ಬೈತಡ್ಕ: ಟ್ಯಾಂಕರ್ ಪಲ್ಟಿ- ಡೀಸೆಲ್ ಸೋರಿಕೆ

(ನ್ಯೂಸ್ ಕಡಬ) newskadaba.com ಅ.30. ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ಒಂದು ರಸ್ತೆ ಮಧ್ಯೆಯೇ ಪಲ್ಟಿಯಾದ ಘಟನೆ ಸುಳ್ಯ ತಾಲೂಕಿನ ಜಾಲ್ಸೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ಬುಧವಾರದಂದು ನಡೆದಿದೆ. ಮಂಗಳೂರಿನಿಂದ ಮಡಿಕೇರಿ ಕಡೆಗೆ ಡೀಸೆಲ್ ಹೊತ್ತೊಯ್ಯತ್ತಿದ್ದ ಟ್ಯಾಂಕರ್ ಬೈತಡ್ಕ ತಿರುವಿನಲ್ಲಿ ರಸ್ತೆ ಮಧ್ಯೆ ಪಲ್ಟಿಯಾಗಿದ್ದು, ಡೀಸೆಲ್ ಸೋರಿಕೆಯಾಗುತ್ತಿರುವುದಾಗಿ ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿ, ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಘಟನೆಯಿಂದ ಚಾಲಕನಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.

ಬೈತಡ್ಕ: ಟ್ಯಾಂಕರ್ ಪಲ್ಟಿ- ಡೀಸೆಲ್ ಸೋರಿಕೆ Read More »

ಕರಾವಳಿ, ಕ್ರೈಮ್ ನ್ಯೂಸ್

ರಾಜ್ಯದಲ್ಲಿ 230 ಗೋಲ್‌ಗಪ್ಪ ತಯಾರಿಕಾ ಘಟಕಗಳ ಮೇಲೆ ಅಧಿಕಾರಿಗಳ ದಾಳಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಅ. 30. ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ರಾಜ್ಯಾದ್ಯಂತ 230 ಗೋಲ್‌ಗಪ್ಪಾ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಬೀದಿಯಲ್ಲಿ ಮಾರಲಾಗುವ ಪಾನಿಪುರಿ, ಗೋಲ್‌ಗಪ್ಪದ ಸ್ವಚ್ಛತೆ, ಶುದ್ಧತೆಯ ಬಗ್ಗೆ ಅನುಮಾನದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. 165 ಘಟಕಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಗೋಲ್‌ಗಪ್ಪಾ ರುಚಿ ಹೆಚ್ಚಳಕ್ಕೆ ಯೂರಿಯಾ ಗೊಬ್ಬರ, ಹಾರ್ಪಿಕ್ ಬಳಕೆ ಮಾಡಲಾಗುತ್ತಿರುವ ಕುರಿತಂತೆ ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆ ವರದಿ ಆಧರಿಸಿ, ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ

ರಾಜ್ಯದಲ್ಲಿ 230 ಗೋಲ್‌ಗಪ್ಪ ತಯಾರಿಕಾ ಘಟಕಗಳ ಮೇಲೆ ಅಧಿಕಾರಿಗಳ ದಾಳಿ Read More »

ಕರ್ನಾಟಕ

ಹಿಜ್ಬುಲ್ಲಾ ಹೊಸ ನಾಯಕನಾಗಿ ನೈಮ್ ಕಾಸ್ಸೆಮ್ ಆಯ್ಕೆ

(ನ್ಯೂಸ್ ಕಡಬ)newskadaba.com ಬೈರುತ್, ಅ. 30. ಸೆಪ್ಟೆಂಬರ್ ಅಂತ್ಯದಲ್ಲಿ ಬೈರುತ್ ಉಪನಗರದ ಮೇಲೆ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ತನ್ನ ದೀರ್ಘಕಾಲದ ನಾಯಕ ಹಸನ್ ನಸ್ರಲ್ಲಾ ಕೊಲೆಯಾದ ನಂತರ ಲೆಬನಾನಿನ ಗುಂಪನ್ನು ಮುನ್ನಡೆಸಲು ಧರ್ಮಗುರು ನಯಿಮ್ ಕಸ್ಸೆಮ್ ಅವರನ್ನು ಆಯ್ಕೆ ಮಾಡಿರುವುದಾಗಿ ಹಿಜ್ಬುಲ್ಲಾ ಮಂಗಳವಾರ ಘೋಷಿಸಿತು. ಗುಂಪು ಹೇಳಿಕೆಯಲ್ಲಿ ಹೆಜ್ಬೊಲ್ಲಾಹ್‌ನ ನಿರ್ಧಾರ ತೆಗೆದುಕೊಳ್ಳುವ ಶೂರಾ ಕೌನ್ಸಿಲ್ ತನ್ನ ಹೊಸ ಕಾರ್ಯದರ್ಶಿಯಾಗಿ ಕಸ್ಸೆಮ್, 71 ರನ್ನು ಆಯ್ಕೆ ಮಾಡಿದೆ ಮತ್ತು “ವಿಜಯ ಸಾಧಿಸುವವರೆಗೆ” ನಸ್ರಲ್ಲಾ ಅವರ ನೀತಿಗಳನ್ನು ಮುಂದುವರಿಸಲು ಪ್ರತಿಜ್ಞೆ

