ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 02. 2024- 25ನೇ ಸಾಲಿಗೆ 1ನೇ ತರಗತಿಯಿಂದ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖ್ ಮತ್ತು ಪಾರ್ಸಿ ವಿದ್ಯಾರ್ಥಿಗಳಿಂದ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ (SSP)ದಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಕರ್ನಾಟಕದ ನಿವಾಸಿಯಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ. 1 ಲಕ್ಷದ ಒಳಗಿರಬೇಕು. ಅರ್ಜಿಯನ್ನು SSP ಪೋರ್ಟಲ್ https://ssp.postmatric.karnataka.gov.in ನಲ್ಲಿ ಅಕ್ಟೋಬರ್ 31ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ […]

ಅಲ್ಪಸಂಖ್ಯಾತರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ- ಅರ್ಜಿ ಆಹ್ವಾನ Read More »

ಕರಾವಳಿ

’ಅಪರಾಧಿಗಳು ನಿರ್ಭೀತಿಯಿಂದ ತಿರುಗಾಡುವುದು, ಸಂತ್ರಸ್ತರು ಅಪರಾಧ ಮಾಡಿದಂತೆ ಭಯದಿಂದ ಬದುಕುವುದು’  ರಾಷ್ಟ್ರಪತಿ ದ್ರೌಪದಿ ಮುರ್ಮು        

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 02.  ಅಪರಾಧಿಗಳು ನಿರ್ಭೀತಿಯಿಂದ ತಿರುಗಾಡುವುದು ಹಾಗೂ ಸಂತ್ರಸ್ತರು ಅಪರಾಧಗಳನ್ನು ಮಾಡಿದಂತೆ ಭಯದಿಂದ ಬದುಕುವುದು ನಮ್ಮ ಸಾಮಾಜಿಕ ಜೀವನದ ದುಃಖದ ಅಂಶವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಆತಂಕ ವ್ಯಕ್ತಪಡಿಸಿದ್ದಾರೆ. ಕೋಲ್ಕತ್ತಾ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ, ಮಲಯಾಳಂ ಚಿತ್ರರಂಗದ ಪ್ರಸಿದ್ಧ ನಟರ ವಿರುದ್ಧ ದಾಖಲಾದ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದ ಹತ್ತಾರು ಪ್ರಕರಣಗಳು ಭಾರತ ಮಹಿಳೆಯರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದರ ಕುರಿತು ಕೂಲಂಕಷವಾಗಿ ಮರುಪರಿಶೀಲಿಸುವ ಅಗತ್ಯವಿದೆ ಎಂದು

’ಅಪರಾಧಿಗಳು ನಿರ್ಭೀತಿಯಿಂದ ತಿರುಗಾಡುವುದು, ಸಂತ್ರಸ್ತರು ಅಪರಾಧ ಮಾಡಿದಂತೆ ಭಯದಿಂದ ಬದುಕುವುದು’  ರಾಷ್ಟ್ರಪತಿ ದ್ರೌಪದಿ ಮುರ್ಮು         Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ಗೃಹರಕ್ಷಕ ದಳದ ಘಟಕಾಧಿಕಾರಿಗಳ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 02. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ 15 ಘಟಕಗಳ ಘಟಕಾಧಿಕಾರಿಗಳ ಸಭೆಯು ನಗರದ ಮೇರಿಹಿಲ್‍ ನಲ್ಲಿರುವ ಗೃಹರಕ್ಷಕ ದಳದ ಕಛೇರಿಯಲ್ಲಿ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಪೊಲೀಸ್ ಅಧೀಕ್ಷಕರ ವ್ಯಾಪ್ತಿಯಲ್ಲಿ ಬರುವ ಠಾಣೆಗಳಿಗೆ ನಿಯೋಜಿಸುವ ಗೃಹರಕ್ಷಕರ ಪಟ್ಟಿಯನ್ನು ನೀಡುವ ಕುರಿತು, ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿ ಬರುವ ಠಾಣೆಗಳಿಗೆ ನಿಯೋಜಿಸುವ ಗೃಹರಕ್ಷಕರ ಪಟ್ಟಿಯನ್ನು ನೀಡುವ ಬಗ್ಗೆ, ಕವಾಯತು ಹಾಜರಾತಿ ಪಟ್ಟಿಯನ್ನು 5ನೇ

