ಸೆ.28ರಿಂದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ

(ನ್ಯೂಸ್ ಕಡಬ) newskadaba.com ಸೆ. 27. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದೊಂದಿಗೆ 2024-25ನೇ ಸಾಲಿನ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಒಟ್ಟು 25 ಕ್ರೀಡಾ ಸ್ಪರ್ಧೆಗಳನ್ನು ಸೆಪ್ಟೆಂಬರ್ 28 ಮತ್ತು 29ರಂದು ದಕ್ಷಿಣ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಲಾಗುತ್ತಿದೆ. ಸೆಪ್ಟೆಂಬರ್ 28ರಂದು ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕುಸ್ತಿ, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್,  ಬಾಕ್ಸಿಂಗ್ (ಆಯ್ಕೆ), ವುಷು (ಆಯ್ಕೆ), ವೇಟ್‍ ಲಿಫ್ಟಿಂಗ್ (ಆಯ್ಕೆ), ಟೇಕ್ವೊಂಡೊ (ಆಯ್ಕೆ) ಸ್ಫರ್ಧೆ – ಮಂಗಳಾ […]

ಸೆ.28ರಿಂದ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟ Read More »

ಕರಾವಳಿ

ಪರಿಷತ್ ಚುನಾವಣೆ: ಅಧಿಸೂಚನೆ ಪ್ರಕಟಣೆ

(ನ್ಯೂಸ್ ಕಡಬ) newskadaba.com ಸೆ. 27. ವಿಧಾನಪರಿಷತ್ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ಒಂದು ಸ್ಥಾನವನ್ನು ಭರ್ತಿ ಮಾಡಲು ಉಪಚುನಾವಣೆ ನಡೆಸಲು ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ. ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಅಧಿಸೂಚನೆ ಹೊರಡಿಸಿದರು. ನಾಮಪತ್ರಗಳ ಸಲ್ಲಿಕೆ ಗುರುವಾರದಿಂದಲೇ ಆರಂಭವಾಗಿದ್ದು, ಮೊದಲ ದಿನ ಯಾವುದೇ ನಾಮಪತ್ರ ಸಲ್ಲಿಕೆ ಆಗಿರುವುದಿಲ್ಲ. ಅಕ್ಟೋಬರ್ 3 ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನವಾಗಿದೆ.

ಪರಿಷತ್ ಚುನಾವಣೆ: ಅಧಿಸೂಚನೆ ಪ್ರಕಟಣೆ Read More »

ಕರಾವಳಿ

ಭದ್ರತಾ ಮಂಡಳಿ ಕಾಯಂ ಸದಸ್ಯತ್ವ:ಭಾರತಕ್ಕೆ ಬ್ರಿಟನ್, ಫ್ರಾನ್ಸ್ ನಿಂದ ಬೆಂಬಲ

(ನ್ಯೂಸ್ ಕಡಬ) newskadaba.com ನವದೆಹಲಿಸೆ.27: ವಿಶ್ವಸಂಸ್ಥೆ ಭದ್ರತಾ ಮಂಡಳಿ ಕಾಯಂ ಸದಸ್ಯತ್ವ ಭಾರತದ ಮಹತ್ವಾಕಾಂಕ್ಷೆಗೆ ಮತ್ತಷ್ಟು ಬಲಬಂದಿದ್ದು, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳು ಬೆಂಬಲ ನೀಡಿವೆ.ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಪಡೆಯಲು ಭಾರತ ನಡೆಸುತ್ತಿರುವ ಪ್ರಯತ್ನಕ್ಕೆ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಮತ್ತು ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಬೆಂಬಲ ಘೋಷಿಸಿದ್ದಾರೆ.ಭಾರತಕ್ಕೆ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯ ಸ್ಥಾನ ನೀಡುವ ಸಂಬಂಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಡೆಸಿದ್ದ ಮಾತುಕತೆ ಕೊನೆಗೂ ಯಶಸ್ವಿಯಾಗಿದ್ದು, ಫ್ರಾನ್ಸ್ ಮತ್ತು ಬ್ರಿಟನ್

