ಇಸ್ರೇಲ್ ಮೇಲೆ ಇರಾನ್‌ ಕ್ಷಿಪಣಿ ದಾಳಿ- ಸಂಕಷ್ಟದಲ್ಲಿ ಕನ್ನಡಿಗರು

(ನ್ಯೂಸ್ ಕಡಬ) newskadaba.com ಇಸ್ತಾಂಬುಲ್, ಅ. 02.  ಇಸ್ರೇಲ್ ಮೇಲೆ ಕ್ಷಿಪಣಿಗಳ ಮೂಲಕ ಇರಾನ್‌ ದಾಳಿ ನಡೆಸಿದ ಬೆನ್ನಲ್ಲೇ ವಿಮಾನ ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ. ಸ್ವಿಜರ್ಲ್ಯಾಂಡ್ ರಾಜಧಾನಿ ಜ್ಯೂರಿಕ್‌ನಿಂದ ದುಬೈಗೆ ಬಂದು ದುಬೈನಿಂದ ಬೆಂಗಳೂರಿಗೆ ಕನ್ನಡಿಗರು ಬರುತ್ತಿದ್ದರು. ಈ ವೇಳೆ ಇರಾನ್‌ ಇಸ್ರೇಲ್‌ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಕ್ಷಿಪಣಿ ದಾಳಿಯ ಬೆನ್ನಲ್ಲೇ ವಿಮಾನವನ್ನು ಟರ್ಕಿಯ ಇಸ್ತಾಂಬುಲ್‌ನಲ್ಲಿ ಲ್ಯಾಂಡ್‌ ಮಾಡಲಾಗಿದೆ. ಕ್ಷಿಪಣಿ ದಾಳಿಯಿಂದ ಕರ್ನಾಟಕದ ಪ್ರಯಾಣಿಕರ ಜೊತೆ ಸುಮಾರು 300 ಮಂದಿ ಪ್ರಯಾಣಿಕರು ವಿಮಾನದಲ್ಲಿ ಇದ್ದಾರೆ. ಸದ್ಯ […]

ಇಸ್ರೇಲ್ ಮೇಲೆ ಇರಾನ್‌ ಕ್ಷಿಪಣಿ ದಾಳಿ- ಸಂಕಷ್ಟದಲ್ಲಿ ಕನ್ನಡಿಗರು Read More »

ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್

ಐಫೋನ್‌ 16 ಸರಣಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆ

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 02.  ಆ್ಯಪಲ್ ಕಂಪನಿ ಐಫೋನ್‌ 16 ಸರಣಿಯ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಮೇಡ್-ಇನ್-ಇಂಡಿಯಾ ಐಫೋನ್ 16 ಸರಣಿಯು ಪ್ರಪಂಚದಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕ್ಯಾಲಿಫೋರ್ನಿಯಾದ ಆ್ಯಪಲ್‌ ಪಾರ್ಕ್‌ನಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್‌ನಲ್ಲಿ ʼಇಟ್ಸ್ ಗ್ಲೋಟೈಮ್ʼ ಎಂಬ ವಾರ್ಷಿಕ ಕಾರ್ಯಕ್ರಮದಲ್ಲಿ ಕಂಪನಿಯು ತನ್ನ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಉತ್ತಮ ಕಾರ್ಯಕ್ಷಮತೆಗಾಗಿ ಎಲ್ಲಾ ಮಾದರಿಗಳು ಹೊಸ A18 ಪ್ರೊ ಚಿಪ್‌ಸೆಟ್ ನ್ನು ಒಳಗೊಂಡಿರುತ್ತವೆ.  

