ದ್ವಿಚಕ್ರ ವಾಹನ ಶೋ ರೂಂನಲ್ಲಿ ಅಗ್ನಿ ಅವಘಡ: ಓರ್ವ ವಶಕ್ಕೆ

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಅ. 21. ದ್ವಿಚಕ್ರ ವಾಹನ ಶೋ ರೂಂನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ಎನ್‌.ಟಿ.ರಸ್ತೆ ಜಂಕ್ಷನ್‌ನಲ್ಲಿರುವ ಕಾರ್ತಿಕ್‌ ಮೋಟರ್ಸ್‌ ಶೋ ರೂಂನಲ್ಲಿ‌ ನಡೆದಿದೆ. ಬೆಂಕಿಯಿಂದಾಗಿ ಶೋ ರೂಂನಲ್ಲಿ ಕೆಲವು ವಾಹನಗಳಿಗೆ ಹಾನಿಯಾಗಿದ್ದು, ಒಳಾಂಗಣ ವಿನ್ಯಾಸ ಸುಟ್ಟು ಹೋಗಿದೆ. ಬೆಂಕಿ ಆವರಿಸುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಘಟನೆ ಸಂಬಂಧ ಮಾಜಿ ಉದ್ಯೋಗಿಯೇ ಶೋ ರೂಂಗೆ ಬೆಂಕಿ ಹಚ್ಚಿದ್ದಾನೆ […]

ದ್ವಿಚಕ್ರ ವಾಹನ ಶೋ ರೂಂನಲ್ಲಿ ಅಗ್ನಿ ಅವಘಡ: ಓರ್ವ ವಶಕ್ಕೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
Crime

ಮೆಡಿಕಲ್ ಶಾಪ್ ಮಾಲಕನಿಗೆ ಹಲ್ಲೆ- ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಅ. 21. ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ವಿಷಯಕ್ಕೆ ಸಂಬಂಧಿಸಿ ವಾಟ್ಸ್‌ ಆ್ಯಪ್‌ ನಲ್ಲಿ ಮೆಸೇಜ್ ಮಾಡಿದ್ದಕ್ಕಾಗಿ ಮೆಡಿಕಲ್ ಮಾಲೀಕನಿಗೆ ತಂಡವೊಂದು ತೀವ್ರವಾಗಿ ಹಲ್ಲೆ ನಡೆಸಿದ ಘಟನೆ ದೇರಳಕಟ್ಟೆಯಲ್ಲಿ ರವಿವಾರ ನಡೆದಿರುವುದು ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದವರನ್ನು ದೇರಳಕಟ್ಟೆಯ ಮೆಡಿಕಲ್ ಶಾಪ್‌ ಮಾಲಕ ಅಬ್ದುಲ್ ಜಲೀಲ್ ಎಂದು ಗುರುತಿಸಲಾಗಿದೆ. ಕೊಣಾಜೆ ಠಾಣಾ ವ್ಯಾಪ್ತಿಯ ಯುವಕನೊಬ್ಬ ಇತ್ತೀಚೆಗೆ ಮಂಗಳೂರಿನ ಬಂದರ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೈದಿದ್ದ ಎನ್ನಲಾಗಿದ್ದು, ಈ ವಿಚಾರವಾಗಿ ಅಬ್ದುಲ್ ಜಲೀಲ್ ವಾಟ್ಸ್‌ ಆ್ಯಪ್ ಮೂಲಕ ವೈಯಕ್ತಿಕವಾಗಿ

ಮೆಡಿಕಲ್ ಶಾಪ್ ಮಾಲಕನಿಗೆ ಹಲ್ಲೆ- ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಎಸ್ಎಸ್ಎಫ್ ಮಾಣಿ ಸೆಕ್ಟರ್ ಸಾಹಿತ್ಯೋತ್ಸವ ಪ್ರೌಢ ಸಮಾಪ್ತಿ- ಸತತ ಐದನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ಪಾಟ್ರಕೋಡಿ ಯುನಿಟ್..!

