ಹಳಿದಾಟುತ್ತಿದ್ದ ವೇಳೆ ರೈಲು ಢಿಕ್ಕಿ- ಪೊಲೀಸ್ ಮೃತ್ಯು…!

(ನ್ಯೂಸ್ ಕಡಬ) newskadaba.com ಉತ್ತರಪ್ರದೇಶ, ಸೆ. 06. ಇಯರ್‌ಫೋನ್‌ ಹಾಕಿಕೊಂಡು ಹಳಿದಾಟುತ್ತಿದ್ದ ಪೊಲೀಸ್ ಸಿಬ್ಬಂದಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರನ್ನು ಶಾಮ್ಲಿ ಜಿಲ್ಲೆಯ ನಿವಾಸಿ ಅಕ್ಷಯ್‌ವೀರ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಇವರು ಶಹಜಹಾನ್‌ ಪುರದ ಇಂದಿರಾನಗರ ರೈಲ್ವೇ ಕ್ರಾಸಿಂಗ್‌ನಲ್ಲಿ ಇಬ್ಬರು ಪುರುಷರೊಂದಿಗೆ ರೈಲ್ವೆ ಹಳಿ ದಾಟುತ್ತಿದ್ದ ಸಂದರ್ಭ ಇಯರ್‌ಫೋನ್‌ ಹಾಕಿಕೊಂಡಿದ್ದರಿಂದ ರೈಲು ಬರುವುದು ತಿಳಿಯದೇ ರೈಲು ಢಿಕ್ಕಿಹೊಡೆದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹಳಿದಾಟುತ್ತಿದ್ದ ವೇಳೆ ರೈಲು ಢಿಕ್ಕಿ- ಪೊಲೀಸ್ ಮೃತ್ಯು…! Read More »

ಕರಾವಳಿ

ಶಂಕಿತ ಉಗ್ರರಿಂದ ರಾಕೆಟ್ ದಾಳಿ 2 ಕಟ್ಟಡಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com  ಇಂಫಾಲ, ಸೆ. 6. ಮಣಿಪುರ ಬಿಷ್ಣುಪುರ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಶಂಕಿತ ಉಗ್ರರು ದಾಳಿ ನಡೆಸಿದ್ದು, ಈ ದಾಳಿಯಲ್ಲಿ 2 ಕಟ್ಟಡಗಳಿಗೆ ಹಾನಿ ಉಂಟಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚುರ್ ಚಂದಾಪುರ ಜಿಲ್ಲೆಯ ಗುಡ್ಡ ಪ್ರದೇಶದಿಂದ ಜನವಸತಿ ಇರುವ ಟ್ರೋಂಗ್‌ ಲಾವೋಬಿ ಪ್ರದೇಶವನ್ನು ಗುರಿಯಾಗಿಸಿಕೊಂಡು ಶಂಕಿತ ಉಗ್ರರು ರಾಕೆಟ್ ದಾಳಿ ನಡೆಸಿದ್ದಾರೆ. 3 ಕಿ.ಮೀ ದೂರ ಹಾರಬರಲ್ಲ ಸಾಮರ್ಥ್ಯದ ಲಾಂಚರ್ ಬಳಸಿ ರಾಕೆಟ್ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ದಾಳಿಯಲ್ಲಿ

ಶಂಕಿತ ಉಗ್ರರಿಂದ ರಾಕೆಟ್ ದಾಳಿ 2 ಕಟ್ಟಡಗಳಿಗೆ ಹಾನಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಆರ್.ಜಿಕರ್ ಮಾಜಿ ಪ್ರಿನ್ಸಿಪಾಲ್ ಸಂದೀಪ್ ಮನೆ ಮೇಲೆ ಇಡಿ ದಾಳಿ

(ನ್ಯೂಸ್ ಕಡಬ) newskadaba.com ಕೋಲ್ಕತ್ತಾ, ಸೆ. 06. ಇಲ್ಲಿನ ಆರ್ಜಿಕರ್‌ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯವು ದಾಳಿ ನಡೆಸಿದ್ದು, ಸರ್ಕಾರಿ ಸಂಸ್ಥೆಯಲ್ಲಿ ನಡೆದ ಆರ್ಥಿಕ ಹಗರಣದ ಭಾಗವಾಗಿ ದಾಳಿ ನಡೆದಿದೆ ಎನ್ನಲಾಗಿದೆ. ಸಂದೀಪ್‌ ಘೋಷ್‌ ಅವರ ಅಧಿಕಾರಾವಧಿಯಲ್ಲಿ ಆಸ್ಪತ್ರೆಯಲ್ಲಿ ನಡೆದ ಹಣಕಾಸು ಅಕ್ರಮಗಳ ಆರೋಪವೇ ಕೇಂದ್ರೀಯ ಸಂಸ್ಥೆಗಳ ತನಿಖೆಗೆ ಕಾರಣವಾಗಿದೆ. ಸಂದೀಪ್‌ ಘೋಷ್‌ ಅವರು ಆಪಾದಿತ ಹಣಕಾಸು ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಆದೇಶಿಸಿದ ಕೋಲ್ಕತ್ತಾ ಹೈಕೋರ್ಟ್‌