ಹಿಜ್ಬುಲ್ಲಾ ಹೊಸ ನಾಯಕನಾಗಿ ನೈಮ್ ಕಾಸ್ಸೆಮ್ ಆಯ್ಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್

HSRP ನಂಬರ್ ಪ್ಲೇಟ್ ಅಳವಡಿಕೆಗೆ ನ. 20 ಕೊನೆಯ ಅವಕಾಶ..!

(ನ್ಯೂಸ್ ಕಡಬ) newskadaba.com ಅ. 30. ವಾಹನಗಳಿಗೆ HSRP ನಂಬರ್ ಪ್ಲೇಟ್ ಅಳವಡಿಕೆಯನ್ನು ಕಡ್ಡಾಯಗೊಳಿಸಿ ಹಲವು ಬಾರಿ ಗಡುವು ನೀಡಿ ವಿಸ್ತರಿಸಲಾಗಿತ್ತು. ಆದರೇ ಇದೀಗ ವಾಹನ ಸವಾರರಿಗೆ ನವೆಂಬರ್.20ರವರೆಗೆ HSRP ನಂಬರ್ ಪ್ಲೇಟ್ ಅಳವಡಿಕೆಗೆ ಅವಕಾಶ ನೀಡಿ ಆದೇಶಿಸಲಾಗಿದೆ. ನಂಬರ್ ಪ್ಲೇಟ್ ಅಳವಡಿಕೆಗೆ ಕಾಲಾವಕಾಶ ನೀಡುವಂತೆ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದಂತ ಅರ್ಜಿಯ ವಿಚಾರಣೆ ನಡೆಸಲಾಗಿತ್ತು. ಹಿರಿಯ ವಕೀಲ ದೇವದತ್ ಕಾಮತ್ ಅವರು ಹೈಕೋರ್ಟ್ ನ್ಯಾಯಪೀಠವನ್ನು ಮತ್ತಷ್ಟು ಕಾಲಾವಕಾಶ ನೀಡುವಂತೆ ಕೋರಿದ್ದರು. ಮನವಿ ಪರಿಗಣಿಸಿದ ನ್ಯಾಯಾಲಯವು ವಿಚಾರಣೆ ಮುಂದೂಡಿಕೆ ಮಾಡಿದ್ದು,

HSRP ನಂಬರ್ ಪ್ಲೇಟ್ ಅಳವಡಿಕೆಗೆ ನ. 20 ಕೊನೆಯ ಅವಕಾಶ..! Read More »

ಕರ್ನಾಟಕ

ಇನ್ಮುಂದೆ ವಾಟ್ಸಪ್ ನಲ್ಲೇ ಸಿಗಲಿವೆ ಗ್ರಾಮ ಪಂಚಾಯತ್ ಸೇವೆಗಳು…!

(ನ್ಯೂಸ್ ಕಡಬ) newskadaba.com ಅ. 30. ಇನ್ಮುಂದೆ ಗ್ರಾಮ ಪಂಚಾಯತ್ ಸೇವೆಗಳಿಗೆ ಸಂಬಂಧಿಸಿದಂತೆ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸದೇ ಕುಳಿತಲ್ಲಿಗೇ ಸೇವೆ ಪಡೆಯಲು ಅರ್ಜಿ ಸಲ್ಲಿಕೆ ವಿಧಾನವನ್ನು ಮತ್ತಷ್ಟು ಸರಳಗೊಳಿಸಲಾಗಿದೆ. ಅದು ಹೇಗಂದ್ರೆ ಜಸ್ಟ್ ಒಂದು ನಂಬರ್ ಗೆ ವಾಟ್ಸಾಪ್ ಮಾಡಿ. ವಾಟ್ಸ್ ಆಪ್ ಮೂಲಕವೇ ಗ್ರಾಮ ಪಂಚಾಯ್ತಿಯ ಅನೇಕ ಸೇವೆಗಳಿಗೆ ಅರ್ಜಿಯನ್ನು ಸಲ್ಲಿಸಿ ಪಡೆಯಬಹುದಾಗಿದೆ. ನೀವು 8277506000 ಸಂಖ್ಯೆಗೆ ವಾಟ್ಸಾಪ್‌ ಸಂದೇಶ ಕಳುಹಿಸಿದರೆ ಅಧಿಕೃತ ವಾಟ್ಸಾಪ್‌ ಚಾಟ್‌ ಆರಂಭಗೊಳ್ಳುತ್ತದೆ. ನಂತರ ಭಾಷೆ, ಜಿಲ್ಲೆ, ತಾಲೂಕು ಹಾಗೂ

