’ತುಳುವರ ಹೃದಯ ವೈಶಾಲ್ಯತೆ ದೇಶಕ್ಕೆ ಮಾದರಿ’- ಕೆ.ಎಂ.ಹೆಗ್ಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.30. ತುಳುನಾಡಿನ ಜನತೆ ತುಳು ಭಾಷೆಯ ಜತೆ ಇತರ ಭಾಷೆಗಳನ್ನು ಗೌರವಿಸುತ್ತಾರೆ. ಎಲ್ಲ ಜನರನ್ನು ತಮ್ಮವರಂತೆ ನೋಡಿಕೊಳ್ಳುವ ತುಳುವರ ಹೃದಯ ವೈಶಾಲ್ಯತೆ ದೇಶಕ್ಕೆ ಮಾದರಿಯಾಗಿದೆ ಎಂದು ರೋಟರಿ ಜಿಲ್ಲೆ 3181 ಇದರ ಅಸಿಸ್ಟೆಂಟ್ ಗವರ್ನರ್ ಕೆ.ಎಂ.ಹೆಗ್ಡೆ ಹೇಳಿದ್ದಾರೆ. ತುಳುವೆರೆ ಕಲ ಇದರ ವತಿಯಿಂದ ಪರಿಸರ ಅಧ್ಯಯನ ಕೇಂದ್ರ ನೆಲ್ಲಿಗುಡ್ಡೆ ಮತ್ತು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಸಹಯೋಗದಲ್ಲಿ ರವಿವಾರ ನಗರದ ಲಾಲ್‌ಬಾಗ್‌ನ ಇಂದಿರಾ ಪ್ರಿಯದರ್ಶಿನಿ ವನಿತಾಪಾರ್ಕ್‌ನಲ್ಲಿ ನಡೆದ ‘ಪಚ್ಚೆ ಸಿರಿ’ ತುಳು […]

’ತುಳುವರ ಹೃದಯ ವೈಶಾಲ್ಯತೆ ದೇಶಕ್ಕೆ ಮಾದರಿ’- ಕೆ.ಎಂ.ಹೆಗ್ಡೆ Read More »

ಕರಾವಳಿ
crime, arrest, suspected

ಮಸೀದಿ ಕಚೇರಿಗೆ ನುಗ್ಗಿ ಕಳವಿಗೆ ಯತ್ನ: ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಮಲ್ಪೆ, ಸೆ.30. ಸೈಯದ್ ಅಬೂಬಕ್ಕರ್ ಸಿದ್ದಿಕ್ ಜಾಮಿಯಾ ಮಸೀದಿಯ ಕಚೇರಿ ಒಳಗೆ ನುಗ್ಗಿ ಕಳವಿಗೆ ಯತ್ನಿಸುತ್ತಿದ್ದ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸೆ.28ರಂದು ಮಧ್ಯರಾತ್ರಿ ವೇಳೆ ನಡೆದಿದೆ. ಬಂಧಿತ ಆರೋಪಿಯನ್ನು ಬಿಹಾರ ರಾಜ್ಯದ ಬಿನೋದ್ ರಿಶಿ(40) ಎಂದು ಗುರುತಿಸಲಾಗಿದೆ. ಈತ ಕಚೇರಿಯ ಎದುರಿನ ಕಬ್ಬಿಣದ ಶೆಟರ್‌ನ ಬೀಗವನ್ನು ಮುರಿದು ಒಳನುಗ್ಗಿದ್ದು, ಆಫೀಸಿನ ಗೋಡೆಯ ಮೇಲೆ ಇರಿಸಿದ್ದ ಸಿಸಿ ಕ್ಯಾಮರಾವನ್ನು ಒಡೆದು ಹಾಕಿದ್ದಾನೆ. ಬಳಿಕ ಒಳಗೆ ಹೋಗಿ ಕಚೇರಿಯ ಕಬ್ಬಿಣದ ಕಪಾಟಿನ

