ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ ..!

(ನ್ಯೂಸ್ ಕಡಬ) newskadaba.com  ಕಾಸರಗೋಡು, ಅ. 17. ಎರಡು ವಾರಗಳ ಹಿಂದೆಯಷ್ಟೇ ಕೊಲ್ಲಿ ರಾಷ್ಟ್ರದಿಂದ ಊರಿಗೆ ಮರಳಿದ್ದ ಯುವಕನೊಬ್ಬನ ಮೃತದೇಹ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತಪಟ್ಟ ಯುವಕನನ್ನು ತೂಮಿನಾಡು ಕುಚ್ಚಿಕ್ಕಾಡ್‌ನ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಕೆ.ಎಚ್. ಮುಹಮ್ಮದ್ ಎಂಬವರ ಪುತ್ರ ಮುಹಮ್ಮದ್ ಅನ್ಸಾರ್ (32) ಎಂದು ಗುರುತಿಸಲಾಗಿದೆ. ಕಳೆದ ರಾತ್ರಿ 11 ರ ಸುಮಾರಿಗೆ ಕೊಠಡಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಮುಹಮ್ಮದ್ ಅನ್ಸಾರ್ ಪತ್ತೆಯಾಗಿದ್ದರೆನ್ನಲಾಗಿದ್ದು, ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವವನ್ನು ರಕ್ಷಿಸಲಾಗಲಿಲ್ಲ ಎಂದು ತಿಳಿದು ಬಂದಿದೆ. […]

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆ ..! Read More »

ಕರಾವಳಿ, ಕ್ರೈಮ್ ನ್ಯೂಸ್

ಮೃತಪಟ್ಟ ಸ್ಥಿತಿಯಲ್ಲಿ ಕಾಡಾನೆ ಪತ್ತೆ – ವಿದ್ಯುತ್ ಸ್ಪರ್ಶ ಶಂಕೆ

(ನ್ಯೂಸ್ ಕಡಬ) newskadaba.com ಅ. 17. ಆಕಸ್ಮಿಕವಾಗಿ ವಿದ್ಯುತ್‌ ತಂತಿ ಸ್ಪರ್ಶಿಸಿ ಕಾಡಾನೆಯೊಂದು ಮೃತಪಟ್ಟ ಸ್ಥಿತಿಯಲ್ಲಿ ತಾಲೂಕಿನ ಬಾಳ್ಳುಪೇಟೆ ಬನವಾಸೆ ಗ್ರಾಮದ ಬಿಎಸ್‌ಎನ್‌ಎಲ್‌ ಕಚೇರಿ ಸಮೀಪ ಪತ್ತೆಯಾಗಿದೆ. ಆನೆಯ ಸೊಂಡಿಲು ವಿದ್ಯುತ್ ತಂತಿಗೆ ತಾಗಿ, ವಿದ್ಯುತ್ ಶಾಕ್ ಸಂಭವಿಸಿರಬಹುದು ಎಂದು ಅರಣ್ಯಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ವಲಯ ಅರಣ್ಯಾಧಿಕಾರಿ ಹೇಮಂತ್ ಘಟನೆಯನ್ನು ದೃಢಪಡಿಸಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ತಿಳಿಸಿದ್ದಾರೆ.

ಮೃತಪಟ್ಟ ಸ್ಥಿತಿಯಲ್ಲಿ ಕಾಡಾನೆ ಪತ್ತೆ – ವಿದ್ಯುತ್ ಸ್ಪರ್ಶ ಶಂಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಇಂದಿನ ಚಿನ್ನದ ದರ

(ನ್ಯೂಸ್ ಕಡಬ)newskadaba.com, ಅ. 17 ಬೆಂಗಳೂರು: ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ ಕಂಡಿದೆ. ಚಿನ್ನದ ದರ ಇಂದು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಗುರುವಾರ 22 ಕ್ಯಾರಟ್‌ 1 ಗ್ರಾಂ ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 20 ರೂ. ಮತ್ತು 22 ರೂ. ಏರಿಕೆ ಮಾಡಿದೆ. ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,160 ರೂ. ಮತ್ತು 24 ಕ್ಯಾರಟ್‌ 1 ಗ್ರಾಂ ಚಿನ್ನಕ್ಕೆ 7,811 ರೂ. ಇದೆ. 22 ಕ್ಯಾರಟ್‌ ಚಿನ್ನದ

ಇಂದಿನ ಚಿನ್ನದ ದರ Read More »

ಕರ್ನಾಟಕ

ಬೀದಿನಾಯಿಗಳ ದಾಳಿಗೆ ಬಾಲಕ ಮೃತ್ಯು..!

