ಉಚಿತ ಆಧಾರ್ ಅಪ್ಡೇಟ್- ಡಿ.14ರ ವರೆಗೆ ದಿನಾಂಕ ವಿಸ್ತರಣೆ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 14. ಉಚಿತ ಆಧಾರ್ ಅಪ್ಡೇಟ್ ಗೆ ಗಡುವು ನಿಗದಿ ಮಾಡಿದ್ದ ಕೆಂದ್ರ ಸರಕಾರ ಇದೀಗ ಉಚಿತ ಆಧಾರ್ ಕಾರ್ಡ್ ಅಪ್ ಡೇಟ್ ಮಾಡಲು ಡಿಸೆಂಬರ್ 14 ರವರೆಗೆ ದಿನಾಂಕ ವಿಸ್ತರಿಸಿ ಆದೇಶಿಸಲಾಗಿದೆ. ಆಧಾರ್ ಕಾರ್ಡ್ ನಲ್ಲಿ ವಿವರಗಳನ್ನು ನಮೂದಿಸಿದಾಗ ಕೆಲವು ತಪ್ಪುಗಳಾಗುವ ಸಾಧ್ಯತೆಯಿದೆ. ಅಥವಾ ಅವರು ಬೇರೆ ಸ್ಥಳಕ್ಕೆ ವಲಸೆ ಹೋಗಬಹುದು. ಹುಟ್ಟಿದ ದಿನಾಂಕದ ವಿವರಗಳು ತಪ್ಪಾಗಿರಬಹುದು. ಇವುಗಳನ್ನು ಕಾಲಕಾಲಕ್ಕೆ ಸರಿಪಡಿಸುವುದು ಬಹಳ ಮುಖ್ಯ. ಇವುಗಳನ್ನು ಯಾವುದೇ ಸಮಯದಲ್ಲಿ ಸರಿಪಡಿಸಬಹುದು. […]

ಉಚಿತ ಆಧಾರ್ ಅಪ್ಡೇಟ್- ಡಿ.14ರ ವರೆಗೆ ದಿನಾಂಕ ವಿಸ್ತರಣೆ Read More »

ಬ್ರೇಕಿಂಗ್ ನ್ಯೂಸ್

ಫೋನ್ ಕಾಲ್ ರೆಕಾರ್ಡ್ ಬಹಿರಂಗ: ಪೋಲಿಸ್ ಕಾನ್ಸ್ ಟೇಬಲ್ ವಿರುದ್ಧ ಎಫ್ ಐಆರ್

(ನ್ಯೂಸ್ ಕಡಬ) newskadaba.com ಕೊಪ್ಪಳ, ಸೆ. 14.  ಹಣಕ್ಕಾಗಿ ಬೇರೆಯವರಿಗೆ ನೂರಾರು ಫೋನ್ ಕಾಲ್ ರೆಕಾರ್ಡ್ ಬಹಿರಂಗಪಡಿಸಿದ ಸೈಬರ್, ಆರ್ಥಿಕ ಮತ್ತು ನಾರ್ಕೋಟಿಕ್ಸ್ ಅಪರಾಧ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಕೊಪ್ಪಳ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಹೆಡ್ ಕಾನ್ಸ್ ಟೇಬಲ್ ಸಿಹೆಚ್ ಕೊಟೆಪ್ಪ (44)ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಎಫ್‌ಐಆರ್ ವರದಿಯ ಪ್ರಕಾರ, ಆರೋಪಿ ಕಾನ್ಸ್ ಟೇಬಲ್ 145 ಜನರ ಮೊಬೈಲ್ ಕಾಲ್ ರೆಕಾರ್ಡ್ ಬಹಿರಂಗಪಡಿಸಿದ್ದಾರೆ. ಅಲ್ಲದೇ, ಒಂಬತ್ತು ಮೊಬೈಲ್

ಫೋನ್ ಕಾಲ್ ರೆಕಾರ್ಡ್ ಬಹಿರಂಗ: ಪೋಲಿಸ್ ಕಾನ್ಸ್ ಟೇಬಲ್ ವಿರುದ್ಧ ಎಫ್ ಐಆರ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸ್ಟೀಲ್ ನಟ್‌ ಬಳಸಿ ಶಿವನ ಮಾದರಿಯ ಲೋಹ ಶಿಲ್ಪ ನಿರ್ಮಾಣ ’ಇಂಟರ್‌ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಗೆ ದಾಖಲೆ

