ರಾಜ್ಯ ಸರ್ಕಾರ: ಅರಣ್ಯ ಭೂಮಿ ಸಮೀಕ್ಷೆಗೆ 15 ದಿನಗಳಲ್ಲಿ ಸಮಿತಿ ರಚನೆ

(ನ್ಯೂಸ್ ಕಡಬ) newskadaba.com ಅ.25, ಬೆಂಗಳೂರು: ಸಚಿವ ಈಶ್ವರ್ ಪರಮೇಶ್ವರ್ ರವರು ರಾಜ್ಯದ ಅಧಿಸೂಚಿತ, ದಾಖಲಿತ ಅರಣ್ಯ ದಾಖಲೀಕರಣ ಮತ್ತು ಪರಿಭಾವಿತ ಅರಣ್ಯ ಭೂಮಿಯ ನ್ಯೂನತೆ ಸರಿಪಡಿಸುವ ಸಂಬಂಧ ತಜ್ಞರ ಸಮಿತಿಯನ್ನು 15 ದಿನಗಳಲ್ಲಿ ರಚನೆ ಮಾಡಲಾಗುವುದು ಎಂದು  ಗುರುವಾರ ಹೇಳಿದರು. ವನ್ ಸಂರಕ್ಷಣ ಏವಂ ಸಂವರ್ಧನ ಅಧಿನಿಯಮ 1980ರ ನಿಯಮ 16ರಡಿ ಹೊಸ ತಜ್ಞರ ಸಮಿತಿ ರಚಿಸಲು ಅವಕಾಶವಿದ್ದು, ಈ ಸಮಿತಿ ರಾಜ್ಯದ ಅಧಿಸೂಚಿತ ಮತ್ತು ದಾಖಲಿಸಲಾದ ಅರಣ್ಯ ಪ್ರದೇಶದ ಸಮಗ್ರ ದಾಖಲೀಕರಣ ಮತ್ತು ಪರಿಭಾವಿತ […]

ರಾಜ್ಯ ಸರ್ಕಾರ: ಅರಣ್ಯ ಭೂಮಿ ಸಮೀಕ್ಷೆಗೆ 15 ದಿನಗಳಲ್ಲಿ ಸಮಿತಿ ರಚನೆ Read More »

ಕರ್ನಾಟಕ

ಅರಣ್ಯ ಭೂಮಿ ಸಮೀಕ್ಷೆಗೆ 15 ದಿನಗಳಲ್ಲಿ ಸಮಿತಿ ರಚನೆ: ರಾಜ್ಯ ಸರ್ಕಾರ

(ನ್ಯೂಸ್ ಕಡಬ) newskadaba.com ಅ.25, ಬೆಂಗಳೂರು: ರಾಜ್ಯದ ಅಧಿಸೂಚಿತ, ದಾಖಲಿತ ಅರಣ್ಯ ದಾಖಲೀಕರಣ ಮತ್ತು ಪರಿಭಾವಿತ ಅರಣ್ಯ ಭೂಮಿಯ ನ್ಯೂನತೆ ಸರಿಪಡಿಸುವ ಸಂಬಂಧ ತಜ್ಞರ ಸಮಿತಿಯನ್ನು 15 ದಿನಗಳಲ್ಲಿ ರಚನೆ ಮಾಡಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆಯವರು ಗುರುವಾರ ಹೇಳಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಭೇಟಿ ಮಾಡಿದ ಬಳಿಕ ಅರಣ್ಯ ಸಚಿವ ಈಶ್ವರ್ ಬಿ ಖಂಡ್ರೆ ಈ ವಿಷಯ ತಿಳಿಸಿದರು. ವನ್ ಸಂರಕ್ಷಣ ಏವಂ ಸಂವರ್ಧನ ಅಧಿನಿಯಮ 1980ರ ನಿಯಮ 16ರಡಿ ಹೊಸದಾಗಿ ತಜ್ಞರ

ಅರಣ್ಯ ಭೂಮಿ ಸಮೀಕ್ಷೆಗೆ 15 ದಿನಗಳಲ್ಲಿ ಸಮಿತಿ ರಚನೆ: ರಾಜ್ಯ ಸರ್ಕಾರ Read More »