(ನ್ಯೂಸ್ ಕಡಬ) newskadaba.com  ಚಿತ್ರದುರ್ಗ, ಅ. 17. ಬೀದಿನಾಯಿಗಳ ದಾಳಿಗೆ ಒಳಗಾಗಿ 11 ವರ್ಷದ ಬಾಲಕನೋರ್ವ ಮೃತಪಟ್ಟ ದಾರುಣ ಘಟನೆ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ. ಮೃತಪಟ್ಟ ಬಾಲಕನನ್ನು ರಾಂಪುರ ಗ್ರಾಮದ ಮಿಥುನ್(11) ಎಂದು ಗುರುತಿಸಲಾಗಿದೆ. ಮಿಥುನ್ ಟ್ಯೂಷನ್ ಗೆ ತೆರಳುತ್ತಿದ್ದ ವೇಳೆ ದಾರಿಮಧ್ಯೆ ಬೀದಿನಾಯಿಗಳು ದಾಳಿ ಮಾಡಿವೆ. ಬೀದಿನಾಯಿಗಳು ಮಿಥುನ್ ತಲೆ, ಕೆನ್ನೆ, ಮೈಯೆಲ್ಲಾ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದ್ದವು. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಆಟೋ ಚಾಲಕ ರಾಜಪ್ಪ ಎಂಬವರು ಮಿಥುನ್ ನನ್ನು ನಾಯಿಗಳಿಂದ

ಬೀದಿನಾಯಿಗಳ ದಾಳಿಗೆ ಬಾಲಕ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಬಂಟ್ರ ಶಾಲಾ ಶಿಕ್ಷಕ ರಾಮಕೃಷ್ಣ ಮಲ್ಲಾರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ, ಶಾಲೆಗೆ ಮಸಿ ಬಳಿಯುವ ಕೆಲಸ- ಶಾಲಾಭಿವೃದ್ದಿ ಸಮಿತಿ ಆರೋಪ

(ನ್ಯೂಸ್ ಕಡಬ) newskadaba.com ಅ.17. ಕಡಬ ತಾಲೂಕಿನ ಬಂಟ್ರ-ಮರ್ದಾಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾಮಾಣಿಕ ಶಿಕ್ಷಕರೋರ್ವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಮಾನಿಸಿ ಶಾಲೆಗೆ ಮಸಿಬಳಿಯುವ ಕೆಲಸವಾಗುತ್ತಿದೆ ಎಂದು ಶಾಲಾ ಎಸ್‌ಡಿಎಂಸಿ ಹಾಗೂ ಹಿರಿಯ ವಿದ್ಯಾರ್ಥಿಗಳು ಹೇಳಿದ್ದಾರೆ. ಈ ಕುರಿತು ಎಸ್‌ಡಿಎಂಸಿ ಅಧ್ಯಕ್ಷ ಸಂತೋಷ್ ಕೇನ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಾಲಾ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಮ್ಮ ಶಾಲಾ ಹೆಮ್ಮೆಯ ಶಿಕ್ಷಕ ರಾಮಕೃಷ್ಣ ಮಲ್ಲಾರ ಅವರ ವಿರುದ್ದ ಮೊಹಿದ್ದೀನ್ ಕುಟ್ಟಿ ಹಾಗೂ ಸಾಜಸ್ ಎಂಬವರು ಇಲ್ಲ ಸಲ್ಲದ ಆರೋಪಗಳನ್ನು ಮಾಡಿ

ಕಡಬ: ಬಂಟ್ರ ಶಾಲಾ ಶಿಕ್ಷಕ ರಾಮಕೃಷ್ಣ ಮಲ್ಲಾರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ, ಶಾಲೆಗೆ ಮಸಿ ಬಳಿಯುವ ಕೆಲಸ- ಶಾಲಾಭಿವೃದ್ದಿ ಸಮಿತಿ ಆರೋಪ Read More »