(ನ್ಯೂಸ್ ಕಡಬ) newskadaba.com ಕಟಪಾಡಿ, ಸೆ. 14.  ಇಲ್ಲಿನ ಕೋಟೆ ಗ್ರಾಮದ ಮಟ್ಟು ನಿವಾಸಿ ಅಮಿತ್ ಅಂಚನ್ ಅವರು ಸುಮಾರು 7,600 ಸ್ಟೀಲ್ ನಟ್‌ಗಳನ್ನು ಬಳಸಿ 3 ತಿಂಗಳಲ್ಲಿ ನಿರ್ಮಿಸಿದ ಶಿವನ ಮಾದರಿಯ ಲೋಹ ಶಿಲ್ಪ ಇಂಟರ್‌ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ದಾಖಲಾಗಿರುತ್ತದೆ. ಲೋಹದ ನಟ್ ಬಳಸಿ ಅಮಿತ್ ಅಂಚನ್ ನಿರ್ಮಿಸಿರುವ ಈ ಶಿಲ್ಪವು ‘ಯಂಗೆಸ್ಟ್ ಮೇಕ್ ಬಿಗ್ಗೆಸ್ಟ್ ಸ್ಕಲ್‌ಪ್ಚರ್ ಆಫ್ ಲಾರ್ಡ್ ಶಿವ’ ಎಂದು ವರ್ಲ್ಡ್ ರೆಕಾರ್ಡ್‌ನಲ್ಲಿ ಗುರುತಿಸಲ್ಪಟ್ಟಿದೆ. ಈ ಕಲಾಕೃತಿಯು 3.5 ಅಡಿ ಎತ್ತರ

ಸ್ಟೀಲ್ ನಟ್‌ ಬಳಸಿ ಶಿವನ ಮಾದರಿಯ ಲೋಹ ಶಿಲ್ಪ ನಿರ್ಮಾಣ ’ಇಂಟರ್‌ನ್ಯಾಷನಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್’ ಗೆ ದಾಖಲೆ Read More »

ಕರಾವಳಿ

ಮನೆಯ ಬಾಗಿಲಿನ ಚಿಲಕ ಮುರಿದು 3.54 ಲಕ್ಷ ರೂ. ಮೌಲ್ಯದ ಆಭರಣ, ನಗದು ಕಳ್ಳತನ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 14.  ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಚಿಲಕ ಮುರಿದು ಒಳನುಗ್ಗಿದ್ದ ಕಳ್ಳರು 3.54 ಲಕ್ಷ ರೂ. ಮೌಲ್ಯದ ಆಭರಣ ಹಾಗೂ ನಗದು ಕಳವು ಮಾಡಿದ ಘಟನೆ ಪುದು ಗ್ರಾಮದ ಪೆರಿಯಾರ್ ನಲ್ಲಿ ನಡೆದಿರುವುದಾಗಿ ಸೆಪ್ಟೆಂಬರ್ 12ರಂದು ಬೆಳಕಿಗೆ ಬಂದಿದೆ. ಪೆರಿಯಾರ್ ಬಾಲ್ಪಬೊಟ್ಟು ನಿವಾಸಿ ಮಹಮ್ಮದ್ ಇಕ್ಬಾಲ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಕ್ಯಾಟರಿಂಗ್ ಕೆಲಸ ಮಾಡುತ್ತಿರುವ ಅವರು ಸೆ. 8ರಂದು ಮನೆಗೆ ಬೀಗ ಹಾಕಿ ಪತ್ನಿಯೊಂದಿಗೆ ಬೆಂಗಳೂರಿನಲ್ಲಿರುವ ಸಂಬಂಧಿಕರ

ಮನೆಯ ಬಾಗಿಲಿನ ಚಿಲಕ ಮುರಿದು 3.54 ಲಕ್ಷ ರೂ. ಮೌಲ್ಯದ ಆಭರಣ, ನಗದು ಕಳ್ಳತನ Read More »

ಕರಾವಳಿ, ಕ್ರೈಮ್ ನ್ಯೂಸ್

1 ಬಿಲಿಯನ್ ಫಾಲೋವರ್ಸ್ – ಇತಿಹಾಸ ನಿರ್ಮಿಸಿದ ರೊನಾಲ್ಡೊ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 14. ಕ್ರಿಸ್ಟಿಯಾನೊ ರೊನಾಲ್ಡೊ ಫುಟ್ಬಾಲ್ ಮೈದಾನದಲ್ಲಿ ಮಾತ್ರವಲ್ಲದೇ ಡಿಜಿಟಲ್ ಕ್ಷೇತ್ರದಲ್ಲಿಯೂ ದಾಖಲೆ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ 1 ಬಿಲಿಯನ್ ಅನುಯಾಯಿಗಳನ್ನು ಹೊಂದಿರುವ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರೊನಾಲ್ಡೊ ಅವರು ಇನ್ಸ್ಟಾಗ್ರಾಂ ನಲ್ಲಿ 639 ಮಿಲಿಯನ್, ಫೇಸ್ಬುಕ್ ನಲ್ಲಿ 170 ಮಿಲಿಯನ್, ಎಕ್ಸ್(X) ನಲ್ಲಿ 113 ಮಿಲಿಯನ್ ಮತ್ತು ಯೂಟ್ಯೂಬ್ ನಲ್ಲಿ 60.5 ಮಿಲಿಯನ್ ಚಂದಾದಾರರನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಯೂಟ್ಯೂಬ್ ಚಾನಲ್ ಆರಂಭಿಸಿದ ರೊನಾಲ್ಡೊ ಮೊದಲ ದಿನದಲ್ಲೇ 15

