ಯಥಾಸ್ಥಿತಿಗೆ ಬಂದ ಚಿನ್ನದ ದರ

(ನ್ಯೂಸ್ ಕಡಬ)newskadaba.com ಬೆಂಗಳೂರು, ಅ. 05. : ಕೆಲವು ದಿನಗಳಿಂದ ಸತತವಾಗಿ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ದರ  ಇಂದು ಯಥಾಸ್ಥಿತಿ ಕಾಯ್ದುಕೊಂಡಿದೆ. ಶನಿವಾರ ರಾಜ್ಯ ರಾಜಧಾನಿ ರಾಜ್ಯ ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,120 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,767 ರೂ. ಇದೆ. 22 ಕ್ಯಾರಟ್‌ ಚಿನ್ನದ ದರಗಳ ವಿವರ 22 ಕ್ಯಾರಟ್‌ನ 8 ಗ್ರಾಂ ಚಿನ್ನ 56,960 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 71,210 ರೂ. […]

ಯಥಾಸ್ಥಿತಿಗೆ ಬಂದ ಚಿನ್ನದ ದರ Read More »

ಕರ್ನಾಟಕ

ವಿದ್ಯುತ್ ಆಘಾತಕ್ಕೆ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ)newskadaba.com ಉಪ್ಪಿನಂಗಡಿ, ಅ. 05.  ವಿದ್ಯುತ್ ಆಘಾತಕ್ಕೊಳಗಾಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕೊಯಿಲ ಗ್ರಾಮದ ವಳಕಡಮದ ಕೆರಂತೇಳು ಎಂಬಲ್ಲಿ ಅ.4ರಂದು ನಡೆದಿದೆ. ಮೃತಪಟ್ಟವರನ್ನು ಬಾಬು (52) ಎಂದು ಗುರುತಿಸಲಾಗಿದೆ. ಮನೆಯಲ್ಲಿ ವಿದ್ಯುತ್ ಸ್ವಿಚ್ ಬೋರ್ಡ್‍ಗೆ ಕೈ ಹಾಕಿದಾಗ ಅದರಲ್ಲಿ ವಿದ್ಯುತ್ ಪ್ರವಹಿಸಿ, ಇವರು ವಿದ್ಯುತ್ ಆಘಾತಕ್ಕೊಳಗಾದರು. ತಕ್ಷಣವೇ ಇವರ ಸಂಬಂಧಿಕರು ಅವರನ್ನು ಉಪ್ಪಿನಂಗಡಿಯ ಸಮುದಾಯ ಆಸ್ಪತ್ರೆಗೆ ಕರೆ ತಂದಿದ್ದು, ಇಲ್ಲಿನ ಸಿಬ್ಬಂದಿ ಅವರನ್ನು ತಕ್ಷಣವೇ ಪುತ್ತೂರು ಆಸ್ಪತ್ರೆಗೆ ಸಾಗಿಸಿದ್ದು, ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು

ವಿದ್ಯುತ್ ಆಘಾತಕ್ಕೆ ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಮದುವೆಗೆ ಹೊರಟಿದ್ದ 30 ಮಂದಿ ರಸ್ತೆ ಅಪಘಾತದಲ್ಲಿ ಮೃತ್ಯು

(ನ್ಯೂಸ್ ಕಡಬ)newskadaba.com ಡೆಹ್ರಾಡೂನ್‌, ಅ. 05. : ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ದೇಶವೇ ಬೆಚ್ಚಿ ಬಿದ್ದಿದೆ. ಉತ್ತರಾಖಂಡದ ಪೌರಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಮದುವೆ ದಿಬ್ಬಣ ಹೊರಟಿದ್ದ ಬಸ್ 200 ಅಡಿ ಆಳದ ಕಮರಿಗೆ ಬಿದ್ದು ಸುಮಾರು 30 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ.ಸಾವಿನ ಸಂಖ್ಯೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಬಸ್ ಹರಿದ್ವಾರದ ಲಾಲ್‌ದಾಂಗ್‌ನಿಂದ ಪೌರಿಯ ಬಿರೋನ್‌ಖಾಲ್‌ ಗ್ರಾಮಕ್ಕೆ ಬಸ್‌ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ʼʼಬಿರೋನ್‌ಖಾಲ್‌ ಗ್ರಾಮದಲ್ಲಿ ಆಯೋಜಿಸಿದ್ದ