ಮಂಗಳೂರು: ಗೃಹರಕ್ಷಕ ದಳದ ಘಟಕಾಧಿಕಾರಿಗಳ ಸಭೆ Read More »

ಕರಾವಳಿ, ಕರ್ನಾಟಕ

ವೈದ್ಯ ವೃತ್ತಿ ತೊರೆದು ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನವಜೋತ್ ಸಿಮಿ

(ನ್ಯೂಸ್ ಕಡಬ) newskadaba.com ಪಂಜಾಬ್, ಸೆ. 02.  ಯುಪಿಎಸ್‌ಸಿ ಪರೀಕ್ಷೆಯು ಭಾರತದ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ಒಂದಾಗಿದ್ದು, ಈ ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿ ಉತ್ತೀರ್ಣವಾಗುವುದು ಕಷ್ಟಸಾಧ್ಯವಾಗಿದೆ. ಹೀಗೆ ತನ್ನ ವೈದ್ಯ ವೃತ್ತಿ ತೊರೆದು, ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನವಜೋತ್ ಸಿಮಿ ಅವರ ಯಶೋಗಾಥೆ ತಿಳಿದು ಬಂದಿದೆ. ನವಜೋತ್ ಸಿಮಿ ಅವರು ಮೂಲತಃ ಪಂಜಾಬ್‌ನ ಗುರುದಾಸ್‌ಪುರದವರು. ಅವರು ತಮ್ಮ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಪದವಿಯನ್ನು ಲುಧಿಯಾನದ ಬಾಬಾ ಜಸ್ವಂತ್ ಸಿಂಗ್ ಡೆಂಟಲ್ ಹಾಸ್ಪಿಟಲ್ ಮತ್ತು

ವೈದ್ಯ ವೃತ್ತಿ ತೊರೆದು ಮೊದಲ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ನವಜೋತ್ ಸಿಮಿ Read More »

ರಾಷ್ಟ್ರೀಯ ನ್ಯೂಸ್

ರಾಷ್ಟ್ರಪತಿ ಪದಕ ಪುರಸ್ಕೃತ ಡಾ.ಚೂಂತಾರು ಅವರಿಗೆ ಸನ್ಮಾನ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಅರಂತೋಡು, ಸೆ. 02. ರಾಷ್ಟ್ರಪತಿಗಳ ಪದಕ ಪುರಸ್ಕಾರ ಪಡೆದ ದ.ಕ ಜಿಲ್ಲಾ ಸಮಾದೇಷ್ಠರಾದ ಡಾ ಮುರಲೀ ಮೋಹನ್ ಚೂಂತಾರು ಅವರಿಗೆ ಉಳ್ಳಾಲ ಘಟಕದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಸುನಿಲ್ ಹಾಗೂ ಇತರ ಹಿರಿಯ ಗ್ರಹರಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರಪತಿ ಪದಕ ಪುರಸ್ಕೃತ ಡಾ.ಚೂಂತಾರು ಅವರಿಗೆ ಸನ್ಮಾನ ಕಾರ್ಯಕ್ರಮ Read More »

