ಪೋಷಣಾ ಅಭಿಯಾನ- ಸಂಯೋಜಕ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ನ. 06. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಅಧೀನ ಶಿಶು ಅಭಿವೃದ್ಧಿ ಯೋಜನೆ, ಮಂಗಳೂರು ಗ್ರಾಮಾಂತರ ಇಲ್ಲಿಗೆ ಪೋಷಣಾ ಅಭಿಯಾನ ಯೋಜನೆಯಡಿ ಹೊರಗುತ್ತಿಗೆ ಆಧಾರದ ಮೇರೆಗೆ ತಾಲೂಕು ಸಂಯೋಜಕರ ಹುದ್ದೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು graduate Digree / social sciences/Nutrition ವಿದ್ಯಾರ್ಹತೆಯನ್ನು ಹೊಂದಿರಬೇಕು. ಸರಕಾರಿ ಅಥವಾ ಸ್ವಯಂಸೇವಾ ಸಂಸ್ಥೆಗಳಲ್ಲಿ ಕನಿಷ್ಠ ಎರಡು ವರ್ಷ ಅನುಭವ ಹೊಂದಿರಬೇಕು. ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಮಾಸಿಕ 20,000 ರೂ.ಗಳ ಗೌರವ ಧನ […]

ಪೋಷಣಾ ಅಭಿಯಾನ- ಸಂಯೋಜಕ ಹುದ್ದೆಗೆ ಅರ್ಜಿ ಆಹ್ವಾನ Read More »

ಕರಾವಳಿ

ನ. 07ರಂದು ದ.ಕ ಜಿಲ್ಲೆಗೆ ಕನ್ನಡ ರಥ ಆಗಮನ

(ನ್ಯೂಸ್ ಕಡಬ) newskadaba.com ನ. 06. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಡಿಸೆಂಬರ್ 20ರಿಂದ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಅರಿವು ಮೂಡಿಸುವ ದೃಷ್ಟಿಯಿಂದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ನವೆಂಬರ್ 7ರಂದು ಕನ್ನಡ ರಥ  ಆಗಮಿಸಲಿದೆ. ರಥಯಾತ್ರೆಯ ವೇಳಾಪಟ್ಟಿ: ನವೆಂಬರ್ 7ರಂದು ಬೆಳಿಗ್ಗೆ 9.30 ಗಂಟೆಗೆ ಮೂಡಬಿದ್ರೆಯಲ್ಲಿ ಸ್ವಾಗತ, ಮಧ್ಯಾಹ್ನ 12 ಮಂಗಳೂರು ಪುರಭವನಕ್ಕೆ ಆಗಮನ, ಸಂಜೆ 3 ತೊಕ್ಕೊಟ್ಟು, ಉಳ್ಳಾಲಕ್ಕೆ ಆಗಮನ, ಸಂಜೆ

ನ. 07ರಂದು ದ.ಕ ಜಿಲ್ಲೆಗೆ ಕನ್ನಡ ರಥ ಆಗಮನ Read More »

ಕರಾವಳಿ, ಕರ್ನಾಟಕ

ಮುಡಾ ಪ್ರಕರಣ- ಇಂದು ಲೋಕಾಯಕ್ತ ಕಚೇರಿಯಲ್ಲಿ ಸಿಎಂ ವಿಚಾರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ. 06. ಮುಡಾ ನಿವೇಶವನ್ನು ಅಕ್ರಮವಾಗಿ ಪಡೆದ ಪ್ರಕರಣದಲ್ಲಿ ಎ.1 ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಇಂದು ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಲಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದಿಂದ ಬೆಳಗ್ಗೆ ಮೈಸೂರಿನ ಲೋಕಾಯುಕ್ತ ಕಚೇರಿಗೆ ಪ್ರಯಾಣ ಬೆಳಸಿದ್ದಾರೆ. 10 ಗಂಟೆ ಬಳಿಕ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಸಿಎಂ ವಿಚಾರಣೆಗೆ ಒಳಗಾಗಲಿದ್ದಾರೆ. ಎಸ್‌ಪಿ ಉದೇಶ್‌ ನೇತೃತ್ವದಲ್ಲಿ ಸಿಎಂ ವಿಚಾರಣೆ ಎದುರಿಸಲಿದ್ದಾರೆ. ಮುಡಾ ಕೇಸ್‌ ಸಂಬಂಧ ಈಗಾಗಲೇ ಪ್ರಶ್ನೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಸಿದ್ಧಪಡಿಸಿಕೊಂಡಿದ್ದಾರೆ.    