ಮಸೀದಿ ಕಚೇರಿಗೆ ನುಗ್ಗಿ ಕಳವಿಗೆ ಯತ್ನ: ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಸ್ಕೂಟರ್ ಮೇಲೆ ವಿದ್ಯುತ್ ತಂತಿ ಬಿದ್ದು ಗಾಯಗೊಂಡಿದ್ದ ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com ಉಡುಪಿ, ಸೆ.30. ಕುಂಜಾರುಗಿರಿ ನಿವಾಸಿ, ಮಣಿಪಾಲ ಪ್ರಸ್‌ ನ ಯುನಿಟ್ 5ರಲ್ಲಿ ಉದ್ಯೋಗದಲ್ಲಿದ್ದ ಕುಂಜಾರುಗಿರಿ ಶಶಿಧರ್ ಶೆಟ್ಟಿ (42) ಸೆ. 27ರಂದು ಮೃತಪಟ್ಟಿದ್ದಾರೆ. ಶಶಿಧರ್ ಅವರು ಜುಲೈನಲ್ಲಿ ಮಣಿಪಾಲದ ಕೈಗಾರಿಕಾ ಪ್ರದೇಶದಲ್ಲಿ ಸ್ಕೂಟರ್‌ನಲ್ಲಿ ಚಲಿಸುತ್ತಿದ್ದ ವೇಳೆ ಗಾಳಿ-ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದು ಗಂಭೀರವಾಗಿ ಗಾಯಗೊಂಡು, ಕಳೆದ 2 ತಿಂಗಳಿನಿಂದ ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.  

ಸ್ಕೂಟರ್ ಮೇಲೆ ವಿದ್ಯುತ್ ತಂತಿ ಬಿದ್ದು ಗಾಯಗೊಂಡಿದ್ದ ಯುವಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
Death, deadbody, Waterfall

ಕೆರೆಗೆ ಬಿದ್ದು 3 ವರ್ಷದ ಬಾಲಕ ಮೃತ್ಯು..!

(ನ್ಯೂಸ್ ಕಡಬ) newskadaba.com ಕಾಸರಗೋಡು, ಸೆ.30. ಕೆರೆಗೆ ಬಿದ್ದು ಮೂರು ವರ್ಷದ ಬಾಲಕ ಮೃತಪಟ್ಟ ಘಟನೆ ಬೆದ್ರಡ್ಕ ಕಂಬಾರ್ ನಲ್ಲಿ ಭಾನುವಾರ ಸಂಜೆ ನಡೆದಿದೆ. ಮೃತಪಟ್ಟ ಬಾಲಕನನ್ನು  ಕಂಬಾರಿನ ನೌಶಾದ್ ರವರ ಪುತ್ರ ಮುಹಮ್ಮದ್ ಎಂದು ಗುರುತಿಸಲಾಗಿದೆ. ಸೋಹಾನ್ ಹಬೀಬ್ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮುಹಮ್ಮದ್ ಸೋಹಾನ್ ಹಬೀಬ್ ದಿಢೀರ್ ನಾಪತ್ತೆಯಾಗಿದ್ದಾನೆ. ಈ ವೇಳೆ ಸಂಬಂಧಿಕರು ಮನೆಯೊಳಗೆ ಹಾಗೂ ಪರಿಸರದ ಮನೆಗಳಲ್ಲಿ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ಬಾಲಕ ಪತ್ತೆಯಾಗದ ಹಿನ್ನಲೆಯಲ್ಲಿ ಸಂಬಂಧಿಕರು, ಶೋಧ ನಡೆಸಿದಾಗ ಮನೆ ಸಮೀಪದ 200 ಮೀಟರ್

ಕೆರೆಗೆ ಬಿದ್ದು 3 ವರ್ಷದ ಬಾಲಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಕೇವಲ 1 ಸಾವಿರ ಪಾವತಿಸಿ ಬೈಕ್, ಸ್ಕೂಟರ್, ಚಿನ್ನ, ಮೊಬೈಲ್ ಗೆಲ್ಲುವ ಅವಕಾಶ

(ನ್ಯೂಸ್ ಕಡಬ) newskadaba.com ಕಡಬ, ಸೆ.29. ಅದೃಷ್ಟ ಅನ್ನೋದು ಯಾವಾಗ, ಹೇಗೆ ಬರುತ್ತೋ ಯಾರಿಗೂ ಗೊತ್ತಿರಲ್ಲ. ನಿಮಗೂ ಅದೃಷ್ಟವಿದ್ದಲ್ಲಿ ತಿಂಗಳಿಗೆ ಅನಗತ್ಯವಾಗಿ ಖರ್ಚು ಮಾಡುವ 1 ಸಾವಿರ ರೂಪಾಯಿ ಹಣವನ್ನು ಕಡಬದ ‘ಎಲೈಟ್ ಮೊಬೈಲ್ಸ್’ನ ಅದೃಷ್ಟ ಯೋಜನೆಯಲ್ಲಿ ಉಳಿತಾಯ ಮಾಡಿ. ಬೈಕ್, ಸ್ಕೂಟರ್, ಚಿನ್ನ, ಸೇರಿದಂತೆ ಹಲವು ಮೊಬೈಲ್ ಗಳನ್ನು ನಿಮ್ಮದಾಗಿಸಿಕೊಳ್ಳುವ ಸೇವಿಂಗ್ಸ್ ಯೋಜನೆ ಆರಂಭಗೊಂಡಿದೆ‌. 12 ಕಂತುಗಳ ಈ ಉಳಿತಾಯ ಯೋಜನೆಯಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯದಿದ್ದರೆ ನಿರಾಶರಾಗಬೇಕಿಲ್ಲ. ಯಾಕೆಂದರೆ ಎಲ್ಲಾ ಸದಸ್ಯರಿಗೂ 12 ಸಾವಿರ