ಕರ್ನಾಟಕ

ಬಾಬಾ ಸಿದ್ದಿಕ್ ಪುತ್ರ ಅಜಿತ್ ಪವಾರ್ ಪಕ್ಷಕ್ಕೆ ಸೇರ್ಪಡೆ

(ನ್ಯೂಸ್ ಕಡಬ) newskadaba.com ಮುಂಬೈ, ಅ.25. ಅಕ್ಟೋಬರ್ 12 ರಂದು ಗುಂಡೇಟಿಗೆ ಬಲಿಯಾದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರ ಪುತ್ರ ಜೀಶನ್ ಸಿದ್ದಿಕ್ ಅವರು ಇಂದು ಬೆಳಿಗ್ಗೆ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ನೇತೃತ್ವದ ಬಣವನ್ನು ಸೇರಿದ್ದಾರೆ. ಮಹಾರಾಷ್ಟ್ರ ವಿಧಾನ ಪರಿಷತ್ತಿನ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ವಿರುದ್ಧ ಮತ ಚಲಾಯಿಸಿದ ಆರೋಪದ ಮೇಲೆ ಅವರನ್ನು ಆಗಸ್ಟ್‌ ನಲ್ಲಿ ಕಾಂಗ್ರೆಸ್‌ನಿಂದ ಉಚ್ಚಾಟಿಸಲಾಗಿತ್ತು. ಇದೀಗ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ)

ಬಾಬಾ ಸಿದ್ದಿಕ್ ಪುತ್ರ ಅಜಿತ್ ಪವಾರ್ ಪಕ್ಷಕ್ಕೆ ಸೇರ್ಪಡೆ Read More »

ರಾಷ್ಟ್ರೀಯ ನ್ಯೂಸ್
Death, deadbody, Waterfall

ಬೆಳ್ಳಾರೆ: ಪಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ – ಗಾಯಗೊಂಡಿದ್ದ ಮಹಿಳೆ ಮೃತ್ಯು..!

(ನ್ಯೂಸ್ ಕಡಬ) newskadaba.com ಅ.25. ವ್ಯಕ್ತಿಯೋರ್ವ ತನ್ನ ತಮ್ಮನ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದಲ್ಲಿ ತೀವ್ರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟ ಕುರಿತು ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದಿಂದ ವರದಿಯಾಗಿದೆ. ಮೃತಪಟ್ಟವರನ್ನು ಜಯಭಾರತಿ ಎಂದು ಗುರುತಿಸಲಾಗಿದೆ. ಅ.12ರಂದು ರಾತ್ರಿ ಮನೆಯ ಕೋಣೆಯಲ್ಲಿ ಮಲಗಿದ್ದ ಜಯಭಾರತಿ ಎಂಬವರ ಪತಿಯ ಅಣ್ಣ ಶಂಕರ ನಾಯಕ್ ಎಂಬಾತ ಕಿಟಕಿಯ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಎನ್ನಲಾಗಿದ್ದು, ಘಟನೆಯಲ್ಲಿ ಇಬ್ಬರೂ ಗಾಯಗೊಂಡಿದ್ದರು. ಶೇ. 80 ರಷ್ಟು ಗಾಯಗೊಂಡಿದ್ದ ಮಹಿಳೆ ಜಯಭಾರತಿ

ಬೆಳ್ಳಾರೆ: ಪಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ – ಗಾಯಗೊಂಡಿದ್ದ ಮಹಿಳೆ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಇಂದಿನ ಹವಾಮಾನ ವರದಿ

(ನ್ಯೂಸ್ ಕಡಬ) newskadaba.com ಅ.25, ಬೆಂಗಳೂರು: ಇಂದು ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರ, ಹಾಸನ, ಕೊಡಗು, ಮಂಡ್ಯ, ಚಾಮರಾಜನಗರ, ಮೈಸೂರು, ತುಮಕೂರು, ರಾಮನಗರ ಜಿಲ್ಲೆಗಳಲ್ಲಿ ಸಾಧಾರಣ ಅಥವಾ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಇನ್ನು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಗುರ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಅ.26ರಂದು ದಕ್ಷಿಣ ಒಳಗಿನ ಕರ್ನಾಟಕದ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ ಕರ್ನಾಟಕ ಮತ್ತು ಉತ್ತರ ಒಳ

ಇಂದಿನ ಹವಾಮಾನ ವರದಿ Read More »