ಇನ್ಮುಂದೆ ವಾಟ್ಸಪ್ ನಲ್ಲೇ ಸಿಗಲಿವೆ ಗ್ರಾಮ ಪಂಚಾಯತ್ ಸೇವೆಗಳು…! Read More »

ತಂತ್ರಜ್ಞಾನ

ವಿಧಾನಪರಿಷತ್ತಿನ ನೂತನ ಸದಸ್ಯರಾಗಿ ಕಿಶೋರ್ ಕುಮಾರ್ ಪುತ್ತೂರು ಪ್ರಮಾಣವಚನ ಸ್ವೀಕಾರ

(ನ್ಯೂಸ್ ಕಡಬ)newskadaba.com ಬೆಂಗಳೂರು, ಅ. 30. ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಕಿಶೋರ್ ಕುಮಾರ್ ಪುತ್ತೂರು ಅವರು ಪರಿಷತ್‍ನ ನೂತನ ಸದಸ್ಯರಾಗಿ ಪ್ರಮಾಣವಚನ ಪ್ರಮಾಣವಚನ ಸ್ವೀಕರಿಸಿದರು. ಇಂದು ವಿಧಾನಪರಿಷತ್‌ನ ಸಭಾಪತಿ ಬಸವರಾಜ ಹೊರಟ್ಟಿ ಅವರು ಕಿಶೋರ್ ಕುಮಾರ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ವಿಧಾನ ಪರಿಷತ್‍ನ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮೀ ಸೇರಿದಂತೆ ಶಾಸಕರು, ವಿಧಾನ ಪರಿಷತ್‍ನ ಸದಸ್ಯರು ಉಪಸ್ಥಿತರಿದ್ದರು.      

ವಿಧಾನಪರಿಷತ್ತಿನ ನೂತನ ಸದಸ್ಯರಾಗಿ ಕಿಶೋರ್ ಕುಮಾರ್ ಪುತ್ತೂರು ಪ್ರಮಾಣವಚನ ಸ್ವೀಕಾರ Read More »

ಕರ್ನಾಟಕ

ಬಾಲಿವುಡ್ ನಟ ಸಲ್ಮಾನ್ ಖಾನ್‌ ಗೆ ಮತ್ತೆ ಜೀವ ಬೆದರಿಕೆ ಸಂದೇಶ

(ನ್ಯೂಸ್ ಕಡಬ)newskadaba.com ಮುಂಬೈ, ಅ. 30. ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಅಪರಿಚಿತ ವ್ಯಕ್ತಿಯಿಂದ ಮತ್ತೆ ಜೀವ ಬೆದರಿಕೆ ಬಂದಿದೆ. ಜೊತೆಗೆ ಆ ವ್ಯಕ್ತಿಯು 2 ಕೋಟಿ ರೂ.ಗೆ ಬೇಡಿಕೆಯಿಟ್ಟಿರುವುದಾಗಿ ಮುಂಬೈ ಟ್ರಾಫಿಕ್ ಪೊಲೀಸರಿಗೆ ಸಂದೇಶ ಕಳುಹಿಸಿದ್ದಾರೆ. ಮೇಲಿಂದ ಮೇಲೆ ನಟ ಸಲ್ಮಾನ್ ಖಾನ್ ಜೀವ ಬೆದರಿಕೆಗಳು ಬರುತ್ತಲೇ ಇವೆ. ಇದೀಗ ಜೀವ ಬೆದರಿಕೆ ಸಂದೇಶದ ಜೊತೆಗೆ 2 ಕೋಟಿ ರೂ. ಬೇಡಿಕೆಯಿಟ್ಟಿದ್ದಾರೆ. ಜೊತೆಗೆ ತಾವು ಕೇಳಿದಷ್ಟು ಹಣ ನೀಡದೆ ಇದ್ದರೆ ಹತ್ಯೆ ಮಾಡುವುದಾಗಿ ಸಂದೇಶ ರವಾನಿಸಿದ್ದಾರೆ.

ಬಾಲಿವುಡ್ ನಟ ಸಲ್ಮಾನ್ ಖಾನ್‌ ಗೆ ಮತ್ತೆ ಜೀವ ಬೆದರಿಕೆ ಸಂದೇಶ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Death, deadbody, Waterfall

ಜ್ವರದಿಂದ ಮಹಿಳೆ ಮೃತ್ಯು- ಡೆಂಗ್ಯೂ ಶಂಕೆ..!