(ನ್ಯೂಸ್ ಕಡಬ) newskadaba.com ಅ.21. ಕರ್ನಾಟಕ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಸಾಹಿತ್ಯೋತ್ಸವ -2024 ಕಾರ್ಯಕ್ರಮವು ಸೂರಿಕುಮೇರು ಆಟದ ಮೈದಾನದಲ್ಲಿ ಭಾನುವಾರದಂದು ಅದ್ದೂರಿಯಾಗಿ ನಡೆಯಿತು. ಪಾಟ್ರಕೋಡಿ ಯುನಿಟ್ ಅತ್ಯಧಿಕ ಅಂಕಗಳೊಂದಗೆ ಪ್ರಥಮ ಸ್ಥಾನ ಪಡೆದು ಚಾಂಪಿಯನ್ ಪಟ್ಟ ಅಲಂಕರಿಸಿತು. ದ್ವಿತೀಯ ಸ್ಥಾನವನ್ನು ಸೂರಿಕುಮೇರು ಯುನಿಟ್ ಪಡೆಯಿತು. ದಾರುಲ್ ಇರ್ಶಾದ್ ಶಿಲ್ಪಿ ಖಾಝಿ ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರು ಧ್ವಜಾರೋಹಣ ನೆರವೇರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಸ್ಸೆಸ್ಸೆಫ್ ಮಾಣಿ ಸೆಕ್ಟರ್ ಅಧ್ಯಕ್ಷರಾದ ಕೆ.ಪಿ.ಸಾಬಿತ್ ಪಾಟ್ರಕೋಡಿರವರ

ಎಸ್ಎಸ್ಎಫ್ ಮಾಣಿ ಸೆಕ್ಟರ್ ಸಾಹಿತ್ಯೋತ್ಸವ ಪ್ರೌಢ ಸಮಾಪ್ತಿ- ಸತತ ಐದನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ ಪಾಟ್ರಕೋಡಿ ಯುನಿಟ್..! Read More »

ಕರಾವಳಿ

ಮೂರು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆಗೆ ಯತ್ನ

(ನ್ಯೂಸ್ ಕಡಬ) newskadaba.com ಕಲಬುರಗಿ, ಅ. 21. ಕ್ಷುಲ್ಲಕ ವಿಷಯಕ್ಕೆ ತಾಯಿಯೊಬ್ಬಳು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿಂಚೋಳಿ ತಾಲೂಕಿನ ಜಂಗ್ಲಿ ಪೀರ್ ತಾಂಡಾದಲ್ಲಿ ಇಂದು ನಡೆದಿರುವುದಾಗಿ ವರದಿಯಾಗಿದೆ. ಮೂವರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೀತಾಬಾಯಿ ಸಂತೋಷ ರಾಠೋಡ್ (30) ಎಂಬವರು ಈ ಕೃತ್ಯ ಎಸಗಿದ ಮಹಿಳೆ. ಮಕ್ಕಳಾದ ಚೈತನ್ಯ (4) ಧನುಷ್ (3) ಮತ್ತು ಲಕ್ಷ್ಮೀ (ಒಂದೂವರೆ ತಿಂಗಳ ಮಗು)ಗೆ ವಿಷ ಕುಡಿಸಿದ ಗೀತಾಬಾಯಿ ಸಹ ವಿಷ

ಮೂರು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆಗೆ ಯತ್ನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಡಿಕೆ. ಶಿವಕುಮಾರ್ ವಿರುದ್ಧ ಕೇಸ್: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಬಿಐ

(ನ್ಯೂಸ್ ಕಡಬ) newskadaba.com ಅ.21 ಬೆಂಗಳೂರು:  ಡಿಸಿಎಂ ಡಿಕೆ ಶಿವಕುಮಾರ್  ವಿರುದ್ಧ ದಾಖಲಿಸಲಾಗದ್ದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಮುಂದುವರಿಸುವುದಕ್ಕೆ ಸಂಬಂಧಿಸಿದಂತೆ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಕುರಿತು ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ಸಿಎಂ ಸಿದ್ದರಾಮಯ್ಯ ಸರಕಾರ ಹಿಂದೆಗೆದುಕೊಂಡಿತ್ತು. ಡಿ.ಕೆ.ಶಿವಕುಮಾರ್ ವಿರುದ್ಧ ಸಿಬಿಐ ತನಿಖೆ ಆದೇಶ ಹಿಂಪಡೆದ ಸರ್ಕಾರದ ಕ್ರಮ ಪ್ರಶ್ನಿಸಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಬೆನ್ನಲ್ಲೇ, ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಿಬಿಐ ಸುಪ್ರೀಂ

ಡಿಕೆ. ಶಿವಕುಮಾರ್ ವಿರುದ್ಧ ಕೇಸ್: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಸಿಬಿಐ Read More »