1 ಬಿಲಿಯನ್ ಫಾಲೋವರ್ಸ್ – ಇತಿಹಾಸ ನಿರ್ಮಿಸಿದ ರೊನಾಲ್ಡೊ Read More »

ಕ್ರೀಡಾ ನ್ಯೂಸ್, ಬ್ರೇಕಿಂಗ್ ನ್ಯೂಸ್

ಮಳೆಯ ಆರ್ಭಟದಿಂದಾಗಿ ತಾಜ್ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 14.  ರಾಷ್ಟ್ರ ರಾಜಧಾನಿ ದೆಹಲಿಯಿಂದ ಸುಮಾರು 250 ಕಿಮೀ ದೂರದಲ್ಲಿರುವ ಆಗ್ರಾದಲ್ಲಿ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಜ್ ಮಹಲ್‌ನಲ್ಲಿ ನೀರು ಸೋರಿಕೆಯಾಗಿದೆ. ಮುಖ್ಯ ಗುಮ್ಮಟದ ಮೇಲೆ ತೇವಾಂಶ ಗಮನಿಸಿದ ನಂತರ ಅಧಿಕಾರಿ ಗುಮ್ಮಟ ಬಿರುಕು ಬಿಟ್ಟಿರಬಹುದು ಎಂದು ಅಂದಾಜಿಸಿದ್ದರು. ಆದರೆ ಪರಿಶೀಲಿಸಿದಾಗ ಸೋರಿಕೆಯಿಂದಾಗಿ ಮುಖ್ಯ ಗುಮ್ಮಟಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಲಾಗಿದೆ. ದೇಶದಲ್ಲಿನ ಐತಿಹಾಸಿಕ ಸ್ಮಾರಕಗಳನ್ನು ನೋಡಿಕೊಳ್ಳುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸೋರಿಕೆ ವರದಿಯಾದ

ಮಳೆಯ ಆರ್ಭಟದಿಂದಾಗಿ ತಾಜ್ ಮಹಲ್‌ನ ಮುಖ್ಯ ಗುಮ್ಮಟದಲ್ಲಿ ನೀರು ಸೋರಿಕೆ Read More »

ರಾಷ್ಟ್ರೀಯ ನ್ಯೂಸ್

ಮಂಗಳೂರು: ಶ್ರೀಮತಿ ಶೆಟ್ಟಿ ಬರ್ಬರ ಕೊಲೆ ಪ್ರಕರಣ- ಮೂವರ ಕೃತ್ಯ ಸಾಬೀತು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 14. ಐದು ವರ್ಷಗಳ ಹಿಂದೆ ಮಂಗಳೂರು ನಗರವನ್ನೇ ಬೆಚ್ಚಿಬೀಳಿಸಿದ್ದ ಶ್ರೀಮತಿ ಶೆಟ್ಟಿ ಬರ್ಬರ ಹತ್ಯೆ ಪ್ರಕರಣದ ಆರೋಪಿಗಳ ಕೃತ್ಯ ಸಾಬೀತಾದ ಹಿನ್ನೆಲೆ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್‌.ಎಸ್‌ ತೀರ್ಪು ನೀಡಿದ್ದಾರೆ.    ಸೂಟರ್‌ಪೇಟೆಯ ಜೋನಸ್ ಸ್ಯಾಮ್ಸನ್(40) ಪತ್ನಿ ವಿಕ್ಟೋರಿಯಾ ಮಥಾಯಿಸ್(47) ಮತ್ತು ಮರಕಡ ತಾರಿಪಾಡಿ ಗುಡ್ಡೆಯ ರಾಜು(34) ಪ್ರಕರಣದ ಆರೋಪಿಗಳು. ಎಲೆಕ್ಟ್ರಾನಿಕ್ಸ್ ಅಂಗಡಿ ನಡೆಸುತ್ತಿದ್ದ ಅತ್ತಾವರ ನಿವಾಸಿ ಶ್ರೀಮತಿ ಶೆಟ್ಟಿ

ಮಂಗಳೂರು: ಶ್ರೀಮತಿ ಶೆಟ್ಟಿ ಬರ್ಬರ ಕೊಲೆ ಪ್ರಕರಣ- ಮೂವರ ಕೃತ್ಯ ಸಾಬೀತು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಮಕ್ಕಳಲ್ಲಿ ವೈರಾಣು ಜ್ವರ ಪ್ರಕರಣ ಶೇ 25 – 30 ರಷ್ಟು ಏರಿಕೆ ಎಚ್ಚರಿಕೆ ವಹಿಸುವಂತೆ ವೈದ್ಯರ ಸೂಚನೆ    