ಕೇವಲ 1 ಸಾವಿರ ಪಾವತಿಸಿ ಬೈಕ್, ಸ್ಕೂಟರ್, ಚಿನ್ನ, ಮೊಬೈಲ್ ಗೆಲ್ಲುವ ಅವಕಾಶ Read More »

ಕರ್ನಾಟಕ

ಅಕ್ರಮ ಮರಳುಗಾರಿಕೆಯಿಂದ ದ್ವೀಪ ಉಳಿಸಲು ಬೃಹತ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸೆ. 28. ಅಕ್ರಮ ಮರಳುಗಾರಿಕೆಯಿಂದ ಮುಳುಗಡೆಯಾಗುತ್ತಿರುವ ಪಾವೂರು ಉಳಿಯ ಅಡ್ಯಾರ್, ಉಳ್ಳಾಲ ಹೊಯ್ಗೆ, ರಾಣಿಪುರ ದ್ವೀಪಗಳನ್ನು ಉಳಿಸಿ ದ್ವೀಪವಾಸಿಗಳನ್ನು ರಕ್ಷಿಸಬೇಕೆಂದು ಬೃಹತ್ ಪ್ರತಿಭಟನೆ ನಗರದ ಮಿನಿವಿಧಾನಸೌಧದ ಮುಂಭಾಗ ನಡೆಯಿತು. ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ ಸೇರಿದಂತೆ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ 2-3 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದರು. ಪ್ರತಿಭಟನೆಗಿಂತ ಮೊದಲು ಪ್ರತಿಭಟನಾಕಾರರು ನಗರದ ಬಲ್ಮಠದ ಸಿಎಸ್ಐ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಜಾಥಾ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್

ಅಕ್ರಮ ಮರಳುಗಾರಿಕೆಯಿಂದ ದ್ವೀಪ ಉಳಿಸಲು ಬೃಹತ್ ಪ್ರತಿಭಟನೆ Read More »

ಕರಾವಳಿ

ನಿರ್ಮಲಾ ಸೀತಾರಾಮನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಸೆ. 28. ಚುನಾವಣಾ ಬಾಂಡ್‌ ಹಗರಣದಲ್ಲಿ ಸಿಲುಕಿರುವ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌ ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ರಾಜಕೀಯ ಷಡ್ಯಂತರ ಮಾಡುತ್ತಿರುವ ಬಿಜೆಪಿ ಜೆಡಿಎಸ್‌‍ ನ ಕೆಲವು ಭ್ರಷ್ಟಾಚಾರಿಗಳು ಸಿದ್ದರಾಮಯ್ಯನವರ ರಾಜೀನಾಮೆ ನೀಡಬೇಕೆಂದು ಹೋರಾಟ ಮಾಡುತ್ತಿದ್ದಾರೆ. ಆದರೆ ಈಗ ಕೋಟ್ಯಂತರ ಅಕ್ರಮ ಚುನಾವಣಾ ಬಾಂಡ್‌ ಹಗರಣದಲ್ಲಿ ಭಾಗಿಯಾಗಿರುವ ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್‌ ರಾಜೀನಾಮೆಗೆ ಯಾಕೆ ನೀವು

ನಿರ್ಮಲಾ ಸೀತಾರಾಮನ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ Read More »