ಮದುವೆಗೆ ಹೊರಟಿದ್ದ 30 ಮಂದಿ ರಸ್ತೆ ಅಪಘಾತದಲ್ಲಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಮನೆ ಕುಸಿದು ಮಣ್ಣಿನಡಿ ಸಿಲುಕಿದ ವ್ಯಕ್ತಿಯ ರಕ್ಷಣೆ

(ನ್ಯೂಸ್ ಕಡಬ)newskadaba.com ಕೊಪ್ಪಳ, ಅ. 05.  ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಮನೆ ಕುಸಿದು ವ್ಯಕ್ತಿಯೋರ್ವ ಮಣ್ಣಿನಡಿ ಸಿಲುಕಿದ ಘಟನೆ ಗಂಗಾವತಿ ತಾಲೂಕಿನ ಢಣಾಪುರದಲ್ಲಿ ನಡೆದಿದೆ. ಮಣ್ಣಿನಡಿ ಸಿಲುಕಿದ ವ್ಯಕ್ತಿಯನ್ನು ಪ್ರಕಾಶ ಎಂಬವರನ್ನು ಗ್ರಾಮಸ್ಥರು ತೆರವು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಅವರನ್ನು ಗಂಗಾವತಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳೆಯಿಂದ ಶ್ರೀರಾಮನಗರ, ಢಣಾಪುರ ಸೇರಿದಂತೆ ಇತರ ಗ್ರಾಮಗಳಲ್ಲಿ ಮನೆಗಳು ಕುಸಿದಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.  

ಮನೆ ಕುಸಿದು ಮಣ್ಣಿನಡಿ ಸಿಲುಕಿದ ವ್ಯಕ್ತಿಯ ರಕ್ಷಣೆ Read More »

ಕರ್ನಾಟಕ

ಅಕ್ರಮ ಗೋ ಸಾಗಾಟ: ನಾಲ್ವರ ಬಂಧನ

(ನ್ಯೂಸ್ ಕಡಬ)newskadaba.comಬೆಳ್ತಂಗಡಿ, ಅ. 05.  ಬೆಳ್ತಂಗಡಿ ತಾಲ್ಲೂಕಿನ ಮಲವಂತಿಗೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಗೋ ಸಾಗಾಟವನ್ನು ಸ್ಥಳೀಯರ ಸಹಕಾರದೊಂದಿಗೆ ಪತ್ತೆಹಚ್ಚಿದ ಬೆಳ್ತಂಗಡಿ ಪೊಲೀಸರು ಎರಡು ಪಿಕಪ್ ವಾಹನಗಳನ್ನು ಹಾಗೂ ಐದು ದನಗಳನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಚಿಬಿದ್ರೆ ಗ್ರಾಮದ ಪೆರಿಯಡ್ಕ ನಿವಾಸಿ ಯತೀಂದ್ರ , ತೋಟತ್ತಾಡಿ ಗ್ರಾಮದ ಬೆಂದ್ರಾಳ ನಿವಾಸಿ ಅರವಿಂದ, ಚಾರ್ಮಾಡಿ ಗ್ರಾಮದ ನಿವಾಸಿ ಉಸ್ಮಾನ್, ಚಿಬಿದ್ರೆ ಗ್ರಾಮದ ನಿವಾಸಿ ಆರಿಫ್ ಬಂಧಿತ ಆರೋಪಿಗಳು.ಮಲವಂತಿಗೆ ಗ್ರಾಮದ ಎಳನೀರು- ದಿಡುಪೆ ರಸ್ತೆಯಲ್ಲಿ ಅಕ್ರಮವಾಗಿ ಪಿಕಪ್ ವಾಹನದಲ್ಲಿ ದನಗಳನ್ನು

ಅಕ್ರಮ ಗೋ ಸಾಗಾಟ: ನಾಲ್ವರ ಬಂಧನ Read More »