ಕರಾವಳಿ

ಲವಿ ಗಂಜಿಮಠ ಆಪ್ಟೆಂ ಶೆತ್ ಪತ್ರಿಕೆಗೆ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ 2024’ ಪ್ರಧಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 02.  ಕೊಂಕಣಿ ಲೇಖಕಿ ಲವಿ ಗಂಜಿಮಠ ಅವರಿಗೆ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ 2024’ ಹಾಗೂ ಬಜೆಧರ್ಮ ಕೇಂದ್ರದ ‘ಆಪ್ಟೆಂ ಶೆತ್’ ಎಂಬ ಪತ್ರಿಕೆಗೆ ‘ಧರ್ಮಕೇಂದ್ರದ ಅತ್ಯುತ್ತಮ ಪತ್ರಿಕೆ 2024’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಮಂಗಳೂರು ಧರ್ಮಾಧ್ಯಕ್ಷರ ನಿವಾಸದ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ, ಮಂಗಳೂರು ಬಿಷಪ್ ಅ.ವಂ. ಡಾ.ಪೀಟರ್ ಪೌಲ್ ಸಲ್ಡಾನ್ಹಾ ಪ್ರಶಸ್ತಿ ಪ್ರದಾನ ಮಾಡಿದರು. ‘ರಾಕ್ಣೊ’ ವಾರಪತ್ರಿಕೆಯ ಸಂಪಾದಕ ವಂ. ರೂಪೇಶ್ ಮಾಡ್ತಾ ಪ್ರಶಸ್ತಿಯ ಕುರಿತು ವಿವರಣೆ ನೀಡಿದರು.

ಲವಿ ಗಂಜಿಮಠ ಆಪ್ಟೆಂ ಶೆತ್ ಪತ್ರಿಕೆಗೆ ‘ರಾಕ್ಣೊ ಸಾಹಿತ್ಯ ಪ್ರಶಸ್ತಿ 2024’ ಪ್ರಧಾನ Read More »

ಕರಾವಳಿ

ಕೇವಲ 1 ಸಾವಿರ ಪಾವತಿಸಿ ಕೋಟ್ಯಾಂತರ ಮೌಲ್ಯದ ಬಹುಮಾನ ಗೆಲ್ಲಿ

*ನಿಮ್ಮ ಕನಸುಗಳು ಇನ್ನು ಬ್ರೈಟ್ ಭಾರತ್ ನಲ್ಲಿ ಚಿಗುರೊಡೆಯಲಿ* ಬ್ರೈಟ್ ಭಾರತ್ ಟೀಮ್ ಜನ ಸಮಾನ್ಯರ ಕನಸುಗಳಿಗೆ ಬಣ್ಣ ತುಂಬಲಿದ್ದು, ಸಮಾಜದ ಕಟ್ಟ ಕಡೆಯ ಜನರಿಗೂ ಇದು ಆಶಾಕಿರಣವಾಗಲಿದೆ. ಖಂಡಿತಾ ತಮಗೂ ನಮ್ಮ ಜೊತೆಯಾಗುವ ಮೂಲಕ ನಿಮ್ಮ ಕನಸುಗಳಿಗೆ ಬ್ರೈಟ್ ತುಂಬಬಹುದು. ಪುತ್ತೂರಿನ ಇತಿಹಾಸದಲ್ಲಿ ಎಂದಿಗೂ ಕಂಡು ಕೇಳರಿಯದಂತ ಅಮೋಘ ಹೊಸ ಚಿಂತನೆಗಳೊಂದಿಗೆ ಬ್ರೈಟ್ ಭಾರತ್ ತಮ್ಮ ಮುಂದೆ ಬಂದಿದೆ. ಇದರ ನೂತನ ಯೋಜನೆಯಲ್ಲೊಂದಾದ ಸ್ಕೀಮ್ ಯೋಜನೆ, ಬಡ ಸಾಮಾನ್ಯ ಜನರಿಗೆ ಖಂಡಿತಾವಾಗಿಯೂ ಇದು ಉಪಯೋಗಿ ಯೋಜನೆಯಾಗಲಿದೆ.