ಭದ್ರತಾ ಮಂಡಳಿ ಕಾಯಂ ಸದಸ್ಯತ್ವ:ಭಾರತಕ್ಕೆ ಬ್ರಿಟನ್, ಫ್ರಾನ್ಸ್ ನಿಂದ ಬೆಂಬಲ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕೇರಳ: 2ನೇ ಮಂಕಿಫಾಕ್ಸ್ ಪ್ರಕರಣ ಪತ್ತೆ

 (ನ್ಯೂಸ್ ಕಡಬ) newskadaba.com ತಿರುವನಂತಪುರಂ ಸೆ.27: : ಯುನೈಟೆಡ್ ಅರಬ್ ಎಮಿರೇಟ್ಸ್(UAE)ನಿಂದ ಬಂದಿದ್ದ ಕೇರಳದ ಎರ್ನಾಕುಲಂನ 26 ವರ್ಷದ ಯುವಕನಿಗೆ ಮಂಕಿಪಾಕ್ಸ್ ಶುಕ್ರವಾರದಂದು ದೃಢಪಟ್ಟಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದು ಈ ವರ್ಷ ರಾಜ್ಯದಲ್ಲಿ ಎರಡನೇ ಮತ್ತು ದೇಶದಲ್ಲಿ ಮೂರನೇ ಮಂಕಿಪಾಕ್ಸ್ ಪ್ರಕರಣವಾಗಿದೆ. ಈ ಹಿಂದೆ ಮಲಪ್ಪುರಂನ ಎಡವನ್ನಾ ಎಂಬ ಪ್ರದೇಶದ 38 ವರ್ಷದ ವ್ಯಕ್ತಿಗೆ ಸೆಪ್ಟೆಂಬರ್ 18 ರಂದು ಮಂಕಿಪಾಕ್ಸ್ ಕಂಡುಬಂದಿತ್ತು. ನಂತರ ಅವರ ಸೋಂಕಿಗೆ ವೈರಸ್‌ನ ಕ್ಲೇಡ್ 1 ಬಿ ಸ್ಟ್ರೈನ್ ಕಾರಣ ಎಂದು ತಿಳಿದುಬಂತು.

ಕೇರಳ: 2ನೇ ಮಂಕಿಫಾಕ್ಸ್ ಪ್ರಕರಣ ಪತ್ತೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ತುಮಕೂರು-ಯಶವಂತಪುರ ಮಧ್ಯೆ ನೂತನ ವೈಮು ರೈಲು ಸೇವೆ:ಕೇಂದ್ರ ಸಚಿವ ವಿ ಸೋಮಣ್ಣ ಚಾಲನೆ

(ನ್ಯೂಸ್ ಕಡಬ) newskadaba.com ತುಮಕೂರು ಸೆ.27: ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಇಂದು ಶುಕ್ರವಾರ ತುಮಕೂರು-ಯಶವಂತಪುರ ಮೆಮು ರೈಲಿಗೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ತುಮಕೂರು-ಯಶವಂತಪುರ ಜೊತೆಗೆ ಬಾಣಸವಾಡಿ-ತುಮಕೂರು ನಡುವೆ ಹೊಸ ಮೆಮು ರೈಲು ಸೇವೆ ಆರಂಭ ಮಾಡುವುದಾಗಿ ಭರವಸೆ ನೀಡಿದರು. ಮೆಮು ರೈಲು ಸಂಚಾರ: ತುಮಕೂರು-ಯಶವಂತಪುರ ನಡುವಿನ ಹೊಸ ಮೆಮು ರೈಲು ಇಂದೇ ಕಾರ್ಯಾರಂಭ ಮಾಡುತ್ತಿದ್ದು, ಭಾನುವಾರ ಹೊರತುಪಡಿಸಿ ವಾರದ ಎಲ್ಲ ದಿನ ಸಂಚರಿಸಲಿದೆ.

