ಉಡುಪಿ: ತೈಲ ಸೋರಿಕೆಯಿಂದ ವಾಹನಗಳು ಸ್ಕಿಡ್

(ನ್ಯೂಸ್ ಕಡಬ)newskadaba.com, ಅ. 08.ಉಡುಪಿ:  ಅಪರಿಚಿತ ವಾಹನದಿಂದ ರಸ್ತೆಗೆ ತೈಲ ಸೋರಿಕೆಯಾಗಿ ಹಲವಾರು ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಸವಾರರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಉಡುಪಿಯ ಬಸ್ ನಿಲ್ದಾಣದ ಬಳಿ ಸೋಮವಾರ ನಡೆದಿದೆ. ತೈಲ ಸೋರಿಕೆಯಿಂದ ರಸ್ತೆ ಜಾರುತ್ತಿತ್ತು, ಪರಿಣಾಮ ಏಳೆಂಟು ದ್ವಿಚಕ್ರ ವಾಹನ ಸವಾರರು ಬಿದ್ದಿದ್ದಾರೆ. ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಲಾಗಿದ್ದು, ರಸ್ತೆಯಿಂದ ತೈಲವನ್ನು ತೆರವುಗೊಳಿಸಲು ನೀರು ಸಿಂಪಡಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಅಗ್ನಿಶಾಮಕ ದಳದ ಪದ್ಮನಾಭ ಕಾಂಚನ್, ದಿವಾಕರ್ ಮತ್ತು […]

ಉಡುಪಿ: ತೈಲ ಸೋರಿಕೆಯಿಂದ ವಾಹನಗಳು ಸ್ಕಿಡ್ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್
crime, arrest, suspected

ಅಕ್ರಮ ಮರ ಸಾಗಾಟ ಆರೋಪ: 4 ಮಂದಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಪುತ್ತೂರು, ಅ. 08. ಅರಣ್ಯ ವಿಭಾಗ ವ್ಯಾಪ್ತಿಯ ಕಲೆಂಜಿಮಲೆ ರಕ್ಷಿತಾರಣ್ಯದಿಂದ ಅಕ್ರಮವಾಗಿ ದೂಪದ ಮರದಿಂದ ಸಂಗ್ರಹಿಸಲಾದ ಹಾಲುಮಡ್ಡಿ ಶೇಖರಿಸಿ ಸಾಗಾಟ ಮಾಡುತ್ತಿದ್ದ 4 ಮಂದಿಯನ್ನು ಸೋಮವಾರ ಪುತ್ತೂರು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ಸಾಗಾಟ ನಡೆಸುತ್ತಿದ್ದ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿ ಬಾಯಬೆ ನಿವಾಸಿ ಉಮ್ಮರ್ ಫಾರೂಕ್ (44), ಪಾಟ್ರಕೋಡಿ ನಿವಾಸಿಗಳಾದ ಆಲಿ ಹೈದರ್ ಎಂ.ಕೆ(24), ಹಸೈನಾರ್(30) ಮತ್ತು ತಾಳಿಪಡ್ಪು ನಿವಾಸಿ ಉಮ್ಮರ್

ಅಕ್ರಮ ಮರ ಸಾಗಾಟ ಆರೋಪ: 4 ಮಂದಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಯಿಟಿ: ಕೇಂದ್ರ ಸಚಿವ ಸೋಮಣ್ಣ

(ನ್ಯೂಸ್ ಕಡಬ)newskadaba.com, ಅ. 08. ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಯಿಟಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಬಗ್ಗೆ ಚರ್ಚಿಸಲು ಕೇಂದ್ರಕ್ಕೆ ನಿಯೋಗವನ್ನು ಕರೆದೊಯ್ಯುತ್ತೇನೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಂಗವಾಡಿ ಕಾರ್ಯಕರ್ತೆಯರಿಗೆ ಭರವಸೆ ನೀಡಿದರು. ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ನಗರದ ಶಿಕ್ಷಕರ ಸದನದಲ್ಲಿ ಸೋಮವಾರ ನಡೆದ ವಿಚಾರ ಸಂಕಿರ್ಣದಲ್ಲಿ ಪಾಲ್ಗೊಂಡು ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತರ ಬಗ್ಗೆ ನನಗೆ ಅಪಾರ ಹೆಮ್ಮೆ, ಗೌರವ ಇದೆ. ಎಲ್ಲಾ ಬೇಡಿಕೆಗಳ ಬಗ್ಗೆ

ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರ್ಯಾಚುಯಿಟಿ: ಕೇಂದ್ರ ಸಚಿವ ಸೋಮಣ್ಣ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಭಾರೀ ಮಳೆಗೆ 2 ಕಿ.ಮೀ. ಕೊಚ್ಚಿ ಹೋದ 91ರ ವೃದ್ಧೆ..!