ಐಫೋನ್‌ 16 ಸರಣಿಯ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆ Read More »

ತಂತ್ರಜ್ಞಾನ

ನಾಳೆ ವಿಶ್ವಪ್ರಖ್ಯಾತ ದಸರಾ ಉತ್ಸವಕ್ಕೆ ವಿದ್ಯುಕ್ತ ಚಾಲನೆ

(ನ್ಯೂಸ್ ಕಡಬ)newskadaba.com,ಮೈಸೂರು (ಅ.02) : ಮೈಸೂರು ಸಮೀಪದ ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಾಳೆ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಚಾಮುಂಡೇಶ್ವರಿ ದೇವಿಗೆ ನಾಳೆ ಬೆಳಗ್ಗೆ 9.15 ರಿಂದ 9.45 ರ ಒಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ಉತ್ಸವಕ್ಕೆ ಚಾಲನೆ ನೀಡಲಾಗುವುದು. ನಾಡೋಜ, ಖ್ಯಾತ ಸಾಹಿತಿ ಡಾ.ಹಂಪ ನಾಗರಾಜಯ್ಯ ಅವರು ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದು, ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೇರಿದಂತೆ

ನಾಳೆ ವಿಶ್ವಪ್ರಖ್ಯಾತ ದಸರಾ ಉತ್ಸವಕ್ಕೆ ವಿದ್ಯುಕ್ತ ಚಾಲನೆ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
crime, arrest, suspected

1.09 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ: ಮೂವರು ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 02.  ಕೆಲಸದಿಂದ ವಜಾಗೊಳಿಸಿದ್ದಕ್ಕೆ ಮಾಲೀಕನ ಮನೆಯಿಂದ 1.09 ಕೋಟಿ ಮೌಲ್ಯದ ಚಿನ್ನಾಭರಣ ಕದ್ದಿದ್ದ ಆರೋಪಿ ಹಾಗೂ ಆತನ ಇಬ್ಬರು ಸಹಚರರನ್ನು ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬಂಧಿತರನ್ನು ಪ್ರಮುಖ ಆರೋಪಿ ಸನ್ಯಾಸಿ ಮಠ ನಂದೀಶ್, ಹೆಚ್.ಎಂ.ನಂದೀಶ್ ಹಾಗೂ ಪ್ರತಾಪ್ ಕುಮಾರ್ ಎಂದು ಗುರುತಿಸಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಹನುಮೇಗೌಡ ಪತ್ತೆಗೆ ಹುಡುಕಾಟ ಮುಂದುವರೆದಿದೆ.  

1.09 ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ: ಮೂವರು ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೆಂಗಳೂರು: ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧವೇ ಎಫ್.ಐ.ಆರ್ ದಾಖಲು

(ನ್ಯೂಸ್ ಕಡಬ)newskadaba.com,ಬೆಂಗಳೂರು (ಅ.02) : ನಗರದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧವೇ ಎಫ್‌ಐಆರ್ ದಾಖಲಾಗಿರುವ ಘಟನೆ ನಡೆದಿದೆ. ಇನ್ಸ್ ಪೆಕ್ಟರ್ ಹಿತೇಂದ್ರ ಎಂ.ಎಸ್ ವಿರುದ್ಧ ಬೆಂಗಳೂರಿನ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಹಿತೇಂದ್ರ ಅವರು ಜುಲೈ 2016 ರಿಂದ ಫೆಬ್ರವರಿ 2019 ರವರೆಗೆ ಜೆಪಿ ನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದು, ಈ ವೇಳೆ ಕೆಲ ಪ್ರಕರಣಗಲಲ್ಲಿ ವಶಪಡಿಸಿಕೊಂಡಿದ್ದ ಮಾಲನ್ನು ವಾಪಾಸ್ ನೀಡದೇ ದುರುಪಯೋಗಿಸಿಕೊಂಡಿರುವುದು ಬೆಳಕಿಗೆ ಬಂದಿದೆ. .

ಬೆಂಗಳೂರು: ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧವೇ ಎಫ್.ಐ.ಆರ್ ದಾಖಲು Read More »