ತುಮಕೂರು-ಯಶವಂತಪುರ ಮಧ್ಯೆ ನೂತನ ವೈಮು ರೈಲು ಸೇವೆ:ಕೇಂದ್ರ ಸಚಿವ ವಿ ಸೋಮಣ್ಣ ಚಾಲನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಸಿಎಂ ಮುಡಾ ಕೇಸ್ ಬೆನ್ನಲ್ಲೇ ಖರ್ಗೆ ಭೂ ಕಬಳಿಕೆ ಕಂಟಕ:ಲೋಕಾಯುಕ್ತಕ್ಕೆ ದೂರು

(ನ್ಯೂಸ್ ಕಡಬ) newskadaba.com ಕೆ.ಆರ್.ಪೇಟೆ, ಸೆ.27. ಮುಡಾ ನಿವೇಶನ ಹಂಚಿಕೆ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ಗೆ ಮತ್ತೊಂದು ಭೂ ಕಬಳಿಕೆಯ ಉರುಳು ಸುತ್ತಿಕೊಂಡಿದೆ. ಮುಡಾ ಹಗರಣದಲ್ಲಿ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ ಸಂದಿಗ್ಧ ಪರಿಸ್ಥಿತಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬಸ್ಥರ ವಿರುದ್ಧ ಲೋಕಯುಕ್ತದಲ್ಲಿ ಮತ್ತೊಂದು ದೂರು ದಾಖಲಾಗಿದೆ. ಮಾಜಿ ಕಾರ್ಪೊರೇಟರ್ ಎನ್ ಆರ್ ರಮೇಶ್ ಅವರು ಭೂ ಕಬಳಿಕೆ ಆರೋಪದಡಿಯಲ್ಲಿ ಇಬ್ಬರು ಸಚಿವರು ಹಾಗೂ ಹಿರಿಯ IAS ಅಧಿಕಾರಿ

ಸಿಎಂ ಮುಡಾ ಕೇಸ್ ಬೆನ್ನಲ್ಲೇ ಖರ್ಗೆ ಭೂ ಕಬಳಿಕೆ ಕಂಟಕ:ಲೋಕಾಯುಕ್ತಕ್ಕೆ ದೂರು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಜಿಲ್ಲೆಯ ಕ್ರೀಡಾಪಟುಗಳ ಸಾಧನೆ ಶ್ಲಾಘನೀಯ- ಜಿಲ್ಲಾಧಿಕಾರಿ

(ನ್ಯೂಸ್ ಕಡಬ) newskadaba.com ಸೆ. 27. ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಪಟುಗಳು ದೇಶದ ವಿವಿಧ ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ನೆಹರೂ ಯುವಕೇಂದ್ರ ಹಾಗೂ ಜಿಲ್ಲಾ ಯುವಜನ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಮಂಗಳ ಕ್ರೀಡಾಂಗಣದಲ್ಲಿ ನಡೆದ ಮಂಗಳ ಕ್ರೀಡಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ

ಜಿಲ್ಲೆಯ ಕ್ರೀಡಾಪಟುಗಳ ಸಾಧನೆ ಶ್ಲಾಘನೀಯ- ಜಿಲ್ಲಾಧಿಕಾರಿ Read More »

ಕರಾವಳಿ

ವಿಕಲಚೇತನರ ಇ-ಸ್ಕಾಲರ್ ಶಿಪ್ ಯೋಜನೆ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಸೆ. 27. 2024ನೇ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಲ್ಲಿ ಕೇಂದ್ರ ಸರಕಾರದ ವತಿಯಿಂದ ಸ್ಟೇಟ್ ಸ್ಕಾಲರ್ ಶಿಪ್ ಯೋಜನೆಯಡಿ ಪೋಸ್ಟ್ ಮೆಟ್ರಿಕ್ ಹಾಗೂ ಉನ್ನತ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿದ್ಯಾರ್ಥಿವೇತನ ನೀಡುವ ಸಲುವಾಗಿ ಹಾಗೂ ನ್ಯಾಷನಲ್ ಇ-ಸ್ಕಾಲರ್‍ಶಿಪ್ ಯೋಜನೆಯಡಿ ಪ್ರಿ ಮೆಟ್ರಿಕ್ ಹಾಗೂ ಟಾಪ್ ಕ್ಲಾಸ್  ವಿಕಲಚೇತನ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ನ್ಯಾಷನಲ್ ಇ-ಸ್ಕಾಲರ್‍ಶಿಪ್ ಯೋಜನೆಯಡಿ ವಿದ್ಯಾರ್ಥಿವೇತನ ಪಡೆಯಲು ಅರ್ಹ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ

ವಿಕಲಚೇತನರ ಇ-ಸ್ಕಾಲರ್ ಶಿಪ್ ಯೋಜನೆ: ಅರ್ಜಿ ಆಹ್ವಾನ Read More »

ಕರಾವಳಿ

ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹ

 (ನ್ಯೂಸ್ ಕಡಬ) newskadaba.com ಕೆ.ಆರ್.ಪೇಟೆ (ಸೆ.27)  ಮಹಿಳೆಯರು ಮತ್ತು ಒಕ್ಕಲಿಗ ಸಮುದಾಯದ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಮುನಿರತ್ನ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ತಾಲೂಕು ಒಕ್ಕಲಿಗ ಮಹಿಳಾ ಸಂಘ ಆಗ್ರಹಿಸಿದೆ. ಎಲ್ಲಿ ಮಹಿಳೆಯರನ್ನು ಗೌರವಿಸುತ್ತಾರೋ ಅಲ್ಲಿ ದೇವತೆಗಳು ನೆಲೆಸಿದ್ದಾರೆ ಎಂದು ನಂಬಿರುವ ದೇಶ ನಮ್ಮದು. ಒಕ್ಕಲಿಗ ಸಮುದಾಯ ನಾಡಿಗೆ ಅನ್ನ ನೀಡುವ ಸಮುದಾಯ. ಎಲ್ಲಾ ಜಾತಿ, ಧರ್ಮ ಮತ್ತು ಸಂಸ್ಕೃತಿಯನ್ನು ಗೌರವಿಸಿ ನಡೆಯುತ್ತಿರುವರರು ಒಕ್ಕಲಿಗ ಸಮುದಾಯದ ಜನ. ಶಾಂತಿ ಮತ್ತು ಸಹಬಾಳ್ವೆಯಿಂದ ಬದುಕುತ್ತಿರುವ ಒಕ್ಕಲಿಗ ಸಮಾಜವನ್ನು

ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಎಸ್ಸಿ/ಎಸ್ಟಿ ಫ್ರೀ ಮೆಟ್ರಿಕ್ ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಸೆ. 27. ಪರಿಶಿಷ್ಟಜಾತಿ/ಪಂಗಡದ ಕಲ್ಯಾಣ ಇಲಾಖೆಯಿಂದ ಪ.ಜಾತಿ/ಪ.ವರ್ಗದ ವಿದ್ಯಾರ್ಥಿಗಳಿಗೆ 2024-25ನೇ ಸಾಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು – www.sw.kar.nic.in ಹಾಗೂ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು – www.twd.karnataka.gov.in iಟಿ ವೆಬ್‍ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಹತೆಗಳು- ಮಾನ್ಯತೆ ಪಡೆದ ಮೆಟ್ರಿಕ್ ಪೂರ್ವ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ.ಜಾತಿ/ಪ.ಪಂಗಡದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಯ ಪೋಷಕರ ಕುಟುಂಬದ ಆದಾಯ ಮಿತಿ 1ರಿಂದ 8ನೇ ತರಗತಿ

ಎಸ್ಸಿ/ಎಸ್ಟಿ ಫ್ರೀ ಮೆಟ್ರಿಕ್ ವಿದ್ಯಾರ್ಥಿ ವೇತನ: ಅರ್ಜಿ ಆಹ್ವಾನ Read More »

ಕರಾವಳಿ
Scroll to Top