ಮುಡಾ ಪ್ರಕರಣ- ಇಂದು ಲೋಕಾಯಕ್ತ ಕಚೇರಿಯಲ್ಲಿ ಸಿಎಂ ವಿಚಾರಣೆ Read More »

ಕರ್ನಾಟಕ

ಕೊಲೆ ಬೆದರಿಕೆ ಹಿನ್ನೆಲೆ ನಟ ದರ್ಶನ್ ಹಾಗೂ ಅಭಿಮಾನಿಯ ಮೇಲೆ ದೂರು ದಾಖಲಿಸಿದ ಬಿಗ್ ಬಾಸ್ ಖ್ಯಾತಿಯ ಜಗದೀಶ್

(ನ್ಯೂಸ್ ಕಡಬ) newskadaba.com ನ. 06 ಬೆಂಗಳೂರು : ಬಿಗ್ ಬಾಸ್ ಕನ್ನಡ -11 ಕಾರ್ಯಕ್ರಮದಲ್ಲಿದ್ದ ಜಗದೀಶ್ ಬಿಗ್ಬಾಸ್ ಮನೆಯಿಂದ ಆಚೆ ಬಂದ ನಂತರ ಮತ್ತೆತಮ್ಮ ಹಳೆ ಸ್ಟೈಲ್ ಗೆ ಮರಳಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ರವರ ಬಗ್ಗೆ ಜಗದೀಶ್ ಬಹಳಷ್ಟು ಬಾರಿ ಮಾತನಾಡಿದ್ದಾರೆ. ಇದೀಗ ದರ್ಶನ್ ಮಧ್ಯಂತರ ಜಾಮೀನಿನ ಮೇರೆಗೆ ಹೊರಬಂದಿದ್ದು, ದರ್ಶನ್ ಅಭಿಮಾನಿಗಳು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಜಗದೀಶ್ ಆರೋಪಿಸಿ ದರ್ಶನ್ ಹಾಗೂ ಅವರ ಅಭಿಮಾನಿಯೋರ್ವರ ಮೇಲೆ ದೂರು ದಾಖಲಿಸಿದ್ದಾರೆ.

ಕೊಲೆ ಬೆದರಿಕೆ ಹಿನ್ನೆಲೆ ನಟ ದರ್ಶನ್ ಹಾಗೂ ಅಭಿಮಾನಿಯ ಮೇಲೆ ದೂರು ದಾಖಲಿಸಿದ ಬಿಗ್ ಬಾಸ್ ಖ್ಯಾತಿಯ ಜಗದೀಶ್ Read More »

ಕರ್ನಾಟಕ, ಬ್ರೇಕಿಂಗ್ ನ್ಯೂಸ್

ಆಯುಷ್ಮಾನ್ ಭಾರತ್ – ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ

(ನ್ಯೂಸ್ ಕಡಬ) newskadaba.com ನ. 06. ಜಿಲ್ಲೆಯಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳನ್ನು ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಸೇರಿಸಬೇಕು ಎಂದು ಲೋಕಸಭಾ ಸದಸ್ಯ ಕ್ಯಾ|| ಬ್ರಿಜೇಶ್ ಚೌಟ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನಾರೋಗ್ಯ ಯೋಜನೆ ಮತ್ತು ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಯೋಜನೆಯ ಪರಿಣಾಮಕಾರಿ ಅನುಷ್ಠಾನದ ಕುರಿತು ಏರ್ಪಡಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು. ತುರ್ತು ಸಂದರ್ಭದಲ್ಲಿ ರೋಗಿ ಮತ್ತು ಕುಟುಂಬದವರಿಗೆ ಆಯುಷ್ಮಾನ್ ಭಾರತ್

ಆಯುಷ್ಮಾನ್ ಭಾರತ್ – ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ Read More »