ಕರ್ನಾಟಕ

ಜಮೀರ್ ವಿರುದ್ಧ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ

(ನ್ಯೂಸ್ ಕಡಬ) newskadaba.com ಸೆ. 28 ಬೆಂಗಳೂರು: ಹೈಕೋರ್ಟ್ ತೀರ್ಪನ್ನು ಪೊಲಿಟಿಕಲ್ ಜಡ್ಜ್‌ಮೆಂಟ್‌ ಎಂದಿದ್ದ ಸಚಿವ ಜಮೀರ್ ಅಹ್ಮದ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿ ಜೆ ಅಬ್ರಹಾಂ ಅವರು ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಹೈಕೋರ್ಟ್ ಮತ್ತು ಜನಪ್ರತಿನಿಧಿಗಳ ನ್ಯಾಯಾಲಯ ನೀಡಿರುವ ತೀರ್ಪಿನ್ನು ಪೊಲಿಟಿಕಲ್ ಜಡ್ಜ್ಮೆಂಟ್ ಎಂದು ಜಮೀರ್ ಅಹ್ಮದ್ ಖಾನ್ ಕರೆದಿದ್ದರು. ಹೀಗಾಗಿ ಜಮೀರ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲು ಮಾಡುವಂತೆ ಅಡ್ವೋಕೆಟ್ ಜನರಲ್ ಶಶಿಕಿರಣ್

ಜಮೀರ್ ವಿರುದ್ಧ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಗೃಹಲಕ್ಷ್ಮೀ ಹಣ ಬಿಡುಗಡೆ ಬಗ್ಗೆ ಸಚಿವೆ ಹೆಬ್ಬಾಳಕರ್ ಮಹತ್ವದ ಮಾಹಿತಿ

(ನ್ಯೂಸ್ ಕಡಬ) newskadaba.com ಸೆ. 28. ಗೃಹಲಕ್ಷ್ಮೀ ಯೋಜನೆಯ ಜುಲೈ ತಿಂಗಳ ಕಂತಿನ ಹಣ ಬಿಡುಗಡೆಯ ಪ್ರಕ್ರಿಯೆ ನಡೆಯುತ್ತಿದ್ದು, ಇದಾದ ಕೆಲ ದಿನಗಳಲ್ಲೇ ಆಗಸ್ಟ್‌ ತಿಂಗಳ ಹಣವೂ ಬಿಡುಗಡೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಿರಂತರ ಪ್ರಕ್ರಿಯೆ. ಯಾವುದೇ ಕಾರಣಕ್ಕೂ ಪಂಚ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದರು. ಮಾಜಿ ಮುರುಗೇಶ್‌ ನಿರಾಣಿ ಅವರು ಅಧಿಕಾರದಲ್ಲಿದ್ದಾಗ ಪಂಚಮಸಾಲಿ

ಗೃಹಲಕ್ಷ್ಮೀ ಹಣ ಬಿಡುಗಡೆ ಬಗ್ಗೆ ಸಚಿವೆ ಹೆಬ್ಬಾಳಕರ್ ಮಹತ್ವದ ಮಾಹಿತಿ Read More »

ಕರ್ನಾಟಕ

ಆಟೋಗೆ ಲಾರಿ ಡಿಕ್ಕಿ ಹೊಡೆದು ಯುವತಿ ಸಾವು

(ನ್ಯೂಸ್ ಕಡಬ) newskadaba.com ಸೆ. 28. ಆಟೋದಲ್ಲಿ ಹೋಗುತ್ತಿದ್ದ ಯುವತಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಆಕೆ ಮೃತಪಟ್ಟಿರುವ ಘಟನೆ ಕಬ್ಬನ್‌ಪಾರ್ಕ್‌ ಸಂಚಾರಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ. ಮೃತಪಟ್ಟ ಯುವತಿಯನ್ನು ಕೇರಳ ಮೂಲದ ಶಾಲಿನಿ ಎಂದು ಗುರುತಿಸಲಾಗಿದೆ. ಆಟೋಚಾಲಕ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆನ್ಸನ್‌ ಟೌನ್‌ ನ ಚಿನ್ನಪ್ಪ ಗಾರ್ಡನ್‌ ನಿಂದ ಶಾಲಿನಿ ಅವರು ಯಾತ್ರಿ ಆ್ಯಪ್‌ ಮೂಲಕ ಆಟೋ ಬುಕ್‌ ಮಾಡಿಕೊಂಡು ಮೆಜೆಸ್ಟಿಕ್‌ ಕಡೆಗೆ ಮುಂಜಾನೆ 4 ಗಂಟೆ ಸುಮಾರಿಗೆ

ಆಟೋಗೆ ಲಾರಿ ಡಿಕ್ಕಿ ಹೊಡೆದು ಯುವತಿ ಸಾವು Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top