ಕರ್ನಾಟಕ

ಗಾಳಿಪಟ ಹಾರಾಟಕ್ಕೆ ಹತ್ತಿಯಿಂದ ತಯಾರಿಸಿದ ದಾರವನ್ನು ಮಾತ್ರ ಬಳಸಬೇಕು- ರಾಜ್ಯ ಸರ್ಕಾರ ಆದೇಶ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.25. ಗಾಳಿಪಟ ಹಾರಿಸಲು ಚೀನಿ ದಾರ ಅಥವಾ ಮಾಂಜಾ ದಾರವನ್ನು ಬಳಸುವುದನ್ನು ಸರ್ಕಾರ ನಿಷೇಧಿಸಿದೆ. ಕೇವಲ ಹತ್ತಿಯಿಂದ ತಯಾರಿಸಿದ ದಾರವನ್ನು ಮಾತ್ರ ಬಳಸುವಂತೆ ಸೂಚನೆ ನೀಡಲಾಗಿದೆ. ರಾಜ್ಯ ಸರ್ಕಾರ 2016ರ ಅಧಿಸೂಚನೆಗೆ ಕೆಲ ತಿದ್ದುಪಡಿಯನ್ನು ಮಾಡಿ ಆದೇಶವನ್ನು ಹೊರಡಿಸಿದೆ. ಯಾವುದೇ ವ್ಯಕ್ತಿ, ನೈಲಾನ್​ ಮತ್ತು ಗಾಜು ಮತ್ತಿತರ ಅಪಾಯಕಾರಿ ವಸ್ತುಗಳನ್ನು ಮಾರಾಟ ಮಾಡುವಂತಿಲ್ಲ. ಚೀನಿ ದಾರ ಅಥವಾ ಮಾಂಜಾ ದಾರ ತಯಾರು, ದಾಸ್ತಾನು ಮಾಡುವುದವುದನ್ನೂ ನಿಷೇಧಿಸಲಾಗಿದೆ. ಒಂದು ವೇಳೆ ಬಳಸಿದ್ದು, ತಯಾರು

ಗಾಳಿಪಟ ಹಾರಾಟಕ್ಕೆ ಹತ್ತಿಯಿಂದ ತಯಾರಿಸಿದ ದಾರವನ್ನು ಮಾತ್ರ ಬಳಸಬೇಕು- ರಾಜ್ಯ ಸರ್ಕಾರ ಆದೇಶ Read More »

ಕರ್ನಾಟಕ

ವಯಸ್ಸು ಧೃಡೀಕರಣಕ್ಕೆ ಆಧಾರ್ ಸೂಕ್ತ ದಾಖಲೆಯಲ್ಲ: ಸುಪ್ರೀಂ ಕೋರ್ಟ್

(ನ್ಯೂಸ್ ಕಡಬ) newskadaba.com ಅ.25, ನವದೆಹಲಿ: ವ್ಯಕ್ತಿಯ ವಯಸ್ಸನ್ನು ಧೃಡೀಕರಿಸಲು ಆಧಾರ್‌ ಕಾರ್ಡ್‌ ಸೂಕ್ತ ದಾಖಲೆ ಅಲ್ಲ ಎಂದು ಸುಪ್ರೀಂ ಕೊರ್ಟ್‌ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ರಸ್ತೆ ಅಪಘಾತದ ವೇಳೆ ಮೃತಪಟ್ಟವನಿಗೆ ಪರಿಹಾರ ಒದಗಿಸುವ ಸಲುವಾಗಿ ಅವನ ವಯಸ್ಸು ನಿರ್ಧರಿಸಲು ಆಧಾರ್‌ ಕಾರ್ಡನ್ನು ಆಧಾರವಾಗಿಟ್ಟುಕೊಂಡ ಪಂಜಾಬ್‌ ಹಾಗೂ ಹರ್ಯಾಣದ ಹೈ ಕೊರ್ಟ್‌ ತೀರ್ಪನ್ನು ರದ್ದುಗೊಳಿಸಿದೆ. ‘ಮೃತನ ವಯಸ್ಸನ್ನು ಬಾಲಾಪರಾಧಿ ನ್ಯಾಯ ಕಾಯ್ದೆ, 2015ರ ಸೆಕ್ಷನ್‌ 94ರ ಪ್ರಕಾರ ಆತನ ಶಾಲಾ ವರ್ಗಾವಣೆ ಪ್ರಮಾಣಪತ್ರದಲ್ಲಿ ನಮೂದಿಸಲಾಗಿರುವ

ವಯಸ್ಸು ಧೃಡೀಕರಣಕ್ಕೆ ಆಧಾರ್ ಸೂಕ್ತ ದಾಖಲೆಯಲ್ಲ: ಸುಪ್ರೀಂ ಕೋರ್ಟ್ Read More »