ಆರ್.ಜಿಕರ್ ಮಾಜಿ ಪ್ರಿನ್ಸಿಪಾಲ್ ಸಂದೀಪ್ ಮನೆ ಮೇಲೆ ಇಡಿ ದಾಳಿ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮೈಸೂರು ದಸರಾ- ಅರಮನೆಗೆ ಆಗಮಿಸಿದ 2ನೇ ತಂಡದ ಗಜಪಡೆ

(ನ್ಯೂಸ್ ಕಡಬ) newskadaba.com ಮೈಸೂರು, ಸೆ. 06. ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಿದ್ಧತೆಗಳು ಈಗಾಗಲೇ ಆರಂಭವಾಗಿದ್ದು, ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಮೊದಲ ಗಜಪಡೆಯು ಆ. 21ರಂದು ಅರಮನೆಗೆ ಆಗಮಿಸಿ ಈಗಾಗಲೇ ತಾಲೀಮಿನಲ್ಲಿ ನಿರತವಾಗಿವೆ. ಇದೀಗ ದಸರಾ ಮಹೋತ್ಸವದಲ್ಲಿ ಭಾಗವಹಿಸಲು 2ನೇ ತಂಡ ಐದು ಆನೆಗಳು ವಿವಿಧ ಶಿಬಿರಗಳಿಂದ ಅರಮನೆಗೆ ಆಗಮಿಸಿದ್ದು, ಪೂಜೆ ಸಲ್ಲಿಸಿ ಸ್ವಾಗತಿಸಲಾಗಿದೆ. ತಂಡದ ಐದು ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಗಿದೆ. ಪ್ರಶಾಂತ, ಹಿರಣ್ಯಾ, ಮಹೇಂದ್ರ, ದೊಡ್ಡ ಹರವೇಲಕ್ಷ್ಮೀ, ಸುಗ್ರೀವಾ ಆನೆಗಳು ಎರಡನೇ

ಮೈಸೂರು ದಸರಾ- ಅರಮನೆಗೆ ಆಗಮಿಸಿದ 2ನೇ ತಂಡದ ಗಜಪಡೆ Read More »

ಕರಾವಳಿ

ಬ್ಯಾಂಕ್ ದರೋಡೆಗೆ ಯತ್ನ- ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com  ಹುಬ್ಬಳ್ಳಿ, ಸೆ. 6. ಅಮರಗೋಳ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ದರೋಡೆಗೆ ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಗೋಪನಕೊಪ್ಪ ನಿವಾಸಿ ಮಂಜುನಾಥ್ (28) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ಅಮರಗೋಳ ಎಪಿಎಂಸಿಯಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮುಖಕ್ಕೆ ಮಾಸ್ಕ್ ಹಾಕಿ ಬ್ಯಾಂಕ್ ನೌಕರರೊಬ್ಬರ ಕುತ್ತಿಗೆಗೆ ಚಾಕು ಹಿಡಿದು 10 ಲಕ್ಷ ರೂ. ಗೆ ಬೇಡಿಕೆಯಿಟ್ಟಿದ್ದ ಈತ, ನೌಕರನ ರಕ್ಷಣೆಗೆ ಬಂದವರನ್ನು ತಳ್ಳಿ ಪರಾರಿಯಾಗಿದ್ದ. ಈ ಕುರಿತು ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಬ್ಯಾಂಕ್ ದರೋಡೆಗೆ ಯತ್ನ- ಆರೋಪಿ ಅರೆಸ್ಟ್ Read More »