(ನ್ಯೂಸ್ ಕಡಬ) newskadaba.com ಅ. 30. ನಾಲ್ಕೈದು ದಿನಗಳಿಂದ ಜ್ವರದಿಂದ ಬಳಲುತ್ತಿದ್ದ ಸಿರಿಬಾಗಿಲು ಗ್ರಾಮದ ಮಹಿಳೆಯೋರ್ವರು ಮೃತಪಟ್ಟಿದ್ದು, ಇವರು ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ.   ಮೃತಪಟ್ಟವರನ್ನು ಸಿರಿಬಾಗಿಲು ಗ್ರಾಮದ ಪುಲ್ಲೊಟ್ಟೆ ನಿವಾಸಿ ಬಾಬು ಅವರ ಪತ್ನಿ ಲೀಲಾವತಿ (35) ಎಂದು ಗುರುತಿಸಲಾಗಿದೆ. ಕೂಲಿ ಕಾರ್ಮಿಕರಾಗಿದ್ದ ಲೀಲಾವತಿ ಅವರಿಗೆ ನಾಲ್ಕೈದು ದಿನಗಳ ಹಿಂದೆ ಜ್ವರ ಕಾಣಿಸಿಕೊಂಡಿದ್ದು, ಆರಂಭದಲ್ಲಿ ಉದನೆಯ ಕ್ಲಿನಿಕ್‍ ವೊಂದರಿಂದ ಚಿಕಿತ್ಸೆ ಪಡೆದುಕೊಂಡಿದ್ದರು. ಜ್ವರ ಹಿನ್ನೆಲೆ ಅ.25ರಂದು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು,

ಜ್ವರದಿಂದ ಮಹಿಳೆ ಮೃತ್ಯು- ಡೆಂಗ್ಯೂ ಶಂಕೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ..!

(ನ್ಯೂಸ್ ಕಡಬ) newskadaba.com ಅ. 30. ಇದೇ ನವೆಂಬರ್ 13ರಂದು ರಾಜ್ಯದ ಶಿಗ್ಗಾಂವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ವಿಧಾನಸಭಾ ಉಪಚುನಾವಣೆ ನಡೆಯಲಿದ್ದು, ಈ ಹಿನ್ನೆಲೆ ಚುನಾವಣಾ ಪ್ರಚಾರ ನಡೆಸಲು ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆಗೊಳಿಸಿದೆ. ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು, 40 ಜನರ ಸ್ಟಾರ್ ಪ್ರಚಾರಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಚುನಾವಣಾ ಆಯೋಗಕ್ಕೂ ಪಟ್ಟಿಯನ್ನ ರವಾನೆ ಮಾಡಿದ್ದಾರೆ. ಆದರೆ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ ದೇವೇಗೌಡ ಅವರನ್ನು ಕೈಬಿಡಲಾಗಿದೆ.

ಜೆಡಿಎಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ..! Read More »

ಕರ್ನಾಟಕ

ಹೊಸ ಸೇತುವೆ ನಿರ್ಮಿಸುವ ಕುರಿತು ಜಿಲ್ಲಾಧಿಕಾರಿಯೊಂದಿಗೆ ಸಭೆ..!

(ನ್ಯೂಸ್ ಕಡಬ) newskadaba.com ಅ. 30. ಅಡ್ಡೂರು-ಪೊಳಲಿ ಸೇತುವೆ ಮತ್ತು ಉಳಾಯಿಬೆಟ್ಟು ಕಿರು ಸೇತುವೆಯ ಧಾರಣಾ ಸಾಮರ್ಥ್ಯ ಹೆಚ್ಚಿಸುವ ಹಾಗೂ ಎರಡೂ ಕಡೆ ಹೊಸ ಸೇತುವೆ ನಿರ್ಮಿಸುವ ಕುರಿತಾಗಿ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಮತ್ತು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಿದರು. ಎರಡೂ ಕಡೆ ಸೇತುವೆಯ ಘನ ವಾಹನ ಸಂಚಾರ ಸ್ಥಗಿತದಿಂದ ಸಾರ್ವಜನಿಕ ಬಸ್ ಸಂಚಾರ ಮತ್ತು ಕಾರ್ಮಿಕರಿಗೆ ತೀವ್ರ ತೊಂದರೆ ಉಂಟಾಗಿದೆ. ಇತ್ತೀಚೆಗೆ ಪೊಳಲಿ ಮತ್ತು ಉಳಾಯಿಬೆಟ್ಟಿನಲ್ಲಿ

ಹೊಸ ಸೇತುವೆ ನಿರ್ಮಿಸುವ ಕುರಿತು ಜಿಲ್ಲಾಧಿಕಾರಿಯೊಂದಿಗೆ ಸಭೆ..! Read More »

ಕರಾವಳಿ
Scroll to Top