ಕರಾವಳಿ

ಕಾಮನ್ವೆಲ್ತ್ ಸಂಸದೀಯ ಸಭೆ- ಸ್ಪೀಕರ್ ಯು.ಟಿ. ಖಾದರ್ ಭಾಗಿ

(ನ್ಯೂಸ್ ಕಡಬ) newskadaba.com ನ. 06. ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಕಾಮನ್ ವೆಲ್ತ್ ಸಂಸದೀಯ ಸಂಘ, ಕರ್ನಾಟಕ ಶಾಖೆ ಇದರ ಪ್ರತಿನಿಧಿಯಾಗಿ ಆಸ್ಟ್ರೇಲಿಯಾ ದೇಶದ ಸಿಡ್ನಿಯಲ್ಲಿ ನಡೆಯುತ್ತಿರುವ 67ನೇ ಕಾಮನ್‍ವೆಲ್ತ್ ಸಂಸದೀಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸೋಮವಾರ ಮತ್ತು ಮಂಗಳವಾರ ಭಾಗವಹಿಸಿದರು.

ಕಾಮನ್ವೆಲ್ತ್ ಸಂಸದೀಯ ಸಭೆ- ಸ್ಪೀಕರ್ ಯು.ಟಿ. ಖಾದರ್ ಭಾಗಿ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಪದ್ಮಭೂಷಣ ಪುರಸ್ಕೃತೆ ಖ್ಯಾತ ಗಾಯಕಿ ಶಾರದಾ ಸಿನ್ಹಾ ನಿಧನ

(ನ್ಯೂಸ್ ಕಡಬ) newskadaba.com ನವದೆಹಲಿ, ನ. 06. ಜನಪ್ರಿಯ ಜಾನಪದ ಗಾಯಕಿ ಮತ್ತು ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಶಾರದಾ ಸಿನ್ಹಾ(72) ಅವರು ಕ್ಯಾನ್ಸರ್ ನಿಂದ ಮಂಗಳವಾರ ರಾತ್ರಿ ನಿಧನರಾದರು. ಖ್ಯಾತ ಗಾಯಕಿಯನ್ನು ದೆಹಲಿಯ ಏಮ್ಸ್‌ ಗೆ ದಾಖಲಿಸಲಾಗಿತ್ತು ಮತ್ತು ಅಕ್ಟೋಬರ್ 25 ರಿಂದ ಆಸ್ಪತ್ರೆಯ ಆಂಕೊಲಾಜಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 2017 ರಲ್ಲಿ, ಅವರಿಗೆ ಮಲ್ಟಿಪಲ್ ಮೈಲೋಮಾ ರೋಗ ಖಾತರಿಯಾಗಿತ್ತು. ಇದು ಮೂಳೆ ಮಜ್ಜೆಯ ಮೇಲೆ ಪರಿಣಾಮ ಬೀರುವ ಒಂದು ರೀತಿಯ ಕ್ಯಾನ್ಸರ್. ಚಿಕಿತ್ಸೆಗಾಗಿ ಶ್ರೀಮತಿ ಸಿನ್ಹಾ

ಪದ್ಮಭೂಷಣ ಪುರಸ್ಕೃತೆ ಖ್ಯಾತ ಗಾಯಕಿ ಶಾರದಾ ಸಿನ್ಹಾ ನಿಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ರಾಷ್ಟ್ರೀಯ ಏಕತಾ ದಿವಸ್ ಪರೇಡ್ ನಲ್ಲಿ ಕಡಬದ ಅನುಜ್ಞಾ ಭಾಗಿ

(ನ್ಯೂಸ್ ಕಡಬ) newskadaba.com ನ. 06. ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಸರ್ದಾರ್ ಪಟೇಲ್‌ಗೆ ಪ್ರಧಾನಿ ಮೋದಿ ಗೌರವಾರ್ಪಣೆ ಮಾಡುವ ಪರೇಡ್‌ನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕಡಬ ತಾಲೂಕಿನ ಕೊಯಿಲ ಗ್ರಾಮದ ಆನೆಗುಂಡಿಯ ಅನುಜ್ಞಾ ವೈ.ಟಿ ಭಾಗಿಯಾದರು. ಭಾರತದ ಮೊದಲ ಗೃಹ ಸಚಿವ ದಿ. ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನದಂದು ರಾಷ್ಟ್ರೀಯ ಏಕತಾ ದಿವಸ್ ಆಚರಿಸಲಾಯಿತು. ಈ ಸಂದರ್ಭ ನಡೆದ ಪರೇಡ್‌ ನಲ್ಲಿ ಎನ್‌.ಎಸ್‌.ಜಿ, ಬಿಎಸ್‌.ಎಫ್, ಎನ್‌.ಸಿಸಿ ಮತ್ತು ವಿವಿಧ ರಾಜ್ಯಗಳ 16 ಪೊಲೀಸ್ ಕವಾಯತು