ಕ್ರೈಮ್ ನ್ಯೂಸ್

ರೈಲು ಹಳಿಗಳ ಮೇಲೆ ಕಲ್ಲು ಇಡುವುದು ದಂಡಾರ್ಹ ಅಪರಾಧ

(ನ್ಯೂಸ್ ಕಡಬ) newskadaba.com ಮಂಡ್ಯ, ಸೆ. 06. ಚಲಿಸುವ ರೈಲಿಗೆ ಕಲ್ಲು ಎಸೆಯುವುದು, ರೈಲು ಹಳಿಗಳ ಮೇಲೆ ಕಲ್ಲು ಇಡುವುದು ಅಥವಾ ಮಣ್ಣು ಸುರಿಯುವುದು ದಂಡಾರ್ಹ ಅಪರಾಧವಾಗಿದೆ ಎಂದು ಮಂಡ್ಯ ರೈಲ್ವೇ ರಕ್ಷಣಾ ದಳದ ನಿರೀಕ್ಷಕ ಎಸ್.ಗೋವಿಂದರಾಜು ತಿಳಿಸಿದ್ದಾರೆ. ತಾಲೂಕಿನ ಯಲಿಯೂರು ಗ್ರಾಮದ ಶ್ರೀಆಂಜನೇಯಸ್ವಾಮಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ರೈಲ್ವೆ ಸುರಕ್ಷಾ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈಲ್ವೇ ನಿಯಮಗಳಿಗೆ ವಿರುದ್ಧವಾಗಿ ಕೃತ್ಯಗಳನ್ನೆಸಗುವುದು ರೈಲ್ವೇ ಅಧಿನಿಯಮ-2003ರ ಪ್ರಕಾರ ದಂಡನೀಯ ಅಪರಾಧವಾಗಿರುತ್ತವೆ. ಎಲ್ಲೆಂದರಲ್ಲಿ ರೈಲು ಹಳಿಗಳನ್ನು ಸಹ ದಾಟುವಂತಿಲ್ಲ.

ರೈಲು ಹಳಿಗಳ ಮೇಲೆ ಕಲ್ಲು ಇಡುವುದು ದಂಡಾರ್ಹ ಅಪರಾಧ Read More »

ಕರ್ನಾಟಕ

ಖಾಸಗಿ ಬಸ್ ನಿರ್ವಾಹಕರ ನಡುವೆ ಜಗಳ  ಇಬ್ಬರು ಅರೆಸ್ಟ್     

(ನ್ಯೂಸ್ ಕಡಬ) newskadaba.com  ಮಂಗಳೂರು, ಸೆ. 6. ತಲಪಾಡಿ – ಮಂಗಳೂರು ನಡುವೆ ಸಂಚರಿಸುವ ಪದ್ಮ ಟ್ರಾವೆಲ್ಸ್ ಬಸ್ ಮತ್ತು ಹೊಸಂಗಡಿ ಜಂಕ್ಷನ್ ನಿಂದ ಮಂಗಳೂರು ನಡುವೆ ಸಂಚರಿಸುವ ಅಸರ್ ಟ್ರಾವೆಲ್ಸ್ ಬಸ್ ನಿರ್ವಾಹಕರಾದ ಅಜಯ್ ಮತ್ತು ವಿಷ್ಣು ಎಂಬವರು ಪರಸ್ಪರ ಹೊಡೆದಾಡಿಕೊಂಡಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿರ್ವಾಹಕರ ನಡುವೆ ಜಗಳ ನಡೆದಿದ್ದು, ಇದರ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬುಧವಾರ ಸಂಜೆ ವೇಳೆ ತೊಕ್ಕೊಟ್ಟು ಸಮೀಪ ಈ ಘಟನೆ ನಡೆದಿದ್ದು, ತಲಪಾಡಿಯಿಂದ

ಖಾಸಗಿ ಬಸ್ ನಿರ್ವಾಹಕರ ನಡುವೆ ಜಗಳ  ಇಬ್ಬರು ಅರೆಸ್ಟ್      Read More »

ಕರಾವಳಿ, ಕ್ರೈಮ್ ನ್ಯೂಸ್

ಪಹಣಿಗೆ ಆಧಾರ್ ಜೋಡಣೆ – ರೈತರಿಗೆ ಸೂಚನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 06. ರೈತರಿಗೆ ನಿಗದಿತ ಸಮಯದಲ್ಲಿ ಸರ್ಕಾರದ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ಅಕ್ರಮ ಖಾತಾ ಬದಲಾವಣೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಧಾರ್ ಜೋಡಣೆಯು ಅವಶ್ಯಕವಾಗಿರುತ್ತದೆ. ಆದ್ದರಿಂದ, ಜಿಲ್ಲೆಯ ರೈತರು ಮೂರು ದಿನದೊಳಗಾಗಿ ಪಹಣಿ ಆಧಾರ್ ದಾಖಲಾತಿಗಳೊಂದಿಗೆ ಹಾಗೂ ಆಧಾರ್ ಜೋಡಣೆಯಾಗಿರುವ ಮೊಬೈಲ್ ನೊಂದಿಗೆ ಸಂಬಂಧಪಟ್ಟ ಗ್ರಾಮ ಆಡಳಿತ ಅಧಿಕಾರಿಯವರನ್ನು ಸಂಪರ್ಕಿಸಿ ಆಧಾರ್ ಜೋಡಣೆ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಜಮೀನು ಹೊಂದಿ ಬೇರೆ ರಾಜ್ಯ ಹಾಗೂ ವಿದೇಶದಲ್ಲಿ ವಾಸವಿರುವ ಭೂಮಾಲೀಕರು, ಅವರ ಕುಟುಂಬಸ್ಥರು/ಸಂಬಂಧಿಕರು