ಬ್ರೇಕಿಂಗ್ ನ್ಯೂಸ್
crime, arrest, suspected

ಜಾಮೀನು ಪಡೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಕಾಪು, ಅ.25. ಕಾರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯದಿಂದ ಜಾಮೀನು ಪಡೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಾಪು ಪೊಲೀಸರು ಅ. 22ರಂದು ಕೇರಳದ ಕಣ್ಣೂರು ಏರ್‌ಪೋರ್ಟ್‌ನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅಶ್ಮತ್ ಅಲಿ(35) ಎಂದು ಗುರುತಿಸಲಾಗಿದೆ. ಆರೋಪಿ ಅಶ್ಮತ್ ಅಲಿ ವಿರುದ್ಧ 2019ರಲ್ಲಿ ಕಾಪು ಪೊಲೀಸ್ ಠಾಣೆಯಲ್ಲಿ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸಿ ಅದನ್ನು ವೀಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಆರೋಪಿಯು ಉಡುಪಿಯ 2ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 2019ರ ಸೆ.

ಜಾಮೀನು ಪಡೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಹೊಳೆಗೆ ಉರುಳಿ ಬಿದ್ದ ಬೈಕ್‌- ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಬೈಂದೂರು, ಅ.25. ನಾಕಟ್ಟೆ ಚಿಕ್ಕ ಸೇತುವೆ ಬಳಿ ದ್ವಿಚಕ್ರವಾಹನ ಸವಾರನೊಬ್ಬರು ನಿಯಂತ್ರಣ ತಪ್ಪಿ ಇಳಿಜಾರಿನಲ್ಲಿ ಸಾಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದ ಹೊಳೆಗೆ ಉರುಳಿ ಬಿದ್ದ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸವಾರ ಕಿರಿಮಂಜೇಶ್ವರ ನಿವಾಸಿ ಕೆ.ಪಿ.ಇಸ್ಮಾಯಿಲ್ ಎಂಬವರ ಪುತ್ರ ಉಸ್ಮಾನ್ (24) ಎಂಬುವರು ಬಿದ್ದು ಪರಾರಿಯಾಗಿದ್ದಾರೆ. ಉಸ್ಮಾನ್ ಆಳ ಸಮುದ್ರದ ಮೀನುಗಾರಿಕೆ ಪ್ರವಾಸದಿಂದ ಹಿಂದಿರುಗಿದ ನಂತರ ಎರಡು ದಿನಗಳ ಕಾಲ ನಿದ್ರೆಯಿಂದ ವಂಚಿತರಾಗಿದ್ದರು ಎಂದು ವರದಿಗಳು ಸೂಚಿಸುತ್ತವೆ. ಸೇತುವೆ

ಹೊಳೆಗೆ ಉರುಳಿ ಬಿದ್ದ ಬೈಕ್‌- ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್

ಕರ್ನಾಟಕದಲ್ಲಿ ಕನ್ನಡ ಬೋರ್ಡ್ ಹಾಕಲೇಬೇಕು-ಹೈ ಕೋರ್ಟ್

(ನ್ಯೂಸ್ ಕಡಬ) newskadaba.com ಅ.25, ಬೆಂಗಳೂರು: ‘ವಾಣಿಜ್ಯ, ವ್ಯವಹಾರ ನಡೆಸುವ ಅಂಗಡಿಗಳ ಮುಂದಿನ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಬಿಬಿಎಂಪಿ ಸುತ್ತೋಲೆ ಪ್ರಶ್ನಿಸಿ ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಗಳು ಅರ್ಜಿಯನ್ನು ತುರ್ತು ವಿಚಾರಣೆಗೆ ನಿಗದಿಪಡಿಸಲು ನಿರಾಕರಿಸಿರುವ ಹೈಕೋರ್ಟ್, ‘ನೀವು ಕರ್ನಾಟಕದಲ್ಲಿದ್ದ ಮೇಲೆ ಸೂಚನಾ ಫಲಕಗಳನ್ನು ಕನ್ನಡದಲ್ಲಿ ಪ್ರದರ್ಶಿಸಲೇಬೇಕು’ ಎಂದು ಅರ್ಜಿದಾರ ಸಂಸ್ಥೆಗಳ ಪರ ವಕೀಲರಿಗೆ ಮೌಖಿಕವಾಗಿ ಹೇಳಿದೆ. ಈ ಸಂಬಂಧ ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಆದಿತ್ಯ ಬಿರ್ಲಾ ಫ್ಯಾಷನ್ ಆ್ಯಂಡ್ ರೀಟೇಲ್ ಲಿಮಿಟೆಡ್,

ಕರ್ನಾಟಕದಲ್ಲಿ ಕನ್ನಡ ಬೋರ್ಡ್ ಹಾಕಲೇಬೇಕು-ಹೈ ಕೋರ್ಟ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್
Scroll to Top