ಕೇವಲ 1 ಸಾವಿರ ಪಾವತಿಸಿ ಕೋಟ್ಯಾಂತರ ಮೌಲ್ಯದ ಬಹುಮಾನ ಗೆಲ್ಲಿ Read More »

ಕರ್ನಾಟಕ

ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

(ನ್ಯೂಸ್ ಕಡಬ) newskadaba.com ಅರಂತೋಡು, ಸೆ. 01. ಶತಮಾನೋತ್ಸವ ಕಂಡ ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟೆಂಬರ್ 1ರಂದು ಶ್ರಮದಾನ ನಡೆಯಿತು. ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಬನ, ಎಸ್‌ಡಿಎಂಸಿ ಅಧ್ಯಕ್ಷ ಸುರೇಶ್ ಉಳುವಾರು, ಶಿಕ್ಷಕಿ ಭಾನುಮತಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್ ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಶಾಲೆಯ ಹಳೆಯ ವಿದ್ಯಾರ್ಥಿಗಳು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶ್ರಮದಾನದಲ್ಲಿ ಪಾಲ್ಗೊಂಡರು.

ಅರಂತೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ Read More »

ಕರಾವಳಿ, ಕರ್ನಾಟಕ

ಫೀಲ್ಡಿಂಗ್ ವೇಳೆ ಸೂರ್ಯಕುಮಾರ್ ಯಾದವ್ ಕೈಗೆ ಗಾಯ

(ನ್ಯೂಸ್ ಕಡಬ) newskadaba.com ನವದೆಹಲಿ, ಆ. 31. ಭಾರತ ಕ್ರಿಕೆಟ್ ತಂಡದ ಆಟಗಾರ ಸೂರ್ಯಕುಮಾರ್ ಯಾದವ್ ಅವರು ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಕೈಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದ ಮುನ್ನವೇ ಸೂರ್ಯಕುಮಾರ್ ಯಾದವ್ ಅವರ ಕೈಗೆ ಗಾಯವಾಗಿದೆ. ಜೊತೆಗೆ ಸೆ. 05 ರಿಂದ ನಡೆಯಲಿರುವ ದುಲೀಪ್ ಟ್ರೋಫಿಯಲ್ಲೂ ಅವರ ಹೆಸರಿದೆ. ಇನ್ನು ಸೂರ್ಯಕುಮಾರ್ ಯಾದವ್ ಅವರ ಕೈ ಗಾಯವಾಗಿರುವ ಬಗ್ಗೆ ಈವರೆಗೂ ಬಿಸಿಸಿಐ ಯಾವುದೇ ಮಾಹಿತಿಯನ್ನೂ ನೀಡಿಲ್ಲ.

ಫೀಲ್ಡಿಂಗ್ ವೇಳೆ ಸೂರ್ಯಕುಮಾರ್ ಯಾದವ್ ಕೈಗೆ ಗಾಯ Read More »

ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿ ಮಾಡಿಕೊಳ್ಳಲಾಗಿದೆ- ಆರ್. ಅಶೋಕ್ ಆರೋಪ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 31. ಕಾಂಗ್ರೆಸ್ ಸರ್ಕಾರವು ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿ ಮಾಡಿಕೊಳ್ಳಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪ ಮಾಡಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆಡಳಿತ ನಡೆಸುವ ಸರ್ಕಾರವೇ ಪ್ರತಿಭಟನೆ ನಡೆಸುತ್ತಿದೆ ಎಂದರೆ ಇದು ಸರ್ಕಾರದ ಸಂಪೂರ್ಣ ವೈಫಲ್ಯವಾಗಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹೀಗೆ ನಡೆದಿದೆ ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು. ಈ

ವಿಧಾನಸೌಧವನ್ನು ಕಾಂಗ್ರೆಸ್ ಕಚೇರಿ ಮಾಡಿಕೊಳ್ಳಲಾಗಿದೆ- ಆರ್. ಅಶೋಕ್ ಆರೋಪ Read More »

ಕರ್ನಾಟಕ
Scroll to Top