ಪಹಣಿಗೆ ಆಧಾರ್ ಜೋಡಣೆ – ರೈತರಿಗೆ ಸೂಚನೆ Read More »

ಕರಾವಳಿ, ಕರ್ನಾಟಕ

ಬೆಳೆಹಾನಿ- ರೈತರ ಪಟ್ಟಿ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 06. 2024-25ನೇ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಾದ ಪ್ರವಾಹ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಉಂಟಾದ ಬೆಳೆಹಾನಿ ಪರಿಹಾರವನ್ನು ಪಾವತಿಸುವ ಕುರಿತಂತೆ ಬೆಳೆ ಹಾನಿಯಾದ ರೈತರ ವಿವರಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಉಪ ವಿಭಾಗ ಅಧಿಕಾರಿಗಳು, ತಹಶೀಲ್ದಾರ್, ಗ್ರಾಮ ಪಂಚಾಯತ್, ರೈತ ಸಂಪರ್ಕ ಕೇಂದ್ರದಲ್ಲಿ ಹಾಗೂ ಜಿಲ್ಲೆಯ ವೆಬ್‍ ಸೈಟ್ www.dk.nic.in ನಲ್ಲಿ ಸೆಪ್ಟೆಂಬರ್ 4 ರಂದು ಪ್ರಕಟಿಸಲಾಗಿದೆ. ಈ ಕುರಿತು ಯಾವುದಾದರೂ ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದ ತಹಶೀಲ್ದಾರ್, ಕೃಷಿ ಅಥವಾ ತೋಟಗಾರಿಕಾ ಇಲಾಖೆಗಳ ತಾಲೂಕು ಕಚೇರಿಗಳಲ್ಲಿ

ಬೆಳೆಹಾನಿ- ರೈತರ ಪಟ್ಟಿ ಪ್ರಕಟ Read More »

ಕರಾವಳಿ

ಮಂಗಳೂರು ವಿ.ವಿ.ಯಲ್ಲಿ ಶಿಕ್ಷಕರ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 06. ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಯು.ಆರ್ ರಾವ್ ಸಭಾಂಗಣದಲ್ಲಿ ಶಿಕ್ಷಕ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಕುಲಸಚಿವ ರಾಜು ಕೆ. ಮೊಗವೀರ, ವಿಶ್ವದ ಯಾವುದೇ ವಿಶ್ವ ವಿದ್ಯಾಲಯಗಳ ನಿಜವಾದ ನಿರ್ಮಾತೃರು ಅಲ್ಲಿನ ಶಿಕ್ಷಕರು. ಪ್ರಸಕ್ತ ಶಿಕ್ಷಣವು, ವಿದ್ಯಾರ್ಥಿಗಳಲ್ಲಿ ತಮ್ಮ ಪ್ರಶ್ನೆಗಳಿಗೆ ಕಲ್ಪನೆಗೂ ಮೀರಿದ ಉತ್ತರಗಳನ್ನು ಕಂಡುಕೊಳ್ಳಲು ಹೊಸ ಸಾಧ್ಯತೆಗಳನ್ನು ತರೆದಿಡುವ ಮೂಲಕ ವ್ಯಕ್ತಿತ್ವ ವಿಕಾಸದೆಡೆಗೆ ಗಮನಹರಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಲಪತಿ, ಪಿ.ಎಲ್ ಧರ್ಮ ಅವರು ತಮ್ಮ ವಿದ್ಯಾರ್ಥಿ

ಮಂಗಳೂರು ವಿ.ವಿ.ಯಲ್ಲಿ ಶಿಕ್ಷಕರ ದಿನಾಚರಣೆ Read More »

ಕರಾವಳಿ, ಕರ್ನಾಟಕ
Scroll to Top