ಕರ್ನಾಟಕ
Death, deadbody, Waterfall

ಕೆರೆಗೆ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಮೃತ್ಯು

(ನ್ಯೂಸ್ ಕಡಬ) newskadaba.com ಮಂಡ್ಯ, ಅ. 21. ಮದ್ದೂರು ತಾಲೂಕಿನ ದೇಶಹಳ್ಳಿ (ಮದ್ದೂರು) ಕೆರೆಯಲ್ಲಿ ಈಜುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ. ಮೃತಪಟ್ಟ ಬಾಲಕರನ್ನು ಮದ್ದೂರು ತಾಲೂಕಿನ ಶಂಕರಪುರ ಗ್ರಾಮದ ಸೋಮು ಅವರ ಪುತ್ರ ಮುತ್ತುರಾಜು(14) ಮತ್ತು ತೇಜಸ್ ಅವರ ಪುತ್ರ ರಂಜು(17) ಎಂದು ಗುರುತಿಸಲಾಗಿದೆ. ಇಬ್ಬರು ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೆ ಕೆರೆಗೆ ಈಜಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃತ ಯುವಕ ಮುತ್ತು ರಾಜು ಎಸೆಸ್ಸಲ್ಸಿ ವ್ಯಾಸಂಗ ಮಾಡುತ್ತಿದ್ದು, ರಂಜು

ಕೆರೆಗೆ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ವಾಣಿಜ್ಯ ಸಂಕೀರ್ಣ, ಅಪಾರ್ಟ್ ಮೆಂಟ್‍ ಗಳಿಗೆ ಪರಿಸರ ಮಂಡಳಿ ಸಮ್ಮತಿ ಪತ್ರ ಕಡ್ಡಾಯ

(ನ್ಯೂಸ್ ಕಡಬ) newskadaba.com ಅ. 21. ಕೈಗಾರಿಕೆಗಳು, ಉದ್ದಿಮೆಗಳು, ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ಕ್ಲಿನಿಕ್‍ ಗಳು, ಮಿಲ್‍ಗಳು, ವಾಣಿಜ್ಯ ಸಂಕಿರ್ಣಗಳು, ವಸತಿ ಸಮುಚ್ಚಯಗಳು (ಅಪಾರ್ಟ್‍ಮೆಂಟ್‍ಗಳು), ಸಮುದಾಯ ಭವನಗಳು, ಕಲ್ಯಾಣ ಮಂಟಪಗಳು ನಿಯಾಮಾನುಸಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸ್ಥಾಪನ ಸಮ್ಮತಿ/ ಚಾಲನಾ ಸಮ್ಮತಿ ಪತ್ರ ಪಡೆಯುವುದು ಕಡ್ಡಾಯವಾಗಿರುತ್ತದೆ. ಈ ಹಿನ್ನಲೆಯಲ್ಲಿ ಮಂಡಳಿಯಿಂದ ಸ್ಥಾಪನ ಸಮ್ಮತಿ/ ಚಾಲನಾ ಸಮ್ಮತಿ ಪತ್ರ ಪಡೆದು ನವೀಕರಣಗೊಳಿಸದೇ ಹಾಗೂ ಪಡೆಯದೆ ಕಾರ್ಯನಿರ್ವಹಿಸುತ್ತಿರುವವರಿಗೆ ಮಂಡಳಿಯಿಂದ ಸ್ಥಾಪನಾ ಸಮ್ಮತಿ ಪತ್ರ ಪಡೆದು ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ತಪ್ಪಿದಲ್ಲಿ

ವಾಣಿಜ್ಯ ಸಂಕೀರ್ಣ, ಅಪಾರ್ಟ್ ಮೆಂಟ್‍ ಗಳಿಗೆ ಪರಿಸರ ಮಂಡಳಿ ಸಮ್ಮತಿ ಪತ್ರ ಕಡ್ಡಾಯ Read More »

ಕರಾವಳಿ

ವಿಶ್ವ ಅಯೋಡಿನ್ ಕೊರತೆಯ ನ್ಯೂನ್ಯತೆಗಳ ನಿಯಂತ್ರಣ ದಿನ

(ನ್ಯೂಸ್ ಕಡಬ) newskadaba.com ಅ. 21. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಘಟಕ ಹಾಗೂ ಪದುವಾ ಪ್ರೌಢಶಾಲೆ ನಂತೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ವಿಶ್ವ ಅಯೋಡಿನ್ ಕೊರತೆಯ ನ್ಯೂನ್ಯತೆಗಳ ನಿಯಂತ್ರಣ ದಿನ ಕಾರ್ಯಕ್ರಮವನ್ನು ಅಕ್ಟೋಬರ್ 21 ರಂದು ಬೆಳಿಗ್ಗೆ 10 ಗಂಟೆಗೆ ಪದುವಾ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಉದ್ಘಾಟಿಸಲಿದ್ದು, ಪದುವಾ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ

ವಿಶ್ವ ಅಯೋಡಿನ್ ಕೊರತೆಯ ನ್ಯೂನ್ಯತೆಗಳ ನಿಯಂತ್ರಣ ದಿನ Read More »

ಕರಾವಳಿ

ಕನ್ನಡ ರಾಜ್ಯೋತ್ಸವ: ಎಲ್ಲಾ ಸಿದ್ದತೆಗೆ ಅಪರ ಜಿಲ್ಲಾಧಿಕಾರಿ ಸೂಚನೆ

(ನ್ಯೂಸ್ ಕಡಬ) newskadaba.com ಅ. 21. ಜಿಲ್ಲಾಡಳಿತ ವತಿಯಿಂದ ನವೆಂಬರ್ 1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆಗಳು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್.ಜಿ ಸೂಚಿಸಿದ್ದಾರೆ. ಅವರು ಶುಕ್ರವಾರದಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನವೆಂಬರ್ 1ರಂದು ನೆಹರೂ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು. ಎಲ್ಲ ಇಲಾಖೆಗಳು

ಕನ್ನಡ ರಾಜ್ಯೋತ್ಸವ: ಎಲ್ಲಾ ಸಿದ್ದತೆಗೆ ಅಪರ ಜಿಲ್ಲಾಧಿಕಾರಿ ಸೂಚನೆ Read More »

ಕರಾವಳಿ

ಕಾವೇರಿ – ಮೇಕೆದಾಟು ವಿವಾದ: ಕರ್ನಾಟಕಕ್ಕೆ ತಮಿಳು ಪ್ರಜೆಗಳ ಬೆಂಬಲ

(ನ್ಯೂಸ್ ಕಡಬ) newskadaba.com ಅ.21 ಬೆಂಗಳೂರು:  ಕಾವೇರಿ ನದಿ ನೀರು ಹಂಚಿಕೆ ಮತ್ತು ಮೇಕೆದಾಟು ಯೋಜನೆಗಳಲ್ಲಿ ತಡೆಗೋಡೆಯಾಗಿ ನಿಂತಿರುವ ತಮಿಳುನಾಡು ಕ್ಯಾತೆ ಮುಂದುವರೆದಿರುವಂತೆಯೇ ಇತ್ತ ಕರ್ನಾಟಕ ತನ್ನ ಹಕ್ಕುಗಳನ್ನು ಸಾಧಿಸಿಕೊಳ್ಳುವಲ್ಲಿ ತಮಿಳು ಪ್ರಜೆಗಳು ರಾಜ್ಯದ ಬೆನ್ನಿಗೆ ನಿಂತಿದ್ದಾರೆ. ಕರ್ನಾಟಕದ ಹಕ್ಕುಗಳನ್ನು ವಿಶೇಷವಾಗಿ ಭಾಷೆ, ನೆಲ, ಜಲ, ಗಡಿ, ಇತರ ವಿಷಯಗಳ ರಕ್ಷಣೆಯಲ್ಲಿ ಕರ್ನಾಟಕ ಸರ್ಕಾರವನ್ನು ಬೆಂಬಲಿಸುವುದು ಸೇರಿದಂತೆ ಒಟ್ಟು 35 ನಿರ್ಣಯಗಳನ್ನು ಕನ್ನಡಿಗರು ಮತ್ತು ತಮಿಳರ ಏಕತೆಯ ಸಾಂಸ್ಕೃತಿಕ ಸಮ್ಮೇಳನದಲ್ಲಿ ತೆಗೆದುಕೊಳ್ಳಲಾಗಿದೆ.ಪ್ರಮುಖವಾಗಿ ಕಾವೇರಿ ಮತ್ತು ಮಹದಾಯಿ ನೀರು

ಕಾವೇರಿ – ಮೇಕೆದಾಟು ವಿವಾದ: ಕರ್ನಾಟಕಕ್ಕೆ ತಮಿಳು ಪ್ರಜೆಗಳ ಬೆಂಬಲ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top