ರಾಷ್ಟ್ರೀಯ ಏಕತಾ ದಿವಸ್ ಪರೇಡ್ ನಲ್ಲಿ ಕಡಬದ ಅನುಜ್ಞಾ ಭಾಗಿ Read More »

ಕರಾವಳಿ

ಬಸ್‌ಗಳ ನಡುವಿನ ಪೈಪೋಟಿಯಿಂದ ಅಪಘಾತ ಸಂಭವಿಸಿ ಪಾದಚಾರಿಗಳಿಗೆ ಗಾಯ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 06. ಬಿಕರ್ನಕಟ್ಟೆಯಲ್ಲಿ ಬಸ್‌ಗಳ ನಡುವಿನ ಪೈಪೋಟಿಯಿಂದ ಅಪಘಾತ ಸಂಭವಿಸಿ ಪಾದಚಾರಿಗಳಿಗೆ ಗಾಯವಾದ ಘಟನೆ ನಡೆದಿದೆ. ಎರಡು ಬಸ್‌ಗಳ ನಡುವಿನ ಅತಿಯಾದ ವೇಗ ಮತ್ತು ತೀವ್ರ ಪೈಪೋಟಿಯೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಿಟಿ ಬಸ್‌ಗಳು ಆಗಾಗ್ಗೆ ಅಜಾಗರೂಕ ರೇಸ್‌ಗಳಲ್ಲಿ ತೊಡಗುತ್ತವೆ ಎಂದು ಆರೋಪಿಸಲಾಗಿದೆ, ಕಂಕನಾಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು ಎನ್ನಲಾಗಿದೆ.  

ಬಸ್‌ಗಳ ನಡುವಿನ ಪೈಪೋಟಿಯಿಂದ ಅಪಘಾತ ಸಂಭವಿಸಿ ಪಾದಚಾರಿಗಳಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಕಡಬ: ‘ಪಿಲ್ಯ ಫ್ಯಾಶನ್’ ಮತ್ತು ‘ಪಿಲ್ಯ ಮ್ಯಾಚಿಂಗ್ ಸೆಂಟರ್’ನಲ್ಲಿ ಉದ್ಯೋಗಾವಕಾಶ

(ನ್ಯೂಸ್ ಕಡಬ) newskadaba.com ಕಡಬ, ನ. 06. ಇಲ್ಲಿನ ಬಾಬು ಟವರ್ಸ್ ನಲ್ಲಿ ಕಳೆದ ಐದು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪಿಲ್ಯ ಫ್ಯಾಶನ್ ಮಳಿಗೆಯಲ್ಲಿ ಪಿಲ್ಯ ಮ್ಯಾಚಿಂಗ್ ಸೆಂಟರ್ ನವೀಕೃತಗೊಂಡು ಶುಭಾರಂಭಗೊಳ್ಳಲಿದ್ದು, ಆ ಪ್ರಯುಕ್ತ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ.   ಫ್ಯಾಷನ್ ಡಿಸೈನರ್ ಲೇಡೀಸ್- 2, ಪುರುಷ ಟೈಲರ್- 1, ಸೇಲ್ಸ್ ಎಕ್ಸಿಕ್ಯೂಟಿವ್ ಲೇಡೀಸ್- 6, ಸೇಲ್ಸ್ ಎಕ್ಸಿಕ್ಯೂಟಿವ್ ಪುರುಷ- 3 ಅಭ್ಯರ್ಥಿಗಳು ಬೇಕಾಗಿದ್ದಾರೆ. ಆಸಕ್ತರು ಸಂಸ್ಥೆಯ 9900678940, 9449216577 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಕಡಬ: ‘ಪಿಲ್ಯ ಫ್ಯಾಶನ್’ ಮತ್ತು ‘ಪಿಲ್ಯ ಮ್ಯಾಚಿಂಗ್ ಸೆಂಟರ್’ನಲ್ಲಿ ಉದ್ಯೋಗಾವಕಾಶ Read More »

ಕರಾವಳಿ
Scroll to Top