್ ಟಿಕೆಟ್ ದರ ಏರಿಕೆ ಸುಳಿವು- ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ Read More »

ಕರ್ನಾಟಕ

ಶ್ರೀಲಂಕಾದಿಂದ 11 ಭಾರತೀಯ ಮೀನುಗಾರರ ಮೇಲೆ ಆರೋಪ ಎಂಕೆ ಸ್ಟಾಲಿನ್ ಪತ್ರ         

(ನ್ಯೂಸ್ ಕಡಬ) newskadaba.c0m ಚೆನೈ, ಆ. 24.  ಶ್ರೀಲಂಕಾ ನೌಕಾಪಡೆಯು ತಮಿಳುನಾಡಿನ 11 ಭಾರತೀಯ ಮೀನುಗಾರರನ್ನು ಕಡಲ ಉಲ್ಲಂಘನೆಯ ಆರೋಪದ ಮೇಲೆ ಬಂಧಿಸಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಪತ್ರಬರೆದಿದ್ದಾರೆ. “ತಮಿಳುನಾಡಿನ ಮೀನುಗಾರರನ್ನು ಬಂಧಿಸಿರುವ ಮತ್ತೊಂದು ಘಟನೆಯ ಬಗ್ಗೆ ನಾನು ನಿಮಗೆ ತೀವ್ರ ಕಳವಳದಿಂದ ಬರೆಯುತ್ತಿದ್ದೇನೆ, ನಾಗಪಟ್ಟಣಂ ಜಿಲ್ಲೆಯ ಕೋಡಿಯಾಕರೈ ಆಗ್ನೇಯಕ್ಕೆ ಮೀನುಗಾರಿಕೆ ನಡೆಸುತ್ತಿದ್ದಾಗ ಮೀನುಗಾರರನ್ನು ಬಂಧಿಸಲಾಗಿದೆ” ಎಂದು ಅವರು ಹೇಳಿದ್ದಾರೆ.    

ಶ್ರೀಲಂಕಾದಿಂದ 11 ಭಾರತೀಯ ಮೀನುಗಾರರ ಮೇಲೆ ಆರೋಪ ಎಂಕೆ ಸ್ಟಾಲಿನ್ ಪತ್ರ          Read More »

ರಾಷ್ಟ್ರೀಯ ನ್ಯೂಸ್

’ಇಡೀ ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಮಹಾತ್ಮ ಗಾಂಧಿಯವರ ಭೂಮಿಯಿಂದ ಬಂದಿದ್ದೇವೆ’  ಪ್ರಧಾನಿ ನರೇಂದ್ರ ಮೋದಿ

(ನ್ಯೂಸ್ ಕಡಬ) newskadaba.c0m ಕೈವ್, ಆ. 24.  ಮೊದಲಿನಿಂದಲೂ ನಾವು ಶಾಂತಿ ಸ್ಥಾಪನೆಗೆ ಕರೆ ನೀಡಿದ್ದೇವೆ, ಭಾರತ ತಟಸ್ಥವಲ್ಲ. ನಾವು ಬುದ್ಧನ ಭೂಮಿಯಿಂದ ಬಂದಿದ್ದೇವೆ. ಅಲ್ಲಿ ಯುದ್ಧಕ್ಕೆ ಸ್ಥಳವಿಲ್ಲ. ಇಡೀ ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಮಹಾತ್ಮ ಗಾಂಧಿಯವರ ಭೂಮಿಯಿಂದ ಬಂದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿದ್ದಾರೆ. ಉಕ್ರೇನ್‌ಗೆ ಮೊದಲ ಬಾರಿಗೆ ಭೇಟಿ ನೀಡಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಜೊತೆಗಿನ ಸಂಭಾಷಣಾ ಸಮಯದಲ್ಲಿ ಈ ಹೇಳಿಕೆ ನೋಡಿದ್ದಾರೆ. ಐರೋಪ್ಯ ದೇಶಕ್ಕೆ ಸ್ವಾತಂತ್ರ್ಯ ದೊರೆತ

’ಇಡೀ ಜಗತ್ತಿಗೆ ಶಾಂತಿಯ ಸಂದೇಶ ನೀಡಿದ ಮಹಾತ್ಮ ಗಾಂಧಿಯವರ ಭೂಮಿಯಿಂದ ಬಂದಿದ್ದೇವೆ’  ಪ್ರಧಾನಿ ನರೇಂದ್ರ ಮೋದಿ Read More »

ಅಂತರ್ರಾಷ್ಟ್ರೀಯ ನ್ಯೂಸ್

ನಿಯಮ ಉಲ್ಲಂಘಿಸುವ ಚಾಲಕರ ಲೈಸೆನ್ಸ್ ಅಮಾನತು..!

(ನ್ಯೂಸ್ ಕಡಬ) newskadaba.com ಬಾಗಲಕೋಟೆ, ಆ. 24. ಪದೇ ಪದೇ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಚಾಲಕರ ಲೈಸನ್ಸ್ ಅಮಾನತ್ತುಗೊಳಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಸದಾಗಿ ಚಾಲನಾ ಪತ್ರ ಪಡೆಯಲು ಬರುವ ಚಾಲಕರಿಗೆ ಒಂದು ಗಂಟೆಗಳ ಕಾಲ ತರಬೇತಿ ನೀಡಲಾಗುತ್ತಿದೆ. ಚಾಲನಾ ಪತ್ರದ ಮಹತ್ವ, ಹೆಲ್ಮೆಟ್ ಧರಿಸಿ ಚಾಲನೆ ಮಾಡುವುದು, ವಾಹನವನ್ನು ವಿಮೆಗೆ ಒಳಪಡಿಸುವುದು

ನಿಯಮ ಉಲ್ಲಂಘಿಸುವ ಚಾಲಕರ ಲೈಸೆನ್ಸ್ ಅಮಾನತು..! Read More »

ಕರ್ನಾಟಕ
Scroll to Top