ಕರ್ನಾಟಕ

’ರಾಷ್ಟ್ರಪಿತ ಗಾಂಧೀಜಿಯವರ 155ನೇ ಜನ್ಮದಿನ’- ಪಾದಯಾತ್ರೆಗೆ ಚಾಲನೆ ನೀಡಿದ ಸಿಎಂ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 02. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನ’ದ ಅಂಗವಾಗಿ ಗಾಂಧಿ ಭವನದಿಂದ ವಿಧಾನಸೌಧದ ವರೆಗಿನ ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಜನ್ಮದಿನ’ದ ಅಂಗವಾಗಿ ವಿಧಾನಸೌಧದ ‘ಗಾಂಧೀಜಿ ಅವರ ಪ್ರತಿಮೆ ಬಳಿ ಭಾವಚಿತ್ರಕ್ಕೆ ಹಾಗೂ ‘ಭಾರತದ ಮಾಜಿ ಪ್ರಧಾನಿಗಳಾದ ದಿವಂಗತ ಲಾಲ್ ಬಹದ್ದೂರ್ ಶಾಸ್ತಿ ಅವರ 120ನೇ ಜನ್ಮದಿನ’ದ ಅಂಗವಾಗಿ ಅವರ ‘ಪ್ರತಿಮೆ ಬಳಿ ಭಾವಚಿತ್ರಕ್ಕೆ ಮಾಲಾರ್ಪಣೆ’

’ರಾಷ್ಟ್ರಪಿತ ಗಾಂಧೀಜಿಯವರ 155ನೇ ಜನ್ಮದಿನ’- ಪಾದಯಾತ್ರೆಗೆ ಚಾಲನೆ ನೀಡಿದ ಸಿಎಂ Read More »

ಕರ್ನಾಟಕ

ರೇಣುಕಾಸ್ವಾಮಿ ಕೊಲೆ ಪ್ರಕರಣ: 3 ಆರೋಪಿಗಳು ಇಂದು ಜೈಲಿನಿಂದ ಬಿಡುಗಡೆ

(ನ್ಯೂಸ್ ಕಡಬ) newskadaba.com ತುಮಕೂರು, ಅ. 02. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಬಳಿಕವೂ ಬಿಡುಗಡೆಯಾಗದೇ ಪರದಾಡುತ್ತಿದ್ದ ಮೂವರು ಆರೋಪಿಗಳು ಇಂದು ತುಮಕೂರು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಸೆ.23 ರಂದು ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಮೂವರು ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್, ಹಾಗೂ ನಿಖಿಲ್‌ಗೆ ಷರತ್ತುಬದ್ಧ ಜಾಮೀನು ದೊರೆತಿತ್ತು. ಎ-16 ಆರೋಪಿ ಕೇಶವಮೂರ್ತಿಗೆ ಹೈಕೋರ್ಟ್ನಿಂದ ಹಾಗೂ ಎ-15 ಆರೋಪಿ ಕಾರ್ತಿಕ್, ಎ-17 ಆರೋಪಿ ನಿಖಿಲ್‌ಗೆ 57ನೇ ಸಿಸಿಹೆಚ್ ಕೋರ್ಟ್‌ನಿಂದ ಷರತ್ತುಬದ್ಧ ಜಾಮೀನು ಸಿಕ್ಕಿದೆ.    

ರೇಣುಕಾಸ್ವಾಮಿ ಕೊಲೆ ಪ್ರಕರಣ: 3 ಆರೋಪಿಗಳು ಇಂದು ಜೈಲಿನಿಂದ ಬಿಡುಗಡೆ Read More »

ಕರ್ನಾಟಕ

ಪಂಪ್ವೆಲ್ ಮಸ್ಜಿದ್ ತಕ್ವಾದಲ್ಲಿ ಬೃಹತ್ ಮೌಲಿದ್ ಸಂಗಮ

(ನ್ಯೂಸ್ ಕಡಬ)newskadaba.com,ಮಂಗಳೂರು (ಅ.02) : ಮಸ್ಜಿದ್ ತಕ್ವಾ ಪಂಪ್‌ವೆಲ್ ಇದರ ಆಶ್ರಯದಲ್ಲಿ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಮಗ್ರಿಬ್ ನಮಾಝ್‌ ನ ಬಳಿಕ ಬೃಹತ್ ಮೌಲಿದ್ ಸಂಗಮ ನಡೆಯಿತು. ಮಸ್ಜಿದ್ ಅಧ್ಯಕ್ಷರಾದ ಡಾ. ಹಾಜಿ ಯೇನಪೋಯ ಅಬ್ದುಲ್ಲ ಕುಞ್ಞಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ‌ಯ್ಯಿದ್ ಅಶ್ರಫ್ ತಂಙಳ್ ಆದೂರು (ಚೇರ್ಮನ್ ಎಜು ಪಾರ್ಕ್ ಮುಡಿಪು) ದುಆ ನೆರವೇರಿಸಿದರು. ಡಾ. ಹಾಜಿ ಎಸ್ಎಂ ರಶೀದ್ ಅವರು ಸ್ವಾಗತ ಕೋರಿದರು. ಯಾಸಿರ್ ಸಖಾಫಿ ಅಲ್ ಅಝ್‌ಹರಿ ಸಂದೇಶ ಭಾಷಣ