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 14.  ಬೆಂಗಳೂರಿನ ಮಕ್ಕಳಲ್ಲಿ ಕಳೆದ ಕೆಲವು ದಿನಗಳಿಂದ ವೈರಾಣು ಜ್ವರ ಹೆಚ್ಚಾಗಿದೆ. ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗದಲ್ಲಿ ಶೇ 30 ರಷ್ಟು ಮಕ್ಕಳಲ್ಲಿ ಜ್ವರದ ಪ್ರಕರಣ ಏರಿಕೆ ಕಂಡ ಬಂದಿದೆ. ಇದಕ್ಕೆಲ್ಲ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಹವಾಮಾನ ಕಾರಣ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ. ಗಾಳಿ ಸಹಿತ ಮಳೆ, ಬಿಸಿಲು, ಚಳಿಯಿಂದಾಗಿ ಮಕ್ಕಳಲ್ಲಿ ಹೆಚ್ಚಾಗಿ ವೈರಾಣು ಜ್ವರ ಕಂಡು ಬರುತ್ತಿದೆ ಎಂದು ವರದಿಯಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿಯೇ

ಮಕ್ಕಳಲ್ಲಿ ವೈರಾಣು ಜ್ವರ ಪ್ರಕರಣ ಶೇ 25 – 30 ರಷ್ಟು ಏರಿಕೆ ಎಚ್ಚರಿಕೆ ವಹಿಸುವಂತೆ ವೈದ್ಯರ ಸೂಚನೆ     Read More »

ಆರೋಗ್ಯ ಮಾಹಿತಿ, ಕರ್ನಾಟಕ

ಉಡುಪಿ: ಯಕ್ಷಗಾನ ಗುರು ಸಂಜೀವ ಸುವರ್ಣ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಆಯ್ಕೆ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 14.  ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರನ್ನು 2023ನೇ ಸಾಲಿನ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದ್ದಾರೆ. ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ನವೆಂಬರ್ ತಿಂಗಳಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪದಾನ ಮಾಡಲಾಗುವುದು. ಪ್ರಶಸ್ತಿಯು ಒಂದು ಲಕ್ಷ ರೂ ನಗದು, ಪ್ರಶಸ್ತಿ ಫಲಕಗಳನ್ನು ಹೊಂದಿರುತ್ತದೆ ಎಂದರು. ಇದರೊಂದಿಗೆ ಅಕಾಡಮಿಯ ನೂತನ ಅಧ್ಯಕ್ಷರು ಅಕಾಡಮಿಯ

ಉಡುಪಿ: ಯಕ್ಷಗಾನ ಗುರು ಸಂಜೀವ ಸುವರ್ಣ ‘ಪಾರ್ತಿಸುಬ್ಬ ಪ್ರಶಸ್ತಿ’ಗೆ ಆಯ್ಕೆ Read More »

ಕರಾವಳಿ

ಬಾಹ್ಯಾಕಾಶದಿಂದ ಮತ ಚಲಾಯಿಸಲಿರುವ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್

(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಸೆ. 14. ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬಾಹ್ಯಾಕಾಶದಲ್ಲಿದ್ದುಕೊಂಡೆ ಅಮೆರಿಕದ ಅಧ್ಯಕ್ಷಿಯ ಚುನಾವಣೆಗೆ ಮತ ಚಲಾವಣೆ ಮಾಡಲಿದ್ದಾರೆ ಎನ್ನಲಾಗಿದೆ. ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸ್ಟಾರ್‌ ಲೈನರ್‌ ತಾಂತ್ರಿಕ ಸಮಸ್ಯೆಗಳಿಂದ ಬಾಹ್ಯಾಕಾಶದಲ್ಲೇ ಉಳಿದುಕೊಂಡಿದ್ದು, ಭೂಮಿಗೆ ವಾಪಾಸ್ಸು ಬರಲು 2025ರ ಫೆಬ್ರವರಿವರೆಗೆ ಕಾಯಬೇಕಾಗುತ್ತದೆ. ಅಮೆರಿಕದಲ್ಲಿ ನವೆಂಬರ್‌ ನಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ಬಾಹ್ಯಾಕಾಶದಿಂದಲೇ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮತಚಲಾಯಿಸಲಿದ್ದಾರೆ.  

ಬಾಹ್ಯಾಕಾಶದಿಂದ ಮತ ಚಲಾಯಿಸಲಿರುವ ಸುನೀತಾ ವಿಲಿಯಮ್ಸ್, ಬುಚ್ ವಿಲ್ಮೋರ್ Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top