ಕರಾವಳಿ

ಆಹಾರ ವ್ಯರ್ಥ ಕಡೆಗೆ ಶೀಘ್ರ ಕಾನೂನು

(ನ್ಯೂಸ್ ಕಡಬ)newskadaba.com, ಅ. 17 ಬೆಂಗಳೂರು: ಹೋಟೆಲ್, ಕಲ್ಯಾಣ ಮಂಟಪಗಳಲ್ಲಿ ಆಹಾರ ವ್ಯರ್ಥವಾಗುವುದನ್ನು ತಡೆಯಲು ಕಾನೂನು ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಎಚ್.ಮುನಿಯಪ್ಪ ಅವರು ಬುಧವಾರ ಹೇಳಿದರು. ನಮ್ಮ ಅಹಾರ ವ್ಯವಸ್ಥೆಯನ್ನು ಪರಿವರ್ತಿಸಲು ಮತ್ತು ಹಸಿವು ನಿವಾರಿಸುವುದು ಎಂಬ ಚಿಂತನೆಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರ ನೇತೃತ್ವದಲ್ಲಿ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದು, ರಾಜ್ಯದ ಕಟ್ಟ ಕಡೆಯ

ಆಹಾರ ವ್ಯರ್ಥ ಕಡೆಗೆ ಶೀಘ್ರ ಕಾನೂನು Read More »

ಕರ್ನಾಟಕ

ಅ.20ರಂದು ಸೂರಿಕುಮೇರು ಮೈದಾನದಲ್ಲಿ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಸಾಹಿತ್ಯೋತ್ಸವ- ನೂರಾರು ಪ್ರತಿಭೆಗಳ ಕಲರವ

(ನ್ಯೂಸ್ ಕಡಬ) newskadaba.com ಮಾಣಿ, ಅ. 17. ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ವತಿಯಿಂದ “ನಿರೀಕ್ಷೆಗಳ ನೀಲ ನಕ್ಷೆ” ಎಂಬ ಸ್ಲೋಗನ್ ನೊಂದಿಗೆ ಸಾಹಿತ್ಯೋತ್ಸವ ಕಾರ್ಯಕ್ರಮವು ಅಕ್ಟೋಬರ್ 20ರಂದು ಭಾನುವಾರ ಸೂರಿಕುಮೇರು ಮಸೀದಿ ಬಳಿಯ ಆಟದ ಮೈದಾನದಲ್ಲಿ ನಡೆಯಲಿದೆ. ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ ದುಆ ನಡೆಸಿಕೊಡುವರು. ಬಂಡಾಡಿ ಮುಹಮ್ಮದ್ ಹಾಜಿ ಸೂರಿಕುಮೇರು, ಧ್ವಜಾರೋಹಣಗೈಯಲಿರುವರು. ಪತ್ರಕರ್ತ ಅಬ್ದುಲ್ ಲತೀಫ್ ನೇರಳಕಟ್ಟೆ ಸಹಿತ ಆರು ಯುನಿಟ್ ವ್ಯಾಪ್ತಿಯ ಎಲ್ಲಾ

ಅ.20ರಂದು ಸೂರಿಕುಮೇರು ಮೈದಾನದಲ್ಲಿ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಸಾಹಿತ್ಯೋತ್ಸವ- ನೂರಾರು ಪ್ರತಿಭೆಗಳ ಕಲರವ Read More »