(ನ್ಯೂಸ್ ಕಡಬ)newskadaba.com ಉಡುಪಿ, ಅ. 08. ಜಿಲ್ಲೆಯ ಹೆಬ್ರಿ ತಾಲೂಕು ಕಬ್ಬಿನಾಲೆ ವ್ಯಾಪ್ತಿಯ ಬಲ್ಲಾಡಿ ಗುಮ್ಮಗುಂಡಿ ತೋಡು ಹಾಗೂ ಕೆಲಕಿಲ ನದಿಯಲ್ಲಿ ಭಾನುವಾರ ಉಂಟಾದ ಭಾರಿ ಪ್ರವಾಹದಲ್ಲಿ ವೃದ್ದೆಯೊಬ್ಬಳು ಕೊಚ್ಚಿ ಹೋಗಿದ್ದು, ಆಕೆಯ ಮೃತದೇಹ ಸುಮಾರು ಎರಡು ಕಿ.ಮೀ. ದೂರದ ಬಲ್ಲಾಡಿಯ ಅರ್ಧನಾರೀಶ್ವರ ದೇವಸ್ಥಾನದ ಬಳಿ ಸೋಮವಾರ ಪತ್ತೆಯಾಗಿದೆ. ಮೃತರನ್ನು ಬಲ್ಲಾಡಿ ಬೆಂಡುಗುಡ್ಡೆಯ ಚಂದ್ರು ಗೌಡ್ತಿ (91) ಎಂದು ಗುರುತಿಸಲಾಗಿದೆ. ಬಲ್ಲಾಡಿ ಗುಡ್ಡ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ 2.30ಕ್ಕೆ ಗಾಳಿ, ಗುಡುಗು ಸಹಿತ ಭಾರಿ ಮಳೆ ಸುರಿದಿತ್ತು.

ಭಾರೀ ಮಳೆಗೆ 2 ಕಿ.ಮೀ. ಕೊಚ್ಚಿ ಹೋದ 91ರ ವೃದ್ಧೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ರಾಜ್ಯದಲ್ಲಿ ಟೊಮೆಟೋ ಬೆಲೆ ದುಬಾರಿ

(ನ್ಯೂಸ್ ಕಡಬ)newskadaba.com, ಅ. 08. ಬೆಂಗಳೂರು: ಅಕಾಲಿಕ ಮಳೆಯಿಂದಾಗಿ ಟೊಮೆಟೊ ಬೆಳೆಗೆ ಭಾರೀ ಹಾನಿಯಾಗಿದ್ದು, ಹೀಗಾಗಿ ಮಾರುಕಟ್ಟೆಗೆ ಟೊಮೆಟೋ ಪೂರೈಕೆಯೂ ಕಮ್ಮಿಯಾಗಿದೆ. ಇದರಿಂದ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಟೊಮೆಟೋ ಬೆಲೆ ಏರಿಕೆಯಾಗಿದೆ.ಮಾರುಕಟ್ಟೆಗೆ ಟೊಮೆಟೋ ಬೇಡಿಕೆ ಜಾಸ್ತಿಯಾಗಿದ್ದು, ಪೂರೈಕೆ ಕಡಿಮೆಯಾಗಿದೆ. ಇದರಿಂದ ಟೊಮೆಟೋ ಬೆಲೆ ಕೆಲವು ರಾಜ್ಯಗಳಲ್ಲಿ ಕೆಜಿಗೆ 100 ರೂ.ವರೆಗೆ ತಲುಪಿದೆ. ಹೀಗಾಗಿ ನಿರಂತರವಾಗಿ ಏರುತ್ತಿರುವ ಬೆಲೆಯನ್ನು ನಿಯಂತ್ರಿಸಲು ಸರ್ಕಾರವು ಟೊಮೆಟೋ ದರ ಕೆಜಿಗೆ 65 ರೂ.ಗೆ ಮಾರಾಟ ಮಾಡಲು ನಿರ್ಧರಿಸಿದೆ. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ

ರಾಜ್ಯದಲ್ಲಿ ಟೊಮೆಟೋ ಬೆಲೆ ದುಬಾರಿ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಅರಣ್ಯ ಇಲಾಖೆ ವತಿಯಿಂದ ಕಡಬ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ

(ನ್ಯೂಸ್ ಕಡಬ)newskadaba.com ಕಡಬ, ಅ. 08. ಕರ್ನಾಟಕ ಅರಣ್ಯ ಇಲಾಖೆ ಕರ್ನಾಟಕ ರಾಜ್ಯ ಉಪವಲಯ ಅರಣ್ಯ ಅಧಿಕಾರಿಗಳ ಸಂಘ ಮಂಗಳೂರು ವಿಭಾಗ ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ವನ್ಯಜೀವಿ ಸಪ್ತಹ ಪ್ರಯುಕ್ತ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯ ಆಯ್ಕೆಯ ಸಲುವಾಗಿ ಕಡಬ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯು ಸೈಂಟ್ ಜೋಕಿಮ್ ಸಭಾಭವನದಲ್ಲಿ ನಡೆಯಿತು. ವಲಯ ಅರಣ್ಯ ಅಧಿಕಾರಿ ಸುಬ್ರಹ್ಮಣ್ಯ ವಲಯ ಶ್ರೀ ವಿಮಲ್ ಬಾಬು ಇವರು ಅಧ್ಯಕ್ಷತೆಯನ್ನು ವಹಿಸಿ ಪರಿಸರ ಸಂರಕ್ಷಣೆಯ ಮತ್ತು ವನ್ಯಜೀವಿಗಳ ಮಹತ್ವದ ಬಗ್ಗೆ

ಅರಣ್ಯ ಇಲಾಖೆ ವತಿಯಿಂದ ಕಡಬ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ Read More »

ಕರಾವಳಿ

ಅ.18ರಂದು ಜಾತಿ ಗಣತಿ ವರದಿ ಸಂಪುಟದಲ್ಲಿ ಮಂಡನೆ- ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ)newskadaba.com ಬೆಂಗಳೂರು, ಅ. 08. ಮಹತ್ವದ ವಿದ್ಯಮಾನವೊಂದರಲ್ಲಿ, ‘ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ’ (ಜಾತಿ ಗಣತಿ) ವರದಿಯನ್ನು ಅ.18ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುತ್ತೇವೆ. ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ವರದಿ ಅನುಷ್ಠಾನದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ‘ಇದು ಬರೀ ಹಿಂದುಳಿದ ವರ್ಗಗಳ ಜಾತಿ ಸಮೀಕ್ಷೆ ಅಲ್ಲ. ಕೋಟಿ ಕನ್ನಡಿಗರ ಸಮೀಕ್ಷೆ, ಇಡೀ ದೇಶದಲ್ಲಿ ಇದೇ ಮೊದಲ ಬಾರಿಗೆ ಸಮೀಕ್ಷೆ

ಅ.18ರಂದು ಜಾತಿ ಗಣತಿ ವರದಿ ಸಂಪುಟದಲ್ಲಿ ಮಂಡನೆ- ಸಿಎಂ ಸಿದ್ದರಾಮಯ್ಯ Read More »

ಕರ್ನಾಟಕ

ಮತ್ತೆ ಇಳಿಕೆ ಕಂಡ ಚಿನ್ನದ ದರ

(ನ್ಯೂಸ್ ಕಡಬ)newskadaba.com, ಅ. 08. ಬೆಂಗಳೂರು: ಹಲವು ದಿನಗಳಿಂದ ಸತತವಾಗಿ ಏರಿಕೆಯ ಹಾದಿಯಲ್ಲಿದ್ದ ಚಿನ್ನದ ದರದಲ್ಲಿ ಇಂದು ತುಸು ಇಳಿಕೆ ಕಂಡುಬಂದಿದೆ. ಶನಿವಾರ ಮತ್ತು ಭಾನುವಾರ ಯಥಾಸ್ಥಿತಿ ಕಾಯ್ದುಕೊಂಡಿದ್ದ ಚಿನ್ನದ ಬೆಲೆಯಲ್ಲಿ ಸೋಮವಾರ ಸ್ವಲ್ಪವೇ ಇಳಿಕೆಯಾಗಿತ್ತು. ಮಂಗಳವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 19 ರೂ. ಮತ್ತು ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 21 ರೂ. ಕಡಿಮೆಯಾಗಿದೆ. ಈ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,100 ರೂ.