ಪಂಪ್ವೆಲ್ ಮಸ್ಜಿದ್ ತಕ್ವಾದಲ್ಲಿ ಬೃಹತ್ ಮೌಲಿದ್ ಸಂಗಮ Read More »

ಕರಾವಳಿ

ನಾಳೆಯಿಂದ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿ ಆರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 02. 9ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆಯಿಂದ ದುಬೈನಲ್ಲಿ ಪಂದ್ಯಾವಳಿ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್‌ನಲ್ಲಿ ಮುಖಾಮುಖಿಯಾಗಲಿದೆ. ದಿನದ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ಕಣಕ್ಕಿಳಿಯಲಿದೆ. ಒಟ್ಟು 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದ್ದು, ಭಾರತ ಚೊಚ್ಚಲ ಟ್ರೋಫಿಯ ಮೇಲೆ ಕಣ್ಣಿಟ್ಟಿದೆ.    

ನಾಳೆಯಿಂದ ಮಹಿಳಾ ಟಿ20 ವಿಶ್ವಕಪ್‌ ಟೂರ್ನಿ ಆರಂಭ Read More »

ಕ್ರೀಡಾ ನ್ಯೂಸ್

ಕುಮಾರ ಪರ್ವತ ಚಾರಣಕ್ಕೆ ನಾಳೆಯಿಂದ ಆನ್ಲೈನ್ ಟಿಕೆಟ್ ಗೆ ಚಾಲನೆ

(ನ್ಯೂಸ್ ಕಡಬ)newskadaba.com, (ಅ.02) : ಕುಮಾರ ಪರ್ವತಕ್ಕೆ ನಿರ್ದಿಷ್ಟ ಸಂಖ್ಯೆಯ ಚಾರಣಿಗರಿಗೆ ಮಾತ್ರವೇ ಅವಕಾಶ ಕಲ್ಪಿಸಲು ಸ್ಥಗಿತಗೊಳಿಸಲಾಗಿದ್ದ ಚಾರಣ ನಾಳೆಯಿಂದ ಆರಂಭವಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ  ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರಕಟಿಸಿದ್ದಾರೆ. 70ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಬೆಂಗಳೂರು ಕಬ್ಬನ್ ಉದ್ಯಾನದಿಂದ ಲಾಲ್ ಬಾಗ್ ವರೆಗೆ ಅರಣ್ಯಇಲಾಖೆ ಆಯೋಜಿಸಿದ್ದ ವನ್ಯಜೀವಿ ಸಂರಕ್ಷಣೆಗಾಗಿ ನಡಿಗೆಯಲ್ಲಿ ಪಾಲ್ಗೊಂಡು ಲಾಲ್ ಬಾಗ್ ನಲ್ಲಿ ಮಾತನಾಡಿದ ಸಚಿವರು, ರಾಜ್ಯದ ಎಲ್ಲ ಚಾರಣ ಪಥಗಳಿಗೂ ಒಂದೇ ಅಂತರ್ಜಾಲ ತಾಣದಲ್ಲಿ ಟಿಕೆಟ್ ಖರೀದಿಸಲು

ಕುಮಾರ ಪರ್ವತ ಚಾರಣಕ್ಕೆ ನಾಳೆಯಿಂದ ಆನ್ಲೈನ್ ಟಿಕೆಟ್ ಗೆ ಚಾಲನೆ Read More »

ಬ್ರೇಕಿಂಗ್ ನ್ಯೂಸ್
Scroll to Top