ಕರಾವಳಿ

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ಸಂಜೀವ್ ಖನ್ನಾ ಶಿಫಾರಸು

(ನ್ಯೂಸ್ ಕಡಬ) newskadaba.com  ನವದೆಹಲಿ, ಅ. 17. ಸುಪ್ರೀಂಕೋರ್ಟ್ ನ ಮುಂದಿನ ಮುಖ್ಯ ನ್ಯಾಯಾಧೀಶರನ್ನಾಗಿ ಸುಪ್ರೀಂಕೋರ್ಟ್ ನ ಎರಡನೇ ಅತ್ಯಂತ ಹಿರಿಯ ನ್ಯಾಯಾಧೀಶ ಸಂಜೀವ್ ಖನ್ನಾ ಅವರ ಹೆಸರನ್ನು ಕೇಂದ್ರ ಕಾನೂನು ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಶಿಫಾರಸು ಮಾಡಿದ್ದಾರೆ. ಈ ಶಿಫಾರಸನ್ನು ಕೇಂದ್ರ ಸರಕಾರ ಅಂಗೀಕರಿಸಿದರೆ ನ್ಯಾ.ಸಂಜೀವ್ ಖನ್ನಾ ಭಾರತದ ಸುಪ್ರೀಂ ಕೋರ್ಟ್ ನ 51ನೇ ಮುಖ್ಯ ನ್ಯಾಯಮೂರ್ತಿ ಆಗಲಿದ್ದಾರೆ. ಅವರ ಸೇವಾವಧಿ ಇನ್ನು ಆರು ತಿಂಗಳು ಇರಲಿದ್ದು, ಮೇ 13, 2025ರಂದು

ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ಸಂಜೀವ್ ಖನ್ನಾ ಶಿಫಾರಸು Read More »

ರಾಷ್ಟ್ರೀಯ ನ್ಯೂಸ್

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಅ. 17. 2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೂಲಕ ನೀಡಲಾಗುತ್ತಿರುವ ಮೆಟ್ರಿಕ್ ನಂತರದ ಕೋರ್ಸ್ ಗಳಾದ ಸ್ನಾತಕೋತ್ತರ ಪದವಿ, ವೃತ್ತಿಪರ ಪದವಿ ಮತ್ತು ವೃತ್ತಿಪರ ಸ್ನಾತಕೋತ್ತರ ಪದವಿಗಳಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ 1ರ ಅಲೆಮಾರಿ, ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ ಮತ್ತು ವಿದ್ಯಾಸಿರಿ (ಊಟ ಮತ್ತು ವಸತಿ ಸಹಾಯ ಯೋಜನೆ) ಸೌಲಭ್ಯಕ್ಕಾಗಿ ಆನ್‍ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ Read More »

ಕರಾವಳಿ

ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಆಯೋಜನೆಯಲ್ಲಿ ‘ರೋಟರಿ ಕಂಬಳ’

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಅ. 17. ತುಳುನಾಡಿನ ಜನಪದ ಕ್ರೀಡೆಗಳಲ್ಲಿ ಕಂಬಳವೂ ಒಂದು, ಕರಾವಳಿಯಲ್ಲಿ ಪ್ರತೀವರ್ಷ ವಿವಿಧ ಕಂಬಳಸಮಿತಿಗಳು ಕಂಬಳ ವನ್ನು ಆಯೋಜಿಸುತ್ತಿದ್ದು, ಕಳೆದ ವರ್ಷ ಬೆಂಗಳೂರಿನಲ್ಲಿಯೂ ಕಂಬಳ ಆಯೋಜನೆಯಾಗಿ ದೇಶದ ಗಮನ ಸೆಳೆದಿತ್ತು. ಇದೀಗ ಬಂಟ್ವಾಳ ತಾಲೂಕಿನ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ತನ್ನ ಪಬ್ಲಿಕ್ ಇಮೇಜ್ ಕಾರ್ಯಕ್ರಮವಾಗಿ ಮರಿಕೋಣಗಳಿಗಾಗಿ “ರೋಟರಿ ಕಂಬಳ”ವನ್ನು ಆಯೋಜಿಸುವ ಮೂಲಕ ಗಮನ ಸೆಳೆದಿದ್ದು, ಅ.19 ರ ಶನಿವಾರದಂದು ಸಿದ್ಧಕಟ್ಟೆ ಕೊಡಂಗೆಯ ವೀರವಿಕ್ರಮ ಕಂಬಳ ಸಮಿತಿ ಪ್ರತೀವರ್ಷ ಆಯೋಜಿಸುವ ಕಂಬಳ

ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಆಯೋಜನೆಯಲ್ಲಿ ‘ರೋಟರಿ ಕಂಬಳ’ Read More »

ಕರಾವಳಿ
Scroll to Top