ಮತ್ತೆ ಇಳಿಕೆ ಕಂಡ ಚಿನ್ನದ ದರ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಲೈಫ್‍ಸ್ಟೈಲ್

KSRTC ಬಸ್- ಬೈಕ್ ಢಿಕ್ಕಿ: ಒಂದೇ ಕುಟುಂಬದ ನಾಲ್ವರು ಮೃತ್ಯು

(ನ್ಯೂಸ್ ಕಡಬ)newskadaba.com ಬೀದರ್, ಅ. 08. KSRTC ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿದ್ದು ಭೀಕರ ಅಪಘಾತ ಸಂಭವಿಸಿದೆ. ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ಗಣೇಶಪುರ ಗ್ರಾಮದವರಾಗಿದ್ದಾರೆ. ಬೈಕ್‌ನಲ್ಲಿ ಜಮೀನಿನ ಕೆಲಸ‌ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಹೈದ್ರಾಬಾದ್‌ನಿಂದ ಬೀದರ್ ಕಡೆಗೆ ಬರುತ್ತಿದ್ದ ಸಾರಿಗೆ ಬಸ್‌ಗೆ ಡಿಕ್ಕಿಯಾಗಿದೆ. ಮೃತರನ್ನು ಗಣೇಶಪುರದ ಸಿದ್ದರಾಮಪ್ಪ (71), ಅವರ ಪುತ್ರಿ ರೇಣುಕಾ (36), ಅಳಿಯ ಜಗನ್ನಾಥ್ (41) ಮತ್ತು ಮೊಮ್ಮಗ ವಿನಯ್ ಕುಮಾರ್

KSRTC ಬಸ್- ಬೈಕ್ ಢಿಕ್ಕಿ: ಒಂದೇ ಕುಟುಂಬದ ನಾಲ್ವರು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

“ಶ್ರೀ ಟೆಕ್ನಾಲಜೀಸ್‌” ಪ್ರಸ್ತುತಪಡಿಸುತ್ತಿದೆ 4ನೇ ವರ್ಷದ ಲಕ್ಕೀ ಸ್ಕೀಮ್; ಕೇವಲ 1 ಸಾವಿರ ಪಾವತಿಸಿ ಸ್ಕೂಟರ್, ಚಿನ್ನ ಮತ್ತು ಫರ್ನಿಚರ್ ನಿಮ್ಮದಾಗಿಸಿ

(ನ್ಯೂಸ್ ಕಡಬ)newskadaba.com ಅ. 09. ಸುಳ್ಯದ ಶ್ರೀ ಟೆಕ್ನಾಲಜಿ ಸೋಲಾರ್ ಆಟೋಮೇಷನ್ ತಂಡದ ನಾಲ್ಕನೇ ವರ್ಷದ ಯಶಸ್ವಿ ಲಕ್ಕಿ ಸ್ಕೀಂ ಗ್ರಾಂಡ್ ಆಗಿ ತಯಾರು ಮಾಡ್ತಿದೆ. ಬಹುಶಃ ಬೇರೆಲ್ಲೂ ಇಂತಹ ಒಂದು ಸುವರ್ಣಾವಕಾಶ ನೀವೆಲ್ಲೂ ಕೇಳಿರಲು ಅಸಾಧ್ಯ. ಇದರ ಇನ್ನೊಂದು ವಿಶೇಷತೆ ಏನೆಂದರೆ ಬಂಪರ್ ಬಹುಮಾನಗಳ ಜೊತೆಗೆ ಪ್ರತೀ ತಿಂಗಳು 5 ಜನರಿಗೆ ಸ್ಪೆಷಲ್ ಗಿಫ್ಟ್ ನ್ನು ಕೂಡಾ ಪಡೆದುಕೊಳ್ಳಬಹುದು. ಇಷ್ಟು ಮಾತ್ರ ಅಲ್ಲದೇ ನಿಮ್ಗೆ ಏನಾದ್ರೂ ಲಕ್ಕಿ ಬಂಪರ್ ವಿನ್ ಆದ್ರೆ ಮುಂದೆ ಹಣ ಕಟ್ಟಬೇಕೆಂದಿಲ್ಲ.  

“ಶ್ರೀ ಟೆಕ್ನಾಲಜೀಸ್‌” ಪ್ರಸ್ತುತಪಡಿಸುತ್ತಿದೆ 4ನೇ ವರ್ಷದ ಲಕ್ಕೀ ಸ್ಕೀಮ್; ಕೇವಲ 1 ಸಾವಿರ ಪಾವತಿಸಿ ಸ್ಕೂಟರ್, ಚಿನ್ನ ಮತ್ತು ಫರ್ನಿಚರ್ ನಿಮ್ಮದಾಗಿಸಿ Read More »

ಕರಾವಳಿ
Scroll to Top