ಕರಾವಳಿ

ಕಡಬ: ಸಿನಿಮೀಯ ಶೈಲಿಯಲ್ಲಿ ಬೈಕಿಗೆ ಢಿಕ್ಕಿ ಹೊಡೆದ ಕಾರು

(ನ್ಯೂಸ್ ಕಡಬ) newskadaba.com ಕಡಬ, ಅ.05. ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವ ಹಾದಿ ಮಧ್ಯೆ ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ. ಮೃತರನ್ನು‌ ಕಡಬ ಹಳೇಸ್ಟೇಷನ್ ನಿವಾಸಿ ಹಸೈನಾರ್ ಎಂದು ಗುರುತಿಸಲಾಗಿದೆ. ಮೃತರು ತನ್ನ ಮನೆಯಿಂದ ಕಡಬ ಕಡೆಗೆ ಬರುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರು ಢಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. ಅಪಘಾತದ ದೃಶ್ಯ ಸ್ಥಳೀಯ ಇಂಡಸ್ಟ್ರೀಸ್ ಒಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ

ಕಡಬ: ಸಿನಿಮೀಯ ಶೈಲಿಯಲ್ಲಿ ಬೈಕಿಗೆ ಢಿಕ್ಕಿ ಹೊಡೆದ ಕಾರು Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಮೈಸೂರು ದಸರಾ-2024-  KSRTCಯಿಂದ 2000 ಹೆಚ್ಚುವರಿ ಬಸ್‌ ಸೇವೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಅ. 05.  ಮೈಸೂರು ದಸರಾ-2024 ಮತ್ತು ದಸರಾ ರಜೆಗಳ ಹಿನ್ನೆಲೆಯಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಿದೆ. ಅಕ್ಟೋಬರ್ 9-ಅಕ್ಟೋಬರ್ 12ರ ನಡುವೆ 2,000 ಹೆಚ್ಚುವರಿ ಬಸ್‌ ಕಾರ್ಯಾಚರಣೆಯನ್ನು ಕೆಎಸ್‌ಆರ್‌ಟಿಸಿ ಶುಕ್ರವಾರ ಪ್ರಕಟಿಸಿದೆ. ಇದಲ್ಲದೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ‘ಫ್ಲೈ ಬಸ್’ ಮೂಲಕ ನೇರ ಸಾರಿಗೆ ಸೌಲಭ್ಯ ಕಲ್ಪಿಸಿದ್ದು, ಮೈಸೂರಿನಲ್ಲಿ ಗಿರಿದರ್ಶಿನಿ, ಜಲದರ್ಶಿನಿ, ದೇವದರ್ಶಿನಿ ವಿಶೇಷ ಪ್ರವಾಸ ಕಾರ್ಯಾಚರಣೆ ಆರಂಭಿಸಿದೆ.  

ಮೈಸೂರು ದಸರಾ-2024-  KSRTCಯಿಂದ 2000 ಹೆಚ್ಚುವರಿ ಬಸ್‌ ಸೇವೆ Read More »

ಕರ್ನಾಟಕ

ಪಾಕ್ ಗೆ ತೆರಳಿರುವ ಭಾರತದ ವಿದೇಶಾಂಗ ಸಚಿವ

(ನ್ಯೂಸ್ ಕಡಬ)newskadaba.comಕುಪ್ವಾರ, ಅ. 05. ಇದೇ ಅಕ್ಟೋಬರ್‌ ಶಾಂಘೈ ಸಹಕಾರ ಸಂಘಟನೆಯ ಸಮಾವೇಶದಲ್ಲಿ ಪಾಲ್ಗೊಳ್ಳಲು ವಿದೇಶಾಂಗ ಸಚಿವ ಎಸ್.ಜೈಶಂಕರ್ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ಹೇಳಿದೆ. ಕಳೆದ 9 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಭಾರತದ ವಿದೇಶಾಂಗ ಸಚಿವರೊಬ್ಬರು ಪ್ರಯಾಣಿಸುತ್ತಿದ್ದಾರೆ ಎನ್ನಲಾಗಿದೆ.ಇದೇ ಅಕ್ಟೋಬರ್‌ 15 ಮತ್ತು 16ರಂದು ಪಾಕಿಸ್ತಾನವು ಇಸ್ಲಾಮಾಬಾದ್‌ನಲ್ಲಿ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆ ಆಯೋಜಿಸುತ್ತಿದೆ. ಇದರಲ್ಲಿ ಪಾಲ್ಗೊಳ್ಳಲು ಭಾರತದ ವಿದೇಶಾಂಗ ಸಚಿವ ಎಸ್‌. ಜೈ ಶಂಕರ್ ಪಾಕ್‌ಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು

ಪಾಕ್ ಗೆ ತೆರಳಿರುವ ಭಾರತದ ವಿದೇಶಾಂಗ ಸಚಿವ Read More »

ಅಂತರ್ರಾಷ್ಟ್ರೀಯ ನ್ಯೂಸ್, ರಾಷ್ಟ್ರೀಯ ನ್ಯೂಸ್

ಭಯೋತ್ಪಾದಕರು, ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ; ಇಬ್ಬರು ಉಗ್ರರ ಹತ್ಯೆ

(ನ್ಯೂಸ್ ಕಡಬ)newskadaba.comಕುಪ್ವಾರ, ಅ. 05. ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ಮಧ್ಯೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸೇನೆಯ ಚಿನಾರ್ ಕಾರ್ಪ್ಸ್, ಭಯೋತ್ಪಾದಕರು ಒಳನುಸುಳುವಿಕೆ ಯತ್ನ ನಡೆಸಿದ್ದಾರೆ ಎಂದು ಗುಪ್ತಚರ ಮಾಹಿತಿ ಬಂದ ಹಿನ್ನೆಲೆ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಕುಪ್ವಾರದ ಗುಗಲ್ಧರ್‌ನಲ್ಲಿ

ಭಯೋತ್ಪಾದಕರು, ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ; ಇಬ್ಬರು ಉಗ್ರರ ಹತ್ಯೆ Read More »

ರಾಷ್ಟ್ರೀಯ ನ್ಯೂಸ್

ಮಂಗಳೂರಿನಿಂದ ಪೊಳಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಚಾಲನೆ

(ನ್ಯೂಸ್ ಕಡಬ)newskadaba.com ಬಂಟ್ವಾಳ, ಅ. 05.  ಮಂಗಳೂರಿನಿಂದ ಪೊಳಲಿಯ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ. ಶ್ರೀ ಪೊಳಲಿ ಕ್ಷೇತ್ರದಿಂದ ಬೆಂಜನಪದವು, ಕಲ್ಪನೆ ,ಕಡೇಗೋಳಿ, ಫರಂಗಿಪೇಟೆ, ಪಡೀಲಿನ ಮೂಲಕ ಮಂಗಳೂರಿಗೆ ಈ ಸರಕಾರಿ ಬಸ್ ನ ವ್ಯವಸ್ಥೆಯು ಇರಲಿದೆ. ಹಲವು ವರ್ಷದಿಂದ ಈ ರೂಟಿನಲ್ಲಿ ಮಂಗಳೂರಿನಿಂದ ಪೊಳಲಿಗೆ ಸರಕಾರಿ ಬಸ್ ನ ವ್ಯವಸ್ಥೆ ಕಲ್ಪಿಸುವಂತೆ ಇಲ್ಲಿನ ನಾಗರಿಕರು‌ ಕೆಎಸ್ ಆರ್ ಟಿಸಿ ಹಾಗೂ ಜಿಲ್ಲಾಡಳಿತಕ್ಕೆ ಮನವಿ‌ ಸಲ್ಲಿಸಿತ್ತು.ಬ್ರಹ್ಮರಕೊಟ್ಲು ಯಕ್ಷಮಿತ್ರ

ಮಂಗಳೂರಿನಿಂದ ಪೊಳಲಿ ಕೆಎಸ್ ಆರ್ ಟಿಸಿ ಬಸ್ ಸಂಚಾರಕ್ಕೆ ಚಾಲನೆ Read More »

ಕರಾವಳಿ
Scroll to Top